ಇಂಗ್ಲೀಷ್ ದಿನಪತ್ರಿಕೆಗಳಾದ ಟೈಮ್ಸ್ ಆಫ್ ಇಂಡಿಯಾದಲ್ಲಿ 1995 ರಲ್ಲಿ ಪತ್ರಕೋದ್ಯಮ ಪ್ರವೇಶಿಸಿದ ಸಿದ್ಧಾರ್ಥ ವರದರಾಜನ್ ತಮ್ಮ ನಿಷ್ಟುರ ಹಾಗೂ ಪ್ರಾಮಾಣಿಕ ಮತ್ತು ಪಾರ್ದರ್ಶಕತೆಯ ವರದಿಗಳಿಗೆ ಹೆಸರಾಗಿದ್ದರು ನಂತರ . 2011 ರಿಂದ 2013 ರ ವರೆಗೆ ಪ್ರತಿಷ್ಠಿತ ದ ಹಿಂದೂ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಇವರು, ಸಂಪಾದಕ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದೊಂದಿಗೆ ಹುದ್ದೆ ತೊರೆದು, 2015 ರಲ್ಲಿ ಅಂತರ್ಜಾಲ ಪತ್ರಿಕೆಯಾದ ದವೈರ್ ಎಂಬ ಪತ್ರಿಕೆಯನ್ನು ಆರಂಭಿಸಿ, ಸ್ವತಂತ್ರ ಪತ್ರಿಕೋದ್ಯಮ ಹೇಗಿರಬೇಕು ಎಂಬುದನ್ನು ಇಡೀ ಭಾರತಕ್ಕೆ ತೋರಿಸಿಕೊಟ್ಟರು. ಇಂದಿಗೂ ಕೂಡಾ ಗಂಭೀರ ಓದುಗರು ಸಿದ್ದಾರ್ಥಅವರಿಗೆ ಬೆಂಬಲವಾಗಿ ನಿತು, ಚಂದಾದಾರರಾಗಿ ದ ವೈರ್ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ.
ಅವರ ಈ ಪ್ರಯೋಗ ಭಾರತದಲ್ಲಿ ಅನೇಕ ನಿಷ್ಟಾವಂತ ಪತ್ರಕರ್ತರಿಗೆ ಮಾದರಿಯಾಯಿತು. ಇಂದಿಗೂ ಕೂಡಾ, ಆಳುವ ಸರ್ಕಾರಗಳ ದೌರ್ಬಲ್ಯ ಮತ್ತು ದೌರ್ಜನ್ಯಗಳು ಮತ್ತು ದೇಶದ ಗಂಭೀರ ಸಮಸ್ಯೆಗಳ ಕುರಿತ ವರದಿಗಾಗಿ ನಾವು ದ ವೈರ್ ಪತ್ರಿಕೆಯನ್ನು ಅವಲಂಭಿಸಬೇಕಾಗಿದೆ. ಈ ಕಾರಣಕ್ಕಾಗಿ ಸಿದ್ಧಾರ್ಥ ವರದರಾಜನ್ ಕೇಂದ್ರದ ಬಿ.ಜೆ.ಪಿ. ಸರ್ಕರದಿಂದ ಅನೇಕ ಕಿರುಕುಳಗಳನ್ನು ಎದುರಿಸಬೇಕಾಯಿತು. ಅ ವರ ಮನೆ ಮತ್ತು ಕಚೇರಿಗಳನ್ನು ಹಲವಾರು ಬಾರಿ ತಪಾಸಣೆ ನಡೆಸಿ, ಮೊಕದ್ದಮೆಗಳನ್ನು ಹೂಡಿ ಕಿರುಕುಳ ನೀಡಲಾಯಿತು.
ಸಾರ್ವಜನಿಕ ಬದುಕಿನಲ್ಲಿ ಒಬ್ಬ ಪತ್ರಕರ್ತನಾದವನು ನೈತಿಕತೆ ಮತ್ತು ನಿಷ್ಠುರತೆ ಕಾಪಾಡಿಕೊಂಡು ಬಂದರೆ, ಈ ಜಗತ್ತಿನಲ್ಲಿ ಯಾರಿಗೂ ಹೆದರಬೇಕಾಗಿಲ್ಲ. ಈ ವಿಷಯದಲ್ಲಿ ಇಂದಿಗೂ ಸಿದ್ಧಾರ್ಥ ವರದರಾಜನ್ ಮುಂಚೂಣಿಯಲ್ಲಿದ್ದಾರೆ. 61 ವರ್ಷದ ಇವರು ಈಗಾಗಲೇ ಭಾರತದ ಪ್ರತಿಷ್ಠಿತ ರಾಮನಾಥ್ ಗೋಯಂಕ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಎಲ್ ಮುಂಡೊ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭಾರತದ ಪತ್ರಿಕೋದ್ಯಮ ನಿಜಧ್ವನಿ ಎಂದು ಇವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ.
ರಾಜಸ್ತಾನ ಮತ್ತು ಉತ್ತರ ಪ್ರದೇಶದಲ್ಲಿ ಹಿರಿಯ ಐ.ಎ.ಎಸ್. ಅಧಿಕಾರಿಯಾಗಿದ್ದ ಸಿದ್ಧಾರ್ಥ ಅವರ ತಂದೆ ಮುನಿಸ್ವಾಮಿ ವರದರಾಜನ್ ನಂತರದ ದಿನಗಳಲ್ಲಿ ಇಂಗ್ಲೆಂಡ್ ಹೈ ಕಮಿಷನರ್ ಕಚೇರಿಯಲ್ಲಿ ರಾಯಭಾರಿಯಾಗಿದ್ರು. ಈ ಕಾರಣದಿಂದಾಗಿ, ಸಿದ್ಧಾರ್ಥ ಅವರು ಬಾಲ್ಯದ ಶಿಕ್ಷಣವನ್ನು ಅಜ್ಮೀರ್ ಮತ್ತು ಲಕ್ನೋ ನಗರದಲ್ಲಿ ಮುಗಿಸಿ, ನಂತರ ಲಂಡನ್ ನಗರದ ಲಂಡನ್ ಸ್ಕೂಲ್ ಆಫ್ ಎಕನಾಮ್ಸ್ ಸಂಸ್ಥೆಯಲ್ಲಿ ಪದವಿ ಹಾಗೂ ಅಮೇರಿಕಾದ ಕೊಲಂಬಿಯಾ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಪಡೆದರು.
ಅಮೇರಿಕಾದಲ್ಲಿ ಉಪನ್ಯಾಸಕ ವೃತ್ತಿ ತೊರೆದು ಭಾರತಕ್ಕೆ ಆಗಮಿಸಿದ ಇವರು ಪತ್ರಿಕೋದ್ಯಮವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು, ವೃತ್ತಿಗೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಘನತೆ ತಂದಿತ್ತರು. ಇಂತಹ ಸಂತತಿಯು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲಿ ಎಂದು ನಾವೆಲ್ಲರೂ ಮನದುಂಬಿ ಶುಭ ಹಾರೈಸೋಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ