ಮಹಾ ಕುಂಭದಲ್ಲಿ ಬೂದಿ ಲೇಪಿತ ದೇಹ, ಭಯಾನಕ ಕೂದಲು ಮತ್ತು ಕೇಸರಿ ವಸ್ತ್ರ ಹೊಂದಿರುವ ಮಹಿಳಾ ನಾಗ ಸಾಧುಗಳು ಈ ಬಾರಿಯ ಮಹಾ ಕುಂಭಮೇಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಮಹಿಳಾ ನಾಗಾ ಸಾಧುವಿನ ಪ್ರಯಾಣವು ಸರಳ ಭಕ್ತಿಯದ್ದಲ್ಲ, ಅವರ ಈ ರೂಪಾಂತರವು ಕಠಿಣ ಆಧ್ಯಾತ್ಮಿಕ ಪ್ರಯೋಗಗಳನ್ನು ಒಳಗೊಂಡಿರುತ್ತದೆ ಜೊತೆಗೆ ಆಳವಾದ ಪರಿವರ್ತನೆಯದ್ದು ಹಾಗೂ ಲೌಕಿಕ ಪ್ರಪಂಚ ಮತ್ತು ಅದರ ಕುರಿತಾದ ಆಲೋಚನೆಯನ್ನು ತ್ಯಜಿಸುವುದು ಕಠಿಣ ಹಾದಿಯ ಜೊತೆಗೆ ಮುಖ್ಯವಾಗಿರುತ್ತದೆ. ಸನ್ಯಾಸಿಯಾಗುವ ಮೊದಲು, ಆಕೆ ಮಹಿಳೆ, ಹೆಂಡತಿ, ತಾಯಿ, ಮಗಳಾಗಿರುತ್ತಾಳೆ. ನಂತರ ಮನೆ , ಭೂಮಿಯ , ಕುಟುಂಬ ಮತ್ತು ಸಂತೋಷವನ್ನು ಬಿಟ್ಟು ಶಿವನಿಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ.
ಮಹಿಳಾ ನಾಗಾ ಸಾಧುಗಳಿಗೆ ದೀಕ್ಷಾ ಪ್ರಕ್ರಿಯೆಯು ಪುರುಷ ಸಹವರ್ತಿಗಳಿಗೆ ಇರುವಂತೆಯೇ ಕಠಿಣವಾಗಿರುತ್ತದೆ. ನಾಗ ಸಾಧ್ವಿಣಿಯ ಹೆಸರಿನಲ್ಲಿ ಸನ್ಯಾಸತ್ವ ಸ್ವೀಕರಿಸುವ ಮೊದಲು ಅವರು ತಮ್ಮ ಗುರುಗಳಿಗೆ ಅಚಲವಾದ ಸಮರ್ಪಣೆಯನ್ನು ಪ್ರದರ್ಶಿಸಬೇಕು ಮತ್ತು ತೀವ್ರವಾದ ಆಧ್ಯಾತ್ಮಿಕ ಪ್ರಯೋಗಗಳು ಮತ್ತು ತರಬೇತಿಯನ್ನು ಸಹಿಸಿಕೊಳ್ಳಬೇಕು. ಈ ಹಾದಿಯಲ್ಲಿ ಮೊದಲ ಹೆಜ್ಜೆ ಸ್ವಯಂ ತ್ಯಜಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ . ಅಹಂ, ಆಸೆಗಳು ಮತ್ತು ತಮ್ಮ ಗುರುತನ್ನು ಅಳಿಸು ಹಾಕುವುದರ ಜೊತೆಗೆ ಮರೆಯಬೇಕಾಗುತ್ತದೆ.
ನಾಗ ಸಾಧುಗಳು ವರ್ಷವಿಡೀ ತಮ್ಮ ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮುಳುಗಿರುತ್ತಾರೆ ಮತ್ತು ಕುಂಭದ ಸಮಯದಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ನಾಲ್ಕು ಕೇಂದ್ರಗಳಾದ ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ಗಳಲ್ಲಿ ನಡೆಯುವ ಎಲ್ಲಾ ಕುಂಭಗಳಲ್ಲಿ ಭಾಗವಹಿಸುತ್ತಾರೆ. ಶಾಹಿ ಸ್ನಾನದ ಸಮಯದಲ್ಲಿಯೂ ಸಹ ಅವರು ಅಪಾರ ಉತ್ಸಾಹದಿಂದ ತ್ರಿವೇಣಿ ಸಂಗಮದ ಹಿಮಾವೃತ ನೀರನ್ನು ಪ್ರವೇಶಿಸುವಾಗ, ಅತೀಂದ್ರಿಯ ಆನಂದದಲ್ಲಿ ಪರಸ್ಪರ ನೀರನ್ನು ಸಿಂಪಡಿಸುವಾಗ ಅವರ ವಿಶಿಷ್ಟ ಶೈಲಿ ಎದ್ದು ಕಾಣುತ್ತದೆ. ಪುರುಷ ಸಾಧುಗಳಂತೆಯೇ, ಮಹಿಳಾ ನಾಗಾ ಸಾಧುಗಳು ಸಹ ಅಚಲ ನಂಬಿಕೆ, ಭಕ್ತಿ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತಾರೆ. ಅವರ ಪಾಲಿಗೆ ಕುಂಭಮೇಳದ ಸ್ನಾನವು ಮರ್ತ್ಯ ಮತ್ತು ದೈವಿಕತೆಯ ವಿಲೀನ ಮತ್ತು ಅಜ್ಞಾತ ಲೋಕಕ್ಕೆ ಪ್ರಯಾಣವಾಗಿರುತ್ತದೆ
ಮಾಹಿತಿ
ಹಾಗೂ ಚಿತ್ರಗಳು- ಇಂಡಿಯಾ ಟುಡೆ.
ಕನ್ನಡಕ್ಕೆ-
ಎನ್.ಜಗದೀಶ್ ಕೊಪ್ಪ.