ಸೋಮವಾರ, ಸೆಪ್ಟೆಂಬರ್ 23, 2013

ಬೇಸಾಯವೆಂಬ ಬವಣೆಯ ಬದುಕು- ಅಂತಿಮ ಭಾಗ


1970 ದಶಕದಿಂದ ಭಾರತದ ಕೃಷಿರಂಗದಲ್ಲಾದ ಅನೇಕ ಪಲ್ಲಟಗಳು, ರೈತರ ಪಾಲಿಗೆ ಕೆಲವು ವಿಷಯಗಳಲ್ಲಿ ವರದಾನವಾಗಿ, ಮತ್ತೇ ಹಲವು ವಿಷಯಗಳಲ್ಲಿ ಶಾಪವಾಗಿ ಪರಿಗಣಿಸಿವೆ. ಇದಕ್ಕೊಂದು ಸುಧೀರ್ಘ ಇತಿಹಾಸ ಕೂಡ ಇದೆ. ದೇಶಿ ಬಿತ್ತನೆ ಬೀಜಗಳ ಮೂಲಕ ಕಡಿಮೆ ಇಳುವರಿ ನೀಡುತ್ತಿದ್ದ ಸಮಯದಲ್ಲಿ ಭಾರತಕ್ಕೆ 1968 ರಲ್ಲಿ ಅಮೇರಿಕಾದ ಕೃಷಿ ತಜ್ಙ ನಾರ್ಮನ್ ಬೋರ್ಲಾಗ್ ಅವಿಷ್ಕರಿಸಿದ ಹೈಬ್ರಿಡ್ ಗೋಧಿ ಬರುತ್ತಿದ್ದಂತೆ, ಕೃಷಿಯ ಚಿತ್ರಣವೇ ಬದಲಾಯಿತು. 1947 ಸಮಯದಲ್ಲಿ ಹೆಕ್ಟೇರ್ ಒಂದಕ್ಕೆ ಕೇವಲ 800 ಕೆ.ಜಿ. ಗೋಧಿ ಬೆಳೆಯುತ್ತಿದ್ದ ರೈತರು, ಹೈಬ್ರಿಡ್ ಗೋಧಿ ತಳಿಯಿಂದಾಗಿ ಅದೇ ಭೂಮಿಯಲ್ಲಿ 48 ಕ್ವಿಂಟಾಲ್ ಗೋಧಿ ಬೆಳೆಯಲು  ಶಕ್ತರಾದರು.  ಅಧಿಕ ಗೋಧಿ ಇಳುವರಿಯಿಂದ ಉತ್ತೇಜಿತರಾದ ನಮ್ಮ ರೈತರು, ಭಾರತದ ಖ್ಯಾತ ಕೃಷಿ ವಿಜ್ಙಾನಿ ಹಾಗೂ ತಮಿಳುನಾಡಿನ ಎಂ.ಎಸ್. ಸ್ವಾಮಿನಾಥನ್ ಮೂಲಕ ಪಿಲಿಫೈನ್ಸ್ ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ಭತ್ತದ ತಳಿಗಳನ್ನು ಆಮದು ಮಾಡಿಕೊಂಡು, ಅಧಿಕ ಇಳುವರಿ   ಭತ್ತ ಬೆಳೆಯಲ್ಲಿ ತೊಡಗಿಕೊಂಡರು. ಹೀಗೆ, ಪಂಜಾಬ್, ಹರ್ಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ, ಗೋಧಿ, ಹಾಗೂ  ಬಿಹಾರ್, ಮಧ್ಯಪ್ರದೇಶ ರಾಜ್ಯಗಳು ಸೇರಿದಂತೆ, ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಭತ್ತವನ್ನು ಬೆಳೆಯಲಾಯಿತು. ಏರುತ್ತಿದ್ದ ಜನಸಂಖ್ಯೆಯ ಅನುಗುಣವಾಗಿ ಆಹಾರ ಪೂರೈಸಲಾಗದ ಅಸಹಾಯಕತೆಯಲ್ಲಿದ್ದ ಭಾರತ ದೇಶ ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ  ಸ್ವಾವಲಂಬನೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಪಂಚವಾರ್ಷಿಕ ಯೋಜನೆಗಳಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ ಕಾರಣದಿಂದಾಗಿ ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು


2011 ವೇಳೆಗೆ ಅಮೇರಿಕಾ ನಂತರ ಜಗತ್ತಿನ ಎರಡನೇ ಅತಿ ದೊಡ್ಡ ಕೃಷಿ ಉತ್ಪಾದನೆಯ ರಾಷ್ಟ್ರ ಎನಿಸಿಕೊಂಡ  ಬಾರತದಲ್ಲಿ ಒಟ್ಟು 39 ಕೋಟಿ, 46 ಲಕ್ಷ ಎಕರೆ ಪ್ರದೇಶ ಭೂಮಿ ಕೃಷಿ ಚಟುವಟಿಕೆಗೆ ಒಳಗೊಂಡಿತ್ತು. ಇದರಲ್ಲಿ 21 ಕೋಟಿ, 46 ಲಕ್ಷ ಎಕರೆ ಪ್ರದೇಶ, ಮಳೆ ಆಧಾರಿತ ಕೃಷಿಗೆ ಒಳಪಟ್ಟಿದ್ದರೆ, 21 ಕೊಟಿ, 56 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿತ್ತು. 1970 ದಶಕದಲ್ಲಿ ಭಾರತದ ಒಟ್ಟು ಆಂತರೀಕ ಉತ್ಪನ್ನದ ಪ್ರಮಾಣದಲ್ಲಿ( G.D.P.) ಶೇಕಡ 46 ರಷ್ಟು ಪಾಲು ಕೃಷಿ ಉತ್ಪನ್ನದ್ದಾಗಿತ್ತು. 2011 ವೇಳೆಗೆ ಭಾರತದ ಜಿ..ಡಿ.ಪಿ.ಯಲ್ಲಿ ಕೃಷಿಯ ಪಾಲು ಕೇವಲ ಶೇಕಡ 16 ರಷ್ಟು ಪ್ರಮಾಣಕ್ಕೆ ಕುಸಿಯಿತು.. ಇದರಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುವ, ಹಣ್ಣು, ತರಕಾರಿ, ಹೂವು, ಇವುಗಳ ಪ್ರಮಾಣವೇ ಶೇಕಡ ಹತ್ತರಷ್ಟಿತ್ತು..
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಆಧಾರವಾಗಿದ್ದ ಭಾರತದ ಕೃಷಿ ರಂಗ 1991 ರಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣದ ಫಲವಾಗಿ ಅನಾದರಕ್ಕೆ ಒಳಪಟ್ಟಿತು. ಆರಂಭದ ದಿನಗಳಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಶೇಕಡ ಮುವತ್ತರಷ್ಟು ಪಾಲು ಪಡೆಯುತ್ತಿದ್ದ ಭಾರತದ ಕೃಷಿರಂಗ  2011 ವೇಳೆಗೆ ಶೇಕಡ ಹತ್ತು ಇಲ್ಲವೇ ಹನ್ನೊಂದರಷ್ಟು ಪಾಲಿಗೆ ಸೀಮಿತವಾಯಿತುಆಳುವ ಸರ್ಕಾರಗಳು, ಸೇವಾ ವಲಯ, ಮಾಹಿತಿ ತಂತ್ರಜ್ಞಾನ, ನಗರಾಭಿವೃದ್ಧಿ, ವಸತಿ ಕ್ಷೇತ್ರ, ಪ್ರವಾಸೋದ್ಯಮ ಹೀಗೆ ಉದಾರೀಕರಣ ಪ್ರೇರಿತ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಾ ಬಂದು, ಕೃಷಿ ಕ್ರೇತ್ರ ಹಾಗೂ  ಭಾರತದ ಹಳ್ಳಿಗಳ ಮೂಲಬೂತ ಸೌಕರ್ಯಗಳನ್ನು ಕಡೆಗಣಿಸುತ್ತಾ ಬಂದಿತು.
ಆಧುನಿಕ ಅಭಿವೃದ್ಧಿ ಎಂದರೆ, ನಗರಗಳು ಮತ್ತು ಮಾಹಿತಿ ತಂತ್ರಜ್ಙಾನ ಎಂದು ನಂಬಿರುವ ಭಾರತದ ಆಡಳಿತ ಚುಕ್ಕಾಣಿ ಹಿಡಿದ ನಾಯಕರು ಅರಿಯಬೇಕಾದ ಕಟು ಸತ್ಯವೊಂದಿದೆ. ಭಾರತದಲ್ಲೀಗ ಉದ್ಯೋಗ ಸೃಷ್ಟಿಸುತ್ತಿದ್ದ ಸಾರ್ವಜನಿಕ ಉದ್ದಿಮೆಗಳು ಮತ್ತು ಖಾಸಾಗಿ ಉದ್ದಿಮೆಗಳು ಸಂಕಷ್ಟದಲ್ಲಿವೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 2012ರಿಂದ 2022 ವರೆಗೆ ಪ್ರತಿ ವರ್ಷ 80 ರಿಂದ 90 ಲಕ್ಷ ಯುವಕರು ಉದ್ಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಕೃಷಿರಂಗದ ಬಗ್ಗೆ ವ್ಯಾಮೋಹ ಕಡಿಮೆಯಾಗಿ ಎಲ್ಲರೂ ನಗರಗಳತ್ತ ಮುಖ ಮಾಡುತ್ತಿದ್ದಾರೆ. 2022 ವೇಳೆಗೆ 20 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸ ಬೇಕಾದ ಹೊಣೆ ನಮ್ಮನ್ನಾಳುವ ಸರ್ಕಾರಗಳ ಮೇಲಿದೆ. ಈವರೆಗೆ ಆಶಾದಾಯಕವಾಗಿದ್ದ ಮಾಹಿತಿ ತಂತ್ರಜ್ಙಾನ ಕ್ರೇತ್ರಕ್ಕೆ ಎದುರಾಗಿರುವ ಜಾಗತಿಕ ಪೈಪೋಟಿ ಮತ್ತು ಅನಿಶ್ಚತತೆಯಿಂದಾಗಿ ಉದ್ಯೋಗ ಸೃಷ್ಟಿಯ ಅವಕಾಶಗಳು ಕ್ಷೀಣಿಸುತ್ತಿವೆ. ಅತ್ತ ಭಾರತದ ಕೈಗಾರಿಕೆಗಳ ಬೆಳವಣಿಗೆಯೂ ಆಶಾದಾಯಕವಾಗಿಲ್ಲ.
ನಗರಗಳ ಬೆಳವಣಿಗೆ ಆದ್ಯತೆ ನೀಡಿ, ಅವುಗಳನ್ನು ನರಕಗಳನ್ನಾಗಿ ಪರಿವರ್ತಿಸುವ ಮುನ್ನ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಹಸಿದ ಹೊಟ್ಟೆಗೆ ಅನ್ನ , ವಸತಿ , ಶಿಕ್ಷಣ ಇವುಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ. ಕಡೆಗಣಿಸಲ್ಪಟ್ಟ ಕೃಷಿ ಮತ್ತು ರೈತರ ಬವಣೆಗಳನ್ನು ಆಲಿಸಿ, ಕೃಷಿ ಕ್ಷೇತ್ರವನ್ನು ಪುನರ್ ರೂಪಿಸಬೇಕಾಗಿದೆ. ಇಂದಿನ ಕೃಷಿ ಕ್ರೇತ್ರದ ದುರಂತಕ್ಕೆ , ರೈತನೂ ಒಳಗೊಂಡಂತೆ, ವಿಜ್ಙಾನಿಗಳು, ನಮ್ಮನ್ನಾಳುವ ಸರ್ಕಾರಗಳು ಎಲ್ಲರೂ ಭಾಗಿಯಾಗಿದ್ದಾರೆ. ಹಸಿರು ಕ್ರಾಂತಿಯ ಭ್ರಮೆ ಕಳಚಿಬಿದ್ದಿದ್ದರೂ ಕೂಡ  ಎರಡನೇ ಹಸಿರು ಕ್ರಾತಿಯ ಬಗ್ಗೆ ಮಾತನಾಡುವ ಮೂರ್ಖರು ನಮ್ಮಲ್ಲಿದ್ದಾರೆ
ಸ್ವತಃ ಭಾರತದ ಕೃಷಿ ಸಚಿವನಾಗಿರುವ ಶರದ್ ಪವಾರ್ ಎಂಬ ವ್ಯಕ್ತಿ ಕಳೆದ ಐದು ವರ್ಷಗಳಲ್ಲಿ ಆತ ಕೃಷಿ ಖಾತೆ ಯನ್ನು ನಿಭಾಯಿಸಿದ್ದಕ್ಕಿಂತ ಹೆಚ್ಚಾಗಿ ಭಾರತದ ಕ್ರಿಕೇಟ್ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಹಣ ಸಿಗುವ ವೃತ್ತಿ ಯಾವುದಾದರೂ ಸರಿಯೆ,, ವೈಶ್ಯಾವೃತ್ತಿಯ ದಳ್ಳಾಳಿತನಕ್ಕೆ ಸಿದ್ಧನಾಗಿರುವ ವ್ಯಕ್ತಿ ಇದೀಗ, ಮಾನ್ಸಂಟೊ ಕಂಪನಿಯ ಕುಲಾಂತರಿ ತಳಿಗಳನ್ನು ಭಾರತದಲ್ಲಿ ಪರಿಚಯಿಸಲು ಕೇಂದ್ರದಲ್ಲಿ ಲಾಭಿ ಮಾಡುತ್ತಿದ್ದಾನೆ. ಇಂತಹ ಅಯೋಗ್ಯರ ಕೈಗೆ ಭಾರತದ ಕೃಷಿ ಕ್ರೇತ್ರದ ಸೂತ್ರಗಳನ್ನು ನೀಡಲಾಗಿದೆ ಎಂದರೆ, ಇದಕ್ಕಿಂತ ದುರಂತ ಇನ್ನೊಂದು ಬೇಕೆ?

ಬೀಜ ಉತ್ಪಾದನೆ , ವಿನಿಮಯ. ಸೇರಿದಂತೆ ತನಗೆ ಬೇಕಾದ ಬೆಳೆಯನ್ನು ಬೆಳೆಯುತ್ತಿದ್ದ ರೈತ ಇಂದು ಬೀಜ ಕಂಪನಿಗಳ ಗುಲಾಮನಾಗಿ ತನ್ನ ಸಾರ್ವಭೌಮ ಹಕ್ಕನ್ನು ಕಳೆದುಕೊಂಡಿದ್ದಾನೆರೈತನ ತಲೆಯೊಳಕ್ಕೆ ಬಿತ್ತಿದ ಹಣದ ಥೈಲಿಯ ಕನಸುಗಳು ಇಂದು ಅವನನ್ನು ವಾಣಿಜ್ಯ ಬೆಳೆಗಳ ಮೂಲಕ ಬೀದಿಗೆ ತಂದು ನಿಲ್ಲಿಸಿವೆ, ಕಬ್ಬು, ಹತ್ತಿ, ಮೆಣಸಿನಕಾಯಿ, ಈರುಳ್ಳಿ , ಭತ್ತ, ತೆಂಗು, ಗೋಧಿ, ರಾಗಿ ಬೆಳೆದ ಯಾವೊಬ್ಬ ರೈತನೂ ಇಂದು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವಾಗಿದೆ. ಪಲ್ಲಟಗಳನ್ನು ಲೇಖಕ ನರೇಂದ್ರ ರೈ ದೇರ್ಲ ಅವರು ತಮ್ಮ ಕೃತಿಯಲ್ಲಿ( ಹಸಿರು ಕೃಷಿಯ ನಿಟ್ಟುಸಿರುಗಳು) ಮಾರ್ಮಿಕವಾಗಿ, ರೂಪಕದ ಭಾಷೆಯಲ್ಲಿ ಹೀಗೆ ಬಣ್ಣಿಸಿದ್ದಾರೆ. “ ತುಳುನಾಡಿನ  ನಾಟಿ ಜನರು ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಒಂದು ಬಾಳಲೆಯ ಮೇಲೆ ಮುಷ್ಟಿ ಅಕ್ಕಿ ಇಲ್ಲವೆ ಭತ್ತ , ಅದರ ಮೇಲೆ ಒಂದು ತೆಂಗಿನಕಾಯಿ ಇಟ್ಟು ಅಕ್ಕ ಪಕ್ಕದಲ್ಲಿ ಕೆಂಪು ಅಡಿಕೆ ಮತ್ತು ವೀಳ್ಯದ ಎಲೆ ಇಡುತ್ತಾರೆ. ಗಣಪನ ಹಾಗೆ ಕಾಣುವ ಐದು ಬೆಳೆಗಳು ಮುಂಚೆ ದುಡ್ಡಿನ ಬೆಳೆಗಳಾಗಿರಲಿಲ್ಲ. ಜನರ ಬದುಕಿಗೆ ಬೇಕಿದ್ದ ಮೂಲದ ಬೆಳೆಗಳಾಗಿದ್ದವು. ಯಾವಾಗ ಬಾಳಲೆಯ ಮೇಲೆ ಒಂದು ಕಾಲು ರೂಪಾಯಿ ಬಿತ್ತೋ, ತುಳುನಾಡಿನ ಕೃಷಿ ಪಲ್ಲಟಕ್ಕೆ ಒಳಗಾಯಿತು. ಎಲ್ಲವೂ ದುಡ್ಡಿಗೆ ಆದಾಗ, ಗದ್ದೆಯ ಮೇಲೆ ಅಡಿಕೆ ಬಂತು, ಈಗ ಅಡಿಕೆಯ ಮೇಲೆ ರಬ್ಬರ್ ಕೂತಿದೆಇದು ನರೇಂದ್ರ ರೈ ಹೇಳುತ್ತಿರುವ ತುಳುನಾಡಿನ ದುರಂತ ಕಥೆಯಷ್ಟೇ ಅಲ್ಲ, ಭಾರತದ ಕೃಷಿಯ ದುರಂತವೂ ಕೂಡ ಹೌದು.


ಅಧಿಕ ಇಳುವರಿ ತೆಗೆಯುವ ಭರಾಟೆಯಲ್ಲಿ ನಮ್ಮ ಭೂಮಿಗೆ ಮಿತಿಯಿಲ್ಲದೆ ಸುರಿದ ರಸಾಯನಿಕ ಗೊಬ್ಬರದಿಂದಾಗಿ ಭೂಮಿಯ ಫಲವತ್ತತೆ ನಾಶವಾಯಿತು, ಹೈಬ್ರಿಡ್ ತಳಿಗಳ ಜೊತೆ ಹಲವಾರು ದೈತ್ಯ ಕಳೆಗಳೂ ಸಹ ದೇಶಕ್ಕೆ ಕಾಲಿಟ್ಟವು, ಕೀಟ ಮತ್ತು ಕಳೆ ನಾಶಕ್ಕೆ ಸಿಂಪಡಿಸಿದ ರಸಾಯನಿಕ ಔಷದಿಗಳ ಫಲದಿಂದಾಗಿ ನೀರು ವಿಷಮಯವಾಗುವುದರ ಜೊತೆಗೆ ಕೃಷಿಯ ಜೊತೆ ತಳಕು ಹಾಕಿಕೊಂಡಿದ್ದ ಜೀವ ಜಾಲಕ್ಕೂ ನಾವು ಎರೆವಾದವು. ಇಷ್ಟೇಲ್ಲಾ ಸಾಧನೆಯ ನಡುವೆ ರೈತ ಸುಖವಾಗಿದ್ದಾನಾ? ಅದೂ ಇಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಯೊಂದಕ್ಕೆ 60 ರೂಪಾಯಿನಿಂದ 70 ರೂಪಾಯಿವರೆಗೆ ಇದೆ. ಕಳೆದ ಶುಕ್ರವಾರ ( ಸೆಪ್ಟಂಬರ್20) ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದ ಈರುಳ್ಳಿ ಗೆ ವರ್ತಕರು ಕೇಜಿ ಒಂದಕ್ಕೆ 18 ರೂಪಾಯಿನಿಂದ 20 ರೂಪಾಯಿ ಬೆಲೆ ನಿರ್ಧರಿಸಿದರು. 20 ರೂಪಾಯಿಗೆ ಕೊಂಡ ಈರುಳ್ಳಿ , ಗ್ರಾಹಕನಿಗೆ ಮಾರುಕಟ್ಟೆಯಲ್ಲಿ 70 ರೂಪಾಯಿಗೆ ಮಾರಾಟವಾಗುತ್ತದೆ. ಇದರಲ್ಲಿ ದಕ್ಕಿದ 50 ರೂಪಾಯಿ ಲಾಭ ಯಾರಿಗೆ ಸೇರುತ್ತದೆ ಎಂಬ ಸತ್ಯವನ್ನು ಗ್ರಹಿಸಲಾರದಷ್ಟು ನಮ್ಮ ವ್ಯವಸ್ಥೆ ತನ್ನ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆಯಾ? ಇಂತಹ ಸ್ಥಿತಿಯಲ್ಲಿ ಕೃಷಿ ವೃತ್ತಿ ಯಾರಿಗೆ ತಾನೆ ಬೇಕಾಗಿದೆ.
                                                             ( ಮುಗಿಯಿತು)


ಬುಧವಾರ, ಸೆಪ್ಟೆಂಬರ್ 18, 2013

ಬೇಸಾಯವೆಂಬ ಬವಣೆಯ ಲೋಕ- ಎರಡು

EzÀÄ ¨sÁgÀvÀzÀÀ EwºÁ¸À ¥ÀæeÉÐUÉ DªÀj¹PÉÆAqÀ ±ÀÆ£ÀåvÉ JAzÀgÀÆ ¸ÀºÀ vÀ¦à®è. F zÉñÀzÀ J¯Áè gÀAUÀUÀ¼À PÀÄjvÀAvÉ  ¸ÀªÀÄUÀæ EwºÁ¸ÀªÀ£ÀÄß PÀnÖPÉÆnÖgÀĪÀ £ÀªÀÄä  vÀdÐgÀÄ, ¨sÁgÀvÀzÀ PÀȶ ¥ÀgÀA¥ÀgÉ PÀÄjvÀÄ KPÉ C£Á¸ÀQÛ vÉÆÃjzÁÝgÉ JA§ÄzÀÄ FªÀgÉUÉ CxÀðªÁUÀzÀ «µÀAiÀÄ. PÀ¼ÉzÀ MAzÀÄ wAUÀ½¤AzÀ ¨sÁgÀvÀzÀ PÀȶ PÀÄjvÀ EwºÁ¸ÀzÀ ºÉeÉÓ UÀÄgÀÄvÀÄUÀ¼À£ÀÄß CªÀ¯ÉÆÃQ¸À®Ä Erà CAvÀeÁð®ªÀ£ÀÄß eÁ¯ÁrzÀgÀÆ, ¸ÀªÀÄUÀæ ªÀiÁ»w EgÀĪÀ MAzÀÄ  PÀÈw £À£Àß UÀªÀÄ£ÀPÉÌ §A¢®è. (¨sÁgÀvÀzÀ AiÀiÁªÀ ¨sÁµÉAiÀÄzÁzÀgÀÆ ¸Àj, MAzÀÄ PÀÈw EzÀÝgÉ zÀAiÀÄ«lÄÖ £À£Àß UÀªÀÄ£ÀPÉÌ vÀ¤ß.) C®è°è ¨sÁgÀvÀzÀ PÀȶ ªÀÄvÀÄÛ ¥ÁæaãÀ PÀȶ ¥ÀzÀÞw PÀÄjvÀ ©rAiÀiÁzÀ CzsÀåAiÀÄ£À ¯ÉÃR£ÀUÀ¼ÀÄ ªÀiÁvÀæ zÉÆgÉAiÀÄÄvÀÛªÉ.
zÀQët PÀ£ÀßqÀzÀ ¯ÉÃRPÀ ºÁUÀÆ PÀȶ PÀÄjvÀÄ ¦æÃw¬ÄAzÀ ¯ÉÃR£ÀUÀ¼À£ÀÄß §gÉAiÀÄÄvÁÛ §A¢gÀĪÀ ²æÃ. £ÀgÉÃAzÀæ gÉÊ zÉîð CªÀgÀ EwÛÃZÉV£À MAzÀÄ PÀÈw “ ºÀ¹gÀÄ PÀȶAiÀÄ ¤lÄÖ¹gÀÄUÀ¼ÀÄ” ¤dPÀÆÌ D¸ÀQÛzÁAiÀÄPÀªÁVzÉ. F PÀÈwAiÀÄ°è CªÀgÀÄ zÁR°¸ÀĪÀ ªÀiÁvÀÄUÀ½ªÀÅ. “£ÀªÀÄä zÉñÀzÀ°è AiÀÄÄzÀÞ ªÀiÁr ¨sÀÆ«Ä ªÀ±À¥Àr¹PÉÆAqÀªÀgÀ §UÉÎ, zÉêÁ®AiÀÄ PÀnÖzÀªÀgÀ §UÉÎ, ªÀÄÄjzÀªÀgÀ §UÉÎ zÁR¯ÉUÀ¼ÀÄ ¨ÉÃPÁzÀµÀÄÖ ¹UÀÄvÀÛªÉ. gÁdPÁgÀtÂUÀ¼À, «eÁФUÀ¼À, ¸ÀªÀiÁd ¸ÀÄzsÁPÀgÀ, §Ä¢Þfë ªÀÄÆwðUÀ¼ÀÄ, C®è°è CqÀتÁUÀÄvÀÛªÉ. DzÀgÉ, PÀȶ, ªÀÄvÀÄÛ PÀȶPÀgÀ ¨ÉªÀgÀÄ. gÀPÀÛ, ±ÀæªÀÄ, EªÉ®èªÀÇ vÁªÀÄæ¥Àl, ²¯É, PÁUÀzÀUÀ½UÉ CAnzÀÄÝ wÃgÁ PÀrªÉÄ.”
Erà dUÀwÛ£À°è PÀȶAiÀÄ£ÀÄß ªÀÄÆ® DzsÁgÀ ªÀiÁrPÉÆArgÀĪÀ, zÉñÀzÀ DyðPÀ ¨É¼ÀªÀtÂUÉAiÀÄ ¨É£É߮ĨÁVgÀĪÀ, EªÉÇwÛUÀÆ ¨sÁgÀvÀzÀ ±ÉÃPÀqÀ J¥ÀàvÀÛgÀµÀÄÖ d£ÀgÀ fêÀ£ÁrAiÀiÁVgÀĪÀ PÀȶ ¯ÉÆÃPÀzÀ §UÉÎ KPÉ EµÀÄÖ C£ÁzÀgÀ? F £É®zÀ C£ÀßzÁvÀ J¤¹PÉÆAqÀ gÉÊvÀ PÀȶAiÀÄ£ÀÄß JAzÀÆ MAzÀÄ GzÀåªÀĪÉAzÀÄ ¥ÀjUÀt¸ÀzÉ, F ªÀÈwÛAiÀÄ£ÀÄß MAzÀÄ PÁAiÀÄPÀzÀAvÉ, vÀ¥Àà¹ì£ÀAvÉ PÁAiÀÄÄÝPÉÆAqÀ §AzÀ ¥sÀ®PÉÌ ¨sÁgÀvÀzÀ ªÀåªÀ¸ÉÜ ¤ÃrzÀ  §ºÀĪÀiÁ£ÀªÉ?

²¯ÁAiÀÄÄUÀzÀ ªÀiÁ£ÀªÀ PÀ°è£À DAiÀÄÄzsÀ¢AzÀ ªÀÄÄAzÀĪÀjzÀÄ, PÀ©âtªÀ£ÀÄß vÀ£Àß DAiÀÄÄzsÀ ªÀiÁrPÉƼÀÄîªÀÅzÀgÀ eÉÆvÉUÉ, ¥À±ÀÄ, ¥ÁætÂUÀ¼À£ÀÄß CªÀ±ÀåPÀvÉUÉ vÀPÀÌAvÉ ¥À¼ÀV¹PÉÆAqÀ. £ÀAvÀgÀzÀ ¢£ÀUÀ¼À°è ¥ÁæaãÀ ¨sÁgÀvÀzÀ°è PÀȶ  ºÀ®ªÀÅ ºÀAvÀUÀ¼À°è «PÀ¸À£ÀUÉÆArvÀÄ. Qæ¸ÀÛ¥ÀƪÀð JAlƪÀgÉ ¸Á«gÀ ªÀµÀðUÀ¼À »A¢¤AzÀ ¨sÁgÀvÀzÀ°è PÀȶ C¹ÛvÀézÀ°èvÀÄÛ JA§ÄzÀPÉÌ C£ÉÃPÀ zÁR¯ÉUÀ¼ÀÄ ®¨sÀåªÁVªÉ,  ¨sÁgÀvÀzÀ ªÀÄÆ®zÀ DºÁgÀ ¨É¼ÉUÀ¼ÀÄ, ºÀtÄÚ ºÀA¥À®UÀ¼ÀÄ, ºÁUÀÆ ««zÀ §UÉAiÀÄ vÀgÀPÁjUÀ¼ÀÄ £ÀªÀÄä ªÉÃzÀPÁ®zÀ UÀæAxÀUÀ¼À°è zÁR¯ÁVªÉ. IÄUÉéÃzÀzÀ°è £ÉÃV® G¼ÀĪÉÄ ªÀÄvÀÄÛ  PÀȶ ¨sÀÆ«ÄAiÀÄ ªÉÊ«zsÀåvÉ ºÁUÀÆ ¤ÃgÁªÀj ¥ÀzÀÞw EªÀÅUÀ¼À£ÀÄß M¼ÀUÉÆAqÀAvÉ,  D PÁ®zÀ°è ¨É¼ÉAiÀįÁUÀÄwÛzÀÝ ºÀtÄÚUÀ¼ÀÄ, vÀgÀPÁjUÀ¼ÀÄ, ««zsÀ DºÁgÀ ¨É¼ÀUÀ¼À «ªÀgÀUÀ½ªÉ. ¸ÀĪÀiÁgÀÄ JgÀqÀÄ ¸Á«gÀ ªÀµÀðUÀ¼À »AzÉ gÁd¸ÁÜ£ÀzÀ°è zÉÆgÉvÀ ¸ÀA¸ÀÈvÀ UÀæAxÀªÉÇAzÀgÀ°è PÀȶ ¨sÀÆ«ÄAiÀÄ£ÀÄß ºÀ£ÉßgÉqÀÄ «zsÀUÀ¼À°è ªÀVÃðPÀj¹gÀĪÀÅzÀgÀ PÀÄjvÀÄ zÁR¯ÁVzÉ.
¸ÀĪÀiÁgÀÄ LzÀÄ ¸Á«gÀ ªÀµÀðUÀ¼À »AzÉAiÉÄ ¨sÁgÀvÀzÀ°è PÀȶPÀgÀÄ, ¨ÉøÁAiÀÄzÀ eÉÆvÉUÉ PÀÄzÀÄgÉ, ¥À±ÀÄUÀ¼ÀÄ, PÀÄj, PÉÆý, ªÉÄÃPÉ, ºÀA¢ ªÀÄÄAvÁzÀ ¥ÁætÂUÀ¼À ¥Á®£ÉAiÀÄ°è vÉÆqÀVzÀÝgÀÄ JA§ÄzÀÄ w½zÀħA¢zÉ. ±ÀvÀªÀiÁ£ÀUÀ¼ÀÄ PÀ¼ÉzÀAvÉ, s¸ÀĪÀiÁgÀÄ JgÀqÀƪÀgÉ ¸Á«gÀ ªÀµÀðUÀ¼À »AzÉ zÉò vÀAvÀæeÁУÀUÀ¼À£ÀÄß C«µÀÌj¹PÉÆAqÀÄ C¼ÀªÀr¹PÉÆAqÀ £ÀªÀÄä gÉÊvÀgÀÄ,  ºÀwÛ  ¸ÉÃjzÀAvÉ ºÀ®ªÀÅ §UÉAiÀÄ ¢ézÀ¼À zsÁ£ÀåUÀ¼ÀÄ, zÁæQë, ºÀ®¸ÀÄ, OqÀ® ©ÃdUÀ¼ÀÄ, PÉøÀj, zÉù §mÁ¤, ªÀiÁªÀÅ, gÉõÉä,  ¨sÀvÀÛ, gÁV, eÉÆüÀ ¸ÉÃjzÀAvÉ K®QÌ, ªÉÄt¸ÀÄ, ªÀÄÄAvÁzÀ ¸ÀA¨ÁgÀ ¨É¼ÉUÀ¼ÀÄ EªÀÅUÀ¼À°è  ¥ÀjtÂvÀgÁVzÀÝgÀÄ.


 Qæ¸ÀÛ¥ÀƪÀð £Á®ÄÌ ±ÀvÀªÀiÁ£ÀUÀ¼À »AzÉ ¨sÁgÀvÀPÉÌ ¨ÉÃn ¤ÃrzÀÝ ¥À¶ðAiÀÄ£ÀßgÀÄ, VæÃPÀgÀÄ vÀªÀÄä eÉÆvÉ ¹»AiÀÄ£ÀÄß  GvÁࢸÀ§®è C£ÉÃPÀ UÉqÉØUÀ¼À£ÀÄß ¨sÁgÀvÀPÉÌ vÀA¢zÀÝgÀÄ. CzÀPÀÆÌ ªÉÆzÀ®Ä £ÀªÀÄä°è ¹» JA§ÄzÀÄ eÉãÀÄ vÀÄ¥ÀàzÀ gÀÆ¥ÀzÀ°è £ÉʸÀVðPÀªÁV ªÀiÁvÀæ zÉÆgÉAiÀÄÄwÛvÀÄÛ. D£ÀAvÀgÀ §AzÀ ªÉĹqÉÆäAiÀÄ£ï ¸ÉʤPÀgÀÄ vÀªÀÄä eÉÆvÉ vÀAzÀ PÀ©â£À ¨É¼É ¨sÁgÀvÀzÀ°è ¨É®è ªÀÄvÀÄÛ ¸ÀPÀÌgÉ GvÁàzÀ£ÉUÉ £ÁA¢ºÁrvÀÄ. PÀ©â¤AzÀ gÀ¸ÀªÀ£ÀßµÉÖà vÉUÉzÀÄ PÀÄrAiÀÄĪÀÅzÀÄ UÉÆwÛzÀÝ ¥Á²ÑªÀiÁvÀåjUÉ, ¨sÁgÀvÀzÀ PÀȶPÀgÀÄ PÀ©â£À gÀ¸À¢AzÀ C«µÀÌj¹zÀ ¨É®è ªÀÄvÀÄÛ ºÀgÀ¼ÀÄ gÀÆ¥ÀzÀ ¸ÀPÀÌgÉ, CªÀgÀ §zÀÄQ£À C«¨sÁdå CAUÀªÁ¬ÄvÀÄ.


ºÀ¢£ÉAl£É ±ÀvÀªÀiÁ£ÀzÀ ªÉüÉUÉ ¨sÁgÀvÀzÀ°è PÀ§Äâ ¥ÀæªÀÄÄR ªÁtÂdå ¨É¼ÉAiÀiÁV ¥ÀjªÀvÀð£ÉUÉÆrvÀÄ. ¨sÁgÀvÀzÀ°è ¸ÀPÀÌgÉ GvÁàzÀ£É ºÉZÁÑUÀÄwÛzÀÝAvÉ, ºÀ®ªÁgÀÄ ªÀvÀðPÀgÀÄ ¸ÀPÀÌgÉAiÀÄ£ÀÄß «zÉñÀUÀ½UÉ gÀ¥sÀÄÛ ªÀiÁqÀĪÀ ªÀåªÀºÁgÀPÉÌ E½zÀgÀÄ. ©ænõÀgÀ D½éPÉAiÀÄ°è ¨sÁgÀvÀ¢AzÀ ºÀwÛ ªÀÄvÀÄÛ ¸ÀPÀÌgÉ ¥Á²ÑªÀiÁvÀå gÁµÀÖçUÀ½UÉ gÀ¥sÁÛUÀĪÀ ¥ÀæªÀÄÄR PÀȶ GvÀà£ÀßUÀ¼ÁVzÀݪÀÅ. dUÀwÛ£ÁzÀåAvÀ ¸ÀPÀÌgÉ §¼ÀPÉ DºÁgÀzÀ MAzÀÄ ¨sÁUÀªÁzÀAvÉ, ªÁtÂdå  dUÀwÛ£À°è  ºÀ®ªÁgÀÄ ¥ÀæªÀÄÄR §zÀ¯ÁªÀuÉUÉ PÁgÀtªÁ¬ÄvÀÄ. ¨sÁgÀvÀ¢AzÀ  zÀQët CªÉÄÃjPÀzÀ ¨Éæf¯ï ªÀÄvÀÄÛ ªÉ¸ïÖ EArøï, ªÀiÁjµÀ¸ï  gÁµÀÖçUÀ¼ÀÄ ¸ÉÃjzÀAvÉ ºÀ®ªÀÅ gÁµÀÖçUÀ½UÉ PÀ©â£À ¨É¼É «¸ÀÛgÀuÉAiÀiÁUÀÄwÛzÀÝAvÉ ¥ËªÁðvÀå gÁµÀÖçUÀ¼À d£ÀgÀ ªÀ®¸É PÀÆqÀ DgÀA¨sÀUÉÆArvÀÄ. ¨sÁgÀvÀzÀ ©ºÁgÀ, vÀ«Ä¼ÀÄ£ÁqÀÄ ¸ÉÃjzÀAvÉ ºÀ®ªÀÅ gÁdåUÀ½AzÀ PÀ§Ä⠨ɼÉAiÀÄ®Ä PÀÆ°UÀ¼ÁV «zÉñÀUÀ½UÉ ªÀ®¸É ºÉÆÃzÀgÀÄ. £ÉgÉAiÀÄ ²æîAPÁzÀ ZÀºÁ vÉÆÃlUÀ¼À°è zÀÄrAiÀÄĪÀ ¸À®ÄªÁV C¥ÁgÀ ¸ÀASÉåAiÀÄ vÀ«Ä¼ÀgÀÄ ªÀ®¸É ºÉÆÃV D zÉñÀzÀ°è ±Á¸ÀévÀªÁV £É¯É ¤AvÀgÀÄ.

©ænõÀgÀ D½éPÉAiÀÄ°è vÁªÀÅ AiÀiÁªÀ ¨É¼ÉAiÀÄ£ÀÄß ¨É¼ÉAiÀĨÉÃPÀÄ JA§ÄzÀgÀ §UÉÎ EzÀÝ ¸ÁªÀð¨s˪ÀÄ ºÀPÀÌ£ÀÄß PÀ¼ÉzÀÄPÉÆArzÀÝ ¨sÁgÀvÀzÀ gÉÊvÀgÀÄ, CªÀgÀ MvÀÛqÀPÉÌ ªÀÄtÂzÀÄ, gÀ¥sÀÄÛ DzsÁjvÀ ºÀwÛ, ¤Ã° ¨É¼ÉUÀ¼À£ÀÄß ¨É¼ÉAiÀÄ ¨ÉÃPÁ¬ÄvÀÄ. 1947 gÀ°è ¸ÁévÀAvÁå£ÀAvÀgÀ PÀȶAiÀÄ°è gÉÊvÀjUÉ ¸ÁéªÀ®A§£É ®¨sÀåªÁzÀgÀÆ, zÉñÀzÀ°è KgÀÄwÛzÀÝ d£À ¸ÀASÉåAiÀÄ C£ÀÄUÀÄtªÁV DºÁgÀ GvÁàzÀ£É ¸ÁzsÀåªÁVgÀ°®è. 1960 gÀ zÀ±ÀPÀzÀ ©üÃPÀgÀ §gÀUÁ®zÀ°è F £É®zÀ ªÀÄPÀ̼À ºÉÆmÉÖ vÀÄA©¸À®Ä ¨sÁgÀvÀ ¸ÀPÁðgÀ, CªÉÄÃjPÁzÀ UÉÆâüUÁV D zÉñÀzÀ JzÀÄgÀÄ PÉÊAiÉÆrØ ¤®è ¨ÉÃPÁ¬ÄvÀÄ.
¸ÀévÀAvÀæ ¨sÁgÀvÀzÀ°è DZÀgÀuÉUÉ §ÀAzÀ ¥ÀAZÀªÁ¶ðPÀ AiÉÆÃd£ÉUÀ¼À ªÀÄÆ®PÀ PÉÊUÉwÛPÉƼÀî¯ÁzÀ ¤ÃgÁªÀj AiÉÆÃd£ÉUÀ¼À ¥ÀjuÁªÀÄ, ¥ÀAeÁ¨ï, ºÀgÁåt, GvÀÛgÀ ¥ÀæzÉñÀ, vÀ«Ä¼ÀÄ£ÁqÀÄ, PÀ£ÁðlPÀ ªÀÄvÀÄÛ DAzsÀæ ¥ÀæzÉñÀUÀ¼À°è ®PÁëAvÀgÀ ºÉPÉÖÃgï ¥ÀæzÉñÀ ¤ÃgÁªÀjUÉ M¼À¥ÀnÖvÀÄ. zÀQët ¨sÁgÀvÀzÀ°è ¨sÀvÀÛ ªÀÄvÀÄÛ GvÀÛgÀ ¨sÁgÀvÀzÀ°è UÉÆâü F JgÀqÀÄ ¨É¼ÉUÀ¼À£ÀÄß ¤ÃgÁªÀj ¥ÀæzÉñÀUÀ¼À°è ªÁ¶ðPÀªÁV JgÀqÀÄ ¨Áj ¨É¼ÉAiÀÄvÉÆqÀVzÀ ¥ÀjuÁªÀĪÁV PÉÆAZÀ ªÀÄnÖUÉ zÉñÀzÀ DºÁgÀ ¸ÀªÀĸÉå ¤ÃVvÀÄ. DzÀgÉ, E¼ÀĪÀj ªÀiÁvÀæ wÃgÁ PÀrªÉÄ ¥ÀæªÀiÁtzÀ°èvÀÄÛ.

1970 gÀ zÀ±ÀPÀzÀ°è CªÉÄÃjPÁ¢AzÀ ¨sÁgÀvÀPÉÌ DªÀÄzÁzÀ ºÉÊ©æqï UÉÆâü ©ÃdzÀ  ¨É¼É¬ÄAzÁV  ¨sÁgÀvÀ°è ºÀ¹gÀÄ PÁæAwAiÀÄÄAmÁV DºÁgÀzÀ°è  ¸ÀA¥ÀÆtð ¸ÁéªÀ®A§£É ¸ÁzsÀåªÁ¬ÄvÀÄ. D£ÀAvÀgÀ ºÉÊ©æqï §vÀÛzÀ vÀ½UÀ¼ÀÄ ¨sÁgÀvÀPÉÌ ®UÉÎ ElÖ ¥sÀ®ªÁV ¨sÁgÀvÀzÀ PÀȶAiÀÄ avÀæt ¸ÀA¥ÀÆtð §zÀ¯Á¬ÄvÀÄ eÉÆvÉUÉ  C£ÉÃPÀ CªÀWÀqÀUÀ½UÉ PÁgÀtªÁV ¨sÁgÀvÀzÀ gÉÊvÀgÀ£ÀÄß £ÉÃtÄ PÀÄtÂPÉAiÀÄ ºÀwÛgÀ vÀAzÀÄ ¤°è¹vÀÄ.

                                                    (ªÀÄÄAzÀĪÀjAiÀÄĪÀÅzÀÄ)

ಶನಿವಾರ, ಸೆಪ್ಟೆಂಬರ್ 14, 2013

ಬೇಸಾಯವೆಂಬ ಬವಣೆಯ ಲೋಕ- ಒಂದು



PÀ¼ÉzÀ MAzÀÄ zÀ±ÀPÀzÀ°è ¨sÁgÀvÀzÀ°è DvÀäºÀvÉå ªÀiÁrPÉÆAqÀ gÉÊvÀgÀ ¸ÀASÉå, CªÀgÀ §ªÀuÉAiÀÄ §zÀÄPÀÄ, gÉÊvÀgÀ PÀÄlÄA§UÀ¼À PÀtÂÚÃj£À PÀxÉ, EªÉ®èªÀ£ÀÄß ¸ÀÆPÀëöäªÁV CªÀ¯ÉÆÃQ¹zÀgÉ, F dUÀwÛ£À°è ªÀiË®å ªÀÄvÀÄÛ ¥Àæw¥sÀ®«®èzÀ ªÀÈwÛ JA§ÄzÀÄ EgÀĪÀÅzÁzÀgÉ, CzÀÄ ¨ÉøÁAiÀÄzÀ ªÀÈwÛ JAzÀÄ ¤¸ÀìAPÉÆÃZÀªÁV ºÉüÀ§ºÀÄzÀÄ. EzÀÄ ºÀ®ªÀjUÉ ¹¤PÀvÀ£ÀzÀ ªÀiÁvÉAzÀÄ PÀAqÀgÉ C±ÀÑAiÀÄð«®è. ¸ÀévÀB M§â ¨ÉøÁAiÀÄUÁgÀ£À ªÀÄUÀ£ÁV ºÀÄnÖ, £À£Àß PÀÄlÄA§zÀ ¨ÉøÁAiÀÄzÀ §ªÀuÉUÀ¼À£ÀÄß, ªÀÄvÀÄÛ £À£Àß ¸ÀºÉÆÃzÀgÀgÀÄ F ªÀÈwÛUÉ ¨É£ÀÄß wgÀÄV¹ PÀĽwgÀĪÀ ¥ÀjAiÀÄ£ÀÄß UÀªÀĤ¹zÀgÉ, CªÀgÀ ¤zsÁðgÀ ¸ÀjAiÀiÁzÀÄzÉãÉÆà JAzÀÄ C¤¸ÀvÉÆqÀVzÉ. ¸ÀĪÀiÁgÀÄ ªÀÄÆgÀÄ ±ÀvÀªÀiÁ£ÀUÀ¼À PÁ® ¨ÉøÁAiÀĪÀ£ÀÄß £ÀA© ¨É¼ÉzÀ £À£Àß PÀÄlÄA§zÀ°è £À£Àß vÀ¯ÉªÀiÁjUÉ  ¨ÉøÁAiÀÄzÀ eÉÆvÉ EzÀÝ PÀ¼ÀÄî §½îAiÀÄ ¸ÀA§AzsÀ PÀvÀÛj¹ ºÉÆUÀÄwÛzÉ. EzÀÄ £Á£ÀÄ ªÀÄvÀÄÛ £À£Àß ¸ÀºÉÆÃzÀgÀgÀÄ fÃtÂð¹PÉƼÀî¨ÉÃPÁVgÀĪÀ ªÁ¸ÀÛªÀ ¸ÀvÀå.
£ÁªÀÅ £Á®égÀÄ ¸ÀºÉÆÃzÀgÀgÀ°è »jAiÀĪÀ£ÁzÀ £À£ÀUÉ, ªÀÄvÀÄÛ £À£Àß »A¢£ÀªÀ¤UÉ  vÀ¯Á MAzÀÄ UÀAqÀÄ ªÀÄvÀÄÛ MAzÀÄ ºÉtÄÚ ªÀÄPÀ̼ÀÄ. ªÀÄÆgÀÄ ªÀÄvÀÄÛ £Á®Ì£Éà ¸ÀºÉÆÃzÀgÀjUÉ MAzÉÆAzÀÄ ºÉtÄÚ ªÀÄUÀÄ ªÀiÁvÀæ. £Á®égÀ°è £Á£ÀÄ ªÀÄvÀÄÛ QjAiÀĪÀ£ÀÄ ªÀåªÀ¸ÁAiÀÄ¢AzÀ zÀÆgÀ G½zÀ PÁgÀt¢AzÁV Hj£À°ègÀĪÀ E§âgÀÄ ¸ÀºÉÆÃzÀgÀgÀÄ ªÀiÁvÀæ ¨ÉøÁAiÀÄ £ÀA©PÉÆAqÀÄ §zÀÄPÀÄwÛzÁÝgÉÉ. C¥Àà£À ¸Á«£À £ÀAvÀgÀªÀÇ d«ÄãÀÄUÀ¼À£ÀÄß £ÁªÀÅ ºÀAaPÉƼÀîzÀ PÁgÀt¢AzÁV CªÀgÀÄ Hj£À°è £ÉªÀÄ䢬ÄAzÀ §zÀÄQzÁÝgÉ. DzÀgÉ, £À£Àß ¸ÀºÉÆÃzÀgÀ ªÀÄUÀ ¨ÉAUÀ¼ÀÆj£À SÁ¸ÁV PÀA¥À¤AiÀÄ°èzÀÄÝPÉÆAqÀÄ,¹AUÁ¥ÀÄgÀ, ¨ÁAPÁAUï xÁAiÉÄèAqï JAzÀÄ ¸ÀÄvÀÄÛwÛgÀĪÀ CªÀ£ÀÄ JAzÀÆ ¨ÉøÁAiÀÄzÀvÀÛ wgÀÄV £ÉÆÃqÀ°®è, E£ÀÆß £À£Àß ªÀÄUÀ ºÀÄnÖzÀ Hj£À°è ªÉÆzÀ® JAlÄ ªÀµÀð PÀ¼ÉzÀzÀÝ£ÀÄß ºÉÆgÀvÀÄ¥Àr¹zÀgÉ, C¥Àà£À HgÀÄ ºÉÃVzÉ JAzÀÄ wgÀÄV £ÉÆÃrzÀªÀ£À®è. CgÀuÁå¢üPÁjAiÀiÁV §zÀÄPÀÄ PÀnÖPÉÆAqÀ CªÀ¤UÉ C¥Àà£À D¹ÛAiÀiÁUÀ°, HgÁUÀ° FUÀ ¨ÉÃqÀªÁVzÉ. EµÀÄÖ ªÀµÀð £ÀªÀÄä£É߯Áè ¥ÉÆgÉzÀ ¨sÀÆ«Ä vÁ¬ÄAiÀÄ IÄtªÀ£ÀÄß £Á£ÀÄ ªÀÄvÀÄÛ £À£Àß ¸ÀºÉÆÃzÀgÀgÀÄ £ÀªÀÄä £ÀªÀÄä ¸Á«£ÉÆA¢UÉ PÀ¼ÉzÀÄPÉƼÀÄîwÛzÉÝêÉ. EzÀÄ ºÉüÀ¯ÁgÀzÀ, C£ÀĨsÀ«¸À¯ÁgÀzÀ £ÀªÉÆä¼ÀV£À ¸ÀAPÀlUÀ¼ÀÄ.

PÀ¼ÉzÀ wAUÀ¼ÀÄ £Á£ÀÄ ªÀÄvÀÄÛ £À£Àß ¥Àwß E§âgÀÆ GvÀÛgÀ PÀ£ÀßqÀ ªÀÄvÀÄÛ zÀQët PÀ£ÀßqÀ f¯ÉèAiÀÄ zÉêÀgÀPÁqÀÄUÀ¼ÀÄ ªÀÄvÀÄÛ ¨ÉøÁAiÀÄzÀ §zÀÄPÀ£ÀÄß CjAiÀÄ®Ä JgÀqÀÄ gÁwæ ªÀÄvÀÄÛ ªÀÄÆgÀÄ ºÀUÀ®Ä ²gÀ¹, CAPÉÆïÁ, PÀĪÀÄmÁ, PÉÆ®ÆègÀÄ CgÀtå, PÀÄAzÁ¥ÀÄgÀ, »jAiÀÄqÀÌ, GqÀĦ, ¨É¼ÀÛAUÀr, ªÀÄÆqÀÄ©zÀgÉ, UÀÄgÀĪÁAiÀÄÆgÀÄ »ÃUÉ ºÀ®ªÀÅ HgÀÄUÀ¼À£ÀÄß ¸ÀÄvÀÄÛªÁUÀ, C°è£À ¨ÉøÁAiÀÄzÀ jÃw jªÁdÄUÀ¼ÀÄ, d£ÀjUÉ  ¨sÀÆ«ÄAiÀÄ ªÉÄðgÀĪÀ ¦æÃw , §zÀÞvÉ, EªÉ®èªÀ£ÀÄß UÀªÀĤ¹zÀ £ÀAvÀgÀ ¨ÉøÁAiÀÄ ªÀÈwAiÀÄ ¸ÀAPÀlUÀ¼ÀÄ ªÀÄvÀÄÛ CzÀgÉÆA¢V£À ¨Á®åzÀ £É£À¥ÀÄUÀ¼ÀÄ  JqÉ©qÀzÉ £À£ÀߣÀÄß PÁqÀÄwÛªÉ. PÀÄAzÁ¥ÀÄgÀzÀ PÀȶ GvÀà£Àß ªÀiÁgÀÄPÀmÉÖAiÀÄ°è gÉÊvÀgÀÄ ¸ÀÄjªÀ ªÀļÉAiÀÄ°è vÁªÀÅ ¨É¼ÉzÀ vÀgÀPÁjUÀ¼À£ÀÄß ªÀiÁgÁl ªÀiÁqÀ®Ä ¥ÀqÀÄwÛzÀÝ §ªÀuÉ £ÉÆÃr £À£Àß ±ÀvÀÄæ«UÀÆ F  ¨ÉøÁAiÀĪÉA§ ªÀÈwÛ ¨ÉÃqÀ JA§ ¨sÁªÀ£É ªÀÄ£À¹ì£À°è ªÀÄÆr§AvÀÄ.
£À£ÀV£ÀÆß £É£À¦zÉ. CzÀÄ 1968 £Éà E¸À«. £À£ÀUÁUÀ ºÀ£ÉÆßAzÀÄ ªÀµÀð ªÀAiÀĸÀÄì. ±Á¯É ªÀÄÄVzÀ £ÀAvÀgÀ AiÀiÁªÁUÀ®Æ C¥Àà£À eÉÆvÉ, vÉÆÃl, UÀzÉÝ ºÉÆ® JAzÀÄ wgÀÄUÀÄwÛzÉÝ. gÁwæAiÀÄ ªÉÃ¼É C¥Àà HgÁZÉ ªÀiÁqÀÄwÛzÀÝ PÀtzÀ°è ¨sÀvÀÛ ªÀÄvÀÄÛ gÁVAiÀÄ ªÉÄzÉUÀ¼À£ÀÄß PÁAiÀÄÄvÁÛ ¥ÀÄlÖ UÀÄr¸À°£À°è ¯ÁnÃ£ï ¢Ã¥ÀzÀ ¨É¼ÀQ£À°è C¥Àà£À PÀA§½AiÉƼÀUÉ PÁAUÀgÉÆ ¥ÁætÂAiÀÄ ºÉÆmÉÖAiÉƼÀV£À ªÀÄjAiÀÄAvÉ ºÀÄzÀÄV ªÀÄ®UÀÄwÛzÉÝ. D ªÀµÀð ¨É®èzÀ ¨É¯É wêÀæ ªÁV E½zÀÄ ºÉÆÃVvÀÄÛ. MAzÀÄ ¸Á«gÀ ¨É®èzÀ ¨É¯É MA§vÀÄÛ gÀÆ¥Á¬ÄUÉ vÀ®Ä¦vÀÄÛ. ( ªÀÄAqÀå f¯ÉèAiÀÄ°è ¨É®èzÀ CZÀÄÑUÀ¼À£ÀÄß vÀAiÀiÁj¸ÀÄvÁÛgÉ. LªÀvÀÄÛ ¨É®èzÀ CZÀÄÑUÀ¼À PÀÆr¹ ¦Ar PÀlÄÖvÁÛgÉ. E¥ÀàvÀÄÛ ¦ArUÀ½UÉ MAzÀÄ ¸Á«gÀ JAzÀÄ ¯ÉPÀÌ)  PÀ§Äâ PÀrAiÀÄĪÀÅzÀÄ, ¸ÁPÁuÉ ªÀiÁqÀĪÀÅzÀÄ, ªÀÄvÀÄÛ D¯ÉªÀÄ£ÉAiÀÄ°è CgÉAiÀÄĪÀÅzÀÄ »ÃUÉ MlÄÖ ªÉZÀÑ MAzÀÄ ¸Á«gÀPÉÌ ºÀ£ÉßgÉqÀÄ gÀÆ¥Á¬Ä vÀUÀÄ®ÄwÛvÀÄÛ. F ¹ÜwAiÀÄ°è C¥Àà ºÀ£ÉßgÉqÀÄ wAUÀ½UÉ PÀmÁªÀÅ ªÀiÁqÀ¨ÉÃQzÀÝ PÀ©âUÉ ºÀ¢£ÉÊzÀÄ wAUÀ¼ÀÄ PÁzÀ. £ÀAvÀgÀ wêÀiÁð¤¹zÀªÀ£ÀAvÉ Erà JgÀqÀÄ JPÀgÉ PÀ©â£À UÀzÉÝUÉ vÁ£É ¤AvÀÄ ¨ÉAQ ºÀaÑzÀ. Erà PÀ©â£À UÀzÉÝ ºÀwÛ GjAiÀÄÄwÛzÁÝUÀ, C¥Àà, UÀzÉÝ vɪÀj£À (§zÀÄ) ªÉÄÃ¯É PÀĽvÀÄ ªÀÄÄRPÉÌ lªÀ¯ï »rzÀÄPÉÆAqÀÄ ©QÌ ©QÌ C¼ÀÄwÛzÀÝ. £À£ÀߥÀà£À D avÀæ EªÉÇwÛUÀÆ £À£ÉßzÉAiÉƼÀUÉ ²¯Á ±Á¸À£ÀzÀ §gÀºÀzÀAvÉ CZÉÆÑwÛ PÀĽvÀÄ ©nÖzÉ. gÉÊvÀ£ÉƧâ£À ¸ÀAPÀlUÀ¼ÉãÀÄ JA§zÀÄ FUÀ CxÀðªÁUÀvÉÆqÀVzÉ.


£É¯É¬Ä®èzÉ PÀÆ°AiÀÄ£ÀÄß ªÀÈwÛAiÀÄ£ÁßV D±Àæ¬Ä¹PÉÆArgÀĪÀ M§â ±ÀæªÀÄfë, vÀ£Àß ±ÀæªÀÄPÉÌ vÀPÀÌ PÀÆ° ¹UÀ¢zÀÝgÉ, DvÀ ºÀ¹«¤AzÀ EzÀÝgÀÆ PÀÆqÀ, ªÀÄÆmÉ ºÉÆgÀ®Ä, E®èªÉ ¸ÁªÀiÁ£ÀÄ ºÉÆgÀ®Ä ¤gÁPÀj¸ÀÄvÁÛ£À. EzÀ£ÀÄß £ÁªÀÅ CªÀ£À CºÀAPÁgÀªÉAzÀÄ PÀgÉAiÀįÁUÀzÀÄ. ºÀ¹«£À £ÀqÀÄªÉ DvÀ vÀ£Àß ±ÀæªÀÄzÀ §UÉÎ ElÄÖPÉÆArgÀĪÀ UËgÀªÀ, ¸Áã©üªÀiÁ£À EªÉ®èªÀ£ÀÆß ¥ÀjUÀt¸À¨ÉÃPÀÄ. M§â PÀÆ°PÁgÀ¤UÉ EgÀĪÀ ªÀÈwÛAiÀÄ §UÉV£À  ¸ÁévÀAvÀæöå F zÉñÀzÀ°è M§â ¨ÉøÁAiÀÄUÁgÀ¤UÉ E®è JA§ÄzÀÄ PÀlÄ ªÁ¸ÀÛªÀ ¸ÀAUÀw.
F ¢£À £ÀªÉÄäzÀÄgÀÄ CQÌ, vÀgÀPÁj, FgÀÄ½î ¨É¯É UÀUÀ£ÀPÉÌÃj d£À¸ÁªÀiÁ£ÀågÀ£ÀÄß ¸ÀAPÀµÀÖPÉÌ zÀÆrªÉ. FgÀĽîUÉ vÀ¯Á PÉÃfAiÀÄAvÉ £ÁªÀÅ ¤ÃrzÀ J¥ÀàvÀÄÛ gÀÆ¥Á¬Ä CxÀªÁ JA§vÀÄÛ gÀÆ¥Á¬Ä gÉÊvÀ¤UÉ ¸ÉÃgÀÄvÀÛzÉ JA§ PÀ®à£É PÀÆqÀ ºÀ®ªÀgÀ°è EzÉ. gÉÊvÀ¤AzÀ PÉ.f.MAzÀPÉÌ ºÀ¢£ÉÊzÀÄ gÀÆ¥Á¬Ä¤AzÀ E¥ÀàvÀÄÛ gÀÆ¥Á¬Ä ¨É¯ÉUÉ QéAmÁ¯ï UÀlÖ¯É Rjâ¹zÀ FgÀÄ½î ¨É¯É, ªÀiÁUÀð ªÀÄzsÀåzÀ°è J¥ÀàvÀÄÛ gÀÆ¥Á¬ÄUÉ ºÉÃUÉ KjvÀÄ? F ¯Á¨sÀ AiÀiÁgÀ Q¸ÉUÉ ¸ÉÃjvÀÄ? KPÀPÁ®zÀ°è GvÁàzÀPÀ ªÀÄvÀÄÛ UÁæºÀPÀ E§âgÀ£ÀÆß ±ÉÆö¸ÀĪÀ dUÀvÀÄÛ JA§ÄzÀÄ EzÀÝgÉ, CzÀÄ ¨sÁgÀvÀzÀ°è ªÀiÁvÀæ. EªÉÇwÛUÀÆ F zÉñÀzÀ°è PÀȶ GvÀà£ÀßUÀ½UÉ ¤UÀ¢vÀ ¨É¯É JA§ÄzÀÄ E®è JAzÀgÉ, CzÀQÌAvÀ zÀÄgÀAvÀ ¨ÉÃgÉãÀÄ ¨ÉÃPÀÄ? MAzÀÄ UÀÄAqÀÄ ¦£ÀÄß. vÀAiÀiÁj¸ÀĪÀªÀ¤UÉ, ¨ÉAQPÀrØ vÀAiÀiÁj¸ÀĪÀªÀ¤UÉ, ZÀ¥Àà° vÀAiÀiÁj¸ÀĪÀªÀ¤UÉ vÀ£Àß ªÀ¸ÀÄÛ«UÉ JµÀÄÖ ¨É¯É EqÀ¨ÉÃPÀÄ JAzÀÄ ¤zsÀðj¸À®Ä EgÀĪÀ ¸ÁévÀAvÀå EAzÀÄ F zÉñÀzÀ°è C£ÀßzsÁvÀ J¤¹PÉÆAqÀ gÉÊvÀ¤UÉ E®è. EzÀQÌAvÀ zÀÄgÀAvÀ ¨ÉÃPÉ?

gÉÊvÀ£À §UÉÎ, CªÀ£À ±ÀæªÀÄzÀ §UÉÎ ªÉâPÉUÀ¼À°è ªÀiÁvÀ£ÁqÀĪÀ £ÀªÀÄä gÁdPÁgÀtÂUÀ¼À£ÀÄß ¨sÀvÀÛzÀ UÀzÉÝUÉ ºÁQ  ºÀ¹gÀÄ ¸ÉÆ¥ÀÄà vÀĽzÀ ºÁUÉ vÀĽzÀ £ÀAvÀgÀªÁzÀgÀÆ gÉÊvÀ£À ±ÀæªÀÄPÉÌ ¨É¯É zÉÆgÉAiÀħ®èzÉ? UÉÆwÛ®è. K£À£ÀÆß ¤jÃQë¸À¯ÁUÀzÀÄ.
¨sÁgÀvÀzÀ°è DvÀä ºÀvÉåAiÀÄ ªÀÄÆ®PÀ vÀgÀUɯÉUÀ¼ÀAvÉ £É®PÀÄÌgÀļÀÄwÛgÀĪÀ gÉÊvÀgÀ ¸Á«£À°è PÉ®ªÀÅ ¸ÀéAiÀÄA PÀÈvÀ C¥ÀgÁzsÀUÀ½ªÉ EzÀ£ÀÄß vÀ½î ºÁPÀ¯ÁUÀzÀÄ. DzÀgÉ, ¸Á«UÉ ±ÀgÀuÁzÀ ±ÉÃPÀqÀ vÉÆA§vÀÛgÀµÀÄÖ gÉÊvÀgÀ ¸ÁªÀÅ F ªÀåªÀ¸ÉÜAiÀÄ PÀÆægÀvÀ£À¢AzÀ ¸ÀA¨sÀ«¹zÀÄÝ JAzÀÄ zsÉÊAiÀÄðªÁV ºÉüÀ§ºÀÄzÀÄ. EAvÀºÀ C¨sÀzÀævÉAiÀÄ »Ã£À ¹ÜwAiÀÄ°è gÉÊvÀ E£ÀÆß KPÉ ¨sÀÆ«Ä £ÉaÑPÉÆArzÁÝ£É? EzÀÄ CPÀëgÀPÉÌ, ªÀiÁwUÉ ¤®ÄPÀzÀ C«£Á¨sÁªÀ ¸ÀA§AzsÀ. ¨sÀÆ«ÄvÁ¬Ä £ÀªÀÄä£ÀÄß PÉÊ ©qÀ¯ÁgÀ¼ÀÄ JA§ gÉÊvÀgÀ MAzÀÄ CZÀ® £ÀA©PɬÄAzÁV £ÁªÉ¯Áè MA¢µÀÄÖ  C£Àß w£ÀÄßwÛzÉݪÉ. C£ÀßzsÁvÀ ¨sÀÆ«ÄAiÀÄ ªÉÄð£À £ÀA©PÉ PÀ¼ÉzÀÄPÉÆAqÀ ¢£À £ÁªÀÅ K£À£ÀÄß w£ÀߨÉÃPÀÄ F §UÉÎ ¸ÀA±ÉÆÃzsÀ£É £ÀqÉAiÀĨÉÃQzÉ.

                                                  ( ªÀÄÄAzÀĪÀjAiÀÄ°zÉ)


ಸೋಮವಾರ, ಸೆಪ್ಟೆಂಬರ್ 9, 2013

ಭೂ ಮಸೂದೆಯೆಂಬ ಚಿನ್ನದ ಕತ್ತಿ

ಭಾರತದಲ್ಲಿ ಹಲವು ವರ್ಷಗಳಿಂದ, ಹಲವು ರೂಪಗಳಲ್ಲಿ ಅನ್ನದಾತರ ಪಾಲಿಗೆ ಸಾವಿನ ಕುಣಿಕೆಯಂತೆ, ನೆತ್ತಿಯ ಮೇಲಿನ ತೂಗುಕತ್ತಿಯಂತೆ ಇದ್ದ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಭೂಮಸೂದೆ ಇದೀಗ ಸಂಸತ್ತಿನಲ್ಲಿ ಅಂಗೀಕೃತವಾಗಿದೆ.ಚಿನ್ನದ  ಹಿಂದಿನ ಮಸೂದೆಗೂ, ಈಗಿನ ಮಸೂದೆಗೂ ಇರುವ ವೆತ್ಯಾಸವೆಂದರೆ, ಹಿಂದಿನದು ಕಬ್ಬಿಣದ ಕತ್ತಿಯಾಗಿತ್ತು, ಈಗಿನದು ಚಿನ್ನದ ಕತ್ತಿಯಾಗಿದೆ. ಆದರೆ, ಪರಿಣಾಮ ಮಾತ್ರ ಒಂದೇ ರೀತಿಯದು.
ಈವರೆಗೆ ಇದ್ದ ಅಡ್ಡಿ ಆತಂಕಗಳನ್ನು ಸಡಿಲಗೊಳಿಸಿ, ಭೂಮಿ ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ನೀಡುವ, ಪುನರ್ವಸತಿ ಕಲ್ಪಿಸುವ  ಹಾಗೂ ಕೈಗಾರಿಕೆಗಳಗೆ ಭೂಮಿ ನೀಡುವ ಕುರಿತ ಹಕ್ಕನ್ನು ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ  ಕಾಯ್ದೆಯಿಂದಾಗಿ ಭೂಮಿ ಕಳೆದುಕೊಳ್ಳುವವರಿಗೆ ಈ ಮಸೂದೆ  ನೆರವಾಗಲಿದೆ ಎಂಬ ವ್ಯಾಖ್ಯಾನಗಳು ಮುಂದುವರಿದಿವೆ. ಇನ್ನೊದೆಂಡೆ ಭೂ ಪರಿಹಾರ ಹೆಚ್ಚಾದ ಕಾರಣ ವಸತಿ ಕ್ರೇತ್ರದಲ್ಲಿ ಮನೆಗಳು ಮತ್ತು ನಿವೇಶನಗಳ ಬೆಲೆ ಗಗನಕ್ಕೇರುತ್ತವೆ ಎಂಬ ಆತಂಕ ಸೃಷ್ಟಿಯಾಗಿದೆ. ಮಾಧ್ಯಮಗಳಲ್ಲಿ ತಮ್ಮ ಅನ್ನದಾತರಾದ ಕಾರ್ಪೊರೇಟ್ ಕಂಪನಿಗಳ ಪರವಾಗಿ, ಮತ್ತು ಕೈಗಾರಿಕೆಗಳ ಪರವಾಗಿ ಬೆಳವಣಿಗೆ ಅಡ್ಡಿಯಾಗ ಬಲ್ಲ ಮಸೂದೆ ಎಂಬ ಆತಂಕದ ಚರ್ಚೆ ಎಗ್ಗಿಲ್ಲದೆ ಸಾಗಿದೆ.( ಈ ಲೇಖನ ಬರೆಯುತ್ತಿರುವ ವೇಳೆಯಲ್ಲಿ ಎನ್,ಡಿ.ಟಿ.ವಿ. ಯ ಪ್ರಾಫಿಟ್ ಛಾನಲ್ ನಲ್ಲಿ ಬೆಳಿಗ್ಗೆ 11 ರಿಂದ ಸತತ ಎರಡು ಗಂಟೆಗಳ ಕಾಲ ಚರ್ಚೆ ಸಾಗಿದೆ. )
ಕಾನೂನು, ಹಣ ಮತ್ತು  ತೋಳ್ಬಲಗಳ ನೆರವಿನಿಂದ ಈ ದೇಶದ ರೈತರನ್ನು , ಸಣ್ಣ ಹಿಡುವಳಿದಾರರನ್ನು ವಂಚಿಸಿದ ಕಥೆ, ಹಾಗೂ ಅವರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡ ವಿವರಗಳು ಭಾರತದ ಹೀನ ಚರಿತ್ರೆಯೊಂದರ ಸಂಪುಟವಾಗಬಲ್ಲದು.  ಬ್ರಿಟೀಷರು 1894 ರಲ್ಲಿ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು , ಸ್ವಾತಂತ್ರ್ಯಾನಂತರದ 66 ವರ್ಷಗಳ ಕಾಲ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಈ ದೇಶದ ಜನಪ್ರತಿನಿಧಿಗಳು, ಆಡಳಿತಗಾರರು ಜಾರಿಯಲ್ಲಿಟ್ಟಿದ್ದರು ಎಂಬ ಸಂಗತಿಯೇ ಅಪಮಾನಕಾರಿಯಾದುದು. ಒಂದೆಡೆ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಿ, ಮತ್ತೊಂದೆಡೆ, ಅವನ ಸರ್ವಸ್ವವನ್ನು ಕಿತ್ತುಕೊಳ್ಳುವ ಹಗಲು ದರೋಡೆಯ ಕೃತ್ಯಗಳು ನಿರಂತರವಾಗಿ ಸಾಗುತ್ತಾ ಬಂದಿದೆ. ಇದು ಅಸಮಾನತೆಯ ಭಾರತವಷ್ಟೇ ಅಲ್ಲ, ಹಲವು ವೈರುಧ್ಯಗಳ ಭಾರತವೂ ಕೂಡ ಹೌದು.
1990 ರಲ್ಲಿ ಜಾಗತೀಕರಣ ವ್ಯವಸ್ಥೆಗೆ ಭಾರತ ಬಾಗಿಲು ತೆರೆದುಕೊಂಡ ಪರಿಣಾಮವಾಗಿ ಗರಿಗೆದರಿದ ಆರ್ಥಿಕ ಚಟುವಟಿಕೆಗಳ ಫಲವಾಗಿ ಭಾರತದಲ್ಲಿ ಭೂಮಿಗೆ ಇನ್ನಿಲ್ಲದ ಬೇಡಿಕೆ ಬಂದಿತು. ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು ಮಾರ್ಗ, ಬಂದರು ನಿರ್ಮಾಣ ಸೇರಿದಂತೆ, ಕೈಗಾರಿಕೆಗಳಿಗಾಗಿ, ವಿಶೇಷ ಆರ್ಥಿಕ ವಲಯ ಮತ್ತು ವಸತಿ ಕ್ರೇತ್ರದಲ್ಲಿ ಮನೆಗಳ ನಿರ್ಮಾಣ,ಹಾಗೂ ಬಡಾವಣೆಗಳು, ರಿಸಾರ್ಟ್ ಗಳಿಗಾಗಿ ಫಲವತ್ತಾದ ಕೃಷಿ ಭೂಮಿಗಳು ಬಲಿಯಾದವು. ಸ್ವತಃ ಸರ್ಕಾರಗಳು ಮಧ್ಯವರ್ತಿಗಳಂತೆ ನಿಂತು, ಸಾರ್ವಜನಿಕ ಉದ್ದಿಮೆಗಳಿಗೆ, ಖಾಸಾಗಿ ಕಂಪನಿಗಳಿಗೆ ರೈತರ ಭೂಮಿಯನ್ನು ವರ್ಗಾಯಿಸಿದವು. ಕೈಗಾರಿಕೋದ್ಯಮಿಗಳು ಮತ್ತು ಜನಪ್ರತಿನಿಧಿಗಳ ಅಪವಿತ್ರ ಮೈತ್ರಿಯಿಂದಾಗಿ ಈ ನೆಲದ ಕಾನೂನುಗಳು ಗಾಳಿಗೆ ತೂರಲ್ಪಟ್ಟವು. ಇಂತಹ ಪರಿಸ್ಥಿತಿಗೆ ಪೂರಕವಾಗಿ, ಭಾರತದ ಕೃಷಿ ಕ್ರೇತ್ರ ಕೂಡ ತೀರಾ ಚಿಂತಾಜನಕ ಸ್ಥಿತಿಯಲ್ಲಿತ್ತು. ಒಂದು ಕಾಲದಲ್ಲಿ ಅಸಂಖ್ಯಾತ ಕೃಷಿ ಕಾರ್ಮಿಕರಿಗೆ ಆಧಾರವಾಗಿದ್ದ ಕೃಷಿ ವಲಯ ಸ್ವತಃ ಭೂಮಾಲಿಕನಿಗೆ ಆಸರೆಯಾಗಿ ನಿಲ್ಲುವ  ನಂಬಿಕೆ ಕುಸಿದು ಹೋಗಿರುವ ಸ್ಥಿತಿ ಇವೊತ್ತಿಗೂ ಮುಂದುವರಿದಿದೆ. ಇದರಿಂದಾಗಿ ನಗರೀಕರಣದ ಬೆಳವಣಿಗೆ ಮತ್ತು ಕೈಗಾರಿಕೆ ಹಾಗೂ ವಸತಿ ಕ್ರೇತ್ರದಲ್ಲಿ ತೆರೆದುಕೊಂಡ ಉದ್ಯೋಗದ ಅವಕಾಶಗಳು, ಜನರನ್ನು ಹಳ್ಳಿಗಳಿಂದ ನಗರದತ್ತ ವಲಸೆ ಹೋಗಲು ಪ್ರೆರೇಪಿಸಿದವು.
ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸರ್ಕಾರಗಳು ನಿರ್ಧಿಷ್ಟ ಯೋಜನೆಗಿಂತ ಎರಡು ಅಥವಾ ಮೂರು ಪಟ್ಟು ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳತೊಡಗಿದವು. ಶತಮಾನದಷ್ಟು ಹಳೆಯದಾದ ಭೂ ಸ್ವಾಧೀನ ಮಸೂದೆ ಸರ್ಕಾರಗಳ  ಕೈಗೆ ಸಿಕ್ಕ ಆಯುಧವಾಯಿತು. 1894 ರ ಪೆಬ್ರವರಿ 2 ರಂದು ಬ್ರಿಟೀಷರು, ಭಾರತದಲ್ಲಿ ಭೂಸ್ವಾಧೀನ ಕುರಿತ ಕಾನೂನನ್ನು ಅಸ್ತಿತ್ವಕ್ಕೆ ತಂದಿದ್ದರು. ರಸ್ತೆ, ರೈಲು ಮಾರ್ಗ, ಸಾರ್ವಜನಿಕ ಬಳಕೆಗೆ ಅವಶ್ಯಕ ಎನಿಸಿದರೆ, ಸರ್ಕಾರಗಳು ಖಾಸಾಗಿ ಭೂಮಿಯನ್ನು ನಿರ್ಧಿಷ್ಟ ಪರಿಹಾರ ನೀಡಿ ವಶಪಡಿಸಿಕೊಳ್ಳಬಹುದಿತ್ತು. ಇಂತಹ ಭೂಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ಯಾವೊಬ್ಬ ಭಾರತದ ನಾಗರೀಕನೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ಇರಲಿಲ್ಲ.
ಬಹುತೇಕ ಯಥಾಸ್ಥಿತಿಯಲ್ಲಿ ಜಾರಿಯಲ್ಲಿದ್ದ  ಈ ಮಸೂದೆಯನ್ನು 2003 ರಲ್ಲಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರ ಹಲವು ತಿದ್ದುಪಡಿಯೊಂದಿಗೆ ಜಾರಿಗೆ ತರಲು ಪ್ರಯತ್ನಿಸಿ ವಿಫಲವಾಗಿತ್ತು. ಆನಂತರ 2007 ರಲ್ಲಿ ಕಾಂಗ್ರೇಸ್ ನೇತೃತ್ವದ ಯು.ಪಿ.ಎ ಸರ್ಕಾರ ಕೂಡ ಪರಿಹಾರ ಮತ್ತು ಪುನರ್ವಸತಿ ಇವುಗಳ ವಿಷಯದಲ್ಲಿ ಹಲವು ಮಾರ್ಪಾಡು ಮಾಡಿ ಜಾರಿಗೆ ತರಲು ಯತ್ನಿಸಿದಾಗ ಹಲವು ವಾದ ವಿವಾದಕ್ಕೆ ಗುರಿಯಾಗಿ ನೆನಗುದಿಗೆ ಬಿದ್ದಿತು. ಅಂತಿಮವಾಗಿ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯ ಅಂತಿಮ ದಿನಗಳಲ್ಲಿ ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. 2010 ರಿಂದ ಮೂಲೆಗುಂಪಾಗಿದ್ದ ಭೂ ಮಸೂದೆಗೆ 2013 ರ ಸೆಪ್ಟಂಬರ್ ಮೊದಲ ವಾರದಲ್ಲಿ  ಅಸ್ತಿತ್ವಕ್ಕೆ  ಬರಲು ಅವಕಾಶ ದೊರೆತಿದೆ. ಹೊಸ ಭೂಮಸೂದೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರ ಸಿಗುವಂತೆ ಅವಕಾಶ ಮಾಡಿಕೊಡಲಾಗಿದೆ. ಈ ಅಂಶಗಳು ಈಗಾಗಲೇ ಬಂಡವಾಳಶಾಹಿ ಜಗತ್ತಿನ ನಿದ್ದೆ ಗೆಡಿಸಿದೆ.
ಇತ್ತೀಚೆಗಿನ ದಿನಗಳಲ್ಲಿ ಆಹಾರ ಮಸೂದೆ, ಭೂ ಮಸೂದೆ, ಆಂಧ್ರಪ್ರದೇಶದ ವಿಭಜನೆ, ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನ 371 ತಿದ್ದುಪಡಿ ಅನ್ವಯ ವಿಶೇಷ ಪ್ರಾತಿನಿಧ್ಯ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವು ಇವುಗಳ ಹಿಂದೆ ಇರುವ  ಓಲೈಕೆ ರಾಜಕಾರಣವನ್ನು ನಾವು ತಳ್ಳಿಹಾಕುವಂತಿಲ್ಲ. ಆಳುವ ಸರ್ಕಾರಗಳು ಯಾವುದೇ ಪಕ್ಷಕ್ಕೆ ಸೇರಿರಲಿ, ಚುನಾವಣೆಗಳು ಹತ್ತಿರವಾದಂತೆ ಸರ್ಕಾರಗಳ ಇಂತಹ ಸಹಾನುಭೂತಿಯ ನಡುವಳಿಕೆಗಳು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಇಂದಿನ ದಿನಗಳಲ್ಲಿ ಓಲೈಕೆ ರಾಜಕಾರಣ ಕೋಮುವಾದದಷ್ಟೇ ಅಪಾಯಕಾರಿ ಎಂಬುದನ್ನು ನಾವು ಅರಿಯಬೇಕಿದೆ.
ಹೊಸ ಭೂ ಮಸೂದೆಯ ಪ್ರಕಾರ ನಗರ ಪ್ರದೇಶಗಳಲ್ಲಿ ಭೂಮಿಯ ಮಾರುಕಟ್ಟೆ ಮೌಲ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎರಡು ಪಟ್ಟು ಹೆಚ್ಚಿನ ದರದಲ್ಲಿ ಪರಿಹಾರ  ನೀಡುವಂತೆ ಪ್ರಸ್ತಾಪಿಸಲಾಗಿದೆ. ವಾಸದ ಮನೆಗಳಿದ್ದರೆ, ಮನೆಗಳನ್ನು ಕಳೆದುಕೊಳ್ಳುವವರಿಗೆ 20 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ಮಾಸಾಶನ ಇಲ್ಲವೆ ಒಟ್ಟಿಗೆ 5 ಲಕ್ಷರೂಪಾಯಿ ಪರಿಹಾರ ನೀಡಲು ಕಾನೂನು ರೂಪಿಸಲಾಗಿದೆ, ಜೊತೆಗೆ ಬಹು ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ( ಗ್ರಾಮ ಪಂಚಾಯಿತಿ) ಇವುಗಳ ಅನುಮತಿಯಿಲ್ಲದೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಯುವಂತಿಲ್ಲ. ಹೊಸ  ಮಸೂದೆಯ ಈ ಎಲ್ಲಾ ಅಂಶಗಳು ಸಮಾಧಾನಕಾರಿಯಾಗಿದ್ದರೂ ಒಟ್ಟಾರೆ ಈ ಮಸೂದೆ “ಕೋಟೆಯನ್ನು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬ ಗಾದೆಯಂತಿದೆ. ಕಳೆದ ಎರಡು ದಶಕದ ಅವಧಿಯಲ್ಲಿ ದೇಶದ ಕೋಟ್ಯಾಂತರ ಹೆಕ್ಟೇರ್ ಫಲವತ್ತಾದ ಕೃಷಿ ಭೂಮಿ ಕೈಗಾರಿಗೆಳ ನೆಪದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಕೈ ಸೇರಿದೆ. ಇದಕ್ಕೆ ಈ ದೇಶದ ಬೇರೆ ರಾಜ್ಯದ ಉದಾಹರಣೆ ಬೇಡ. ನಮ್ಮ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಒಂದು ಭೂ ದಂಧೆಯ ವಿವರ ಹೀಗಿದೆ


ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ದಿ ನಿಗಮವು, ಸಮೀಪದ ಗೊಕುಲ ಗ್ರಾಮದ 707 ಎಕರೆ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ 599 ಎಕರೆ ಪ್ರದೇಶ ನೀಡಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕರ್ನಾಟಕ ಸರ್ಕಾರ ಒಂದು ಎಕರೆಗೆ 26 ಲಕ್ಷ ರೂಪಾಯಿಗಳಂತೆ ಪರಿಹಾರಿ ನೀಡಿ, ಒಟ್ಟು 707 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿತು. ( ಪ್ರಸ್ತುತ ಭೂಮಿಯ ಮಾರುಕಟ್ಟೆಯ ಮೌಲ್ಯ ಪ್ರತಿ ಎಕರೆಗೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ) ಕರ್ನಾಟಕ ಸರ್ಕಾರದ ಕೆ.ಐ.ಡಿ.ಬಿ.ಕಾಯ್ದೆ 1966 ರ 28(8) ರ ಸೆಕ್ಷನ್ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗಾಗಿ ವಶಪಡಿಸಿಕೊಂಡ ಜಮೀನು ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದ ಪಕ್ಷದಲ್ಲಿ ಆ ಜಮೀನನ್ನು ಮೂಲ ಮಾಲೀಕರಿಗೆ ಒಪ್ಪಿಸಬೇಕು. ಆದರೆ, ಕರ್ನಾಟಕ ಕೈಗಾರಿಕಾ ಅಬಿವೃದ್ದಿ ನಿಗಮ ರೈತರಿಗೆ 26 ಲಕ್ಷ ನೀಡಿ ವಶಪಡಿಸಿಕೊಂಡಿದ್ದ ಹೆಚ್ಚವರಿ ಜಮಿನನ್ನು ತಲಾ ಎಕರೆಗೆ 50 ಲಕ್ಷ ರೂಪಾಯಿನಂತೆ ನಾರಾಯಣ ಮೂರ್ತಿಯವರ ಇನ್ಪೋಸಿಸ್ ಸಂಸ್ಥೆಗೆ 50 ಎಕರೆ, ಮತ್ತು ನಾರಾಯಣ ಮುರ್ತಿಯವರ ಷಡ್ಡುಗ( ಸುಧಾ ಮೂರ್ತಿಯವರ ತಂಗಿ ಜಯಶ್ರಿಯವರ ಪತಿ) ಅಮೇರಿಕಾದಲ್ಲಿರುವ ಖ್ಯಾತ ಐ.ಟಿ.ಉದ್ಯಮಿ ಗುರುರಾಜ್ ದೇಶಪಾಂಡೆ ನೇತೃತ್ವದ ದೇಶಪಾಂಡೆ ಪೌಂಡೇಶನ್ ಗೆ 12.26 ಎಕರೆ ಪ್ರದೇಶ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬಾಲ್ಯದ ಸಹಪಾಠಿ ಹಾಗೂ ಹೋಟೆಲ್ ಉದ್ಯಮಿ ರಮೇಶ್ ಶೆಟ್ಟಿ ಎಂಬಾತನಿಗೆ ಪಂಚತಾರಾ ಹೋಟೆಲ್ ನಿರ್ಮಾಣಕ್ಕಾಗಿ 1.39 ಎಕರೆ ಪ್ರದೇಶವನ್ನು ಹಂಚಲಾಗಿದೆ. ಕೇವಲ ಒಂದು ವರ್ಷದ ಅವಧಿಯೊಳಗೆ ರೈತರಿಗೆ 26 ಲಕ್ಷ ನೀಡಿ, ವಶಪಡಿಸಿಕೊಂಡಿದ್ದ ಜಮೀನನ್ನು, ಕಾನೂನನ್ನು ಗಾಳಿಗೆ ತೂರಿ, ಎಕರೆಗೆ 50 ಲಕ್ಷರೂಪಾಯಿಗೆ ಮಾರಾಟ ಮಾಡಿದ ಕೆ.ಐ.ಡಿ.ಬಿ.ಯ ಈ ನಿರ್ಲಜ್ಜ ನಡುವಳಿಕೆಯನ್ನು ಗಮನಿಸಿದರೆ, ಹೊಸ ಭೂ ಮಸೂದೆ ಕುರಿತು ನಂಬಿಕೆಯಾಗಲಿ, ವಿಶ್ವಾಸವಾಗಲಿ ಬರಲು ಸಾದ್ಯವೆ?
ಇದು ಕರ್ನಾಟಕದ ಕತೆಯಾದರೆ, ದೆಹಲಿ- ಆಗ್ರಾ ನಡುವಿನ ಕಾರಿಡಾರ್ ರಸ್ತೆಗಾಗಿ43 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಮತ್ತು ಒರಿಸ್ಸಾದಲ್ಲಿ ಪೊಸ್ಕೊ ಕಂಪನಿಗಾಗಿ 16 ಸಾವಿರ ಹೆಕ್ಟೇರ್ ಭೂಮಿ, ಹಾಗೂ ಜಾರ್ಖಾಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯಲ್ಲಿ 4.400 ಹೆಕ್ಟೇರ್ ಭೂಮಿಯನ್ನು ಮಿತ್ತಲ್ ಉಕ್ಕಿನ ಕಾರ್ಖಾನೆಗಾಗಿ ವಶಪಡಿಸಿಕೊಳ್ಳಲಾಗಿದೆ. ಕಳೆದ ಎರಡು ದಶಕಗಳ ಅವದಿಯಲ್ಲಿ ದೇಶಾದ್ಯಂತ ಒಟ್ಟು ಐದು ಕೋಟಿ ರೈತರು, ಸಣ್ಣ ಹಿಡುವಳಿದಾರರು ಮತ್ತು ಅರಣ್ಯದಲ್ಲಿದ್ದ ಆದಿವಾಸಿಗಳು ಭೂಮಿ ಕಳೆದುಕೊಂಡು ಅತಂತ್ರರಾಗಿದ್ದಾರೆ.  ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ದೇಶದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗುತ್ತಿದೆ ಎಂಬ ವಾಸ್ತವ ಸತ್ಯವನ್ನು  ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಜೈರಾಂ ರಮೇಶ್ ಒಪ್ಪಿಕೊಂಡಿದ್ದಾರೆ.



ಸೋಮವಾರ, ಸೆಪ್ಟೆಂಬರ್ 2, 2013

ಪ್ರಧಾನಿ ಮನಮೌನ ಸಿಂಗ್ ಒಂದಿಷ್ಟು ನೆನಪುಗಳು

ಇತ್ತೀಚೆಗಿನ ದಿನಗಳಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಸದಾ ಸುದ್ಧಿಯಲ್ಲಿದ್ದಾರೆ. ಕಳೆದ ತಿಂಗಳಿನಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ , ಇದರ ಪರಿಣಾಮವಾಗಿ ವಿದೇಶಿ ವಿನಿಮಯದ ಚಾಲ್ತಿ ಖಾತೆಯಲ್ಲಿ ಕರಗುತ್ತಿರುವ ಡಾಲರ್ ಮೊತ್ತದ  ಠೇವಣಿ, ಹಾಗೂ ಕುಸಿಯುತ್ತಿರುವ ದೇಶದ ಆರ್ಥಿಕ ವ್ಯವಸ್ಥೆ ಇವೆಲ್ಲವೂ ಮತ್ತೇ ಭಾರತವನ್ನು 1991 ರ ಪರಿಸ್ಥಿತಿಗೆ ಕೊಂಡೊಯ್ಯಬಹುದೆಂಬ ಆತಂಕ ಎಲ್ಲಾ ವಲಯಗಳಿಂದ ಕೇಳಿಬರುತ್ತಿದೆ.
ಭಾರತ ಎದುರಿಸುತ್ತಿರು ಈ ಆರ್ಥಿಕ ಸಂಕಟ  ಬಹತೇಕ ಏಷ್ಯಾರಾಷ್ಟ್ರಗಳನ್ನು ಒಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನೂ ಕಾಡುತ್ತಿದೆ. ಚೇತರಿಸಿಕೊಂಡ ಅಮೇರಿಕಾದ ಆರ್ಥಿಕ ಅಭಿವೃದ್ಧಿಯಿಂದಾಗಿ ಡಾಲರ್ ಎದುರು ಬಹುತೇಕ ರಾಷ್ಟ್ರಗಳ ಕರೆನ್ಸಿ ಮೌಲ್ಯ ಕುಸಿಯುತ್ತಿದೆ. ಇದು ಒಂದು ತಾತ್ಕಾಲಿ ಸ್ಥಿತಿ. ಮಾತ್ರ. ಕರೆನ್ಸಿ ಮೌಲ್ಯದ ಕುಸಿತವನ್ನು ತಡೆಗಟ್ಟಲು ಅನೇಕ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಇವುಗಳಲ್ಲಿ ಏಕಾಏಕಿ ವಿದೇಶಿ ಸಾಂಸ್ತಿಕ ಹೂಡಿಕೆದಾರರು ಶೇರು ಮಾರುಕಟ್ಟೆಯಲ್ಲಿ ಹೂಡಿರುವ  ತಮ್ಮ ಬಂಡವಾಳವನ್ನು ಹಿಂತೆಗೆಯುವ ಕ್ರಮದ ಮೇಲೆ ನಿರ್ಭಂಧ ಅಥವಾ ಮಿತಿ ಹೇರುವುದು, ಆಮದು ವಸ್ತುಗಳ ಮೇಲೆ ಮಿತಿ ಇಲ್ಲವೆ ಅಧಿಕ ಸುಂಕ ಹೇರುವುದರ ಮೂಲಕ ನಿಯಂತ್ರಿಸುವ ಕ್ರಮ ಎಲ್ಲಾ ರಾಷ್ಟ್ರಗಳಲ್ಲಿ ಜಾರಿಯಲ್ಲಿವೆ. ಭಾರತದಲ್ಲಿ ಈಗಾಗಲೆ ವಿದೇಶಿ ಹೂಡಿಕೆದಾರರು ಈ ಮೊದಲು ಎರಡು ಲಕ್ಷ ಡಾಲರ್ ಹಣ ಹಿಂತೆಗೆಯಲು ಅವಕಾಶವಿತ್ತು. ಈಗ ಇದನ್ನು ಎಪ್ಪತ್ತು ಸಾವಿರ ಡಾಲರ್ ಗೆ ಮಿತಿ ಗೊಳಿಸಲಾಗಿದೆ. ಕಲರ್ ಟಿ.ವಿ.( ಎಲ್.ಸಿ.ಡಿ.ಟಿ.ವಿ.) ಇವುಗಳ ಮೇಲೆ ಶೇಕಡ 37ರಷ್ಟು ಅಧಿಕ ಶುಲ್ಕ ವಿಧಿಸಲಾಗುತ್ತಿದೆ. ಚಿನ್ನದ ಆಮದು ಮೇಲಿನ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ. ಹೀಗೆ ಆಮದು ಮಾಡಿಕೊಂಡ ವಸ್ತುಗಳಿಗೆ ಡಾಲರ್ ರೂಪದಲ್ಲಿ ಹಣ ಹರಿದುಹೋಗುತ್ತಿರುವುದನ್ನು ತಡೆಗಟ್ಟಲು ಅನೇಕ ಕ್ರಮಗಳು ಜಾರಿಯಲ್ಲಿವೆ, ಹಾಗಾಗಿ ಈಗ ಎದುರಾಗಿರುವ ಆರ್ಥಿಕ ಸಂಕಷ್ಟಗಳು ತಾತ್ಕಾಲಿಕ ಎಂದು ನಾವು ಸಮಾಧಾನ ಪಟ್ಟುಕೊಂಡರೂ ಸಹ ದೇಶದ ಜಿ.ಡಿ.ಪಿ. ಬೆಳವಣಿಗೆಯ ದರ 4.4 ಕ್ಕೆ ಕುಸಿದು ದೇಶದ ಒಟ್ಟು ಆರ್ಥಿಕ ಬೆಳವಣಿಗೆಯ ದರದ ಮೇಲೆ ಪರಿಣಾಮ ಬೀರಿದೆ.
ಇಡೀ ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ ನಾಯಕ ಎಂದು ಜಾಗತಿಕವಾಗಿ ಪ್ರಸಿದ್ದರಾಗಿರುವ ನಮ್ಮ ಪ್ರಧಾನಿ, ಡಾ ಮನಮೋಹನ್  ಸಿಂಗ್ ರವರೋ? ಅಥವಾ ಮನಮೌನಸಿಂಗರೋ ಎಂಬ ಗೊಂದಲ ಉಂಟಾಗುತ್ತಿದೆ. ವರ್ತಮಾನದ ಜಗತ್ತಿನಲ್ಲಿ ಆರ್ಥಿಕ ಸುಧಾರಣೆಗಳ ಹರಿದಾರ ಎಂಬ ಖ್ಯಾತಿಗೆ ಒಳಗಾಗಿರುವ, ಸ್ವತಃ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಙರಾಗಿರುವ ಮನಮೋಹನ್ ಸಿಂಗ್ ಬಹಳ ದಿನಗಳ ನಂತರ ಸಂಸತ್ತಿನಲ್ಲಿ ಮಾತನಾಡಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮೊಳಗಿನ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ. ಪ್ರಧಾನಿಯವರು ರಾಜ್ಯ ಸಭೆಯಲ್ಲಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ವೈಖರಿ ನಿಜಕ್ಕೂ ಅವರನ್ನು ಬಲ್ಲವರಿಗೆ ವಿಸ್ಮಯವನ್ನುಂಟು ಮಾಡುವಂತಹದ್ದು, ಇಂತಹದ್ದೆ ಸಾತ್ವಿಕ ಸಿಟ್ಟನ್ನು ಅವರು ತಮ್ಮ ನೇತೃತ್ವದ ಯು.ಪಿ.ಎ . ಸರ್ಕಾರದ ಕಲ್ಲಿದ್ದಲು ಹಗರಣ ಮತ್ತು 2 ಜಿ. ಹಗರಣ ಹಾಗೂ ರೈಲ್ವೆ ಸಚಿವರ ಭ್ರಷ್ಠಾಚಾರದ ಪ್ರಕರಣದಲ್ಲಿ ತೋರಿದ್ದರೆ, ಕಾಂಗ್ರೇಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಇಂತಹ ದಯನೀಯವಾದ ಸ್ಥಿತಿ ಬರುತ್ತಿರಲಿಲ್ಲ.
1991 ರ ವೇಳೆಯಲ್ಲಿ ಭಾರತ ಜಗತ್ತಿನಲ್ಲಿ ದಿವಾಳಿ ಏಳುತ್ತಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸ್ಥಿತಿಯಲ್ಲಿದ್ದಾಗ ದೇಶವನ್ನು ಸಂಕಟದಿಂದ ಪಾರು ಮಾಡಿದವರು ಇದೇ ಮನಮೋಹನ್ ಸಿಂಗ್ ಎಂಬುದು ಈಗಿನ ತಲೆ ಮಾರಿನ ಬಹುತೇಕ ಮಂದಿಗೆ  ಗೊತ್ತಿಲ್ಲದ ವಿಷಯ.
ಮೂಲತಃ ರಾಜಕಾರಣಿಯಲ್ಲದ ಮನಮೋಹನ್ ಸಿಂಗ್ ರಾಜಕೀಯಕ್ಕೆ ಬಂದದ್ದೂ ಕೂಡ ತೀರಾ ಆಕಸ್ಮಿಕ. ಅವರು ರಾಜಕೀಯಕ್ಕೆ ಬಾರದೇ ಇದ್ದರೆ, ಈಗಾಗಲೇ ಅರ್ಥಶಾಸ್ತ್ರದಲ್ಲಿ ಏಷ್ಯಾ ಖಂಡಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ನಮ್ಮವರಾದ ಅಮರ್ತ್ಯಸೇನ್ ಮತ್ತು ನೆರೆಯ ಬಂಗ್ಲಾದ ಮಹಮದ್ ಯೂನಸ್ ಇವರಿಗಿಂತ ಮುಂಚೆ ಈ ಪ್ರಶಸ್ತಿಗೆ ಭಾಜನರಾಗುವ ಯೋಗ್ಯತೆ ಇವರಿಗೆ ಇತ್ತು. 20 ಮತ್ತು 21 ನೇ ಶತಮಾನದ ಆರ್ಥಿಕ ಸ್ಥಿತಿಗತಿಗಳ ಏರು ಪೇರು ಇವುಗಳ ಬಗ್ಗೆ ಅಪರೂಪದ ಒಳನೋಟಗಳುಳ್ಳ ಡಾ. ಮನಮೋಹನ್ ಸಿಂಗ್ ಇವೊತ್ತಿಗೂ ಜಗತ್ತಿನಾದ್ಯಂತ ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗೌರವಿಸಲ್ಪಡುತ್ತಾರೆ. (ಇದೇ ರೀತಿ ಮಲೇಷಿಯಾದ ಮಾಜಿ ಪ್ರಧಾನಿ ಡಾ. ಮಹತೀರ್ ಕೂಡ ಇಂತಹ ಪ್ರಶಂಸೆಗೆ ಭಾಜನರಾಗಿದ್ದರು)
ಅತ್ಯಂತ ಕಡಿಮೆ ಮಾತನಾಡುವ ಹಾಗೂ ಸೌಮ್ಯ ಸ್ವಭಾವದ ಸಿಂಗರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ಮತ್ತು ಕಠಿಣ ನಿಯಮಗಳಿಗೆ ಬದ್ಧರಾಗಿರುತ್ತಾರೆ. ಅವರ ಅನುಭವ ಮತ್ತು ವಿದ್ಯೆಯ ಹಿನ್ನಲೆಯನ್ನು ನೋಡಿದವರು ಅವರ ಬಗ್ಗೆ ಲಘುವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಂಗ್ಲೆಂಡಿನ ಕೇಂಬ್ರಿಡ್ಜ್  ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ.ಪಡೆದು 1956 ರಲ್ಲಿ ಅರ್ಥಶಾಸ್ತ್ರದ ಪಿತಾಮಹಾ ಎನಿಸಿರುವ ಆಡಂಸ್ಮಿತ್ ಹೆಸರಿನಲ್ಲಿರುವ ಚಿನ್ನದ ಪದಕ ಗೆದ್ದ ಏಕೈಕ ಏಷ್ಯಾದ ಖಂಡದ ವ್ಯಕ್ತಿ ಡಾ. ಮನಮೋಹನ್ ಸಿಂಗ್ ರವ ರು.
ಹಲವಾರು ವರ್ಷಗಳ ಕಾಲ ಭಾರತದ ಹಲವು ವಿ.ವಿ.ಗಳು ಮತ್ತು ದೆಹಲಿಯ ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯಲ್ಲಿ ಪ್ರೊಪೆಸರ್ ಆಗಿದ್ದ ಸಿಂಗರು 1972 ರಿಂದ 1976 ರವರೆಗೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ, 1982ರಿಂದ 85 ರವರೆಗೆ ರಿಸರ್ವ್ ಬ್ಯಾಂಕಿನ ಗೌರ್ನರ್ ಆಗಿ, 1985ರಿಂದ 1987 ರ ವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಸೇವೆ ಸಲ್ಲಿಸಿ, ನಂತರ 1991ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಭಾರತಕ್ಕೆ ಇಂತಹ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾಗುವುದು ಮುಖ್ಯವಾಗಿತ್ತು. ಪಿ.ವಿ. ನರಸಿಂಹರಾವ್ ತಮ್ಮ ರಾಜಕೀಯ ಜೀವನಲ್ಲಿ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ, ಇದೊಂದೆ.  ಏಕೆಂದರೆ, ಅದೇ ವರ್ಷದ( 1991) ಮೇ ತಿಂಗಳಿನ 21 ರಿಂದ 30 ರವರೆಗೆ ಭಾರತ ಸರ್ಕಾರ 67 ಟನ್ ಚಿನ್ನವನ್ನು ವಿಮಾನದಲ್ಲಿ ಕೊಂಡೊಯ್ದು ಬ್ಯಾಂಕ್ ಆಫ್ ಇಂಗ್ಲೆಂಡ್ ( 47 ಟನ್ ) ಮತ್ತು ಲಂಡನ್ ನಗರದ  ಸ್ವಿಟ್ಜರ್ ಲ್ಯಾಂಡ್ ಬ್ಯಾಂಕ್ ಶಾಖೆಯಲ್ಲಿ 20 ಟನ್ ಒತ್ತೆ ಇಟ್ಟು  ಎರಡು ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ಪಡೆದಿತ್ತು. 1990 ರಲ್ಲಿ ಕಾಂಗ್ರೇಸ್  ಪಕ್ಷದ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ಚಂದ್ರಶೇಖರ್ ಅವರ ಸರ್ಕಾರ  ರಾಜೀವ್ ಗಾಂಧಿಯವರ ಫೋನ್ ಕದ್ದಾಲಿಸುತ್ತಿದೆ ಎಂಬ ಆರೋಪಕ್ಕೆ ಸಿಲುಕಿ 1991ರ ಮಾರ್ಚ್ ತಿಂಗಳಲ್ಲಿ  ಬಹುಮತ ಕಳೆದುಕೊಂಡು ಪತನಗೊಂಡಿತು. ನಂತರ ಉಸ್ತುವಾರಿ ಸರ್ಕಾರವಾಗಿ ಮುಂದುವರಿದಿತ್ತು. ಇದೇ ಸಮಯದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ  ದೇಶದ ಚಾಲ್ತಿ ಖಾತೆಯಲ್ಲಿ ವಿನಿಮಯಕ್ಕೆ ಇದ್ದ ಡಾಲರ್ ಕೇವಲ ಮೂರು ವಾರಗಳಿಗೆ ಸಾಕಾಗುವಷ್ಟು ಹಂತ ತಲುಪಿ ಭಾರತ ಸರ್ಕಾರದ ಸ್ಥಿತಿ ದಿವಾಳಿಅಂಚಿಗೆ ದೂಡಿತ್ತು. 1991ರ ಜೂನ್ ನಲ್ಲಿ ಚುನಾವಣೆಯ ನಂತರ ಸ್ಪೃಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಮಾಂತ್ರಿಕರಾದರು.


ಎಂದೂ ಪ್ರಧಾನಿಯಾಗುವ ಕನಸು ಕಾಣದಿದ್ದ ಸಿಂಗ್ ಅವರಿಗೆ ಅನಿರೀಕ್ಷಿತ ವಾಗಿ ಈ ಹುದ್ದೆಯೂ ಒಲಿದು ಬಂತು. 2004 ರಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದ ಯು.ಪಿ.ಎ. ಒಕ್ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಎಲ್ಲರ ನಿರೀಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬುದಾಗಿತ್ತು. ಆದರೆ, ಸಂಘ ಪರಿವಾರದ ಪ್ರತಿಭಟನೆ ಮತ್ತು ಅವಹೇಳನ ಕಾರಿ ಮಾತುಗಳಿಂದ ( ವಿದೇಶಿ ಮಹಿಳೆ ಮತ್ತು ತಡವಾಗಿ ಅಂದರೆ, 1984ರ ನಂತರ ಭಾರತದ ಪೌರತ್ವ ಸ್ವೀಕರಿಸಿದರು ಎಂಬ ಅಪವಾದಗಳು) ನೊಂದ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಅನಿರೀಕ್ಷಿತವಾಗಿ, ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಲ್ಲದೆ ಸಂಘ ಪರಿವಾರದ ಬಾಯಿ ಮುಚ್ಚಿಸಿದರು. ಆ ವೇಳೆಗೆ ಹಿಂದೂಗಳು ಬಹು ಸಂಖ್ಯೆಯಲ್ಲಿರುವ ಭಾರತದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಅಲ್ಪ ಸಂಖ್ಯಾತ ಸಮುದಾಯದಿಂದ ಬಂದ (ಮುಸ್ಲಿಂ ಮತ್ತು ಸಿಖ್) ಇಬ್ಬರು ಪ್ರತಿಭಾವಂತ ಮೇಧಾವಿಗಳಾದ ಅಬ್ದುಲ್ ಕಲಾಂ ಮತ್ತು ಮನಮೋಹನ ಸಿಂಗ್ ಇವರಿಂದ ಅಲಂಕರಿಸಲ್ಪಟ್ಟಿದ್ದವು.
2004 ರಿಂದ 2009 ರವರೆಗೆ ಮೊದಲ ಅವಧಿಯಲ್ಲಿ ಸಿಂಗ್ ಅವರ ನೇತೃತ್ವದಲ್ಲಿ ಭಾರತದಲ್ಲಿ ಆದ ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಗಳನ್ನು ನೋಡಿ ಇಡೀ ವಿಶ್ವವೇ ಬೆರಗುಗೊಂಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ರಾದ ಜಾರ್ಜ್ ಡಬ್ಲ್ಯು, ಬುಶ್ ಮತ್ತು ಬರಾಕ್ ಒಬಾಮರಂತಹವರು  ಸಲಹೆಗಳಿಗಾಗಿ ಸಿಂಗ್ ಎದುರು ಮಂಡಿಯೂರಿ ಕುಳಿತರು. ಭಾರತಕ್ಕೆ ಜಾಗತೀಕರಣದ ಹೆಬ್ಬಾಗಿಲು ತರೆದಿದ್ದು ಕೂಡ ಇದೇ ಮನಮೋಹನ ಸಿಂಗರು. 1991 ರಲ್ಲಿ ಬಾರತದ   ಆರ್ಥಿಕ ದುಸ್ಥಿತಿಯ ಪರಿಸ್ಥಿತಿಯನ್ನು ಬಳಸಿಕೊಂಡ ಅಂತರಾಷ್ಟ್ರೀಯ ಹಣಕಾಸು ನಿಧಿ( ಐ.ಎಂ.ಎಫ್0) ಸಾಲನೀಡುವಾಗ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡ ಮನಮೋಹನ ಸಿಂಗರು ರಚಾನತ್ಮಕ ಹೊಂದಾಣಿಕೆಗಳು ( Structarul Adjestments) ಕಾರ್ಯಕ್ರಮಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರು.
ಜಾಗತೀಕರಣವನ್ನು ಒಪ್ಪಿಕೊಳ್ಳುತ್ತಲೇ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಿಂಗರಿಗೆ ಮುಖ್ಯವಾಗಿತ್ತು. ಮೂಲತಃ ಸಿಂಗ್ ರವರು ಇಬ್ಬರು ವಿಭಿನ್ನ ವಿಚಾರ ಧಾರೆಗಳ ಪ್ರಾಧ್ಯಾಪಕರಿಂದ ಅರ್ಥಶಾಸ್ತ್ರವನ್ನು ಮೈಗೂಡಿಸಿಕೊಂಡಿದ್ದರು. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸಮಾಜವಾದದ ಹಿನ್ನಲೆಯುಳ್ಳ ಖ್ಯಾತ ಅರ್ಥಶಾಸ್ತ್ರಜ್ಙೆ ಜೋನ್ ರಾಬಿನ್ ಸನ್ ಮತ್ತು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಂಡವಾಳಶಾಹಿ ಜಗತ್ತು ಮಾತ್ರ  ಪರ್ಯಾಯ ಎಂದು ನಂಬಿಕೊಂಡಿದ್ದ ನಿಕೋಲಸ್ ಕಾಲ್ಡರ್ ಇವರಿಗೆ ಗುರುಗಳಾಗಿದ್ದರು. ಇಬ್ಬರು ಗುರುಗಳ ವಿಚಾರೆಧಾರೆಯ ಜೊತೆಗೆ ತಮ್ಮದೇ ಆದ ಸುಧಾರಣೆಯ ಸೂತ್ರಗಳನ್ನು ಮನಮೋಹನ್ ಕಂಡುಕೊಂಡಿದ್ದರ ಫಲವಾಗಿ 2004ರಿಂದ 2010 ರ ವೇಳೆಗೆ ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಯಿತು.

ಸಿಂಗ್ ರವರ ಇಷ್ಟೆಲ್ಲಾ ಸಾಧನೆ ಮತ್ತು ಶ್ರಮ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯಲ್ಲಿ ಮಣ್ಣು ಪಾಲಾಯಿತು. ದೇಶದ ಹಲವಾರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷ, ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ನಂಬಿಕೊಳ್ಳಬೇಕಾಯಿತು. ಈ ನೆಲದ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಪ್ರಾದೇಶಿಕ ಪಕ್ಷಗಳ ಅನಾಲಾಯಕ್ ನಾಯಕರು ಇವರ ಸಚಿವ ಸಂಪುಟದಲ್ಲಿ ಸಚಿವರಾದರು. ಜೊತೆಗೆ ಸೋನಿಯಾ ಗಾಂಧಿಯವರ ಭಜನೆಯನ್ನು ತಮ್ಮ ಜೀವನದ ಏಕೈಕ ಗುರಿಯಾಗಿರಿಸಿಕೊಂಡ ಕೆಲವು ಕಾಂಗ್ರೇಸ್ ಭಟ್ಟಂಗಿಗಳು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಪರಿಣಾಮವಾಗಿ 2.ಜಿ. ಹಗರಣ, ಕಲ್ಲಿದ್ದಲು ಹಗರಣ, ರೈಲ್ವೆ ಭ್ರಷ್ಟಾಚಾರದ ಹಗರಣಗಳಿಗೆ ಮನಮೋಹನ್ ಸಿಂಗ್ ಮೌನ ಸಾಕ್ಷಿಯಾದರು. ಯು.ಪಿ.ಎ. ಸರ್ಕಾರದ ಹಗರಣಗಳು ಇವರನ್ನು ದುರ್ಬಲ ಪ್ರಧಾನಿಯನ್ನಾಗಿ ಪ್ರತಿಭಿಂಬಿಸಿದವು. ಜಾಗತಿಕ ಮಟ್ಟದಲ್ಲಿ ಶ್ರೇಷ್ಟ ನಾಯಕ ಮತ್ತು ಪ್ರಧಾನಿ ಎಂದು ಹೊಗಳಿಸಿಕೊಂಡಿದ್ದ ಮನಮೋಹನ ಸಿಂಗರನ್ನು 2012 ರ ಸೆಪ್ಟಂಬರ್ ತಿಂಗಳಿನಲ್ಲಿ ಟೈಮ್ಸ್ ಪತ್ರಿಕೆ ಭಾರತದ “ವಿಫಲ ನಾಯಕ” ಎಂದು ಬಣ್ಣಿಸಿತು.

ಆರ್ಥಿಕ ವಿಷಯಗಳಲ್ಲಿ ಕಠಿಣ ನಿಲುವು ತಾಳುವ ಮನಮೋಹನ್ ಸಿಂಗ್ ರಾಜಕೀಯ ವಿಷಯಗಳಲ್ಲಿ ದುರ್ಬಲರಾದದ್ದು ಏಕೆ? ಸೋನಿಯಾ ಅವರ ಋಣದ ಭಾರ ಇವರನ್ನು ನಿಷ್ಕ್ರಿಯಗೊಳಿಸಿತೆ? ಇದಕ್ಕೆ ಕಾಲವೇ ಉತ್ತರಿಸಬೇಕು, ಆದರೆ, ಮನಮೋಹನ್ ಸಿಂಗರ ಬಗ್ಗೆ ನಮ್ಮ ಅಸಮಾಧಾನಗಳು, ಸಿಟ್ಟುಗಳು ಏನೇ ಇರಲಿ. ಭಾರತದ ಇತಿಹಾಸದಲ್ಲಿ ಪ್ರಧಾನಿಯಂತಹ ಅತ್ಯುನ್ನುತ ಹುದ್ದೆಗೆ ಏರಿ, ತಮ್ಮ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು, ತಮ್ಮ ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರವಿಟ್ಟ ಪ್ರಧಾನಿಗಳಲ್ಲಿ ಇವರು ಎರಡನೇಯವರು.(ಮೊದಲನೆಯವರು ಲಾಲ್ ಬಹುದ್ದೂರ್ ಶಾಸ್ತ್ರಿ) ಮನಮೋಹನ್ ಸಿಂಗರ ಸರಳತೆ ಎಂತಹದ್ದು ಎಂಬುದನ್ನು ಖುಷ್ವಂತ್ ಸಿಂಗ್ ತಮ್ಮ ಒಂದು ಅಂಕಣದಲ್ಲಿ ದಾಖಲಿಸಿದ್ದಾರೆ. 1999ರ ಲ್ಲಿ ತಮ್ಮಿಂದ ಎರಡು ಲಕ್ಷ ರೂಪಾಯಿಗಳನ್ನು ಮನಮೋಹನ್ ಸಿಂಗರು ಸಾಲ ಪಡೆದಿದ್ದರು. ಅಸ್ಸಾಂ ನಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ವಿಮಾನ ಯಾನ ಮತ್ತು ಟ್ಯಾಕ್ಸಿ ವೆಚ್ಚಕ್ಕಾಗಿ ಹಣ ಪಡೆದು ನಂತರ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಡಾ. ಮನಮೊಹನ ಸಿಂಗ್ ರವರ ದೌರ್ಬಲ್ಯಗಳ ನಡುವೆ ಅವರ ಬಗ್ಗೆ ಗೌರವ ಉಂಟಾಗುವುದು ಈ ಕಾರಣಕ್ಕಾಗಿ. ಒರ್ವ ಶಾಸಕನ ತನ್ನ ಒಂದು ಅವಧಿಯಲ್ಲಿ ಐದು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸಲು ದರೋಡೆಗೆ ಇಳಿದಿರುವ ಸಂದರ್ಭದಲ್ಲಿ  ಕೇಂದ್ರ ಸಚಿವಾರಾಗಿದ್ದು, ದೇಶದ ವಿವಿಧ ಉನ್ನತ ಹುದ್ದಗಳಲ್ಲಿ ಕಾರ್ಯನಿರ್ವಹಿಸಿ, ಸಿಂಗ್ ಅವರು ಬದುಕುತ್ತಿರುವ ಸರಳ ಬದುಕಿನಿಂದಾಗಿ ಅವರ  ದುರಂತ ನಾಯಕನ ಇಮೇಜಿನ ನಡುವೆಯೂ  ಗೌರವ ಮೂಡುತ್ತದೆ..

ಭಾನುವಾರ, ಆಗಸ್ಟ್ 25, 2013

ಸಾವಿನ ಕುದುರೆಯೇರಿ ಹೊರಟವರ ಕಥನ



ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಸಂಭವಿಸುತ್ತಿರುವ ರಸ್ತೆಗಳಲ್ಲಿನ ಅಪಘಾತಗಳನ್ನು ಗಮನಿಸಿದರೆ, ಭಾರತ ಜಗತ್ತಿನ ವಾಹನ ಅಪಘಾತಗಳ ರಾಜಧಾನಿಯೇನೊ ಎಂದು ಅನಿಸತೊಡಗಿದೆ.  ಪ್ರತಿ ದಿನ ರಸ್ತೆಗಿಳಿಯುತ್ತಿರುವ ದ್ವಿಚಕ್ರವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳಿಂದ ದೇಶದ ರಸ್ತೆಗಳು ತುಂಬಿ ತುಳುಕುತ್ತಿವೆ.  ಇವುಗಳ ಜೊತೆಗೆ ವಾಹನ ಚಲಾಯಿಸುವಾಗ ಚಾಲಕರಿಗೆ ಇರಬೇಕಾದ ಶ್ರದ್ಧೆ ಮತ್ತು ಜವಾಬ್ದಾರಿಯ ಕೊರತೆಯಿಂದಾಗಿ ಅಪಘಾತಗಳ ಪ್ರಮಾಣ ಸಹ ಪ್ರತಿ ವರ್ಷ ಹೆಚ್ಚಾಗುತ್ತಲೆ ಇದೆ. ಜಗತ್ತಿನಲ್ಲಿ ನಡೆಯುವ ಅಪಘಾತಗಳ ಒಟ್ಟು ಸಂಖ್ಯೆಯ ಶೇಕಡ ಹತ್ತರಷ್ಟು ವಾಹನ ಅಪಘಾತಗಳು  ಭಾರತದಲ್ಲಿ ಸಂಭವಿಸುತ್ತಿವೆ.

ಭಾರತದಲ್ಲಿ ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ವಾಹನ ಅಪಘಾತ ಸಂಭವಿಸುವ ರಾಜ್ಯಗಳೆಂದು ಕುಖ್ಯಾತಿ ಗಳಿಸಿವೆ. ಕಳೆದ ಹತ್ತು ವರ್ಷಗಳಿಂದ ತಮಿಳುನಾಡು ರಾಜ್ಯ ಅಪಘಾತದ ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ, ಉತ್ತರ ಪ್ರದೇಶದಲ್ಲಿ ಸರಾಸರಿ ವರ್ಷಕ್ಕೆ 12ರಿಂದ 13 ಸಾವಿರ ಅಪಘಾತಗಳು ಸಂಭವಿಸದರೆ, ತಮಿಳುನಾಡಿನಲ್ಲಿ ಸರಾಸರಿ ವರ್ಷವೊಂದಕ್ಕೆ 13 ರಿಂದ 15 ಸಾವಿರ ವಾಹನ ಅಪಘಾತಗಳು ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಈ ಪ್ರಮಾಣ 8.5 ಸಾವಿರದಿಂದ 9 ಸಾವಿರದ ವರೆಗೆ ಇದೆ.
ಭಾರತದಲ್ಲಿ ಸಂಭವಿಸುತ್ತಿರುವ ವಾಹನ ಅಪಘಾತಗಳಲ್ಲಿ ಶೇಕಡ 93 ರಷ್ಟು ಅಪಘಾತಗಳು ವಾಹನ ಚಾಲಕರ ಸ್ವಯಂಕೃತ ಅಪರಾಧಗಳಿಂದ ಸಂಭವಿಸಿದರೆ, ಉಳಿದ ಕೇವಲ 7 ರಷ್ಟು ಪ್ರಮಾಣದಲ್ಲಿ ವಾಹನಗಳ ತಾಂತ್ರಿಕ ವೈಫಲ್ಯಗಳಿಂದ ಜರುಗುತ್ತಿವೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ಶೇಕಡ 30 ರಷ್ಟು, ಮದ್ಯಪಾನ ಸೇವನೆಯಿಂದಾಗಿ ಶೇಕಡ 33 ರಷ್ಟು ಅಪಘಾತಗಳು ಹಾಗೂ  ಉಳಿದ ಶೇಕಡ 30 ರಷ್ಟು ಅಪಘಾತಗಳು ಚಾಲಕರ ಮಿತಿಮೀರಿದ ವೇಗದಿಂದಾಗಿ ಸಂಭವಿಸುತ್ತಿವೆ.

ಕೇವಲ ಐದು ವರ್ಷಗಳ ಹಿಂದೆ ಪ್ರತಿ ಹತ್ತು ನಿಮಿಷಕ್ಕೆ ಭಾರತದಲ್ಲಿ  ಒಂದು ವಾಹನಗಳ ದುರಂತ ಸಂಭವಿಸುತ್ತಿತ್ತು. ಈಗ ಕೇವಲ ನಾಲ್ಕು ನಿಮಿಷಕ್ಕೆ ಒಂದರಂತೆ ದುರಂತ ಸಂಭವಿಸುತ್ತಿದ್ದು, ಪ್ರತಿ ಹತ್ತು ನಿಮಿಷಕ್ಕೆ ಒಂದು ಜೀವ ಬಲಿಯಾಗುತ್ತಿದೆ ಎಂದು ದೆಹಲಿ ಗಂಗಾರಾಂ ಆಸ್ಪತ್ರೆಯ ವೈದ್ಯ ತಜ್ಙ ಡಾ. ಬಿ.ಕೆ. ರಾವ್ ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಹದಿಮೂರು ಲಕ್ಷ ಜನತೆ ವಾಹನಗಳ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್ ಬಳಕೆ ಮಾಡುತ್ತಿರುವುದು, ಇತ್ತೀಚೆಗೆ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಕೇಂದ್ರ ಸಾರಿಗೆ ಸ್ಪೃಷ್ಟ ಪಡಿಸಿದೆ. ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ಬಳಿಯ ವಿಷ್ಣು ಸಮುದ್ರದ ಬಳಿ ಸರ್ಕಾರಿ ಬಸ್ ಕೆರೆಗೆ ಉರುಳಲು ಕಾರಣವಾದದ್ದು ಕೂಡ ಇಂತಹ ಕಾರಣದಿಂದಾಗಿ.

ಆಶ್ಚರ್ಯಕರ ಸಂಗತಿಯೆಂದರೆ, ದ್ವಿಚಕ್ರ ವಾಹನಗಳ ಅಪಘಾತ ಶೇಕಡ ಹದಿನಾರರ ಪ್ರಮಾಣದಲ್ಲಿ ಇದ್ದು, ಇವೆಲ್ಲವೂ ಮಿತಿ ಮೀರಿದ ವೇಗ ಮತ್ತು ಮೊಬೈಲ್ ಬಳಕೆಯಿಂದ ಸಂಭವಿಸುತ್ತಿವೆ. ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಕನಿಷ್ಟ ತಿಂಗಳಿಗೆ ಹತ್ತು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರರು ಮರಣಹೊಂದುತ್ತಿದ್ದಾರೆ. ಸುಮಾರು ಮುವತ್ತರಿಂದ ಅರವತ್ತು ಅಡಿಗಳ ರಸ್ತೆಯ ವಿಸ್ತೀರ್ಣದಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸುತ್ತದೆ ಎಂದರೆ, ದ್ವಿಚಕ್ರ ಸವಾರರ ನಿರ್ಲಕ್ಷ್ಯ ಯಾವ ಪ್ರಮಾಣದಲ್ಲಿರಬಹುದು ನೀವೇ ಊಹಿಸಿಕೊಳ್ಳಿ.
ವಾಹನಗಳ ಚಾಲನೆ ಕುರಿತಂತೆ ಇರುವ ಅನನಭವ ಮತ್ತು ದಿವ್ಯ ನಿರ್ಲಕ್ಷ್ಯ ಹಾಗೂ ಪ್ರತಿ ಹಳ್ಳಿಗಳಲ್ಲಿ ಸೈಕಲ್ಗಳ ಸ್ಥಾನವನ್ನು ಆಕ್ರಮಿಸಿಕೊಂಡ ದ್ವಿಚಕ್ರವಾಹನಗಳು ಮತ್ತು ಬ್ಯಾಂಕ್ ನಿಂದ ಸುಲಭವಾಗಿ ಸಿಗುತ್ತಿರುವ ಸಾಲದ ಸೌಲಭ್ಯಗಳಿಂದಾಗಿ ಮಧ್ಯಮ ವರ್ಗಕ್ಕೆ ನಿಲುಕಿದ ಕಾರುಗಳಿಂದಾಗಿ ಇಡೀ ದೇಶವೇ ವಾಹನಗಳಿಂದ ಕಿಕ್ಕಿರಿಯುತ್ತಿದೆ. ಈವರೆಗೆ ಎಲ್ಲೆಂದರಲ್ಲಿ ಜನಜಂಗುಳಿ ಕಾಣುತ್ತಿದ್ದ ನಾವು ಈಗ ವಾಹನಗಳ ದಟ್ಟಣೆಯನ್ನೂ ಕಾಣುತ್ತಿದ್ದೇವೆ. ಇದು ಭಾರತದ ಸಮಸ್ಯೆಯೊಂದೇ ಅಲ್ಲ, ಬದಲಾಗಿ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ನಗರಗಳಲ್ಲಿ  ನಗರಗಳಲ್ಲಿ ಸುರಂಗ ರಸ್ತೆಗಳಾದವು, ಮೇಲಿನ ರಸ್ತೆಗಳಾದವೂ, ನಂತರ  ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ಅಸಹಾಯಕತೆಯಿಂದ ಕೈ ಚೆಲ್ಲಿ ಕುಳಿತಿರುವ ಸರ್ಕಾರಗಳು ಸಂಚಾರ ದಟ್ಟಣೆಯ ಸಮಸ್ಯೆಯನ್ನು ಜನರ ತಲೆಗೆ ವರ್ಗಾಯಿಸಿವೆ.

2012 ರಲ್ಲಿ 48 ಲಕ್ಷ ಕಾರುಗಳು ಭಾರತದಲ್ಲಿವೆ ಎಂದು ಅಂದಾಜಿಸಲಾಗಿದ್ದು, 2025 ರ ಇಸವಿ ವೇಳೆಗೆ ಭಾರತದಲ್ಲಿ ಕಾರುಗಳ ಸಂಖ್ಯೆ 4 ಕೊಟಿ, 60 ಲಕ್ಷ ಕ್ಕೆ ಏರಬಹುದೆಂದು ನಿರಿಕ್ಷಿಸಲಾಗಿದೆ.  ಈಗಿನ ವಾಹನಗಳ ಮಾರಾಟದ ಬೆಳವಣಿಗೆಯ  ವೇಗವನ್ನು ಮಾನದಂಡವನ್ನಾಗಿಟ್ಟುಕೊಂಡು ಇದನ್ನು ಅಂದಾಜಿಸಲಾಗಿದೆ. ಇವೊತ್ತಿನ ಭಾರತದ ರಸ್ತೆಗಳ ಪರಿಸ್ಥಿಯನ್ನು ಗಮನಿಸಿದರೆ, ಮುಂದಿನ ದಶಕಗಳಲ್ಲಿ ಜನ ಸಾಮಾನ್ಯರಿಗೆ ಭಾರತದ ರಸ್ತೆಗಳಲ್ಲಿ ನಡೆದಾಡಲು ಪ್ರವೇಶವಿಲ್ಲ ಎಂದಂತಾಯಿತು.
ರಸ್ತೆ ಸಂಚಾರದ ಸುರಕ್ಷತೆಯ ಕ್ರಮ ಕುರಿತಂತೆ ದೇಶದ ಎಲ್ಲಾ ರಾಜ್ಯಗಳ ಸಂಚಾರಿ ವಿಭಾಗದ ಪೊಲೀಸರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ, ಆದರೆ, ನಾವುಗಳು, ಅವಿವೇಕಿಗಳಂತೆ, ಅನಾಗರೀಕರಂತೆ ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು, ಇಲ್ಲವೆ, ಮಿತಿ ಮೀರಿದ ವೇಗದಲ್ಲಿ ಸಾವನ್ನು ಬೆನ್ನಟ್ಟಿ ಹೊರಟವರಂತೆ ವಾಹನ ಚಲಾಯಿಸಿದರೆ, ಇದಕ್ಕೆ ಪೊಲೀಸರ ಬಳಿ ಅಷ್ಟೇ ಅಲ್ಲ, ನಮ್ಮ ಬಳಿ ಕೂಡ ಯಾವ ಪರಿಹಾರ ತಾನೆ ಇದೆ?  ಅದನ್ನು ಎಲ್ಲಿ ಹುಡುಕುವುದು? ತಿಳಿಯುತ್ತಿಲ್ಲ.