ಖಾಲಿ ತಲೆ ಹಾಗೂ ಮಾತುಗಳನ್ನು ಬಂಡವಾಳವಾಗಿಸಿಕೊಂಡ ಒಬ್ಬ ವ್ಯಕ್ತಿ ದೇಶದ ಆಡಳಿತದ ಚುಕ್ಕಾಣಿ ಹಿಡಿದರೆ. ಆರ್ಥಿಕತೆ ಹೇಗೆ ತಳಹಿಡಿಯಬಹುದು ಎಂಬುದಕ್ಕೆ ವರ್ತಮಾನದ ಭಾರತ ಈಗ ಸಾಕ್ಷಿಯಾಗಿದೆ.
ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ, ಓಡಿ ಹೋದವರನ್ನು ಹಿಡಿದು ತರುತ್ತೇನೆ ಎಂಬ ಅಫೀಮಿಗೆ ಸಮನಾದ ಮಾತುಗಳನ್ನು ಆಡುತ್ತಾ, ಭಕ್ತರನ್ನು ಸದಾ ಅಮಲಿನಲ್ಲಿ ಇಡುವ ಕ್ರಿಯೆಯಲ್ಲಿ ತೊಡಗಿರುವ ಪ್ರಧಾನಿ ಮೋದಿಗೆ ಈ ಶತಮಾನದಲ್ಲಿ ಭಾರತದ ಆರ್ಥಿಕತೆ ಅರ್ಥವಾಗುವ ಸಂಭವ ಕಡಿಮೆ.
ನೋಟು ನಿಷೇದದ ಪ್ರಕರಣ ಮತ್ತು ಕೊರನಾ ಪ್ರಯುಕ್ತ ದಿಢೀರನೆ ತೆಗೆದುಕೊಂಡ ತೀರ್ಮಾನದಿಂದ ದುಡಿಯುವ ವರ್ಗವನ್ನು ಕತ್ತಲೆಗೆ ನೂಕಿದ ಘಟನೆ ಈ ಎರಡೂ ಸಂಗತಿಗಳು ಭಾರತದ ಆರ್ಥಿಕತೆ ಮತ್ತು ಬೆಳವಣಿಗೆಯನ್ನು ಎರಡು ದಶಕಗಳ ಹಿಂದಕ್ಕೆ ನೂಕಿವೆ.
ಇದೀಗ ೬೮ ಸಾವಿರ ಕೋಟಿ ಹಿಂತಿರುಗಿ ಬರಲಾಗದ ಸಾಲವನ್ನು ಚುಕ್ತಮಾಡಲಾಗಿದೆ. ಇದೆಲ್ಲವೂ ಕಳ್ಳ ಕೈಗಾರಿಕೋದ್ಯಮಿಗಳ ಸಾಲವಾಗಿರುವುದು ವಿಶೇಷ. ಇದರಲ್ಲಿ ಬಾಬಾ ರಾಮ್ದೇವ್ ಇತ್ತೀಚೆಗೆ ವಶಪಡಿಸಿಕೊಂಡಿರುವ ರುಚಿಅಂಡ್ ಸೋಯಾ ಕಂಪನಿಯ ೨.೨೦೦ ಕೋಟಿ ಸಾಲವೂ ಸೇರಿದೆ. ಬಾಬಾ ರಾಮ್ ದೇವ್ ನೇತೃತ್ವದ ಪತಾಂಜಲಿ ಕಂಪನಿ ಕಳೆದ ವರ್ಷ ೩.೫೦೦ ಕೋಟಿ ಲಾಭ ಗಳಿಸಿದೆ.
Loan waive ಅಂದರೆ ಸಾಲಮನ್ನಾ ಬೇರೆ, Loan Write
off ಅಂದರೆ, ಸಾಲದ ಲೆಕ್ಕ ಪತ್ರದಿಂದ ಅಮಾನತ್ತುಗೊಳಿಸುವ ಕ್ರಿಯೆ ಬೇರೆ. ಎಂದು ಭಕ್ತರು ವಾದಿಸುವುದುಂಟು.
ಇದು ಅಳಿಯ ಅಲ್ಲ, ಮಗಳ ಗಂಡ ಎಂದಂತೆ. ಇಲ್ಲಿ ಸಾಲ ಮನ್ನಾ ಎದ್ದು ಕಾಣದಿದ್ದರೂ, ಅನುತ್ಪಾದಕ ಆಸ್ತಿ ಎಂದು ಕರೆಯಲಾಗುವ ವಸೂಲಿಯಾಗದ ಸಾಲವನ್ನು ವಾರ್ಷಿಕ ಲೆಕ್ಕ ಪತ್ರದಿಂದ ಹೊರಗಿಡಲಾಗುತ್ತದೆ. ಈ ರೀತಿಯಲ್ಲಿ ೨೦೧೪ ರಿಂದ ಇಲ್ಲಿಯವರೆ ಅಂದರೆ, ಮೋದಿ ಆಡಳಿತದಲ್ಲಿ ಒಟ್ಟು ೬ ಲಕ್ಷದ ೨೦ ಸಾವಿರ ಕೋಟಿ ಸಾಲದ ಹಣವನ್ನು ಲೆಕ್ಕ ಪತ್ರದಿಂದ ಅಳಿಸಿಹಾಕಿ ಅಮಾನತ್ತಿನಲ್ಲಿ ಇಡಲಾಗಿದೆ.
ಕಳೆದ ವರ್ಷ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಮಾಹಿತಿ ಹಕ್ಕಿನಡಿ ಅರ್ಜಿಸಲ್ಲಿಸಿದಾಗ ರಿಸರ್ವ್ ಬ್ಯಾಂಕ್ ಒಟ್ಟು ೫ ಲಕ್ಷದ ೫೫ ಸಾವಿರ ಕೋಟಿ ಸಾಲವನ್ನು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ತಿಳಿಸಿತ್ತು.ಜೊತೆಗೆ ೨೦೧೮-೧೯ ರ
ಸಾಲಿನಲ್ಲಿ ೨ಲಕ್ಷದ ೫೦ ಸಾವಿರ ಹಣವನ್ನು ಮನ್ನಾ ಅಂದರೆ ಅಮಾನತ್ತು ಮಾಡಿರುವುದಾಗಿ ತಿಳಿಸಿತ್ತು.
ಇಲ್ಲಿ ಅಮಾನತ್ತು ಅಥವಾ Loan Write Off ಎಂದರೆ, ಈ ಸಾಲವನ್ನ ಬ್ಯಾಂಕುಗಳು ತಮ್ಮ ವಾರ್ಷಿಕ ವರದಿಯಲ್ಲಿ ತೋರಿಸುವುದಿಲ್ಲ. ಇದರಿಂದಾಗಿ ಅವುಗಳು ಹಿಂತಿರುಗಿ ಬರಲಾಗದ ಸಾಲ ನಮ್ಮ ಬ್ಯಾಂಕ್ ನಲ್ಲಿ ಕಡಿಮೆ ಎಂದು ವಾರ್ಷಿಕ ವರದಿಯಲ್ಲಿ ತೋರಿಸಿಕೊಳ್ಳುತ್ತವೆ.
ಸುಸ್ತಿದಾರರಿಂದ ಹಣ ವಸೂಲಿ ಮಾಡುತ್ತೇವೆ ಎಂದು ಹೇಳುತ್ತಾ ಹೋಗುತ್ತವೆ. ಅವರ ಸಾವಿನ ನಂತರ ಮನ್ನಾ ಮಾಡುತ್ತವೆ.
ಇದು ವಂಚನೆಗಾಗಿ ಮತ್ತು ಜನಸಾಮಾನ್ಯರನ್ನು ಮರಳು ಮಾಡುವುದಕ್ಕೆ ಕಂಡುಕೊಂಡ ಹೊಸ ವಿಧಾನ.

ವಿಶ್ವ ಬ್ಯಾಂಕ್ ಸಮೀಕ್ಷೆಯ ಪ್ರಕಾರ ೨೦೦೮ ರಲ್ಲಿ ಭಾರತದ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಶೇಕಡ೨.೨ ರಷ್ಟಿತ್ತು. ೨೦೧೯ ರಲ್ಲಿ ಈ ಪ್ರಮಾಣ ಶೇಕಡ ೯.೯ ರಷ್ಟಿದೆ. ಇದು ತೀರಾ ಅಪಾಯಕಾರಿ ಸಂಗತಿ ಎಂದು ಎಚ್ಚರಿಸಿದೆ.
ಬ್ಯಾಂಕಿಂಗ್ ಪರಿಭಾಷೆಯಲ್ಲಿ ವಿಂಡೋ ಡ್ರೆಸ್ಸಿಂಗ್ ಎಂಬ ಶಬ್ದವಿದೆ. ಅಂದರೆ ಕಿಟಿಯಲ್ಲಿ ಕಾಣುವ ದೇಹವನ್ನು ಮಾತ್ರ ಶೃಂಗಾರ ಮಾಡುವುದು ಎಂದರ್ಥ.
ನಿಮಗೆಲ್ಲಾ ತಿಳಿದಿರುವಂತೆ ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಬ್ಯಾಂಕುಗಳು ನಮ್ಮ ಖಾತೆಯಲ್ಲಿ ಇರುವ ಹಣವನ್ನು ತೆಗೆಯದಂತೆ ಮನವೊಲಿಸುತ್ತವೆ. ಜೊತೆಗೆ ವ್ಯಾಪಾರಸ್ಥರಿಂದ ಎರಡು ದಿನದ ಮಟ್ಟಿಗೆ ಅವರ ಖಾತೆಯಲ್ಲಿ ಅಪಾರ ಪ್ರಮಾಣದ ಹಣ ಇರುವಂತೆ ನೋಡಿಕೊಳ್ಳುತ್ತವೆ.
ಏಕೆಂದರೆ, ವಾರ್ಷಿಕ ಲೆಕ್ಕ ಪತ್ರ ದಲ್ಲಿ ಮಾರ್ಚ್ ೩೦ ಕ್ಕೆ ಕೊನೆಗೊಂಡ ಲೆಕ್ಕ ಪತ್ರದ ಪ್ರಕಾರ ನೀಡಿರುವ ಸಾಲದ ಪ್ರಮಾಣದ ಹತ್ತು ಪಟ್ಟು ಹೆಚ್ಚು ಹಣ ಠೇವಣಿ ರೂಪದಲ್ಲಿ ಬ್ಯಾಂಕಿನಲ್ಲಿದೆ ಎಂದು ತೋರಿಸುವ ಹುನ್ನಾರ ಈ ತಂತ್ರದಲ್ಲಿ ಅಡಗಿದೆ.
ಇಂತಹ ಸೂಕ್ಷ್ಮ ಸಂಗತಿಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಇನ್ನೂ ದೇಶಭಕ್ತರಿಗೆ ಅವರ ಜನ್ಮದಲ್ಲಿ ಅರ್ಥವಾಗುವುದಿಲ್ಲ.
ಇಂತಹ ಸೂಕ್ಷ್ಮ ಸಂಗತಿಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಇನ್ನೂ ದೇಶಭಕ್ತರಿಗೆ ಅವರ ಜನ್ಮದಲ್ಲಿ ಅರ್ಥವಾಗುವುದಿಲ್ಲ.
ಭಾರತಕ್ಕೆ ಆವರಿಸುವ ಕೊರನಾ ಖಾಯಿಲೆಯಿಂದ ಆರ್ಥಿಕತೆಗೆ ಈಗ ಬಿದ್ದಿರುವ ಹೊಡೆತ ನನ್ನ ದೃಷ್ಟಿಯಲ್ಲಿ ತೀರಾ ಕಡಿಮೆ. ಮುಂದೈತೆ ಮಾರಿ ಹಬ್ಬ. ಕೊರನಾ ಸಮಸ್ಯೆಯ ನಂತರದ ಭಾರತದ ಆರ್ಥಿಕತೆ ಸುಧಾರಿಸಲು ಕನಿಷ್ಟ ಇಪ್ಪತ್ತು ವರ್ಷ ಬೇಕಾಗಬಹುದು.
ಕೊನೆಯ ಮಾತು - ಕಳೆದ ಒಂದು ದಶಕದಲ್ಲಿ ಒಟ್ಟು ಎಂಟು ಲಕ್ಷ ಕೋಟಿ ಅನುತ್ಪಾದಕ ಸಾಲವನ್ನು ಭಾರತದಲ್ಲಿ ಅಮಾನತ್ತು ಮಾಡಲಾಗಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಸಹ ಒಟ್ಟು ಒಂದು ಲಕ್ಷದ ಎಂಬತ್ತು ಸಾವಿರ ಕೋಟಿ ಹಣವನ್ನು ಚುಕ್ತಾ ಮಾಡಿದೆ. ಈ ಹಣ ವಸೂಲಿಯಾಗುವ ಅಥವಾ ವಾಪಸ್ ಬರುವ ಸಂಭವವಿಲ್ಲ.

ಸ್ಮಶಾನಕ್ಕೆ ಹೋದ ಹೆಣ ಮತ್ತು ತಿರುಪತಿ ಹುಂಡಿಗೆ ಹಾಕಿದ ಹಣ ವಾಪಸ್ ಬರುವುದುಂಟೆ?