ಶುಕ್ರವಾರ, ಆಗಸ್ಟ್ 8, 2014

ಕಾಡುವ ಕಸ್ತೂರ ಬಾ ಏಕ ವ್ಯಕ್ತಿ ಪ್ರದರ್ಶನ ನಾಟಕ



ದಿನಾಂಕ 4-8-14 ಸೋಮವಾರ  ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತಗೊಂಡಕಸ್ತೂರ ಬಾಏಕ ವ್ಯಕ್ತಿ ಪ್ರದರ್ಶನÀ ಪ್ರಯೋಗವು ಮೈಸುರು ರಂಗಾಯಣದ ಪ್ರಬುದ್ಧ ಕಲಾವಿದೆ ಶಶಿಕಲಾ ಅವರಿಂದ ಸಮರ್ಥವಾಗಿ ಅನಾವರಣಗೊಳ್ಳುವುದರ ಮೂಲಕ ಪ್ರೇಕ್ಷಕರ ಮನದೊಳಗೆ ಬಿರುಗಾಳಿಯ ಅಲೆಯನ್ನೆಬ್ಬಿಸಿತು.
ಯಾವುದೇ ಒಬ್ಬ ರಂಗ ನಟ ಅಥವಾ ನಟಿಗೆ ಏಕ ವ್ಯಕ್ತಿ ಪ್ರದರ್ಶನವೆಂಬುದು  ಪ್ರತಿಭೆಗೆ ಸವಾಲೊಡ್ಡುವ ಕ್ರಿಯೆ ಕೂಡ ಹೌದು. ಪ್ರದರ್ಶನದುದ್ದಕ್ಕೂ ಅಭಿನಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಸನ್ನಿವೇಶಕ್ಕೆ ತಕ್ಕಂತೆ ಹಲವು ಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತಾ ಪ್ರೇಕ್ಷಕರನ್ನು ಏಕಾಗ್ರತೆಯ ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳುವುದು ಅವರ ಪಾಲಿಗೆ ಅಗ್ನಿ ಪರೀಕ್ಷೆ ಎನ್ನಬಹುದು. ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರ ಪತ್ನಿ ಕಸ್ತೂರಬಾರವರ ಅಂತರಂಗದ ತುಮಲ, ತಲ್ಲಣ ಮತ್ತು ತಳಮಳಗಳನ್ನು ಅಚ್ಚುಕಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದೆಗೆ ದಾಟಿಸುವಲ್ಲಿ ಶಶಿಕಲಾ ಯಶಸ್ವಿಯಾದರು.
ಕನ್ನಡ ರಂಗಭೂಮಿಗೆ ಏಕವ್ಯಕ್ತಿ ಪ್ರದರ್ಶನ ಪ್ರಕಾರ ಹೊಸದೇನಲ್ಲ. ಆದರೆ ಯಶಸ್ವಿಯಾದ ನಾಟಕಗಳು ಮಾತ್ರ ತೀರಾ ವಿರಳ ಎನ್ನಬಹುದು. ಬಹುಮುಖ ಪ್ರತಿಭೆಯ ಕನ್ನಡ ರಂಗಭೂಮಿಯ ಹಿರಿಯ ಕಲಾವಿದ ಹಾಗೂ ನಟ ದಿ. ಸಿಂಹ ರವರು ಎರಡು ದಶಕದ ಹಿಂದೆಟಿಪಿಕಲ್ ಕೈಲಾಸಂಎಂಬ ಏಕ ವ್ಯಕ್ತಿ ಪ್ರಯೋಗದ ಮೂಲಕ ನಾಂದಿ ಹಾಡಿದ ನಾಟಕ ಪ್ರಕಾರಕ್ಕೆ ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಕೂಡ ಲಭ್ಯವಾಯಿತು. ಅನಂತರ ಸಿಂಹರವರು ಕುವೆಂಪು ಕುರಿತ ನಾಟಕವನ್ನು ಕೂಡ ಪ್ರಯೋಗ ಮಾಡಿದರು. ಸಿ.ಆರ್. ಸಿಂಹ ರವರಿಂದ ಪ್ರೇರೆಣೆಗೊಂಡ ಅನೇಕ ರಂಗ ಕಲಾವಿದರು ನಮ್ಮ ಪೌರಾಣಿಕ ಕಥೆಗಳ ಹಲವು ನಾಯಕ/ ನಾಯಕಿಯರ ಕುರಿತಾದ ಏಕ ವ್ಯಕ್ತಿ ಪ್ರದರ್ಶನ ನೀಡತೊಡಗಿದ್ದಾರೆ. ಮಹಿಳಾ ಕಲಾವಿದೆಯರಲ್ಲಿ ಶ್ರೀಮತಿ ಲಕ್ಷ್ಮಿ ಚಂದ್ರಶೇಖರ್ ಈಗಾಗಲೆ ಗಮನ ಸೆಳೆಯುವಂತಹ ಹಲವು ಪ್ರಯೋಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದ್ದಾರೆ.
ಇದೀಗ ಕಳೆದ ಒಂದು ವರ್ಷದಿಂದ ಇಂತಹ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿರುವ ಮೈಸೂರು ರಂಗಾಯಣದ ಕಲಾವಿದೆ ಶಶಿಕಲಾ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಒಂದು ಪ್ರಯೋಗಕ್ಕೆ ಕಲಾವಿದನ ಅಥವಾ ಕಲಾವಿದೆಯ ಅಭಿನಯ ಎಷ್ಟು ಮುಖ್ಯವೊ, ಗಟ್ಟಿಯಾದ ಕಥೆಯ ಹಂದರ ಮತ್ತು ಸಂಭಾಷಣೆ ಕೂಡ ಅಷ್ಟೇ ಮುಖ್ಯವಾದವು. ನಿಟ್ಟಿನಲ್ಲಿ ಕಸ್ತೂರ ಬಾ ಯಶಸ್ವಿ ಪ್ರಯೋಗ ಎಂದು ಹೇಳಬಹುದು.

                                                     (ಎಸ್. ರಾಮನಾಥ್)

ಏಕ ವ್ಯಕ್ತಿ ಪ್ರದರ್ಶನದ  ಪ್ರಯೋಗಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವ ಮೈಸೂರು ರಂಗಾಯಣದ ಎಸ್. ರಾಮನಾಥ್ ತಾನೋರ್ವ ಕಲಾವಿದ ಮಾತ್ರವಲ್ಲ, ಅತ್ಯುತ್ತಮ ಬರಹಗಾರ ಎಂಬುದನ್ನು ನಾಟಕದಲ್ಲಿ ಸಾಬೀತು ಪಡಿಸಿದ್ದಾರೆ. ಮೈಸೂರು ರಂಗಾಯಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಮನಾಥ್ ಎಂ.ಎಸ್ಸಿ. ಪದವಿಧರರಾಗಿದ್ದು ರಂಗ ಶಿಕ್ಷಣ ಕುರಿತಂತೆ ಇಂಗ್ಲೀಷ್ ಮತ್ತು ಕನ್ನಡ ಭಾಷೆಯÀಲ್ಲಿ ಕೃತಿಯನ್ನೂ ಸಹ ರಚಿಸಿದ್ದಾರೆ.

ಮಹಾತ್ಮ ಗಾಂಧಿಜಿಯವರನ್ನು ಬಲ್ಲವರಿಗೆ ಅಥವಾ ಓದಿಕೊಂಡವರಿಗೆ ಅವರ ಖಾಸಾಗಿ ಬದುಕಿನ ಬವಣೆಗಳಾಗಲಿ, ದುರಂತಗಳಾಗಲಿ ಅಪರಿಚಿತವಾಗಿ ಉಳಿದಿಲ್ಲ. ಏಕೆಂದರೆ, ಸ್ವತಃ ಗಾಂಧೀಜಿಯವರೆ ಜಗತ್ತನ್ನು ಬೆಚ್ಚಿ ಬೀಳಿಸುವಂತೆ ತಮ್ಮ ಖಾಸಾಗಿ ಬದುಕಿನ ವಿವರಗಳನ್ನು, ದೌರ್ಬಲ್ಯಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ. ಕಾರಣಕ್ಕಾಗಿ ಅವರ ಆತ್ಮ ಕಥನ ಅತ್ಯಂತ ಪಾರದರ್ಶಕವಾದ ಆತ್ಮಕಥೆ ಎಂದು ಹೆಸರುವಾಸಿಯಾಗಿ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡು ಇಂದಿಗೂ ಸಹ ಅತ್ಯಂತ ಹೆಚ್ಚು ಮಾರಾಟವಾಗುವ ಕೃತಿಗಳಲ್ಲಿ ಒಂದಾಗಿದೆ. ಗಾಂಧೀಜಿಯವರ ಬದುಕಿನ ದುರಂತ ಮತ್ತು ವ್ಯಂಗ್ಯವೆಂದರೆ, ನಾವೆಲ್ಲಾ ಅವರನ್ನುರಾಷ್ಟ್ರಪಿತಎಂದು ಕರೆದೆವು. ವಾಸ್ತವವಾಗಿ ಅವರು ತಮ್ಮ ಮಕ್ಕಳಿಗೆ ಒಳ್ಳೆಯ ತಂದೆಯಾಗಲು ಸಾಧ್ಯವಾಗಲೇ ಇಲ್ಲ. ತನ್ನ ಪತ್ನಿ ಕಸ್ತೂರ ಬಾ ಅವರ ಬೇಕು ಬೇಡಗಳಿಗೆ  ಕಿವಿಗೊಟ್ಟು ಒಳ್ಳೆಯ ಪತಿಯಾಗಲಿಲ್ಲ. ಗಾಂಧೀಜಿಯವರ ಸ್ವಾತಂತ್ರ್ಯ ಹೊರಾಟ ಮತ್ತು ಅವರ ಕುಟುಂಬದ ಖಾಸಾಗಿ ಬದುಕಿನ ನೋವು ಹಾಗೂ ದುರಂತಗಳನ್ನು, ರೂಪಕದ ಭಾಷೆಯಲ್ಲಿ ವರ್ಣಿಸುವುದಾದರೆ, ವ್ಯಕ್ತಿಯೊಬ್ಬ ತನ್ನ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗುವ ಪರಿಎಂದು ಬಣ್ಣಿಸಬಹುದು.


ಹದಿನೈದು ವರ್ಷಗಳ ಹಿಂದೆ ಮರಾಠಿ ರಂಗಭೂಮಿಯಲ್ಲಿ ಯಶಸ್ವಿಯಾದ ಗಾಂಧಿ ವಿರುದ್ಧ ಗಾಂಧಿ ಎಂಬ ನಾಟಕವನ್ನು  ಬೆಳಗಾವಿಯ ಗೆಳೆಯ ಡಿ.ಎಸ್.ಚೌಗುಲೆ ಕನ್ನಡಕ್ಕೆ ತಂದಿದ್ದರು. ನಾಟಕ ರಾಜ್ಯಾದ್ಯಂತ ನೂರಾರು ಪ್ರಯೋಗಗಳನ್ನು ಕಂಡು ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಗಿದೆ. ನಾಟಕದಲ್ಲಿ ಗಾಂಧೀಜಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಘರ್ಷದ ಚಿತ್ರಣವಿದೆ.
ಕನ್ನಡದಲ್ಲಿ ರಚಿತವಾಗಿರುವ  ಕಸ್ತೂರಬಾ ನಾಟಕದಲ್ಲಿ ಹರೆಯಕ್ಕೆ ಕಾಲಿಡುವ ಮುನ್ನವೇ  ಗಾಂಧೀಜಿಯವರ ಪತ್ನಿಯಾಗಿ, ಅವರ ಮಕ್ಕಳಿಗೆ ತಾಯಿಯಾಗಿ ಕಸ್ತೂರಬಾ  ಅನುಭವಿಸಿದ ದುಃಖ ದುಮ್ಮಾನಗಳಿವೆ. ಒಂದೆಡೆ ನಾಟಕದಲ್ಲಿ ಕಸ್ತೂರಬಾ ಹೇಳುವನಾನು ಮಹಾತ್ಮನಿಗೆ ಪತ್ನಿಯಾಗಿದ್ದೆ, ಮೋಹನ ಕರಮಚಂದ ಗಾಂಧಿಗೆ   ಪತ್ನಿಯಾಗಲು ಸಾಧ್ಯವಾಗಲೇ ಇಲ್ಲಎನ್ನುವಂತಹ ಮಾತುಗಳು ಅರ್ಥಗರ್ಭಿತವಾಗಿದ್ದು, ಮಾತುಗಳು ಇಡೀ ಕಸ್ತೂರಬಾ ಬದುಕಿನ ಪ್ರತಿಬಿಂಬಗಳÀಂತೆ ಗೋಚರವಾಗುತ್ತವೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗುವ ವೇಳೆ ಅಲ್ಲಿನ ಜನತೆ ಪ್ರೀತಿಯಿಂದ ಕೊಟ್ಟ ಹಣ, ಚಿನ್ನ, ಉಡುಗೊರೆ ಇತ್ಯಾದಿಗಳನ್ನು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತಮ್ಮ ಕುಟುಂಬಕ್ಕೆ ಇಟ್ಟುಕೊಳ್ಳುವುದಕ್ಕೆ ಬದಲಾಗಿ ಅಲ್ಲಿನ ಟ್ರಸ್ಟ್ ದಾನ ಮಾಡುವ ಗಾಂಧೀಜಿಯವರ ನಿರ್ಧಾರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಕುರಿತು ಗಾಂಧಿ ಮತ್ತು ಹರಿಲಾಲ್ ನಡುವೆ ಉಧ್ಬವಿಸುವ ಭಿನ್ನಾಭಿಪ್ರಾಯ ಎಲ್ಲವೂ ನಾಟಕದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿವೆಶಶಿಕಲಾ ಅವರು ಕಸ್ತೂರಬಾ ಅವರ ನೋವು ಸಂಕಟಗಳನ್ನು ತಮ್ಮ ಎದೆಯೊಳಕ್ಕೆ ಇಳಿಸಿಕೊಂಡು ಕಸ್ತೂರಬಾ ಪಾತ್ರದಲ್ಲಿ ಅಭಿನಯಿಸುವುದರ ಬದಲು ಸ್ವತಃ ಅನುಭವಿಸಿದ್ದಾರೆ. ಹಾಗಾಗಿ ಪ್ರತಿಯೊಂದು ಮಾತು, ದೃಶ್ಯ ಹಾಗೂ ಘಟನಾವಳಿಗಳ ಮೆಲುಕು ಇವೆಲ್ಲವೂ ನೆನಪಿನಲ್ಲಿ ಉಳಿಯುತ್ತವೆ.
ಕೊನೆಯ ಭಾಗದಲ್ಲಿ  ಕಸ್ತೂರಬಾ 1942 ರಲ್ಲಿ ಗಾಂಧೀಜಿಯವರ ಜೊತೆ ಬಂಧನಕ್ಕೊಳಗಾಗಿ ಪುಣೆಯ ಆಗಾಖಾನ್ ಅರಮನೆಯಲ್ಲಿ ಬಂಧನದಲ್ಲಿದ್ದಾಗ, ತಾವು ಸಾಯುವ ಕೆಲವೇ ದಿನಗಳ ಮುಂಚೆ ಮನೆ ಬಿಟ್ಟು ಹೋಗಿದ್ದ ತಮ್ಮ ಹಿರಿಯ ಮಗ ಹರಿಲಾಲ್ ನನ್ನು ನೊಡುವ ಆಸೆಯಾಗಿ ಪೊಲೀಸರಲ್ಲಿ ವಿನಂತಿಸಿಕೊಳ್ಳುತ್ತಾರೆ. ಘಟನೆಯನ್ನು ಕಸ್ತೂರ ಬಾ ವಿವರಿಸುವುದು ಹೀಗೆಅಂದು ಆಗ ಖಾನ್ ಅರಮನೆಯ ಮುಂದೆ ಸಾವಿರಾರು ಜನ ನೆರೆದುಮಹಾತ್ಮ ಗಾಂಧೀಜಿಕಿ ಜೈಎಂದು ಘೋಷಣೆ ಕೂಗುತ್ತಿದ್ದರು. ಘೋಷಣೆಗಳ ನಡುವೆ ಗಟ್ಟಿಯಾದ ದ್ವನಿಯಲ್ಲಿಮಾತಾ ಕಸ್ತೂರ ಬಾ ಕಿ ಜೈಎಂಬ ಘೋಷಣೆ ಕೂಗುತ್ತಾ , ಮಾಸಿದ ಉಡುಪು, ಕೆದರಿದ ತಲೆಗೂದಲಿನ ವ್ಯಕ್ತಿಯೊಬ್ಬ ನನ್ನ ಹತ್ತಿರ ಬಂದ. ಅವನು ನನ್ನ ಮಗ ಹರಿಲಾಲನಾಗಿದ್ದ, ಅವನ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು. ಅವನನ್ನು ನೋಡುವ ಆಸೆಯಾಗಿ ಕರೆತರುವಂತೆ ನಾನೇ ಪೊಲೀಸರಿಗೆ ತಿಳಿಸಿದ್ದೆ. ಹತ್ತಿರ ಬಂದ ಹರಿಲಾಲ್, ನನ್ನ ಪಕ್ಕ ಇದ್ದ ತನ್ನ ತಂದೆ ಬಾಪುವಿನತ್ತ ತಿರುಗಿಯೂ ನೋಡಲಿಲ್ಲ. ಬಾಪು ತಲೆ ತಗ್ಗಿಸಿಕುಳಿತ್ತಿದ್ದರು. ಪೊಲಿಸರು ಮತ್ತೇ ಅವನ ತೋಳು ಹಿಡಿದು ಕರೆದೊಯ್ಯುವಾಗ ನನ್ನತ್ತ ತಿರುಗಿ ನೋಡುತ್ತಾಮಾತಾ ಕಸ್ತೂರ ಬಾ ಕಿ ಜೈಎಂದು ಗಟ್ಟಿಯಾಗಿ ಘೋಷಣೆ ಕೂಗುತ್ತಾ ಜನ ಜಂಗುಳಿಯಲ್ಲಿ ಮರೆಯಾದ. ಅವನ ಘೊಷಣೆಯ ದನಿಯಲ್ಲಿ ಬಾಪು ವಿರುದ್ಧ ಸಿಟ್ಟು, ಆಕ್ರೋಶ ಎಲ್ಲವೂ ಪ್ರತಿಧ್ವನಿಸುತ್ತಿದ್ದವು



ಸಂಭಾಷಣೆಯನ್ನು  ಕಸ್ತೂರ ಬಾ ಪಾತ್ರಧಾರಿಯಾಗಿ ನೆಲದ ಮೇಲಿನ ಹಾಸಿಗೆಯಲ್ಲಿ  ಅಂಗಾತ ಮಲಗಿ ಶಶಿಕಲಾ ಅವರು ಕರುಳು ಬಗೆದಂತೆ  ಸಂಭಾಷಣೆಯನ್ನು ಒಪ್ಪಿಸುತ್ತಿದ್ದಾಗ ಪ್ರೇಕ್ಷಕರ ಕಣ್ಣುಗಳು ಹನಿಗೂಡಿದ್ದವು.
ವರ್ತಮಾನದ ಜಗತ್ತಿನಲ್ಲಿ ಭಾರತದ ಬಹುತೇಕ ನಾಯಕರು ಒಂದೊಂದು ಸಮುದಾಯದ ಭಾಗವಾಗಿ ಪ್ರತಿಮೆ ರೂಪದಲ್ಲಿ ಬಂಧಿಯಾಗಿರುವಾಗ, ಅವರ ಬದುಕಿನ ಕುರಿತಾಗಲಿ, ಅವರ ವಿಚಾರ ಧಾರೆಗಳ ಕುರಿತಾಗಲಿ ಮರು ವಿಮರ್ಶೆ ಸಾಧ್ಯವಾಗದ ಸ್ಥಿತಿ ಸೃಷ್ಟಿಯಾಗಿದೆ. ಗಾಂಧೀಜಿಯೊಬ್ಬರು ಮಾತ್ರ ಆಯಾ ಕಾಲಘಟ್ಟಕ್ಕೆ ತಕ್ಕಮತೆ ವಿಮರ್ಶೆಯ ಒರೆಗಲ್ಲಿಗೆ ಸಿಲುಕಿ ನಮಗೆ ಮತ್ತಷ್ಟು ಸ್ಪಷ್ಟವಾಗುತ್ತಿದ್ದಾರೆ ಜೊತೆಗೆ ಹತ್ತಿರವಾಗುತ್ತಿದ್ದಾರೆ. ನಿಟ್ಟಿನಲ್ಲಿ ಗಾಂಧಿ ವಿರುದ್ಧ ಗಾಂಧಿ ಮತ್ತು ಕಸ್ತೂರ ಬಾ ನಾಟಕಗಳು ನಮಗೆ ಪೂರಕವಾಗಿವೆ. ಕಾರಣಕ್ಕಾಗಿ ಕಸ್ತೂರ ಬಾ ನಾಟಕ ರಚಿಸಿದ ಎಸ್.ರಾಮನಾಥ್, ನಿರ್ದೇಶನ ಮಾಡಿದ ಶಶಿಧರ್ಭಾರಿಘಾಟ್ ಮತ್ತು ಅಭಿನಯಿಸಿದ ಕಲಾವಿದೆ ಶಶಿಕಲಾ ಇವರು  ನಿಜಕ್ಕೂ ಅಭಿನಂದಾರ್ಹರು.


(9-8-14 ರ ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಸೋಮವಾರ, ಜುಲೈ 28, 2014

ವಿಶ್ವ ವ್ಯಾಪಾರ ಸಂಘಟನೆಯ ಕೃಷಿ ಒಪ್ಪಂದದ ವೈರುಧ್ಯಗಳು




ದಶಕದ ಹಿಂದೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರು ಜಾಗತೀಕರಣ ವ್ಯವಸ್ಥೆಯಲ್ಲಿನ ವ್ಯಾಪಾರ ಒಪ್ಪಂಧಗಳ ಕುರಿತಂತೆ ಆಡಿದ ಕಟು ಮಾತುಗಳಿವು. “ ಶ್ರೀಮಂತ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯ ಬಗ್ಗೆ ಗುಣಗಾನ ಮಾಡುವುದು ಅಥವಾ ಕುರಿತು ಬಡರಾಷ್ಟ್ರಗಳಿಗೆ ಬೋಧನೆ ಮಾಡುವುದು ಕಪಟ ಆಚರಣೆಯಾಗಿದೆ. ಸ್ವತಃ ಶ್ರೀಮಂತ ರಾಷ್ಟ್ರಗಳು ಬಡರಾಷ್ಟ್ರಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರದಿಡದಿದ್ದರೆ ಅಥವಾ ತೃತೀಯ ಜಗತ್ತಿನ ರಾಷ್ಟ್ರಗಳ ಮಾರುಕಟ್ಟೆಗೆ ತಮ್ಮ ಭಾರಿ ರಿಯಾಯ್ತಿ ಹೊಂದಿದ ತಮ್ಮ ಸರಕು, ಸೇವೆ, ಸಾಮಾಗ್ರಿ, ಆಹಾರ ಪದಾರ್ಥಗಳನ್ನು ತಂದು ರಾಶಿ ಹಾಕಿದರೆ ಬಡರಾಷ್ಟ್ರಗಳು ಬದುಕುವುದು ಕಷ್ಟ. ಶ್ರೀಮಂತ ರಾಷ್ಟ್ರಗಳು ತಮ್ಮ ಉತ್ಪಾದನೆ ಮತ್ತು ಉಪಭೋಗದ ವಿಧಾನಗಳನ್ನು ಬದಲಾಯಿಸದೆ, ಜಾಗತಿಕ ಪರಿಸರವನ್ನು ರಕ್ಷಿಸಲು ಬಡರಾಷ್ಟ್ರಗಳಿಗೆ ಒತ್ತಾಯ ಮಾಡಿದರೆ ಅವುಗಳು ಕೇಳುವ ಸ್ಥಿತಿಯಲ್ಲಿ ಇಲ್ಲವರ್ತಮಾನದ ನೋವಿನ ಸಂಗತಿಯೆಂದರೆ, ಎರಡು ದಶಕ ಕಳೆದರೂ ಜಾಗತಿಕ ಅಸಮಾನತೆ ಮತ್ತು ವ್ಯಾಪಾರ ಮತ್ತು ವ್ಯವಹಾರ ಕುರಿತಂತೆ ಬಡರಾಷ್ಟ್ರಗಳು ಮತ್ತು ಶ್ರೀಮಂತ ರಾಷ್ಟ್ರಗಳ ನಡುವಿನ ಕಂದಕ ಕಿರಿದಾಗುವ ಬದಲು ಹಿರಿದಾಗುತ್ತಿದೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ಜಿನಿವಾ ನಗರದಲ್ಲಿ ನಡೆದವ್ಯಾಪಾರ ಸುಗುಮಗೊಳಿಸುವ ನಿಟ್ಟಿನಲ್ಲಿ  ಒಪ್ಪಂದದ ಚರ್ಚೆಯವಿದ್ಯಾಮಾನ ವಿವಾದಕ್ಕೀಡಾದ ಸಂಗತಿ ನಮ್ಮ ಮುಂದಿದೆ.
ಇದೇ ಜುಲೈ 26 ರಂದು ಜಿನಿವಾ ನಗರದ ವಿಶ್ವವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿಯಲ್ಲಿ ನಡೆದ 160 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾರತ ಮತ್ತೊಮ್ಮೆ ಆಹಾರ ಸಬ್ಸಿಡಿ ಕುರಿತ ಕೃಷಿ ಒಪ್ಪಂಧಕ್ಕೆ ಸಹಿ ಹಾಕಲು ನಿರಾಕರಿಸುವುದರ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಕಳೆದ ವರ್ಷ ಇಂಡೊನೇಷಿಯಾದ ಬಾಲಿಯಲ್ಲಿ ನಡೆದ ಸದಸ್ಯ ರಾಷ್ರಗಳ ವಾಣಿಜ್ಯ ಸಚಿವರ ಸಭೆಯಲ್ಲಿ ಹಿಂದಿನ ಯು.ಪಿ.. ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಖಾತೆ ಸಚಿವರಾಗಿದ್ದ ಆನಂದ ಶರ್ಮರವರು ಕೃಷಿ ಕುರಿತ ಹಲವು ಒಪ್ಪಂಧಗಳ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದರು. ತಿಂಗಳ ಅಂತ್ಯದೊಳಗೆ ಎಲ್ಲಾ ರಾಷ್ಟ್ರಗಳ ಸಹಿ ಪಡೆದು ಡಿಸಂಬರ್ ಅಂತ್ಯಕ್ಕೆ ಕಾರ್ಯಸೂಚಿ ಮಾರ್ಗಸೂತ್ರಗಳನ್ನು ಸಿದ್ಧಪಡಿಸಿ ಮುಂದಿನ ಜನವರಿಯಿಂದ ಜಾರಿಗೆ ತರಲು ಹೊರಟಿದ್ದ ಅಮೇರಿಕಾ ಮತ್ತು ಮಿತ್ರ ಶ್ರೀಮಂತ ರಾಷ್ಟ್ರಗಳಿಗೆ ಕಳೆದ ಹದಿಮೂರು ವರ್ಷಗಳಿಂದ ಭಾರತ ತೋರುತ್ತಿರುವ ಪ್ರತಿರೋಧ ಮತ್ತು ಇದಕ್ಕೆ ವ್ಯಕ್ತವಾಗುತ್ತಿರುವ ತೃತೀಯ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಬೆಂಬಲ ನುಂಗಲಾರದ ಬಿಸಿತುಪ್ಪವಾಗಿದೆ.
ನಮ್ಮ ನಡುವಿನ ಹಿರಿಯ ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ ಜಾಗತೀಕರಣ ವ್ಯವಸ್ಥೆಯನ್ನುಶಬ್ದವಿಲ್ಲದ ನಿಶ್ಯಬ್ದ ಯುದ್ಧಎಂದು ದಶಕದ ಹಿಂದೆ ವಿಶ್ಲೇಷಿಸಿದ್ದರು. ಇವೊತ್ತಿಗೂ ವಿಶ್ವ ವ್ಯಾಪಾರ ಸಂಘಟನೆಯ ಜಾಗತೀಕರಣದ ಪ್ರಕ್ರಿಯೆಗಳು ಕಿಂಚಿತ್ತೂ ಬದಲಾಗಿಲ್ಲ. ಕಳೆದ ಶುಕ್ರವಾರ (ಜುಲೈ 25 ರಂದು) ನಡೆದ ಟ್ರೇಡ್ ಫೆಸಿಲಿಟೇಷನ್ ಅಗ್ರಿಮೆಂಟ್ ಅಂದರೆ ವಾಣಿಜ್ಯ ವ್ಯವಹಾರವನ್ನು ಸುಗುಮಗೊಳಿಸುವ ಒಪ್ಪಂಧಕ್ಕೆ ಭಾರತ ಸಹಿ ಹಾಕಲು ಸ್ಪøಷ್ಟವಾಗಿ ನಿರಾಕರಿಸಿದೆ. ದೇಶದ ಆಹಾರ ಭದ್ರತೆ, ಮತ್ತು ಕೃಷಿ ಚಟುವಟಿಕೆಗಳಿಗೆ ರೈತರಿಗೆ ನೀಡುತ್ತಿರುವ ಸಹಾಯಧನ ಹಾಗೂ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ ಬೆಂಬಲ ಬೆಲೆಯನ್ನೂ ಒಳಗೊಂಡಂತೆ ಬಡವರಿಗೆ ಸಬ್ಸಿಡಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ನೀಡುತ್ತಿರುವ ಆಹಾರ ಧಾನ್ಯಗಳಿಗೆ ಒಪ್ಪಂಧ ಮುಳುವಾಗಲಿದೆ ಎಂಬುದು ಭಾರತದ ನಿಲುವು. ಇದು ಅಕ್ಷರಶಃ ಸತ್ಯ ಕೂಡ ಹೌದು.
ವಿಶ್ವ ವ್ಯಾಪಾರೀಕರಣ ಸಂಘಟನೆ ಸಿದ್ಧಪಡಿಸಿರುವ ಕರಡು ಒಪ್ಪಂಧದಲ್ಲಿ ಯಾವ ಕಾರಣಕ್ಕೂ ಸದಸ್ಯ ರಾಷ್ಟ್ರಗಳ ಒಟ್ಟು ಕೃಷಿ ಉತ್ಪಾದನೆಯ ಶೇಕಡ ಹತ್ತಕ್ಕಿಂತ ಹೆಚ್ಚು ಸಬ್ಸಿಡಿ ಮೊತ್ತ ಇರಬಾರದು ಎಂದು ಸೂಚಿಸಲಾಗಿದೆ. ಆದರೆ, ಅಮೇರಿಕಾ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ರೈತರಿಗೆ ಕೃಷಿ ಸಬ್ಸಿಡಿ ನೀಡುವ ಬದಲು, ರಫ್ತು ಪ್ರೋತ್ಸಾಹ ಧನ ಎಂದು ನೀಡುವುದರ ಮೂಲಕ ಕೃಷಿ ಸಬ್ಸಿಯ ಒಪ್ಪಂಧದ ಮೂಲ ರೂಪು ರೇಷೆಗಳನ್ನು ಉಲ್ಲಂಘಿಸಲಾಗಿದೆ. ಶ್ರಿಮಂತ ರಾಷ್ಟ್ರಗಳಲ್ಲಿ ಹಸು ಸಾಕಾಣಿಕೆಗೆ ನೀಡುತ್ತಿರುವ ಪ್ರೊತ್ಸಾಹ ಧನ ಮತ್ತು ಕೃಷಿ ಜಮೀನನ್ನು ಪಾಳು ಬಿಟ್ಟಿದ್ದಕ್ಕೆ ನೀಡುವ ಪರಿಹಾರ ಧನ ಇವೆಲ್ಲವನ್ನೂ ಒಪ್ಪಂಧದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.


ತಮ್ಮಲ್ಲಿರುವ ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಕುಲಾಂತರಿ ಬೆಳೆಗಳ ಮೂಲಕ ಅಪಾರ ಪ್ರಮಾಣದಲ್ಲಿ ಹತ್ತಿ, ಗೋಧಿ ಮತ್ತು ಮೆಕ್ಕೆಜೋಳ ಇವುಗಳನ್ನು ಬೆಳೆಯುತ್ತಿರುವ ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ , ಇಂಗ್ಲೇಂಡ್ ಮುಂತಾದ ಶ್ರೀಮಂತ ರಾಷ್ಟ್ರಗಳಿಗೆ ತಮ್ಮ ಆಹಾರ ದಾಸ್ತಾನನ್ನು ತುರ್ತು ವಿಲೇವಾರಿ ಮಾಡಲು ಕಂಡುಕೊಂಡ ರಹದಾರಿಯೇ ಟಿ.ಎಫ್.. ಅಥವಾ ವಾಣಿಜ್ಯ ಸುಗಮಗೊಳಿಸುವ ಒಪ್ಪಂಧ. ವಿಶ್ವ ವ್ಯಾಪಾರ ಸಂಘಟನೆಯ ಕೃಷಿ ಒಪ್ಪಂಧ ಕುರಿತ ಭಾರತದ ಪ್ರತಿಭಟನೆಗೆ ಸುದೀರ್ಘ ಇತಿಹಾಸವಿದೆ. 2001 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದ ದಿ. ಮುರಸೋಳಿ ಮಾರನ್ ಹಾರಿಸಿದ ಪ್ರತಿಭಟನೆಯ ಭಾವುಟವನ್ನು ಸರ್ಕಾರ ಅಥವಾ ಪಕ್ಷಗಳ ಭೇದ ಭಾವವಿಲ್ಲದೆ, ನಿರಂತರವಾಗಿ  ಅರುಣ್ ಜೇಟ್ಲಿ ( ಎನ್.ಡಿ.. ಸರ್ಕಾರ) ಮತ್ತು ಡಾ. ಮನಮೋಹನ್ ನೃತೃತ್ವದ  ಯು.ಪಿ. ಸರ್ಕಾರದಲ್ಲಿ ಕಮಲ್ ನಾಥ್ ಮತ್ತು ಆನಂದ್ ಶರ್ಮ ಇವರು ವಾಣಿಜ್ಯ ಸಚಿವರಾಗಿ  ಎತ್ತಿ ಹಿಡಿದಿದ್ದಾರೆ. ಇದೀಗ ನರೇಂದ್ರ ಮೋದಿ ನೇತೃತ್ವದ ಎನ.ಡಿ.. ಸರ್ಕಾರದಲ್ಲಿ ವಾಣಿಜ್ಯ ಖಾತೆಯ ರಾಜ್ಯ ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಕೂಡ ಅಷ್ಟೇ ಪ್ರಭಾವಶಾಲಿಯಾಗಿ ಭಾರತದ ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ. ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರೆಯಾಗಿ ಹಾಗೂ ಭಾರತ ಮತ್ತು ಐರೋಪ್ಯ ರಾಷ್ಟ್ರಗಳ ನಡುವಿನ ಜವಳಿ ವ್ಯಾಪಾರ ಮತ್ತು ಒಪ್ಪಂಧ ( ಜಾಗತೀರಣದ ಒಪ್ಪಂಧದಡಿ) ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರವ ನಿರ್ಮಾಲಾ ಸೀತಾರಾಮನ್ ಅವರಿಗೆ ವಿಶ್ವ ವ್ಯಾಪಾರ ಸಂಘಟನೆಯ ವ್ಯವಹಾರಗಳು ಅಥವಾ ಹುನ್ನಾರಗಳು ಹೊಸದೇನಲ್ಲ.

ವಿಶ್ವವ್ಯಾಪಾರ ಸಂಘಟನೆಯ ನಿಯಾಮಾವಳಿ ಸಂಖ್ಯೆ ಒಂಬತ್ತನೆಯ ನಿಯಮದ ಪ್ರಕಾರ ಒಂದು ಸದಸ್ಯ ರಾಷ್ಟ್ರಕ್ಕೆ ಒಂದೇ ಮತ ಎಂಬ ನಿಯಮ ಜಾರಿಯಲ್ಲಿದೆ. ಆದರೆ, ಅಮೇರಿಕಾ ನೇತೃತ್ವದ ಶ್ರೀಮಂತ ರಾಷ್ಟ್ರಗಳ ಒಕ್ಕೂಟ ತಾನು ರೂಪಿಸುವ ನಿಯಮಗಳಿಗೆ ಸದಸ್ಯ ರಾಷ್ಟ್ರಗಳ ಅಭಿಪ್ರಾಯಗಳನ್ನು ಕೇಳಬೇಕೆಂಬ ಕನಿಷ್ಠ ವಿವೇಚನೆಯನ್ನು ಇಟ್ಟುಕೊಳ್ಳದೆ, ತಾನು ಸೃಷ್ಟಿಸಿಕೊಂಡಿರುವ ಸರ್ವ ಸಮ್ಮತಿ ಸೂತ್ರವನ್ನು ಸದಾ ಬಳಕೆ ಮಾಡಿಕೊಂಡು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಶ್ರೀಮಂತ ರಾಷ್ಟ್ರಗಳ ಮೈತ್ರಿ ಒಕ್ಕೂಟ ತೆಗೆದುಕೊಳ್ಳುವ ತೀರ್ಮಾನವೇ ವಿಶ್ವ ವ್ಯಾಪಾರ ಅಥವಾ ವಾಣಿಜ್ಯ ಸಂಘಟನೆಯ ತೀರ್ಮಾನವಾಗುತ್ತದೆ. ಸರ್ವ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇರುವ ಅವಕಾಶ ಕೇವಲ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಿಜವಾದ ತೀರ್ಮಾನಗಳು ಮೊದಲೇ ಅನೌಪಚಾರಿಕವಾಗಿ ವಿದ್ಯುಕ್ತವಲ್ಲದ ರೀತಿಯಲ್ಲಿ ತೀರ್ಮಾನವಾಗಿರುತ್ತದೆ. ತೀರ್ಮಾನಗಳನ್ನು ಒಪ್ಪಿಕೊಳ್ಳುವಂತೆ ಪ್ರತಿನಿಧಿಗಳ ಮೇಲೆ ಒತ್ತಡ ಕಾರ್ಯತಂತ್ರವನ್ನು ಹೇರಲಾಗುತ್ತದೆ


ಕಾರಣಕ್ಕಾಗಿ 1996 ರಲ್ಲಿ ನಡೆದಸಿಂಗಾಪುರ್ ವಿಷಯಗಳುಕುರಿತ ಚರ್ಚೆ, 1999 ರಲ್ಲಿ ಸಿಯಾಟಲ್ ನಗರದಲ್ಲಿ ನಡೆದ ಬಂಡವಾಳ ಹೂಡಿಕೆ ಕುರಿತಾದ ಚರ್ಚೆಗಳು ಹಲವು ರೀತಿಯ ವಿರೋಧ, ಪ್ರತಿಭಟನೆಗೆ ಕಾರಣವಾಗಿ ನೆನಗುದಿಗೆ ಬಿದ್ದವು.
2001 ರಲ್ಲಿ ಕತಾರ್ ದೋಹಾ ನಗರದಲ್ಲಿ ನಡೆದ ಶೃಂಗ ಸಭೆಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ್ದ ಅನೇಕ ವಾಣಿಜ್ಯ ಒಪ್ಪಂಧಗಳಿಗೆ ಭಾರತ ಪ್ರಥಮ ಬಾರಿಗೆ ಪ್ರತಿಭಟನೆ ಸೂಚಿಸಿತು. ಆಶ್ಚರ್ಯವೆಂದರೆ, ಒಪ್ಪಂಧ ಕುರಿತಾದ ಸಭೆಯಲ್ಲಿ ಮೂಡಿದ ಅಭಿಪ್ರಾಯ ಅಥವಾ ವಿರೋಧ ಇವುಗಳನ್ನು ಸಭೆಯ ನಡಾವಳಿ ದಾಖಲೆ ಪುಸ್ತಕದಲ್ಲಿ ದಾಖಲಿಸಲಿಲ್ಲ. 2001 ನವಂಬರ್ ತಿಂಗಳಿನಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ನವಂಬರ್ 13 ಮಧ್ಯ ರಾತ್ರಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೆಯಿ ಅವರಿಗೆ ದೂರವಾಣಿ ಕರೆ ಮಾಡಿದ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾಣಿಜ್ಯ ಸಚಿವ ಮುರಸೊಳಿ ಮಾರನ್ ಅವರಿಗೆ ಒತ್ತಡ ಹೇರಿ  ಅವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಇಂತಹದ್ದೇ ಒತ್ತಡ ತಂತ್ರವನ್ನು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಶ್ರೀಮಂತ ರಾಷ್ಟ್ರಗಳು ಗುಪ್ತವಾಗಿ ಜಾರಿಯಲ್ಲಿಟ್ಟಿವೆ.
ಕೃಷಿ ಒಪ್ಪಂಧ ಕುರಿತ ಕರಡು ಮಸೂದೆಯು ವಿಶ್ವ ವ್ಯಾಪಾರ ಸಂಗಟನೆಯಲ್ಲಿ ಕೃಷಿ ಸಮಿತಿಯ ಅಧ್ಯಕ್ಷರಾಗಿದ್ದ ಸ್ಟುವರ್ಟ್ ಹಾರ್ಬಿನೇಷನ್ ಎಂಬುವರಿಂದ ರಚಿತವಾಗಿದೆ. ಇದು  ವ್ಯಾಪಾರ ಸುಗುಮ ಗೊಳಿಸುವ ಒಪ್ಪಂಧಕ್ಕೆ ಸಹಿ ಮಾಡುವ ಪ್ರಕ್ರಿಯೆಯಲ್ಲಿ ಶ್ರೀಮಂತ ಮತ್ತು ಬಡರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈಗಿನ ಕರಡು ಪ್ರತಿಯಲ್ಲಿ ಹಿಂದೆ ಉರುಗ್ವೆಯಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ  ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಟನೆಯ ಕಾರಣದಿಂದ ಚರ್ಚೆಯಿಂದ ಹೊರಗಿಡಲಾಗಿದ್ದ ಸುಂಕ, ಆಂತರೀಕ ಪ್ರೋತ್ಸಾಹ, ರಫ್ತು ಸಬ್ಸಿಡಿ ಮುಂತಾದ ವಿಷಯಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ನಿಜವಾಗಿ ಪ್ರಾಧಾನ್ಯತೆ ನೀಡಬೇಕಾಗಿದ್ದ ಆಹಾರ ಭದ್ರತೆ, ಗ್ರಾಮೀಣಾಭಿವೃದ್ಧಿ ವಿಷಯಗಳ ಕುರಿತ ರಿಯಾಯಿತಿ ಹಾಗೂ ಬಡ ಮತ್ತು ಸಣ್ಣ ಕೃಷಿ ಕುಟುಂಬಗಳ ರಕ್ಷಣೆ ಕುರಿತು ವಿವರವಾದ ಮಾಹಿತಿಗಳಿಲ್ಲ. ಬಡರಾಷ್ಟ್ರಗಳನ್ನು ಕೃಷಿ ಸಬ್ಸಿಡಿಯಿಂದ ರಕ್ಷಿಸುವ ಬದಲು , ಶ್ರೀಮಂತರಾಷ್ಟ್ರಗಳು ನೀಡುತ್ತಿರುವ ವಿವಿಧ ಬಗೆಯ ಅಪಾರ ಪ್ರಮಾಣದ ಕೃಷಿ ಸಬ್ಸಿಡಿ ಪ್ರಮಾಣವನ್ನು ರಕ್ಷಿಸುವ ಅಂಶಗಳು ಎದ್ದು ಕಾಣುತ್ತಿವೆ. ಶ್ರೀಮಂತ ರಾಷ್ಟ್ರಗಳು ಕೃಷಿಕರಿಗೆ ಒದಗಿಸುತ್ತಿರುವ ವಿಶೇಷ ತರಬೇತಿ, ಪರಿಸರ ಮತ್ತು ಮಣ್ಣಿನ ರಕ್ಷಣೆ, ಭೂಮಿಯನ್ನು ಕೃಷಿ ಚಟುವಟಿಕೆಗೆ ಒಳಪಡಿಸದಿದ್ದರೆ ಅದಕ್ಕಾಗಿ ನೀಡುವ ವಿಶೇಷ ಪರಿಹಾರವನ್ನು ಈಗಿನ ಕೃಷಿ ಒಪ್ಪಂಧದಲ್ಲಿ ಸಬ್ಸಿಡಿ ಎಂದು ಪರಿಗಣಿಸಿಲ್ಲ. ಇದಕ್ಕೆ ಬದಲಾಗಿ ಅಂತರಾಷ್ಟ್ರೀಯ ವ್ಯಾಪಾರವು ಯಾವ ಕಾರಣಕ್ಕೂ ವಿಕೃತಿಗೊಳ್ಳುವುದಿಲ್ಲ ಎಂಬ ಪೊಳ್ಳು ಆಶ್ವಾಸನೆಯನ್ನು ಒಪ್ಪಂಧದ ವರದಿಯಲ್ಲಿ ನೀಡಲಾಗಿದೆ. ಸಧ್ಯ ಭಾರತ ದೇಶವು ಕೃಷಿ ಸಬ್ಸಿಡಿ ಮತ್ತು ಆಹಾರ ಧಾನ್ಯಗಳ ವಿತರಣೆ ಮತ್ತು ಬೆಂಬಲ ಬೆಲೆಗಾಗಿ ವಾರ್ಷಿಕವಾಗಿ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಮಾಡುತ್ತಿದೆ. ಈಗಿನ ಒಪ್ಪಂಧಕ್ಕೆ ಸಹಿ ಹಾಕಿದರೆ, ಭಾರತದ ಕೃಷಿ ಮತ್ತು ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯ ಮೊತ್ತ ಹನ್ನೆರಡು ಸಾವಿರ ಕೋಟಿಯನ್ನು ದಾಟುವುದು ಕಷ್ಟವಾಗುತ್ತದೆ. ಕಾರಣಕ್ಕಾಗಿ ಭಾರತ ಸೇರಿದಂತೆ, ತೃತೀಯ ಜಗತ್ತಿನ ಬಡರಾಷ್ಟ್ರಗಳು, ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳು ಅಸಮಾನತೆ ಮತ್ತು ಗೊಂದಲದ ಗೂಡಾಗಿರುವ ಕೃಷಿ ಒಪ್ಪಂಧಕ್ಕೆ ಸಂಬಂಧಪಟ್ಟ ವ್ಯಾಪಾರ ಸುಗಮಗೊಳಿಸುವ ಒಪ್ಪಂಧಕ್ಕೆ ಸಹಿ ಹಾಕಲು ನಿರಾಕರಿಸಿವೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಬೋರಿಸ್ ಕಗ್ಲಿಲಿಸ್ಟ್ಕಿ ಎಂಬುವರು ಯಾವುದೇ ಒಂದು ರಾಷ್ಟ್ರದ ಅಥವಾ ಸರ್ಕಾರದ ಅಬಿವೃದ್ಧಿ ಪರವಾದ ಸಿದ್ಧಂತಗಳಲ್ಲಿ ಮೂರನೇ ಶಕ್ತಿಯ ಹಸ್ತಕ್ಷೇಪವಿರಬಾರದು ಎಂದಿದ್ದರು. ಆದರೆ, ವರ್ತಮಾನದ ಜಗತ್ತಿನಲ್ಲಿ ಜಾಗತೀಕರಣದ ನೆಪದಲ್ಲಿ ಏಕಮುಖ ನೀತಿ ಮತ್ತು ಸರ್ವಾಧಿಕಾರದ ಚಕ್ರಾಧಿಪತ್ಯವೊಂದು ಹಲವು ಬಗೆಗಳಲ್ಲಿ, ಹಲವು ರೂಪಗಳಲ್ಲಿ ಬಡ ಹಾಗೂ ಅಭಿವೃಧ್ಧಿಶೀಲ ರಾಷ್ಟ್ರಗಳನ್ನು ಶೋಷಣೆ ಮಾಡುತ್ತಿದೆ.