ಶುಕ್ರವಾರ, ಆಗಸ್ಟ್ 4, 2017

ಅನಾಥವಾದ ಅಕಾಡೆಮಿಗಳು ಮತ್ತು ಗರಬಡಿದ ಕನ್ನಡದ ಸಾಂಸ್ಕತಿಕ ಜಗತ್ತು


ಸುಮಾರು ಆರು ತಿಂಗಳ ಹಿಂದೆ ನನ್ನೂರಾದ ಮಂಡ್ಯದಲ್ಲಿ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಕನ್ನಡ ಸಂಸ್ಕøತಿ ಇಲಾಖೆಯ ಮಾಜಿ ನಿರ್ದೇಶಕರೊಬ್ಬರು, ಕನ್ನಡ ಸಾಹಿತ್ಯ ಮತ್ತು ಸಂಸ್ಕತಿಯ ಶ್ರೇಯೋಭಿವೃದ್ಧಿಗಾಗಿ  ಕರ್ನಾಟP ಸರ್ಕಾರವುÀ ಪ್ರತಿ ವರ್ಷ ಸುಮಾರು ಇನ್ನೂರ ಮೂವತ್ತು ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು. ಜೊತೆಗೆ ದಕ್ಷಿಣ ಭಾರತದ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ ಮತ್ತು ಮಹಾರಾಷ್ರಗಳಲ್ಲಿ ಅಲ್ಲಿನ ಸರ್ಕಾರಗಳು ಖರ್ಚು ಮಾಡುತ್ತಿರುವ ಹಣದ ಅಂಕಿ ಅಂಶವನ್ನು ನೀಡಿ, ಯಾವ ರಾಜ್ಯದಲ್ಲೂ ಭಾಷೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ ನೀಡುತ್ತಿರುವ ಅನುದಾನದ ಮೊತ್ತ ಮುವತ್ತೈದು ಕೋಟಿ ರೂಪಾಯಿಗಳನ್ನು ದಾಟುವುದಿಲ್ಲ ಎನ್ನುತ್ತಾ, ಕರ್ನಾಟಕ ಸರ್ಕಾರದ ಸಾಧನೆ ಅನನ್ಯವಾದುದು ಎಂದು ಬಣ್ಣಿಸಿದರು.
ರಾತ್ರಿ ಊಟ ಮಾಡುವಾಗ ಕೆಲವು ಮಿತ್ರರೊಂದಿಗೆ ವಿಷಯವನ್ನು ಪ್ರಸ್ತಾಪಿಸಿದ ನಾನು, ಸರ್ಕಾರ ಇಷ್ಟು ಅಗಾಧವಾಗಿ ಅನುದಾನ ನೀಡುತ್ತಿರುವುದಕ್ಕೆ ನನ್ನದೇನೂ ಅಭ್ಯಂತರವೇನಿಲ್ಲ. ಆದರೆ, ಇದರಿಂದ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕತಿಕ ಜಗತ್ತಿಗೆ ಆಗಿರುವ ಅಥವಾ ಆಗುತ್ತಿರುವ ಲಾಭವಾದರೂ ಏನು? ಎಂದು ಪ್ರಶ್ನಿಸಿದೆ. ಕನ್ನಡ ಭಾಷೆಯು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೆಲೆ ಕಚ್ಚುವುದರಿಂದ ಹಿಡಿದು, ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದನ್ನು ಅವರಿಗೆ ವಿವರಿಸಿದೆ. ರೀತಿಯ ಅನುದಾನದಿಂದ ಕರ್ನಾಟಕದಲ್ಲಿ ಭಾಷೆ ಮತ್ತು ಸಂಸ್ಕತಿಗೆ ನೆರವಾಗುವುದರ ಬದಲು ಕನಾಟಕದಲ್ಲಿ ಭೂ ಮಾಫಿಯಾ, ಲಿಕ್ಕರ್ ಮಾಫಿಯಾ, ಲ್ಯಾಂಡ್ ಮಾಫಿಯಾ ರೀತಿಯಲ್ಲಿ ಸಾಂಸ್ಕತಿಕ ಮಾಫಿಯಾವೊಂದು ಬೆಂಗಳೂರು ನಗರದಲ್ಲಿ ತಲೆ ಎತ್ತಲು ಕಾರಣವಾಯಿತು ಎಂದು  ನಿಷ್ಠುರವಾಗಿ ನಾನು ನುಡಿದಾಗ ಕೆಲವರಿಗೆ ಕಸಿವಿಸಿಯಾಯಿತು. ಏನನ್ನೂ ಪ್ರತಿಕ್ರಿಯಿಸದೆ  ನಕ್ಕು ಸುಮ್ಮನಾದರು.
ಕರ್ನಾಟಕದಲ್ಲಿ ಅದೊಂದು ಕಾಲವಿತ್ತು. ಕುವೆಂಪು, ಕಾರಂತರು, ಮೇರು ಕಲಾವಿದರಾದ  ರಾಜಕುಮಾರ್, ಅಥವಾ ಜಿ.ಎಸ್. ಶಿವರುದ್ರಪ್ಪ, ಲಂಕೇಶ್, ತೇಜಸ್ವಿಯಂತಹವರು ಸರ್ಕಾರದ ನಡಾವಳಿಗಳ ಕುರಿತು ಒಂದು ಸಣ್ಣ ಅಸಮಾಧಾನ ವ್ಯಕ್ತ ಪಡಿಸಿದರೆ ಸಾಕು, ಇಡೀ ನಾಡು ಅವರತ್ತ ತಿರುಗಿ ನೋಡುತ್ತಿತ್ತು. ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಅಂತಹವರ ಮಾತುಗಳನ್ನು ಗಮನಿಸುತ್ತಿತ್ತು. ಈಗ ಅಂತಹ ಮಾತುಗಳನ್ನಾಡುವ ನೈತಿಕತೆ ಇರುವ ಸಾಹಿತ್ಯ ಅಥವಾ ಸಾಂಸ್ಕøತಿಕ ಲೋಕದ ದಿಗ್ಗಜರನ್ನು ಮತ್ತು ಕೇಳಿಸಿಕೊಳ್ಳುವ ಸೂಕ್ಷ್ಮತೆಯುಳ್ಳ ಸರ್ಕಾರ ಅಥವಾ ಜನಪ್ರತಿನಿಧಿಗಳನ್ನು  ಹುಡುಕಿದರೂ ಸಿಗದಂತಹ ಅರಾಜಕತೆಯ ಸ್ಥಿತಿಯಲ್ಲಿ ನಾವಿದ್ದಿವಿ. ಸರ್ಕಾರ ಮತ್ತು ಸಾಂಸ್ಕøತಿಕ ಲೋಕದ ನಡುವೆ ಏರ್ಪಟ್ಟಿರುವ ಅನೈತಿಕ ಸಂಬಂಧದ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕವು ಪಂಚೇದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಂತಹ ಸೂಕ್ಷ್ಮತೆ ಇದ್ದಿದ್ದರೆಕಳೆದ ಆರು ತಿಂಗಳಿಂದ ಖಾಲಿಬಿದ್ದಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಹೀಗೆ ಅರ್ಧ ಡಜನ್ ಗೂ ಹೆಚ್ಚು ಅಕಾಡೆಮಿಗಳು ಅಧ್ಯಕ್ಷರಿಲ್ಲದೆ, ಸದಸ್ಯರಿಲ್ಲದೆ, ರೀತಿಯಲ್ಲಿ ನಿಷ್ಕ್ರಿಯವಾಗುತ್ತಿರಲಿಲ್ಲ.
ಯಾವುದೇ ಸರ್ಕಾರವು  ಭಾಷೆ ಅಥವಾ ಸಂಸ್ಕತಿಯ ಏಳಿಗೆಗಾಗಿ ಉದಾರವಾಗಿ ಅನುದಾನ ನೀಡುವುದು ಹೆಗ್ಗಳಿಕೆಯಲ್ಲ, ಕೊಟ್ಟ ಹಣ ಸರಿಯಾಗಿ ವಿನಿಯೋಗವಾಗುವ ರೀತಿಯಲ್ಲಿ, ಅಥವಾ ಸಾಹಿತ್ಯ ಮತ್ತು ಸಾಂಸ್ಕತಿಕ ಲೋಕ ಸ್ಥಗಿತಗೊಳ್ಳದ ರೀತಿಯಲ್ಲಿ ನೋಡಿಕೊಳ್ಳಬೇಕಾದ ನೈತಿಕ ಜವಾಬ್ದಾರಿ ಕೂಡ ಇರುತ್ತದೆ. ಸರ್ಕಾರಗಳು ಬದಲಾದ ಮಾತ್ರಕ್ಕೆ ಅಕಾಡೆಮಿಯ ಅಧ್ಯಕ್ಷರುಗಳು, ಸದಸ್ಯರು ಬದಲಾಗಬೇಕು ಎಂಬ ಯಾವ ನಿಯಮವೂ ಇಲ್ಲ. ಕಲಾವಿದರು, ಬರಹಗಾರರು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಸಾಹಿತ್ಯ ಮತ್ತು ಇತರೆ ಕಲೆಗಳಿಗೆ ರಾಜಕೀಯ ಲೇಪನವಿರಬಾರದು. ಐದು ವರ್ಷದ ಆಳ್ವಿಕೆಯ ಸರ್ಕಾರದಲ್ಲಿ ಕೇವಲ ಮೂರು ವರ್ಷಗಳ ಕಾಲ ಅಕಾಡೆಮಿಗಳು ಕ್ರಿಯಾ ಶೀಲವಾಗಿದ್ದು, ಇನ್ನುಳಿದ ಎರಡು ವರ್ಷಗಳ ಅನಾಥವಾಗಿರುವುದು ಯಾರಿಗೂ ಶೋಭೆ ತರುವಂತಹದ್ದಲ್ಲ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಳಿಯ ಕನ್ನಡ ಭವನದ ನೆಲ ಮಹಡಿಯ ಕನ್ನಡ ಸಂಸ್ಕತಿ ಇಲಾಖೆ ಕಚೇರಿಗೆ ಕಾಲಿಟ್ಟರೆ ಸಾಕು, ಯಾವುದೋ ಜಾತ್ರೆಗೆ ಇಲ್ಲವೆ, ಸಂತೆಗೆ ಕಾಲಿಟ್ಟ ಅನುಭವವಾಗುತ್ತದೆ. ಸಂಘ ಸಂಸ್ಥೆಗಳಿಗೆ ಬರುವ ಅನುದಾನಕ್ಕಾಗಿ, ಅಸಂಖ್ಯಾತ ಕಲಾವಿದರು ಮತ್ತು ಬರಹಗಾರರಿಂದ ತುಂಬಿ ತುಳುಕುತ್ತದೆಒಂದು ನಿರ್ದೇಶಕ ಹುದ್ದೆಯ ಕೆಳಗೆ ಮೂರು ಜಂಟಿ ನಿರ್ದೇಶಕ ಹುದ್ದೆಗಳಿವೆ. ಪ್ರತಿ ಜಿಲ್ಲೆಗೆ ಕನ್ನಡ ಸಂಸ್ಕøತಿ ಇಲಾಖೆಯ ಒಬ್ಬರು ಅಥವಾ ಇಬ್ಬರು ಉಪ ನಿರ್ದೇಶಕರಿದ್ದಾರೆ. ಮೂವರು ಜಂಟಿ ನಿರ್ದೇಶಕರಲ್ಲಿ ಒಬ್ಬರಿಗೆ ನಾಡಿನಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕತಿಕ ಉತ್ಸವಗಳ ಜವಾಬ್ದಾರಿಯಿದ್ದರೆ, ಮತ್ತೊಬ್ಬನಿಗೆ ಪ್ರತಿ ಜಿಲ್ಲೆಗೆ ನೀಡಲಾಗುವ ಅನುದಾನ ಕುರಿತಂತೆ ಉಸ್ತುವಾರಿಯಿದೆ. ಮತ್ತೊಬ್ಬನಿಗೆ ಆಡಳಿತ, ಹಾಗೂ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ, ಪಂಪ, ಕನಕ, ಬಸವ, ಅಂಬೇಡ್ಕರ್ ಇತ್ಯಾದಿ ಪ್ರಶಸ್ತಿಗಳ ಹೊಣೆಗಾರಿಕೆ ಹೀಗೆ ಹಲವು ಜವಾಬ್ದಾರಿಗಳು ಹಂಚಿ ಹೋಗಿವೆ. ಇವುಗಳ ಜೊತೆಗೆ ರಾಜ್ಯಾದ್ಯಂತ ಇರುವ  ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳ ಅನುದಾನ, ನಿರ್ವಹಣೆ, ಇವೆಲ್ಲವೂ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಮೇಲಿದ್ದು, ಪ್ರತಿ ಕ್ಷಣದಲ್ಲಿಯೂ ಕಛೇರಿಗೆ ಭೇಟಿ ನೀಡುವ ಲೇಖಕರು, ಕಲಾವಿದರು ಇವರನ್ನು ಸಂಭಾಳಿಸುವಲ್ಲಿ ಹೈರಾಣಾಗಿದ್ದಾರೆ.
ಇಂತಹ ಒಂದು ಇಲಾಖೆಯನ್ನು ನಿಭಾಯಿಸುವ ಜನಪ್ರತಿನಿಧಿಗೆ ಸಾಹಿತ್ಯ, ಕಲೆ, ಸಂಗೀತ, ನಾಟಕ ಇವುಗಳ ಕುರಿತು ಕೇವಲ ಅಭಿರುಚಿ ಇದ್ದರೆ ಸಾಲದು, ಅಪಾರವಾದ ಒಳನೋಟವಿರಬೇಕು. ನಾಡಿನ ದುರಂತವೆಂದರೆ, ಎಂ.ಪಿ. ಪ್ರಕಾಶ್ ರವರಂತಹ ಒಬ್ಬ ಸಜ್ಜನ ರಾಜಕಾರಣಿಯನ್ನು ಹೊರತು ಪಡಿಸಿದರೆ, ಈವರೆಗೂ  ಕನ್ನಡ ಸಂಸ್ಕøತಿ ಇಲಾಖೆಗೆ ಒಬ್ಬ ದಕ್ಷ ಸಚಿವರನ್ನು ನಾವು ನೋಡಲಾಗಲಿಲ್ಲ. ಇಲಾಖೆಗೆ ಅಂತಹ ದಕ್ಷ ಸಚಿವರಿದ್ದರೆ, ಇಂದು ರಾಜ್ಯಾದ್ಯಂತ ತಲೆ ಎತ್ತಿರುವ ಸಾಹಿತಿ, ಕಲಾವಿದರ ಹೆಸರಿನ ಸ್ಮಾರಕ ಟ್ರಸ್ಟ್ ಗಳು ಹಿರಿಯ ಸಾಹಿತಿಗಳ ವೃದ್ಧಾಶ್ರಮಗಳಾಗಿ ಬದಲಾಗುತ್ತಿರಲಿಲ್ಲ. ಸರ್ಕಾರದ ಪಾಲಿಗೆ ಕನ್ನಡ ಸಂಸ್ಕತಿ ಇಲಾಖೆ ಎಂದರೆ, ಸಾಹಿತಿಗಳು ಮತ್ತು ಕಲಾವಿದರಿಗೆ ಭಿಕ್ಷೆ ನೀಡುವ ಘಟಕ ಎಂಬ ಮನೋಭಾವ ಇದ್ದಂತಿದೆ. ಅದರಂತೆ ಲೇಖಕರು ಮತ್ತು ಕಲಾವಿದರು ಸಹ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಕಿವಿ ಹಿಂಡಿ ನಿಷ್ಟುರವಾಗಿ ಹೇಳುವ ಮಹನೀಯರಿಗಾಗಿ ನಾವೀಗ ಎದುರುನೋಡುವಂತಹ ಸ್ಥಿತಿ.
ಕರ್ನಾಟಕದ ಸಾಹಿತ್ಯ, ಸಂಗೀತ, ಕಲೆ ಇವುಗಳಿಗೆ ಮಹತ್ವದ ಕೊಡುಗೆಯನ್ನು ನೀಡಿದ ಮಹನೀಯರಾದ ಕುವೆಂಪು, ಶಿವರಾಮಕಾರಂತರು, ಮಾಸ್ತಿ, ಪು.ತಿ.. ಕೆ.ಎಸ್. ನರಸಿಂಹಸ್ವಾಮಿ, ವಿ.ಕೃ.ಗೋಕಾಕ್, ಆಲೂರು ವೆಂಕಟರಾಯರು, ಬಸವರಾಜ ಕಟ್ಟಿಮನಿ, ಗಳಗನಾಥರು, ಸಂಗೀತ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಹೀಗೆ ನಾಡಿನುದ್ದಕ್ಕೂ ಅನೇಕ ಮಹನೀಯರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳನ್ನು ಕರ್ನಾಟಕ ಸರ್ಕಾರ ಸ್ಥಾಪಿಸಿದೆ. ಅವುಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ, ವಾರ್ಷಿಕವಾಗಿ ಪ್ರತಿ ಟ್ರಸ್ಟ್ ಗೆ ಹನ್ನೆರೆಡು ಲಕ್ಷ ರೂಪಾಯಿ ಅನುದಾನವನ್ನು ನಿಗದಿ ಪಡಿಸಿದೆ. ಜೊತೆಗೆ  ಆಯಾ ಜಿಲ್ಲೆಯ ಸಂಸ್ಕತಿ ಇಲಾಖೆಯ ಉಪನಿರ್ದೇಶಕನನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕೈ ತೊಳೆದುಕೊಂಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಟ್ರಸ್ಟ್ ಗಳಿಗೆ ಅಧ್ಯಕ್ಷರಾಗುವವರಿಗೆ ಮತ್ತು ಸದಸ್ಯರಿಗೆ ಎಷ್ಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಬೇಕೆಂದು  ಅವಧಿಯನ್ನು ನಿಗದಿ ಪಡಿಸಿಲ್ಲ. ಇದಲ್ಲದೆ ಕಳೆದ ಎಂಟತ್ತು ವರ್ಷಗಳಿಂದ ಹಲವು ಟ್ರಸ್ಟ್ ಗಳು ಪ್ರತಿ ವರ್ಷ ತಾವು ಪಡೆದ ಅನುದಾನದ ಬಗ್ಗೆ ವಾರ್ಷಿಕವಾಗಿ ಲೆಕ್ಕ ಪತ್ರದ ವರದಿಯನ್ನು ಒಪ್ಪಿಸಿಲ್ಲ. ಅದನ್ನು ಕೇಳುವ ಗೋಜಿಗೆ ಸರ್ಕಾರವೂ ಹೋಗಿಲ್ಲ
ಕಳೆದ ಎಂಟು-ಹತ್ತು ವರ್ಷಗಳಿಂದಲೂ, ಅಷ್ಟೇಕೆ? ಆರಂಭದ ದಿನಗಳಿಂದಲೂ  ಟ್ರಸ್ಟ್ ಗಳಲ್ಲಿ ಅನೇಕ ಮಂದಿ ಅಧ್ಯಕ್ಷರು ಮತ್ತು ಸದಸ್ಯರುಗಳು ಜೀವಾವಧಿ ಟ್ರಸ್ಟಿಗಳಂತೆ ಮುಂದುವರಿದಿದ್ದಾರೆ. ಅಧ್ಯಕ್ಷರ ಅಥವಾ ಸದಸ್ಯರ ನಿಧಾನನಂತರ ಮಾತ್ರ ಹುದ್ದೆಗಳು ಖಾಲಿಯಾಗುತ್ತಿವೆ. ಜೊತೆಗೆ ಅನೇಕ  ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಿಗೂ, ಅಧ್ಯಕ್ಷರು ವಾಸಿಸುವ  ಸ್ಥಳಗಳಿಗೂ ಯಾವುದೇ ಸಂಬಂಧವಿಲ್ಲ.. ಪಾಟೀಲ ಪುಟ್ಟಪ್ಪ ಅಧ್ಯಕ್ಷರಾಗಿರುವ ವಿ.ಕೃ.ಗೋಕಾಕ್ ಟ್ರಸ್ಟ್ ಇರುವುದು ಹಾವೇರಿಯಲ್ಲಿ. ಪುಟ್ಟಪ್ಪನವರು ವಾಸಿಸುತ್ತಿರುವುದು ಹುಬ್ಬಳ್ಳಿ ನಗರದಲ್ಲಿ. ಟ್ರಸ್ಟ್ ಆರಂಭವಾದ ಹತ್ತು ವರ್ಷಗಳ ಅವಧಿಯಲ್ಲಿ ಪುಟ್ಟಪ್ಪನವರು ಹಾವೇರಿಯ ಟ್ರಸ್ಟ್  ಕಛೇರಿಗೆ ಹೋದ ಉದಾಹರಣೆಗಳಿಲ್ಲ. ವಿ.ಕೃ. ಗೋಕಾಕರ ಕಂಚಿನ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಒಮ್ಮೆ ಹೋಗಿದ್ದನ್ನು ಹೊರತು ಪಡಿಸಿದರೆ, ಗಾಲಿ ಕುರ್ಚಿಯ ಮೇಲೆ ಓಡಾಡುವ ಪುಟ್ಟಪ್ಪನವರ ಮನೆಗೆ ಸದಸ್ಯರು ಮತ್ತು ಕಾರ್ಯದರ್ಶಿಗಳು ಹಾವೇರಿಯಿಂದ ಹುಬ್ಬಳ್ಳಿ ನಗರಕ್ಕೆ ಬಂದು ಸಭೆ ನಡೆಸಿಹೋಗುವುದಕ್ಕೆ ನಾನೇ ಹಲವಾರು ಬಾರಿ ಸಾಕ್ಷಿಯಾಗಿದ್ದೀನಿ. ಮಂಡ್ಯ ಜಿಲ್ಲೆಯ ಕವಿಗಳಾದ ಪು.ತಿ.. ಹಾಗೂ ಕೆ.ಎಸ್. . ಇವರುಗಳ ಟ್ರಸ್ಟ್ ಕಚೇರಿಗಳಿರುವುದು ಬೆಂಗಳೂರಿನಲ್ಲಿ, ಅಧ್ಯಕ್ಷರು, ಸದಸ್ಯರು ಇರುವುದು ಬೆಂಗಳೂರಿನಲ್ಲಿ, ಅವರುಗಳ ಹೆಸರಿನಲ್ಲಿ ಪ್ರಶಸ್ತಿ ವಿತರಣೆಯಾಗುವುದು ಬೆಂಗಳೂರಿನಲ್ಲಿ. ಆದರೆ,   ಹುಟ್ಟೂರುಗಳಾದ ಮೇಲುಕೋಟೆ ಮತ್ತು ಕಿಕ್ಕೇರಿಯಲ್ಲಿ ಕವಿಗಳ ಸ್ಮಾರಕವಾಗಲಿ, ಹುಟ್ಟಿದ ಮನೆಗಳ ರಕ್ಷಣೆ ಕುರಿತಾದ ಕಾಳಜಿಯಾಗಲಿ ಏನೂ ಇಲ್ಲ. ಬಹುತೇಕ ಟ್ರಸ್ಟ್ಗಳು ಸಂಪ್ರದಾಯನಿಷ್ಠ ಬ್ರಾಹಣರು ವಾರ್ಷಿಕವಾಗಿ ಆಚರಿಸುವ ಶ್ರಾಧ್ಧದ ರೂಪದಲ್ಲಿ  ತಮಗೆ ಬೇಕಾದವರಿಗೆ ವಾರ್ಷಿಕ ಪ್ರಶಸ್ತಿಯನ್ನು ಕೊಟ್ಟು, ಕಾರ್ಯಕ್ರಮ ಮಾಡಿ  ಕೈ ತೊಳೆದುಕೊಳ್ಳುತ್ತಿವೆ. ಯಾವ ವ್ಯಕ್ತಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಯಾಗಿದೆಯೋ ಅಂತಹ  ಮಹನೀಯರ  ಜೀವನ, ಸಾಧನೆ ಕುರಿತು ರಾಜ್ಯದ ವಿವಿಧ ನಗರ ಅಥವಾ ವಿ.ವಿ.ಗಳಲ್ಲಿ ಉಪನ್ಯಾಸ ಏರ್ಪಡಿಸುವ ಆಸಕ್ತಿ ಯಾರಿಗೂ ಇದ್ದಂತಿಲ್ಲ. ಏಕೆಂದರೆ ಟ್ರಸ್ಟ್ ಗಳ ಅಧ್ಯಕ್ಷರಾಗಿರುವ ಮಹನೀಯರೆಲ್ಲಾ  ಸರಾಸರಿ 70 ವರ್ಷದಿಂದ 98 ವರ್ಷಗಳ ನಡುವಿನ ವೃದ್ಧರಾಗಿದ್ದಾರೆ. ಹಾಗಾಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳು ಒಂದು ರೀತಿಯ  ಸಾಹಿತಿ ಮತ್ತು ಕಲಾವಿದರ ವೃದ್ಧಾಶ್ರಮಗಳಂತೆ ಗೋಚರಿಸುತ್ತಿವೆ, ಇವುಗಳಿಗೆ ಸರ್ಕಾರ ಅಥವಾ ಕನ್ನಡ ಸಂಸ್ಕøತಿ ಇಲಾಖೆಯು. ಅಕಾಡೆಮಿಗಳಿ ಇರುವಂತೆ ನಿಂiÀiಮಾವಳಿಗಳನ್ನು ರೂಪಿಸಿ, ಹೊಸ ಕಾಯಕಲ್ಪ ನೀಡಲು ಸಾಧ್ಯವಾಗದಿದ್ದರೆ ಇವುಗಳನ್ನು ಮುಚ್ಚುವುದು ಒಳಿತು.
ಇಂತಹ ಉದಾರವಾದ ಹಣದ ನೀತಿಯಿಂದಾಗಿ ಒಂದು ಶತಮಾನದ ಇತಿಹಾಸವಿರುವ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಈಗ ಸಾಹಿತ್ಯ ಚಟುವಟಿಕೆಗಳನ್ನು ಬದಿಗಿರಿಸಿ, ಸಾಹಿತ್ಯ ಸಮ್ಮೇಳನಗಳೆಂಬ ಜಾತ್ರೆಗಳನ್ನು ನಡೆಸುವ ಉದ್ಯಮವಾಗಿ ಪರಿವರ್ತನೆ ಹೊಂದಿದೆ. ಸಾಹಿತ್ಯ ಕೃತಿಗಳ ಪ್ರಕಟಣೆ, ಉಪನ್ಯಾಸಗಳು, ವಿಚಾರ ಸಂಕಿರಣಗಳು ಇವುಗಳನ್ನು ಬದಿಗಿಟ್ಟು, ವರ್ಷಪೂರ್ತಿ ನಡೆಸಬೇಕಾದ ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಬೊಧಿಸುವ ಕುರಿತು ಸರ್ಕಾರದ ಮೇಲೆ ಯಾವೊಂದು ಒತ್ತಡವನ್ನು ಹೇರಲಾಗದ ಅಥವಾ ಭಾಷೆಯ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗದ ಕನ್ನಡ ಸಾಹಿತ್ಯ ಪರಿಷತ್ತು, “ ಯಾರದೋ ರೊಕ್ಕ, ಯಲ್ಲಮ್ಮನ ಜಾತ್ರಿ ಉಘೇ ಉಘೇಎಂಬಂತೆ ಹುಡಿ ಹಾರಿಸುವುದರಲ್ಲಿ ನಿರತವಾಗಿದೆ. ಇನ್ನೂ ರಾಜ್ಯಾದ್ಯಂತ ಸಂಸ್ಕತಿ ಇಲಾಖೆ ಮತ್ತು ಮಹಾನಗರ ಪಾಲಿಕೆಗಳ ಅಧೀನದಲ್ಲಿರುವ ಭವನಗಳು ಸ್ಥಿತಿಯಂತೂ ಹೇಳ ತೀರದಂತಾಗಿದೆ. ಇವುಗಳು ಪ್ರತಿ ವರ್ಷ ನವೀಕರಣ ಅಥವಾ ರಿಪೇರಿ ಹೆಸರಿನಲ್ಲಿ ಲೋಕೋಪಯೋಗ ಇಲಾಖೆಯ ಅಧಿಕಾರಿಗಳಿಗೆ ಹಣ ತಂದುಕೊಡುವ ಚಿನ್ನದ ಗಣಿಗಳಾಗಿವೆ. ನವೀಕರಣದ ನಂತರ ಜನಸಾಮಾನ್ಯರ ಅಥವಾ ಕನ್ನಡ ಸಾಹಿತ್ಯ ಸಂಸ್ಕತಿಗೆ ಸಂಬಂಧ ಪಟ್ಟಂತೆ ಯಾವುದೇ ಕಾರ್ಯಕ್ರಮಕ್ಕೂ ದಕ್ಕದ ಹಾಗೆ ಇವುಗಳ ದರವನ್ನು ಹೆಚ್ಚಿಸಲಾಗಿದೆ. ಧಾರವಾಡದ ಕಲಾ ಭವನದ ಬಾಡಿಗೆ ದರವನ್ನು 8 ಸಾವಿರ ದಿಂದ  52 ಸಾವಿರ ರೂಪಾಯಿಗೆ ಏರಿಸಲಾಗಿದೆ. ಇದೇ ರೀತಿಯಲ್ಲಿ ಹುಬ್ಬಳ್ಳಿ ನಗರದಲ್ಲಿ ಹೊಸದಾಗಿ ನಿರ್ಮಿಸಿದ ಕನ್ನಡ ಭವನದ ದರವನ್ನು ಏಕಾಏಕಿ 22 ಸಾವಿರಕ್ಕೆ ನಿಗದಿ ಪಡಿಸಲಾಗಿದೆ. ಇಂತಹ ದುಬಾರಿ ಬಾಡಿಗೆಯನ್ನು ನೀಡಿ ಕಾರ್ಯಕ್ರಮ ನಡೆಸುವವರು ಯಾರು? ಇದಕ್ಕೆ ಕನ್ನಡ ಸಂಸ್ಕತಿ ಇಲಾಖೆ ಉತ್ತರ ನೀಡಬೇಕು. ಇದು ಇವೊತ್ತಿನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕತಿಕ ಜಗತ್ತಿನ ಕಥೆ ಮತ್ತು ವ್ಯಥೆ ಎರಡೂ ಆಗಿದೆ.
( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)




ಶುಕ್ರವಾರ, ಜುಲೈ 28, 2017

ಕನ್ನಡ ಕಾವ್ಯ ಮೀಮಾಂಸೆ : ಸಾಂಸ್ಕಂತಿಕ ರಾಜಕಾರಣದ ಸಮರ್ಥ ಅನಾವರಣ



ಕನ್ನಡದ ಶ್ರೇಷ್ಠ ಸಂಸ್ಕಂತಿ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್ ಬೂದಾಳು ಅವರಕನ್ನಡ ಕಾವ್ಯ ಮೀಮಾಂಸೆಕೃತಿಯು ಇತ್ತೀಚೆಗಿನ ದಿನಗಳಲ್ಲಿ ಕನ್ನಡಕ್ಕೆ ಬಂದ ಮಹತ್ವದ ವಿದ್ವತ್ಪೂರ್ಣ ಅಧ್ಯಯನ ಕೃತಿಯಾಗಿದೆ. ತಮ್ಮ ಬದುಕನ್ನು ಬೌದ್ಧ ಧರ್ಮದ ತತ್ವ ಮತ್ತು ಸಿದ್ಧಾಂತಗಳಿಗೆ, ನಾಗಾರ್ಜುನ ಮತ್ತು ಅಲ್ಲಮಪ್ರಭು ಕುರಿತ ಅಧ್ಯಯನಕ್ಕೆ ಹಾಗೂ ನಾಡಿನುದ್ದಕ್ಕೂ ಜನಪದರ ಎದೆಯೊಳಗೆ ದಾಖಲಾಗಿರುವ ಅಲಿಖಿತ ಪಠ್ಯಗಳಾದ ತತ್ವಪದಗಳ ಸಂಗ್ರಹ ಮತ್ತು ವಿಶ್ಲೇಷಣೆಗೆ ಮೀಸಲಾಗಿಟ್ಟಿರುವ ನಟರಾಜ ಬೂದಾಳರು ಸತತ ಹತ್ತು ವರ್ಷಗಳ ಕಾಲದ ತಮ್ಮ ವಸ್ತು ನಿಷ್ಠ ಅಧ್ಯಯನದ ಮೂಲಕ ಭಾರತೀಯ ಕಾವ್ಯ ಮೀಮಾಂಸೆಗೆ ಪರ್ಯಾಯವಾಗಿ ಕನ್ನಡದ ಕಾವ್ಯ ಮೀಮಾಂಸೆಯ ಮಾದರಿಯನ್ನು ಇದೀಗ ನಮ್ಮ ಎದುರುಗಿಟ್ಟಿದ್ದಾರೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ಪ್ರಕಟವಾಗಿರುವ ಕೃತಿಯು ಕನ್ನಡದ ದೇಶಿ ಚಿಂತನೆಗೆ ಮಹತ್ವದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಕನ್ನಡದ ಬೌದ್ಧಿಕ ಜಗತ್ತನ್ನು ತಮ್ಮ ಚಿಂತನೆಗಳ ಮೂಲಕ ವಿಸ್ತರಿಸಿದ ಡಾ. ಡಿ.ಆರ್. ನಾಗರಾಜು ಅವರ ನಂತರ ಮುಂದುವರಿದ ದೇಸಿ ಚಿಂತನೆ ಶೋಧ ಎಂದು ಕರೆಯಬಹುದಾದ ಕೃತಿಯನ್ನು ದಿವಂಗತ ಡಿ.ಆರ್. ನಾಗರಾಜು ಅವರಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆಕೃತಿಯ ಮುಂದುವರಿದ ಚಿಂತನೆಯ ಭಾಗವೆಂದು  ಧಾರಾಳವಾಗಿ ಹೇಳಬಹುದಾಗಿದೆ.
ಭಾರತೀಯ ಕಾವ್ಯ ಮೀಮಾಂಸೆಯೆಂದು ಕರೆಯಲಾಗುವ ಉತ್ತರದ ಸಂಸ್ಕø ಕಾವ್ಯ ಮೀಮಾಂಸೆಯ ಕಣ್ಣಲ್ಲಿ ಕನ್ನಡವನ್ನೂ ಒಳಗೊಂಡಂತೆ ಭಾರತೀಯ ಇತರೆ ಭಾಷೆಗಳ ಕಾವ್ಯವನ್ನು ವ್ಯಾಖ್ಯಾನಿಸುವ ಪದ್ಧತಿ ಬಹಳ ಕಾಲದಿಂದಲೂ ರೂಢಿಯಲ್ಲಿದೆ. ಉತ್ತರ ಭಾರತದ ಸಂಸ್ಕø ಭಾಷೆ ಮತ್ತು ಅದರ ಮೀಮಾಂಸೆಗೆ ಪ್ರತಿಯಾಗಿ ದಕ್ಷಿಣ ಭಾರತದಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿಕೊಂಡ ದ್ರಾವಿಡ ಭಾಷೆಗಳಾದ ತಮಿಳು ಮತ್ತು ಕನ್ನಡದಲ್ಲಿ ಕಾವ್ಯ ಸೃಷ್ಟಿಯಿಂದ ಹಿಡಿದು, ವ್ಯಾಖ್ಯಾನಿಸುವ ನಮ್ಮದೇ ಆದ ಪರಿಕರಗಳು ಅಥವಾ ಮಾನದಂಡಗಳಿದ್ದವು. ಆದರೆಉತ್ತರದ ಸಾಂಸ್ಕøತಿಕ ರಾಜಕಾರಣ ಮತ್ತು ಪ್ರಾದೇಶಿಕ ಭಾಷೆಗಳ ಕುರಿತಾದ ಕೀಳರಿಮೆಯ ಪ್ರಜ್ಞೆಯಿಂದಾಗಿ ನಾವಿನ್ನೂ ಸಂಸ್ಕಂತದ ಭಾರತೀಯ ಕಾವ್ಯ ಮೀಮಾಂಸೆಯ ನೆರಳಲ್ಲಿ ಸಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ  ಹೊಸಚಿಂತನೆ ಮತ್ತು  ಮಾರ್ಗಗಳನ್ನು ನಟರಾಜ ಬೂದಾಳು ಕನ್ನಡಿಗರ ಮುಂದಿರಿಸಿದ್ದಾರೆ.
ಲೇಖಕರೇ ಕೃತಿಯಲ್ಲಿ ಹೇಳುವಮೀಮಾಂಸೆಯೆಂಬುದು ಮೂಲತಃ ಲೋಕವನ್ನು ನೋಡುವ ಕಣ್ಣು, ಬದುಕುವ ಜಗತ್ತನ್ನು ಬದುಕಿನ ಸ್ವರೂಪಕ್ಕೆ ಅದರ ಅಗತ್ಯಕ್ಕೆ ಅನುಸಾರವಾಗಿ ವಿವರಿಸಿಕೊಳ್ಳುವ ಒಂದು ಕ್ರಮ. ಮೀಮಾಂಸೆಯ ದಾರಿ ಮತ್ತು ಪ್ರಭುತ್ವದ ದಾರಿ ಬೇರೆಯಾಗಿರುವುದಿಲ್ಲ. ಕವಿರಾಜ ಮಾರ್ಗ ಕೃತಿಯು ಇದನ್ನೇ ಸೂಚಿಸುತ್ತದೆ. ಆದರೆ, ಜೀವನ ಕ್ರಮಗಳನ್ನು ನಿಯಂತ್ರಿಸುವ ಮೂಲಕ ಅಧಿಕಾರ ಕೇಂದ್ರಗಳು ತಮ್ಮ ಅಧಿಕಾರವನ್ನು ರೂಢಿಸಿಕೊಳ್ಳುವುದರಿಂದ ಸಹಜವಾಗಿ ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಗಳು ಅಧಿಕಾರದ ಆಯುಧಗಳಾಗಿವೆ. ಏಕಕೇಂದ್ರಿತ ಪ್ರಾಬಲ್ಯವನ್ನು ಸ್ಥಾಪಿಸಬಯಸುವ ಸಂಸ್ಕø ಕಾವ್ಯ ಮೀಮಾಂಸೆಯು ಸ್ಥಳೀಯ ಕಾವ್ಯ ಮೀಮಾಂಸೆ ಮತ್ತು ಜೀವನ ಕ್ರಮಗಳ ಮೇಲೆ ಅಧಿಕಾರ ತೋರುತ್ತಾ ಬಂದಿದೆಎಂಬ ಮಾತುಗಳು ನಮ್ಮ ಜೀವನ ಕ್ರಮ, ದೇಶಿ ಸಂಸ್ಕøತಿಯ ಚಿಂತನೆ ಹಾಗೂ ನಮ್ಮ ನಡುವಿನ ಮಲೆ ಮಹಾದೇಶ್ವರನ ಕಾವ್ಯ, ಮಂಟೆ ಸ್ವಾಮಿ ಕಾವ್ಯ, ಜುಂಜಪ್ಪನ ಕಾವ್ಯ, ಶರಣರ ವಚನಗಳು ಮತ್ತು ಅಸಂಖ್ಯಾತ ತತ್ವ ಪದಕಾರರ ತತ್ವದ ಪದಗಳನ್ನು ಕನ್ನಡ ಕಾವ್ಯ ಮೀಮಾಂಸೆಯ ದೃಷ್ಟಿ ಕೋನದಲ್ಲಿ ನೋಡುವಂತೆ, ಗ್ರಹಿಸುವಂತೆ ಮತ್ತು  ವ್ಯಾಖ್ಯಾನಿಸುವಂತೆ ಪ್ರೇರೇಪಿಸುತ್ತವೆ.
ಕೃತಿಯು ಕನ್ನಡದ ಮನಸ್ಸುಗಳಿಗೆ ಮುಖ್ಯವಾದ ಹಾಗೂ ಸಂಶೋಧನೆಗೆ ಮಾದರಿಯಾದ ಪಠ್ಯವಾಗಿದೆ. ಏಕೆಂದರೆ, ಇಲ್ಲಿ ಕಾವ್ಯ ಮೀಮಾಂಸೆ ಕುರಿತಂತೆ ಲೇಖಕರು ಸಾವಾಧಾನವಾಗಿ ಚಿಂತಿಸಿ ಕಟ್ಟಿಕೊಟ್ಟಿರುವ ಚಿಂತನೆಗಳು ನಾವು ಮರೆತು ಹೋಗಿರುವ ಮಾರ್ಗಕ್ಕೆ ಕೈ ದೀವಿಗೆಯಂತೆ ಕಾಣುತ್ತವೆ. ಸಮೂಹವೊಂದರ ಬದುಕಿನ ಶೈಲಿ ರೂಪುಗೊಳ್ಳುವುದು ಸುತ್ತಲಿನ ನಿಸರ್ಗಕ್ಕೆ ಅನುಗುಣವಾಗಿಯೋ ಅಥವಾ ಕಾಲ್ಪನಿಕ ನಂಬಿಕೆಯನ್ನಾಧರಿಸಿಯೋ ಎಂಬ ಪ್ರಶ್ನೆಗೆ ಶ್ರಮಣ ಕಾವ್ಯ ಮೀಮಾಂಸೆಯು ನಿಸರ್ಗ ಎಂದು ಉತ್ತರಿಸಿದರೆ, ಸಂಸ್ಕಂತ ಕಾವ್ಯ ಮೀಮಾಂಸೆಯು ಸೃಷ್ಟಿಯ ಬಗೆಗಿನ ನಂಬಿಕೆಯನ್ನಾಧರಿಸಿ ಎಂದು ಉತ್ತರಿಸುತ್ತದೆ. ಇದನ್ನು ಆಳವಾಗಿ ಆಲೋಚಿಸಿದರೆ, ದೇಶಿ ಕಾವ್ಯ ಮೀಮಾಂಸೆಯು ಹೆಚ್ಚು ವಾಸ್ತವಿಕವಾಗಿದೆ. ಇದು ಬುದ್ಧನ ಚಿಂತನೆಯ ಮಾದರಿ ಕೂಡ ಹೌದು. ಏಕೆಂದರೆ, ಅವನು ಕಣ್ಣ ಮುಂದಿನ ವಾಸ್ತವವನ್ನು ಹೊರತು ಪಡಿಸಿ ಅಂದರೆ, ಇಹಲೋಕದ ವ್ಯವಹಾರಗಳನ್ನು ಹೊರತು ಪಡಿಸಿ, ಕಲ್ಪನಾ ಲೋಕ ಅಥವಾ ಊಹೆಗಳ ಆಧಾರಿತ ಎಲ್ಲಾ ನಂಬಿಕೆಗಳನ್ನು ತಿರಸ್ಕರಿಸಿದವನು. ಭಾರತೀಯ ಕಾವ್ಯ ಮೀಮಾಂಸೆಯು ರೂಪ, ರಸ, ಸ್ಪರ್ಶ ಇವುಗಳ ಕುರಿತು ವಿವೇಚಿಸಿದರೆ, ದೇಶಿ ಕಾವ್ಯ ಮೀಮಾಂಸೆಯು ಇದನ್ನು ಮೀರಿ; ದೇಹ, ಶ್ರಮ, ನಡೆ ಮತ್ತು ನುಡಿಗಳನ್ನು ಕುರಿತು ವಿವೇಚಿಸುತ್ತದೆ.
ಕೃತಿಯ ಪ್ರಾಮುಖ್ಯತೆ ಇರುವುದು ಭಾರತೀಯ ಕಾವ್ಯ ಮೀಮಾಂಸೆಗೆ ಪ್ರತಿಯಾಗಿ ಕನ್ನಡ ಕಾವ್ಯ ಮೀಮಾಂಸೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ  ಅದರ ಇತಿಹಾಸ, ಬೆಳವಣಿಗೆಯನ್ನು ಗಂಭೀರವಾಗಿ ಅಧ್ಯಯನ ಮಾಡಿ ಕನ್ನಡ ಕಾವ್ಯ ಮೀಮಾಂಸೆಯ ಚಾರಿತ್ರಿಕ ಬೆಳವಣಿಗೆಯನ್ನು ಲೇಖಕರು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಭಾರತದ ಶ್ರಮಣ ಪರಂಪರೆಯನ್ನು ನಿಟ್ಟಿನಲ್ಲಿ ಮುನ್ನೆಲೆಗೆ ತಂದು ಪ್ರಸ್ತಾಪಿಸಿರುವ ಲೇಖಕರು, “ ಬುದ್ಧ ಪೂರ್ವಯುಗದ ಚಾರ್ವಾಕನಿಂದ ಹಿಡಿದು ಶಿಶುನಾಳ ಶರೀಪನವರೆಗೆ ಗುರುತಿಸಲು ಸಾಧ್ಯವಾಗುವ ವಿಶಿಷ್ಟವಾದ ಸಾತತ್ಯತೆಯನ್ನು ಭಾರತೀಯ ದರ್ಶನಗಳಲ್ಲಿ ಗುರುತಿಸಬಹುದುಎಂದು ಹೇಳುವ ನಟರಾಜ ಬೂದಾಳರುಶ್ರಮಣ ಪರಂಪರೆಯೆಂದು ವಿಶಾಲಾರ್ಥದಲ್ಲಿ ಕರೆಯಬಹುದಾದ ಇವರಲ್ಲಿ ಪ್ರಾಚೀನ ಪಂಥಗಳಾದ ಆಜೀವಕರು, ಚಾರ್ವಾಕರು, ಜೈನರು, ಬುದ್ಧರು, ನಾಥಪಚಿಥೀಯರು, ನಾನಾ ರೀತಿಯ ಸಿದ್ಧರು, ನಂತರದ ಕಾಲದ ವಚನಕಾರರು, ತತ್ವಪದಕಾರರು ಸೇರುತ್ತಾರೆ. ಕನ್ನಡದ ಬದುಕಿನಲ್ಲಿ ಪಂಥಗಳು ನಡೆಸಿದ ದೀರ್ಘಕಾಲದ ಯಾನದ ಫಲವಿದೆ.ಇಷ್ಟು ದೀರ್ಘಕಾಲದ ಚಲನೆಯಲ್ಲಿ ಅವುಗಳ ನಡುವೆ ನಡೆದ ಮುಖಾಮುಖಿಯ ಕಾರಣದಿಂದಾಗಿ ಅನೇಕ ರೂಪಾಂತರಗಳು ಸಂಭವಿಸಿವೆ. ಕನ್ನಡದ ಅಸ್ಮಿತೆಯನ್ನು ಆಕರಗಳು ರೂಪಿಸಿವೆ. ಹಾಗಾಗಿ ಕನ್ನಡದ ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳನ್ನು ತಾತ್ವಿಕ ಆಕರಗಳ ಮೂಲಕ ರೂಪಿಸಿಕೊಳ್ಳುವ್ಯದರಿಂದ ನೇರವಾಗಿ ಕನ್ನಡದ ಬದುಕಿನಿಂದಲೇ ಅವುಗಳನ್ನು ಹೆಕ್ಕಿಕೊಂಡಂತಾಗುತ್ತದೆಎಂಬ ಸ್ಪಷ್ಟವಾದ ನಿಲುವನ್ನು ತಾಳುತ್ತಾ, ಕನ್ನಡ ಕಾವ್ಯ ಮೀಮಾಂಸೆಯ ಮೂಲ ಬೇರುಗಳನ್ನು ನಿಖರವಾಗಿ ಗುರುತಿಸಿದ್ದಾರೆ.
ದೇಹ ಮತ್ತು ಶ್ರಮವನ್ನು ವಾಖ್ಯಾನಿಸುವ ನಿರ್ವಹಿಸುವ ಅನೇಕ ಮಾದರಿಗಳು ಕನ್ನಡದ ಬದುಕನ್ನು ರೂಪಿಸಿರುವುದನ್ನು ದಾಖಲಿಸಿರುವ ಲೇಖಕರು, ದೇಹ ಮತ್ತು ಶ್ರಮವನ್ನು ಅಪಮಾನಿಸಿರುವ ಕಾರಣಕ್ಕೆ ಕನ್ನಡದ ಮನಸ್ಸು ಘಾಸಿಕೊಂಡಿದೆ. ಅಪಮಾನದ ಸಂಕಟದಿಂದ ಹೊರಬರಲು ನಡೆಸಿದ ಹೊರಾಟದ ದೀರ್ಘಕಾಲೀನ ಚರಿತ್ರೆಯೊಂದು ನಮ್ಮ ಬೆನ್ನಿಗಿದೆ ಎನ್ನುತ್ತಾರೆ.
ಇದನ್ನು ಡಿ.ಆರ್. ನಾಗರಾಜ್ ಅವರುಕನ್ನಡದ ಭಾಷೆಯೊಳಗಿನ ದಂಗೆಯ ದನಿ ಎದ್ದರೆ, ಅದು ಕಲ್ಯಾಣದ ಜತೆಗೆ ಮಾತನಾಡಬೇಕು. ಅದು ಕನ್ನಡ ಭಾಷೆಯ ಚಾರಿತ್ರಿಕ ವಿಧಿಎಂದು ತಮ್ಮ ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಕೃತಿಯಲ್ಲಿ ಹೇಳಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಟರಾಜ ಬೂದಾಳು ಅವರು ಪ್ರಾದೇಶಿಕ ನೆಲೆಯಲ್ಲಿ ಉತ್ತರದ ಸಾಂಸ್ಕøತಿಕ ರಾಜಕಾರಣಕ್ಕೆ ಪ್ರತಿಯಾಗಿ ಅನೇಕ ಮಾದರಿಗಳನ್ನು ಕೃತಿಯ ಮೂಲಕ ನಮ್ಮ ಮುಂದಿಟ್ಟು ಅಂತಹ ದಂಗೆಯ ದನಿಗಳನ್ನು ಗುರುತಿಸಿದ್ದಾರೆ. ಹಾಗಾಗಿ ಕೃತಿಯು ಕನ್ನಡ ಸಾಂಸ್ಕøತಿಕ ಜಗತ್ತಿಗೆ ಮಹತ್ವದ ಕೃತಿ ಮಾತ್ರವಲ್ಲದೆ ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಬಲ್ಲ ಗುಣವನ್ನೂ ಸಹ ಪಡೆದುಕೊಂಡಿದೆ.
ಬೂದಾಳು ಅವರ ಚಿತ್ರ ಸೌಜನ್ಯ- ಪ್ರಜಾವಾಣಿ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)


ಶುಕ್ರವಾರ, ಜುಲೈ 21, 2017

ಪ್ರಜಾ ಪ್ರಭತ್ವವೆಂಬ ಲೊಳಲೊಟ್ಟೆ



ಜಗತ್ತಿನ ಅತಿ ದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆಇರುವ ರಾಷ್ಟ್ರ ಎಂದು ಗುರುತಿಸಿಕೊಂಡಿರುವ  ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿವೆ. ನಿಜಕ್ಕೂ ಈ ದೇಶ ಪ್ರಜಾಪ್ರಭುತ್ವ ರಾಷ್ಟ್ರವೆ? ಅಥವಾ ಆ ರೀತಿಯಲ್ಲಿ ಆರೋಪ ಹೊತ್ತಿಕೊಂಡಿದೆಯಾ? ಎಂಬ ಅನುಮಾನ  ದಟ್ಟವಾಗುತ್ತಿದೆ. ಏಕೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಈ ಮೂರು ಅಂಗಗಳು ಪ್ರಶ್ನಾರ್ಹವಾಗಿದ್ದರೆ, ನಾಲ್ಕನೆಯ ಪ್ರಮುಖ ಅಂಗವಾಗಿದ್ದ ಪತ್ರಿಕಾ ರಂಗವು ಈಗ ಪತ್ರಿಕೋದ್ಯಮವಾಗಿದ್ದು, ಉಳ್ಳವರ ಕಾಲಕೆಳಗಿನ ಚಪ್ಪಲಿಗಳಂತೆ ಸವೆಯುತ್ತಿದೆ. ಒಂದೆಡೆ, ನಿರ್ಧಾಕ್ಷಿಣ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದರೆ, ಮತ್ತೊಂದೆಡೆ, ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿ ಜಗತ್ತಿನ ಮತ್ತು ಅಧಿಕಾರವೆಂಬ ಅರಮನೆಯ ತುತ್ತೂರಿ ಮತ್ತು ಕಹಳೆಗಳಂತೆ ಮೊಳಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಇತ್ತೀಚೆಗೆ ನಡೆದ ಎರಡು ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸುವಂತಿವೆ.
 ಗುಜರಾಜತ್ ಮೂಲದ ಹಾಗೂ ಕಳೆದ ಐದಾರು ವರ್ಷಗಳಿಂದ ವಿಶೇಷವಾಗಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ, ಬಂದರುಗಳ ನಿರ್ಮಾಣ ಮತ್ತು ಅಭಿವೃದ್ಧಿ ಹಾಗೂ ಗಣಿಕಾರಿಕೆ ಈ ವಲಯದಲ್ಲಿ ಸಾಮ್ರಾಟ ಎನಿಸಿಕೊಂಡಿರುವ ಗೌತಮ್ ಅದಾನಿ ಮಾಲೀಕತ್ವದ ಅದಾನಿಗ್ರೂಪ್ ಸಂಸ್ಥೆಯು ಮುಂಬೈ ಮೂಲದ “ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಎಂಬ ಇಂಗ್ಲೀಷ್ ವಾರಪತ್ರಿಕೆಯ ಮೇಲೆ 500 ಕೋಟಿ ರೂಪಾಯಿಗಳ ಮಾನನಷ್ಟು ಮೊಕೊದ್ದಮೆ ಹೂಡಿದೆ. ಅದಾನಿ ಕಂಪನಿಯು ಕೇಂದ್ರ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನಷ್ಟು ತೆರಿಗೆ ವಂಚಿಸಿದೆ ಎಂಬ ಒಂದು ಲೇಖನ ಮತ್ತು ವಿಶೇಷ ಆರ್ಥಿಕ ವಲಯದಲ್ಲಿ ( ಸ್ಪೆಷಲ್ ಎಕನಾಮಿಕ್ ಜೂನ್) ಕೈಗಾರಿಕೆ ಸ್ಥಾಪನೆಯಾಗಿದೆ ಎಂದು ಹೇಳುವುದರ ಮೂಲಕ  500 ಕೋಟಿ ರೂಪಾಯಿ ನಷ್ಟು ತೆರಿಗೆ ವಿನಾಯತಿ ಪಡೆದಿದೆ ಎಂಬ ಲೇಖನಗಳು ಪ್ರಕಟವಾಗಿ ರಾಜಕೀಯ ವಲಯದಲ್ಲಿ ಸಣ್ಣ ಕಂಪನವನ್ನು ಮೂಡಿಸಿದ್ದವು.
ಕಳೆದ ವರ್ಷ ತಾನೆ ಐವತ್ತನೆಯ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ  ಎಕನಾಮಿಕ್ ಅಂಡ್ ಪೊಲಟಿಕಲ್ ಪತ್ರಿಕೆಯು ಸ್ವಾತಂತ್ರ್ಯಾನಂತರದ ಭಾರತದಲ್ಲಿ ದೇಶದ ರಾಜಕೀಯ, ಆರ್ಥಿಕ, ವಿದ್ಯಾಮಾನಗಳನ್ನು ಆಳವಾದ ಅಧ್ಯಯನ ಮತ್ತು ವಿದ್ವತ್ ಪೂರ್ಣ ವಿಶ್ಲೇಷಣೆಯ ಮೂಲಕ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದು, ಭಾರತದ ಪ್ರಜ್ಞಾವಂತರ , ಲೇಖಕರು, ಚಿಂತಕರು,ಹಾಗೂ ಪತ್ರಕರ್ತರ ಬದುಕಿನ ಒಂದು ಭಾಗವಾಗಿದೆ.  ಸಮೀಕ್ಷಾ ಟ್ರಸ್ಟ್ ನ ಅಡಿಯಲ್ಲಿ ಪ್ರಕಟವಾಗುವ ಈ ಪತ್ರಿಕೆಯು ಯಾವುದೇ ಜಾಹಿರಾತನ್ನು ಸ್ವೀಕರಿಸುವುದಿಲ್ಲ. ಕೇವಲ ಓದುಗರ ವಾರ್ಷಿಕ ಚಂದಾ ಮತ್ತು ಆಯ್ಧ ಹಳೆಯ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದರಿಂದ ಬರುವ ಆದಾಯವನ್ನು ಈ ಪತ್ರಿಕೆಯು ನಂಬಿಕೊಂಡಿದೆ. ಇಲ್ಲಿನ ಸಂಪಾದಕಿಯ ಮಂಡಳಿಯ ಸದಸ್ಯರಾಗಲಿ, ಈ ಪತ್ರಿಕೆಗೆ ಬರೆಯುವ ಲೇಖಕರಾಗಲಿ ಸಂಭಾವನೆ ಪಡೆಯುವುದಿಲ್ಲ. ಒಂದು ದೇಶವನ್ನು ಹಾದಿ ತಪ್ಪದಂತೆ ಸರಿಯಾದ ಹಾದಿಯಲ್ಲಿ ಕೊಂಡೊಯ್ಯಬೇಕೆಂಬ ಬದ್ಧತೆ ಈ ಪತ್ರಿಕೆಯ ಗುರಿಯಾಗಿದೆ. ಹಾಗಾಗಿ ಈ ಪತ್ರಿಕೆಗೆ ದೇಶ, ವಿಶೇಷಗಳಿಂದ ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರು, ಇತಿಹಾಸ ತಜ್ಞರು, ರಾಜಕೀಯ ತಜ್ಞರು ಲೇಖನ ಬರೆಯುತ್ತಾರೆ. ಇಂತಹ ಪತ್ರಿಕೆಯಲ್ಲಿ ಲೇಖನ ಬರೆಯುವುದು ಅಥವಾ ಪ್ರಕಟವಾಗುವುದು ಪ್ರತಿಯೊಬ್ಬರಿಗೂ ಗೌರವದ ಸಂಗತಿಯಾಗಿದೆ.
ಕಳೆದ ವರ್ಷ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡಿದ್ದ ಪರಂಜೋಯ್ ಗುಹಾ  ಅವರು 43 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಪಳಗಿದವರು. ಈ ಹಿಂದೆ ಮುಖೇಶ್ ಅಂಬಾನಿಯವರ  ಅನಿಲ ಕೊಳವೆ ಬಾವಿಗಳ ಹಗರಣ ಕುರಿತು ತನಿಖಾ ವರದಿಯನ್ನು ಪ್ರಕಟಿಸಿ ಹೆಸರು ಮಾಡಿದವರು. ಅವರ ಸಂಪಾದಕಿಯದ ನೇತೃತ್ವದಲ್ಲಿ ಪ್ರಕಟವಾದ ಅದಾನಿ ಗ್ರೂಪ್ ನ ಎರಡು ವರದಿಗಳು ಈಗ ಸಮೀಕ್ಷ ಟ್ರಸ್ಟ್ ಅನ್ನು ಸಂಕಷ್ಟಕ್ಕೆ ಗುರಿಮಾಡಿವೆ. ಹಾಗಾಗಿ ಕಳೆದವಾರ ಅವರು ತಮ್ಮ ಸಂಪಾದಕನ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇದೀಗ ಐನೂರು ಕೋಟಿ ರೂಪಾಯಿಗಳ ಮಾನನಷ್ಟ ಮೊಕೊದ್ದಮೆಯನ್ನು ಎದುರಿಸಲಾಗದ ಪತ್ರಿಕೆಯು ಆ ಎರಡು ಲೇಖನಗಳನ್ನು ವಾಪಸ್ ತೆಗೆದು ಕೊಳ್ಳಲು ಅಂದರೆ, ಪತ್ರಿಕೆಯ ಸಂಗ್ರಹದಲ್ಲಿ ಲೇಖನಗಳು ಇರದಂತೆ ನೋಡಿಕೊಳ್ಳಲು ನಿರ್ಧರಿಸಿದೆ. ( ಮುಂದಿನ ದಿನಗಳಲ್ಲಿ ಕ್ಷಮೆ ಕೇಳಿ, ವಿಷಾಧ ವ್ಯಕ್ತ ಪಡಿಸಿದರೂ ಆಶ್ಚರ್ಯವಿಲ್ಲ)
ಐವತ್ತು ವರ್ಷಗಳ ಕಾಲ ಯಾವ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ, ಧೈರ್ಯ ಮತ್ತು ಬದ್ಧತೆಯಿಂದ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದ ಪತ್ರಿಕೆಯೊಂದು ಇಂದು ಕಾರ್ಪೊರೇಟ್ ವಲಯದ ಬೃಹತ್ ಉದ್ಯಮದ ಒಡೆಯನ  ಮುಂದೆ ಮಂಡಿಯೂರಿ ಕೂರುವ ಸ್ಥಿತಿ ತಲುಪಿದೆ.  ಈ ದೇಶದಲ್ಲಿ ಅಧಿಕಾರ ಮತ್ತು ಹಣ ಈ ಎರಡು ಸಂಗತಿಗಳು ಸತ್ಯ ಮತ್ತು ನ್ಯಾಯವನ್ನು ಮಣಿಸುವ ಹಂತಕ್ಕೆ ಬೆಳೆದು ನಿಂತಿವೆ. ಮುಂಬೈ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನದಿಂದ ಅಲ್ಲಿನ ರಸ್ತೆಗಳಲ್ಲಿ ಗುಂಡಿ ಬಿದ್ದರುವುದನ್ನು ಖಂಡಿಸಿ, ಅಲ್ಲಿನ  ರೆಡ್ ಎಫ್ ಎಂ. ರೇಡಿಯೋ ಒಂದರ ಜಾಕಿ ಮಾಲ್ಸಿಕ ಮೆಂಡೊನ್ಸ ಎಂಬ ಯುವತಿ ಬರೆದು ಹಾಡಿದ ಹಾಡೊಂದು ಮುಂಬೈ ನಗರ ಪಾಲಿಕೆಯ ಆಡಳಿತವನ್ನು ಹಿಡಿದಿರುವ ಶಿವಸೇನೆಯನ್ನು ಕೆರಳಿಸಿದೆ. ರೇಡಿಯೋ ಛಾನಲ್ ಮೇಲೆ 500 ಕೋಟಿ ರೂಪಾಯಿ ಮಾನನಷ್ಟ ಮೊಕೊದ್ದಮೆ ಹೂಡಲು ನಿರ್ಧರಿಸಿದೆ. ಇದರಿಂದಾಗಿ ಆ ಯುವತಿ ಉದ್ಯೋಗ ಕಳೆದುಕೊಂಡರೆ, ಆಶ್ಚರ್ಯವೇನಿಲ್ಲ. ಇದರ  ಜೊತೆಗೆ ಮರಾಠಿ ಭಾಷೆಯ ಟಿ.ವಿ. 9- ಛಾನಲ್ ನಲ್ಲಿ ಪ್ರತಿದಿನ ರಾತ್ರಿ 9ರಿಂದ 10 ಗಂಟೆಯವರೆಗೆ ಚರ್ಚೆ ನಡೆಸಿಕೊಡುತ್ತಿದ್ದ ನಿಖಿಲ್ ವಾಗ್ಲೆ ಎಂಬುವವರ ಕಾರ್ಯಕ್ರಮಕ್ಕೆ ಇದೇ ಜುಲೈ20 ರಿಂದ ಕೊಕ್ ನೀಡಲಾಗಿದೆ. ಮಹಾರಾಷ್ಟ್ರದ ರೈತರ ಆತ್ಮಹತ್ಯೆ, ಅಲ್ಲಿನ ಬಿ.ಜೆ.ಪಿ. ಸರ್ಕಾರದ ವೈಫಲ್ಯ, ಪ್ರಧಾನಿ ನರೇಂದ್ರ ಮೋದಿಯವರ  ಆಡಳಿತ ವೈಖರಿಯನ್ನು ನಿರಂತರವಾಗಿ ಚರ್ಚೆಗೆ ಒಳಪಡಿಸಿದ್ದು ವಾಗ್ಲೆಯವರ ಕಾರ್ಯಕ್ರಮ ರದ್ದಾಗಲು ಕಾರಣವಾಯಿತು. ಛಾನಲ್ ಆಡಳಿತ ಮಂಡಳಿಯ ಮೇಲೆ ಯಾರು ಪ್ರಭಾವ ಬೀರಿದವರು? ಅದು ಪ್ರಭಾವವೆ? ಅಥವಾ ಬೆದರಿಕೆಯೆ? ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಹಣವಿರುವವರು ಮತ್ತು ಅಧಿಕಾರದ ತೋಳ್ಬಲ ಇರುವವರು ಅಧಿಕ ಮೊತ್ತದ ಮಾನನಷ್ಟ ಮೊಕೊದ್ದಮೆ ಹೂಡುವುದರ ಮುಖಾಂತರ  ಸತ್ಯ, ನ್ಯಾಯದ ಬಾಯಿ ಮುಚ್ಚಿಸುತ್ತಿರುವ ಪರಿ ಇದು.
ವಾಸ್ತವವಾಗಿ ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ಯವು ತನ್ನ ಅರ್ಥವನ್ನು ಕಳೆದುಕೊಂಡು ಎಷ್ಟೋ ವರ್ಷಗಳಾದವು. ಬೆರಳೆಣೆಕೆಯಷ್ಟು ಪತ್ರಿಕೆಗಳನ್ನು ಹೊರತು ಪಡಿಸಿದರೆ, ಈ ದೇಶದ ಬಹುತೇಕ ಪತ್ರಿಕೆಗಳು ಮತ್ತು ಮನರಂಜನಾ ಛಾನಲ್ ಗಳು ಹಾಗೂ ಸುದ್ಧಿ ಛಾನಲ್ ಗಳು ಕಾರ್ಪೊರೇಟ್ ಸಂಸ್ಥೆಗಳ  ಅಥವಾ ರಾಜಕಾರಣಿಗಳ ಹಿಡಿತದಲ್ಲಿವೆ. ಇವುಗಳಲ್ಲಿ ಪ್ರಕಟವಾಗುವ, ಪ್ರಸಾರವಾಗುವ ಸುದ್ದಿಗಳು ಮಾಲೀಕರ ಮೂಗಿನ ನೇರಕ್ಕೆ ತಕ್ಕುದಾಗಿ ಇರುತ್ತವೆ. ಛಾನಲ್ ಗಳಲ್ಲಿ ಬಡಬಡಿಸುವ ಪತ್ರಕರ್ತರು, ಮತ್ತು ಪತ್ರಿಕೆಯಲ್ಲಿ ವರದಿ ಬರೆಯುವವರು  ಕೇವಲ ಪಂಜರದ ಗಿಣಿಗಳು ಮಾತ್ರ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಎದೆಯಾಳದ ಮಾತುಗಳಾಗದೆ, ಕೇವಲ ತುಟಿಯಂಚಿನ ಮಾತುಗಳಂತೆ ಕೇಳಿಸುತ್ತದೆ.
ಈ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರ ನಿರ್ಬಂಧಿಸಲಾಗುತ್ತಲ್ಲ, ಪ್ರಸಾರ ಮಾಧ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲಾಗಿದೆ. ನೊಬಲ್ ಪ್ರಶಸ್ತಿ ವಿಜೇತ ಹಾಗೂ ಜಾಗತಿಕ ಮಟ್ಟದಲ್ಲಿ ತನ್ನ ಅಭಿವೃದ್ಧಿ ಅರ್ಥಶಾಸ್ತ್ರದ ಚಿಂತನೆಗಳ ಮೂಲಕ ಹೆಸರಾಗಿರುವ ಅಮಾರ್ತ್ಯ ಸೇನ್ ಅವರ ಕುರಿತಾದ “ ದ ಆರ್ಗ್ಯುಮೆಂಟೀಟಿವ್ ಇಂಡಿಯನ್” ಎಂಬ ಸಾಕ್ಷ್ಯ ಚಿತ್ರದಲ್ಲಿ ಅವರು ನೀಡಿರುವ ಸಂದರ್ಶನದಲ್ಲಿ  ಗೋವು, ಗುಜರಾತ್, ಹಿಂದೂ, ಇತ್ಯಾದಿ  ಶಬ್ದಗಳಿಗೆ ಕತ್ತರಿ ಪ್ರಯೋಗ ಇಲ್ಲವೆ , ಮಾತುಗಳ ಶಬ್ದವನ್ನು ಅಡಗಿಸಬೇಕೆಂದು ಭಾರತ ಸೆನ್ಸಾರ್ ಮಂಡಳಿಯು ನಿರ್ದೇಶಕ ಸುಮನ್ ಘೋಷ್ ರವರಿಗೆ ತಿಳಿಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅವರ ಆಡಳಿತದ ವೈಖರಿಯನ್ನು ನೇರವಾಗಿ ಖಂಡಿಸುತ್ತಾ ಬಂದಿದ್ದ ಅಮಾರ್ತ್ಯ ಸೇನರಿಗೆ ಇದೇ ಮೋದಿಯ ನೇತೃತ್ವದ ಸರ್ಕಾರ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ, ಅವರು ನಳಂದ ಅಂತರಾಷ್ಟ್ರೀಯ ವಿ.ವಿ.ಯ ಸಂದರ್ಶಕ ಪ್ರಾದ್ಯಾಪಕ ಹುದ್ದೆಯನ್ನು ತೊರೆಯುವಂತೆ ಮಾಡಿತು. ಇತ್ತೀಚೆಗಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಹುತೇಕ ಸಂಸ್ಥೆಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ನೃತ್ಯ ಮತ್ತು ಸಂಗೀತ ಅಕಾಡೆಮಿ,  ರಾಷ್ಟ್ರೀಯ ನಾಟಕ ಅಕಾಡೆಮಿ, ಪುಣೆ ಫಿಲಂ ಇನ್ಸ್ ಟ್ಯೂಟ್  ಹೀಗೆ ಹಲವು ಸಂಸ್ಥೆಗಳಲ್ಲಿ ಮೋದಿ ಭಜನಾ ಮಂಡಲಿಯ ಸದಸ್ಯರನ್ನು ತುಂಬುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.
ಉತ್ತರ ಪ್ರದೇಶದಲ್ಲಿ ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ಎಂಟನೂರಕ್ಕೂ ಹೆಚ್ಚು ಹತ್ಯೆಗಳಾಗಿವೆ. ಈ ಕುರಿತು ಮಾತನಾಡಲು ರಾಜ್ಯ ಸಭೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಗೆ ಅವಕಾಶವಿಲ್ಲ. ಆದರೆ, ಮಂಗಳೂರಿನ ಕೋಮು ಗಲಭೆ ಕುರಿತು ಹಿಂದು ಸಂಘಟನೆಯ ಯುವಕರು ಕೊಲೆಯಾಗುತ್ತಿದ್ದಾರೆ ಎಂಬ ತಪ್ಪು ಅಂಕಿ ಅಂಶಗಳನ್ನು ಇಟ್ಟುಕೊಂಡು ಕೂಗಾಡುವ ಕೂಗುಮಾರಿ ಸಂಸ್ಕೃತಿಯ  ಅವಿವೇಕಿಗಳಿಗೆ ಸಂಸತ್ತಿನ ಕೆಳಮನೆಯಲ್ಲಿ (ಪಾರ್ಲಿ ಮೆಂಟ್) ಅವಕಾಶ ಕಲ್ಪಿಸಲಾಗುತ್ತದೆ.  ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವ ಹಾಗೆ ನರೇಂದ್ರ ಮೋದಿಯವರು ಅಧಿಕಾರದಲ್ಲಿ ಮಾಡಿಕೊಂಡ ಎಡವಟ್ಟುಗಳಿಗೆ ಲೆಕ್ಕವಿಲ್ಲ. ಜನಾಧನ್ ಎಂಬ ಬ್ಯಾಂಕ್ ಗಳಲ್ಲಿ ಖಾತೆ ಆರಂಭಿಸಲು ಬಡವರಿಗೆ ನೀಡದ ಕರೆ, ಮಕಾಡೆ ಮಲಗಿದ ಸ್ವಚ್ಛ ಭಾರತ್, ನಮಾಮಿ ಗಂಗಾ ಯೋಜನೆ,  ಬಡಮಧ್ಯಮ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದ ನೊಟು ನಿಷೇಧ ಪ್ರಕರಣ, ಗೋಹತ್ಯೆ ನಿಷೇಧ ಪ್ರಕರಣ  ಒಂದೇ? ಎರಡೇ? ಸಾಲು ಸಾಲು ಬರೆಯ ಬಹುದು. ಇಂತಹ ಕಣ್ಣೆದುರುಗಿನ ಸುಡುವ ಕೆಂಡದಂತಹ ಸತ್ಯಗಳನ್ನು ಹೇಳುವುದು ಕೂಡ ಈಗ ಅಪರಾಧವಾಗಿದೆ. 
1975 ರ ಜುಲೈ ತಿಂಗಳಿನಲ್ಲಿ ಅಂದಿನ ಪ್ರಧಾನ ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದರು. ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.  ಇನ್ನುಮುಂದೆ ಯಾವುದೇ ಪತ್ರಿಕೆ ಅಥವಾ ಪತ್ರಕರ್ತ ರಾಜಕಾರಣಿಯನ್ನು ಮತ್ತು ಉದ್ಯಮಿಗಳನ್ನು ಎದುರು ಹಾಕಿಕೊಳ್ಳುವಂತಿಲ್ಲ. ಅವರು ಹಾಕುವ ಕೋಟಿಗಟ್ಟಲೆ ಮಾನನಷ್ಟ ಮೊಕೊದ್ದಮೆಗೆ ಹೆದರಿ ಬಾಯಿಮುಚ್ಚಿಕೊಂಡು ಕೂರಬೇಕು. ಇದು ಇಂದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ದಯನೀಯ ಸ್ಥಿತಿ.

( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)

ಶುಕ್ರವಾರ, ಜುಲೈ 14, 2017

ಆಫ್ರಿಕಾದಲ್ಲಿ ದೇಶಿ ಬಿತ್ತನೆ ಬೀಜ ಕ್ರಾಂತಿಗೆ ನಾಂದಿ ಹಾಡಿದ ಆಂಧ್ರ ರೈತರು


ಬಹುರಾಷ್ಟ್ರೀಯ ದೈತ್ಯ ಕಂಪನಿಯಾದ ಮಾನ್ಸಂಟೊ ಸಂಸ್ಥೆಯ ಕುಲಾಂತರಿ ತಳಿಗಳಿಗೆ ಜಾಗತಿಕ ಮಟ್ಟದಲ್ಲಿ ಹಂತ ಹಂತವಾಗಿ ವಿರೋಧ ವ್ಯಕ್ತವಾಗುತ್ತಿದೆ. ಪಶ್ಚಿಮ ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರವಾದ ಬರ್ಕಿನ ಪಾಸೊ ) (ಃuಡಿಞiಟಿಚಿ Pಚಿsoಎಂಬ ಪುಟ್ಟ ರಾಷ್ಟ್ರದಲ್ಲಿ ರೈತರು ಬಿ.ಟಿ. ಹತ್ತಿಗೆ ವಿದಾಯ ಹೇಳುತ್ತಿದ್ದಾರೆ. ನೆರೆಯ ರಾಷ್ಟ್ರವಾದ ಘಾನದಲ್ಲಿ ಕುಲಾಂತರಿ ತಳಿಗಳ ಹತ್ತಿ, ಟಮೋಟೊ, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಪ್ರಾಯೋಗಿಕ ಪರೀಕ್ಷೆಗಳಿಗೆ ನೀಡಲಾಗಿದ್ದ ಅನುಮತಿಯನ್ನು ಅಲ್ಲಿನ ಸರ್ಕಾರ ಹಿಂತೆಗೆದುಕೊಂಡಿದೆ.
ಬಡರಾಷ್ರಗಳು ಮತ್ತು ಅಭಿವೃದ್ಧಿ ಶೀಲ ರಾಷ್ರಗಳ ರೈತರ ಅನಕ್ಷರತೆ ಮತ್ತು ಅಜ್ಞಾನವನ್ನು ಬಂಡವಾಳ ಮಾಡಿಕೊಂಡಿರುವ ಹಾಗೂ ಆರ್ಥಿಕ ಸಾಮಾಥ್ರ್ಯದಲ್ಲಿ ಇಡೀ ರಾಷ್ರಗಳನ್ನು ಕೊಂಡುಕೊಳ್ಳುವಷ್ಟು ಸಂಪತ್ತನ್ನು ಶೇಖರಿಸಿರುವ ಮಾನ್ಸಂಟೊ, ಬೇಯರ್, ಡುಪಾಂಟ್ ಕಂಪನಿಗಳು, ಕುಲಾಂತರಿ ಬಿತ್ತನೆ ಬೀಜಗಳು, ಈ ಬೆಳೆಗಳಿಗೆ ಬೇಕಾದ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ದುಬಾರಿ ಔಷಧಗಳ ವ್ಯೂಹ ರಚಿಸಿಕೊಂಡು, ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ರಗಳ ಮುಗ್ಧ ರೈತರನ್ನು ತಾವು ಹೆಣೆದಿರುವ ಬಲೆಗೆ ಬೇಟೆಯ ಮಿಕಗಳಂತೆ ಕೆಡುವುತ್ತಿವೆ.
ಕಳೆದ ಒಂದೂವರೆ ದಶಕದಿಂದ ಭಾರತವು ಸೇರಿದಂತೆ ಹಲವು ರಾಷ್ರಗಳಲ್ಲಿ ವಿಶೇಷವಾಗಿ ಈಜಿಪ್ತ್, ಬಾಂಗ್ಲಾ, ಪಾಕಿಸ್ತಾನ, ಚೀನಾದ ಮುಂಗೋಲಿಯಾ ಪ್ರಾಂತ್ಯ ಈ ಪ್ರದೇಶಗಳ ರೈತರು ಬಿ.ಟಿ.ಹತ್ತಿಯನ್ನು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಭಾರತದಲ್ಲಿ ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರದ ತೆಲಂಗಾಣದ ಪ್ರಾಂತ್ಯಗಳಲ್ಲಿ ಹತ್ತಿ ಬೆಳೆ ಪ್ರಯೋಗದಲ್ಲಿ ರೈತರು ವಿಫಲರಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ಮೂರು ರಾಜ್ಯಗಳಲ್ಲಿ ಕಲೆದ ಒಂದೂವರೆ ದಶಕದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯು ಇಪ್ಪತ್ತು ನಾಲ್ಕು ಸಾವಿರವನ್ನು ದಾಟಿದೆ.
ಇಂತಹ ದಯನೀಯವಾದ ಸ್ಥಿತಿಯಲ್ಲಿ  ಭಾರತದ ಕೇಂದ್ರ ಸರ್ಕಾರಕ್ಕೆ ಇನ್ನೂ ಬುದ್ದಿ ಬಂದಂತೆ ಕಾಣುವುಲ್ಲ. ಇಲ್ಲಿಯವರೆಗೆ ಬಿ.ಟಿ.ಹತ್ತಿಂiÀi ಪ್ರಯೋಗವಾಯಿತು, ಬಿ.ಟಿ.ಬದನೆಯ ಪ್ರಯೋಗವಾಯಿತು. ಇದೀಗ ಬಿ.ಟಿ. ಸಾಸಿವೆಗೆ ಮಾನ್ಸಂಟೊ ಕಂಪನಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತದಲ್ಲಿ ಸಾಸಿವೆ ಎಣ್ಣೆಯ ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಜಗಜಾಂತರ ವೆತ್ಯಾಸವಿದೆ. ಗುಜರಾತ್, ರಾಜಸ್ತಾನ್ ಹೀಗೆ ಒಂದೆರೆಡು ರಾಜ್ಯಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಸಾಸಿವೆ ಎಣ್ಣೆಯ ಬಳಕೆ ತೀರಾ ಕಡಿಮೆಯಿದೆ. ಆದರೂ ಸಹ ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ರೂಪಾಯಿ ಹಣ ಬಹುರಾಷ್ಟ್ರೀಯ ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಹರಿದು ಬರುವುದರಿಂದ ಅಧಿಕಾರಕ್ಕೆ ಬರುವ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳೆಗೆ ಕೆಂಪುಗಂಬಳಿ ಹಾಸುವುದನ್ನು ಹವ್ಯಾಸವನ್ನಾಗಿಸಿಕೊಂಡಿವೆ.
ಆಫ್ರಿಕಾದ ಬರ್ಕಿನ ಪಾಸೊ ಎಂಬ ಪುಟ್ಟ ರಾಷ್ಟ್ರವು ಅಲ್ಲಿನ ರೈತರ ಭವಿಷ್ಯದ ಬಗ್ಗೆ ತೆಗೆದುಕೊಂಡಿರುವ ಕಾಳಜಿ ಹಾಗೂ ಬಿ.ಟಿ.ಹತ್ತಿಯನ್ನು ನಿಷೇಧಿಸುವ ಮುನ್ನ ಅಲ್ಲಿನ ಸರ್ಕಾರ ಮತ್ತು ವಿಜ್ಞಾನಿಗಳು, ಪ್ರಗತಿಪರ ರೈತರರು, ಸ್ವಯಂ ಸೇವಾ ಸಂಘಟನೆಗಳು ನಡೆಸಿದ ವಿಸ್ತøತ ಅಧ್ಯಯನವು ಭಾರತಕ್ಕೆ ಮಾದರಿಯಾಗಿದೆ. ಬರ್ಕಿನ ಪಾಸೊ ದೇಶದಲ್ಲಿ ಹತ್ತಿ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಆ ರಾಷ್ಟ್ರದ ಒಟ್ಟು ಜಿ.ಡಿ.ಪಿ. ಬೆಳವಣಿಗೆಯಲ್ಲಿ (ಒಟ್ಟು ಆಂತರೀಕ ಉತ್ಪಾದನೆ) ಶೇಕಡ 4% ರಷ್ಟು ಪಾಲನ್ನು ಹೊಂದಿತ್ತು. ಜೊತೆಗೆ ವಿದೇಶಗಳಿಗೆ ರಫ್ತಾಗುವ ಮುಕ್ಕಾಲು ಭಾಗದ ವಸ್ತುಗಳಲ್ಲಿ ಹತ್ತಿ ಮತ್ತು ಹತ್ತಿಯಿಂದ ತಯಾರಿಸಿದ ನೂಲು, ವಸ್ತ್ರ ಇವುಗಳ ಪಾಲಿತ್ತು. ಆದರೆ, 2003 ರಲ್ಲಿ ಅಲ್ಲಿನ ದೇಶಿ ಹತ್ತಿ ಬೆಳೆಗೆ ಪರ್ಯಾಯವಾಗಿ ರೈತರಿಗೆ ಅಮೇರಿಕಾ ಮೂಲದ ಮಾನ್ಸಂಟೊ ಕಂಪನಿಯು ಹೊಸದಾಗಿ ಪರಿಚಯಿಸಿದ “ ಮಾನ್ಸಂಟೊ ಬೋಲ್ ಗಾರ್ಡ್-2” ಎಂಬ ಬಿ.ಟಿ. ಹತ್ತಿ ಬೆಳೆಯು ಅಲ್ಲಿನ ರೈತರು ಮತ್ತು ದೇಶದ ಆರ್ಥಿಕ ಚಟುವಟಿಕೆಯನ್ನು ತಲೆಕೆಳಗು ಮಾಡಿತು. ಮಾನ್ಸಂಟೊ ಕಂಪನಿಯು ಸಹ ಬರ್ಕಿನ ಪಾಸೊ ರಾಷ್ಟ್ರದಲ್ಲಿ ಬಿ.ಟಿ.ಪಾಸೊ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರೈತರಿಗೆ ಹತ್ತಿ ಬೀಜವನ್ನು ವಿತರಣೆ ಮಾಡಿತ್ತು.
ಬಿ.ಟಿ. ಹತ್ತಿ ಬೆಳೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳದರೂ ಸಹ, ಬಿ.ಟಿ. ಪಾಸು ಹತ್ತಿಯಲ್ಲಿ ನೂಲಿನ ಎಳೆ ತಯಾರು ಮಾಡಲು ಇರಬೇಕಾದ ಮೂಲ ಕಾಣೆಯಾಗಿದ್ದವು. ಈ ಕುರಿತು ಡೆನ್ಮಾರ್ಕ್‍ನ ವಿಜ್ಞಾನಿಗಳು ಆಳವಾದ ಅಧ್ಯಯನ ನಡೆಸಿದ ನಂತರ ಬಿ.ಟಿ.ಹತ್ತಿ ಬೀಜವೆಂಬ ಕುಲಾಂತರಿ ತಳಿಯ ಬೀಜವನ್ನು ಸೃಷ್ಟಿಸುವಾಗ ಮಾನ್ಸಂಟೊ ಕಂಪನಿಯು ಮಾಡಿರುವ ಎಡವಟ್ಟುಗಳು ಬೆಳಕಿಗೆ ಬಂದವು.
ಬರ್ಕಿನ ಪಾಸೊ ರಾಷ್ಟ್ರಕ್ಕೆ ಮತ್ತು ಅಲ್ಲಿನ ಭೂಮಿ ಮತ್ತು ಹವಾಗುಣಕ್ಕೆ ತಕ್ಕಂತೆ ಬಿ.ಟಿ. ಹತ್ತಿ ಬೀಜ ತಯಾರಿಸಲು ಹೊರಟ ಕಂಪನಿಯು ಅಮೇರಿಕಾದ ತನ್ನ ಪ್ರಯೋಗಾಲಯದಲ್ಲಿದ್ದ ಜೀವಕೋಶ ಮತ್ತು ಬರ್ಕಿನ ಪಾಸೊ ರಾಷ್ಟ್ರದ ಭೂಮಿಯಿಂದ ತೆಗೆಯಲಾಗಿದ್ದ ಜೀವಕೋಶಗಳನ್ನು ಸಂಕರಗೊಳಿಸಿ ಬೀಜವನ್ನು ಸೃಷ್ಟಿ ಮಾಡಲಾಗಿತ್ತು. ಆದರೆ, ಈ ಬೀಜದಿಂದ ಉತ್ಪಾದನೆಯಾದ ಹತ್ತಿಯಲ್ಲಿ ನಾರಿನ ಅಂಶ ಕಾಣೆಯಾಗಿತ್ತು. ಏಕೆಂದರೆ, ಕುಲಾಂತರಿಯ ಪ್ರಯೋಗದಲ್ಲಿ  ಸ್ಥಳೀಯ ರಾಷ್ಟ್ರದ ಜೀವಕೋಶಗಳು ತಮ್ಮ ಸತ್ವವನ್ನು ಕಳೆದುಕೊಂಡು ನಿರ್ಜೀವವಾಗಿದ್ದವು. ಇಂತಹ ಅಧ್ಯಯನ ಮತ್ತು ಹತ್ತಿ ಬೆಳೆಯ ಇಳುವರಿಯ ಕುಸಿತಕ್ಕೆ ಕಾರಣವಾದ ಅಂಶಗಳನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಅಲ್ಲಿನ ವಿಜ್ಞಾನಿಗಳು ನಿರತರಾಗಿದ್ದಾಗ, ನಮ್ಮ ತೆಲಂಗಾಣ ರೈತರ ಅನುಭವ ಕುರಿತು ಹೈದರಾಬಾದಿನ ಡೆಕ್ಕನ್ ಡೆವಲಪ್‍ಮೆಂಟ್ ಸೊಸೈಟಿ ಎಂಬ ಸಂಸ್ಥೆಯು 2007 ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸಿದ “ ಎ ಡಿಸಸ್ಟೆರ್ ಇನ್ ಸರ್ಚ್ ಆಫ್ ಸಕ್ಸಸ್- ಬಿ.ಟಿ.ಕಾಟನ್- 3 ಇಯರ್ಸ್ ಪ್ರಾಡ್” (ಜಯ ಅರಸುವಲ್ಲಿ ಒದಗಿದ ಆಪತ್ತು- ಬಿ.ಟಿ.ಹತ್ತಿ: ಮೂರು ವರ್ಷಗಳ ವಂಚನೆ) ಎಂಬ ಸಾಕ್ಷ್ಯ ಚಿತ್ರ ಬರ್ಕಿನ ಪಾಸೊ ರಾಷ್ಟ್ರವಲ್ಲದೆ ಇಡೀ ಜಗತ್ತಿನ ಹಲವಾರು ರಾಷ್ರಗಳ ರೈತರ ಕಣ್ಣು ತೆರಸಿತು.
ಸುಮಾರು ಎರಡು ದಶಕದ ಹಿಂದೆ ನಮ್ಮ ಕನ್ನಡಿಗರಾದ ಹಾಗೂ ಪಿರಿಯಾಪಟ್ಟಣದ ಮೂಲದ ಪಿ.ವಿ.ಸತಿಶ್ ಎಂಬುವವರು ಹೈದರಾಬಾದ್, ಮೇಡಕ್, ಜಹಿರಾಬಾದ್, ಹೀಗೆ ಒಟ್ಟು ಐದಾರು ಜಿಲ್ಲೆಗಳಲ್ಲಿ ಸಣ್ಣ ಹಾಗೂ ಹಿಂದುಳಿದ ರೈತರ ಶ್ರೇಯೋಭಿವೃದ್ಧಿ ಮತ್ತು ಕಿರುಧಾನ್ಯ ಗಳ ಕೃಷಿಗೆ ಒತ್ತು ನೀಡಿ ಆರಂಭಿಸಿದ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ” ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕೇವಲ ರೈತರು ಮಾತ್ರವಲ್ಲದೆ, ದಲಿತ ಹಾಗೂ ಹಿಂದುಳಿದ ಮಹಿಳೆಯರ ಪಾಲಿಗೆ ಜೀವನಾಡಿಯಾಗಿದೆ. ಈ ಸಂಸ್ಥೆಯನ್ನು ಆರಂಭಿಸುವ ಮುನ್ನ ಸತೀಶ್ ರವರು ಸುಮಾರು ಇಪ್ಪತ್ತು ವರ್ಷಗಳ ಕಾಲ ದೂರದರ್ಶನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಸಾಕ್ಷ್ಯ ಚಿತ್ರಗಳ ಮೂಲಕ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ, ಪ್ರೇPಕÀ್ಷರಿಗೆ ಮುಟ್ಟಿಸುವಲ್ಲಿ  ನಿಪುಣರಾಗಿರುವ ಸತೀಶ್ ಇದೀಗ ತಮ್ಮ ಸಂಸ್ಥೆಯಲ್ಲಿ ನೂರಾರು ದಲಿತ ಮಹಿಳೆಯರನ್ನು ಕ್ಯಾಮರಾ ವುಮನ್‍ಗಳಾಗಿ, ಎಡಿಟರ್‍ಗಳಾಗಿ, ರೂಪಿಸಿದ್ದಾರೆ. ಈ ಚಿತ್ರದಲ್ಲಿ ಆದಿಲಾಬಾದ್, ನಲ್ಗೊಂಡ ಜಿಲ್ಲೆಗಳನ್ನು ಒಳಗೊಂಡಂತೆ ತೆಲಂಗಾಣ ಪ್ರಾಂತ್ಯದಲ್ಲಿ ಬಿ.ಟಿ. ಹತ್ತಿ ಬೆಳೆದು ಕೈ ಸುಟ್ಟುಕೊಂಡ ರೈತರ ಅನುಭವ, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವಾ ಪತ್ನಿಯರು ಮತ್ತು ಅನಾಥರಾದ ಅವರ ಮಕ್ಕಳ ನೋವಿನ ಕಥನವನ್ನು ದಾಖಲಿಸಲಾಗಿದೆ.
ಈ ಸಾಕ್ಷ್ಯ ಚಿತ್ರವನ್ನು ನೋಡಿದ ಅಲ್ಲಿನ ವಿಜ್ಞಾನಿಗಳು ನೇರವಾಗಿ ತೆಲಂಗಾಣಕ್ಕೆ ಬಂದು ಪಿ.ವಿ.ಸತೀಶ್ ನೆರವಿನಿಂದ ಕ್ಷೇತ್ರ ಕಾರ್ಯದ ಅಧ್ಯಯನ ಮಾಡಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಅನುಭವಕ್ಕೆ ನೇರ ಸಾಕ್ಷಿಯಾದರು. ಮಳೆಯಾಶ್ರಿತ ಭೂಮಿಯಲ್ಲಿ ಭೂಮಿಯಲ್ಲಿ ಮೊದಲು ಬೆಳೆಯುತ್ತಿದ್ದ ದೇಶಿ ಹತ್ತಿ ಬೀಜಕ್ಕೆ ಪರ್ಯಾಯವಾಗಿ ಮುನ್ನೂರು ಪಟ್ಟು ಅಧಿಕ ಬೆಲೆ ತೆತ್ತು ಖರಿದಿಸಿದ ಬಿ.ಟಿ.ಹತ್ತಿಯ ಬೀಜ ಹಾಗೂ ಕಂಪನಿಯ ನಿರ್ದೇಶನದಂತೆ ಸಿಂಪಡಿಸಿದ ದುಬಾರಿ ಬೆಲೆಯ ಕೀಟನಾಶಕ ಹೀಗೆ ಅಧಿಕಗೊಂಡ ಕೃಷಿ ಉತ್ಪಾದನೆಯ ವೆಚ್ಚ, ಇದರ ಬದಲಾಗಿ ಕೈ ಕೊಟ್ಟ ಬೆಳೆ, ಕ್ಷೀಣಿಸಿದ ಉತ್ಪಾದನೆಯ ಪರಿಣಾಮ ಸಾಲಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳು ಇವೆಲ್ಲಾ ಅಂಕಿ ಅಂಶಗಳನ್ನು ಕಲೆ ಹಾಕಿದ ವಿಜ್ಞಾನಿಗಳು, ಬಿ.ಟಿ. ಹತ್ತಿಯ ಉತ್ಪಾದನೆ ಅಥವಾ ಇಳುವರಿಯು ವರ್ಷ, ವರ್ಷಕ್ಕೆ ಹೇಗೆ ಕಡಿಮೆಯಾಗುತ್ತಾ ಹೋಗಿದೆ ಎಂಬ ಮಾಹಿತಿಯನ್ನು ಕಲೆ ಹಾಕಿದರು. ಮೊದಲ ವರ್ಷದಲ್ಲಿ ಹೆಕ್ಟೇರ್ ಒಂದಕ್ಕೆ ( ಎರಡೂವರೆ ಎಕರೆ ಭೂಮಿ) 3692 ಕೆ.ಜಿ. ಹತ್ತಿಯ ಇಳುವರಿಯು, ಮೂರನೇ ವರ್ಷಕ್ಕೆ 3114 ಕೆ.ಜಿ.ಹತ್ತಿಗೆ ಕುಸಿದಿತ್ತು. ಅಂದರೆ ವರ್ಷವೊಂದಕ್ಕೆ ಸರಾಸರಿ 300 ಕೆ.ಜಿ.ಯಷ್ಟು ಇಳುವರಿ ಕಡಿಮೆಯಾಗುತ್ತಾ ಬಂದಿತ್ತು. ಆದರೆ, ಉತ್ಪಾದನಾ ವೆಚ್ಚ ಮಾತ್ರ ಏರುತ್ತಾ ಹೋಗಿತ್ತು. ಎಲ್ಲಾ ವಿಧದಲ್ಲಿ ಬಿ.ಟಿ.ಹತ್ತಿ ಬೆಳೆಗಿಂತ ದೇಶಿ ಹತ್ತಿ ಬೆಳೆಯ ಕೃಷಿ ಉತ್ತಮವೆಂದು ಮನಗಂಡಿರುವ ಇಲ್ಲಿನ ರೈತರ ನಿರ್ಧಾರವು ಬರ್ಕಿನಾ ಪಾಸೊ ರಾಷ್ಟ್ರದ ವಿಜ್ಞಾನಿಗಳಿಗೆ ಮಾದರಿಯಾಗಿ ಗೋಚರಿಸಿತು.
ಬರ್ಕಿನ ಪೊಸೊ ರಾಷ್ಟ್ರದ ಒಂದು ಕೋಟಿ ಎಂಬತ್ತು ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಇವರು ಬಿ.ಟಿ.ಹತ್ತಿಯಿಂದ ಅನುಭವಿಸಿದ ನಷ್ಟವನ್ನು ಅಲ್ಲಿನ ಸರ್ಕಾರ ಯಾವುದೇ ಮುಲಾಜಿಲ್ಲದೆ ಮಾನ್ಸಂಟೊ ಕಂಪನಿಯಿಂದ ವಸೂಲಿ ಮಾಡಿ ಅದನ್ನು ಅಲ್ಲಿಂದ ಹೊರದಬ್ಬಿತು. ಮಾನ್ಸಂಟೊ ಕಂಪನಿಯು ಅಲ್ಲಿನ ಸರ್ಕಾರಕ್ಕೆ 76 ದಶಲಕ್ಷ ಡಾಲರ್ ಹಣವನ್ನು ದಂಡದ ರೂಪದಲ್ಲಿ ಪಾವತಿಸಿತು. ಆಫ್ರಿಕಾದ ಒಂದು ಪುಟ್ಟ ಗಣರಾಜ್ಯವೊಂದು ಅಮೇರಿಕಾದ ದೈತ್ಯ ಕಂಪನಿಯನ್ನು ಮಣಿಸಿ, ಅದರಿಂದ ನಷ್ಟ ಭರ್ತಿ ಮಾಡಿಕೊಳ್ಳುವುದಾದರೆ, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎನಿಸಿಕೊಳ್ಳುವ ಭಾರತಕ್ಕೆ ಏಕೆ ರೈತರಿಗಾದ ನಷ್ಟವನ್ನು ವಸೂಲಿ ಮಾಡಲು ಸಾಧ್ಯವಾಗಿಲ್ಲ?
ಈ ದೇಶದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಎಂಜಲು ಕಾಸಿಗೆ ಕಾರ್ಪೋರೇಟ್ ಸಂಸ್ಥೆಗಳ ಮುಂದೆ ಭಿಕ್ಷಾ ಪಾತ್ರೆ ಹಿಡಿದು ನಿಲ್ಲುವ ಪದ್ಧತಿ ರದ್ದಾಗುವವರೆಗೂ ಈ ದೇಶದ ರೈತರು ಮತ್ತು ಜನಸಾಮಾನ್ಯರಿಗೆ ಭದ್ರತೆ ಸಿಗುವುದಿಲ್ಲ. ಇದು ಸಾರ್ವಕಾಲಿಕ ಸತ್ಯವಾಗಿದ್ದರೂ ಯಾರೊಬ್ಬರೂ ಮಾತನಾಡಲು ಸಿದ್ಧರಿಲ್ಲ.
 ( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ “ ಅಂಕಣಕ್ಕೆ ಬರೆದ ಲೇಖನ)
( ಮಹಿತಿ ಸೌಜನ್ಯ- ಡೌನ್ ಟು ಅರ್ಥ್ ಇಂಗ್ಲೀಷ್ ಪಾಕ್ಷಿಕ. ಚಿತ್ರಗಳು – ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ, ಹೈದರಾಬಾದ್.)


ಶುಕ್ರವಾರ, ಜುಲೈ 7, 2017

ಬಡವರ ಹೊಟ್ಟೆಗೆ ಹೊಡೆಯುತ್ತಿರುವ ಬಂದ್ ಮತ್ತು ಹರತಾಳಗಳು



ಈ ದೇಶದಲ್ಲಿ ಏನೇ ಕೊರತೆ ಇದ್ದರೂ, ಚಳುವಳಿ ಮತ್ತು  ಬಂದ್ ಗಳಿಗೆ ಮಾತ್ರ ಕೊರತೆಯಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮ ಹೋರಾಟಗಳೂ ಬದಲಾಗಬೇಕು ಎಂಬ ಕನಿಷ್ಠ ವಿವೇಕವು ಯಾರಿಗೂ ಇಲ್ಲವಾದ ಕಾರಣ ದಿನ ನಿತ್ಯ ದುಡಿದು ತಿನ್ನುವ ಬಡವರ ಅನ್ನ ಕಸಿಯುವ ಇಂತಹ ಬಂದ್ ಗಳ  ಕುರಿತಂತೆ ಮರುಚಿಂತನೆ ಈಗ ಅಗತ್ಯವಿದೆ. ತಪ್ಪು ಮಾಡುವ ಸರ್ಕಾರಗಳು ಅಥವಾ ಜನವಿರೋಧಿ ಕಾನೂನು ಇತ್ಯಾದಿಗಳಿಗೆ ಪ್ರತಿಭಟನೆ ಸೂಚಿಸಲು ಇಲ್ಲವೆ ನಮ್ಮ ಬೇಡಿಕೆ ಪೂರೈಸಿಕೊಳ್ಳಲು ಪರ್ಯಾಯ ಮಾರ್ಗಗಳಿವೆ ಎಂಬ ಜ್ಞಾನವು ಇಂದು ಎಲ್ಲಾ ರಾಜಕೀಯ ಪಕ್ಷಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ದೂರವಾಗಿದೆ.
ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡುವುದು, ಸರ್ಕಾರಿ ಬಸ್ ಗಳಿಗೆ ಕಲ್ಲು ತೂರುವುದು, ಇಲ್ಲವೆ, ಬೆಂಕಿ ಹಚ್ಚಿ ಸುಡುವುದು, ರಸ್ತೆಯಲ್ಲಿ ಹಳೆಯ ಟೈರ್ ಗಳಿಗೆ ಬೆಂಕಿ ಹಚ್ಚಿ ವಿಕೃತ ಆನಂದ ಪಡುವುದು, ಇವುಗಳು ಇಂದಿನ ಬಂದ್ ಗಳ ಮಾಮೂಲಿ ಲಕ್ಷಣಗಳಾಗಿವೆ. ಇದರಿಂದ ಯಾರಿಗೆ ಉಪಯೋಗವಾಯಿತು? ಅಥವಾಯಾರಿಗೆ ನಷ್ಟವಾಯಿತು? ಈ ಕುರಿತು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ.
ಪಶ್ಚಿಮ ಬಂಗಾಳದ ಮುಕುಟ ಮಣಿಯಂತಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಚಹಾ ಬೆಳೆಯುತ್ತಿರುವ ಡಾರ್ಜಿಲಿಂಗ್ ಗಿರಿಧಾಮದಲ್ಲಿ ಕಳೆದ ಜೂನ್ ತಿಂಗಳಿನಿಂದ ಪೂರಾ ಎಲ್ಲಾ ಚಟುವಟಿಕೆಗಳು ಸ್ಥಬ್ದವಾಗಿವೆ. ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿದ್ದ ಜನಸಾಮಾನ್ಯರು ಹಾಗೂ ಇತ್ತೀಚೆಗೆ ತಾನೆ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಂಡಿದ್ದ ಚಹಾ ತೋಟಗಳಲ್ಲಿ ದುಡಿಯುದ್ದ ಲಕ್ಷಾಂತರ ಕಾರ್ಮಿಕರು ಕಳೆದ ಒಂದು ತಿಂಗಳಿಂದ ದುಡಿಯಲು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ.ಚಹಾ ಕಾರ್ಮಿಕರಲ್ಲಿ ಶೇಕಡ ಅರವತ್ತರಷ್ಟು ಮಹಿಳಾ ಕಾರ್ಮಿಕರಿದ್ದು ಈ ಕುಟುಂಬಗಳು ಉಪವಾಸದಲ್ಲಿ ನರಳುವಂತಾಗಿವೆ.
ಪಶ್ಚಿಮ ಬಂಗಾಳದ ಉತ್ತರದ ತುದಿಯಲ್ಲಿರುವ ಡಾರ್ಜಿಲಿಂಗ್ ಮತ್ತು ಕಾಲಿಪಾಂಗ್ ಗಿರಿ ಶ್ರೇಣಿಗಳಲ್ಲಿ 1816ರಿಂದ ನೇಪಾಳಿ ಭಾಷೆಯನ್ನು ಮಾತೃಭಾಷೆಯನ್ನಾಗಿ ಆಡುವ ಸುಮಾರು ಇಪ್ಪತ್ತು ಲಕ್ಷ ಜನರು ನೇಪಾಳ ಮೂಲದ ಗೂರ್ಖಾ ಜನಾಂಗದವರಾಗಿದ್ದಾರೆ. ಭಾರತದಲ್ಲಿ ಎರಡು ಕೋಟಿ ಜನರು ನೇಪಾಳಿ ಮೂಲದ ಜನರು ವಾಸಿಸುವ ಕಾರಣ, ಕೇಂದ್ರ ಸರ್ಕಾರ ನೇಪಾಳಿ ಭಾಷೆಯನ್ನು ಭಾರತದ ಅಧಿಕೃತ ಪ್ರಾದೇಶಿಕ ಭಾಷೆಗಳಲ್ಲಿ ಒಂದು ಎಂದು ಮಾನ್ಯತೆ ಮಾಡಿದೆ. ಹಾಗಾಗಿ ಇಲ್ಲಿನ ಜನತೆ ಆಡಳಿತಾತ್ಮಕವಾಗಿ ಪಶ್ಚಿಮ ಬಂಗಾಳಕ್ಕೆ ಸೇರಿದ್ದರೂ ಸಹ ಬಂಗಾಳಿ ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಯಾವುದೇ ಪ್ರೀತಿ ಅಥವಾ ಗೌರವ ಭಾವನೆ ಹೊಂದಿಲ್ಲ. 1987 ರಲ್ಲಿ ಪ್ರತೇಖ ಗೂರ್ಖಾ ಲ್ಯಾಂಡ್ ರಾಜ್ಯಕ್ಕಾಗಿ  ಎಂಬ ನಾಯಕ ನೇತೃ್ತ್ವದಲ್ಲಿ ಅಧಿಕೃತವಾಗಿ ಹೋರಾಟ ಆರಂಭವಾಗಿ ಆಗಾಗ್ಗೆ ಮೌನವಾಗಿದ್ದ ಅಗ್ನಿ ಪರ್ವತ ಸ್ಪೋಟಿಸುವಂತೆ ಭುಗಿಲೇಳುತ್ತಿದೆ.
ಈ ವರ್ಷದ ಶೈಕ್ಷಣಿಕ ಅವಧಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಪ್ರಾಥಮಿಕ ಶಿಕ್ಷಣದಲ್ಲಿ ಬಂಗಾಳಿ ಭಾಷೆಯನ್ನು ಕಡ್ಡಾಯ ಮಾಡಿರುವುದು ಸ್ಥಳಿಯರನ್ನು ಕೆರಳಿಸಿದೆ. ಮರೆತು ಹೋಗಿದ್ದ ಗೂರ್ಖಾ ಲ್ಯಾಂಡ್ ಬೇಡಿಕೆಯು ಮತ್ತೇ ಎದ್ದು ನಿಂತಿದೆ. ಇದರ ಜೊತೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷವು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಬೇಡಿಕೆಗೆ ತನ್ನ ಬೆಂಬಲವನ್ನು ಸೂಚಿಸಿತ್ತು. ಆದರೆ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಮೌನಕ್ಕೆ ಶರಣಾಗಿದೆ.
ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ  ಬಂಗಾಳಿ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ  ಕಡ್ಡಾಯ ಮಾಡಿರುವುದು ಗೂರ್ಖಾ ಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕೆ ಮತ್ತ ಬೇಡಿಕೆ ಆರಂಭವಾಗಿದೆ. 1980 ರ ದಶಕದಲ್ಲಿ ಸುಭಾಷ್ ಘೀಸಿಂಗ್ ಎಂಬಾತನ ನಾಯಕತ್ವದಲ್ಲಿ ಆರಂಭವಾದ ಈ ಹೋರಾಟದಲ್ಲಿ 1980 ರಲ್ಲಿ ನಡೆದ ಭೀಕರ ಹಿಂಸಾಚಾರದಲ್ಲಿ 1200 ಮಂದಿ ಅಸು ನೀಗಿದ್ದರು. ನಂತರ ಪಶ್ಚಿಮ ಬಂಗಾಳ ಸರ್ಕಾರವು “ ಗೂರ್ಖಾ ಲ್ಯಾಂಡ್ ಗಡಿಪ್ರದೇಶಗಳ ಅಭಿವೃದ್ಧಿಗಾಗಿ  ಪ್ರತ್ಯೇಕ ಪ್ರಾಧಿಕಾರವನ್ನು ರಚನೆ ಮಾಡಿತು.
2007 ರ ಭೀಮಲ್ ಗುರಂಗ್ ಎಂಬಾತನ ನೇತೃತ್ವದಲ್ಲಿ ಯಾವುದೇ ಕಂದಾಯ, ವಿದ್ಯುತ್ ಬಾಕಿ ಪಾವತಿಸದೆ ಹೋರಾಟ ಮುಂದುವರಿದ್ದು, ಇತ್ತೀಚೆಗೆ ಭುಗಿಲೆದ್ದಿದೆ. ಡಾರ್ಜಿಲಿಂಗ್ ಪ್ರಾಂತ್ಯದಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾದ ನೂರಾರು ಚಹಾ ತೋಟಗಳಿದ್ದು, ಅವುಗಳಲ್ಲಿ 87 ಚಹಾ ತೋಟಗಳು ಸರ್ಕಾರದ ಸ್ವಾಮ್ಯದಲ್ಲಿವೆ. ಚಹಾತೋಟದ ಕಾರ್ಮಿಕರಿಗೆ ವೇತನದ ಜೊತೆಗೆ ವಸತಿ ಮತ್ತು ವೈದ್ಯಕೀಯ ನೆರವನ್ನು ಕಡ್ಡಾಯ ಮಾಡಲಾಗಿದೆ. ಕಳೆದ ಒಂದು ದಶಕದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಹಾ ಬೆಲೆ ಕುಸಿದಿದ್ದ ಕಾರಣ ಏಳೆಂಟು ವರ್ಷದಿಂದ ಚಹಾ ತೋಟಗಳು ಪಾಳು ಬಿದ್ದಿದ್ದವು. ನೂರಾರು ಕಾರ್ಮಿಕರು ಹಸಿವಿನಿಂದ ಸತ್ತ ವರದಿಗಳು ದಿನ ನಿತ್ಯದ ಘಟನೆ ಎಂಬಂತೆ ಸುದ್ಧಿಯಾಗುತ್ತಿದ್ದವು.
ಕಳೆದ ವರ್ಷದಿಂದ ಚಹಾ ಉದ್ಯಮ ಚೇತರಿಸಿಕೊಂಡ ಕಾರಣ ಬಹುತೇಕ ಎಲ್ಲಾ ಚಹಾ ತೋಟಗಳಲ್ಲಿ ಕಾರ್ಮಿಕರಿಗೆ ದುಡಿಯಲು ಕೆಲಸ ಸಿಕ್ಕಂತಾಗಿ ನೆಮ್ಮದಿಯ ಉಸಿರು ಬಿಟ್ಟಿದ್ದರು. ಪ್ರತಿ ವರ್ಷ ಮೇ ತಿಂಗಳಿಂದ ಜೂನ್ ತಿಂಗಳ ಅಂತ್ಯದ ಅವಧಿಯಲ್ಲಿ ಚಹಾ ಗಿಡಗಳಲ್ಲಿ ಅರಳುವ ಎರಡು ಚಿಗುರು ಎಲೆಗಳು ಮತ್ತು ಗಿಡದ ತೊಟ್ಟು ಇವುಗಳನ್ನು ಕೀಳುವುದು ವಾಡಿಕೆ. ಏಕೆಂದರೆ, ಇವುಗಳಲ್ಲಿ ಸ್ವಾದಿಷ್ಟಕರವಾದ ಮತ್ತು ಸುವಾಸನೆಯ ಗುಣವಿದೆ. ಈ ಮೊದಲ ಫಸಲು ಸಾಮಾನ್ಯವಾಗಿ ಎಲ್ಲಾ ಚಹಾ ತೋಟಗಳಿಗೆ ಪ್ರಮುಖ ಾದಾಯದ ಮೂಲವಾಗಿದೆ. ಆದರೆ, ಈ ವರ್ಷ ಡಾರ್ಜಿಲಿಂಗ್ ನ ಮುಷ್ಕರದಿಂದಾಗಿ ಚಹಾ ಉದ್ಯಮ ಮತ್ತು ಪ್ರವಾಸೋದ್ಯಮ ಎರಡೂ ಕ್ಷೇತ್ರಗಳು ನೆಲ ಕಚ್ಚಿವೆ. ಕಾಲಿಪಾಂಗ್ ಮತ್ತು ಕುರೆಸಾಂಗ್ ಪ್ರಾತ್ಯದಲ್ಲಿ ಕಳೆದ ವರ್ಷದಿಂದ ಹೋಂ ಸ್ಟೇ ಪ್ರವಾಸೋದ್ಯಮ ತಲೆ ಎತ್ತುತ್ತಿತ್ತು. ಅದಕ್ಕೆ ಈ ವರ್ಷ ಬಲವಾದ ಪೆಟ್ಟು ಬಿದ್ದಿದೆ. ಭಾರತದ ಪ್ರವಾಸೋದ್ಯಮದಲ್ಲಿ ಐದನೆಯ ಸ್ಥಾನ ಪಡೆದಿದ್ದ ಪಶ್ಚಿಮ ಬಂಗಾಳ ಈ ವರ್ಷ ಎಂಟನೆಯ ಸ್ಥಾನಕ್ಕೆ ಕುಸಿದಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಮುಷ್ಕರ ಹಾಗೂ ಬಂದ್ ನಿಂದಾಗಿ ಡಾರ್ಜಿಲಿಂಗ್ ನ ಚಹಾ ಉದ್ಯಮಕ್ಕೆ ಒಟ್ಟು ನೂರಾ ಐವತ್ತು ಕೋಟಿ ರೂಪಾಯಿನಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಪಶ್ಚಿಮ ಬಂಗಾಳದ ಆಡಳಿತಾತ್ಮಕ ದೃಷ್ಟಿಯಿಂದ ಈ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದು ಒಳಿತು. ಸಧ್ಯದ ಭಾರತದಲ್ಲಿ ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳನ್ನೂ ಸಹ ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸಬೇಕಿದೆ. ರಾಜಕೀಯ ಪಕ್ಷಗಳ ಮತ ಬ್ಯಾಂಕ್ ರಾಜಕಾರಣದಿಂದ ಇಂತಹ ಸಮಸ್ಯೆಗಳು ಸದಾ ಜೀವಂತವಾಗಿವೆ. ಅಂತಿಮವಾಗಿ ಇವುಗಳಿಂದ ನರಳುವವರು ಪ್ರತಿ ದಿನ ದುಡಿದು ತಿನ್ನುವ ಕೂಲಿಕಾರ್ಮಿಕರು ಮತ್ತು ಬಡವರು ಮಾತ್ರ.