ಹದಿನೆಂಟನೆಯ ಶತಮಾನದಲ್ಲಿ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮೈಸೂರು ಸಂಸ್ಥಾನವನ್ನು ದಶ ದಿಕ್ಕುಗಳಿಗೂ ವಿಸ್ತರಿಸಿದ ಟಿಪ್ಪು ಸುಲ್ತಾನ್ ಭಾರತದ ಚರಿತ್ರೆಯಲ್ಲಿ ತನ್ನ ಧೈರ್ಯ ಮತ್ತು ಸಾಹಸ ಪ್ರವೃತ್ತಿಗಳಿಂದಾಗಿ ಮೈಸೂರು ಹುಲಿ ಎಂಬ ಗೌರವದೊಂದಿಗೆ ಮಹತ್ವದ ಸ್ಥಾನ ಪಡೆದಿದ್ದಾನೆ. ತನ್ನ ಬದುಕಿನುದ್ದಕ್ಕೂ ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದುಕೊಂಡು 1799 ರ ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಹೋರಾಡುತ್ತಲೇ ರಣರಂಗದ ನಡುವೆ ಅಸುನೀಗಿದ ಟಿಪ್ಪು ಸುಲ್ತಾನ್ ಇತ್ತೀಚೆಗಿನ ದಿನಗಳಲ್ಲಿ ಹಲವು ಕಾರಣಕ್ಕಾಗಿ ಚರ್ಚೆಗೆ ಒಳಪಡುತ್ತಿದ್ದಾನೆ. ಅಪ್ರತಿಮ ಕನಸುಗಾರ ಮತ್ತು ಅಭಿವೃದ್ಧಿಯ ಹರಿಕಾರನಾಗಿದ್ದ ಟಿಪ್ಪುಸುಲ್ತಾನನ ಇತಿಹಾಸವನ್ನು ಧರ್ಮದ ಹಿನ್ನಲೆಯಲ್ಲಿ ಚರ್ಚೆಗೆ ಒಳಪಡಿಸುವುದರ ಮೂಲಕ ಇತಿಹಾಸಕ್ಕೆ ಮಸಿ ಬಳಿಯುವ ಕಾರ್ಯ ವ್ಯವಸ್ಥಿತವಾಗಿ ನಿರಂತರ ನಡೆಯುತ್ತಲೇ ಬಂದಿದೆ. ದೇಶಭಕ್ತಿಯ ನೆಪದಲ್ಲಿ ಸಂಘ ಪರಿವಾರದ ಭಕ್ತರಿಗೆ ಟಿಪ್ಪುವನ್ನು ಟೀಕಿಸುವುದು ಮನೋವ್ಯಾಧಿಯಾಗಿ ಪರಿವರ್ತನೆಯಾಗಿದೆ.
ಟಿಪ್ಪುಸಲ್ತಾನ್ ದೇಶ ಭಕ್ತನಲ್ಲ, ಆತ ದೇಶ ದ್ರೋಹಿ ಮತ್ತು ಹಿಂದೂ ಧರ್ಮದ ಕಡು ವಿರೋಧಿ ಹೀಗೆ ಹತ್ತಾರು ಹುಸಿ ಆರೋಪಗಳನ್ನು ಹೊರಿಸುವುದರ ಮೂಲಕ ಮಾನಸಿಕವಾಗಿ ಮತ್ತು ಭೌತಿಕವಾಗಿ ಬೆತ್ತಲಾಗುತ್ತಿರುವ ರಾಜಕೀಯ ಪಕ್ಷಗಳು ಮತ್ತು ಕೆಲವು ಧಾರ್ಮಿಕ ಸಂಘಟನೆಗಳು ಇತಿಹಾಸವನ್ನು ಅರಿಯದ ಇಂದಿನ ಯುವತಲೆಮಾರಿನ ಎದೆಯಲ್ಲಿ ವಿಷ ಬೀಜವನ್ನು ಬಿತ್ತುತ್ತಿವೆ. ಒಂದು ಇತಿಹಾಸವನ್ನು ನಿರ್ವಿಕಾರವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ವಸ್ತುನಿಷ್ಟ ನೆಲೆಯಲ್ಲಿ ನೋಡಲಾಗದ ಅವಿವೇಕಿಗಳು ಮಾತ್ರ ಇಂತಹ ಕ್ರಿಯೆಯಲ್ಲಿ ತೊಡಗಬಲ್ಲರು.
ಲೇಖಕ ಮಿತ್ರ ಉಡುಪಿಯ ಕೆ.ಪಣಿರಾಜ್ ಭಾರತದಲ್ಲಿ ಇತಿಹಾಸ ಸೃಷ್ಟಿಯಾಗುವ ಎರಡು ಬಗೆಯ ಮಾರ್ಗಗಳನ್ನು ಗುರುತಿಸುತ್ತಾರೆ. ಅವುಗಳೆಂದರೆ, ಒಂದು ಜನಪದೀಯ ಮಾರ್ಗ, ತಾವು ಬದುಕಿದ್ದ ಕಾಲಘಟ್ಟದಲ್ಲಿ ಜನಸಾಮಾನ್ಯರ ಮತ್ತು ದಮನಿತರ ಪರವಾಗಿ ಹೋರಾಡಿದ ದೊರೆ ಅಥವಾ ಸಾಮ್ರಾಟನನ್ನು ನಮ್ಮ ಜನಪದರು ತಮ್ಮ ಅಲಿಖಿತ ಕಾವ್ಯಗಳ ಮೂಲಕ ಅಂದರೆ ಮೌಖಿಕ ಕಾವ್ಯÀ ಮತ್ತು ಲಾವಣಿಗಳ ಮೂಲಕ ಕೃತಜ್ಞಾಪೂರ್ವಕವಾಗಿ ಸ್ಮರಿಸಿಕೊಂಡಿರುವ ಇತಿಹಾಸ. ಇಂತಹ ನೈಜ ಇತಿಹಾಸಗಳಲ್ಲಿ ದ್ವೇóಷ, ಅಸೂಯೆಗಳಿಲ್ಲದೆ ನಿಷ್ಕಲ್ಮಷ ಪ್ರೀತಿಯನ್ನು ಮಾತ್ರ ನಮ್ಮ ಪ್ರಾಚೀನ ಜಗತ್ತಿನ ಅನಕ್ಷರಸ್ತರು ಮೌಖಿಕ ಕಾವ್ಯದ ಮೂಲಕ ಕಟ್ಟುಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರುವ ಇನ್ರ್ನೆಂದು ಇತಿಹಾಸವೆಂದರೆ ಪುರಾಣ ಮತ್ತು ಐತಿಹ್ಯಗಳ ಮಾರ್ಗ. ದಮನಿತರು ಮತ್ತು ಜನಸಾಮಾನ್ಯರ ಪರವಾಗಿ ನಿಂತು ಮೇಲ್ವರ್ಗದ ಪಟ್ಟ ಭದ್ರಹಿತಾಶಕ್ತಿಗಳ ಬೇರುಗಳನ್ನು ಅಲುಗಾಡಿಸಿದ ದೊರೆಗಳನ್ನು ಅಕ್ಷರ ಬಲ್ಲ ಸಮುದಾಯದ ಮಂದಿ ತಮ್ಮ ಮೂಗಿನ ನೇರಕ್ಕೆ ಹಾಗೂ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸೇಡಿನ ವಿದ್ಯಾಮಾನವಾಗಿ ಬಣ್ಣಿಸುತ್ತಾ ನೈಜ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡಿದ್ದಾರೆ. ಇಂತಹ ತಂತ್ರ ಕಾಲದ ಅಗತ್ಯಕ್ಕೆ ತಕ್ಕಮತೆ ಬದಲಾಗುತ್ತಾ ಹೋಗುತ್ತದೆ.
ನಾವೀಗ ಬದುಕುತ್ತಿರುವ ವರ್ತಮಾನದ ಜಗತ್ತಿನಲ್ಲಿ ಈಗ ಎರಡನೇ ಬಗೆಯ ಪೊಳ್ಳು ಇತಿಹಾಸ ಚಾಲ್ತಿಯಲ್ಲಿದೆ. ಆಶ್ಚರ್ಯಕರ ಸಂಗತಿಯೆಂದರೆ, ಟಿಪ್ಪು ಆಳಿದ ನೆಲದಲ್ಲಿ ಹುಟ್ಟಿ ಬೆಳೆದ ನಾನು(ಮಂಡ್ಯ ಜಿಲ್ಲೆ) ಈ ಜಗತ್ತನ್ನು ಗ್ರಹಿಸಲು ಆರಂಭಿಸಿದ ಐವತ್ತು ಮೂರುವರ್ಷಗಳಲ್ಲಿ (1966 ರ ಹತ್ತನೇ ವಯಸ್ಸಿನಿಂದ) ಮೈಸೂರು ಅಥವಾ ಮಂಡ್ಯ ಜಿಲ್ಲೆಯ ಸೀಮೆಯಲ್ಲಿ ಟಿಪ್ಪು ಕುರಿತಂತೆ ಈವರೆಗೆ ಒಂದೇ ಒಂದು ಅಪಸ್ವರವನ್ನು ಕೇಳಿಲ್ಲ. ಟಿಪ್ಪು ಸುಲ್ತಾನ್ ಸೆರೆಹಿಡಿದು ತಂದು ಬಲಾತ್ಕರವಾಗಿ ಮತಾಂತರಿಸಿದ ಎಂದು ಹೇಳುವ ಒಂದೇ ಒಂದು ಜೀವ ಅತವಾ ಸಮುದಾಯ ಈವರೆಗೆ ನನ್ನ ಕಣ್ಣಿಗೆ ಬಿದ್ದಿಲ್ಲ. ( ಟಿಪ್ಪು ಸೇನೆಯಲ್ಲಿ ಚೇಲಾ ರೆಜಿಮೆಂಟ್ ಎಂದು ಸೈನಿಕರ ಶಾಖೆಯೊಂದು ಅಸ್ತಿತ್ವದಲ್ಲಿತ್ತು. ಇದರಲ್ಲಿ ಟಿಪ್ಪು ವಿರುದ್ಧ ಯುದ್ಧದಲ್ಲಿ ಸೋತು ಶರಣಾದ ಸೈನಿಕರು ಮತ್ತು ದೇವದಾಸಿ ಹಾಗೂ ವೃತ್ತಿ ನಿರತ ವೈಶ್ಯೆಯರ ಗಂಡು ಮಕ್ಕಳು ಸ್ವಇಚ್ಚೆಯಿಂದ ಇಸ್ಲಾಮ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ಅಂತಹವರನ್ನು ಸೇನೆಯ ಸಹಾಯಕ್ಕೆ ನಿಯೋಜಿಸಿ ಚೇಲಾ ರೆಜಿಮೆಂಟ್ ಎಂದು ನಾಮಕರಣ ಮಾಡಿದ್ದ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ.) ಆದರೆ, ಇದಕ್ಕೆ ಪ್ರತಿಯಾಗಿ ಶ್ರೀರಂಗಪಟ್ಟಣವನ್ನು ಆಳುತ್ತಾ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ನನ್ನ ನೆಲಕ್ಕೆ ಪರಿಚಯಿಸಿದ ಭತ್ತದ ತಳಿಗಳು, ಕಬ್ಬಿನ ತಳಿಗಳು, ಬಾಳೆ, ತೆಂಗು, ಮಾವು, ರೇಷ್ಮೆ ಇವೆಲ್ಲವೂ ಇಂದಿಗೂ ಅಸ್ತಿತ್ವದಲ್ಲಿವೆ. ನನ್ನೂರು ಕೊಪ್ಪ ಗ್ರಾಮದಲ್ಲಿ P್ವರೆಯ ಏರಿಯ ಕೆಳಗಿನ ತೆಂಗಿನ ತೋಟದಲ್ಲಿ ನಾನು ಜನಿಸುವ ಒಂದು ವರ್ಷಕ್ಕೆ ಮುನ್ನ ಅಂದರೆ 1955 ರಲ್ಲಿ ನಿಧನ ಹೊಂದಿದÀ ಮದ್ದನಹಟ್ಟಿ ನಂಜೇಗೌಡ ಎಂಬ ಹೆಸರಿನ ನನ್ನಜ್ಜ ಬೆಳೆಸಿದ ತೆಂಗು, ಮಾವು ಹಾಗೂ ಹುಣಸೆ ಮರಗಳು ಇಂದಿಗೂ ಫಲ ನೀಡುತ್ತಿವೆ. ಹೀಗೆ ನಮ್ಮ ಕಣ್ಣೆದುಗಿನ ಇಂತಹ ಕಟು ವಾಸ್ತವ ಸಂಗತಿಗಳನ್ನು ಇಟ್ಟುಕೊಂಡು ಟಿಪ್ಪು ಕುರಿತು ಅವಹೇಳನಕಾರಿ ಮಾತನಾಡುವುದೆಂದರೆ ಅದು ಆತ್ಮವಂಚನೆಯ ಕೆಲಸವಾಗುತ್ತದೆ.
ಕನ್ನಡದ ಹಿರಿಯ ವಿದ್ವಾಂಸರಾದ ತಿ.ತಾ. ಶರ್ಮಾ, ಕೋ.ಚೆನ್ನಬಸಪ್ಪ, ಪ್ರೊ. ಶೇಖ್ಆಲಿ ಹಾಗೂ ಮೈಸೂರು ಮೂಲದ ನಮ್ಮ ಹಿರಿಯ ಮಿತ್ರರಾಗಿದ್ದುಕೊಂಡು, ಪ್ರಖರ ಚಿಂತಕರಾಗಿದ್ದ ದಿವಂಗತ ಸಾಕೇತ್ ರಾಜನ್ ಇಂಗ್ಲೀಷ್ ಭಾಷೆಯಲ್ಲಿ ರಚಿಸಿರುವ “ಮೇಕಿಂಗ್ ಹಿಸ್ಟರಿ" ಎಂಬ ಎರಡು ಸಂಪುಟಗಳಲ್ಲಿರುವ ಮಹತ್ವ ಕೃತಿಗಳು ನಮಗೆ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಅವಧಿಯಲ್ಲಿ ಜಾರಿಗೆ ಸಾಮಾಜಿಕ ಸುಧಾರಣೆಗಳು ಮಾತ್ರವಲ್ಲದೆ ಕೃಷಿರಂಗ ಮತ್ತು ರೈತರಿಗೆ ನೆರವಾದ ಪ್ರತಿಯೊಂದು ಸಂಗತಿಯೂ ಪುರಾವೆಗಳ ಮೂಲಕ ದಾಖಲಾಗಿವೆ. ಈ ಕೃತಿಗಳಿಗೆ ಪೂರಕವಾಗಿ ಈ ಭಾಗದಲ್ಲಿ ಸಂಚರಿಸಿದ ಅಬುದುಬೆ ಎಂಬ ಪ್ರಾನ್ಸ್ ಮೂಲದ ಕ್ರೈಸ್ತ ಪಾದ್ರಿ ಸಂಪಾದಿಸಿರುವ ಟಿಪ್ಪು ಕುರಿತ ಲಾವಣಿಗಳು, ಹಾಗೂ ಪ್ರಾನ್ಸಿಸ್ ಬುಖ್ಯಾÀನನ್ ಎಂಬ ಸಸ್ಯ ಶಾಸ್ತ್ರಜ್ಞ ದಕ್ಷಿಣ ಭಾರತವನ್ನು ಎತ್ತಿನ ಗಾಡಿಯಲ್ಲಿ ಪ್ರವಾಸ ಮಾಡುತ್ತಾ ದಾಖಲಿಸಿದ " ಎ ಜರ್ನಿ ಫ್ರಂ ಮದ್ರಾಸ್ ಥ್ರೋ ದ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್" ಎಂಬ ಅಮೂಲ್ಯವಾದ ಅಧ್ಯಯನ ಕೃತಿಯು ಟಿಪ್ಪು ಆಡಳಿತ ವಿವರಗಳ ಒಳನೋಟಗಳನ್ನು ನೀಡುತ್ತದೆ. ಇವುಗಳ ಜೊತೆಗೆ ಖ್ಯಾತ ಶಾಸನ ತಜ್ಞರಾದ ಬಿ.ಎಲ್. ರೈಸ್ ರವರು ಸಂಗ್ರಹಿಸಿರುವ ಶಾಸನಗಳಲ್ಲಿ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಏಳನೂರ ತೊಂಬತ್ತುಕ್ಕೂ ಹೆಚ್ಚು ಹಿಂದೂ ದೇವಾಲಯಗಳನ್ನು ಸಂರಕ್ಷಿಸಿ ಜೀಣೋದ್ಧಾರ ಮಾಡಿದ ಎಂಬ ವಿವರವಾದ ಪಟ್ಟಿ ದೊರೆಯುತ್ತದೆ. ಕ್ರೈಸ್ತ ಪಾದ್ರಿ ಅಬುದುಬೆಯಾಗಲಿ, ಸಸ್ಯಶಾಸ್ತ್ರಜ್ಞ ಪ್ರಾನ್ಸಿಸ್ ಬುಕಾನನ್ ಆಗಲಿ ಅಥವಾ ಶಾಸನಗಳ ತಜ್ಞ ಬಿ.ಎಲ್. ರೈಸ್ ಇವರುಗಳು ಈ ನೆಲಕ್ಕೆ, ಇಲ್ಲಿನ ಸಂಸ್ಕತಿಗೆ ಮತ್ತು ಇಲ್ಲಿನ ಧರ್ಮಗಳಿಗೆ ಸಂಬಂಧ ಪಟ್ಟವರಲ್ಲ. ಯಾವುದೇ ರಾಗದ್ವೇóಷವಿಲ್ಲದೆ ತಮ್ಮ ಕಣ್ಣ ಮುಂದಿನ ವಾಸ್ತವಗಳನ್ನು ದಾಖಲಿಸಿದ್ದಾರೆ. ಇವು ಸಾಲದೆಂಬಂತೆ ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳಲ್ಲಿ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಆಡಳಿತ ಮತ್ತು ಸಾಮಾಜಿಕ, ಆರ್ಥಿಕ ಸುಧಾರಣೆಗಳು ಭಾರತದ ಇತರೆ ಸಂಸ್ಥಾನಗಳಿಗಿಂತ ಹೇಗೆ ಭಿನ್ನವಾಗಿದ್ದವು ಮತ್ತು ಮಾದರಿಯಾಗಿದ್ದವು ಎಂಬ ಮಾಹಿತಿ ಇಂದಿಗೂ ನಮಗೆ ಲಭ್ಯವಿದೆ. ( ನೋಡಿ- ರಿಪೋರ್ಟ್ ಆಫ್ ಜಾಯಿಂಟ್ ಕಮಿಷನ್ ಫ್ರಂ ಬೆಂಗಾಲ್, ಬಾಂಬೆ ಅಂಡ್ ಮದ್ರಾಸ್- ಪ್ರಕಟಣೆಯ ವರ್ಷ1862) ಈ ಎಲ್ಲಾ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಟಿಪ್ಪು ಸುಲ್ತಾನನ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ, ನಾವು ಈವರೆಗೆ ಕಾಣದ ಟಿಪ್ಪುವಿನ ಹಲವು ಬಗೆಯ ಮಾನವಿಕ ಮುಖಗಳು ಮತ್ತು ಅಭಿವೃದ್ಧಿಯ ಜನಸುಗಳು ಅನಾವರಣಗೊಳ್ಳುತ್ತವೆ. ಇಡೀ ಭಾರತದಲ್ಲಿ ಕೃಷಿಗೆ ಸಂಬಂಧಿಸಿದಂತೆ 127 ಕಾನೂನುಗಳನ್ನು ತನ್ನ ಸಂಸ್ಥಾನದಲ್ಲಿ ಜಾರಿಗೆ ತಂದ ಏಕೈಕ ದೊರೆ ಟಿಪ್ಪು ಸುಲ್ತಾನ್ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ.
ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ತಂದೆ ಮಗ ಇಬ್ಬರ ಒಟ್ಟು ಆಡಳಿತಾವಧಿ ಕೇವಲ 38 ವರ್ಷಗಳು. ಈ ಅವಧಿಯಲ್ಲಿ ಬ್ರಿಟೀಷರೊಡನೆ ನಾಲ್ಕು ಯುದ್ಧಗಳು ಸೇರಿದಂತೆ, ಸ್ಥಳಿಯ ಸಾಮಂತರು, ಪಾಳೆಗಾರರ ಮತ್ತು ಮರಾಠರು, ಪೇಶ್ವೆಗಳು ತಮಿಳುನಾಡಿನ ಸಂಸ್ಥಾನಗಳಾದ ಆರ್ಕಾಟ್, ಪುದುಕೋಟೈ, ತಂಜಾವೂರು ದೊರೆಗಳ ಜೊತೆ ನಿರಂತರ ಕಾದಾಡಿರು. ಇಂತಹ ಹೋರಾಟಗಳ ನಡುವೆ ಕರ್ನಾಟಕದ ಉತ್ತರದ ಕೃಷ್ಣಾ ನದಿಯಿಂದ ದಕ್ಷಿಣದ ಕೇರಳದ ಮಲಬಾರ್ ಹಾಗೂ ಕೊಚ್ಚಿನ್ ಮತ್ತು ಪೂರ್ವದ ಕಾಂಚಿಪುರಂ, ಪಶ್ಚಿಮದ ಮಂಗಳೂರು ವರೆಗಿನ ತಮ್ಮ ಸಾಮ್ರಾಜ್ಯದ ( ಒಟ್ಟು ಈಗಿನ ದಕ್ಷಿನ ಭಾರತದ ನಾಲ್ಕು ರಾಜ್ಯಗಳ 144 ಜಿಲ್ಲೆಗಳ ವ್ಯಾಪ್ತಿಯ ಪ್ರದೇಶ) ಕೃಷಿ ಮತ್ತು ಔದ್ಯಮಿಕ ಬೆಳವಣಿಗೆ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಅವರು ಶ್ರಮಿಸಿದ ಪರಿ ಅಚ್ಚರಿ ಮೂಡಿಸುತ್ತದೆ.
ತಮ್ಮ ಸಂಸ್ಥಾನದ ಅಭಿವೃದ್ಧಿಗೆ ಮುನ್ನ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಾಡಿದ ಮಹಾತ್ಕಾರ್ಯವೆಂದರೆ, ನಾಡಿನುದ್ದಕ್ಕೂ ತಲೆ ಎತ್ತಿ ರೈತರನ್ನು ಮತ್ತು ವ್ಯಾಪಾರಸ್ಥರನ್ನು ಶೋಷಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ಪಾಳೆಗಾರರನ್ನು ಸದೆ ಬಡಿದರು. ಹತ್ತರಿಂದ ಐವತ್ತು ಹಳ್ಳಿಗಳನ್ನು ತಮ್ಮ ಸುಪರ್ಧಿಯಲ್ಲಿಟ್ಟುಕೊಂಡು, ಬೆಟ್ಟ ಮತ್ತು ಗುಡ್ಡಗಳಲ್ಲಿ ಕೋಟೆ ಮತ್ತು ಅರಮನೆ ಕಟ್ಟಿಕೊಂಡು ಶ್ಯಾನುಭೋಗ ಮತ್ತು ಪಟೇಲರು ಹಾಗೂ ಊರ ಗೌಡ ಅಥವಾ ನಾಡಗೌಡ ಎಂಬ ಜಮೀನ್ದಾರರ ಮೂಲಕ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರನ್ನು ಶೋಷಿಸುತ್ತಿದ್ದ ಪಾಳೆಗಾರರನ್ನು ತಲೆ ಎತ್ತದಂತೆ ನಿರ್ನಾಮ ಮಾಡಿದರಲ್ಲದೆ, ಬಾಡಿಗೆ ಅಥವಾ ಭೂ ಕಂದಾಯದಿಂದ ವಿನಾಯ್ತಿ ಪಡೆದಿದ್ದ ಹಲವು ಬ್ರಾಹ್ಮಣ ಮಠಗಳು, ಅಗ್ರಹಾರಗಳು, ಜೈನ ಬಸದಿಗಳು ಮತ್ತು ಉತ್ತರ ಕರ್ನಾಟಕದ ದೇಶ ಮುಖ್ ಎಂಬ ಬ್ರಾಹಣರ ಅಧೀನದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು 1787 ರಿಂದ 1790 ರ ಅವಧಿಯಲ್ಲಿ ಟಿಪ್ಪು ಸುಲ್ತಾನ್ ವಾಪಸ್ ಪಡೆದು ಗೇಣಿದಾರರನಿಗೆ ಹಂಚಿದನು. ಹೈದರಾಲಿ ಅನಕ್ಷರಸ್ತನಾಗಿದ್ದುಕೊಂಡು ಓರ್ವ ಸಾಮಾನ್ಯ ಸಿಪಾಯಿಯಾಗಿ ಸೈನ್ಯಕ್ಕೆ ಸೇರಿ ಓರ್ವ ಸಾಮಂತನಾಗಿ ಬೆಳೆದವನು ಜೊತೆಗೆ ತನ್ನ ಪುತ್ರ ಟಿಪ್ಪುವಿಗೆ ಆತನ ಹದಿನೇಳೆನೆಯ ವಯಸ್ಸಿನಿಂದ ಯುದ್ಧ ತಂತ್ರಗಳ ಜೊತೆ ಜೊತೆಯಲ್ಲಿ ಆಡಳಿತ ಕಲೆಯನ್ನು ಧಾರೆಯೆರದವನು. ನಂಜನಗೂಡಿನ ಅಗ್ರಹಾರದಲ್ಲಿ ನಾನೂರು ಬ್ರಾಹ್ಮಣ ಕುಟುಂಬಗಳ ವಶದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಏಳನೂರು ಹಿಂದುಳಿದ ಕುಟುಂಬಗಳಿಗೆ ಜಾತಿಮತ್ತು ಧರ್ಮದ ಹಂಗಿಲ್ಲದೆ ಟಿಪ್ಪುಸುಲ್ತಾನ್ ಹಂಚಿದನು, ಮೂಡಬಿದ್ರಿಯ ಜೈನ ಬಸದಿ ವಶದಲ್ಲಿದ್ದ ಭೂಮಿಯನ್ನು ಮತ್ತು ಉತ್ತರ ಕರ್ನಾಟಕದ ದೇಶ ಮುಖಗಳ ಭೂಮಿಯನ್ನು ಅವರುಗಳ ಜೀವನದ ಅವಶ್ಯಕvಗೆÉ ಬೇಕಾಗುವವಷ್ಟು ಮಾತ್ರ ಉಳಿಸಿ, ಉಳಿದ ಭೂಮಿಯನ್ನು ಎಲ್ಲರಿಗೂ ಸಮನಾಗಿ ಹಂಚಿದನು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದು ಟಿಪ್ಪುವಿನ ಅಚಲ ನಂಬಿಕೆಯಾಗಿತ್ತು. ಇದು ಮಾತ್ರವಲ್ಲದೆ, ಪಾಳು ಬಿದ್ದ ಭೂಮಿ, ಗುಡ್ಡ ಗಾಡು ಪ್ರದೇಶಗಳನ್ನು ಯಾವುದೇ ಕಂದಾಯ ಅಥವಾ ತೆರಿಗೆ ಇಲ್ಲದ ಭೂ ರಹಿತರಿಗೆ ಹಂಚಿದ ಸಂಗತಿಯನ್ನು ನಿಕಲಸ್ ಗುಹಾ ಎಂಬುವರು ದಾಖಲಿಸಿದ್ದಾರೆ. ಸೈನಿಕರು ಸೇರಿದಂತೆ 60 ಸಾವಿರ ಕುಟುಂಬಗಳಿಗೆ ಭೂಮಿಯನ್ನು ಹಂಚುವುದರ ಮೂಲಕ ತನ್ನ ಸಾಮ್ರಾಜ್ಯದಲ್ಲಿ ಕೃಷಿಗೆ ಒತ್ತು ನೀಡಿರುವ ಸಂಗತಿಯನ್ನು ದಾಖಲಿಸಿದ್ದಾರೆ. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವಧಿಯಲ್ಲಿ ಬೇಳೆಕಾಳುಗಳು, ಭತ್ತ, ಕಬ್ಬು, ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು, ಗೋಡಂಬಿ, ವೀಳ್ಳೆದ ಎಲೆ, ಶ್ರೀಗಮಧ ಮರ ಇವುಗಳ ಕೃಷಿಗೆ ಹೆಚ್ಚು ಒತ್ತು ನೀಡಲಾಗಿತ್ತು. 1800 ರಿಂದ 1802 ರ ಅವಧಿಯ ತಮ್ಮ ಪ್ರವಾಸದಲ್ಲಿ ಬುಕ್ಯಾನನ್ ಪಟ್ಟಿ ಮಾಡಿರುವಂತೆ ಟಿಪ್ಪು ಸಂಸ್ಥಾನದಲ್ಲಿ ಪಟ್ಟಣಗಳು ಮತ್ತು ಅಷ್ಟಗ್ರಾಮಗಳು ಎಂಬ ಆಯ್ದ ಪ್ರದೇಶಗಳಲ್ಲಿ ಒಟ್ಟು 15 ಜಾತಿಯ ವಿವಿಧ ಹಣ್ಣಿನ ತಳಿಗಳು, 34 ಬಗೆಯ ವಿವಿಧ ತರಕಾರಿ ಬೆಳೆಗಳು ಅಸ್ತಿತ್ವದಲ್ಲಿದ್ದವು. ಇದರಲ್ಲಿ ಪ್ರಮುಖವಾಗಿ ಬೆಂಗಳೂರು ನಗರದ ಲಾಲ್ ಬಾಗ್ ಸೇರಿದಂತೆ ನಾಲ್ಕು ತೋಟಗಳಲ್ಲಿ ಔಷಧಿಯ ಸಸ್ಯಗಳು, ಗಿಡಮೂಲಿಕೆಯ ಬೇರುಗಳು ಮತ್ತು ಹಣ್ಣು, ತರಕಾರಿ ಹಾಗೂ ಅಲಮಕಾರಿಕ ಸಸ್ಯಗಳನ್ನು ಪ್ರತ್ಯೇಕವಾಗಿ ಬೆಳೆಯುತ್ತಿದ್ದ ಅಂಶವನ್ನು ಬುಕ್ಯಾನನ್ ಒತ್ತಿ ಹೇಳಿದ್ದಾನೆ. ಎಲೆಯ ತೋಟ, ಹಣ್ಣಿನ ತೋಟ, ತೆಂಗಿನ ತೋಟ ಮತ್ತು ಹೂವಿನ ತೋಟಗಳೆಂದು ಇವುಗಳನ್ನು ಕರೆಯಲಾಗುತ್ತಿತ್ತು.
ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯಲ್ಲಿ ಒಟ್ಟು 39 ಲಕ್ಷ ಎಕರೆ ಪ್ರದೇಶದಲ್ಲಿ ಎಂಟು ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದ್ದನ್ನು ಮತ್ತು ನಾಡಿನುದ್ದಕ್ಕೂ ಕೆರೆ, ಕಟ್ಟೆಗಳನ್ನು ಕಟ್ಟಿಸಿರುವ ಇತಿಹಾಸವನ್ನು ಬುಕ್ಯಾನನ್ ತನ್ನ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾನೆ. 1790 ರ ದಶಕದಲ್ಲಿಲ್ಲಿ ಕಾವೇರಿನದಿಗೆ ಅಣೆಕಟ್ಟನ್ನು ನಿರ್ಮಿಸಲು ಕನಸು ಕಂಡು, ಈಗಿನ ಕೃಷ್ಣರಾಜ ಸಾಗರ ಜಲಾಶಯ ಇರುವ ಸ್ಥಳದಲ್ಲಿ ಪ್ರಥಮ ಬಾರಿಗೆ ಶಿಲಾನ್ಯಾಸ ನೆರೆವೇರಿಸಿದವನು ಟಿಪ್ಪು ಸುಲ್ತಾನ್ ಎಂಬುದು ಕಾವೇರಿ ನದಿಯ ಇತಿಹಾಸ ಬÀಲ್ಲವರಿಗೆ ತಿಳಿದಿರುವ ಸಂಗತಿಯಾಗಿದೆ.
ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯಲ್ಲಿ ಒಟ್ಟು 39 ಲಕ್ಷ ಎಕರೆ ಪ್ರದೇಶದಲ್ಲಿ ಎಂಟು ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದ್ದನ್ನು ಮತ್ತು ನಾಡಿನುದ್ದಕ್ಕೂ ಕೆರೆ, ಕಟ್ಟೆಗಳನ್ನು ಕಟ್ಟಿಸಿರುವ ಇತಿಹಾಸವನ್ನು ಬುಕ್ಯಾನನ್ ತನ್ನ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾನೆ. 1790 ರ ದಶಕದಲ್ಲಿಲ್ಲಿ ಕಾವೇರಿನದಿಗೆ ಅಣೆಕಟ್ಟನ್ನು ನಿರ್ಮಿಸಲು ಕನಸು ಕಂಡು, ಈಗಿನ ಕೃಷ್ಣರಾಜ ಸಾಗರ ಜಲಾಶಯ ಇರುವ ಸ್ಥಳದಲ್ಲಿ ಪ್ರಥಮ ಬಾರಿಗೆ ಶಿಲಾನ್ಯಾಸ ನೆರೆವೇರಿಸಿದವನು ಟಿಪ್ಪು ಸುಲ್ತಾನ್ ಎಂಬುದು ಕಾವೇರಿ ನದಿಯ ಇತಿಹಾಸ ಬÀಲ್ಲವರಿಗೆ ತಿಳಿದಿರುವ ಸಂಗತಿಯಾಗಿದೆ.
ಪಾಂಡುವಪುರ ಮತ್ತು ಮೇಲುಕೋಟೆಯ ನಡುವೆ ಬರುವ ಕೆರೆತೊಣ್ಣೂರು ಎಂಬ ಗ್ರಾಮದಲ್ಲಿ ಹೈದರಾಲಿ ನಿರ್ಮಿಸಿರುವ ಬೃಹತ್ತಾದ ಕರೆ ತಂದೆ ಮತ್ತು ಮಗನ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಹುಣಸೂರು ಪಟ್ಟಣದ ಮಗ್ಗುಲಲ್ಲಿ ಹರಿಯುವ ಲP್ಪ್ಷಂಣ ತೀರ್ಥ ನದಿಯ ನೀರು ಒಳಗೊಂಡಂತೆ ಕಾವೇರಿಯ ಉಪನದಿಗಳಾದ ಶಿಂಷಾ, ಲೋಕಪಾವನಿ, ಕಪಿಲಾ, ನದಿಗಳ ನೀರನ್ನು ನಾಲೆಯ ಮೂಲಕ ಬಳಸಿಕೊಂಡು ಕೊಳ್ಳೆಗಾಲ ಸೇರಿದಂತೆ ಮೈಸೂರು ನಗರದ ಸುತ್ತ ಮುತ್ತ ಕೆರೆಯಾಶ್ರಿತ ಭೂಮಿಯಲ್ಲಿ ಭತ್ತ ವನ್ನು ಬೆಳೆಯಲಾಗುತ್ತಿತ್ತು. ಇವುಗಳಲ್ಲಿ ಬಂಗಾರ ಸಣ್ಣ ಮತ್ತು ರಾಜಮುಡಿ ಎಂಬ ತಳಿಗಳು ಪ್ರಮುಖವಾಗಿದ್ದವು. ಬೇಸಾಯದ ವಿಷಯದಲ್ಲಿ ಹೈದರಾಲಿ ಮತ್ತು ಟಿಪ್ಪು ಇಬ್ಬರೂ ವಾಣಿಜ್ಯ ಬೆಳೆಗಳಿಗೆ ಮಹತ್ವವನ್ನು ನೀಡಿದ್ದರು. ರೈತರಿಗೆ ಕಬ್ಬು, ತೆಂಗು, ಅಡಿಕೆ, ಗೋಡಂಬಿ, ಮೆಣಸು ಮತ್ತು ಏಲಕ್ಕಿ, ಬಾಳೆ ಹಾಗೂ ವಿಳ್ಳೆಯದ ಎಲೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದ್ದರು. ಕರಾವಳಿ ಪ್ರದೇಶಗಳಿಗೆ ಅಡಿಕೆ, ತೆಂಗು ಮತ್ತು ಗೋಡಂಬಿ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ತೆಂಗು, ಅಡಿಕೆ ಬೆಳೆಗಾರರಿಗೆ ಮೊದಲ ಏಳು ವರ್ಷಗಳ ಕಾಲ ಭೂ ಕಂದಾಯದಿಂದ ವಿನಾಯಿತಿ ನೀಡುವುದರ ಜೊತೆಗೆ ಮಿಶ್ರ ಬೆಳೆಯ ಪದ್ಧತಿಗೆ ಪ್ರೋತ್ಸಾಹ ನೀಡಲಾಗಿತ್ತು. ರೈತರ ಕೃಷಿ ಉತ್ಪನ್ನಗಳ ಸುಗಮ ಮಾರಾಟಕ್ಕಾಗಿ ಪ್ರತಿ ಹತ್ತರಿಂದ ಹದಿನೈದು ಕಿಲೊಮೀಟರ್ ದೂರಕ್ಕೆ ವಾರದ ಸಂತೆಗಳನ್ನು ಟಿಪ್ಪು ಆಳ್ವಿಕೆಯಲ್ಲಿ ಆರಂಭಿಸಲಾಯಿತು.
ರೈತರು ಭೂಮಿಯ ಕಂದಾಯ ಅಥವಾ ತೆರಿಗೆಯನ್ನು ಪಣಂ ಎಂದು ಕರೆಯಯಲಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ ಮೂಲಕ ಪಾವತಿಸುತ್ತಿದ್ದರು. ಇಡೀ ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಇಂತಹ ವ್ಯವಸ್ತೆ ಜಾರಿಯಲ್ಲಿ ಇದ್ದದ್ದು ಟಿಪ್ಪುವಿನ ಸಂಸ್ಥಾನದಲ್ಲಿ ಮಾತ್ರ ಎಂಬುದು ಗಣನೀಯವಾದ ಅಂಶ. ಉಳಿದ ಸಂಸ್ಥಾನಳಗಳಲ್ಲಿ ರೈತರು ಧವಸ ಧಾನ್ಯಗಳ ಮೂಲಕ ತೆರಿಗೆ ಪಾವತಿ ಮಾಡುತ್ತಿದ್ದರು. ಟಿಪ್ಪುಸುಲ್ತಾನ್ ತನ್ನ ಸಂಸ್ಥಾನದಲ್ಲಿ ಪಾಳು ಬಿದ್ದಿದ್ದ ಮೂರು ಲಕ್ಷ ಎಕರೆ ಭೂಮಿಯನ್ನು ತನ್ನ ಸೈನಿಕ ಕುಟುಂಬಗಳಿಗೆ ಹಂಚಿರುವುದು ವಿಶೇಷವಾಗಿದೆ. ಪಟೇಲ ಅಥವಾ ನಾಡಗೌಡನ ಹುದ್ದೆಯಲ್ಲಿರಬೇಕಾದರೆ, ಆ ವ್ಯಕ್ತಿಯು ಕೃಷಿಯಲ್ಲಿ ನಿರತನಾಗಿರಬೇಕು ಎಂಬ ನಿಯಮವನ್ನು ಜಾರಿಗೆ ತಂದನು. ಇದರಿಂದಾಗಿ ಟಿಪ್ಪುವಿನ ಆಳ್ವಿಕೆಯಲ್ಲಿ ಜಾತಿ ಬೇಧವಿಲ್ಲದೆ ಬಹುತೇಕ ಸಮುದಾಯಗಳು ಅದರಲ್ಲೂ ವಿಶೇಷವಾಗಿ ದಲಿತರು ಮತ್ತು ಮುಸ್ಲಿಂ ಸಮುದಾಯದ ಮಂದಿ ಕೃಷಿಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡರು. ಇಂದಿಗೂ ಕೂಡ ಮಳವಳ್ಳಿ, ಬನ್ನೂರು, ಟಿ.ನರಸಿಪುರ ತಾಲ್ಲೂಕು, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಮಂಡ್ಯ ತಾಲ್ಲೂಕುಗಳಲ್ಲಿ ಕೃಷಿಯನ್ನು ವೃತ್ತಿಯಾಗಿಸಿಕೊಂಡ ದಲಿತ ಹಾಗೂ ಮುಸ್ಲಿಂ ಕುಟುಂಬಗಳನ್ನು ಕಾಣಬಹುದು. ಬೆಲ್ಲ ಹಾಗೂ ಖಂಡಸಾರಿ ಸಕ್ಕರೆ ತಯಾರಿಸಲು ಕಬ್ಬಿನ ಬೆಳೆಗೆ ಪ್ರೋತ್ಸಾಹ ನೀಡಿದ್ದ ಟಿಪ್ಪು ಸುಲ್ತಾನ್ ತಮಿಳುನಾಡಿನಿಂದ ಪಟಾವಳಿ ಎಂಬ ವಿಕ್ಕ ಚಿಕ್ಕು ಗೇಣಿನ ದಪ್ಪ ಕಾಂಡದ ಹಾಗೂ ಅಧಿಕ ರಸ ನೀಡುವ ತಮಿಳುನಾಡು ಮೂಲದ ಕಬ್ಬಿನ ತಳಿಯನ್ನು ಮಂಡ್ಯ ಜಿಲ್ಲೆಯ ( ಆಗಿನ ಅವಿಭಜಿತ ಮೈಸೂರು ಪ್ರಾಂತ್ಯ) ನೀರಾವರಿ ಪ್ರದೇಶದಲ್ಲಿ ಪರಿಚಯಿಸಿದ್ದನು. ಶ್ರೀರಂಗಪಟ್ಟಣದ ಸಮೀಪದ ಪಾಲಹಳ್ಳಿ ಗ್ರಾಮದಲ್ಲಿ ಖಂಡಸಾರಿ ಸಕ್ಕರೆಯ ಕಾರ್ಖಾನೆಯ ಅವಶೇಷಗಳು ಇಂದಿಗೂ ಇರುವುದು ವಿಶೇಷ.
ಬ್ರಿಟೀಷ್ ಲೈಬ್ರರಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯು ತನ್ನ ಗೂಡಾಚಾರರ ಮೂಲಕ ಟಿಪ್ಪು ಮತ್ತು ಪ್ರೆಂಚರ ನಡುವೆ ನಡೆದಿರುವ ಪತ್ರ ವ್ಯವಹಾರ, ಟಿಪ್ಪು ಸಂಸ್ಥಾನದ ಉದ್ಯಮಗಳ ಕುರಿತಂತೆ ಕಲೆ ಹಾಕಿದ ಮಾಹಿತಿಗಳು ದೊರೆತಿದ್ದು, ಈ ಮಾಹಿತಿಯ ಪ್ರಕಾರ ಟಿಪ್ಪು ಸುಲ್ತಾನ್ ಪ್ರಾನ್ಸ್ ದೊರೆಗೆ ಮನವಿ ಸಲ್ಲಿಸಿ, ಉಕ್ಕು, ಕಬ್ಬಿಣದ ತಜ್ಞರು, ಮದ್ದು ಗುಂಡು ತಯಾರಕರು, ಸಕ್ಕರೆ, ಗಾಜು, ಪಿಂಗಾಣಿ ತಯಾರಿಕೆಯ ತಜ್ಞರು ಹೀಗೆ ಹತ್ತು ವಿವಿಧ ಬಗೆಯ ಉದ್ಯಮಗಳಲ್ಲಿ ನುರಿತರಾದವರನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡ ಮಾಹಿತಿ ಲಭ್ಯವಾಗಿದೆ. ಚೆನ್ನಪಟ್ಟಣದಲ್ಲಿ ಕರಕುಶಲ ತಯಾರಿಕೆ, ಕೊಯಮತ್ತೂರಿನಲ್ಲಿ ಕೈ ಮಗ್ಗ ಮತ್ತು ಕಲ್ಲು ಸಕ್ಕರೆ, ಶ್ರೀರಂಗಪಟ್ಟಣದಲ್ಲಿ ಸಕ್ಕರೆ, ಉಕ್ಕು ತಯಾರಿಕೆ, ದೇವರಾಯನ ದುರ್ಗದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮತ್ತು ಕಬ್ಬಿಣ ತಯಾರಿಕೆ, ಸತ್ಯಮಂಗಲ ದಲ್ಲಿ ರೇಷ್ಮೆಯ ಕೈಮಗ್ಗಗಳು, ಕೊಚ್ಚಿನ್ ನಲ್ಲಿ ಗೋಡಂಬಿ ಸಂಸ್ಕರಣಾ ಘಟಕಗಳು ಕಾರ್ಯನಿರತವಾಗಿದ್ದವು. ಚೀನಾದಿಂದ ರೇಷ್ಮೆ ಕೃಷಿಯ ಮಾಹಿತಿಯನ್ನು ತರಿಸಿಕೊಂಡು ರೇಷ್ಮೆ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿದ್ದ ಟಿಪ್ಪು ಸುಲ್ತಾನ್ ಪಶ್ಚಿಮ ಬಂಗಾಳದಿಂದ ರೇಷ್ಮೆ ಹುಳುಗಳನ್ನು ಬಹುರುದ್ದೀನ್ ಮತ್ತು ಕಸ್ತೂರಿ ರಂಗ ಎಂಬ ಇಬ್ಬರು ರಾಯಭಾರಿಗಳ ಮೂಲಕ ತರಿಸಿದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. 1786ರಲ್ಲಿ ಹೈದರಾಬಾದ್ ನಿಜಾಂ ನೊಡನೆ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ಸೆಪ್ಟಂಬರ್ 27 ರಂದು ಯುದ್ಧಭೂಮಿಯಿಂದ ಶ್ರೀರಂಗಪಟ್ಟಣದ ಕೋಟೆಯ ಸೇನಾಪತಿಗೆ ಪತ್ರ ಬರೆದು ರೇಷ್ಮೆ ಹುಳುಗಳನ್ನು ಜತನದಿಂದ ಕಾಪಾಡಬೇಕೆಂದು ಟಿಪ್ಪು ಸುಲ್ತಾನ್ ಪತ್ರ ಬರೆದಿದ್ದನು.
ಇದಲ್ಲದೆ ತನ್ನ ಸಂಸ್ಥಾನದ ಮಳವಳ್ಳಿ, ಚೆನ್ನಪಟ್ಟಣ, ದೊಡ್ಡಬಳ್ಳಾಪುರ, ಬಾಗಲಕೋಟೆ ಸೇರಿದಂತೆ ಒಟ್ಟು 21 ಪ್ರದೇಶಗಳಲ್ಲಿ ರೇಷ್ಮೆ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದ್ದನು. ಶ್ರೀರಂಗಪಟ್ಟನ, ಮೇಲುಕೋಟೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಕ್ಕರೆ ಘಟಕಗಳನ್ನು ಸ್ಥಾಪಿಸಿದ್ದನು. ಪಿರಿಯಾಪಟ್ಟಣ ಮತ್ತು ಮಹಾರಾಯನ ದುರ್ಗದ ಭೂಮಿಯಲ್ಲಿ ಶ್ರೇಷ್ಟ ಗುಣಮಟ್ಟದ ಶ್ರೀಗಂಧದ ಮರಗಳನ್ನು ಬೆಳೆಯಲಾಗುತ್ತಿತ್ತು. ಇದಲ್ಲದೆ ರೈತರಿಗೆ ಶ್ರೀಗಂಧ ಹಾಗೂ ಜಾಲಿª (ಗೊಬ್ಬಳಿ) ಮರಗಳನ್ನು ಬೆಳಸಲು ಪ್ರೋತ್ಸಾಹ ನೀಡಿ ಮರದ ಬೆಲೆಯನ್ನು ಸಂಪೂರ್ಣವಾಗಿ ಅವರಿಗೆ ಪಾವತಿಸಲಾಗುತ್ತಿತ್ತು. ಶ್ರೀರಂಗಪಟ್ಟಣದ ಗಂಜಾಂ ನಲ್ಲಿ ಗೊಬ್ಬಳಿ ಅಥವಾ ಜಾಲಿ ಮರದಿಂದ ಎತ್ತಿನ ಬಂಡಿಗಾಗಿ ಮರದ ಚಕ್ರಗಳು ಮತ್ತು ಪಿರಂಗಿ ಸಾಗಿಸುವ ಬಂಡಿಗಳನ್ನು ತಯಾರು ಮಾಡಲಾಗುತ್ತಿತ್ತು. ಅತ್ಯಂತ ಗಟ್ಟಿಮುಟ್ಟಾದ ಜಾಲಿಮರದಿಂದ ಚಕ್ರಗಳನ್ನು ತಯಾರಿಸುವ ಕುಶಲ ಕರ್ಮಿಗಳ ಕುಟುಮಬಗಳು ಗಂಜಾಂ ನಲ್ಲಿ ಈಗಲೂ ಅದೇ ವೃತ್ತಿಯನ್ನು ಮುಂದುವರಿಸಿದ್ದಾರೆ.
ಒಂದು ಕಾಲದಲ್ಲಿ ಬೆಂಗಳೂರು ಹೊರವಲಯದ ಮಾವಳ್ಳಿ ಎಂಬ ಗ್ರಾಮ ಹೈದರ್ ಮತ್ತು ಟಿಪ್ಪು ಕಾಲದಲ್ಲಿ ಕೃಷಿಗೆ ಆಯ್ಕೆ ಮಾಡಿಕೊಂಡ ಅಷ್ಟ ಗ್ರಾಮಗಳಲ್ಲಿ ಒಂದಾಗಿತ್ತು. ತಂದೆ ಮಗ ಇಬ್ಬರೂ ಅಭಿವೃದ್ಧಿ ಪಡಿಸಿದ ತೆಂಗು ಮತ್ತು ಹಣ್ಣಿ ತೋಟ ಈಗ ಲಾಲ್ ಬಾಣ್ ಹೆಸರಿನಲ್ಲಿ ಜಗತ್ ಪ್ರಸಿದ್ಧ ಸಸ್ಯ ಕಾಶಿಯಾಗಿ ಹೆಸರು ಪಡೆದಿದೆ. ಟಿಪ್ಪು ಕಾಲಾನಂತರ ಬೆಂಗಳೂರು ನಗರಕ್ಕೆ ಬ್ರಿಟೀಸ್ ಅಧಿಕಾರಿಯಾಗಿ ಬಂದ ಮಾರ್ಕ್ಕಬ್ಬನ್ ಇದರ ರೂವಾರಿಯಲ್ಲಿ ಒಬ್ಬನಾಗಿದ್ದಾನೆ.2
ಟಿಪ್ಪುವಿನ ಅಧಿಕಾರದ ಅವಧಿಯಲ್ಲಿ ಸಂಸ್ಥಾನಕ್ಕೆ ಬರುತ್ತಿದ್ದ ಧವಸ ಧಾನ್ಯಗಳನ್ನು ಹೇಗೆ ಸಮನಾಗಿ ಎಲ್ಲರಿಗೂ ಹಂಚಲಾಗುತ್ತಿತ್ತು ಎಂಬುದನ್ನು ಬುಕ್ಯಾನನ್ ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. ಒಂದು ಖಂಡುಗ ಅಥವಾ 1920 ಸೇರುಗಳು ಎಂಬ ಅಳತೆಯಲ್ಲಿ, ಸರ್ಕಾರಕ್ಕೆ 192 ಸೇರು, ಅಮುಲ್ದಾರರ ಕಚೇರಿಯ ಎಣ್ಣೆಯ ದೀಪ ಮತ್ತು ಇತರೆ ಖರ್ಚಿಗೆ 24 ಸೇರು, ಬ್ರಾಹ್ಮಣರು, ಭಿಕ್ಷಕರು ಮತ್ತು ಫಕೀರರು ಮುಂತಾದವರಿಗೆ 12 ಸೇರು, ಕಾವಲುಗಾರನಿಗೆ 6 ಸೇರು, ಅಳತೆ ಮಾಡುವವನಿಗೆ 6 ಸೇರು ಮತ್ತು ದೇವಾಲಯದ ಪೂಜಾರಿಗೆ 24 ಸೇರು ದಿನಸಿ ಸಂದಾಯವಾಗುತ್ತಿತ್ತು. ಇವರುಗಳು ಮಾತ್ರವಲ್ಲದೆ, ತಳವಾರನಿಗೆ 24 ಸೇರು, ನೀರುಗಂಟಿಗೆ 24 ಸೇರು, ಕ್ಷೌರಿP, ಕಮ್ಮಾರ ಮತ್ತು ಬಡಗಿಗೆ ತಲಾ ಹನ್ನೆರೆಡು ಸೇರು ಧಾನ್ಯವನ್ನು ವಿತರಿಸುತ್ತಿದ್ದನು. ತನ್ನ ಸಂಸ್ಥಾನದಲ್ಲಿ ಪಾನ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದ ಟಿಪ್ಪು ಸುಲ್ತಾನ್ ನಂತರ ದಿನಗಳಲ್ಲಿ ವಾಣಿಜ್ಯ ಬೆಳೆಗಳಾದ ಗಸ ಗಸೆ ಹಾಗೂ ತಂಬಾಕು ಬೆಳೆಯನ್ನು ನಿಷೇಧಿಸಿದ ದಾಖಲೆಗಳಿವೆ.
ಟಿಪ್ಪು ಸುಲ್ತಾನ್ ವ್ಯಕ್ತಿತ್ವ ಮತ್ತು ಸಾಧನೆಗಳ ಇತಿಹಾಸದ ದಾಖಲೆಗಳು ಅಂಕಿ ಅಂಶಗಳ ಸಮೇತ ನಮ್ಮ ಕಣ್ಣಮುಂದೆ ಮುಂದಿರುವಾಗ ಟಿಪ್ಪುಸುಲ್ತಾನ್ ದೇಶ ಭಕ್ತನಲ್ಲ, ಆತ ದೇಶದ್ರೋಹಿ, ಮತಾಂಧ ಎಂದು ಕರೆಯುವ ನಕಲಿ ಇತಿಹಾಸಕಾರರು ಒಮ್ಮೆ ತಮ್ಮ ತಲೆಯೊಳಗಿನ ಕಸ ಮತ್ತು ಎದೆಯೊಳಗಿನ ವಿಷ ಎರಡನ್ನೂ ಹೊರಹಾಕಿ ಮುಕ್ತ ಮನಸ್ಸಿನಿಂದ ಇತಿಹಾಸವನ್ನು ಗ್ರಹಿಸುವ ಅಗತ್ಯವಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ