ಇದು
ಭಾರತದಸಾಂಸ್ಕತಿಕ ಕಥನ ಲೋಕದ ಅಧ್ಯಯನ ಪರಂಪರೆಯ ಬೌದ್ಧಿಕ ದುರಂತವೂ ಹೌದು; ಜೊತೆಗೆ ಸಾಮಾಜಿಕ ಸ್ಥಿತಿಗಳ ಕುರಿತ ಅಧ್ಯಯನದ ಬಗೆಗೆ ನಮಗಿರುವ ಮಿತಿಯೂ ಹೌದು. ಕಳೆದ ಎಪ್ಪತ್ತೈದು ವರ್ಷಗಳ ಇತಿಹಾಸವನ್ನು ತಿರುವಿಹಾಕಿದರೆ, ಭಾರತದ ಅರಣ್ಯದಲ್ಲಿ ಅನಾಮಿಕರಂತೆ ಬದುಕುತ್ತಿರುವ ಆದಿವಾಸಿಗಳ ಅಥವಾ ಬುಡಕಟ್ಟು ಜನಾಂಗಗಳ ಕುರಿತಂತೆ ಭಾರತದ ವಿಶ್ವ ವಿದ್ಯಾಲಯಗಳ ಮೂಲಕ ಗಂಭೀರ ಅಧ್ಯಯನ ಈವರೆಗೆ ಸಾಧ್ಯವಾಗಿಲ್ಲ. ಭಾರತದ ಅರಣ್ಯವಾಸಿಗಳ ಕುರಿತಂತೆ, ಅವರ ಸಾಮಾಜಿಕ ಬದುಕು, ಪಲ್ಲಟಗಳು, ಸಂಸ್ಕøತಿ, ಆಚರಣೆಗಳು ಇಂತಹ ಬಹುತೇಕ ಅಧ್ಯಯನಗಳು ವಿದೇಶಿ ವಿದ್ವಾಂಸರಿಂದ ಮತ್ತು ವಿಶ್ವ ವಿದ್ಯಾಲಯಗಳಿಂದ ಹೆಚ್ಚು ನಡೆದಿರುವುದು ವಿಶೇೀಷವಾಗಿದೆ. ಇಂತಹ ಶೋಚನೀಯವಾದ ಸ್ಥಿತಿಯಲ್ಲಿ ಕನ್ನಡದ ಸಂದರ್ಭದಲ್ಲಿ ಯಮುನಾ ಗಾಂವಕರ್ ಮತ್ತು ಡಾ.ವಿಠಲ ಭಂಡಾರಿ
ದಂಪತಿಗಳು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲ್ಲೂಕಿನ ಕುಣುಬಿ ಮತ್ತು ಗೌಳಿ ಜನಾಂಗ ಕುರಿತಂತೆ ವಿಸ್ತøತ ಅಧ್ಯಯನ ನಡೆಸಿರುವುದು
ಇತರೆ ಅಧ್ಯಯನಗಳಿಗೆ ಮಾದರಿಯಾಗಿದೆ.
ಭಾರತದಲ್ಲಿ
ಪ್ರಥಮ ಬಾರಿಗೆ ಎನ್ನಬಹುದಾದ ಅಧ್ಯಯನ ಮದ್ರಾಸ್ ರೆಸಿಡೆನ್ಸಿ ಪ್ರಾಂತ್ಯದಲ್ಲಿ ನಡೆಯಿತು. ಎಡ್ಗರ್ ಥರ್ಸ್ಟನ್ ಎಂಬ ವಿದ್ವಾಂಸ 1909 ರಿಂದ 1929 ರವರೆಗೆ ರಂಗಾಚಾರಿ ಎಂಬುವರ ಜೊತೆಗೂಡಿ ತಮಿಳುನಾಡು, ಕರ್ನಾಟಕ, ಆಚಿಧ್ರ ಮತ್ತು ಕೇರಳದ ಅರಣ್ಯಗಳಲ್ಲಿ ಬದುಕುತ್ತಿದ್ದ ಬುಡಕಟ್ಟು ನಿವಾಸಿಗಳನ್ನು ಸಂದರ್ಶಸಿ “ ಕ್ಯಾಸ್ಟ್ ಅಂಡ್ ಟ್ರೈಬ್ ಆಫ್ ಸದರನ್ ಇಂಡಿಯಾ” ಎಂಬ ಏಳು ಸಂಪುಟಗಳ ಆದಿವಾಸಿಗಳ ಕೃತಿಯನ್ನು ರಚಿಸಿದನು. ಈ ಸಂಪ್ಮಟಗಳು ಒಂದು
ರೀತಿಯಲ್ಲಿ ಸಚಿತ್ರ ವಿವರಗಳನ್ನು ಒಳಗೊಂಡ ಡಿಕ್ಷನರಿ ಮಾದರಿಯಲ್ಲಿ ಇದ್ದು, ಪ್ರತಿ ಬುಡಕಟ್ಟು ಜನಾಂಗದ ಜಾತಿ, ಅವರುಗಳ ಸಾಂಸ್ಕತಿಕ ಆಚರಣೆ, ಬದುಕಿನ ಶೈಲಿ ಇವುಗಳನ್ನು ವಿವರವಾಗಿ ದಾಖಲಿಸಿರುವ್ಯದರಿಂದ ಅಂದಿನ ಬುಡಕಟ್ಟು ನಿವಾಸಿಗಳ ನೈಜ ಚಿತ್ರಣ ನಮಗೆ ದೊರೆಯುತ್ತದೆ. ಆನಂತರ 1930 ರ ದಶಕದಲ್ಲಿ
ಭಾರತಕ್ಕೆ ಕ್ರೈಸ್ತ ಪಾದ್ರಿಯಾಗಿ ಭಾರತಕ್ಕೆ ಬಂದ ವ್ಭೆರಿಯರ್ ಎಲ್ವಿನ್ ನಂತರದ ದಿನಗಳಲ್ಲಿ ತನ್ನ ವೃತ್ತಿಯನ್ನು ತೊರೆದು ಮಧ್ಯಭಾರತದ ಆದಿವಾಸಿಗಳ ಕುರಿತು ಅಧ್ಯಯನ ನಡೆಸಿದರು. ವೇರಿಯರ್ ಎಲ್ವಿನ್
ಅವರು ಮಧ್ಯ ಭಾರತದ ಆದಿವಾಸಿಗಳ ಕುರಿತು ನಡೆಸಿರುವ ಕುತೂಹಲಕಾರಿ
ಸಾಂಸ್ಕøತಿಕ ಅಧ್ಯಯನಗಳನ್ನು
ಸಂಗ್ರಹದ ರೂಪದಲ್ಲಿ ಕನ್ನಡಕ್ಕೆ ಹೆಚ್.ಎಲ್.ನಾಗೇಗೌಡರು “ ಗಿರಿಜನ ಪ್ರಪಂಚ” ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ಆನಂತರ 1974 ರಿಂದ
1998 ರ ವರೆಗೆ ಭಾರತದ ಪೂರ್ವ ಕರಾವಳಿಯ ಅರಣ್ಯದುದ್ದಕ್ಕೂ ಇರುವ ಆದಿವಾಸಿಗಳ ಕುರಿತು ಅಧ್ಯಯನ ನಡೆಸಿದ ಕ್ರಿಸ್ಟೋಪ್ ವನ್ ಪರರ್ ಹೈಮೆಂಡರ್ಸ್ ಎಂಬ ವಿದ್ವಾಂಸನ “ ಟ್ರೈಬ್ಸ್ ಆಫ್ ಇಂಡಿಯಾ; ದ ಸ್ಟಗಲ್ ಫಾರ್
ಸರ್ವೆವೈಲ್” ಎಂಬ ಕೃತಿ ಹಾಗೂ ತಮಿಳುನಾಡಿನ ಸಸ್ಯ ವಿಜ್ಞಾನಿ ಮಧು ರಾಮನಾಥನ್ ಎಂಬುವರು ಇಪ್ಪತ್ತು ವರ್ಷಗಳ ಕಾಲ ಮಧ್ಯ ಪ್ರದೇಶದ ಬಸ್ತರ್ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಜೊತೆ ಬದುಕುತ್ತಾ, ಅವರ ಬದುಕು, ಹೋರಾಟ, ದೇಶಿ ಜ್ಞಾನ, ಅಜ್ಞಾನ, ಮುಗ್ಧತೆ ಇವುಗಳನ್ನು ತಮ್ಮ “ ದ ಲಿವ್ಸ್ ಕಪ್
ಅಂಡ್ ವುಡ್ ಸ್ಮೋಕ್ “ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಇತ್ತೀಚೆಗೆ ಅಂದರೆ 2011 ರಲ್ಲಿ ಓರಿಯಂಟ್ ಲಾಂಗ್ ಮನ್ ಪ್ರಕಾಶನದಿಂದ ಹೊರಬಂದಿರುವ ಹಾಗೂ ಡಾ.ಜಿ.ಎನ್.ದೇವಿ ಹಾಗೂ ಜೆಪ್ರಿ ವಿ.ಡೆವಿಸ್ ಮತ್ತು
ಕೆ.ಕೆ. ಚಕ್ರವರ್ತಿ ಇವರು ಸಂಪಾದಿಸಿರುವ “ ವಾಯ್ಸ್ ಅಂಡ್ ಮೆಮೋರಿ” ಇವೆಲ್ಲವೂ ಭಾರತದ ಆದಿವಾಸಿಗಳ, ಬುಡಕಟ್ಟು ಜನಾಂಗಗಳ ಕುರಿತಂತೆ ಅಪೂರ್ವ ಒಳನೋಟಗಳನ್ನು ನೀಡುವ ಮಹತ್ವದ ಕೃತಿಗಳಾಗಿವೆ. ಇಂತಹದ್ದೇ ಸಾಲಿನಲ್ಲಿ ನಿಲ್ಲುವ ಯಮುನಾ ಗಾಂವಕರ್ ಮತ್ತು ವಿಠಲ ಭಂಡಾರಿಯವರ “ ಜೋಯ್ಡಾ ಕಾಡೊಳಗಿನ ಒಡಲು” ಎಂಬ ಕೃತಿಯು ಕನ್ನಡದ ಸಂದರ್ಭದಲ್ಲಿ ಮಹತ್ವದ ಕೃತಿ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈ
ಕೃತಿಯ ಮುಖ್ಯ ಲೇಖಕರಲ್ಲಿ ಒಬ್ಬರಾಗಿರುವ ಶ್ರೀಮತಿ ಯಮುನಾ ಗಾಂವಕರ್, ಜೋಯ್ಡಾ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದು, ಅಲ್ಲಿನ ನೆಲ, ಜಲ, ಗಾಳಿ, ಘಮಲು ಇವುಗಳ ಜೊತೆ ಒಡನಾಡುತ್ತಾ ಹೋರಾಟಗಾರ್ತಿಯಾಗಿ ರೂಪುಗೊಂಡವರು. ಹಾಗಾಗಿ ಅವರಿಗೆ ಜೋಯ್ಡಾ ತಾಲ್ಲೂಕಿನ ನಿವಾಸಿಗಳ ಬದುಕಿನ ವಿವರ, ಬವಣೆಗಳು, ಸಾಂಸ್ಕøತಿಕ ಆಚರಣೆಗಳು ಇವೆಲ್ಲವುಗಳ ಆಳವಾದ ಪರಿಚಯವಿರುವುದರಿಂದ ಈ ಕೃತಿಯಲ್ಲಿ ಅವೆಲ್ಲವೂ
ವಿದ್ವತ್ ಪೂರ್ಣವಾಗಿ ದಾಖಲಾಗಿವೆ. ಈವರೆಗೆ ಕರ್ನಾಟಕದಲ್ಲಿ ಕೆಲವು ಪಿ.ಹೆಚ್.ಡಿ.
ಅಧ್ಯಯನ ಅಥವಾ ಸಾಮಾಜಿಕ ಅಧ್ಯಯನದ ದೃಷ್ಟಿಯಿಂದ ಬಂಡಿಪುರ, ನಾಗರಹೊಳೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಇರುಳರು, ಸೋಲಿಗರು, ಕಾಡು ಕುರುಬರು, ಕೊರಗರು ಇಂತಹವರ ಕುರಿತಾಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಾಲಕ್ಕಿ ಒಕ್ಕಲಿಗ ಮತ್ತು ಸಿದ್ದಿ ಜನಾಂಗ ಕುರಿತಾಗಿ ಪಾಶ್ರ್ವ ನೋಟದ ಅಧ್ಯಯಗಳು ಮಾತ್ರ ಸಣ್ಣ ಪ್ರಮಾಣದಲ್ಲಿ ಜರುಗಿವೆ.. ಆದರೆ, ಒಂದು ಬುಡಕಟ್ಟು ಜನಾಂಗ ಕುರಿತಂತೆ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಿ, ಉತ್ತರ ಕನ್ನಡ ಜಿಲ್ಲೆಯ ಗೌಳಿ ಮತ್ತು ಕುಣುಬಿ ಜನಾಂಗದ ಇತಿಹಾಸವನ್ನು ಈ ಕೃತಿಯಲ್ಲಿ ದಾಖಲಿಸಿರುವುದು
ವಿಶೇಷವಾಗಿದೆ.
ಕರ್ನಾಟಕದ
ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡ ಎಪ್ಪತ್ತೈದರಷ್ಟು ಭಾಗ ಅರಣ್ಯ ಇರುವುದು ವಿಶೇಷವಾಗಿದೆ. ಸುಮಾರು 14 ಲಕ್ಷದ 36 ಸಾವಿರದಷ್ಟು ಜನಸಂಖ್ಯೆ ಇರುವ ಈ ಜಿಲ್ಲೆಯಲ್ಲಿ ರಾಜ್ಯದ
ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಪ್ರಸಿದ್ಧಿಯಾಗಿರುವ ಜೋಯ್ಡಾ ತಾಲ್ಲೂಕಿನಲ್ಲಿ ಕೇವಲ ಐದು 52 ಸಾವಿರದಷಟು ಜನ
ಮಾತ್ರ ವಾಸಿಸುತ್ತಿದ್ದಾರೆ. ಬೌಗೂಳಿಕವಾಗಿ ಅತ್ಯಂತ ವಿಸ್ತೀರ್ಣವಾಗಿರುವ ಈ ತಾಲೂಕಿನಲ್ಲಿ ಒಂದು
ಚದುರ ಕಿಲೊಮೀಟರ್ ಗೆ ಕೇವಲ 29 ಮಂದಿ
ವಾಸಿಸುತ್ತಿರುವುದು ಹಾಗೂ ಇರಲ್ಲಿ ಶೇಕಡ ಎಂಬತ್ತರಷ್ಟು ಮಂದಿ ಅರಣ್ಯವಾಸಿಗಳಾಗಿದ್ದು ನಾಡಿನ ಸಂಪರ್ಕ ಕಡಿದುಕೊಂಡು ಎಲ್ಲಾ ರೀತಿಯ ಸೌಲಭ್ಯಗಳಿಂದ ವಂಚಿತರಾಗಿ ಕಳೆದ ಎರಡು ಮೂರು ಶತಮಾನಗಳಿಂದ ಬದುಕುತ್ತಿದ್ದಾರೆ. ಮೂಲತಃ ಮಹಾರಾಷ್ಟ್ರದವರಾದ ಇಲ್ಲಿನ ಕುಣುಬಿ ಜನಾಂಗ ನೆರೆಯ ಗೋವಾ ರಾಜ್ಯದಿಂದ ಪೋರ್ಚುಗೀಸರ ಕಿರುಕುಳ ತಾಳಲಾರದೆ P್ಫಡಿಗೆ ಬಂದು ನಿಸರ್ಗದ ಜೊತೆ ಬದುಕು ಕಟ್ಟಿಕೊಂಡವರು. ಇವೊತ್ತಿಗೂ ಸಹ ಕನ್ನಡ ಶಾಲೆಗಳಲ್ಲಿ
ಅಕ್ಷರ ಕಲಿತ ಒಂದಿಷ್ಟು ಯುವಕ, ಯುವತಿಯರು ಮತ್ತು ಶಾಲಾ ಮಕ್ಕಲನ್ನು ಹೊರತು ಪಡಿಸಿದರೆ ಇಲ್ಲಿನ ಕುಣುಬಿ ಜನಾಂಗಕ್ಕೆ ಕನ್ನಡ ಭಾಷೆಯ ಪರಿಚಯವಿಲ್ಲ. ಹಾಗಾಗಿ ಅನಕ್ಷರತೆ, ಮುಗ್ಧತನ, ಹಿಂಜರಿಕೆ ಇವುಗಳ ಫಲವಾಗಿ ಅರಣ್ಯದಲ್ಲಿ ಬದುಕುತ್ತಿರುವ ಇಲ್ಲಿಯ ಜನರ ಗೋಳು ಮತ್ತು ಸಂಕಷ್ಟ ನಿಜಕ್ಕೂ ಧಾರುಣವಾದುದು.
ಕಾಳಿನದಿಯ
ತಟದಲ್ಲಿ ಬದುಕುತ್ತಿದ್ದ ಇವರೆನ್ನೆಲ್ಲಾ ಇತ್ತೀಚೆಗಿನ ವರ್ಷಗಳಲ್ಲಿ ಅಣೆಕಟ್ಟು ನಿರ್ಮಾಣದ ನೆಪದಲ್ಲಿ ಒಕ್ಕಲೆಬ್ಬಿಸಲಾಯಿತು. ವಿದ್ಯುತ್ ನೀಡುವ ನೆಪದಲ್ಲಿ ನಿರಂತರವಾಗಿ
ಆರು ಅಣೆಕಟ್ಟುಗಳು ನಿರ್ಮಾಣವಾದರೂ ಸಹ ನಾಡಿಗೆ ಬೆಳಕನ್ನು
ನೀಡಿ ಈ ಜನತೆ ಮಾತ್ರ
ಕತ್ತಲೆಯಲ್ಲಿ ಉಳಿದು ಹೋದರು. ಆನಂತರ
ಹುಲಿ ಸಂರಕ್ಷಣಾ ಯೋಜನೆ, ರಕ್ಷಿತ ಅರಣ್ಯ ವಲಯ ಎಂಬ ಹೆಸರಿನಲ್ಲಿ ಅರಣ್ಯದಿಂದ ಹೊರದೂಡುವ ಕಾರ್ಯಕ್ರವನ್ನು ಸರ್ಕಾರದ ಮೂಲಕ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದೆ. ನಿಸರ್ಗಕ್ಕೆ ಹಾಗೂ ಅರಣ್ಯಕ್ಕೆ ಎರವಾಗದಂತೆ ಕೃಷಿ ಹಾಗೂ ಅರಣ್ಯದ ಕಿರು ಉತ್ಪನ್ನಗಳ ಮೂಲಕ ಬದುಕು ಸಾಗಿಸುತ್ತಿದ್ದ ಈ ನತದೃಷ್ಟುರು, ವಿದ್ಯುತ್,
ರಸ್ತೆ ಸಂಪರ್ಕ, ಸೇತುವೆ, ಶಾಲೆ ಅಥವಾ ಆರೋಗ್ಯ ಸೇವೆಗಳಿಂದ ವಂಚಿತರಾಗಿ, ಬಾಯಿದ್ದು
ಮೂಕರಂತೆ ಬದುಕುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಹತ್ತಕ್ಕೂ ಹೆಚ್ಚು ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಿ ಕಳಿಸಿರುವ ಇವರು ಅವರ ಪಾಲಿಗೆ ನಗಣ್ಯರಾಗಿದ್ದಾರೆ. ಕೇವಲ ಮೂರು ಅಥವಾ ನಾಲ್ಕು ಸಾವಿರ ಮಂದಿ ಇರುವ ಈ ಜನಾಂಗವನ್ನು ಈವರೆಗೆ
ಪರಿಶಿಷ್ಟ ವರ್ಗಕ್ಕೆ ಸೇರಿಸದೆ, ಒಂದು ರೀತಿಯಲ್ಲಿ ಮಲತಾಯಿ ಮಕ್ಕಳಂತೆ ನೋಡಿಕೊಂಡು ಬರಲಾಗಿದೆ.
ಕಳೆದ
ಇಪ್ಪತ್ತೈದು ವರ್ಷಗಳಿಂದ ಈ ಅರಣ್ಯ ಮಕ್ಕಳ
ಘನತೆಯ ಮತ್ತು ನೆಮ್ಮದಿಯ ಬದುಕಿಗಾಗಿ ಈ ವರೆಗೆ ನಡೆದಿರುವ
ಹೋರಾಟದ ಕಥನವನ್ನು ಈ ಕೃತಿಯಲ್ಲಿ ಅಂಕಿ
ಅಂಶಗಳ ಸಮೇತ ದಾಖಲಿಸಿರುವ ಭಂಡಾರಿ ದಂಪತಿಗಳು, ಕುಣುಬಿ ಜನಾಂಗದ ಸಾಂಸ್ಕøತಿಕ ಜೀವನ, ಅವರ ಬದುಕಿನ ಪದ್ಧತಿ, ಕೃಷಿ, ಬ್ಭೆಟೆಯ ವಿವರಗಳು, ಹಬ್ಬ, ವಿವಾಹದಂತೆ ಆಚರಣೆಗಳು, ಆಹಾರ ಸಂಸ್ಕøತಿ ಮತ್ತು ಅವರಲ್ಲಿ
ಇರುವ ದೇಶಿ ಜ್ಞಾನ ಪರಂಪರೆ ಇವೆಲ್ಲವನ್ನೂ ಅಧ್ಯಯನ ಮತ್ತು ಕ್ಷೇತ್ರ ಕಾರ್ಯದ ಮೂಲಕ ಕಲೆ ಹಾಕಿ ಈ ಕೃತಿಯಲ್ಲಿ ದಾಖಲಿಸಿರುವುದು
ವಿಶೇಷವಾಗಿದೆ.
ಈ
ಕೃತಿ ಕೇವಲ ಒಂದು ಜನಾಂಗದ ಸಾಂಸ್ಕತಿಕ ದಾಖಲೆ ಅಥವಾ ಅವರ ಸಾಮಾಜಿಕ ಬದುಕಿನ ದಾಖಲೆ ಮಾತ್ರವಾಗಿರದೆ, ಈ ನೆಲದ ನತದೃಷ್ಟರು,
ಅನಕ್ಷಸರಸ್ತರು ಮತ್ತು ಮುಗ್ಧ ಜೀವಿಗಳನ್ನು ಆಳುವ ಸರ್ಕಾರಗಳು ಹೇಗೆ ಶೋಷಿಸಬಲ್ಲವು ಎಂಬುದನ್ನು ಅಂಕಿ ಅಂಶಗಳು ಮತ್ತು ದಾಖಲೆ ಸಮೇತ ಹೇಳುವ ಕೃತಿಯಾಗಿದೆ. ಇಂತಹ ಅಪರೂಪದ ಕೃತಿಯನ್ನು ತಂದಿರುವ ಭಂಡಾರಿ ದಂಪತಿಗಳಿಗೆ ಕಾಡಿನ ಜನರ ಪರವಾಗಿ ಅಭಿನಂದನೆಗಳು.