ಮಂಗಳವಾರ, ಅಕ್ಟೋಬರ್ 21, 2014

ಕನ್ನಡಕ್ಕೆ ಓರಾಡು ಕಂದ




ಕನ್ನಡ ಬಾಷಾದ ಬಗ್ಗೆ ಸುಪ್ರಿಂ ಕೋರ್ಟ ಜಜಮಂಟ ಬಂದ ಮ್ಯಾಗ ಸರಕಾರ ಗಪ್ಚುಪ್ ಕುಂತದ್ದ ನೋಡಿದ್ರ ಸರಕಾರಕ್ಕ ಅಂತಾದ್ದನ ಜಜ್ಮೆಂಟ ಬರಬೇಕಾಗಿತ್ತೇನೋ ಅಂತ ಗುಮಾನಿ ಬರಲಿಕ್ಕ ಹತ್ತೆದ.ಅದಕ್ಕ ಕೇಸಿನ ಬಗ್ಗೆ ಕೋರ್ಟ ಮುಂದ ಎಷ್ಟ ಕಾಳಜಿಲೆ ಸರಕಾರ ವಾದಾ ಮಾಡಬೇಕಾಗಿತ್ತ ಅಷ್ಟ ಕಾಳಜಿಲೆ ಮಾಡಲಿಲ್ಲ ಅಂತ ಯಾಲ್ಲಾರು ಅನ್ನುವಾಂಗ ಆಗೇತಿ.ಸರಕಾರರ ಮುಂದ.. ಏನ ಮಾಡಬೇಕಂತ ಮಾಡೇತಿ ಅನ್ನುದರೆ ಜನಕ್ಕ ಗೊತ್ತ ಆಗಬೇಕು.ಇನ್ನೊಂದಿಷ್ಟ ದಿನ ಹಿಂಗ ಹ್ವಾದರ ರಾಜ್ಯದ ಜನ ವಿಷಯನ ಮಾರ್ತ ಬಿಡತಾರಂತ ಸರಕಾರ ತಿಳ್ಕೊಬಾರದು.ಆಗಲೆ ಮುಂದಿನ ವರ್ಷದಿಂದ ಪ್ರತಿಯೊಂz ಹಳ್ಯಾಗ ಇಂಗ್ಲಿಷ ಸಾಲಿ ತಗಿಲಿಕ್ಕ ಮಂದಿ ಸಜ್ಜ ಆಗಲಿಕ್ಕÀತ್ಯಾರು.ಅಷ್ಟ ಆದರ ನಮ್ಮ ಕನ್ನಡ ಸಾಲಿ ಕದ ಒಂದೊಂದ ಮುಚ್ಚಗೊತ ಹೊಗ್ತಾವು.ನಮ್ಮ ಬಾಷಾ ಇನ್ನೊಂದ ನಾಲ್ಕೊಪ್ಪತ್ತ ವರ್ಷ ಹಂಗಟ ಹಿಂಗಟ ಜೀವ ಹಿಡ್ಕೊಂಡ,ಕೋಮಾದಾಗ ಹೋಗಿ ಆಮ್ಯಾಗ ಗೊಟಕ್ ಅನ್ನು ದಿನ ಏನ ದೂರ ಇಲ್ಲ.ಆಗ ನಮ್ಮ ನಾಡನ ಇಂಗ್ಲಿಷ ನಾಡಾಗಬಹುದು.



  ಆಲ್ಲಾ, ನಮ್ಮ ದೊಡ್ಡದೊಡ್ಡ ಕನ್ನಡ ಸಾಹಿತಿಗಳಿಗೂ ಗರ ಬಡದಾಂಗ ಕಾಣತ್ಯೆತಿ.ಕನ್ನಡಕ್ಕ ಗತಿ ಬಂದಿದ್ರೂ ಯಾರೂ ಬಾಯಿಬಿಡಾಕ ತಯಾರಿಲ್ಲ. ಸರಕಾರಕ್ಕ ಗುದ್ದಿ ಹೇಳಾಕ ತಯಾರಿಲ್ಲ.ಕನ್ನಡದ ಹೆಸರಲೆ ಮಾನಸನ್ಮಾನ,ಹಾರಾತುರಾಯಿ,ಬಿರುದುಬಾವಲಿ ಪಡಕೊಂಡವರು/ಹೊಡಕೊಂಡವರು ಹೊತ್ತಿನಾಗರೆ ಒಂದಿನ ಕನ್ನಡಕ್ಕಾಗಿ ಉಪವಾಸ ಮಾಡಬೇಕಾಗಿತ್ತು.ಒಂದೊಂದು ಬಿರುದು ಕಳಚಿ ಒಗದು ಸರಕಾರಕ್ಕ ಬಿಸಿ ಮುಟ್ಟಸಬೇಕಾಗಿತ್ತು.ಕನ್ನಡನ ಉಳಿಲಿಲ್ಲಂದ್ರ ನಾಳಿ ಇವರ ಸಾಹಿತ್ಯರ ಯಾರ ಓದ್ತಾರ.ಈಗ ಯಾರು ಓದುದಿಲ್ಲ. ’ನಮ್ಮ ಸಾಲಿಗೊಳ ಸುದಾರಸ್ರಿ,ಕನ್ನಡದ ಕುಡ ಇಂಗ್ಲಿಷನೂ ಚಲೂತಾಂಗಿ ಕಲಸ್ರಿ,ಕನ್ನಡ ಸಾಲಿಗೊಳ್ಗಿ ಮಾಸ್ತರನ್ ನೇಮಸ್ರಿ,ಕನ್ನಡ ಸಾಲಿ ಹ್ಯಾಂಗರೆ ಮಾಡಿ ಉಳಸ್ರಿ,ಹಳ್ಳಿ ಹುಡುಗುರಿಗಿ ಅನ್ಯ ಮಾಡಬ್ಯಾಡರಿಅಂತ ಹೇಳಾಕ ಕೂಡ ಇವರಿಗಿ ಆಗುದಿಲ್ಲ ಅಂದ್ರ ಹ್ಯಾಂಗ. ಮೂಂದಿನ ತಿಂಗಳ ಮತ್ತ ರಾಜ್ಯೋತ್ಸವಕ್ಕ ನಮ್ಮ ಸಾಹಿತಿಗೊಳು ಸನ್ಮಾನಕ್ಕ ಸಜ್ಜಾಗುದಕ್ಕಿಂತ ಮೊದ್ಲು ಬಗ್ಗೆ ಸಲ್ಪ ವಿಚಾರ ಮಾಡ್ಲಿ.ಸಂವಿಧಾನ ತಿದ್ದಪಡಿ ಮಾಡಿ ಕನ್ನಡ ಉಳಸು ತಾಕತ್ತು ನಮ್ಮ ರಾಜ್ಯಕ್ಕಂತೂ ಬರುದಿಲ್ಲ.ನಮ್ಮ ಬಾಷಾ ಉಳಸಲಿಕ್ಕ ಬ್ಯಾರೆ ದಾರಿಅರೆ ಹುಡಕಬೇಕಲ್ಲಾ.




ಕನ್ನಡ ರಕ್ಷನ ಮಾಡ್ತಿವಂತ ಆಸಂಗ ಈಸಂಗ ಅಂತ ರಗಡ ಜನಾ ಉದ್ದಾರ ಆದಾವ್ರ ಅದಾರ.ಇನ್ನ ಇವ್ರ ಏನ ಮಾಡಿದ್ರು ಕನ್ನಡ ಉಳ್ಯಾಂಗಿಲ್ಲ.ಕನ್ನಡ ಆಗಲೆ ಜಾರ ಬಂಡಿ ಮ್ಯಾಲ ಕುಂತ್ಯೆತಿ.ಉಳ್ಳಿ ಬೀಳುದಷ್ಟ ಬಾಕಿ ಐತಿ.ಕಸಾಪ,ಕವಿವ,ಕಸಾಅ.....ಇವ್ಯಾವ್ಕು  ನಮ್ಮ ಬಾಷಾ ಎತ್ತಿ ನಿಲ್ಲಿಸು ತಾಕತ್ತು ಉಳದಾಂಗ ಕಾಣುದಿಲ್ಲ.ಮಾದ್ಯಮಗಳೂ ಬಾಷ ಸಮಸ್ಯ ಬಾಜುಕ್ಕ ಸರಿಸ್ಯಾವ.ಅದಕ್ಕ ಮುಂದಿನ ನವ್ಹಂಬರ ತಿಂಗಳಿಂದ ಕನ್ನಡ ಅವಸಾನೋತ್ಸವ ವರ್ಷ ಆಚರಿಸಲಿಕ್ಕ ಕನ್ನಡಿಗರೆಲ್ಲ ಸಜ್ಜಾಗ್ಲಿ ಅಂತ ನನ್ನ ಮನವಿ.

                                                                                                    ವೆಂಕಟೇಶ ಮಾಚಕನೂರ, ಧಾರವಾಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ