ಶುಕ್ರವಾರ, ಅಕ್ಟೋಬರ್ 6, 2017

ದಲಿತರಿಗೆ ಧೀಮಂತಿಕೆಯನ್ನು ತಂದುಕೊಟ್ಟ ಬಿ.ಬಸವಲಿಂಗಪ್ಪ

ಸ್ವಾತಂತ್ರ್ಯಾನಂತರದ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಬಿ.ಬಸವಲಿಂಗಪ್ಪನವರ ಹೆಸರು ಎದ್ದು ಕಾಣುವಂತಹದ್ದು. ದಲಿತರು ಮತ್ತು ತಳ ಸಮುದಾಯದ ಜನತೆ ಘನತೆಯಿಂದ ಮತ್ತು ಧೀಮಂತಿಕೆಯಿಂದ ಹೇಗೆ ತಲೆಯೆತ್ತಿ ಬಾಳಬೇಕೆಂದು ತಮ್ಮ ನಡೆ ಮತ್ತು ನುಡಿಗಳ ಮೂಲಕ ತೋರಿಸಿಕೊಟ್ಟ ಕೆಲವೇ ಕೆಲವು ದಲಿತ ನಾಯಕರಲ್ಲಿ ಬಸವಲಿಂಗಪ್ಪನವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.
ಇಂದಿನ ದಿನಗಳಲ್ಲಿ ಅಧಿಕಾರಕ್ಕಾಗಿ ಅಥವಾ ಇತರೆ ಸ್ಥಾನಮಾನಕ್ಕಾಗಿ ತಮ್ಮ ದಲಿತ ಅಸ್ಮಿತೆಯನ್ನು ಉಳ್ಳವರ ಪಾದದ ಬಳಿ ಇಟ್ಟು; ದಲಿತರ ಸ್ವಾಭಿಮಾನಕ್ಕೆ ಮತ್ತು  ಅಂಬೇಡ್ಕರ್ ಅವರ ಆಶಯಕ್ಕೆ ಮಸಿ ಬಳಿಯುತ್ತಿರುವ ದಲಿತ ಸಮುದಾಯದ ರಾಜಕೀಯ ನಾಯಕರು ಮತ್ತು ನಿವೃತ್ತ ಅಧಿಕಾರಿಗಳನ್ನು ನೋಡಿದಾಗ, ಇಂತಹ ಅಯೋಗ್ಯರಿಗಾಗಿ ಬಸವಲಿಂಗಪ್ಪನಂತಹವರು ತಮ್ಮ ಜೀವನ, ಸ್ವಾಭಿಮಾನವನ್ನು ಪಣಕ್ಕಿಟ್ಟು ಹೋರಾಡಬೇಕಾಯಿತೆ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಗುಣಗಳು, ಅರ್ಹತೆ ಮತ್ತು ಒಳನೋಟಗಳಿದ್ದ ಬಿ.ಬಸವಲಿಂಗಪ್ಪನವರು ಸ್ಥಾನದಿಂದ ವಂಚಿತರಾದದ್ದು ಇತಿಹಾಸದ ವ್ಯಂಗ್ಯಗಳಲ್ಲಿ ಒಂದು .ಬಸವಲಿಂಗಪ್ಪನವರ ಕುರಿತಂತೆ ನಾನು ಓದುತ್ತಿರುವಧೀಮಂತಎಂಬ ಕೃತಿ ಅವರ ಬಗೆಗಿನ ನನ್ನ ಗೌರವವನ್ನು ಇಮ್ಮುಡಿಗೊಳಿಸಿದೆ.
ಕಳೆದ ಪೆಬ್ರವರಿ ತಿಂಗಳಿನಲ್ಲಿ ಹಂಪಿಯ ಕನ್ನಡ ವಿ.ವಿ.ಯಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅಲ್ಲಿನ ಇತಿಹಾಸ ವಿಭಾಗದ ನನ್ನ ಮಿತ್ರರಾದ ಡಾ.ಚಿನ್ನಸ್ವಾಮಿ ಸೋಸಲೆಯವರು ಸಂಪಾದಿಸಿರುವ ರಾಯಲ್ ಆಕಾರದ 890 ಪ್ಮಟಗಳಿರುವ ಕೃತಿಯು ಬಸವಲಿಂಗಪ್ಪನ ಬದುಕು ಮತ್ತು ಸಾಧನೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈಗಾಗಲೇ ಮೈಸೂರು ಸಂಸ್ಥಾನದ ಇತಿಹಾಸ, ಅಲ್ಲಿನ ದಿವಾನರಾಗಿದ್ದ ಸರ್. ಮಿರ್ಜಾ ಇಸ್ಮಾಯಿಲ್ ಅವರ ಕುರಿತು ಅತ್ಯುತ್ತಮ ಕೃತಿಗಳನ್ನು ತಂದಿರುವ ಚಿನ್ನಸ್ವಾಮಿಯವರು ಬಹಳಷ್ಟು ಶ್ರಮವಹಿಸಿ ಬಸವಲಿಂಗಪ್ಪನವರ ಸಾಧನೆಗಳನ್ನು ಕಲೆ ಹಾಕಿ, ಇತಿಹಾಸದ ಗರ್ಭದಲ್ಲಿ ಅವರ ಹೆಸರು ಹೂತು ಹೋಗದ ಹಾಗೆ  ಚಿರಸ್ಥಾಯಿಗೊಳಿಸಿದ್ದಾರೆ. ಇದಕ್ಕಾಗಿ ನಾವು ಕನ್ನಡಿಗರು; ವಿಶೇಷವಾಗಿ ದಲಿತರು ಮತ್ತು ಇತರೆ ತಳ ಸಮುದಾಯದವರು ಚಿನ್ನಸ್ವಾಮಿಯವರಿಗೆ ಋಣಿಯಾಗಿರಬೇಕು.
ಬಹಳ ಅಚ್ಚರಿಯ ಸಂಗಂತಿಯೆಂದರೆ, ದಾವಣೆಗರೆ ಮತ್ತು ಹರಿಹರ ಎರಡು ನಗರದ ನೆಲ ಕನ್ನಡದ ಸಾಮಾಜಿಕ ಹೋರಾಟಕ್ಕೆ ಅತ್ಯಮೂಲ್ಯ ಜೀವಿಗಳನ್ನು ನೀಡಿದೆ. ಕನಾಟಕದಲ್ಲಿ ಗಾಂಧಿ ತತ್ವಗಳನ್ನು ಹರಡಲು ಪ್ರಮುಖ ಪಾತ್ರವಹಿಸಿದ ಹಾಗೂ ಕನಾಟಕದ ಗಾಂಧಿ ಎಂದು ಹೆಸರಾದ ಹರ್ಡೇಕರ್ ಮಂಜಪ್ಪನವರು ಸ್ವಾತಂತ್ರ್ಯ ಪುರ್ವದಲ್ಲಿ ಹರಿಹರದ ತುಂಗಾ ನದಿಯ ತೀರದಲ್ಲಿ ಗಾಂಧಿ ಆಶ್ರಮವನ್ನು ತೆರೆದವರು. ಬಿ.ಬಸವಲಿಂಗಪ್ಪನವರು ಇದೇ ಹರಿಹರದಲ್ಲಿ ಹುಟ್ಟಿ ಬೆಳೆದು ಪ್ರಸಿದ್ದರಾದರುಅವÀ ನಂತರ ದಲಿತರಿಗೆ ಸ್ವಾಭಿಮಾನದ ಪ್ರಜ್ಞೆಯ ಜೊತೆಗೆ ಸಂಘಟನೆಯ ಅರಿವು ಮೂಡಿಸಿ, ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿ, ಬಸವಲಿಂಗಪ್ಪ ಹೊತ್ತಿಸಿದ ಕ್ರಾಂತಿಯ ಕಿಡಿಯನ್ನು ಹೋರಾಟದ ಮತ್ತು ಬೆಳಕಿನ  ದೊಂದಿಯನ್ನಾಗಿ(ಪಂಜು) ಮಾಡಿಕೊಂಡು ಮುನ್ನಡೆಸಿದ ಪ್ರೊ. ಬಿ.ಕೃಷ್ಣಪ್ಪನವರು ಸಹ ಹರಿಹರದಲ್ಲಿ ಹುಟ್ಟಿ ಬೆಳೆದವರು. ಇನ್ನು, ಕರ್ನಾಟಕದ ಮ್ಯಾಂಚಸ್ಟರ್ ಎಂದು ಕಾಲದಲ್ಲಿ ಹತ್ತಿಯ ನೂಲು ಮತ್ತು ಬಟ್ಟೆಗಳ ಗಿರಣಿಗಳಿಗೆ ಪ್ರಸಿದ್ಧಿಯಾಗಿದ್ದ ದಾವಣಗೆರೆಯಲ್ಲಿ ಸಾವಿರಾರು ಗಿರಣಿ ಕಾರ್ಮಿಕರಿಗೆ ನಾಯಕನಾಗಿದ್ದು ಕಮ್ಯೂನಿಷ್ಟ್ ಚಳುವಳಿ ಮತ್ತು ಹೋರಾಟವನ್ನು ಕರ್ನಾಟಕದಲ್ಲಿ ಜೀವಂತವಾಗಿಟ್ಟವರಲ್ಲಿ ಪಂಪಾವತಿ ಕೂಡ ಬಹಳ ಮುಖ್ಯರಾಗಿದ್ದರು. ಅಲ್ಲಿನ ನೂರಾರು ಶ್ರೀಮಂತರು, ಅಡಿಕೆ ವರ್ತಕರು, ಜವಳಿಗಿರಣಿ ಮಾಲಿಕರು, ಲಿಂಗಾಯುತ ಮಠ ಮಾನ್ಯಗಳಿಗೆ ಸೆಡ್ಡು ಹೊಡೆದು ದಾವಣಗೆರೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಬಿ. ಬಸವಲಿಂಗಪ್ಪನವರದು ಬಾಲ್ಯದಿಂದಲೂ ಹೋರಾಟದ ಬದುಕು. ಅವರ ಕುಟುಂಬದ ಪೂರ್ವಿಕರು ಮೂಲತಃ ಬಿಜಾಪುರ ಜಿಲ್ಲೆಯ ಇಚಿಡಿ ತಾಲ್ಲೂಕಿನವರು. ಮೊದಲು ಬಳ್ಳಾರಿ ಜಿಲ್ಲೆಯ ಕೊಟ್ಟಿರಿಗೆ ಬಂದು ಆನಂತರ ಹರಿಹರಕ್ಕೆ ಸ್ಥಳಾಂತಗೊಂಡವರು. ಇವರ ತಂದೆ ಸ್ವತಃ ಬಟ್ಟೆಗಳನ್ನು ನೇಯ್ಗೆ ಮಾಡಿ ಊರೂರು ಸುತ್ತಿ ಮಾರಾಟ ಮಾಡುತ್ತಿದ್ದ ಕಾರಣ ಹರಿಹರ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜವಳಿ ಬಸಪ್ಪ ಎಂದು ಪ್ರಸಿದ್ಧಿಯಾಗಿದ್ದರು. ಇವರ ಸಹೋದರ ಹರಿಹರಪ್ಪ ( ಇವರು ಮಾಜಿ ಸಚಿವ ಕೆ.ಹೆಚ್.ರಂಗನಾಥ್ ಅವರ ತಂದೆ) ಇವರು ಸ್ವಾತಂತ್ರ್ಯ ಪೂರ್ವದಲ್ಲೇ ಅಂಬೇಡ್ಕರ್ ಚಿಂತನೆಗಳಿಗೆ ಮಾರುಹೋಗಿ, ದಲಿತರ ಕೈ ಕಾಲುಗಳಿಗೆ ತೊಡಿಸಿರುವ ಸಾಮಾಜಿಕ ಸಂಕೋಲೆಗಳನ್ನು ಕಳಚಿ ಹಾಕಲು ಶಿಕ್ಷಣವೊಂದೇ ಆಯುಧ ಎಂದು ಬಲವಾಗಿ ನಂಬಿದ್ದರು. ಇಂತಹ ಜ್ಞಾನವನ್ನು ತಮ್ಮ ಮಕ್ಕಳಿಗಲ್ಲದೆ, ತಮ್ಮ ಸಹೋದರರ ಮಕ್ಕಳಿಗೂ ಸಹ ಧಾರೆಯೆರದರು. ಇದರ ಫಲವಾಗಿ ದಲಿತ ಕುಟುಂಬದಲ್ಲಿ ಜವಳಿಬಸಪ್ಪ ಮತ್ತು ಸಿದ್ಧಲಿಂಗಮ್ಮ ದಂಪತಿಗಳಿಗೆ 1924 ರಲ್ಲಿ ಜನಿಸಿದ ಬಿ.ಬಸವಲಿಂಗಪ್ಪನವರು ಬಾಲ್ಯದಿಂದಲೂ ಒಳ್ಳೆಯ ಶಿಕ್ಷಣ ಪಡೆಯುವಂತಾಯಿತು. 1930 ರಿಂದ 1938 ರವರೆಗೆ ಹರಿಹರದಲ್ಲಿ ಎಂಟನೆಯ ತರಗತಿಯವರೆಗೆ ಓದಿದ ಅವರು ನಂತರ ತಮ್ಮ ದೊಡ್ಡಪ್ಪ ಹಾಗೂ ಚಿತ್ರದುರ್ಗದಲ್ಲಿ ಶಿರಸ್ತೆದಾರ್ ಆಗಿದ್ದ ಹರಿಹರಪ್ಪ ನವರ ಸಲಹೆ ಮೇರೆಗೆ ಬೆಂಗಳೂರಿಗೆ ಹೋಗಿ ಸ್ವಲ್ಪ ದಿನ ಅಕ್ಕನ ಮನೆಯಲ್ಲಿ ; ನಂತರ ಹಾಸ್ಟಲ್ ನಲ್ಲಿ ಇದ್ದುಕೊಂಡು ಹೈಸ್ಕೂಲ್ ಹಾಗೂ ಇಚಿಟರ್ ಮಿಡಿಯಟ್ ( ಒಂದು ವರ್ಷದ ಪಿ.ಯು.ಸಿ) ಮುಗಿಸಿದರು. ನಂತರ ಮೈಸೂರಿಗೆ ತೆರಳಿ 1945 ರಲ್ಲಿ ಬಿ.. ಪದವಿ ಪಡೆದರು. ಆನಂತರ ಬೆಳಗಾವಿ ನಗರಕ್ಕೆ ಹೋಗಿ ರಾಜಾ ಲಕ್ಷ್ಮಣರಾವ್ ಕಾನೂನು ವಿದ್ಯಾಲಯದಲ್ಲಿ 1948 ರಲ್ಲಿ ಕಾನೂನು ಪದವಿ ಪಡೆದರು. ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ ಇದೇ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಹಪಾಠಿಯಾಗಿದ್ದರು. ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಲ ದಿನ ಹರಿಹರದಲ್ಲಿದ್ದುಕೊಂಡು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಅವರು ಹಳ್ಳಿ ಹಳ್ಳಿಗೆ ತೆರಳಿ ದಲಿತರ ಕೇರಿಯಲ್ಲಿ ನಿಂತು ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರ ಮನವೊಲಿಸುತ್ತಿದ್ದರು.
ಬಯಸಿದ್ದರೆ, ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಇದ್ದರೂ ಸಹ, ಅದನ್ನು ನಿರಾಕರಿಸಿ, ಅಂಬೇಡ್ಕರ್ ಆಶಯದಂತೆ ಸಮಾಜ ಸೇವೆ ಮತ್ತು ದಲಿತರ ಉದ್ಧಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡ ಬಸವಲಿಂಗಪ್ಪನವರು ಬೆಂಗಳೂರಿಗೆ ತೆರಳಿ ನಿಟ್ಟೂರು ಶ್ರೀನಿವಾಸರಾವ್ ಬಳಿ ವಕೀಲಿ ವೃತ್ತಿಯನ್ನು ಆರಂಬಿಸಿದರು. 1949 ರಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿ ಪ್ರಥಮಬಾರಿಗೆ ಅಂದಿನ ಬೆಂಗಳೂರು ನಗರ ಸಭೆಗೆ ಸದಸ್ಯರಾಗಿ ಆಯ್ಕೆಯಾದರು. ನಂತರ 1952 ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರ ಹಳ್ಳಿ ಕ್ಷೇತ್ರದಿಂದ ಗೆದ್ದು  ವಿಧಾನ ಸಭೆಗೆ ಪ್ರವೇಶಿಸಿದರು. 1958 ಮೂರನೇ ವಿಧಾನ ಸಭಾ ಚುನಾವಣೆಗೆ ಮರು ಆಯ್ಕೆಯಾಗಿ ಬಿ.ಡಿ.ಜತ್ತಿ ಮಂತ್ರಿ ಮಂಡಲದಲ್ಲಿ ರಾಜ್ಯ ಗೃಹಸಚಿವರಾಗಿ ಕಾರ್ಯನಿರ್ವಹಿಸಿದರು. 1962 ಚುನಾವಣೆಯಲ್ಲಿ ಸೋಲು ಅನುಭವಿಸಿ, ಮತ್ತೇ ವಕೀಲ ವೃತ್ತಿಯನ್ನು ಮುಂದುವರಿಸಿದರು. 1969 ರಲ್ಲಿ ಕಾಂಗ್ರೇಸ್ ಪಕ್ಷ ಇಬ್ಭಾಗವಾದಾಗ ದೇವರಾಜು ಅರಸುರವೊಂದಿಗೆ ಗುರುತಿಸಿಕೊಂಡರು. 1972 ರಲ್ಲಿ ಅರಸು ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗ, ಮೂರನೆಯ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದ ಬಸವಲಿಂಗಪ್ಪನವರು ಪೌರಾಡಳಿತ ಸಚಿವರಾಗಿ ದಲಿತ ಮಲಹೊರುವ ಪದ್ಧತಿಯ ಮೇಲೆ ನಿಷೇಧ ಹೇರುವುದರ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದರು. ತಮ್ಮ ಪ್ರಖರ ವೈಚಾರಿಕತೆ, ಪಾರದರ್ಶಕ ನಡುವಳಿಕೆ ಹಾಗೂ ಬಿಚ್ಚು ನುಡಿಗಳಿಗೆ ಹೆಸರಾಗಿದ್ದ ಬಸವಲಿಂಗಪ್ಪನವರು 1973 ನವಂಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆದ ಸಮಾರಂಭಲ್ಲಿ ( ನನ್ನ ಪತ್ರಕರ್ತ ಮಿತ್ರರಾದ ಎನ್.ಎಸ್.ಶಂಕರ್ ಅವರ ಮಾವ ಸಂಜೀವಯ್ಯನವರು ಮಹಾರಾಜ ಕಾಲೇಜಿನ ಶತಮಾನೋತ್ವವ ಭವನದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಕುರಿತಾದ ಕಾರ್ಯಕ್ರಮ ಎಂದು ನೆನಪು) ಕನ್ನಡ ಸಾಹಿತ್ಯದಲ್ಲಿ ಸತ್ವ ಅಥವಾ ತಿರುಳಿಗಿಂತ ಹೆಚ್ಚಾಗಿ ಬೂಸಾ ಹೆಚ್ಚಿದೆ ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಒಳಗಾದರು. ಬಹುತೇಕ ಮಂದಿ ಸಾಹಿತಿಗಳು ಅವರ ವಿರುದ್ಧ ತಿರುಗಿ ಬಿದ್ದು ಬೂಸಾ ಚಳುವಳಿಯನ್ನು ಹುಟ್ಟು ಹಾಕಿದ ಪರಿಣಾಮವಾಗಿ ಡಿಸಂಬರ್  ತಿಂಗಳಿನಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಇಡೀ ಕನ್ನಡದ ಸಾಹಿತ್ಯ ಲೋಕ ಬಸವಲಿಂಗಪ್ಪನವರ ವಿರುದ್ಧ ತಿರುಗಿ ಬಿದ್ದಿದ್ದಾಗ ಕುವೆಂಪು ರವರುಬಸವಲಿಂಗಪ್ಪ ಆಡಿರುವ ಮಾತಿನಲ್ಲಿ ಸತ್ಯವಿದೆಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಚಳುವಳಿಯ ಕಾವನ್ನು ತಣ್ಣಗಾಗಿಸಿದರು.

ಅಧಿಕಾರ ಕಳೆದುಕೊಂಡಿದ್ದ ಬಸವಲಿಂಗಪ್ಪನವರಿಗೆ ಇಂದಿರಾಗಾಂಧಿಯವರು ರಾಷ್ಟೀಯ ಕಾಂಗ್ರೇಸ್ ಸಮಿತಿಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಠ ಜಾತಿ ವಿಭಾಗದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದರು.1978 ರಲ್ಲಿ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾದ ಅವರನ್ನು ಅರಸು ರವರು ಕಂದಾಯ ಸಚಿವರನ್ನಾಗಿ ಮಾಡಿದರು. ಅವಧಿಯಲ್ಲಿ ಅವರುಉಳುವವನೆ ಭೂಮಿಯ ಒಡೆಯಕಾನೂನನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು. 1983 ಚುನಾವಣೆಯಲ್ಲಿ ಅವರು ಚುನಾವಣೆಯಲ್ಲಿ ಸೋತರು. 85 ಚುನಾವಣೆಯಲ್ಲಿ ಅವರು ಗೆದ್ದರೂ ಸಹ ಕಾಂಗ್ರೇಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ರಾಮಕೃಷ್ಣ ಹೆಗ್ಡೆಯವರ ಸರ್ಕಾರದಲ್ಲಿ ಬಸವಲಿಂಗಪ್ಪನವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. 1989 ಚುನಾವಣೆಯಲ್ಲಿ ಮತ್ತೆ ಯಲಹಂಕ ಕ್ಷೇತದಿಂದ ಗೆದ್ದ ಅವರು, ವೀರೆಂದ್ರ ಪಾಟಿಲ್ ಸರ್ಕಾರದಲ್ಲಿ ಪಂಚಾಯತ್ ಮತ್ತು ಪಶು ಸಂಗೋಪನಾ ಸಚಿವರಾಗಿದ್ದರು. ಆದರೆ, ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನ ಬದಲಾಗಿ ವಿರೇಂದ್ರಪಾಟೀಲ್ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಬಂದಾಗ ಅವರು ಸಚಿವ ಸ್ಥಾನದಿಂದ ವಚಿಚಿತರಾದರು. ತನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಕಿರಿಯನಾದ ವ್ಯಕ್ತಿ ಮುಖ್ಯಮಂತ್ರಿಯಾದದ್ದು ಅವರಿಗೆ ಬೇಸರ ತರಿಸಿತು. ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡು, ತಮ್ಮ ಕೊನೆಯ ದಿನಗಳಲ್ಲಿ ಅವರು ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಮುಂದಿನ ಡಿಂಸಂಬರ್ ತಿಂಗಳಿಗೆ ಬಸವಲಿಂಗಪ್ಪ ನಿಧನರಾಗಿ 25 ವರ್ಷಗಳಾಗುತ್ತವೆ. (1992)ಆದರೆ, ಅವರು ದಲಿತರಲ್ಲಿ ಮೂಡಿಸಿದ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸ ಇಂದಿಗೂ ಸಹ ಅಚ್ಚಳಿಯದೆ ಉಳಿದಿವೆ.
( ಕರಾವಳಿ ಮುಂಜಾವು ಪತ್ರಿಕೆಯ "ಜಗದಗಲ" ಅಂಕಣ ಬರಹ)

ಶುಕ್ರವಾರ, ಸೆಪ್ಟೆಂಬರ್ 29, 2017

ನಮ್ಮೊಳಗಿನ ಗಾಂಧಿ ಮತ್ತು ಅವರೊಳಗಿನ ಮಹಾತ್ಮ


ಅಕ್ಟೋಬರ್ ಎರಡರ ಗಾಂಧಿ ಜಯಂತಿ ಬಂತೆಂದರೆ ಸಾಕು ಗಾಂಧಿ ನೆನಪಾಗಿ ನಮ್ಮ ಆತ್ಮಸಾಕ್ಷಿಯನ್ನು ಕಲಕುತ್ತಾರೆಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಮಾನದ ಜಗತ್ತಿನ ಮನುಕುಲವನ್ನು ಇನ್ನಿಲ್ಲದಂತೆ ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಿರುವ  ದಾರ್ಶನಿಕರಲ್ಲಿ ಮಹಾತ್ಮ ಗಾಂಧಿ ಕೂಡ  ಒಬ್ಬರು. ನನ್ನ ತಲೆಮಾರಿನ ಬಹುತೇಕ ಮಂದಿ ಪಿ.ಲಂಕೇಶ್ ರವರಿಗೆ ಋಣಿಯಾಗಿರಬೇಕು. ಏಕೆಂದರೆ, ಮೂರು ದಶಕಗಳ ಹಿಂದೆ ತಮ್ಮ ಪತ್ರಿಕೆಯಲ್ಲಿ ಮಹಾತ್ಮನ ಕುರಿತು ತಮ್ಮ ಟೀಕೆ ಟಿಪ್ಪಣಿಗಳಲ್ಲಿ ದಾಖಲಿಸುತ್ತಾ ಹೇಗೆ ಗಾಂಧಿ ಚಿಂತನೆಗಳನ್ನು  ಗ್ರಹಿಸಬೇಕೆಂದು ಕಲಿಸಿಕೊಟ್ಟರು. ಜೊತೆಗೆ ಬೆಂಗಳೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಬಿ.. ಶ್ರೀಧರ ಅವರ ಮೂಲಕ ಗಾಂಧಿ ಚಿಂತನೆಗಳ ಕುರಿತು ಸರಣಿ ಲೇಖನಗಳನ್ನು ಬರೆಸಿ ನಮ್ಮೆಲ್ಲರನ್ನು ಗಾಂಧೀಯ ಚಿಂತನೆಗೆ ಒಳಪಡಿಸಿದರು. “ಬಾಪು ಚಿಂತನೆಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಕೃತಿಯು ಇಂದಿಗೂ ಸಹ ಕನ್ನಡದಲ್ಲಿ ಗಾಂಧೀಜಿ ಕುರಿತಂತೆ ಬಂದಿರುವ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ಹಾಗಾಗಿ ವರ್ತಮಾನದ ಬಿಕ್ಕಟ್ಟಿನ ದಿನಗಳಲ್ಲಿ ಹೆಜ್ಜೆ ಹೆಜ್ಜೆಗೂ ಗಾಂಧೀಜಿ ಮತ್ತು ಅವರ ಚಿಂತನೆಗಳು ನಮಗೆ ಕಾಡತೊಡಗಿವೆ.
ದುರಾದೃಷ್ಟದ ಸಂಗತಿಯೆಂದರೆ, ದೇಶದಲ್ಲಿ ಗಾಂಧೀಜಿಯಷ್ಟು ಟೀಕೆಗೆ, ಅವಹೇಳನಕ್ಕೆ ಒಳಗಾದವರು ಮತ್ತೊಬ್ಬರಿಲ್ಲ. ಹಲವು ಮಂದಿಗೆ ಗಾಂಧೀಜಿಯವರನ್ನು ಟೀಕಿಸುವುದು ಒಂದು ವ್ಯಸನವಾಗಿದೆ. ಮಹಾತ್ಮನನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚುವುದರ ಬದಲಾಗಿ; ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿರುವವರು ತಮ್ಮೊಳಗಿನ ಖಾಲಿತನವನ್ನು ಅನಾವರಣಗೊಳಿಸುತ್ತಿದ್ದಾರೆ. ಅಂಬೇಡ್ಕರ್ವಾದಿಯಾಗಬೇಕೆಂದರೆ, ಗಾಂಧೀಜಿಯನ್ನು ವಿರೋಧಿಸಬೇಕೆಂಬ ಅಪಕ್ವ ಪರಿಕಲ್ಪನೆಯೊಂದು ಇಂದಿಗೂ ದೇಶದಲ್ಲಿ ಜಾರಿಯಲ್ಲಿದೆ. ಇದರ ಜೊತೆಗೆ ಗಾಂಧಿಯನ್ನು ಕೊಂದ ಪಾತಕಿ ನಾಥೂರಾಂ ಗೂಡ್ಸೆಯನ್ನು ಹುತಾತ್ಮನ ಪಟ್ಟಕ್ಕೇರಿಸಿ, ಅವನ ಹೆಸರಿನಲ್ಲಿ ದೇಗುಲ ನಿರ್ಮಾಣ ಮಾಡಲು ಹೊರಟ ಅವಿವೇಕಿಗಳ ಸಂಖ್ಯೆ ಕೂಡ ಅಪಾರವಾಗಿದೆ. ಇಂತಹ ನೋವಿನ ಸಂದರ್ಭದಲ್ಲಿಯೂ ಕೂಡ ಪಾಶ್ಚಿಮಾತ್ಯ ಜಗತ್ತು ಮಹಾತ್ಮನನ್ನು ಗ್ರಹಿಸಿದ ಪರಿ ಮತ್ತು ಅವರ ಚಿಂತನೆಗಳನ್ನು ವ್ಯಾಖ್ಯಾನಿಸುತ್ತಿರುವ ರೀತಿ ನಿಜಕ್ಕೂ ಬೆರಗು ಮೂಡಿಸುತ್ತಿದೆ.
ಆಸ್ಟ್ರೇಲಿಯಾದ ಸಮಾಜ ವಿಜ್ಞಾನಿ ಹಾಗೂ ಅಲ್ಲಿನ ಟ್ರೋಬ್ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ಥಾಮಸ್ ವೆಬರ್ ಎಂಬುವವರು ಕಳೆದ ನಲವತ್ತು ವರ್ಷಗಳಿಂದ ಗಾಂಧೀಜಿಯವರ ಬದುಕು, ಹೋರಾಟ ಮತ್ತು ಚಿಂತನೆಗಳಿಗೆ ತಮ್ಮ ಬದುಕನ್ನು ಮೀಸಲಾಗಿಟ್ಟು, ಈವರೆಗೆ ಎಂಟು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಉಪ್ಪಿನ ಸತ್ಯಾಗ್ರಹ ಕುರಿತಂತೆ ರಚಿಸಿರುವThe Shanthi sena; Phiosophy, History and Action; on Salt March  ” ಮತ್ತುGandhi As Discple and Mentorಹಾಗೂ  “ Gandhi  At  First Sight”  ಇವುಗಳು ಮಹತ್ವದ ಕೃತಿಗಳಾಗಿವೆ. ಇವುಗಳ ಜೊತೆಗೆ ಅಮೇರಿಕಾದ ಪತ್ರಕರ್ತ ಲೂಯಿ ಫಿಶರ್ ಬರೆದಮಹಾತ್ಮ ಗಾಂಧಿಯವರ ಆತ್ಮ ಕಥನ, ಹಾಗೂ ಇಂಗ್ಲೇಂಡ್ ಮೂಲದ ಕವಿ, ನಾಟಕಕಾರ ರೋನಾಲ್ಡ್ ಡಂಕನ್ ಸಂಗ್ರಹಿಸಿದಸೆಲೆಕ್ಟಡ್ ರೈಟಿಂಗ್ಸ್ ಆಫ್ ಮಹಾತ್ಮಎಂಬ ಎರಡು ಕೃತಿಗಳು ಮಹಾತ್ಮನ ಬದ್ಧತೆ, ಪ್ರಾಮಾಣಿಕತೆ, ಸಂತನಂತಹ ವ್ಯಕ್ತಿತ್ವ ಹಾಗೂ ಅವರ ಚಿಂತನೆಗಳನ್ನು ಇವೊತ್ತಿಗೂ ಜಗತ್ತಿಗೆ ಹರಡುತ್ತಿವೆ. ಇನ್ನು, ಇಂಗ್ಲೆಂಡಿನ ಸಿನಿಮಾ ನಿರ್ದೇಶಕ ರಿಚರ್ಡ್ ಅಟನ್ ಬರೊ ಇವರು ಸತತ ಹದಿನೇಳು ವರ್ಷಗಳ ಕಾಲ ಧ್ಯಾನಿಸಿ, ಲೂಯಿ ಫಿಶರ್ ಬರೆದ ಆತ್ಮ ಕಥೆಯನ್ನಾಧರಿಸಿದಗಾಂಧಿಎಂಬ ಸಿನಿಮಾ ಇಂದಿಗೂ ಸಹ ಸಿನಿಮಾ ಜಗತ್ತಿನ ಅತ್ಯುತ್ತಮ ದೃಶ್ಯ ಕಾವ್ಯವಾಗಿದೆ.
ಲೋಕ ಕಂಡ ಅಪರೂಪದ, ಪಾರದರ್ಶಕ ವ್ಯಕ್ತಿತ್ವದ ಮಹಾತ್ಮನನ್ನು  ಪಾಶ್ಚಿಮಾತ್ಯ ಜಗತ್ತು ಅರ್ಥಪೂರ್ಣವಾಗಿ ವ್ಯಾಖ್ಯಾನಿಸುತ್ತಾ ಜಗತ್ತಿಗೆ ಪರಿಚಯಿಸುತ್ತಿರುವಾಗ, ನಾವಿನ್ನೂ ಗಾಂಧಿ ವ್ಯಕ್ತಿತ್ವ ಕುರಿತು ಕೂದಲು ಸೀಳುವ ಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ಜಾಗತಿಕ ಮಟ್ಟದ ವಿದ್ವಾಂಸರು, ಚಿಂತಕರಿರಲಿ, ಭಾರತದ ಕೊನೆಯ ಗೌರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಆಪ್ತ ಸಹಾಯಕ ಹಾಗೂ ಅಡುಗೆ ಭಟ್ಟ ಸ್ಮಿತ್ ಚಾಲ್ರ್ಸ್ ಬರೆದಿರುವಫಿಪ್ಟಿ ಇಯರ್ಸ್ ವಿತ್ ಮೌಂಟ್ಬ್ಯಾಟನ್; ಯೂನಿಕ್ ಮೆಮೋರಿಸ್ಎಂಬ ಕೃತಿಯಲ್ಲಿ ಗಾಂಧೀಜಿ ಕುರಿತಂತೆ ಬರೆದಿರುವ ಒಂದು ಘಟನೆ ನಮ್ಮೆಲ್ಲರ ಕಣ್ಣು ತೆರೆಸುವಂತಿದೆ.
ಸ್ಮಿತ್ ಚಾಲ್ರ್ಸ್ ತನ್ನ ಕೃತಿಯಲ್ಲಿ ದಾಖಲಿಸಿರುವ ಮಾತುಗಳಿವು. “ ನಮ್ಮ ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್ ಅವರಿಂದತುಂಡು ಉಡುಗೆಯ ಫಕೀರಎಂದು ಬಣ್ಣಿಸಲ್ಪಟ್ಟ ಭಾರತದ ನಾಯಕ ಮಹಾತ್ಮ ಗಾಂಧೀಯವರು ದೆಹಲಿಯಲ್ಲಿದ್ದ ನಮ್ಮ ಗೌರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ದಿನ ಬೆಳಿಗ್ಗೆಯಿಂದಲೇ ಗೌರ್ನರ್ ನಿವಾಸದಲ್ಲಿ ಸಡಗರದ ವಾತಾವರಣ ಸೃಷ್ಟಿಯಾಯಿತು. ನಿವಾಸದಲ್ಲಿದ್ದ ಭಾರತೀಯ ಸೇವಕರಿಗೆ ಎಚ್ಚರಿಸಿ, ಮಹಾತ್ಮನನ್ನು ಹೇಗೆ ಸ್ವಾಗತಿಸಬೇಕು ಮತ್ತು ಹೇಗೆ ಸತ್ಕರಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದೆ. ಮಹಾತ್ಮನಿಗಾಗಿ ವಿಶೇಷವಾದ ಕೇಕ್ ಹಾಗೂ ಸ್ಯಾಂಡ್ ವಿಚ್ ಗಳನ್ನು ಹಾಗೂ ಅತ್ಯತ್ತಮ ರುಚಿಯುಳ್ಳ ಚಹಾ ಇವೆಲ್ಲವನ್ನೂ ನಾನೇ ಖುದ್ದು ನಿಂತು ತಯಾರಿಸಿದೆ. ಮೌಂಟ್ ಬ್ಯಾಟನ್ ದಂಪತಿಗಳು ಮತ್ತು ಮಹಾತ್ಮ ಗಾಂಧೀಜಿಯವರ ಭೇಟಿಗಾಗಿ ನಿವಾಸದ ಮುಂದಿನ ಹುಲ್ಲುಗಾವಲಿನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಆಗಮಿಸಿದ ಗಾಂಧೀಜಿಯವರು ಸುಮಾರು ಎರಡು ತಾಸುಗಳು ವಿವಿಧ ವಿಷಯಗಳ ಕುರಿತು ಮಾತನಾಡಿದರು. ನಂತರ ಅವರಿಗೆ ಕೇಕ್, ಸ್ಯಾಂಡ್ ವಿಚ್ ಹಾಗೂ ಚಹಾ ನೀಡಲಾಯಿತು. ಆದರೆ, ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ ಅವರು, ತಮ್ಮೊಡನೆ ತಂದಿದ್ದ ಮೇಕೆ ಹಾಲಿನ ಮೊಸರನ್ನು ಸೇವಿಸಿದರು. ಜೊತೆಗೆ ಮೊಸರಿನ ರುಚಿ ನೋಡುವಂತೆ ಮೌಂಟ್ ಬ್ಯಾಟನ್ ಅವರಿಗೂ ನೀಡಿದರು. ಗೌರ್ನರ್ ಜನರಲ್ರವರು  ಗಾಂಧೀಜಿ ನೀಡಿದ ಮೊಸರು ಸೇವಿಸಿದಾಗ ನಮಗೆಲ್ಲಾ ಆಶ್ಚರ್ಯವಾಯಿತು. ಏಕೆಂದರೆ, ತಮ್ಮ ಅಧಿಕೃತ ನಿವಾಸದಲ್ಲಿ ತಯಾರಿಸಿದ ಆಹಾರವನ್ನು ಹೊರತು ಪಡಿಸಿ, ಅವರು ನೇರವಾಗಿ ಆಹಾರ ಸ್ವೀಕರಿಸುವಂತಿರಲಿಲ್ಲ. ಅದನ್ನು ಪರೀಕ್ಷಗೆ ಒಳಪಡಿಸುವ ನಿಯಮ ಜಾರಿಯಲ್ಲಿತ್ತು.
ಗಾಂಧೀಜಿಯವರನ್ನು ಬೀಳ್ಕೊಟ್ಟ ನಂತರ  ನಿವಾಸದ ಕೊಠಡಿಗೆ ಸಾಹೇಬರು, ನಮ್ಮೆಲ್ಲರ ಆಶ್ಚರ್ಯವನ್ನು ತಣಿಸುವಂತೆ ನನ್ನನ್ನು ಉದ್ದೇಶಿಸಿ, “ ಚಾಲ್ರ್ಸ್; ನಿನಗೆ ಆಶ್ಚರ್ಯವಾಗಿರಬೇಕು, ಮನುಷ್ಯ ನನ್ನ ಜೀವನದಲ್ಲಿ ನಾನು ನೋಡಿದ ಮತ್ತು ಭೇಟಿ ಮಾಡಿದ ವ್ಯಕ್ತಿಗಳಲ್ಲಿ ಅತ್ಯಂತ ವಿಶೇಷವಾದ ಗುಣ ಹಾಗೂ  ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದಾರೆ. ಜಗತ್ತಿನಲ್ಲಿ ಮಹಾತ್ಮನೊಂದಿಗೆ ಇನ್ನೊಬ್ಬ ವ್ಯಕ್ತಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲಎಂದು ನುಡಿದರು. ಒಬ್ಬ ಬ್ರಿಟೀಷ್ ಸೇವಕ ದಾಖಲಿಸಿರುವ ಘಟನೆಯು ಗಾಂಧೀಜಿಯವರ ಮಾನವೀಯ ಮುಖಗಳ ವಿವಿಧ ನೆಲೆಗಳನ್ನು ನಮ್ಮೆದುರು ಅನಾವರಣಗೊಳಿಸುತ್ತದೆಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಹೋರಾಡುತ್ತಲೇ, ಬ್ರಿಟೀಷ್  ಸರ್ಕಾರದ ಪೋಲಿಸ್ ಅಧಿಕಾರಿಗಳು, ನ್ಯಾಯಾಧೀಶರು, ಗೌರ್ನರ್ ಜನರಲ್ ಗಳು ಇಂತಹವರಿಂದ ತಮ್ಮ ನೈತಿಕತೆ ಮತ್ತು ಪಾರದರ್ಶಕ ಗುಣಗಳಿಂದ ಗೌರವಕ್ಕೆ ಅರ್ಹರಾದ ಮಹಾತ್ಮ ಗಾಂಧೀಜಿ ಎಂದಿಗೂ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ವೈರತ್ವಕ್ಕೆ ಮಾರ್ಪಡಿಸಿದವರಲ್ಲ. ಮಹಾತ್ಮನನ್ನು ಇದಕ್ಕಿಂತ ಭಿನ್ನವಾಗಿ ಹೇಗೆ ಅರ್ಥೈಸಲು ಸಾಧ್ಯ? ಕೇವಲ ಐದು ದಿನಗಳ ಕಾಲ ಸೇವಾಶ್ರಮದಲ್ಲಿ ಕಾಲ ಕಳೆದ ಪತ್ರಕರ್ತ ಲೂಯಿ ಫಿಶರ್, ಅಲ್ಲಿನ ಸಹ ಪಂಕ್ತಿ ಭೋಜನ ಮತ್ತು ಭೋಜನಕ್ಕೆ ಮುನ್ನ ನಡೆಸುವ ಪ್ರಾರ್ಥನೆಯನ್ನು ಗಮನಿಸಿ “ ಅನ್ನಕ್ಕೆ ಆಧ್ಯಾತ್ಮವನ್ನು ಬೆಸೆದು ಹಸಿವಿನ ಅರ್ಥವನ್ನು ಜಗತ್ತಿಗೆ ಬೋಧಿಸಿದ ಮಹಾನುಭಾವ” ಎಂದು ಬಣ್ಣಿಸಿದ್ದನು. ಇಂತಹ ಒಳನೋಟಗಳು ನಮಗೇಕೆ ಸಾಧ್ಯವಾಗಿಲ್ಲ? ಒಮ್ಮೆ ನಮ್ಮ ನಮ್ಮ ಅಂತರಂಗವನ್ನು ನಾವು ಪ್ರಶ್ನಿಸಿಕೊಳ್ಳಬೇಕು.
ಬ್ರಿಟನ್ ಮೂಲದ ಕವಿ ಮತ್ತು ನಾಟಕಕಾರ ರೋನಾಲ್ಡ್ ಡಂಕನ್ ರವರು ತಾವು ಸಂಪಾದಿಸಿರುವಸೆಲೆಕ್ಟಡ್ ವಕ್ರ್ಸ್ ಆಫ್ ಮಹಾತ್ಮಕೃತಿಗೆ ಬರೆದಿರುವ ಪ್ರಸ್ತಾವನೆಯ ಲೇಖನ ಗಾಂಧೀಜಿ ಕುರಿತಂತೆ ಬರೆದಿರುವ ಶ್ರೇಷ್ಠ ವ್ಯಕ್ತಿ ಚಿತ್ರಣಗಳಲ್ಲಿ ಒಂದಾಗಿದೆ. ಗಾಂಧೀಜಿಯವರ ಬಗ್ಗೆ ಕುತೂಹಲ ಗೊಂಡ ರೋನಾಲ್ಡ್ ಡಂಕನ್  ಅವರಿಗೊಂದು ಪತ್ರ ಬರೆದಾಗ, ಗಾಂಧೀಜಿ ಯವರು ಅವರಿಗೆ ಪ್ರತ್ಯುತ್ತರ ಬರೆದು ಭಾರತಕ್ಕೆ ಆಹ್ವಾನಿಸುತ್ತಾರೆ. ಅದರಂತೆ 1936 ರಲ್ಲಿ ಸೇವಾಗ್ರಾಮಕ್ಕೆ ಆಗಮಿಸಿದ ಅವರು, ಗಾಂಧೀಜಿಯವರ ಜೊತೆ ಒಂದು ವಾರ ಕಳೆದ ಅನುಭವ ಹಾಗೂ ನಡೆಸಿದ ಸಂವಾದವನ್ನು ಮನ ಮುಟ್ಟುವಂತೆ ವಿವರಿಸಿದ್ದಾರೆ. “ಒಂದು ದಿನ ಸಂಜೆ ನಾನು ಮತ್ತು ಮಹಾತ್ಮ ಇಬ್ಬರೂ ವಾಕಿಂಗ್ ಮಾಡುತ್ತಾ ಸೇವಾಗ್ರಾಮದಿಂದ ಮತ್ತೊಂದು ಗ್ರಾಮದತ್ತ ತೆರಳಿದ್ದೆವು. ಅದೇ ಸಮಯಕ್ಕೆ ಮೂರ್ನಾಲ್ಕು ಮಂದಿ ರಸ್ತೆ ಬದಿಯಲ್ಲಿ ಕುಳಿತು ಮಲ ವಿಸರ್ಜನೆ ಕ್ರಿಯೆಯಲ್ಲಿ ತೊಡಗಿದ್ದರು. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಹೋರಾಟದ ಜೊತೆಗೆ; ಅಲ್ಲಿನ ಬಡತನ, ಅನಕ್ಷರತೆ, ಮೌಡ್ಯ, ಆರೋಗ್ಯ, ಶುಚಿತ್ವ ಇವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸವಾಲುಗಳನ್ನು ನನಗೆ ವಿವರಿಸುತ್ತಿದ್ದರುನಾನು ಮಲವಿಸರ್ಜನೆ ಮಾಡುತ್ತಿದ್ದ ಜನರನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ನಂತರ ಮಹಾತ್ಮರು ಅದನ್ನು ನೋಡಿ ಮೌನದಿಂದ ತಲೆ ತಗ್ಗಿಸಿದರುವ್ಯಕ್ತಿಗಳು ಅಲ್ಲಿಂದ  ಎದ್ದು ಹೋದ ನಂತರ, ರಸ್ತೆಯಲ್ಲಿದ್ದ ಮಣ್ಣನ್ನು ತಮ್ಮ ಬೊಗಸೆಯಲ್ಲಿ ತೆಗೆದುಕೊಂಡು ಹೋಗಿ ಮಲವನ್ನು ಮುಚ್ಚಿದರು. ಕ್ಷಣದಲ್ಲಿ ನನಗೆ ಮಹಾತ್ಮನ ನಡೆಯಲ್ಲಾಗಲಿ, ನುಡಿಯಲ್ಲಾಗಲಿ ಒಂದಿನಿತು ವೆತ್ಯಾಸವಿಲ್ಲ ಎನಿಸಿತು.
ನನಗೆ ಸಿಗರೇಟ್ ಸೇದುವ ಚಟವಿತ್ತು. ಸೇವಾಗ್ರಾಮದ ಪಕ್ಕದಲ್ಲಿದ್ದ ಕಬ್ಬಿನ ಗದ್ದೆಗಳಿಗೆ ಹೋಗಿ ಮರೆಯಲ್ಲಿ ಕುಳಿತು ಸೇವನೆ ಮಾಡಿ ಬರುತ್ತಿದ್ದೆ. ನನ್ನ ವ್ಯಸನ ಅವರಿಗೆ ತಿಳಿದ ನಂತರ ಕಿರಿಯನಾದ ನನ್ನ ಹೆಗಲ ಮೇಲೆ ಗೆಳೆಯನಂತೆ ಕೈ ಹಾಕಿ ಸಿಗರೇಟ್ ತ್ಯೆಜಿಸುವಂತೆ ಸಲಹೆ ನೀಡಿದರು. ಸೇದಬೇಕು ಎನಿಸಿದಾಗ ಬಾಯಿಗೆ ಕಲ್ಲು ಸಕ್ಕರೆ ತುಂಡನ್ನು ಹಾಕಿಕೊಂಡು ಚಪ್ಪರಿಸಿದರೆ, ಸಿಗರೇಟ್ ಸೇದಲು ಮನಸ್ಸಾಗುವುದಿಲ್ಲ ಎಂಬ ನೀಡಿದರು. ನನ್ನ ಒಂದು ವಾರದ ಭಾರತದ ಪ್ರವಾಸ ಮುಗಿಸಿ, ಸೇವಾ ಗ್ರಾಮದಿಂದ ಬಾಂಬೆ ನಗರಕ್ಕೆ ತೆರಳಿ; ಅಲ್ಲಿಂದ ಹಡಗಿನಲ್ಲಿ ಲಂಡನ್ ನಗರಕ್ಕೆ ಪ್ರಯಾಣಿಸಲು ಹಡಗು ಕಟ್ಟೆಯಲ್ಲಿ ನಿಂತಿದ್ದಾಗ, ಕಾಂಗ್ರೇಸ್ ಕಾರ್ಯಕರ್ತನೊಬ್ಬ ನನ್ನನ್ನು ಹುಡುಕಿಕೊಂಡು ಬಂದು ನನ್ನ ಕೈಗೆ ಪೊಟ್ಟಣವನ್ನು ನೀಡಿದನು. ಅದನ್ನು ತೆರೆದು ನೋಡಿದಾಗ, ಮಹಾತ್ಮರು ನನಗಾಗಿ ಕಲ್ಲು ಸಕ್ಕರೆಯಿದ್ದ ಡಬ್ಬಿಯನ್ನು ಕಳಿಸಿದ್ದರು. ಜೊತೆ ಒಂದು ಕಾಗದವಿತ್ತು. “ ಪ್ರಿಯ ಮಿತ್ರಾ, ಹಡಗಿನ ನಿನ್ನ ಸುಧೀರ್ಘ ಪ್ರಯಾಣದಲ್ಲಿ ಸಿಗರೇಟ್ಗೆ ಪರ್ಯಾಯವಾಗಿ ಇದನ್ನು ಕಳಿಸಿಕೊಟ್ಟಿದ್ದೀನಿ ಸ್ವೀಕರಿಸುಎಂದು ಪತ್ರದಲ್ಲಿ ಬರೆದಿದ್ದರು. ಭಾರತದ ಅಸಂಖ್ಯಾತ ಜನರನ್ನು ಕಟ್ಟಿಕೊಂಡು, ನೂರಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುತ್ತಿದ್ದ ಒಬ್ಬ ಜನನಾಯಕ ನನ್ನಂತಹ ಒಬ್ಬ ಸಾಮಾನ್ಯ ವಿದೆಶಿ ಪ್ರಜೆಗೆ ತೋರಿದ ಕಾಳಜಿಯನ್ನು ನೋಡಿ; ನಾನು ಮೂಕವಿಸ್ಮಿತನಾದೆ. ಅಂದಿನಿಂದ ನಾನು ಸಿಗರೇಟ್ ತ್ಯೆಜಿಸುವುದರ ಜೊತೆಗೆ ಮಹಾತ್ಮನ ಅನುನಾಯಿಯಾದೆ

ಮೇಲಿನ ಎರಡು ಘಟನೆಗಳು ನಮ್ಮೊಳಗಿನ ಗಾಂಧಿ ಮತ್ತು ಅವರೊಳಗಿನ ಗಾಂಧಿ ಕುರಿತ ವ್ಯತ್ಯಾಸವನ್ನು ನಮಗೆ  ಮನದಟ್ಟು ಮಾಡಿಕೊಡುತ್ತವೆ.