ಶುಕ್ರವಾರ, ಡಿಸೆಂಬರ್ 29, 2017

ಬೆತ್ತಲಾಗುತ್ತಿರುವ ಬಿ.ಜಿ.ಪಿ. ನಾಯಕರು


ವೈಚಾರಿಕತೆ ಮತ್ತು ತತ್ವ ಸಿದ್ಧಾಂತಗಳ ಕುರಿತಂತೆ ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ಕಳೆದ ಮೂರೂವರೆ ದಶಕಗಳಿಂದ ಜನಸಂಘವಾಗಿದ್ದ ರಾಷ್ಟ್ರೀಯ ಪಕ್ಷವೊಂದು ಭಾರತೀಯ ಜನತಾ ಪಕ್ಷವಾಗಿ ಪರಿವರ್ತನೆಗೊಂಡ ನಂತರ ನಾವು ಗೌರವಿಸುವ ಹಲವಾರು ನಾಯಕರು ಪಕ್ಷದಲ್ಲಿದ್ದರು. ಹಿಂದೂ ಧರ್ಮ ಮತ್ತು ಸಂಸ್ಸøತಿಯನ್ನು ಪಕ್ಷದ ಮುಖ್ಯ ಪ್ರಣಾಳಿಕೆಯನ್ನಾಗಿಟ್ಟುಕೊಂಡು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಪಕ್ಷದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅದ್ವಾನಿಯಂತಹ ನಾಯಕರು ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಯಕನಿಗೆ ಇರಬೇಕಾz ಸಭ್ಯತೆ ಮತ್ತು ಸಂಸ್ಕತಿಯನ್ನು ಮೈಗೂಡಿಸಿಕೊಂಡಿದ್ದರುಎಂದಿಗೂ ತುಟಿ ಮೀರಿದ ಅಸಂಸ್ಕತ ಭಾಷೆಯನ್ನಾಡದೆ ತಮ್ಮ ವಿರೋಧಿಗಳಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಬೆನ್ನುಮೂಳೆಗಳಿಲ್ಲದ  ಹರಕು ಬಾಯಿ ದಾಸರಂತಿರುವ ಹಾಗೂ ಕೂಗುಮಾರಿ ಸಂಸ್ಕತಿಯ ವಾರಸುದಾರರಂತಿರುವ ಅನಂತಕುಮಾರ ಹೆಗ್ಡೆ, ಪ್ರತಾಪಸಿಂಹ, ಶೋಭಾ ಕರಂದ್ಲಾಜೆ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಾಜಿಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಮುಂತಾದ ಮೂರನೆ ದರ್ಜೆಯ ಹಾಗೂ ಕೀಳು ಸಂಸ್ಕತಿಯ ನಾಯಕರಿಂದ ಭಾರತೀಯ ಜನತಾ ಪಕ್ಷವು ತುಂಬಿ ತುಳುಕಾಡುತ್ತಿದೆ. ಇವರ ಬೌದ್ಧಿಕ ದಿವಾಳಿತನ ಯಾವ ಹಂತ ತಲುಪಿದೆ ಎಂದರೆ, ಕಳೆದ ವಾರ ಹುಬ್ಬಳ್ಳಿ ನಗರಕ್ಕೆ ಯೋಗಿ ಆದಿತ್ಯನಾಥ ಸಮಾವೇಶವೊಂದರಲ್ಲಿ ಪಾಲ್ಗೊಳ್ಳುವ ಮುನ್ನಪೈರ್ ಬ್ರಾಂಡ್ ಆದಿತ್ಯನಾಥರಿಗೆ ಸ್ವಾಗತಎಂಬ ಪ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ತಮ್ಮ ಬಾಯಿಯನ್ನು ಗಟಾರಿನಂತೆ ಹೊಲಸು ಮಾಡಿಕೊಂಡು ಮಾತನಾಡುವ ಅನಂತಕುಮಾರ ಹೆಗ್ಡೆ, ಆದಿತ್ಯನಾಥ ಯೋಗಿಯಂತಹ ಬೇಜವಬ್ದಾರಿಯ ವ್ಯಕ್ತಿಗಳು ಈಗಿನ ಬಿ.ಜಿ.ಪಿ. ಪಾಲಿಗೆ ಪೈರ್ ಬ್ರಾಂಡ್ ನಾಯಕರಾಗಿದ್ದಾರೆ. ಇದು ಒಂದು ರಾಷ್ಟ್ರೀಯ ಪಕ್ಷವೊಂದರ ದುರಂತವಲ್ಲದೆ ಬೇರೇನೂ ಅಲ್ಲಹಿಂದೂ ಧರ್ಮದ ಬಗ್ಗೆ ಹಾಗೂ ಭಾರತೀಯ ಸಂಸ್ಕತಿಯ ಕುರಿತಾಗಿ ಮಾತನಾಡುವ ನಾಯಕ ಮಣಿಗಳಿಗೆ ಯಾವುದು ಸಂಸ್ಕೃತಿಯಾವುದು ಅಸಂಸ್ಕತಿ? ಎಂಬುದನ್ನು ತೋರಿಸಕೊಡಬೇಕಾದ ನೈತಿಕ ಜವಾಬ್ದಾರಿ  ಪ್ರಜ್ಞಾವಂತ ನಾಗರೀಕರ ಮೇಲಿದೆ.
ಕರ್ನಾಟಕ ರಾಜ್ಯದ ಬಿ.ಜೆ.ಪಿ.ಘಟಕದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳು ಸಂಪೂರ್ಣ ಅಯೋಮಯವಾಗಿವೆ. ಐದು ವರ್ಷದ ಹಿಂದ ಬಿ.ಜೆ.ಪಿ. ಯಿಂದ ಸಿಡಿದು, ತನ್ನದೇ ಆದ ಕೆ.ಜೆ.ಪಿ. ಪಕ್ಷವನ್ನು ಸ್ಥಾಪಿಸುವುದರ ಮೂಲಕ ಕಳೆದ ಚುನಾವಣೆಯಲ್ಲಿ ತಾನೂ ಮಣ್ಣು ಮುಕ್ಕುವುದರ ಜೊತೆಗೆ ಬಿ.ಜೆ.ಪಿ. ಪಕ್ಷಕ್ಕೂ ಮಣ್ಣು ಮುಕ್ಕಿಸಿದ ಯಡಿಯೂರಪ್ಪನವರಿಗೆ ಮತ್ತೆ  ಮಣೆ ಹಾಕಲಾಗಿದೆ. ಪಕ್ಷದಲ್ಲಿ ಜಾತಿಯ ಏಕೈಕ ಕಾರಣಕ್ಕಾಗಿ ಅಂದರೆಉತ್ತರ ಕರ್ನಾಟಕದ ಲಿಂಗಾಯಿತರ ಮತಗಳ ಮೇಲೆ ಕಣ್ಣಿಟ್ಟಿರುವ ರಾಷ್ಟ್ರ ಬಿ.ಜೆ.ಪಿ. ನಾಯಕರ ತೀರ್ಮಾನವು ರಾಜ್ಯದ ಹಲವು ಬಿ.ಜೆ.ಪಿ. ನಾಯಕರ ತೀವ್ರ ಅಸಮಾಧಾನಕ್ಕೆ  ಕಾರಣವಾಗಿದೆ.   ಒಬ್ಬ ತಿಕ್ಕಲು ದೊರೆಯ ಪ್ರತಿರೂಪದಂತಿರುವ, ಮಧುಮೇಹ, ರಕ್ತದೊತ್ತಡ, ಹೀಗೆ ಎಲ್ಲಾ ಬಗೆಯ ಕಾಯಿಲೆಗಳನ್ನು ದೇಹದಲ್ಲಿ ಹೊತ್ತುಕೊಂಡು, ಮೂಗಿನ ತುದಿಯಲ್ಲಿ ಕೋಪವಿರಿಸಿಕೊಂಡು ಮತ್ತೇ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಾ, ಮೈಯಲ್ಲಾ ಬಾಯಾಗಿರಿಸಿಕೊಂಡಿರುವ  ಶೋಭಾ ಕರಂದ್ಲಾಜೆ ಎಂಬ ಹೆಂಗಸನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿರುವ ಯಡಿಯೂರಪ್ಪನವರದು ಒಂದು ರೀತಿಯಲ್ಲಿ ತಿರುಕನ  ಕನಸುರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಷಾ ಅವರು ಯಡಿಯೂರಪ್ಪನವರನ್ನು  “ ಕರ್ನಾಟಕದ ಮುಂದಿನ ಮುಖ್ಯಮಂತ್ರಿಎಂದು ಘೋಷಿಸಿದಾಗಲೇ ಹಲವಾರು ಬಿ.ಜೆ.ಪಿ. ನಾಯಕರು ಕರ್ನಾಟಕದಲ್ಲಿ ಬಿ.ಜೆ.ಪಿ.ಪಕ್ಷವನ್ನು ಅಧಿಕಾರಕ್ಕೆ ತರುವ ಯತ್ನಕ್ಕೆ ಎಳ್ಳು ನೀರು ಬಿಟ್ಟರು. ನಾನು ವೈಯಕ್ತಿಕವಾಗಿ ಬಲ್ಲ ಮೂರು ನಾಲ್ಕು ಮಂದಿ ನಾಯಕರು ಖಾಸಾಗಿಯಾಗಿ ನನ್ನ ಜೊತೆ ಮಾತನಾಡುತ್ತಾನಮಗೆ ಇನ್ನೂ ಐದು ವರ್ಷ ಅಧಿಕಾರ ಇಲ್ಲದಿದ್ದರೂ ಚಿಂತೆಯಿಲ್ಲ, ಯಡಿಯೂರಪ್ಪನಂತಹ ಹುಂಬ  ಮಾತ್ರ ಮುಖ್ಯಮಂತ್ರಿಯಾಗುವುದು ಬೇಡಎಂಬ ಮಾತನ್ನಾಡಿದ್ದರು. ಏಕೆಂದರೆ, ಅವರಿಗೆಲ್ಲಾ ಯಡಿಯೂರಪ್ಪನವರಿಗಿಂತ ಅವರ ಹಿಂದಿರುವ ಶೋಭಾ ಕರಂದ್ಲಾಜೆಯ ಭಯ ಆವರಿಸಿಕೊಂಡಂತೆ ಕಾಣುತ್ತಿದೆ. ಅವರುಗಳ ಭಯಕ್ಕೂ ಒಂದು ಅರ್ಥವಿದೆ. ಏಕೆಂದರೆಭಾರತದ ರಾಜಕಾರಣದಲ್ಲಿ ಅಂದರೆ, ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮೂಲಕ ಮುಖ್ಯಮಂತ್ರಿಯಾದ ಜಯಲಲಿತಾ, ಕಾನ್ಸಿರಾಮ್ ಮೂಲಕ ಉತ್ತರ ಪ್ರದೇಶದಲ್ಲಿ ಮುಂಚೂಣಿಗೆ ಬಂದ ಮಾಯಾವತಿ ಹಾಗೂ ಆಂಧ್ರಪ್ರದೇಶದಲ್ಲಿ ಎನ್.ಟಿ.ಆರ್. ಮೂಲಕ ಮುಖ್ಯ ಮಂತ್ರಿ ಪದವಿಗೇರಲು ಪ್ರಯತ್ನಿಸಿದ್ದ  ಲಕ್ಷ್ಮಿ-ಶಿವಪಾರ್ವತಿ ಎಂಬಾಕೆ ಹೀಗೆ ಅನೇಕ ಮಹಿಳೆಯರ ಇತಿಹಾಸ ನಮ್ಮ ಕಣ್ಣ ಮುಂದೆ ಇರುವಾಗ ಕರ್ನಾಟಕದಲ್ಲಿ ಯಾವ ಬಿ.ಜೆ.ಪಿ. ನಾಯಕ ತಾನೆ ಯಡಿಯೂರಪ್ಪನವರನ್ನು ಬೆಂಬಲಿಸಲು ಸಾಧ್ಯ? ಅವರೆಲ್ಲರಿಗೂ ಯಡಿಯೂರಪ್ಪನವರ ಭಯಕ್ಕಿಂತ ಹೆಚ್ಚಾಗಿ ಇನ್ನೊಬ್ಬ ಜಯಲಲಿತಾ ಆಗುವ ಸಾಧ್ಯತೆಗಳಿರುವ ಶೋಭ  ಬಗ್ಗೆ ಆತಂಕವಿರುವುದು ಸುಳ್ಳಲ್ಲ. ಕಾರಣಕ್ಕಾಗಿ ಯಡಿಯೂರಪ್ಪನವರದು ಒಂದು ರೀತಿಯಲ್ಲಿ ಒನ್ ಮ್ಯಾನ್ ಆರ್ಮಿ ಎಂಬಂತಾಗಿದೆ. ಹೇಗಾದರೂ ಸರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಧರಿಸಿರುವ ಯಡಿಯೂಪ್ಪನವರು ಈಗ ಮಹಾದಾಯಿ ನದಿ ನೀರು ವಿವಾದದಲ್ಲಿ ಎಡವಟ್ಟು ಮಾಡಿಕೊಳ್ಳುವುದರ ಮೂಲಕ ಕರ್ನಾಟಕದ ಜನತೆಯೆದುರು ಬೆತ್ತಲಾಗಿದ್ದಾರೆ.

ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರವು ಕಳೆದ ಇಪ್ಪತ್ತೈದು ವರ್ಷಗಳಿಂದ ಮಹದಾಯಿ ನದಿ ವಿಚಾರವಾಗಿ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆ ಕಾನೂನು ಹೋರಾಟ ಮಾಡುತ್ತಿರುವುದು ಹೊಸ ವಿಷಯವೇನಲ್ಲ. ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಅಂತರಾಜ್ಯ ಜಲವಿವಾದ ಕುರಿತಂತೆ ತೀರ್ಪು ನೀಡಬೇಕಾದ ನ್ಯಾಯಮಂಡಳಿಯು ವರ್ಷದ ಆರಂಭದಲ್ಲಿ ನ್ಯಾಯಾಲಯದ ಹೊರಗೆ ಇದನ್ನು ಬಗೆ ಹರಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿತ್ತು. ಅನಾವಶ್ಯಕವಾಗಿ  ಸಮುದ್ರಕ್ಕೆ ಮಹಾದಾಯಿ ನದಿ ನೀರು ಹರಿದು ಹೋಗುತ್ತಿದ್ದರೂ ಸಹ ಹಠ ಹಿಡಿದಿರುವ ಗೋವಾ ರಾಜ್ಯ ಈವರೆಗೆ  ವಿಷಯದಲ್ಲಿ ಯಾವುದೇ ಸಹಾನುಭೂತಿ ತೋರಿಸಿಲ್ಲ. ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರಗಳು ಅಧಿಕಾರದಲ್ಲಿ ಇರುವುದರಿಂದ ಇದು ಮಾತುಕತೆಯ ಮೂಲಕ ಬಗೆಹರಿಸವುದು ಕಷ್ಟಕರ ಸಂಗತಿಯೇನಲ್ಲ. ನಿಜಕ್ಕೂ ಬಿ.ಜೆ.ಪಿ. ಪಕ್ಷಕ್ಕೆ ಕರ್ನಾಟಕದ ಬಗ್ಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೂರು ದಿನಗಳಲ್ಲಿ ಬಗೆ ಹರಿಸಬಹುದಾದ ಸಮಸ್ಯೆ ಇದಾಗಿದೆ. ಆದರೆ, ಕಳೆದ ಎರಡೂವರೆ ವರ್ಷದಿಂದ ನಿರಂತರವಾಗಿ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿರುವ ಉತ್ತರ ಕರ್ನಾಟಕ ರೈತಾಪಿ ಜನತೆಯನ್ನು ವಂಚಿಸುವ ಸಲುವಾಗಿ ಗೋವಾ ಮುಖ್ಯಮಂತ್ರಿಯಿಂದ ಖಾಸಾಗಿ ಪತ್ರವನ್ನು ಬರೆಯಿಸಿಕೊಂಡು ಬಂದ ಯಡಿಯೂರಪ್ಪನವರು  ಹುಬ್ಬಳ್ಳಿ ನಗರದ ಬಿ.ಜೆ.ಪಿಸಮಾವೇಶದಲ್ಲಿ ಅದನ್ನು ಪ್ರಕಟಿಸಿವುದರ ಮೂಲಕ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಸುಳ್ಳು ಹೇಳಿದ್ದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ವ್ಯವಸ್ಥಿತ ಸಂಚಿಗೆ ಕೈ ಜೋಡಿಸಿದ ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷರಾದ ಅಮಿತಾ ಷಾ ಅವರು ಕೂಡ ಇದರ ನೈತಿಕ ಹೊಣೆ ಹೊರಬೇಕಿದೆ. ನದಿ ನೀರಿನ ವಿವಾದ ಇರುವುದು ಗೋವಾ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವೆ ಮಾತ್ರ. ಒಂದು ವೇಳೆ ಗೋವಾ ಮುಖ್ಯ ಮಂತ್ರಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸುವುದಿದ್ದರೆ ಅದನ್ನು ಕರ್ನಾಟಕದ ಮುಖ್ಯಮಂತ್ರಿಗೆ ಇಲ್ಲವೆ, ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ಅಥವಾ ತಮ್ಮ ವಕೀಲರ ಮೂಲಕ ನ್ಯಾಯಾಧಿಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇಂತಹ ಸೂಕ್ಷ್ಮತೆಗಳ ಅರಿವಿಲ್ಲದ ಅವಿವೇಕಿಗಳಂತೆ ವರ್ತಿಸಿದ ರಾಜ್ಯ ಬಿ.ಜೆ.ಪಿ. ನಾಯಕರು ಈಗ ರಾಜ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ವಿರುದ್ಧ ಸಿಡಿದೆದ್ದಿರುವ ಮಹಾದಾಯಿ ನದಿ ನೀರಿನ ಹೋರಾಟಗಾರರ ಹಿಂದೆ ಕಾಂಗ್ರೇಸ್ ಪಕ್ಷದ ಕೈವಾಡವಿದೆ ಎಂಬ ಅಪ್ರಬದ್ಧ ಹೇಳಿಕೆ ನೀಡುವುದರ ಮೂಲಕ ರಾಜ್ಯದ ಜನತೆ ಎದುರು ಬೆತ್ತಲಾಗುತ್ತಿದ್ದಾರೆ.
ಯಾವ ಕಾರಣಕ್ಕೂ ಕರ್ನಾಟಕ ರಾಜ್ಯಕ್ಕೆ  ಒಂದು ಹನಿ ನೀರು ಬಿಡುವುದಿಲ್ಲ, ವಿವಾದ ನ್ಯಾಯಮಂಡಳಿಯ ತೀರ್ಪಿನ ಮುಖಾಂತರ ನಿರ್ಧಾರವಾಗಲಿ ಎಂದು ಗೋವಾ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲ ಆತ್ಮರಾವ್ ನಾಡಕರ್ಣಿ ಎಂಬುವರು ದೆಹಲಿಯಲ್ಲಿ ಹೇಳಿಕೆ ನೀಡುವುದರ ಮೂಲಕ ರಾಜ್ಯ ಬಿ.ಜೆ.ಪಿ. ನಾಯಕರ ಕಪಟ ನಾಟಕವನ್ನು ಕರ್ನಾಟಕದ ಜನತೆಯೆದುರು ಅನಾವರಣಗೊಳಿಸಿದರು. ಇದೂ ಸಾಲದೆಂಬಂತೆ  ಗೋವಾದ ಜಲಸಂಪನ್ಮೂಲ ಸಚಿವರಾದ ವಿನೋದ್ ಪಾಲಿಯೆಂಕರ್ ಎಂಬುವರು ದಿನಾಂಕ 27 -12-17 ರಂದು ಪಣಜಿಯಲ್ಲಿ ಹೇಳಿಕೆ ನೀಡಿ, ನಮ್ಮ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಯಡಿಯೂರಪ್ಪನವರಿಗೆ ಕಾಗದ ಬರೆದಿರುವುದು ಕೇವಲರಾಜಕೀಯ ಸ್ಟಂಟ್ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಆಗಸ್ಟ್ ವೇಳೆಗೆ ನ್ಯಾಯಮಂಡಳಿಯಿಂದ ತೀರ್ಪು ಹೊರ ಬೀೀಳುವುದರಿಂದ ನಾವು ಕರ್ನಾಟಕ ರಾಜ್ಯದ ಜೊತೆ ಮಹದಾಯಿ ನದಿ ನೀರಿನ ಕುರಿತಂತೆ ಯಾವುದೇ ಸಂಧಾನದ ಮಾತುಕತೆಗೆ ಸಿದ್ಧರಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂದಿನ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನ ಸಭೆಯ ಚುನಾವಣೆ ನಡೆಯಲಿದ್ದು ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಹೋರಾಡುತ್ತಿದ್ದ ಬಿ.ಜೆ.ಪಿ. ನಾಯಕರಿಗೆ  ಉತ್ತರ ಕರ್ನಾಟಕದ  ಜಿಲ್ಲೆಗಳಿಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಅನಂತಕುಮಾರ ಹೆಗ್ಡೆ ಎಂಬ ಅವಿವೇಕಿ ಕೇಂದ್ರ ಸಚಿವನೊಬ್ಬ ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂಬ ದುರಹಂಕಾರದ ಮಾತುಗಳನ್ನಾಡಿ ಕರ್ನಾಟಕ ಮಾತ್ರವಲ್ಲದೆ, ಭಾರತದ ಹಿಂದುಳಿದ ವರ್ಗ, ಹಿಂದುಳಿದ ಜಾತಿ ಹಾಗೂ ಇತರೆ ಜನರು ಬಿ.ಜೆ.ಪಿ. ಯಿಂದ ದೂರ ಸರಿಯುವಂತೆ ಮಾಡಿದ್ದಾನೆ. ಸಂಸತ್ತಿನ ಎರಡು ಸದನಗಳಲ್ಲಿ ವಿರೋಧ ಪಕ್ಷಗಳು ಆಡಳಿತಾರೂಡ ಬಿ.ಜೆ.ಪಿ. ಸರ್ಕಾರವನ್ನು ತರಟೆಗೆ ತೆಗೆದುಕೊಂಡಾಗ ಕ್ಷಮೆ ಯಾಚಿಸುವುದರ  ಮೂಲಕ ಈತ, ತನ್ನ ಕಾಲಿನ ಹೆಬ್ಬೆಟ್ಟನ್ನು ಬಾಯಿಗೆ ಹಾಕಿಕೊಂಡು ಕೂರಬೇಕಾಯಿತು. ಇಂತಹ ಕಳಂಕಿತ ಹಾಗೂ ಸಾರ್ವಜನಿಕವಾಗಿ  ಜನಪ್ರತಿನಿಧಿಗೆ ಇರಬೇಕಾದ ಕನಿಷ್ಠ ಪ್ರಜ್ಞೆಯಿಲ್ಲ ವ್ಯಕ್ತಿಗಳಿಂದಾಗಿ ಕನಾಟಕದಲ್ಲಿ ಬಿ.ಜೆ.ಪಿ. ಪಕ್ಷವು ತನ್ನ ಸಮಾಧಿಯನ್ನು ತಾನೇ ಮುಂಚಿತವಾಗಿ ಸಿದ್ಧಪಡಿಸಿಕೊಂಡಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಗೆ ಬರೆದ “ ಜಗದಗಲ” ಅಂಕಣ ಬರಹ)