ಬುಧವಾರ, ಜೂನ್ 8, 2016

ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ದೇವತೆಗಳು




ನಾವು ಬದುಕುತ್ತಿರುವ ವರ್ತಮಾನದ ಕಾಲ ಮತ್ತು ಸಮಾಜ ಎರಡೂ ಅತಿ ಸೂಕ್ಷ್ಮತೆ ಮತ್ತು ನಾಜೂಕಿನಿಂದ ಕೂಡಿವೆ. ನಾವು ಆಡಬಹುದಾದ ಮಾತು, ಬರೆಯಬಹುದಾದ ಕಥೆ ಅಥವಾ ಕಾವ್ಯ, ಚಿತ್ರಿಸಬಹುದಾದ ಚಿತ್ರ, ಹಾಡುವ ಹಾಡು ಎಲ್ಲವೂ ಧಾರ್ಮಿಕ ಸೋಸು ಪರದೆಯನ್ನು (ಫಿಲ್ಟರ್ ಕ್ಲಾತ್) ಹಾಯ್ದು ಬರಬೇಕು. ಒಂದು ಸಮುದಾಯದ ನಾಯಕ ಅಥವಾ ಒಬ್ಬ ಧಾರ್ಮಿಕ ಮುಖಂಡನೊಬ್ಬ ಲೇಖಕನೊಬ್ಬನ ಸೃಜನಶೀಲ ಕೃತಿಗಳ ಬಗ್ಗೆ  ಅಕಸ್ಮಾತ್ ಏನಾದರೂ ಅಪಸ್ವರ ಎತ್ತಿದರೆ, ಪ್ರತಿಯೊಬ್ಬ ಲೇಖಕ ಅಥವಾ ಕಲಾವಿದ ಸತ್ವ ಪರೀಕ್ಷೆಯ ಅಗ್ನಿಕುಂಡವನ್ನು ಹಾಯಬೇಕು ಜೊತೆಗೆ ಕಾಣದ ಕೈ ಗಳ ಬಂದೂಕಿನ ಗುಂಡಿಗೂ ಎದೆಯೊಡ್ಡಲು ಸಿದ್ಧನಿರಬೇಕು.

ಸದಾ ಇಂತಹ ಆತಂಕ ಮತ್ತು  ಭಯಗಳೆಂಬ ಸಾವು ಬದುಕಿನ ತೂಗು ಕತ್ತಿಯ ಕೆಳಗಿನ ಬದುಕಿಗಿಂತ ಏನೂ ಬರೆಯದೆ, ಮಾತನಾಡದೆ ಮೌನವಾಗಿರುವುದು ಲೇಸು ಎಂಬಂತೆ ಅನೇಕ ಕನ್ನಡದ ಹಿರಿಯ ಜೀವಗಳು ಮೌನಕ್ಕೆ ಶರಣಾಗಿದ್ದಾರೆ. ಧರ್ಮ ಮತ್ತು ಜಾತಿಯ ನೆಪವೊಡ್ಡಿ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಹಾಕಿದ  ಬಾಯಿ ಬೀಗ ಎಲ್ಲರಲ್ಲೂ ತಲ್ಲಣವನ್ನುಂಟು ಮಾಡಿದೆಕಳೆದ ತಿಂಗಳು ಧಾರವಾಡದಲ್ಲಿ ಖಾಸಾಗಿಯಾಗಿ ಮಾತನಾಡುತ್ತಿದ್ದ  ಹಿರಿಯ ವಿಮರ್ಶಕರಾದ ಡಾ. ಗಿರಡ್ಡಿಗೋವಿಂದರಾಜ ರವರು ತಮ್ಮ ಅರ್ಧ ಶತಮಾನದÀ ಗೆಳೆಯ ಡಾ.ಎಂ.ಎಂ. ಕಲ್ಬುರ್ಗಿಯವರನ್ನು ನೆನಪಿಸಿಕೊಳ್ಳುತ್ತಾ, ಏನನ್ನೂ ಬರೆಯಲಾಗುತ್ತಿಲ್ಲ, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅತ್ಯಂತ ನೋವಿನಿಂದ ಗಂಟಲಿನಲ್ಲಿ ಹೂತು ಹೋದ ಪಿಸು ಮಾತಿನಂತಹ ಧ್ವನಿಯಲ್ಲಿ ಮಾತನಾಡತೊಡಗಿದರು. ಘಟನೆ ನಡೆದ ಒಂದು ವಾರP ಸರಿಯಾಗಿÉ್ಕ ಬೆಂಗಳೂರಿನ ಮತ್ತೊಬ್ಬ ಹಿರಿಯ ವಿದ್ವಾಂಸ ಕೆ.ವಿ. ನಾರಾಯಣ ರವರ ಜೊತೆ  ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗನಾನೀಗ ಯಾವುದೇ ಸಭೆ ಸಮಾರಂಭದಲ್ಲಿ ಭಾಗವಹಿಸಬಾರದು ಮತ್ತು ಮಾತನಾಡಬಾರದು ಎಂದು ನಿರ್ಧರಿಸಿದ್ದೀನಿಎಂದು ನುಡಿದರು. ಜೊತೆಗೆ 1971 ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಸೆನಟ್ ಸಭಾಂಗಣದಲ್ಲಿ ನಡೆದ ಘಟನೆಯೊಂದನ್ನು ನನಗೆ ವಿವರಿಸಿದರು. ಬೇಂದ್ರೆ ಕಾವ್ಯ ಕುರಿತು ನಡೆದ  ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಬೇಂದ್ರೆ ಕೊನೆಯ ದಿನಗಳ ಕಾವ್ಯದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಲಂಕೇಶರ ನಿಲುವನ್ನು ಹಲವರು ಪ್ರತಿಭಟಿಸಿದಾಗ, “ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅದು ಗೋಡೆಯೆದುರು ನಿಂತು ಮಾತನಾಡುವುದಂತಹದÀÀಲ್ಲ, ಸಮಾಜದ ಎದುರು ನಿಂತು ಮಾತನಾಡುವುದುಎಂದು ಲಂಕೇಶರು ಹೇಳಿದ ಮಾತನ್ನು ನೆನಪಿಸಿದರು. ಎರಡು ಘಟನೆಗಳ  ಜೊತೆಗೆ ಏಪ್ರಿಲ್ 29 ರಂದು ಧಾರವಾಡದಲ್ಲಿ ನಡೆದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಮತ್ತೊಬ್ಬ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ನನ್ನ ಜೊತೆ ಮಾತನಾಡುತ್ತಾ, “ನನಗೀಗ ಮಾತನಾಡಲು ಮತ್ತು ಬರೆಯಲು ಆತಂಕವಾಗುತ್ತಿದೆ. ಇಂತಹ ಅಸಹನೀಯ ಬದುಕಿಗೆ ಏನಾದರೂ ಅರ್ಥವಿದೆಯಾ?” ಎಂದು ಪ್ರಶ್ನಿಸತೊಡಗಿದರು.

ಇದೇನಿದು? ಎಲ್ಲಾ ಹಿರಿಯ ಜೀವಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡವರಂತೆ ಹೀಗೆ ಮೌನಕ್ಕೆ ಶರಣಾಗಿಬಿಟ್ಟರೆ, ಧರ್ಮದ ಹೆಸರಿನಲ್ಲಿ ಮತ್ತು ಜಾತಿಯ ನೆಪದಲ್ಲಿ ಕೊಳ್ಳಿದೆವ್ವಗಳಂತೆ ಹುಚ್ಚೆದ್ದು ಕುಣಿಯುವವರನ್ನು ವರ್ತಮಾನದ ಸಮಾಜದಲ್ಲಿ  ತಡೆಯುವವರು ಯಾರು? ತಣಿಸುವವರು ಯಾರು? ನನ್ನ ತಲೆಮಾರನ್ನೂ ಒಳಗೊಂಡಂತೆ, ನನ್ನ ನಂತರದ ಒಂದೆರೆಡು ತಲೆಮಾರನ್ನು ತಮ್ಮ ಕಾದಂಬರಿಗಳು. ಸಂಶೋಧನೆ ಮತ್ತು ಸಾಹಿತ್ಯದ ಮೂಲಕ ಉದ್ದೇಪಿಸಿದ  ಅನೇಕ ಹಿರಿಯ ಜೀವಗಳು ಇಂದು ಯಾವದೇ ಬಗೆಯ ಆತ್ಮಸಾಕ್ಷಿಯ ಪ್ರಜ್ಞೆಯೂ ಇಲ್ಲದಂತೆ ಮುಸ್ಲಿಂ ಸಮುದಾಯವನ್ನು ಅಪರಾಧದ ಕಟಕಟೆಗೆ ಏರಿಸಿ, ವಿಚಾರಣೆಯಿಲ್ಲದೆ ನೇಣುಗಂಬಕ್ಕೆ ಏರಿಸುತ್ತಿದ್ದಾರಲ್ಲಾಇಂತಹ ತಲ್ಲಣದ, ಆತಂಕದ  ಘಳಿಗೆಯಲ್ಲಿ ನಾವು ಯಾರತ್ತ ತಿರುಗಿ ನೋಡಬೇಕು? ಬೆಂಗಳೂರಿನಲ್ಲಿ ಲಂಕೇಶರಿಲ್ಲ, ಅನಂತಮೂರ್ತಿಯವರಿಲ್ಲ, ಪ್ರೊ.ನಂಜುಂಡಸ್ವಾಮಿಯವರೂ ಇಲ್ಲ, ಮೈಸೂರಿನಲ್ಲಿ ಕೆ.ರಾಮದಾಸರಿಲ್ಲ, ಅತ್ತ ಹಾಗೊಮ್ಮೆ ಹೀಗೊಮ್ಮೆ ದಿಡೀರನೆ ಸ್ಪೋಟಿಸುತ್ತಿದ್ದ ಮೂಡಿಗೆರೆಯಲಿನ್ಲ ತೇಜಸ್ವಿಯವರಿಲ್ಲ? ನಮ್ಮ ನಡುವೆ ಇರುವ ಹಿರಿಯ ಮಿತ್ರ ದೇವನೂರು ಮಹಾದೇವು ಒಬ್ಬರ ಧ್ವನಿ ಮಾತ್ರ ಅಂತರಂಗದ ಪಿಸು ಮಾತಿನಂತೆ ಕೆಲವೊಮ್ಮೆ ಕೇಳಿ ಬರುತ್ತಿದೆ.

ಬಾಯಿದ್ದವನು ಬರಗಾಲದಲ್ಲಿಯೂ ಬದುಕಿದ ಎನ್ನುವ ಹಾಗೆ, ಧರ್ಮದ ನೆಪದಲ್ಲಿ ಅನ್ಯ ಧರ್ಮಿಯರನ್ನು ನೋಯಿಸುವ, ಅಪಮಾನಿಸುವ ಹಾಗೂ ಸಂಶಯ ದೃಷ್ಟಿಕೋನದಿಂದ ನೋಡುವ ದೃಷ್ಟಿಕೋನ ಬಲವಾಗಿ ಬೇರೂರುತ್ತಿದೆ. ಇದನ್ನು ಸತ್ಯ ಎಂದು ನಂಬಿದ ಆಧುನಿಕ ತಲೆಮಾರು ಧರ್ಮ ಮತ್ತು ಜಾತಿಯ ನೆಪದಲ್ಲಿ ಕತ್ತಿ ಜಳುಪಿಸುತ್ತಿದೆ. ಹಾಗಾದರೆ   ನೆಲಕ್ಕೆ ಅನ್ಯ ಧರ್ಮೀಯರ ಕೊಡುಗೆ ಏನೂ ಇಲ್ಲವೆ? ಕಲೆ, ಸಂಗೀತ, ಹಾಗೂ ವಾಸ್ತು ಶಿಲ್ಪ ಕ್ಷೇತ್ರಗಳಿಗೆ ಇಸ್ಲಾಂ ಧರ್ಮ ನೀಡಿದ ಕೊಡುಗೆ ಮತ್ತು ಭಾರತದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಕ್ರೈಸ್ತ ಮಿಷನರಿಗಳು ನೀಡಿದ ಕೊಡುಗೆಯನ್ನು ಅಲ್ಲಗೆಳೆಯಲು ಸಾದ್ಯವೆ? ಹಿಂದೂ ಧರ್ಮದ ಪರಮ ಪ್ರತಿಪಾದಕರೆಂದು ಗುರುತಿಸಿಕೊಂಡಿರುವ ಪಂಡಿತರು ಮತ್ತು ವಿದ್ವಾಂಸರು ಒಮ್ಮೆ ಇತಿಹಾಸದ ಪುಟಗಳನ್ನು ಗಂಭೀರವಾಗಿ ಅವಲೋಕಿಸಿದ್ದರೆ, ಧಾರ್ಮಿಕ ಅಸಹಿಷ್ಣುತೆ ಎಂಬುದು  ನಮ್ಮ ನಡುವೆ ತಲೆಯೆತ್ತಲು ಸಾಧ್ಯವಾಗುತ್ತಿರಲಿಲ್ಲ.

ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ ಕುರಿತು ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನದಲ್ಲಿ ನಿರತನಾಗಿರುವ ನಾನು ಒರಿಸ್ಸಾ ಸೇರಿದಂತೆ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ 456 ದೇವಸ್ಥಾನಗಳಲ್ಲಿ ಕ್ಷೇತ್ರ ಕಾರ್ಯ ನಡೆಸುತ್ತಾ ಬಂದಿದ್ದೀನಿ.  2015 ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡಿನ ತಿರುಚ್ಚರಾಪಳ್ಳಿ ಸಮೀಪದ ಶ್ರೀರಂಗಂ ಎಂಬ ದೇಗುಲಗಳ ಊರಿನಲ್ಲಿ ಶ್ರೀ ರಂಗನಾಥನ ಸನ್ನಿಧಿಯಲ್ಲಿದ್ದೆ. ಹದಿನಾಲ್ಕನೆಯ ಶತಮಾನದಲ್ಲಿ ದೆಹಲಿ ಅಲ್ಲಾವುದ್ದೀನ್ ಖಿಲ್ಜಿಯ ಸೇನೆಯು ದೇವಸ್ಥಾನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದೇಗುಲದ ದೇವದಾಸಿಯಾಗಿದ್ದ ಅನಾಮಿಕ ಹೆಣ್ಣು ಮಗಳೊಬ್ಬಳು, ದೇವಸ್ಥಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಸೇನಾಧಿಕಾರಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಇತಿಹಾಸ ದೇವಸ್ಥಾನದೊಂದಿಗೆ ತಳುಕು ಹಾಕಿಕೊಂಡಿದೆ. ತ್ಯಾಗಮಯಿ ಹೆಣ್ಣು ಮಗಳ ವಿವರ ಕಲೆ ಹಾಕುವ ಸಲುವಾಗಿ ಬೆಳಗಿನ ಆರು ಗಂಟೆಯ ಪ್ರಥಮ ಪೂಜೆಯ ಸಮಯದಲ್ಲಿ ಗರ್ಭಗುಡಿಯ ಮುಂಬಾಗಲಲ್ಲಿ ನಿಂತು ಪೂಜಾ ವಿಧಿ ವಿಧಾನಗಳನ್ನು ವೀಕ್ಷಿಸುತ್ತಿದ್ದೆ. ಗರ್ಭಗುಡಿಗೆ ಹೊಂದಿಕೊಂಡಂತೆ ಇರುವ ಅರ್ಜುನ ಮಂಟಪದ ಬಳಿ ಇರುವ ತುಳಕ್ಕಮ್ಮ ನಾಚ್ಚಿಯಾರ್ ಎಂಬ ಮುಸ್ಲಿಂ ಹೆಣ್ಣು ದೇವತೆಗೆ ಅಲ್ಲಿ ಪೂಜೆ ಸಲ್ಲಿಸಿ. ತುಪ್ಪದಿಂದ ಮಾಡಿದ ಅಪ್ಪಟ ಮೊಗಲ್ ಶೈಲಿಯ ತಂದೂರಿ ರೊಟ್ಟಿ ಮತ್ತು ದಾಲ್ ( ಬೇಳೆಯಿಂದ ಮಾಡಿದ ಗೊಜ್ಜು) ನೈವೈದ್ಯ ಅರ್ಪಿಸುವುದನ್ನು ಕಂಡು ಅವಕ್ಕಾದೆ. ಏನಿದು? ಹಿಂದೂ ಧರ್ಮದ ಪವಿತ್ರ ಕ್ಷೇತ್ರ ಹಾಗೂ ದಕ್ಷಿಣ ಭಾರತದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾದ ಶ್ರೀರಂಗಂನ ರಂಗನಾಥನ ಸನ್ನಿಧಿಯಲ್ಲಿ ಅನ್ಯ ಧರ್ಮದ ಹೆಣ್ಣು ಮಗಳಿಗೆ ಪೂಜೆ ಪುರಸ್ಕಾರವೆ? ಅಲ್ಲಿನ ಹಿರಿಯ ಆರ್ಚಕರು ಇತಿಹಾಸದ ಕಥೆಗಳನ್ನು ಹೇಳುತ್ತಾ ನನ್ನ ಕುತೂಹಲವನ್ನು ತಣಿಸಿದರು. ಅವರು ಹೇಳಿದ ಕಥೆ ಮತ್ತು ಇತಿಹಾಸದ ದಾಖಲೆಗಳನ್ನು ಹೋಲಿಕೆ ಮಾಡಿದಾಗ ಇದು ನೈಜ ಕಥೆಯಂತೆ ನಮಗೆ ತೋರುತ್ತದೆ.


ಹದಿನಾಲ್ಕನೆಯ ಶತಮಾನದಲ್ಲಿ ಅಂದರೆ, 1311 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಸೇನಾ ದಂಡನಾಯಕ ಮಲ್ಲಿಕಾಫರ್ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದು ಕನಾಟಕದ ಹಳೇಬೀಡು ( ದ್ವಾರ ಸಮುದ್ರ) ಮತ್ತು ಬನ್ನೂರು ಸಮೀಪದ ಸೋಮನಾಥನ ದೇವಸ್ಥಾನಗಳನ್ನು ಕೊಳ್ಳೆ ಹೊಡೆದು ನಂತರ ಮಧುರೈ ಮೀನಾಕ್ಷಿ ದೇವಾಲಯದತ್ತ ತೆರಳುವಾಗ ಮಾರ್ಗ ಮಧ್ಯೆ ಕಾವೇರಿ ನದಿ ದಂಡೆಯ ಮೇಲೆ ತನ್ನ ಸೇನೆಯ ಜೊತೆ ವಿಶ್ರಮಿಸಿಕೊಳ್ಳುತ್ತಿದ್ದ ಸಮಯದಲ್ಲಿ ಆತನಿಗೆ ಶ್ರೀರಂಗಂ ಬೃಹತ್ ದೇವಾಲಯ ಗೋಚರಿಸುತ್ತದೆ. ಬೆಳಿಗ್ಗೆ ಎದ್ದು ಶ್ರೀರಂಗಂ ದೇವಸ್ಥಾನದ ಮೇಲೆ ದಾಳಿ ಮಾಡಿ ಚಿನ್ನ, ಬೆಳ್ಳಿ, ಪಂಚ ಲೋಹದ ವಿಗ್ರಹಗಳನ್ನು ವಶಪಡಿಸಿಕೊಂಡ ಮಲ್ಲಿಕಾಫರ್ ನಂತರ  ಮಧುರೈ ಪಟ್ಟಣಕ್ಕೆ ತೆರಳುತ್ತಾನೆ. ಅಲ್ಲಿನ ಪಾಂಡ್ಯ ರಾಜನನ್ನು ಮಣಿಸಿ, ಮೀನಾಕ್ಷಿ ದೇವಾಲಯವನ್ನು ಕೊಳ್ಳೆ ಹೊಡೆದು ದೆಹಲಿಗೆ ಹಿಂತಿರುಗುತ್ತಾನೆ. ಶಿಲೆಯಲ್ಲಿ ಕೆತ್ತಲಾಗಿರುವ ದೇವರ ಪ್ರತಿಮೆಗಳನ್ನು ವಿರೂಪಗೊಳಿಸುವುದು, ಪಂಚಲೋಹ ಅಥವಾ ಹಿತ್ತಾಳೆ, ತಾಮ್ರದ ಲೋಹದ ಪ್ರತಿಮೆಗಳನ್ನು ದೆಹಲಿಗೆ ಕೊಂಡೊಯ್ದು ಅವುಗಳನ್ನು ಕರಗಿಸಿ, ತಮಗೆ ಬೇಕಾದ ಆಕಾರದಲ್ಲಿ ಪಾತ್ರೆ, ಹೂಜಿ, ಹೀಗೆ ಹಲವು  ಎರಕ ಹುಯ್ಯುವುದು  ಆಗಿನ ದೆಹಲಿ ಸುಲ್ತಾನರ ಪದ್ಧತಿಯಾಗಿತ್ತು. ಮಲ್ಲಿಕಾಫರ್ ದಕ್ಷಿಣ ಭಾರತದಲ್ಲಿ ಕೊಳ್ಳೆ ಹೊಡೆದ ವಿವರಗಳನ್ನು ಆಗಿನ ಇತಿಹಾಸಕಾರ ಜೈಯುದ್ದೀನ್ ಬರಾನಿ ಎಂಬಾತಒಟ್ಟು 241 ಟನ್ ಚಿನ್ನ, 20 ಸಾವಿರ ಕುದುರೆಗಳು ಮತ್ತು 612 ಆನೆಗಳೊಂದಿಗೆ ಮಲ್ಲಿಕಾಫರ್ ದೆಹಲಿಗೆ ಹಿಂತಿರುಗಿದಎಂದು ದಾಖಲಿಸಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ, ಮುಸ್ಲಿಂರ ದಾಳಿಗೆ ಹಿಂದೂ ದೇವಲಾಯಗಳು ನಾಶವಾದವು ಎಂದು ಇತಿಹಾಸದ ಕಟ್ಟು ಕಥೆ ದಾಖಲಿಸಿದವರು ಮಲ್ಲಿಕಾಫರ್ ಓರ್ವ ಹಿಂದೂ ಧರ್ಮದ  ವ್ಯಕ್ತಿ ಎಂಬುದನ್ನು ಮಾತ್ರ ಮರೆ ಮಾಚುತ್ತಾರೆ. ಅಲ್ಲಾವುದ್ದೀನ್ ಖಿಲ್ಜಿಯ ಇ್ರತಿಹಾಸದ ವಿವರಗಳನ್ನು ಗಮನಿಸಿದಾಗ ಆತನ ಬಲಗೈ ಭಂಟ ಮಲ್ಲಿಕಾಫರ್ ವಿವರಗಳು ನಮ್ಮೆದುರು ತೆರೆದುಕೊಳ್ಳುತ್ತವೆ.

ದೆಹಲಿಯನ್ನು 1295 ರಿಂದ 1016 ರವರೆಗೆ ಆಳಿದ ಅಲ್ಲಾವುದ್ದೀನ್ ಖಿಲ್ಜಿ ಬಲಿಷ್ಟ ಹಾಗು ಅನ್ಯ ಧರ್ಮಗಳ ಕುರಿತು ಅಸಹನೆ ಬೆಳೆಸಿಕೊಂಡಿದ್ದ ಕ್ರೂರ ದೊರೆಗಳಲ್ಲಿ ಒಬ್ಬನಾಗಿದ್ದ. ಗುಜರಾತಿನ ಮೇಲೆ ದಂಡೆತ್ತಿ ಹೋದಾಗ ಸೆರೆಸಿಕ್ಕ ಗುಲಾಮರಲ್ಲಿ ಸ್ವುರದ್ರೂಪಿ ಯುವಕನಾಗಿದ್ದ ಮಲ್ಲಿಕಾಫರ್ ಕೂಡ ಒಬ್ಬ. ಸಲಿಂಗಕಾಮಿಯಾಗಿದ್ದ ಖಿಲ್ಜಿ ಹಿಂದೂ ಯುವಕನನ್ನು ಇಸ್ಲಾಂ ದರ್ಮಕ್ಕೆ ಮತಾಂತರಗೊಳಿಸಿ  ಆತನಿಗೆ ಮಲ್ಲಿಕಾಫರ್ ಎಂದು ಹೆಸರಿಟ್ಟು, ತನ್ನೊಡನೆ ಇರಿಸಿಕೊಂಡಿದ್ದ.(ಆಕರ್ಷಕವಾಗಿರುವ ಯುವಕರನ್ನು ನಪುಂಸಕರನ್ನಾಗಿ ಮಾಡಿ ರಾಣಿಯ ಅಂತಃಪುರದಲ್ಲಿ ನೇಮಕ ಮಾಡಿಕೊಳ್ಳುವ ಪದ್ದತಿಯೂ ಸಹ ಅಂದಿನ ಸುಲ್ತಾನರ ಆಳ್ವಿಕೆಯಲ್ಲಿ ಚಾಲ್ತಿಯಲ್ಲಿತ್ತು) ದೊರೆಯ ಖಾಸಾ ಸಂಗಾತಿಯಾದ ಮಲ್ಲಿಕಾಫರ್ ಕೆಲವೇ ವರ್ಷಗಳಲ್ಲಿ ದಂಡನಾಯಕನ ಪಟ್ಟಕ್ಕೇರಿದ. ನಂತರ ಅಲ್ಲಾವುದ್ದೀನ್ ಖಿಲ್ಜಿಯು ತನ್ನ ಬದುಕಿನ ಕೊನೆಯ ದಿನಗಳಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಅಸಹಾಯಕನಾದಾಗ ಮಲ್ಲಿಕಾಫರ್ ಉಪ ಸುಲ್ತಾನನಂತೆ ಆಡಳಿತ ನಡೆಸಿದಆದರೆ, 1016 ರಲ್ಲಿ ದೆಹಲಿ ಸಿಂಹಾಸನದ ಮೇಲಿನ ಆಸೆಯಿಂದ ದೊರೆ ಅಲ್ಲಾವುದ್ದೀನ್ ಖಿಲ್ಜಿಗೆ ವಿಷಪ್ರಾಶನ ಮಾಡಿಸಿ, ಆತನ  ಇಬ್ಬರು ವಯಸ್ಕ ಮಕ್ಕಳ ಕಣ್ಣು ಕೀಳಿಸಿದ ಮಲ್ಲಿಕಾಫರ್ ನಂತರ  ಮೂರು ವರ್ಷದ ಖಿಲ್ಜಿಯ ಕಿರಿಯ ಪುತ್ರನಿಗೆ ಪಟ್ಟ ಕಟ್ಟುವುದರ ಮೂಲಕ ದೆಹಲಿಯ ಖಿಲ್ಜಿ ಸಾಮ್ರಾಜ್ಯದ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡಿದ್ದ. ಆದರೆ ಮಲ್ಲಿಕಾಫರ್ ಕೇವಲ 35 ದಿನಗಳ ಅವಧಿಯ   ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದ ಅರಮನೆಯ ಅಂಗರಕ್ಷಕರು ಕೊನೆಗೆ  ಆತನನ್ನ ಕೊಂದು ಹಾಕಿದರು. ಇದಾದ ನಾಲ್ಕು ವರ್ಷಗಳಲ್ಲಿ (1320) ದೆಹಲಿಯ ಖಿಲ್ಜಿ ಸಾಮ್ರಾಜ್ಯ ಪತನಗೊಂಡಿತು.
ಮಲ್ಲಿ ಕಾಫರ್ 1311 ರಲ್ಲಿ ಖಿಲ್ಜಿ ದಂಡನಾಯಕನಾಗಿ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದು ಶ್ರೀರಂಗಂ ನಿಂದ ಲೂಟಿ ಮಾಡಿದ್ದ ಶ್ರೀರಂಗನಾಥನ ಉತ್ಸವ ಮೂರ್ತಿಯಾದ ಶ್ರೀ ರಂಗನಾಥನ  ಕಂಚಿನ ಸುಂದರ ಪ್ರತಿಮೆಯನ್ನು ಕರಗಿಸದೆ ಉಳಿಸಿದ್ದ ಪರಿಣಾಮವಾಗಿ   ಪ್ರತಿಮೆಯು ದೆಹಲಿಯ ಸುಲ್ತಾನನ ಮಗಳ ಅಂತಃಪುರದಲ್ಲಿತ್ತು. ಇದ್ದುದನ್ನು ಖಾತರಿಪಡಿಸಿಕೊಂಡ  ಶ್ರೀ ರಂಗಂ  ದೇವಾಲಯದ ನೃತ್ಯ ಮತ್ತು ಸಂಗೀತ ತಂಡದ ಸದಸ್ಯರು ದೆಹಲಿಗೆ ತೆರಳಿ ಅಲ್ಲಾವುದ್ದೀನ್ ಖಿಲ್ಜಿಯನ್ನು ದೆಹಲಿಯ ಆತನ ಒಡ್ಡೋಲಗದಲ್ಲಿ ಸಂಗೀತ ಮತ್ತು ನೃತ್ಯದ ಮೂಲಕ ಸಂತೃಪ್ತಗೊಳಿಸಿದರು.. ಅಲ್ಲಾವುದ್ದೀನ್ ಖಿಲ್ಜಿಯು ಸಂಗೀತಗಾರರಿಗೆ ಉಡುಗೊರೆಗಳನ್ನು ನೀಡಲು ಬಂದಾಗ, ಆತನಲ್ಲಿ ಕಾಣಿಕೆ ಬದಲಾಗಿ ರಂಗನಾಥನ ಪ್ರತಿಮೆಗೆ ವಿನಂತಿಸಿಕೊಳ್ಳುವುದರ ಮೂಲಕ  ದೊರೆಯಿಂದ ರಂಗನಾಥನ ಉತ್ಸವದ ಮೂರ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡು   ಶ್ರೀರಂಗಂ ನತ್ತ ಸಂಗೀತ ನೃತ್ಯದ ತಂಡದ ಸದಸ್ಯರು  ಪ್ರಯಾಣ ಬೆಳಸಿದರು. ಅತ್ತ ತಾನು ಅಂತಃಪುರದಲ್ಲಿ ಇಲ್ಲದ ವೇಳೆಯಲ್ಲಿ ತನ್ನ ತಂದೆಯು ಪ್ರತಿಮೆಯನ್ನು ಉಡುಗೊರೆ ಕೊಟ್ಟ ಸಂಗತಿ ತಿಳಿದ ಸುಲ್ತಾನಳ ಮಗಳು ಪ್ರತಿಮೆಯನ್ನು ಅರಸುತ್ತಾ ಕುದುರೆ ಸಾರೋಟಿನಲ್ಲಿ ಶ್ರೀರಂಗಂ ಪಟ್ಟಣಕ್ಕೆ ಬಂದಿಳಿದಳು. ಆದರೆ ಸಂಗೀತ ತಂಡದ ಸದ್ಸಸ್ಯರು ಶ್ರೀರಂಗಂ ಹಾದಿಯಲ್ಲಿ ಮಾರ್ಗ ಮಧ್ಯ ತಿರುಪತಿಯಲ್ಲಿ ಬೀಡು ಬಿಟ್ಟಿದ್ದರು. ಸುಲ್ತಾನನ ಮಗಳು ದೇವಸ್ಥಾನದಲ್ಲಿ ತಾನು ಪ್ರೀತಿಸುತ್ತಿದ್ದ ಶ್ರೀ ರಂಗನಾಥನ ಪ್ರತಿಮೆ ಇಲ್ಲದ್ದನ್ನುಕಂಡು ದೇಗುಲದ ಆವರಣದಲ್ಲಿ ಹೃದಯಾಘಾತದಿಂದ ಪ್ರಾಣ ಬಿಟ್ಟಳು ಎಂಬ ಕಥೆ ಐತಿಹ್ಯದಂತೆ ದಾಖಲಾಗಿದೆ. ಕಾರಣಕ್ಕಾಗಿ ರಂಗನಾಥನ ಗರ್ಭ ಗುಡಿಯ ಪಕ್ಕದ ಚಿಕ್ಕ ಗುಡಿಯೊಂದರಲ್ಲಿ ಆಕೆಯ ಬಣ್ಣದ ಚಿತ್ರವೊಂದನ್ನು ಬರೆದು, ಚಿತ್ರವನ್ನು ಮುತ್ತು ರತ್ನಗಳೊಂದಿಗೆ ಶೃಂಗರಿಸಿ, ಅವಳನ್ನು ಹಿಂದೂ ದೇವತೆಯಂತೆ ಚಿತ್ರಿಸಿ, ಪೂಜಿಸಲಾಗುತ್ತದೆ. ಮತ್ತು ವರ್ಷಕ್ಕೆ ಎರಡು ಬಾರಿ ವಯ್ಯಾರ ನಡೈ ಮತ್ತು ಕಲ್ಯಾಣೋತ್ಸವ ಎಂಬ ಎರಡು ಉತ್ಸವಗಳನ್ನು ನಡೆಸಲಾಗುತ್ತದೆ. ಆಕೆಯನ್ನು ಶ್ರೀರಂಗನಾಥನ ಪತ್ನಿ ಎಂದು ಭಾವಿಸಿ ಪೂಜೆ ಮಾಡಲಾಗುತ್ತಿದೆ. ಸುಲ್ತಾನನ ಮಗಳನ್ನು ತಮಿಳು ಭಾಷೆಯಲ್ಲಿ ತುಳಕ್ಕರ್ ನಾಚ್ಚಿಯಾರ್ ಎಂದು ಕರೆಯಲಾಗುತ್ತದೆ. (ತುಳಕ್ಕರ್ ಎಂಬುದು ತುರಕರು ಎಂಬ ಶಬ್ಧದ ಅರ್ಥ. ಟರ್ಕ್ ಮೂಲದಿಂದ ಬಂದರ ಮುಸ್ಲಿಮರನ್ನು ಟರ್ಕರು ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಶಬ್ದ ಆಡು ಭಾಷೆಯಲ್ಲಿ ಅದು ತುರಕರು ಎಂದಾಯಿತು.)



                                                     (ಶ್ರೀ ರಂಗಂ ನ ತುಳಕ್ಕರ್ ನಾಚ್ಚಿಯಾರ್)

ತನ್ನ ಪುತ್ರಿಯು ಶ್ರೀರಂಗಂ ದೇವಸ್ಥಾನದಲ್ಲಿ  ಪ್ರಾಣಬಿಟ್ಟ ವಿಷಯ ತಿಳಿದ ದೊರೆ ಅಲ್ಲಾವುದ್ದೀನ್ ಖಿಲ್ಜಿಯು ದೇವಾಲಯವನ್ನು ನಾಶಪಡಿಸಲು ಆದೇಶ ನೀಡಿ  ತನ್ನ ಸೇನೆಯನ್ನು ಶ್ರೀರಂಗಂಗೆ ಕಳುಹಿಸುತ್ತಾನೆ. (ಕ್ರಿ.. 1316 ರಲ್ಲಿ) ಕೌಸರ್ಖಾನ್ ಎಂಬುವನ ನೇತೃತ್ವದ ಸೇನೆ ಶ್ರೀ ರಂಗಂ ಪಟ್ಟಣಕ್ಕೆ ದಾಳಿಯಿಟ್ಟಾಗ   ರಂಗನಾಯಕಿ ಎಂಬ ಹೆಣ್ಣು ಮಗಳು ಮೊದಲ ಮೂರು ದಿನಗಳ ಕಾಲ ವೈಷ್ಣವ ಅನುಯಾಯಿಗಳ ಮೂಲಕ ತಡೆಯೊಡ್ಡುತ್ತಾಳೆಆದರೆ,ಅಂತಿಮವಾಗಿ  ಶ್ರೀ ರಂಗನಾಥನ ರಕ್ಷಣೆಗೆ ನಿಂತ ರಂಗನಾಯಕಿಯೂ ಸೇರಿದಂತೆ 13 ಸಾವಿರ ಭಕ್ತರು ಸೇನೆಯ ದಾಳಿಯಲ್ಲಿ ಮರಣ ಹೊಂದುತ್ತಾರೆ ಸಂದರ್ಭದಲ್ಲಿ ದೇವಾಲಯದಲ್ಲಿ ಶ್ರೀ ರಂಗನಾಥನಿಗೆ ನರ್ತನ ಸೇವೆ ಮಾಡುತ್ತಿದ್ದ ಅನಾಮಿಕ ದೇವದಾಸಿಯೊಬ್ಬಳು ಸೇನಾಧಿಕಾರಿ ಕೌಸರ್ ಖಾನ್ ನನ್ನು ಪ್ರೀತಿಸುವ ನಾಟಕವಾಗಿ ದೇಗುಲದ ಗೋಪುರದ ನಾಲ್ಕಂತಸ್ತಿನ ಕಟ್ಟಡಕ್ಕೆ ಕರೆದೊಯ್ದು ಆತನನ್ನು ಕೆಳಕ್ಕೆ ದೂಡುವುದರ ಮೂಲಕ ಕೊಂದು ಹಾಕಿ, ತಾನು ಗೋಪುರದಿಂದ ಕೆಳಕ್ಕೆ ನೆಗೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶ್ರೀ ರಂಗನಾಥನ ದೇವಾಲಯವನ್ನು ದೆಹಲಿ ಸುಲ್ತಾನನ ಸೇನೆಯಿಂದ ರಕ್ಷಿಸಿ  ಹುತಾತ್ಮಳಾದ ಅನಾಮಿಕ ದೇವದಾಸಿಯ ಮಾಹಿತಿ ತಮಿಳುನಾಡಿನ  ದೇವಾಲಯಗಳ ಚರಿತ್ರೆಯಲ್ಲಿ ದಾಖಲಾಗಿದೆ. ಆದರೆ, ತಮಿಳುನಾಡು ಇತಿಹಾಸದಲ್ಲಿ ಮಲ್ಲಿಕಾಫರ್ ನನ್ನು ದೆಹಲಿಯ ದೊರೆ  ಎಂದು ದಾಖಲಿಸಲಾಗಿದೆ. ದೆಹಲಿ  ಸುಲ್ತಾನರ ಚರಿತ್ರೆಯಲ್ಲಿ ಮಲ್ಲಿಕಾಫರ್ ವಿವಾಹವಾದ ಬಗ್ಗೆಯಾಗಲಿ, ಆತನ ಪುತ್ರಿ ಕುರಿತ ವಿವರವಾಗಲಿ ಇಲ್ಲ. ಅಲ್ಲಾವುದ್ದೀನ್ ಖಿಲ್ಜಿಯ ಕೊನೆಯ ಐದು ವರ್ಷಗಳ ಆಳ್ವಿಕೆಯನ್ನು ಮತ್ತು ದಕ್ಷಿಣ ಭಾರತದ ಮೇಲೆ ಮೂರು ಬಾರಿ ದಂಡೆತ್ತಿ ಬಂದ ವಿವರಗಳನ್ನು ಜೈಉದ್ದೀನ್ ಬರಾನಿ ದಾಖಲಿಸಿದ್ದು, ಇದರಲ್ಲಿಯೂ ಸಹ ಮಲ್ಲಿಕಾಫರ್ ಕುಟುಂಬದ ಬಗ್ಗೆ ಮಾಹಿತಿ ಇಲ್ಲ.

ಮೇಲಿನ ಘಟನೆಗೂ ಮತ್ತು ಇದಕ್ಕೂ ಮುನ್ನ ಸರಿ ಸುಮಾರು 200 ವರ್ಷಗಳ ಹಿಂದೆ ಅಂದರೆ ಹನ್ನೊಂದನೆಯ ನೆಯ ಶತಮಾನದಲ್ಲಿ ನಡೆದ ಕರ್ನಾಟಕದ ಮೇಲುಕೋಟೆಯ ಚಲುವನಾರಾಯಣ ಸ್ವಾಮಿ  ಘಟನೆಗೂ ಹೋಲಿಕೆ ಇರುವುದು ಕುತೂಹಲಕರ ಸಂಗತಿಯಾಗಿದೆ. ಹನ್ನೊಂದನೆಯ ಶತಮಾನದ ದೆಹಲಿಯ ಮಹಮ್ಮದ್ ಘೋರಿ ಆಳ್ವಿಕೆಂಕಾಲದಲ್ಲಿ ನಡೆದಿರಬಹುದಾದ  ಘಟನೆಯ ಪ್ರಮುಖರು ಎಂದರೆ, ಶ್ರೀ ರಾಮಾನುಜಾ ಚಾರ್ಯರು, ಮೇಲುಕೋಟೆಯ ಚಲುವ ನಾರಾಯಣಸ್ವಾಮಿ ಮತ್ತು ದೆಹಲಿ ಸುಲ್ತಾನಳ ಮಗಳು ಬೀಬಿ ನಾಚ್ಚಿಯಾರ್.
ರಾಮಾನುಜಾಚಾರ್ಯರಿಗೆ ಸಂಬಂಧಿಸಿದ ಘಟನೆಯಲ್ಲಿ ಇತಿಹಾಸದ ಕೆಲವು ತೊಡಕುಗಳಿವೆ. ಸುಮಾರು 120 ವರ್ಷ ಬದುಕಿದ್ದರು ಎಂದು ಹೇಳಲಾಗುವ ರಾಮಾನುಜರ ಬದುಕಿನ ಕಾಲಘಟ್ಟದಲ್ಲಿ ಅಂದರೆ ಕ್ರಿ.. 1017 ರಿಂದ 1037   ಹನ್ನೊಂದು ಮತ್ತ ಹನ್ನೆರೆಡನೆಯ ಶತಮಾನದಲ್ಲಿ ರಾಮಾನುಜ ಚಾರ್ಯರುರು ದೆಹಲಿಗೆ ಹೋಗಿದ್ದ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೆಹಲಿಯ ಸುಲ್ತಾನನ ಮಗಳು ಆಟದ ಬೊಂಬೆಯಾಗಿಸಿಕೊಂಡಿದ್ದ ಚಲುವನಾರಾಯಣನ ಮೂರ್ತಿಯನ್ನು ರಾಮಾನುಜಾಚಾರ್ಯರು ಮೇಲುಕೋಟೆಗೆ ವಾಪಸ್ ತಂದರು ಎಂದು ಹೇಳಲಾಗುವ ಕಥೆಯಲ್ಲಿ ಕೆಲವು ತೊಡಕುಗಳಿವೆ. ಏಕೆಂದರೆ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಆರಂಭಗೊಂಡಿದ್ದು 1206 ರಲ್ಲಿ ಅಂದರೆ 13 ನೆಯ ಶತಮಾನದಲ್ಲಿ. ( 1206 ರಿಂದ 10 ರವರೆಗೆ ಕುತ್ಬುದ್ದೀನ್ ಐಬಕ್ ಹಾಗೂ 1210 ರಿಂದ 12 ರವರೆಗೆ ಅರಮ್ ಷಾ ಎಂಬುವರು ಆಳಿವಿಕೆ ನಡೆಸಿದ್ದಾರೆಇದಕ್ಕೂ ಮುನ್ನ ದೆಹಲಿಯನ್ನು ನಿಯಂತ್ರಣಕ್ಕೆ ತಂದಕೊಂಡಿದ್ದವರು ಎಂದು ಹೇಳಲಾಗುವ  ಮಹಮ್ಮದ್ ಘೋರಿ ಮತ್ತು ಅವನಿಗಿಂತ ಮುಂಚಿನ ಮಹವiದ್ ಘಜ್ನಿ ಪ್ರಮುಖರು. ರಾಮಾನುಜಾರವರ ಕಾಲಘಟ್ಟದಲ್ಲಿ ಮಹವiದ್ ಘೋರಿ  ದೆಹಲಿಯ ಆಳ್ವಿಕೆ ನಡೆಸಿರುವುದು ಕಂಡುಬರುತ್ತದೆ. ಆದರೆ, ಇತಿಹಾಸದ ಬಹುಮುಖ್ಯ ಗೊಂದಲಗಳೆಂದರೆ, ಮಹಮ್ಮದ್ ಘೋರಿಯಾಗಲಿ, ಮಹಮ್ಮದ್ ಘಜ್ನಿಯಾಗಲಿ ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದವರಲ್ಲ. ಅವರು ಯಾವುದೇ ದೇವಾಲಯಗಳನ್ನು ಕೊಳ್ಳೆ ಹೊಡೆಯಲಿಲ್ಲ. ಇವರ ಆಳ್ವಿಕೆಯಲ್ಲಿ ಗುಜರಾತಿನ ಸೋಮನಾಥ ದೇವಾಲಯವೂ ಸೇರಿದಂತೆ ರಾಜಸ್ಥಾನ ಮತ್ತು ಉತ್ತರ ಭಾರತದಲ್ಲಿ ಮಥುರಾ ಸೇರಿದಂತೆ  ಅನೇಕ ಜೈನ ಹಾಗೂ ವೈಷ್ಣವ ದೇವಾಲಯಗಳು ನಾಶವಾದವು. ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಮೊದಲಿಗೆ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದವನು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಹಾಗಾದರೆ, ಮೇಲುಕೋಟೆಯ ಚಲುವನಾರಾಯಣ ಸ್ವಾಮಿಯ ವಿಗ್ರಹವನ್ನು ದೆಹಲಿಗೆ ಕೊಂಡೊಯ್ದವರು ಯಾರು? ಕುರಿತು ಇತಿಹಾಸ ತಜ್ಞರು ಗಮನ ಹರಿಸಬೇಕಿದೆ.


                                                      (ಮೇಲುಕೋಟೆಯ ಬೀಬಿ ನಾಚ್ಚಿಯಾರ್)

ತಮಿಳುನಾಡಿನ ಶ್ರೀ ಪೆರಬಂದೂರಿನಲ್ಲಿ ಜನಿಸಿ, ಶ್ರೀರಂಗನಲ್ಲಿ ನೆಲೆ ನಿಂತು ವೈಷ್ಣವ ಪಂಥವನ್ನು ಬಲಪಡಿಸಿದವರಲ್ಲಿ ರಾಮಾನುಜಾಚಾರ್ಯರು ಮುಖ್ಯರು. ತಮ್ಮ ಗುರುಗಳು ಹಾಗೂ ಆಶ್ರಯದಾತ ಚೋಳರಾಜನೊಂದಿಗೆ ತತ್ವ ಸಿದ್ಧಾಂತಗಳ ಕುರಿತಂತೆ ಭಿನ್ನಾಬಿಪ್ರಾಯಗಳು ಸ್ಪೋಟಗೊಂಡಾಗ  ತಮಿಳುನಾಡನ್ನು ತೊರೆದು ಕಾವೇರಿ ನದಿಯ ಜಾಡು ಹಿಡಿದು ತನ್ನ ಕೆಲವು ಶಿಷ್ಯರೊಂದಿಗೆ ಕರ್ನಾಟಕಕ್ಕೆ ಬಂದವರು. ಹನ್ನೊಂದನೆಯ ಶತಮಾನದಲ್ಲಿ  ದಕ್ಷಿಣ ಕರ್ನಾಟಕವನ್ನು ಆಳುತ್ತಿದ್ದ  ಹೊಯ್ಸಳ ದೊರೆ ಬಿಟ್ಟಿದೇವನಿಗೆ ವೈಷ್ಣವ ಧರ್ಮವನ್ನು ಸ್ವೀಕರಿಸುವಂತೆ ಮಾಡಿ ಆತನಿಗೆ  ವಿಷ್ಣವರ್ಧನ ಎಂದು ನೂತನ ಹೆಸರಿನಿಂದ ಕರೆದವರುಹೊಯ್ಸಳ ದೊರೆ ವಿಷ್ಣು ವರ್ಧನನ ಆಳ್ವಿಕೆಯಲ್ಲಿ ಕರ್ನಾಟಕದ ಅನೇಕ ಸಮುದಾಯಗಳು ವಿಶೇóಷವಾಗಿ ತಳ ಸಮುದಾಯದಿಂದ ಬಂದ ಅಸ್ಪøಶ್ಯರು ರಾಮಾನುಜಾಚಾರ್ಯರಿಂದ ವೈಷ್ಣವ ಧರ್ಮದ ದೀಕ್ಷೆ ಸ್ವೀಕರಿಸಿದ್ದು ವಿಶೇಷವಾಗಿತ್ತು. ಮೇಲುಕೋಟೆಯಲ್ಲಿ ಕೇವಲ ಹನ್ನೆರೆಡು Àರ್ಷ ವಾಸವಾಗಿದ್ದ ರಾಮಾನುಜರು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಕಾಶಿ ಯಾತ್ರೆ ಕೈಗೊಂಡಿದ್ದಾಗ, ದೆಹಲಿಗೆ ತೆರಳಿ ಚಲುವನಾರಾಯಣ ಮೂರ್ತಿಯನ್ನು ದೆಹಲಿಯ ಸುಲ್ತಾನರಿಂದ ವಾಪಸ್ ಪಡೆದು ತಂದರು ಎಂದು ಹೇಳಲಾಗಿದೆ. ರಾಮಾನುಜರ ಯಾತ್ರೆ ಕುರಿತಂತೆ ಪ್ರಥಮವಾಗಿ 15 ನೇ ಶತಮಾನದಲ್ಲಿ ಆಂಧ್ರಪ್ರದೇಶದ ತಾಲಪಾಕ ಅನ್ನಯ್ಯ ಎಂಬುವರುಚಲ್ಲಪಿಲ್ಲುರಾಯ ಚರಿತ್ರಮುಎಂಬ ಯಕ್ಷಗಾನ ಮಾದರಿಯ ಕೃತಿಯನ್ನು ರಚಿಸಿದ್ದಾರೆ. ( ಕೃತಿಯನ್ನು ಇತ್ತೀಚೆಗೆ ಅಂದರೆ 1982 ರಲ್ಲಿ ಗುಂತಕಲ್ಲಿನ ಪ್ರಕಾಶ್ ರಾವ್ ಎಂಬುವರು ಸಂಪಾದಿಸಿ ಮರು ಪ್ರಕಟಿಸಿದ್ದಾರೆ) ಇದನ್ನು ಹೊರತು ಪಡಿಸಿದರೆ, ದೆಹಲಿಯ ಸುಲ್ತಾನನು ದಕ್ಷಿಣ ಭಾರತದ ಹಿಂದೂ ಪಂಡಿತನನ್ನು ಆಸ್ಥಾನಕ್ಕೆ ಆಹ್ವಾನಿಸಿ ಗೌರವಿಸಿದ್ದನ್ನು ದೆಹಲಿಯ ಮುಸ್ಲಿಂ ಧರ್ಮಗುರುಗಳು ಖಂಡಿಸಿರುವ ಸಂಗತಿಯೊಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ದೆಹಲಿಯ ಸುಲ್ತಾನನ ಮಗಳು ಚಲುವ ನಾರಾಯಣ ಪ್ರತಿಮೆಯೊಂದಿಗೆ ಮೇನಕೆಯಲ್ಲಿ ಕುಳಿತು ರಾಮಾನುಜಾ ಚಾರ್ಯರ ಜೊತೆ ಮೇಲುಕೋಟೆಗೆ ಬಂದಳು ಎಂಬುವುದರಿಂದ ಹಿಡಿದು, ಅವರು ಬರುವ ದಾರಿಯಲ್ಲಿ ರಾಜಪರಿವಾರ ಎಂದು ತಿಳಿದು ಡಕಾಯಿತರು ಮಾರ್ಗ ಮಧ್ಯೆ ದಾಳಿ ಮಾಡಿದಾಗ ಸ್ಥಳಿಯ ಬುಡಕಟ್ಟು ಜನ (ತಳ ಸಮುದಾಯದ ಜನ) ಅವರಿಬ್ಬರನ್ನು ರಕ್ಷಿಸಿದರು ಎಂದು ಆಂಧ್ರದ ತೆಲುಗು ಸಾಹಿತ್ಯದಲ್ಲಿ ದಾಖಲಾಗಿದೆ. (ರಾಮಾನುಜಾ ಚಾರ್ಯರು ಮಂಡ್ಯ ಜಿಲ್ಲೆಯಲ್ಲಿ ಹರಿಜನರಿಗೆ ವೈಷ್ಣವ ದೀಕ್ಷೆ ಕೊಡಲು ಘಟನೆ ಪ್ರೇರೇಪಣೆಯಾಗಿರಬಹುದೆ ಕುರಿತು ಹೆಚ್ಚಿನ ಅದ್ಯಯನದ ಅಗತ್ಯವಿದೆ.)  ಇದಕ್ಕೆ ಪೂರಕವೆಂಬಂತೆ ಸುಲ್ತಾನನ ಮಗಳು ಮೇಲುಕೋಟೆಯ ಚಲುವನಾರಾಯಣ ದೇಗುಲದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಹಾಜರಿದ್ದು, ವೈಷ್ಣವ ಭಕ್ತರಿಗೆ ಚಲುವನಾರಾಯಣನ ಮೇಲಿರುವ ಪ್ರೀತಿ ಕಂಡು ಅಚ್ಚರಿ ಪಟ್ಟಳು. ಆನಂತರ ಆಕೆ ದೆಹಲಿಗೆ ಹಿಂತಿರುಗದೆ ಮೇಲುಕೋಟೆಯಲ್ಲಿ ನೆಲೆ ನಿಂತಳು ಎಂಬ ಕಥೆ  ಈಗಲೂ ಮೇಲುಕೋಟೆಯಲ್ಲಿ ಜನಜನಿತವಾಗಿದೆ. ಈಕೆಗೆ ಸ್ಥಳಿಯ ಹರಿಜನರು ಆಶ್ರಯ ನೀಡಿದ್ದರು ಎಂದು ಸಹ ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಬೇಬಿ ಎಂಬ ಗ್ರಾಮವಿದ್ದು ನಾಗಮಂಗಲ ತಾಲ್ಲುಕು ಬಸರಾಳು ಹೋಬಳಿಗೆ ಸೇರಿರುವ  ಊರಿನಲ್ಲಿ ಶೇಕಡ ತೊಂಬತ್ತರಷ್ಟು ಜನ ಹರಿಜನರಿದ್ದಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬೇಬಿ ಜಾತ್ರೆ ಎಂಬ ಉತ್ಸವ ಊರಿನಲ್ಲಿ ನಡೆಯುತ್ತಿದೆ. ದಿನ ಸ್ಥಳಿಯ ಹರಿಜನರು ಬೀಬಿನಾಚ್ಚಿಯಾರ್ ಮತ್ತು ಚಲುವನಾರಾಯಣ ಪ್ರೇಮ ಕಥೆ ಕುರಿತಂತೆ ಇಡೀ ರಾತ್ರಿ ಜನಪದ ಹಾಡುಗಳನ್ನು ಹಾಡುತ್ತಾರೆ. ಬೀಬಿ ನಾಚ್ಚಿಯಾರ್ ವಾಸವಾಗಿದ್ದಳು ಎಂಬ ಮಂಟಪ, ಗುಹೆ ಈಗಲೂ ಅಸ್ತಿತ್ವದಲ್ಲಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಶೆಲ್ವಪಿಳ್ಳೈ ಎಂದು ವೈಷ್ಣವರು ಪ್ರೀತಿಯಿಂದ ಕರೆಯುವ ಚಲುವನಾರಾಯಣ ಸ್ವಾಮಿಯ ದೇಗುಲದಲ್ಲಿ ಚಲುವನಾರಾಯಣನ ಪ್ರತಿಮೆಯ ಕಾಲಿನ ಬಳಿ ಬೇಬಿ ನಾಚ್ಚಿಯಾರ್  ಪುಟ್ಟದೊಂದು ಪ್ರತಿಮೆಯಿದೆ. ಪ್ರತಿಮೆಗೆ ಪ್ರತಿದಿನ ಚಲುವನಾರಾಯಣನ ಜೊತೆಗೆ ಪೂಜೆ ಸಲ್ಲಿಸಲಾಗುತ್ತಿದೆ. ಇವೆಲ್ಲಕ್ಕಿಂತ ಬಹು ಮುಖ್ಯ ಸಂಗತಿಯೆಂದರೆ, ಮೇಲುಕೋಟೆಗೆ ಅಥವಾ ಕನ್ನಡ ನಾಡಿಗೆ  ಏನೇನೂ ಸಂಬಂಧ ಪಡದ ದೂರದ ಆಂಧ್ರಪ್ರದೇಶದಲ್ಲಿ ಘಟನೆ ಕುರಿತಂತೆ ತೆಲುಗು ಭಾಷೆಯಲ್ಲಿ ನಾಲ್ಕು ಕೃತಿಗಳು ರಚಿತವಾಗಿದ್ದು, ಎಲ್ಲವೂ ಯಕ್ಷಗಾನ ಮಾದರಿಯ ನಾಟಕ ಮತ್ತು ಕಾವ್ಯದ ರೂಪದಲ್ಲಿವೆ. ಈಗಾಗಲೇ ಹೇಳಿದಂತೆ ತಾಳಪಾಕ ಅನ್ನಯ್ಯನ ಕೃತಿಯಲ್ಲದೆ, 1880 ರಲ್ಲಿ ಕತ್ರಂಬಕ ಕೇಶವಚಾರ್ಯ ಎಂಬಾತನಿಂದ ಮತ್ತೊಂದು ಕೃತಿ ರಚಿತವಾಗಿದ್ದು ಕೃತಿಯನ್ನು ರಾಮಾನುಜಾಚಾರ್ಯರು ಜನಿಸಿದ  ತಮಿಳು ನಾಡಿನ ಶ್ರೀ ಪೆರಬಂದೂರಿನ ಬೂತ ಪುರೀಶ್ವರ ಎಂಬ ದೇವರಿಗೆ ಅರ್ಪಿಸಲಾಗಿದ್ದು, ಭುವನಗಿರಿ ರಂಗಯ್ಯ ಶೆಟ್ಟಿ ಎಂಬುವರಿಂದ ಕೃತಿ ಪ್ರಕಟಗೊಂಡಿದೆ.
ಮತ್ತೊಂದು ಕೃತಿಯು ಅಲಮೇಲ್ ಮಂಗ ತಾಯಮ್ಮ ಎಂಬ ಮಹಿಳೆಯಿಂದ ರಚಿತಗೊಂಡು ಕೃತಿಯು ವಿಜಯವಾಡ ಸಮೀಪದ ಬೇಜವಾಡ ಎಂಬ ಊರಿನಲ್ಲಿ ವಾಣಿ ಮುದ್ರಾಕ್ಷರ ಶಾಲಾ ಎಂಬ ಮುದ್ರಾಣಾಲಯದಿಂದ 1910 ರಲ್ಲಿ ಪ್ರಕಟವಾಗಿದೆ. ನಾಲ್ಕನೆಯ ಕೃತಿಯ ಹೆಸರು ಸುರತನಿ ಕಲ್ಯಾಣ ಎಂಬುದಾಗಿದೆ. (ಸುರತನಿ ಎಂದರೆ, ಸುಲ್ತಾನಿ ಅರ್ಥಾತ್ ಸುಲ್ತಾನನ ಮಗಳು ಎಂದರ್ಥ) ಪುಸ್ತಕದಲ್ಲಿ ಲೇಖಕರ ಹೆಸರು ದಾಖಲಾಗಿಲ್ಲ. ಆದರೆ, 1925 ರಲ್ಲಿ ರಾಜಮಂಡ್ರಿ ಪಟ್ಟಣದ  ಕಗ್ರಿ ಆಚಾರ್ಯ ಅಂಡ್ ಸನ್ಸ್ ಎಂಬ ಸಂಸ್ಥೆಯಿಂದ ಕೃತಿ ಪ್ರಕಟವಾಗಿದೆ.

ತಿರುಚ್ಚರಾಪಳ್ಳಿ ಸಮೀಪದ ಶ್ರೀರಂಗ ದೇವಾಲಯದ ತುಳಕ್ಕ ನಾಚ್ಚಿಯಾರ್ ಮತ್ತು ಮೇಲುಕೋಟೆಯ ಬೀಬಿ ನಾಚ್ಚಿಯಾರ್   ಕುರಿತ ಇತಿಹಾಸದ ಗೊಂದಲಗಳು ಮತ್ತು ಐತಿಹ್ಯದ ಸಂದೇಹಗಳು ಏನೇ ಇರಲಿ, ದಿನಗಳಲ್ಲಿಯೂ ಸಹ ಹಿಂದೂ ದೇವಾಸ್ಥಾನಗಳಲ್ಲಿ ಇಬ್ಬರು ಮುಸ್ಲಿಂ ಹೆಣ್ಣುಮಕ್ಕಳು ದೇವತೆಗಳಾಗಿ ಪೂಜಿಸ್ಪಡುತ್ತಿರುವುದನ್ನು ಹಾಗೂ ಇದಕ್ಕೆ ಕಾರಣವಾದ ಹಿಂದೂ ಧರ್ಮದ ಉಧಾರ ಮನೋಭಾವದ ಆಚರಣೆ ಮತ್ತು ಸಂಸ್ಕøತಿಯನ್ನು ನಾವು ತಳ್ಳಿ ಹಾಕಲು ಸಾಧ್ಯವೆ?


ತಲೆಮಾರಿನ ಹದಿ ಹರೆಯದ ಯುವಕರ ಎದೆಯೊಳಗೆ ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತುವಷ್ಟು ಸುಲಭವಾಗಿ ಭಾರತದ ಬಹುಸಂಸ್ಕøತಿಯ ಒಡಲೊಳಗೆ ಹಬ್ಬಿಕೊಂಡಿರುವ ಬಾಂಧವ್ಯದ ಬಳ್ಳಿಯ ಬೇರುಗಳನ್ನು ಅಷ್ಟೊಂದು ಸುಲಭವಾಗಿ ಕತ್ತರಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ನಡುವಿನ ಹಿಂದೂ ಧರ್ಮದ ಪರಮ ಪ್ರತಿಪಾದಕರು ಅರ್ಥ ಮಾಡಿಕೊಳ್ಳಬೇಕಾಗಿದೆ.
( ಜೂನ್ 2016 ರ  ಸಂವಾದ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)