ಗುರುವಾರ, ಅಕ್ಟೋಬರ್ 1, 2015

ಗಾಂಧಿಯನ್ನು ಜಗತ್ತಿಗೆ ಪರಿಚಯಿಸಿದ ಲೂಯಿಸ್ ಫಿಶರ್



ಲೂಯಿಸ್ ಫಿಶರ್ ಇಪ್ಪತ್ತನೆಯ ಶತಮಾನದ ಜಗತ್ತು ಕಂಡ ಅತ್ಯುತ್ತಮ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕರಲ್ಲಿ ಪ್ರಮುಖನಾದವನುತಾನು ಸೇವೆ ಸಲ್ಲಿಸಿದ ರಾಷ್ಟ್ರಗಳ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕರಾರುವಕ್ಕಾಗಿ ವಿಶ್ಲೇಷಿಸಿ ಅವುಗಳ ಕುರಿತು ನಿರಂತರ ಲೇಖನ ಮತ್ತು ಕೃತಿಗಳನ್ನು ಬರೆಯುವುದರ ಮೂಲಕ ಪತ್ರಿಕಾ ವೃತ್ತಿಗೆ ಘನತೆ ತಂದಿತ್ತವನು. ನಿರಂತರ ಒಂದೂವರೆ ದಶಕಗಳ ಕಾಲ ಅಂದಿನ ಸೋವಿಯತ್ ರಷ್ಯಾದಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿ, ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದವನು. ಜೊತೆಗೆ ಅವುಗಳ ಗುಣಾವಗುಣಗಳ ಕುರಿತು ಹಲವು ಕೃತಿಗಳನ್ನು ಬರೆದ ಲೂ¬ಸ್ ಫಿಶರ್, ಅಮೇರಿಕಾದಲ್ಲಿ ಸೋವಿಯತ್ ರಷ್ಯಾ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಏಕೈಕ ವಿದ್ವಾಂಸ ಎಂಬ ಗೌರವಕ್ಕೆ ಒಳಗಾದವನು. ಇವೆಲ್ಲವುಗಳಿಗಿಂತ ಹೆಚ್ಚಾಗಿ ಮಹಾತ್ಮಗಾಂಧೀಜಿಯವರ ಜೀವನ ಚರಿತ್ರೆಯನ್ನು ತಾನು ಬರೆದ ಕೃತಿಯಲ್ಲಿ ಗಾಂಧೀಜಿಯವರ ಉದಾತ್ತ ಚಿಂತನೆಗಳನ್ನು ಅಡಕಗೊಳಿಸುವುದರ ಮೂಲಕ  ಗಾಮಧೀಜಿಯವರನ್ನು ಜಗತ್ತಿಗೆ ತಲುಪಿಸಿ ತಾನೂ ಸಹ ಅವರ ಜೊತೆ ಅಮರನಾದವನು.
ಮಹಾತ್ಮ ಗಾಂದಿಯವರು ತಾವು ಬದುಕಿದ್ದ ಕಾಲಘಟ್ಟದಲ್ಲಿ ಜಗತ್ತಿಗೇನು ಅಪರಿಚಿತರಾಗಿ ಉಳಿದಿರಲಿಲ್ಲ. ಆದರೆ, ಎಂದೂ ಮುಳುಗದ ಸಾಮ್ರಾಜ್ಯವೆಂಬ ಇಂಗ್ಲೆಂಡಿನ ಸರ್ಕಾರ ಮತ್ತು ಅರಸೊತ್ತಿಗೆಗೆ  ಅಹಿಂಸೆಯ ಮಾರ್ಗದಲ್ಲಿ ಅವರು ಒಡ್ಡಿz ಅನೇಕÀ ಸವಾಲುಗಳ ಮುಖಾಂತರ ಅವರು ಜಗತ್ತಿಗೆ  ಕುತೂಹಲಕಾರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಅಹಿಂಸೆ ಎಂಬ ಆಯುಧದ ಮೂಲಕ ಲಕ್ಷಾಂತರ ಮಂದಿ ಅನುಯಾಯಿಗಳ ಜೊತೆಗೂಡಿ ಇಂಗ್ಲೆಂಡ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಸರ್ಕಾರಗಳನ್ನು ಅವರು ಮಣಿಸಿದ ರೀತಿಯಿಂದಾಗಿ ಅವರ ಕುರಿತು ಜಗತ್ತಿಗೆ ಅನೇಕ ರೀತಿಯ ಕುತೂಹಲಗಳಿದ್ದವು. ಅವರ ಹೋರಾಟ, ಬದ್ಧತೆ ಮತ್ತು  ಬಲಿದಾನ ಹಾಗೂ ಚಿಂತನೆಗಳನ್ನು ಜಗತ್ತಿಗೆ ತಲುಪಿಸಿದ ಕೀರ್ತಿ ಲೂಯಿಸ್ ಫಿಶರ್ ಗೆ ಸಲ್ಲುತ್ತದೆ. ಕಾರಣಗಳಿಂದಾಗಿ ಲಂಡನ್ನಿನ ನಿಯತ ಕಾಲಿಕೆಟೈಮ್ಸ್ಪತ್ರಿಕೆಯು ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಕುರಿತು ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮಹಾತ್ಮ ಗಾಂಧಿಯವರಿಗೆ ದ್ವಿತೀಯ ಸ್ಥಾನ ಲಭ್ಯವಾಯಿತು. ( ಮೊದಲ ಸ್ಥಾನ ಸರ್. ಐಸಾಕ್ ನ್ಯೂಟನ್ ರವರಿಗೆ ದೊರೆತಿತ್ತು.)  ತಾನು ಹುಟ್ಟಿ ಬೆಳೆದ ಅಮೇರಿಕಾದ ಬಂಡವಾಳಶಾಹಿ ನೀತಿಯ ವಿರುದ್ಧ  ಒಂದು ರೀತಿಯ ಅಸಹನೆ ಬೆಳಸಿಕೊಂಡು ಕಮ್ಯೂನಿಷ್ಟ್ ಸಿದ್ಧಾಂತಗಳ ಪರಮ ಆರಾಧಕನಾಗಿದ್ದ ಲೂಯಿಸ್ ಫಿಶರ್ ಕೊನೆಗೆ ಅದರಿಂದಲೂ ಭ್ರಮನಿರಸನಗೊಂಡು ಅಂತಿಮವಾಗಿ ಗಾಂಧಿ ಸಿದ್ಧಾಂತಗಳು ಮತ್ತು ಚಿಂತನೆಗಳಿಗೆ ಒಲಿದದ್ದು ಒಂದು ರೀತಿಯಲ್ಲಿ ಆತನ ರೋಚಕ ಪಯಣ ಎಂದು ಬಣ್ಣಿಸ ಬಹುದು. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವ ವಿದ್ಯಾನಿಲಯವು ಲೂಯಿ ಫಿಶರ್ ಎಲ್ಲಾ ಕೃತಿಗಳು ಹಾಗೂ  ಬರಹಗಳ ದಾಖಲೆಯನ್ನು ಸಂಗ್ರಹಿಸಿಟ್ಟಿದ್ದು ಇದರಿಂದಾಗಿ ಆತನನ್ನು ಅರಿಯಲು ನಮಗೆ ಸಹಾಯಕವಾಗಿದೆ.


ಲೂಯಿ ಫಿಶರ್ 1896 ಪೆಬ್ರವರಿ 29 ರಂದು ಅಮೇರಿಕಾದ ಕಡಲತೀರದ ನಗರ ಫಿಲಿಡೆಲ್ಪಿಯಾ ನಗರದ ಕೊಳಗೇರಿಯಲ್ಲಿ ಜನಿಸಿದವನು. ವೇಳೆಗೆ ಆತನ ತಂದೆ  ಡೆವಿಡ್ ಮೀನು ಮತ್ತು ಹಣ್ಣುಗಳನ್ನು ಮನೆ ಮನೆಗೆ ತಿರುಗಿ ಮಾರಾಟ ಮಾಡುತ್ತಿದ್ದ ಕಡು ಬಡವನಾಗಿದ್ದ. ಸ್ಥಳಿಯ ಪಬ್ಲಿಕ್ ಶಾಲೆಯಲ್ಲಿ ಮೆಟ್ರಿಕ್ ವರೆಗೆ ಓದಿ ನಂತರ ಶಾಲೆಯೊಂದರ ಶಿಕ್ಷಕನಾಗಿದ್ದ ಲೂಯಿಸ್ ಫಿಶರ್ಗೆ  1917 ರಲ್ಲಿ ಬ್ರಿಟೀಷ್ ಸೇನೆಯ ಪರವಾಗಿ ಸ್ವಯಂ ಸೇವಾ ಕಾರ್ಯಕರ್ತನಾಗಿ  ಸೇವೆ ಸಲ್ಲಿಸಲು ಪ್ಯಾಲೆಸ್ತೇನ್ ನಲ್ಲಿ ಅವಕಾಶ ದೊರೆಯಿತು. ಮೂರು ವರ್ಷ ಸೇವೆ ಸಲ್ಲಿಸಿದ ಲೂಯಿ ಫಿಶರ್  ನಂತರ ವಾಪಸ್ ನ್ಯೂಯಾರ್ಕ್ ನಗರಕ್ಕೆ ಬಂದು ಸ್ಥಳಿಯ ಸುದ್ಧಿ ಸಂಸ್ಥೆಯೊಂದರಲ್ಲಿ ವರದಿಗಾರನಾಗಿ ನೇಮಕಗೊಂಡ. ಇದೇ ವೇಳೆಗೆ ಸರಿಯಾಗಿ ರಷ್ಯಾದ ಸಂಗೀತಗಾರರ ತಂಡವೊಂದು ಅಮೇರಿಕಾ ಪ್ರವಾಸದಲ್ಲಿತ್ತು. ರಷ್ಯನ್ ಭಾಷೆಯೊಂದನ್ನು ಹೊರತು ಪಡಿಸಿ ಬೇರೊಂದು ಭಾಷೆಯ ಪರಿಚಯವಿಲ್ಲದÀ ಸಂಗೀತಗಾರರು ತಮ್ಮ ಜೊತೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಬಲ್ಲವಳಾಗಿದ್ದ ಬೆರ್ಥಾ ಅಲಿಯಾಸ್ ಮರ್ಕ್ರೂಶ ಎಂಬ ಯುವತಿಯನ್ನು ಜೊತೆಯಲ್ಲಿ  ಕರೆತಂದಿದ್ದರು. ಆಕೆಗೆ ಸ್ಥಳಿಯ ಸಂಘ ಸಂಸ್ಥೆಗಳು ಮತ್ತು ಸರ್ಕಾರಗಳ  ಜೊತೆ ಸಂಪರ್ಕ ಏರ್ಪಡಿಸಲು ಲೂಯಿಸ್ ಫಿಶರ್ ನೇಮಕಗೊಂಡ. ಹೀಗೆ ಒಂದು ವರ್ಷ ಕಾಲ ಅಮೇರಿಕಾದ ವಿವಿಧ ನಗರಗಳಿಗೆ ಬೇಟಿ ನೀಡಿದ ರಷ್ಯಾದ ಸಂಗೀತ ತಂಡದ ಜೊತೆ ತಿರುಗಾಡಿದ ಫಿಶರ್, ನಂತರ ರಷ್ಯಾ ತಂಡ ಜರ್ಮನಿಯತ್ತ ಪ್ರವಾಸ ಹೊರಟಾಗ, ಅದರ ಜೊತೆ ತಾನೂ ಪ್ರಯಾಣ ಬೆಳಸಿದ. ಬರ್ಲಿನ್ ನಗರದಲ್ಲಿದ್ದುಕೊಂಡು, ಅಮೇರಿಕಾದ ನ್ಯೂಯಾರ್ಕ್ ಪೋಸ್ಟ್ ಎಂಬ ಸಂಜೆ ದಿನಪತ್ರಿಕೆಗೆ ಯುರೂಫ್ ರಾಷ್ಟ್ರಗಳ ವರದಿಗಾರನಾಗಿ ನೇಮಕಗೊಂಡ. ಎರಡು ವರ್ಷದ ಅವಧಿಯಲ್ಲಿ  ರಷ್ಯಾ ತಂಡದ ಯುವತಿಯ ಜೊತೆ ಅನುರಾಗ ಬೆಳಸಿಕೊಂಡಿದ್ದ ಫಿಶರ್ ಆಕೆಯನ್ನು ಬಿಟ್ಟಿರಲಾರದೆ, 1922 ರಲ್ಲಿ ತಾನೂ ಸಹ ರಷ್ಯಾಕ್ಕೆ ತೆರಳಿ ಆಕೆಯನ್ನು ವಿವಾಹವಾಗುವುದರ ಮೂಲಕ ಬದುಕು ಕಟ್ಟಿಕೊಂಡ ಸಮಯದಲ್ಲಿ ಜಗತ್ತಿನ ಎರಡು ಬಲಿಷ್ಟ ರಾಷ್ಟ್ರಗಳಾಗಿ ಹೊರ ಹೊಮ್ಮಿದ್ದ ಹಾಗೂ ಒಳಗೊಳಗೆ ಶೀತಲ ಯುದ್ಧದಲ್ಲಿ ತೊಡಗಿದ್ದ ಅಮೇರಿಕಾ ಮತ್ತು ಸೋವಿಯತ್ ರಷ್ಯಾ ಎರಡೂ ರಾಷ್ಟ್ರಗಳು  ಪರಸ್ಪರ ತಮ್ಮ ಶಕ್ತಿ ಸಾಮಾಥ್ರ್ಯಗಳನ್ನು ಅರಿತುಕೊಳ್ಳಲು ಪರೋಕ್ಷವಾಗಿ   ಹಲವು ಮಾರ್ಗಗಳ ಮೂಲಕ ಯತ್ನಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಅಮೇರಿಕಾ ಪ್ರಸಿದ್ಧ  ನೇಷನ್ ಎಂಬ ದಿನಪತ್ರಿಕೆಗೆ ಲೂಯಿ ಫಿಷರ್ ಸೋವಿಯತ್ ರಷ್ಯಾದ ವಿಶೇಷ ವರದಿಗಾರನಾಗಿ ನೇಮಕಗೊಂಡ. ಜೊತೆಗೆ ಪ್ರತಿ ವರ್ಷ ತನ್ನ ತಾಯ್ನಾಡಾದ ಅಮೇರಿಕಾಕ್ಕೆ ತೆರಳಿ ಸೋವಿಯತ್ ರಷ್ಯಾ ಕುರಿತ ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಕುರಿತು ವಿಶ್ವ ವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದ. ತಾನು ಹುಟ್ಟಿ ಬೆಳೆದ ಅಮೇರಿಕಾ ಸೇರಿದಂತೆ ಇಂಗ್ಲೇಂಡ್ ನಲ್ಲಿ ಪ್ರಚಲಿತದಲ್ಲಿದ್ದ ಬಂಡವಾಳಶಾಹಿ ನೀತಿಯ ಕುರಿತು ಅಸಹನೆ ಬೆಳಸಿಕೊಂಡಿದ್ದ ಫಿಶರ್ 1789 ರಲ್ಲಿ ನಡೆದ ಪ್ರೆಂಚ್ ಕ್ರಾಂತಿಯ ನಂತರ ಅನೇಕ ಬದಲಾವಣೆಗಳ ಮೂಲಕ 1848 ರಲ್ಲಿ ಕಾರ್ಲ್ಮಾಕ್ರ್ಸ್ ಮತ್ತು ಫ್ರೆಡರಿಕ್ ಏಂಗಲ್ಸ್ ಬರೆದಕಮ್ಯೂನಿಷ್ಟ್ ಮ್ಯಾನಿಪೆಸ್ಟೋಕೃತಿಯಿಂದ ಪ್ರಭಾವಿತನಾಗಿದ್ದ. ಮಾರ್ಕ್ಸ್ ವಾದದ ಪರಮ ಆರಾಧಕನಾಗಿದ್ದ.
ಮಾಸ್ಕೊ ನಗರದಲ್ಲಿ ಇದ್ದ ದಿನಗಳಲ್ಲಿ ಲೂಯಿ ಫಿಷರ್ ಪತ್ನಿ ಮಾರ್ಕ್ರೂಶ ಉಕ್ರೇನ್ ಬಳಿ ಸ್ವಯಂ ಸೇವಾ ಸಂಘಟನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಒಂದು ದಿನ  ಫಿಶರ್ ತನ್ನ ಪತ್ನಿಯ ಜೊತೆ ಉಕ್ರೇನ್ ಗೆ ತೆರಳಿ ಅಲ್ಲಿನ ಗ್ರಾಮಾಂತರ ಪ್ರದೇಶದ ರೈತರ ಮತ್ತು ಕೂಲಿ ಕಾರ್ಮಿಕರ ಬವಣೆಗಳನ್ನು ನೋಡಿ ಅಚ್ಚರಿಗೊಂಡ. ಕಮ್ಯೂನಿಷ್ಟ್ ಸಿದ್ಧಾಂತಗಳ ಕುರಿತು ಅವನು ಕಟ್ಟಿಕೊಂಡಿದ್ದ ಆತ್ಮ ವಿಶ್ವಾಸ ಅವನೊಳಗೆ ಕರಗತೊಡಗಿತು. ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ ಜಾರಿಗೆ ಬಂದ ಅನೇಕ ಕಠಿಣ ಕಾನೂನುಗಳು ಸರ್ವಾಧಿಕಾರವನ್ನು ನೆನಪಿಸುವಂತಿದ್ದವು. ಇದರಿಂದ ಭ್ರಮನಿರಸನಗೊಂಡ ಲೂಯಿಸ್ ಫಿಶರ್ ಸ್ಪೇನ್ ದೇಶದಲ್ಲಿ ನಡೆಯುತ್ತಿದ್ದ ಆಂತರೀಕ ಯುದ್ಧದ ಬಗ್ಗೆ ವರದಿ ಮಾಡಲು 1937  ರಲ್ಲಿ ಸ್ಪೇನ್ ದೇಶಕ್ಕೆ ತೆರಳಿದ. 1938 ವೇಳೆಗೆ ಅವನಿಗೆ ರಷ್ಯಾ ಬೇಡವಾಗಿತ್ತು. ವಾಪಸ್ ನೂಯಾರ್ಕ್ನಗರಕ್ಕೆ ಹೋಗಿ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆಸಿಕೊಳ್ಳಲು ಪ್ರಯತ್ನಿಸಿದ ಆದರೆ ದೇಶ ತೊರೆಯಲು ರಷ್ಯಾ ಸರ್ಕಾರ ಅಡ್ಡಗಾಲು ಹಾಕಿತು. ನಂತರ ಅಮೇರಿಕಾ ಅಧ್ಯಕ್ಷ ರೂಸ್ ವೆಲ್ಟ್ ರವರ ಮಧ್ಯ ಪ್ರವೇಶದಿಂದಾಗಿ ರಷ್ಯ ಸರ್ಕಾರ 1939 ರಲ್ಲಿ  ಅನುಮತಿ ನೀಡಿತು. ವೇಳೆಗೆ ಕಮ್ಯೂನಿಷಮ್ ಹಾಗೂ ಬಂಡವಾಳ ಶಾಹಿ ನೀತಿ ಎರಡರ ಬಗ್ಗೆಯೂ ವಿಶ್ವಾಸ ಕಳೆದುಕೊಂಡಿದ್ದ ಲೂಯಿ ಫಿಷರ್ ಗೆ ಭಾರತzಲ್ಲಿÀ ಮಹಾತ್ಮ ಗಾಂಧಿ ನಡೆಸುತ್ತಿದ್ದ ಅಹಿಂಸಾ ಮಾರ್ಗದ ಹೋರಾಟ ಮತ್ತು ಅವರು 1908 ರಲ್ಲಿ ಬರೆದು, ಆನಂತರ ಮಹದೇವ ದೇಸಾಯಿರವರಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದ್ದಹಿಂದ್ವಸ್ವಾರಾಜ್ಕೃತಿಯ ಕುರಿತು ಆಸಕ್ತಿ ತಾಳಿದ್ದ. ಇವುಗಳ ನಡುವೆ ನ್ಯೂಯಾರ್ಕ್ ನಗರದಲ್ಲಿದ್ದುಕೊಂಡು, ಗಾಂಧೀಜಿಯವರ ಜೊತೆ ಪತ್ರ ವ್ಯವಹಾರ ಇಟ್ಟುಕೊಂಡು ಅನೇಕ ವಿಷಯಗಳ ಕುರಿತಂತೆ ತನ್ನೊಳಗಿದ್ದ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದ. ಅಂತಿಮವಾಗಿ 1942 ರಲ್ಲಿ ಗಾಂಧೀಜಿಯವರ ಆಮಂತ್ರಣದ ಮೇರೆಗೆ  ಸೇವಾಗ್ರಾಮ್  ಆಶ್ರಮಕ್ಕೆ ಬೇಟಿ ನೀಡಿದ ಲೂಯಿಸ್  ಫಿಶರ್ ಗೆ ಭಾರತದ ಬಹು ಮುಖಿ ಸಂಸ್ಕøತಿ, ಇಲ್ಲಿನ ಜನರ  ಬಡತನ ಮತ್ತು  ಅನಕ್ಷರತೆ ಹಾಗೂ  ತಾನು ಈವರೆಗೆ ಕಾಣದಿದ್ದ ಪೂರ್ವ ಜಗತ್ತಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿತ್ತು. ಬಡತನದ ನಡೆವೆ ಇಲ್ಲಿನ ಜನತೆ ಕಟ್ಟಿಕೊಂಡಿದ್ದ ಬದುಕು ಹಾಗೂ ಅವರ ಸಹಿಷ್ಣತೆಯನ್ನು ಕಂಡು ಲೂಯಿಸ್ ಫಿಶರ್ ಅಚ್ಚರಿಗೊಂಡ. ಇಂತಹವರ ನಡುವೆ ಬದುಕುತ್ತಾ ಅವರ ಕಗ್ಗತ್ತಲ ಬದುಕಿಗೆ ಬೆಳಕಾಗಲು ಹೊರಟ ಗಾಂಧೀಜಿಯವರ ಬದುಕು, ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಮತ್ತು ಯಂತ್ರ ನಾಗರೀಕತೆಗೆ ಪರ್ಯಾಯವಾಗಿ ಅವರು ರೂಪಿಸುತ್ತಿದ್ದ ಗುಡಿ ಕೈಗಾರಿಕೆಗಳ ಪ್ರಯತ್ನ ಇವೆಲ್ಲವೂ ಲೂಯಿಸ್ ಫಿಶರ್ ಚಿಂತನಾ ಕ್ರಮವನ್ನು ಬದಲಾಯಿಸಿ ಬಿಟ್ಟವು. ತನ್ನ ಒಂದು ವಾರದ ಭಾರತದ ಪ್ರವಾಸದ ಅನುಭವವನ್ನು ಲೂಯಿಸ್ ಫಿಶರ್ ತನ್ನ  A Week With Gandhi  ಎಂಬ ಪುಟ್ಟ ಕೃತಿಯಲ್ಲಿ ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ.

ಒಂದು ವಾರ ಕಾಲ ಸೇವಾ ಗ್ರಾಮದಲ್ಲಿ ಉಳಿದುಕೊಂಡು ಅಲ್ಲಿನ ಗಾಂಧೀಜಿಯವರ ದಿನಚರಿ ಹಾಗೂ ಅವರ ಅನುಯಾಯಿಗಳ ಕಾರ್ಯವೈಖರಿಯನ್ನು ಮನಮುಟ್ಟುವಂತೆ ವಿವರಿಸಿದ್ದಾನೆ. ಬಿದರಿನ ತಡಿಕೆಗಳಿಗೆ ಮಣ್ಣು ಬಳಿದು ಅವುಗಳನ್ನು ಗೋಡೆಗಳನ್ನಾಗಿ ಪರಿವರ್ತಿಸಿಕೊಂಡು, ನಿರ್ಮಿಸಿದ ಸರಳ ಹಾಗೂ ಸ್ವಚ್ಛತೆಯಿಂದ ಕೂಡಿದ್ದ ಕುಟಿರ ಗಳೆಂಬ ಮನೆಗಳು, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಪ್ರಾರ್ಥನೆ ಹಾಗೂ ಚರಕದಿಂದ ನೂಲು ನೇಯುವ ಕಾಯಕ, ಸಾಮೂಹಿಕ ಭೋಜನಾಲಯ ಇವೆಗಳ ಕಾರ್ಯಚಟುವಟಿಕೆಗಳನ್ನು ಮತ್ತು ಕಾರ್ಯಕರ್ತರೇ ಸ್ವತಃ  ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕ್ರಿಯೆ, ಕೈ ತೋಟಗಳ ನಿರ್ವಹಣೆ ಇವುಗಳನ್ನು ಬಣ್ಣಿಸುತ್ತಾ, ಮನುಷ್ಯ ಪ್ರಯತ್ನ ಪಟ್ಟರೆ ಹೇಗೆ ಸ್ವಾವಲಂಬಿಯಾಗಿ ಬದುಕ ಬಹುದು ಎಂಬುದಕ್ಕೆ ಸೇವಾಗ್ರಾಮದ ಚಟುವಟಿಕೆಗಳು ಸಾಕ್ಷಿ ಎಂದು ಲೂಯಿಸ್ ಫೀಶರ್ ದಾಖಲಿಸಿದ್ದಾನೆ. ಚರಕದಿಂದ ನೂಲು ನೇಯುವುದು ನನ್ನ ದೃಷ್ಟಿಯಲ್ಲಿ ಅದೊಂದು ಕ್ರಿಯೆ ಎಂದು ಕಾಣದೆ, ಧ್ಯಾನ ಎಂಬಂತೆ ತೋರಿತು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಬೆಳಿಗ್ಗೆ ಮತ್ತು  ಸಂಜೆ ಗಾಂಧೀಜಿಯವರ ಜೊತೆ ಅವರ ನಡಿಗೆ ವ್ಯಾಯಾಮದ ಜೊತೆಯಲ್ಲಿ  ಹೆಜ್ಜೆ ಹಾಕುತ್ತಾಜಾಗತಿಕ ವಿದ್ಯಾಮಾನಗಳ ಚರ್ಚಿಸುತ್ತಾ, ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ಹಾಗೂ  ಗಾಂಧೀಜಿಯವರ ಧ್ಯೇಯಗಳನ್ನು ಅವನಿಗೆ ಅರಿಯಲು ಸಾಧ್ಯವಾಯಿತು.
ಲೂಯಿಸ್ ಫಿಶರ್ ಬಹಳ ವರ್ಷಗಳ ಕಾಲ ರಷ್ಯಾದಲ್ಲಿ ಇದ್ದ ಕಾರಣ, ಒಂದು ದಿನ ಗಾಂಧೀಜಿಯವರುಸ್ಟಾಲಿನ್ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯೆ? ಎಂದು ಪ್ರಶ್ನಿಸಿದರು. ಇದಕ್ಕೆಹೌದು ಆತ ನಿಜಕ್ಕೂ ಸರ್ವಾಧಿಕಾರಿಎಂದು ಫಿಶರ್ ಉತ್ತರಿಸಿದಾಗ ಗಾಂಧಿಜಿಯವರು ತಕ್ಷಣಹಿಟ್ಲರ್ಗಿಂತ ಕೆಟ್ಟವನು ಎಂದು ನಿಮ್ಮ ಅಭಿಪ್ರಾಯವೆ?” ಎಂದು ಮರು ಪ್ರಶ್ನೆ ಹಾಕುತ್ತಾರೆ. ಸಂದರ್ಭದಲ್ಲಿ  “ ನನಗೆ ಹಿಟ್ಲರ್ ಮತ್ತು ಸ್ಟಾಲಿನ್ನಡುವೆ ಅಂತಹ ವೆತ್ಯಾಸಗಳು ಕಾಣುತ್ತಿಲ್ಲಎಂದು ಖಡಕ್ಕಾಗಿ ಫಿಶರ್ ಉತ್ತರಿಸುತ್ತಾನೆ. ಲೂಯಿಸ್ ಫಿಶರ್ ಗಾಂಧಿಜಿಯವರಲ್ಲಿ ಕಂಡ ಕೆಲವು ಗುಣಗಳನ್ನು ತನ್ನ ಕೃತಿಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾನೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಇದ್ದುಕೊಂಡು, ನೂರಾರು ನಾಯಕರು, ಲಕ್ಷಾಂತರ ಅನುಯಾಯಿಗಳಿಗೆ ಮಾರ್ಗದರ್ಶನ ನೀಡುವ ಒತ್ತಡ ಹಾಗೂ ದೇಶ ವಿದೇಶಗಳಿಂದ ಬರುತ್ತಿದ್ದ ಪತ್ರಗಳಿಗೆ ಉತ್ತರ ನೀಡುವ ವೈಖರಿಗೆ ಅಚ್ಚರಿಗೊಂಡಿದ್ದಾನೆ. ಬಿಡುವಿಲ್ಲದ ಕಾರ್ಯಕ್ರಮಗಳ  ನಡುವೆ ತನ್ನ ಆಶ್ರಮಕ್ಕೆ ಬರುತ್ತಿದ್ದ ಅತಿಥಿಗಳ ಯೋಗಕ್ಷೇಮ ವಿಚಾರಿಸುವವ ಅವರ ಪ್ರೀತಿ ಹಾಗೂ ವಿದೇಶಿ ಪ್ರಜೆಗಳ ಆಹಾರ ಸಂಸ್ಕøತಿಯ ಕುರಿತು ಅಪಾರ ತಿಳುವಳಿಕೆಯಿದ್ದ ಅವರು ಅತಿಥಿಗಳಿಗಾಗಿ ತಾವೇ ಸ್ವತಃ ನಿಂತು ಸಸ್ಯಹಾರ ಆಹಾರಗಳನ್ನು ಸಿದ್ಧ ಪಡಿಸಿ, ಬಡಿಸುತ್ತಿದ್ದ ಪರಿ ಇವೆಲ್ಲವನ್ನೂ  ವಿವರಿಸಿರುವ ಫಿಶರ್, ಗಾಂಧಿಜಿಯವರಲ್ಲಿ ಕೇವಲ ನಾಯಕತ್ವ ಗುಣ ಮಾತ್ರ ಇರದೆ, ಅವರೊಳಗೆ ಒಬ್ಬ ಮಾತ್ರ ಹೃದಯದ ತಾಯಿ ಕೂಡ ಇದ್ದಳು ಎಂದು ಅಭಿಪ್ರಾಯ ಪಡುತ್ತಾನೆ.
ವಿದ್ಯುತ್ ಇಲ್ಲದ ಕಾಲದಲ್ಲಿ ಮಧ್ಯ ಭಾರತದಲ್ಲಿ ಅಲ್ಲಿನ 40 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವನ್ನು ತಡೆದುಕೊಳ್ಳುವುದು ನಿಜಕ್ಕೂ ಸಾಹಸದ ಕೆಲಸ. ಪ್ರದೇಶವನ್ನು ಏಕೆ ಆಯ್ಕೆ ಮಾಡಿಕೊಂಡಿರಿ? ಎಂಬ ಅವನ  ಪ್ರಶ್ನೆಗೆ ಗಾಂಧಿಯವರುಭಾರತದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವನ್ನು ನನಗಾಗಿ ಮೆಡಲಿನ್ ಸ್ಲೇಡ್ (ಮೀರಾ ಬೆಹನ್ ) ಆಯ್ಕೆ ಮಾಡಿದಳು. ಇದರಿಂದಾಗಿ ನನಗೆ ನಿಜ ಭಾರತದ ದರ್ಶನವಾಯಿತುಎಂದು  ಉತ್ತರಿಸಿರುವುದನ್ನೂ ಸಹ ಕೃತಿಯಲ್ಲಿ ದಾಖಲಿಸಿದ್ದಾನೆ. ಗ್ರಾಮೀಣ ಭಾರತದ ಸಂಸ್ಕøತಿಯಾದ  ನೆಲದ ಮೇಲೆ ಕಾಲು ಮಡಚಿ ಕೂರುವ ಅಭ್ಯಾಸ ನನಗಿರಲಿಲ್ಲ. ಹಾಗಾಗಿ ಬಾಪುರವರು ನನಗಾಗಿ ಕುರ್ಚಿಯೊಂದನ್ನು ತರಿಸಿ ಅದರ ಮೇಲೆ ಕೂರುವಂತೆ ವಿನಂತಿಸಿಕೊಳ್ಳುತ್ತಿದ್ದರು. ಆದರೆ ಅಂತಹ ಮಹಾನ್ ವ್ಯಕ್ತಿಯ ಎದುರು ಕುರ್ಚಿಯ ಮೇಲೆ ಕೂರುವುದು ಗೌರವವಲ್ಲ ಎಂಬುವುದು ನನ್ನ ಖಚಿತ ನಿಲುವಾಗಿತ್ತು. ಬಹಳ ಕಷ್ಟದಿಂದ ಅವರ ಬಳಿ ಕಾಲು ಮಡಚಿ ಕೂರುತ್ತಿದ್ದೆ. ಎಂದಿರುವ ಫಿಶರ್, ಗಾಂಧೀಜಿಯವರ ಜೊತೆ  ಸಹ ಭೋಜನದಲ್ಲಿ ಪಾಲ್ಗೊಂಡು, ಅಲ್ಲಿನ ಪದ್ಧತಿಯನ್ನು ತುಂಬು ಹೃದಯದಿಂದ ಬಣ್ಣಿಸಿದ್ದಾನೆ. ತಟ್ಟೆಗೆ ಊಟ ಬಡಿಸಿದ ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದನ್ನು ನೋಡಿದ ಫಿಶರ್, ‘ ಅನ್ನಕ್ಕೆ ಆಧ್ಯಾತ್ಮದ ನಂಟು ಬೆಸೆದು  ಆಹಾರದ ಮಹತ್ವವನ್ನು ಅರಿಯುವುದರ ಜೊತೆಗೆ ಹಸಿವು ಕುರಿತಂತೆ ಕಾರ್ಯಕರ್ತರಲ್ಲಿ ಅವರು ಮೂಡಿಸುತ್ತಿದ್ದ ಪ್ರಜ್ಞೆಯನ್ನು ನೋಡಿ ನನಗೆ ವಿಸ್ಮಯವಾಯಿತುಎಂದಿದ್ದಾನೆ. ಒಂದು ವಾರದ ಬೇಟಿಯ ನಂತರ ಗಾಂಧೀಜಿಯ ಪ್ರಭಾವಕ್ಕೆ ಒಳಗಾದ ಲೂಯಿ ಫಿಶರ್ ಆನಂತರ ದಿನಗಳನ್ನು  ಹಲವಾರು ಬಾರಿ ಭಾರತಕ್ಕೆ ಬೇಟಿ ಮಾಡಿ ಗಾಂಧಿಜಿಯನ್ನು ಮತ್ತು ಭಾರತವನ್ನು  ಸಮಗ್ರವಾಗಿ ಅರಿಯವ ಪ್ರಯತ್ನ ಮಾಡಿದ.
1946 ರಲ್ಲಿ ಗಾಂಧೀಜಿಯವರು ಮಹಾರಾಷ್ಟ್ರದ ಪೂನಾ ಸಮೀಪದ ಪಂಚಾಗ್ನಿ ಎಂಬ ಗಿರಿಧಾಮದಲ್ಲಿ ವಿಶ್ರಾಂತಿಗಾಗಿ ಉಳಿದುಕೊಂಡಿದ್ದ ಸಮಯದಲ್ಲಿ ಮತ್ತೊಮ್ಮೆ ಗಾಂಧಿಯವರ ಜೊತೆ  ಆರು ದಿನಗಳ ಕಾಲ ಉಳಿದು ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದ. ಇದು ಆತನ ಪಾಲಿಗೆ ಗಾಂಧಿಜಿಯವರ ಕೊನೆಯ ಬೇಟಿಯಾಯಿತು. ನಂತರದ ದಿನಗಳಲ್ಲಿ  ಅವರಿಂದ ಪ್ರಭಾವಿತನಾದ ಲೂಯಿಸ್ ಫಿಶರ್ ಗಾಂಧೀಜಿ ಕುರಿತಂತೆ ಅವರ ಸಮಗ್ರ ಬರೆವಣಿಗೆಯನ್ನು  ವಿಶೇಷವಾಗಿ ಯಂಗ್ ಇಂಡಿಯ ಪತ್ರಿಕೆಯಲ್ಲಿ ಬಂದಿದ್ದ ಲೇಖನಗಳನ್ನು ಅಧ್ಯಯನ ಮಾಡಿದಇದರ ಪರಿಣಾಮ ಅವನಿಗೆ ಸ್ಟಾಲಿನ್, ಲೆನಿನ್ ಮತ್ತು ಗಾಂಧೀಜಿಯವರ ನಡುವೆ ಇದ್ದ ಚಿಂತನೆಯ  ಮಾದರಿಗಳನ್ನು ಗ್ರಹಿಸಲು ಸಾಧ್ಯವಾಯಿತು.



ನಾವಿನ್ನೂ ಗಾಂಧೀಜಿಯವರನ್ನು ಅವರ ಬದುಕಿನಲ್ಲಿ ಆಗಿರುವಎರಡು ಪ್ರಮಾದಗಳಿಗೆಪೂನಾ ಒಪ್ಪಂಧ ಕುರಿತು ತಾಳಿದ  ನಿಲುವು ಹಾಗೂ  ತನ್ನ ಬ್ರಹ್ಮ ಚರ್ಯೆ ಕುರಿತು ಮಾಡಿಕೊಂಡ ಪರೀಕ್ಷೆ) ಇವುಗಳಿಗೆ ನೇಣು ಹಾಕಿ, ಅವರ ಸಂಪೂರ್ಣ ವ್ಯಕ್ತಿತ್ವವನ್ನು ಅರಿಯಲು ತಿಣುಕಾಡುತ್ತಿರುವಾಗ ಪಾಶ್ಚಿಮಾತ್ಯ ಜಗತ್ತಿನ ವಿದ್ವಾಂಸರು  ವಿಶೇಷವಾಗಿ ಅಮೇರಿಕಾದ ಲೂಯಿಸ್ ಫಿಶರ್, ಇಂಗ್ಲೆಂಡಿನ ರೋನಾಲ್ಡ್ ಡಂಕನ್ ಹಾಗೂ ಆಸ್ಟ್ರೇಲಿಯಾದ ಥಾಮಸ್ ವೆಬರ್ ಇವರುಗಳು ಗಾಂಧಿಯವರ ಚಿಂತನೆ ಮತ್ತು ವ್ಯಕ್ತಿತ್ವವನ್ನು ಉದಾರ ನೆಲೆಯಲ್ಲಿ ಗ್ರಹಿಸಿ ವ್ಯಾಖ್ಯಾನಿಸಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. “ ಒಂದು ಸಾಮಾಜ್ರ್ಯವನ್ನು ಮಣಿಸಲು ಮದ್ದು, ಗುಂಡು, ಪಿರಂಗಿ ಅವಶ್ಯಕ ಎಂದು ನಂಬಿಕೊಂಡಿದ್ದ ಪಶ್ಚಿಮದ ಜಗತ್ತಿಗೆ ಅವುಗಳಿಗಿಂತ ಅಹಿಂಸೆ ಎನ್ನುವುದು ಪರಿಣಾಮಕಾರಿಯಾದ ಅಸ್ತ್ರ ಎಂದು ತೋರಿಸಿಕೊಟ್ಟವರು ಮಹಾತ್ಮಎಂದು ಗಾಂಧೀಜಿಯನ್ನು ಬಣ್ಣಿಸಿರುವ ಪರಿಯನ್ನು ಗಮನಿಸಿದರೆ, ಇದಕ್ಕಿಂತ ಪರಿಣಾಮಕಾರಿಯಾಗಿ ನಾವು ಗಾಂಧೀಜಿಯನ್ನು ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವೆ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.





ಇಂತಹ ಒಂದು ಕಾರಣದಿಂದಾಗಿ ಲೂಯಿಸ್ ಫಿಶರ್ 1949 ರಲ್ಲಿ ತನ್ನ ಐವರು ಸಮಾನ ಮನಸ್ಕ ಗೆಳೆಯರ ಜೊತೆಗೂಡಿ ಕಮ್ಯೂನಿಷ್ಟ್ ಸಿದ್ಧಾಂತಗಳ ವೈಫಲ್ಯ ಕುರಿತು  The  God That Failed ಎನ್ನುವ ಕೃತಿಯನ್ನು ಬರೆದ. ನಂತರ   ಗಾಂಧೀಜಿಯವರ ಹತ್ಯೆಯಾದ ಮೇಲೆ ಲೂಯಿಸ್ ಫಿಶರ್ 1950 ರಲ್ಲಿ  “A Life Of Mahatma Gandhiಎನ್ನುವ ಕೃತಿಯನ್ನು ಬರೆದ. ಕೃತಿಯು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದು ನೂರಾರು ಮುದ್ರಣ ಕಂಡಿತು. 1981 ರಲ್ಲಿ ಇಂಗ್ಲೆಂಡಿನ ರಿಚರ್ಡ್ ಆಟನ್ ಬರೋ ಗಾಂಧಿ ಕುರಿತು ಸಿನಿಮಾ ನಿರ್ಮಾಣ ಮಾಡುವಾಗ ಲೂಯಿಸ್  ಫಿಶರ್   ಕೃತಿಯನ್ನು ಆಧಾರವನ್ನಾಗಿ ಇಟ್ಟುಕೊಂಡು ಚಿತ್ರ ಕಥೆಯನ್ನು ಸಿದ್ಧಪಡಿಸಿ ಚಿತ್ರ ನಿರ್ಮಾಣ ಮಾಡಿದ. ಸಿನಿಮಾ ಕೂಡ ಲೂಯಿ ಫಿಷರ್ ತನ್ನ ಕೃತಿಯ ಮೂಲಕ ಜಗತ್ತಿನ ಮೇಲೆ ಬೀರಿದ್ದ ಪ್ರಭಾವದಷ್ಟೇ ಪರಿಣಾಮವನ್ನು ಬೀರಿತು.
ಗಾಂಧೀಜಿಯ ಕೃತಿಯ ನಂತರ ತನ್ನ ಪತ್ರಿಕೋದ್ಯಮ ಬದುಕಿಗೆ ತಿಲಾಂಜಲಿ ಇತ್ತು ಸಂಪೂರ್ಣ ಬರೆವಣಿಗೆ ಮತ್ತು ಉಪನ್ಯಾಸಗಳಿಗೆ ಒಲಿದ ಲೂಯಿಸ್  ಫಿಶರ್, ತನ್ನ ಪತ್ನಿಯ ಮೂಲಕ ರಷ್ಯಾ ಬದುಕಿನ ಅನುಭವ  ಕುರಿತು ಎರಡು ಕಾದಂಬರಿಯನ್ನು ಬರೆಸಿದ. ಜೊತೆಗೆ 1952 ರಲ್ಲಿ ಸ್ಟಾಲಿನ್ ಕುರಿತು ಹಾಗೂ 1964 ರಲ್ಲಿ ಲೆನಿನ್ ಕುರಿತು ಎರಡು ಮಹತ್ವದ ಕೃತಿಗಳನ್ನು ರಚನೆ ಮಾಡಿದ. ಸೋವಿಯತ್ ರಷ್ಯಾದ ಮಾಕ್ರ್ಸ್ವಾದದ ದೌರ್ಬಲ್ಯಗಳ ಕುರಿತಾದ ಫಿಶರ್ ಚಿಂತನೆಗಳು  ಕಮ್ಯೂನಿಷ್ಟ್ ರಾಷ್ಟ್ರಗಳನ್ನು ತಮ್ಮ ಮಾಕ್ರ್ಸ್ವಾದವನ್ನು ಪುನರ್ ವ್ಯಾಖ್ಯಾನಿಸಲು ಪ್ರೇರೇಪಿಸಿದವು. ಜೊತೆಗೆ    ಜಗತ್ತಿನಲ್ಲಿ ಕಮ್ಮೂನಿಷ್ಟ್ ವಿಚಾರವಾದದ ತಳಹದಿಯ ಮೇಲೆ  ಸಮಾಜವಾದದ ಚಿಂತನೆಯೊಂದು ಚಿಗುರೊಡೆಯಲು ಪರೋಕ್ಷವಾಗಿ ಕಾರಣವಾಯಿತು.


  ಸರ್ವರಿಗೆ ಸಮ ಪಾಲು ಎಂಬ ಮಾರ್ಕ್ಸ್ವಾದದ ಚಿಂತನೆಗೆ, ಸರ್ವರಿಗೆ ಸಮ ಬಾಳು ಎಂಬ ಸಮಾಜವಾದ ಚಿಂತನೆಯೊಂದನ್ನು ಕಸಿ ಮಾಡಿ, ಅದನ್ನು ಉದಾತ್ತ ದ್ಯೇಯಗಳ ಮೂಲಕ ಜಗತ್ತಿನಾದ್ಯಂತ ವಿಸ್ತರಿಸಲು ಸಾಧ್ಯವಾಯಿತು. ಭಾರತದ ಸಂದರ್ಭದಲ್ಲಿ ಎಂ.ಎನ್.ರಾಯ್ ಮತ್ತು ಲೋಹಿಯಾ, ಕರ್ಪೂರಿ ಠಾಕೂರ್ ಮುಂತಾದವರ ಮೂಲಕ ಹುಟ್ಟಿಕೊಂಡ ಚಿಂತನೆಯು ನಮ್ಮ ಕರ್ನಾಟಕದ ಶಾಂತವೇರಿ ಗೋಪಾಲಗೌಡ, ಜೆ.ಹೆಚ್. ಪಟೇಲ್, ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್, ತೇಜಸ್ವಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸೇರಿದಂತೆ ಹಲವವರ ಮೂಲಕ ಕನ್ನಡದ ನೆಲಕ್ಕೂ  ಸಹ ಕಾಲಿಟ್ಟಿತು.

ಒಬ್ಬ ಸೂಕ್ಷ್ಮ ಗ್ರಾಹಿ ಪತ್ರಕರ್ತನೊಬ್ಬ  ತನಗರಿವಿಲ್ಲದಂತೆ ಹಲವು ಮನುಕುಲದ  ಚಿಂತನೆಗಳನ್ನು ಹೇಗೆ  ಜಗತ್ತಿಗೆ ವಿಸ್ತರಿಸಬಲ್ಲ ಎಂಬುದಕ್ಕೆ, ಲೂಯಿಸ್ ಫಿಶರ್  ನಮಗೆ ಮಾದರಿಯಾಗಿದ್ದಾನೆ. ಪಶ್ಚಿಮದ ಜಗತ್ತಿಗೆ  ಗಾಂಧಿ ಚಿಂತನೆಗಳನ್ನು ಮತ್ತು ಸಮಾಜವಾದದ ಚಿಂತನೆಗಳನ್ನು ಹರಡಲು ಕಾರಣಕರ್ತನಾಗಿಅಮೇರಿಕಾದ ಪ್ರಿನ್ಸ್ಟನ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರವನ್ನು ಬೋಧಿಸುತ್ತಿದ್ದ ಲೂಯಿಸ್ ಫಿಶರ್ 1970 ಜನವರಿ 15 ರಂದು  ನಿಧನ ಹೊಂದಿದನು. ಆದರೆ, ಜಗತ್ತು ಮಹಾತ್ಮ ಗಾಂಧೀಜಿಯವರನ್ನು ನೆನಪಿಸಿಕೊಂಡಾಗ  ಅವರ ಜೊತೆ ಲೂಯಿಸ್ ಫಿಶರ್ ಕೂಡ ನೆನಪಾಗುತ್ತಾನೆ. ಇದು ಆತನ ದೈತ್ಯ ಪ್ರತಿಭೆಗೆ ಸಾಕ್ಷಿ.

ಸೋಮವಾರ, ಸೆಪ್ಟೆಂಬರ್ 28, 2015

ಕೆ.ಎಸ್. ಭಗವಾನ್ ಮತ್ತು ಭಗವದ್ಗೀತೆ ಹಾಗೂ ಕುವೆಂಪು ವೈಚಾರಿಕತೆ






ಕಳೆದ ಆರು ತಿಂಗಳಿಂದ ಭಗವದ್ಗೀತೆ ಕುರಿತಂತೆ ಮೈಸೂರಿನಲ್ಲಿ ವಿಚಾರವಾದಿ ಹಾಗೂ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಕೆ.ಎಸ್. ಭಗವಾನ್ ರವರು ನೀಡಿದ್ದ ಪ್ರತಿಕ್ರಿಯೆ ಹಲವು ವಿಕೃತ ರೂಪ ಪಡೆದುಕೊಂಡು ಇದೀಗ ಕನ್ನಡದ ಸಾಂಸ್ಕೃತಿಕ ಜಗತ್ತನ್ನು ತಲ್ಲಣಗೊಳಿಸಿದೆ. ಐವತ್ತು ವರ್ಷಗಳ ಹಿಂದೆ ಕನ್ನಡದ ಸಾಹಿತ್ಯಕ್ಕೆ ಷೇಕ್ಸ್ ಪಿಯರ್  ಮತ್ತು ಅವನ ನಾಟಕಗಳು ಮತ್ತು ಇತರೆ ಸಾಹಿತ್ಯ ಅಪರಿಚಿತವಾಗಿದ್ದ ಸಂದರ್ಭದಲ್ಲಿ ಆತನ ದೈತ್ಯ ಪ್ರತಿಭೆಯನ್ನು ಕನ್ನಡಕ್ಕೆ ಪರಿಚಯಿಸಿದವರಲ್ಲಿ ಕೆ.ಎಸ್. ಭಗವಾನ್ ಕೂಡ ಒಬ್ಬರು. 1976 ರಲ್ಲಿ ಅವರು ಅನುವಾದಿಸಿದ “ ಜೂಲಿಯಸ್ ಸೀಜರ್ ; ನಾಟಕ ಇವೊತ್ತಿಗೂ ಅತ್ಯುತ್ತಮ ನಾಟಕಗಳಲ್ಲಿ ಒಂದು.
 ನನ್ನ  ಬಾಲ್ಯದ ಸಹಪಾಠಿಗಳಾದ ಅಪ್ಪಾಜಿಗೌಡ ಮತ್ತು ಕೆ.ಟಿ.ಶ್ರೀಕಂಠೇಗೌಡ ಎಂಬುವರು 1976 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ತರಗತಿ ಓದುತ್ತಿದ್ದಾಗ ಅವರಿಗೆ ಭಗವಾನ್ ಇಂಗ್ಲೀಷ್ ಉಪನ್ಯಾಸಕರಾಗಿದ್ದರು.. ಆ ವರ್ಷ ಮೈಸೂರಿನ ಶತಮಾನೋತ್ಸವ ಭವನದಲ್ಲಿ ನನ್ನ ಗೆಳೆಯರು ಜೂಲಿಯಸ್ ಸೀಜರ್ ನಾಟಕ ವನ್ನು ಪ್ರದರ್ಶನ ಮಾಡಿದ ಸಂದರ್ಭದಲ್ಲಿ  ವಾರಗಟ್ಟಲೆ ಅವರ ಜೊತೆ ಇದ್ದ ನಾನು ಭಗವಾನರ ಸಂಪರ್ಕಕ್ಕೆ ಬಂದಿದ್ದೆ. ( ಈಗ  ಹಂಪಿಯ ಕನ್ನಡ ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಲಕ್ಷ್ಮಣ ತೆಲಗಾವಿ  ನಾಟಕದಲ್ಲಿ ಬ್ರೂಟಸ್  ಪಾತ್ರ ಮಾಡಿದ್ದರು) ಅಂದಿನಿಂದ ಕೆ.ಎಸ್. ಭಗವಾನ್ ರವರು ನನಗೆ ನೇರ ಗುರುವಲ್ಲದಿದ್ದರೂ ಸಹ ಗುರು ಎಂದು ಭಾವಿಸಿ ಗೌರವಿಸಿಕೊಂಡು ಬಂದವನು ನಾನು.
ಕೆ.ಎಸ್. ಭಗವಾನ್ ರವರು ಮಂಡಿಸುತ್ತಿರುವ ವಿಚಾರಗಳಲ್ಲಿ ನನಗೆ ಸಹಮತವಿದೆ. ಆದರೆ, ಅವರು ವಿಷಯಗಳನ್ನು ಮಂಡಿಸುತ್ತಿರುವ ವೈಖರಿ ಕುರಿತಂತೆ ನನಗೆ ಸಹಮತವಿಲ್ಲ. ಒಂದು ವಿಷಯ ಕುರಿತಂತೆ ಭಿನ್ನಮತ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಕನ್ನಡ ಸಾಹಿತ್ಯ ಜಗತ್ತಿಗೆ ಹೊಸದೇನಲ್ಲ. ಅದಕ್ಕೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವಿದೆ. ಆದರೆ ಒಂದು ವಿಷಯ ಕುರಿತ ಭಿನ್ನಾಭಿಪ್ರಾಯಕ್ಕೆ ಈ ರೀತಿಯ ಬೀದಿ ಜಗಳ ಅನಿವಾರ್ಯವೆ? ಇದು ಎಲ್ಲರೂ ತಮ್ಮ ತಮ್ಮ ಆತ್ಮಸಾಕ್ಷಿಯ ಪ್ರಜ್ಞೆಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. ಭಗವದ್ಗೀತೆಯ ಅಸ್ಮಿತೆ ಕುರಿತಾದ ಪ್ರಶ್ನೆ ಇಂದು ನಿನ್ನೆಯದಲ್ಲ. ಅದನ್ನು ಸುಟ್ಟು ಹಾಕುವುದರಿಂದ ಯಾವ ಪ್ರಯೋಜನೂ ಇಲ್ಲ. ಆದರೆ. ಅದರ ಮೂಲವನ್ನು ಪ್ರಶ್ನಿಸುವಾಗ ವಾದದ ಅಥವಾ ತರ್ಕದ ಹಾದಿಯನ್ನು ನಾವು ತಪ್ಪಬಾರದು ಅಷ್ಟೇ. ಭಗವಾನ್ ಹೇಳುವ ಹಾಗೆ ಅದನ್ನು ಸುಟ್ಟು ಹಾಕುವ ಅಪಾಯ ಕೃತಿ ಏನಲ್ಲ;  ಅದೇ ರೀತಿ ಮನುಕುಲವನ್ನು ಉದ್ಧಾರ ಮಾಡುವಂತಹ ಪವಿತ್ರ ಕೃತಿಯೂ ಅದಲ್ಲ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕೃಷ್ಣನು ಅರ್ಜುನನಿಗೆ ಭೋಧಿಸಿದ ಉಪದೇಶಗಳು ಎನ್ನಲಾಗುವ ಭಗವದ್ಗೀತೆಯಲ್ಲಿರುವ ಶ್ಲೋಕಗಳನ್ನು ಸಮಗ್ರವಾಗಿ ಓದಿ, ವಾಖ್ಯಾನ ಮಾಡಲು ಕನಿಷ್ಟ ಒಂದು ದಿನವಾದರೂ ಬೇಕು. ಯುದ್ಧ ಭೂಮಿಯಲ್ಲಿ ಇದು ಸಾಧ್ಯವೆ? ಕೃಷ್ಣನು ಅರ್ಜುನಿಗೆ ಇದನ್ನು ಭೋಧಿಸುವಾಗ, ಯುದ್ಧ ಭೂಮಿಯಲ್ಲಿ ಕೌರವರು ಕಡ್ಲೆಕಾಯಿ ಬಿಡಿಸಿಕೊಂಡು ತಿನ್ನುತ್ತಾ ಕುಳಿತಿದ್ದರೊ? ಅಥವಾ ಚೌಕ ಬಾರ ಆಡುತ್ತಿದ್ದರೊ? ಗೊತ್ತಿಲ್ಲ.



 ಈ ನಿಟ್ಟಿನಲ್ಲಿ ಈವರೆಗೆ ನಾನು ಬಲ್ಲಂತೆ  ಭಗವದ್ಗೀತೆ ಕುರಿತಾದ ಮೌಲಿಕ ಪ್ರಶ್ನೆಗಳನ್ನು ಎತ್ತಿದವರೆಂದರೆ, ಒಬ್ಬರು ಡಾ.ಜಿ.ರಾಮಕೃಷ್ಣರವರು ಮತ್ತು ಇನ್ನೊಬ್ಬರು, ಇತ್ತೀಚೆಗೆ ಭಗವದ್ಗೀತೆಗೆ ನಮಸ್ಕಾರ ಎಂಬ ಕೃತಿ ಬರೆದ ಪ್ರೊ. ಅರವಿಂದ ಮಾಲಗತ್ತಿಯವರು. ಈ ಇಬ್ಬರೂ ಎತ್ತಿರುವ ಪ್ರಶ್ನೆಗಳಿಗೆ  ಸಮರ್ಪಕ ಉತ್ತರ ಕೊಡಲಾರದ ಮಹಾಭಾರತದ  ಉತ್ತರ ಕುಮಾರನ ಸಂತತಿಯು ಇದೀಗ ಕೆ.ಎಸ್. ಭಗವಾನರ ಮೇಲೆ ಮುಗಿಬಿದ್ದಿದೆ. ಒಂದು ವಿಷಯ ಕುರಿತು ಸಂವಾದ ನಡೆಸುವಾಗ ಅಲ್ಲಿ ಎರಡು ಗುಂಪಿನ ನಡುವೆ ಮುಖ್ಯವಾಗಿ ಇರಬೇಕಾಗಿರುವುದು , ಒಬ್ಬರಿಗೊಬ್ಬರು ವಾದಗಳನ್ನು ಕೇಳಿಸಿಕೊಳ್ಳಬೇಕಾದ ಸಹೃದಯತೆ. ಆದರೆ ಭಗವದ್ಗೀತೆ ವಿಷಯದಲ್ಲಿ ಇದು ಮಾಯವಾಗಿದೆ. ಈ ಕಾರಣಕ್ಕಾಗಿ ತಮ್ಮ ಜೀವನ ಪೂರ್ತಿ ಪುರೋಹಿತಶಾಹಿಯ ವಿರುದ್ಧ ಸೆಣಸಿದ ಕುವೆಂಪು ರವರು ಎಂದಿಗೂ  ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬೀದಿ ಜಗಳಗಳನ್ನಾಗಿ ಪರಿವರ್ತಿಸಿದವರಲ್ಲ. ಕುವೆಂಪು ಮತ್ತು ದೇವುಡು ನರಸಿಂಹ ಶಾಸ್ತ್ರಿ ನಡುವೆ 1931 ಮತ್ತು 32 ರ ನಡುವೆ ನಡೆದ ಸೈದ್ಧಾಂತಿಕ  ಜಗಳ ನಮ್ಮ ಮುಂದಿದೆ.
1931 ರಲ್ಲಿ ಕುವೆಂಪುರವರು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಉಪನ್ಯಾನ ನೀಡಿದ್ದರು. ಈ ಉಪನ್ಯಾಸ ಕುರಿತು ದೇವುಡು ನರಸಿಂಹ ಶಾಸ್ತ್ರಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು. ಕುವೆಂಪು ಒಬ್ಬ ಸರ್ಕಾರಿ ನೌಕರನಾಗಿದ್ದು ( ಆವಾಗ ಕುವೆಂಪು ಉಪನ್ಯಾಸಕರಾಗಿದ್ದರು) ಯುವಜನತೆಯನ್ನು ಧರ್ಮದ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ದೇವುಡು ಆರೋಪವಾಗಿತ್ತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದ ಅನೇಕರು “ ಗರಿಕೆ ಹುಲ್ಲುಗಳು ಗೂಟವಾದವು” ಎಂಬಂತೆ ಕುವೆಂಪು ಮೇಲೆ ತಿರುಗು ಬಿದ್ದರು. ಆದರೆ, ಕುವೆಂಪುರವರು  ತಮ್ಮ ವಿರುದ್ಧ ಕೇಳಿ ಬಂದ ಯಾವ ಆರೋಪ, ಟೀಕೆ ಟಿಪ್ಪಣಿ ಮತ್ತು  ಬೈಗುಳಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಸರ್ಕಾರವು ಟಿ.ಎಸ್.ವೆಂಕಣ್ಣಯವರನ್ನು ಈ ವಿಷಯ ಕುರಿತಂತೆ ತನಿಖೆಗೆ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಿತು. ಸರ್ಕಾರಕ್ಕೆ ಕುವೆಂಪು ಮಾಡಿದ್ದ ಉಪನ್ಯಾಸ ಕುರಿತು ಒಂದು ಸಾಲಿನ ಅಥವಾ ಒಂದು ವಾಕ್ಯದ ವರದಿಯನ್ನು ವೆಂಕಣ್ಣಯ್ಯ ಸಲ್ಲಿಸಿದರು. ಅವರ ವರದಿಯ ಸಾರಾಂಶ ಹೀಗಿತ್ತು. “ ನಾನು ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪದೇಶ ನೀಡಲಾರೆ”  ನಂತರ ಗಲಾಟೆ ತಣ್ಣಗಾಯಿತು.


ವಿವಾದವೆಲ್ಲವೂ ಮುಗಿದ ನಂತರ ಕುವೆಂಪು ಶಿಷ್ಯರು ಒಮ್ಮೆ ಕುವೆಂಪು ರವರನ್ನು ಕೇಳಿದರು. “ ಸಾರ್ ನೀವು ಇಷ್ಟೆಲ್ಲಾ ಗಲಾಟೆಯಾದರೂ ಸಹ ಏಕೆ ಮೌನವಾಗಿದ್ದಿರಿ?” ಇದಕ್ಕೆ ಕುವೆಂಪು ನೀಡಿದ ಉತ್ತರ ಹೀಗಿತ್ತು.
“ ನೋಡ್ರಯ್ಯಾ, ನನ್ನ ವಿರುದ್ಧ ಸೆಣಸಾಡಲಿಕ್ಕೆ ಅಥವಾ ಕುಸ್ತಿಯಾಡಲಿಕ್ಕೆ ಬರುವ ವ್ಯಕ್ತಿ ಯಾವ ಜಾತಿಯವನು, ಅವನ ವಯಸ್ಸೆಷ್ಟು, ಅವನು ಪಂಡಿತನೆ?. ಪುರುಷೋತ್ತಮನೆ? ಇವು ನನಗೆ ಮುಖ್ಯವಲ್ಲ, ನಾನು ಅಖಾಡಕ್ಕೆ ಇಳಿಯಬೇಕಾದರೆ, ನನ್ನ ಎದುರಾಳಿಗೆ ಕನಿಷ್ಟ ಸೊಂಟದ ಮೇಲೆ ಒಂದು ಲಂಗೋಟಿ ಇರಬೇಕು. ಅದೇ ಇಲ್ಲದೆ ಬೆತ್ತಲೆ ನಿಂತು ಕುಸ್ತಿಗೆ ಕರೆಯುವನ ಜೊತೆ ನಾನು ಹೋರಾಡಲಾರೆ” ಅಂದು ಮಹಾ ಬ್ರಾಹ್ಮಣ ಎಂಬ ಕಾದಂಬರಿ ಬರೆದು ಬೀಗುತ್ತಿದ್ದ ದೇವುಡುಗೆ ಕುವೆಂಪು ಬೀಸಿದ ಚಾಟಿ ಏಟಿನಿಂದ ಆ ಕಾಲದಲ್ಲಿ  ಕುವೆಂಪು ಸಾಹಿತ್ಯವನ್ನು ದ್ವೇಷಿಸುತ್ತಿದ್ದ ಎಲ್ಲಾ ಬ್ರಾಹ್ಮಣರು ತಮ್ಮ ತಮ್ಮ ಬೆನ್ನು ಮುಟ್ಟಿ ನೋಡಿಕೊಂಡಿದ್ದರು. ಏಕೆಂದರೆ ಕುವೆಂಪು ನೀಡಿದ್ದ ಹೇಳಿಕೆಯಲ್ಲಿ ಅಂತಹ ಘನತೆಯಿತ್ತು.

ಸಧ್ಯದ  ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ   ಕುವೆಂಪುರವರ ಪ್ರಖರ ವೈಚಾರಿಕತೆ ಎಲ್ಲರಿಗೂ  ಮಾರ್ಗದರ್ಶನವಾಗಬೇಕಿದೆ. 

ಬುಧವಾರ, ಸೆಪ್ಟೆಂಬರ್ 23, 2015

ಗಾಂಧಿ, ಗೋರಾ ಎಂಬ ಗುರುಶಿಷ್ಯರ ದೇವರು-ಧರ್ಮಗಳ ಕುರಿತ ಜಿಜ್ಞಾಸೆ


ಕನ್ನಡ ಪ್ರಖ್ಯಾತ ಸಂಶೋಧಕರು ಮತ್ತು ವಿದ್ವಾಂಸರಾಗಿದ್ದ ಡಾ. ಕಲ್ಬರ್ಗಿಯವರ ಹತ್ಯೆಯಾದ ನಂತರ  ಕನ್ನಡದ ಸಾಂಸ್ಕೃತಿಕ ಜಗತ್ತು ತಲುಪಿರುವ ಅಧೋಗತಿಯನ್ನು ನೆನದಾಗ ಮನಸ್ಸು  ಅಪಮಾನದಿಂದ ಮುದುಡಿಹೋಗುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮಾತು ಮತ್ತು ಚರ್ಚೆಗಳ ಮೂಲಕ  ಈವರೆಗೆ ಬಗೆ ಹರಿಸಿಕೊಳ್ಳುತ್ತಿದ್ದ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಇದೀಗ ಹೊಡಿ, ಬಡಿ ಮತ್ತು ಕೊಲ್ಲು, ಎಂಬ ಮಾತುಗಳು ಆವರಿಸಿಕೊಂಡಿವೆ. ತಮ್ಮ ಬಾಯಿಗಳನ್ನು ಗಟಾರಮಾಡಿಕೊಂಡು, ನಾಲಿಗೆಯನ್ನು ಚಪ್ಪಲಿಯನ್ನಾಗಿಸಿಕೊಂಡು ವಿದ್ವಾಂಸರ ಕುರಿತು ಸಾಹಿತ್ಯ, ಸಂಸ್ಕೃತಿಗಳ ಗಂಧ ಗಾಳಿಯಿಲ್ಲದ ತಲೆ ತಿರುಕರ ಮಾತುಗಳು ಅವರು ಪ್ರತಿನಿಧಿಸುವ ಧರ್ಮ ಮತ್ತು ಸಂಸ್ಕೃತಿಯ ಪ್ರತಿಬಿಂಬಗಳಂತೆ ಗೋಚರಿಸುತ್ತಿವೆ. ಈ ಸಂದರ್ಭದಲ್ಲಿ ದೇವರು ಮತ್ತು ಧರ್ಮ ಕುರಿತು ಅಪಾರ ಶ್ರದ್ಧೆ ಹೊಂದಿದ್ದ ಗಾಂಧೀಜಿಯವರು ತಮ್ಮ ಶಿಷ್ಯ  ಹಾಗೂ ನಾಸ್ತಿಕ ಗೋಪರಾಜು ರಾಮಚಂದ್ರರಾವ್  (ಗೋರಾ)ಎಂಬುವರೊಡನೆ ನಿರಂತರ ಹದಿನೇಳು ವರ್ಷಗಳ ಕಾಲ ನಡೆಸಿದ ಸಂವಾದ ನೆನಪಾಗುತ್ತಿದೆ.
ಗೋರಾ ರವರು 1902 ರಲ್ಲಿ ಆ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಒರಿಸ್ಸಾದ ಗಂಜಾಂ ಜಿಲ್ಲೆಯ ಛತ್ರಪುರ ಎಂಬಲ್ಲಿ ಜನಿಸಿದವರು. ಅವರ ತಂದೆ ಅಂದಿನ ಸರ್ಕಾರದಲ್ಲಿ ಆಂಧ್ರದ ಕಾಕಿನಾಡದಲ್ಲಿ ಸೇವೆಯಲ್ಲಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಎ. ಆನರ್ಸ್ ಪದವಿ ಪಡೆದಿದ್ದ ಗೋರಾರವರು ಬಾಲ್ಯದಿಂದ ದೇವರು, ಧರ್ಮ ಮತ್ತು ಅಂಧಶ್ರದ್ಧೆಗಳ ವಿರುದ್ಧ ತಿರುಗಿ ಬಿದ್ದವರು. ತಾವು  ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ  ಮಧುರೈ ಕಾಲೇಜಿನ ಮತಾಂತರ ಕುರಿತ ಒಲವು ಹಾಗೂ ಕಾಕಿನಾಡ ಕಾಲೇಜಿನಲ್ಲಿ ಧರ್ಮ ಕುರಿತಾದ ಅಂಧ ಶ್ರದ್ಧೆಗಳನ್ನು ತಿರಸ್ಕರಿಸಿ, ಉದ್ಯೋಗಕ್ಕೆ  ರಾಜಿನಾಮೆ ನೀಡಿ ಸ್ವತಂತ್ರವಾಗಿ ಬದುಕಲು ಇಚ್ಚಿಸಿದವರು. ಇದಕ್ಕಾಗಿ ವಿಜಯವಾಡ ಸಮೀಪ ನಿರೀಶ್ವರವಾದ ಕೇಂದ್ರ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಧರ್ಮ ಮತ್ತು ಧರ್ಮ ಗ್ರಂಥಗಳ ಕುರಿತಂತೆ ಧಾರ್ಮಿಕ ಮುಖಂಡರೊಡನೆ ನಿರಂತರ ಚರ್ಚೆಯಲ್ಲಿ ಇದ್ದವರು.





1930 ರಲ್ಲಿ ಮಹಾತ್ಮ ಗಾಂಧಿಯವರು ಪ್ರಥಮವಾಗಿ  ಆಂಧ್ರದ ಗೋದಾವರಿ, ಕಾಕಿನಾಡ, ಶ್ರೀ ಶೈಲಂ ಜಿಲ್ಲೆಗಳಿಗೆ ಬಂದು ಹೋದ ನಂತರ ಗಾಂಧಿ ಚಿಂತನೆಗಳಿಗೆ ಮಾರು ಹೋದರು. ( ಗಾಂಧೀಜಿಯವರ ಬೇಟಿ ಕುರಿತು ರಾಮಮೋಹನ ರಾವ್ ಎಂಬುವರು ತಮ್ಮ ಆತ್ಮ ಚರಿತ್ರೆಯನ್ನು ಸ್ವರಾಜ್ಯಂ ಹೆಸರಿನಲ್ಲಿ ಕಾದಂಬರಿ ರೂಪದಲ್ಲಿ ಬರೆದಿದ್ದು, ಆಕ್ಸ್ ಪರ್ಡ್ ಯೂನಿವರ್ಸಿಟಿ ಪ್ರೆಸ್ ನಿಂದ ಅದೇ ಹೆಸರಿನಲ್ಲಿ ಇಂಗ್ಲೀಷ್ ನಲ್ಲಿ ಪ್ರಕಟವಾಗಿದೆ.) ಆನಂತರದ ದಿನಗಳಲ್ಲಿ ಗೋರಾರವರು  ಗಾಂಧೀಜಿಯವರ ಜೊತೆ ದೇವರು ಧರ್ಮ ಕುರಿತಂತೆ ನಿರಂತರ ಪತ್ರ ವ್ಯವಹಾರ ನಡೆಸಿದರು. ಅದು ತೃಪ್ತಿಯಾಗದೆ, ವಾರ್ಧಾ ಆಶ್ರಮಕ್ಕೆ ಬೇಟಿ ನೀಡಿ ಗಾಂಧಿ ಜೊತೆ ಸಂವಾದ ನಡೆಸುತ್ತಿದ್ದರು. ಗಾಂಧಿಜಿಯವರನ್ನು ಪ್ರಥಮ ಬಾರಿಗೆ ಬೇಟಿಯಾದಾಗ, “ ಹೃದಯದೊಳಗೆ ದೇವರೇ ಇಲ್ಲದ ಮನುಷ್ಯನ ಜೊತೆ ನಾನು ಹೇಗೆ ಸಂವಾದ ನಡೆಸಲಿ? “ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದನ್ನು ಗೋರಾರವರು ತಮ್ಮ  An atheist With Gandhi ಕೃತಿಯಲ್ಲಿ ದಾಖಲಿಸಿದ್ದಾರೆ. ( ಈ ಕೃತಿಯನ್ನು ನನ್ನ ಮಿತ್ರರಾದ, ಹಾಗೂ  ನಿವೃತ್ತ ಶಿಕ್ಷಣ ಆಯುಕ್ತರಾದ ಧಾರವಾಡದ ವೆಂಕಟೇಶ್ ಮಾಚಕನೂರು ಅವರು “ ಗಾಂಧಿಯೊಂದಿಗೆ ಒಬ್ಬ ನಾಸ್ತಿಕ” ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದು, ಬಳ್ಳಾರಿಯ ಲೋಹಿಯಾ ಪ್ರಕಾಶನ ಈ ಕಿರು ಪುಸ್ತಕವನ್ನು ಪ್ರಕಟಿಸಿದೆ) ಗಾಂಧಿಯವರ ವಾರ್ಧಾ ಆಶ್ರಮಕ್ಕೆ ಬೇಟಿ ನೀಡಿ ಅಲ್ಲಿ ವಾರಗಟ್ಟಲೆ ತಂಗಿದ್ದರೂ ಸಹ ಗೋರಾ ಅವರು ಎಂದೂ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಪ್ರಾರ್ಥನಾ ಸಬೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ನಿರೀಶ್ವರವಾದ ಅಥವಾ ನಾಸ್ತಿಕತೆ ಎನ್ನುವುದು ಮನುಷ್ಯನೊಬ್ಬ ನಡೆಸುವ ದೈನಂದಿಕ ಜೀವನದಲ್ಲಿ ಸಕರಾತ್ಮಕ ಬೆಳವಣಿಗೆಗಳನ್ನು ತಂದು ಕೊಡುವ ಭಾವ ಅಥವಾ ವಿಶ್ವಾಸ ಎಂಬುವುದು ಗೋರಾರವರ ದೃಢ ನಿಲುವಾಗಿತ್ತು. ದೇವರ ಮೇಲಿನ ನಂಬಿಕೆ ಮನುಷ್ಯನನ್ನು ಅಧೀರನನ್ನಾಗಿ ಮಾಡಿ, ಅವನನ್ನು ಧರ್ಮ ಮತ್ತು ಕರ್ಮ ಗಳ ನಡುವೆ ಜೀತದಾಳುವನ್ನಾಗಿ ಮಾಡುತ್ತದೆ ಎಂದು ಗೋರಾ ಗಾಂಧಿಯವರ ಜೊತೆ ವಾದ ಮಾಡುತ್ತಿದ್ದರು. ಗಾಂಧಿ ಮತ್ತು ಗೋರಾ ಎಂಬ ಈ ಅಪರೂಪದ ಗುರುಶಿಷ್ಯರ ನಡುವೆ ನಿರಂತರ ಹದಿನೇಳು ವರ್ಷಗಳ ಕಾಲ ನಡೆದ ಸಂವಾದದ ಫಲವಾಗಿ ಗಾಂಧಿಯವರು ದೇವರು ಎನ್ನುವ ಶಬ್ಧವನ್ನು ಅಂತಿಮವಾಗಿ  ಸತ್ಯ ಎಂದು ಬದಲಾಯಿಸಿಕೊಂಡರು.



ಆಂದ್ರಪ್ರದೇಶದ ಉತ್ತರ ಭಾಗದ ಗೋದಾವರಿ ಪ್ರಾಂತ್ಯದಲ್ಲಿ ಮೂಲತಃ ಬ್ರಾಹ್ಮಣರಾಗಿದ್ದ ಗೋರಾ ರವರು ಪ್ರತಿ ಹದಿನೈದು ದಿನಕ್ಕೆ ಹುಣ್ಣಿಮೆಯ ದಿನದಂದು  ಬೆಳಂದಿಂಗಳ ಊಟ ಎಂಬ ಕಾರ್ಯಕ್ರಮವನ್ನು ಹರಿಜನರ ಕೇರಿಗಳಲ್ಲಿ ಏರ್ಪಡಿಸಿ, ಅವರೊಂದಿಗೆ ಸಹಭೋಜನ ನಡೆಸುತ್ತಿದ್ದರು. ಜಾತಿಯ ವಿನಾಶಕ್ಕೆ ಅಂತರ್ಜಾತಿಯ ವಿವಾಹ ಎಂದು ಮದ್ದು ಎಂದು ಬಲವಾಗಿ ನಂಬಿದ್ದ ಅವರು ತಮ್ಮ ಪುತ್ರಿಯನ್ನು ( ಮನೋರಮಾ)ಹರಿಜನ ಯುವಕನಿಗೆ ವಿವಾಹ ಮಾಡಿಕೊಡಲು ನಿರ್ಧರಿಸಿ, ಈ ವಿವಾಹವನ್ನು ವಾರ್ಧಾ ಆಶ್ರಮದಲ್ಲಿ ನಡೆಸಿಕೊಡುವಂತೆ ಗಾಂಧಿಯವರಿಗೆ ಪತ್ರ ಬರೆದರು. ಗೋರಾ ಅವರ ಪುತ್ರಿಗೆ ಹದಿನೇಳು ವರ್ಷ ಎಂದು ತಿಳಿದ ಗಾಂಧಿಯವರು “ ಹತ್ತೊಂಬತ್ತು ವರ್ಷ ತುಂಬಿದ ಮೇಲೆ ವಿವಾಹ ಮಾಡೋಣ ಅಕಸ್ಮಾತ್ ಈಗಲೇ ನೆರವೇರಬೇಕು ಎಂಬುದು ನಿನ್ನ ಇಚ್ಛೆಯಾಗಿದ್ದರೆ ಮಾಡೋಣ ಆದರೆ, ನಿನ್ನ ಪುತ್ರಿಗೆ ಹತ್ತೊಂಬತ್ತು ತುಂಬುವವರೆಗೆ ಆಕೆ ದಾಂಪತ್ಯ ಜೀವನ ನಡೆಸಬಾರದು “ ಎಂದು ಪತ್ರ ಬರೆದಿದ್ದರು. ಗಾಂಧೀಜಿಯವರ ಸಲಹೆಯನ್ನು 1947 ರಲ್ಲಿ ಒಪ್ಪಿದ ಗೋರಾರವರು ತಮ್ಮ ಭಾವಿ ಅಳಿಯನನ್ನು ( ಅರ್ಜುನ) ವಾರ್ಧಾ ಆಶ್ರಮಕ್ಕೆ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಕಳಿಸಿಕೊಟ್ಟರು. ಈ ಸಂದರ್ಭದಲ್ಲಿ ಗಾಂಧೀಜಿಯವರು ಗೋರಾರವರಿಗೆ ಪತ್ರ ಬರೆದು “ ನಿನ್ನ ಭಾವಿ ಅಳಿಯ ಆಶ್ರಮದಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿ, ಆದರೆ, ಅವನು ಮಂತ್ರ ಅಥವಾ ಶ್ಲೋಕ ಹೇಳುವುದು ಬೇಡ” ಎಂಬ  ನಿಲುವನ್ನು ತಾಳಿದ್ದರು.



ದುರದೃಷ್ಟವಶಾತ್ 1949 ಕ್ಕೆ ನಡೆಯಬೇಕಿದ್ದ ವಿವಾಹಕ್ಕೆ ನೇತೃತ್ವ ವಹಿಸಬೇಕಿದ್ದ ಗಾಂಧಿಯವರು 1948 ರ ಜನವರಿಯಲ್ಲಿ ಮತಾಂಧನೊಬ್ಬನ ಗುಂಡಿಗೆ ಬಲಿಯಾದರು. ಕೊನೆಗೂ ಅವರ ಆಶಯದಂತೆ 1949 ರಲ್ಲಿ ವಾರ್ಧಾ ಸಮೀಪದಲ್ಲಿ ಇದ್ದ ಸೇವಾಗ್ರಾಮದಲ್ಲಿ ಗೋರಾ ಅವರ ಪುತ್ರಿಯ ಅಂತರ್ಜಾತಿಯ ವಿವಾಹ ನೆರವೇರಿತು. ತಾವು ನಂಬಿದ್ದ ತತ್ವಗಳಿಗೆ ಬದ್ಧರಾಗಿ ಬಾಳಿದ ಗೋರಾ 1975 ರಲ್ಲಿ ನಿಧನರಾದರು. ತತ್ವ ಸಿದ್ಧಾಂತಗಳ ಭಿನ್ನಾಭಿಪ್ರಾಯಗಳ ನಡುವೆ ಮಾನವೀಯತೆ ಮತ್ತು ಮನುಷ್ಯ ಸಂಬಂಧ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ ಈ ಗುರು ಶಿಷ್ಯರ ಆದರ್ಶನೀಯವಾದ  ಬದುಕು ಇದೀಗ  ಕರ್ನಾಟಕದಲ್ಲಿ  ತಾಂಡವವಾಡುತ್ತಿರುವ ವಿಕಾರಗಳಿಗೆ ಮದ್ದಾದರೆ ಎಷ್ಟು ಚೆನ್ನ? ಅಲ್ಲವೆ?

ಶನಿವಾರ, ಸೆಪ್ಟೆಂಬರ್ 19, 2015

ಮಹಾನ್ ಮಾನವತಾವಾದಿಯ ಮನುಕುಲದ ಚಿಂತನೆಗಳು



ತಮ್ಮ ಉದಾತ್ತ ಚಿಂತನೆಗಳಿಂದ ಭಾರತ ರತ್ನ ಪ್ರಶಸ್ತಿಯಿಂದ ಹಿಡಿದು ನೊಬೆಲ್ ಪ್ರಶಸ್ತಿಯವರೆಗೆ ಜಗತ್ತಿನ ಅತ್ಯುನ್ನುತ ಗೌರವಗಳನ್ನು ಪಡೆದ ಅಮಾರ್ತ್ಯ ಸೇನ್ ವರ್ತಮಾನ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಷರಲ್ಲಿ ಒಬ್ಬರು. ಅಭಿವೃದ್ಧಿಯ ಅರ್ಥಶಾಸ್ತ್ರಕ್ಕೆ ಮಾನವೀಯತೆಯ ಸ್ಪರ್ಶವನ್ನು ನೀಡಿ, ಅದು ಕೇವಲ ಅಂಕಿ, ಅಂಶಗಳನ್ನು ಮಾತ್ರ ಒಳಗೊಳ್ಳದೆ, ರಾಜಕೀಯ, ಇತಿಹಾಸ, ಸಮಾಜಶಾಸ್ತ್ರವೂ ಸೇರಿದಂತೆ, ಪ್ರಾಚೀನ ಭಾರತದ ತತ್ವಶಾಸ್ತ್ರಗಳ ಚಿಂತನೆಗಳನ್ನು ಎರಕ ಹೊಯ್ದು ಅರ್ಥಶಾಸ್ತ್ರವನ್ನು ಮನುಕುಲದ ಒಳಿತಿಗಾಗಿ ನಿರ್ವಚಿಸುವ ಶಾಸ್ತ್ರವನ್ನಾಗಿ ಮಾಡಿದ ಕೀರ್ತಿ ಅಮಾರ್ತ್ಯ ಸೇನರದು.
ಪಶ್ಚಿಮ ಬಂಗಾಳದ ಜಾದವ್ ಪುರ್ ವಿ.ವಿ.ಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಕರಾಗಿ ನೇಮಕಗೊಂಡ ಸೇನರು, ನಂತರದ ದಿನಗಳಲ್ಲಿ ಅರ್ಧಶತಮಾನಗಳ ಕಾಲ ದೆಹಲಿಯ ಸ್ಕೂಲ್ ಆಫ್ ಎಕಾನಾಮಿಕ್ಸ್, ಇಂಗ್ಲೇಂಡಿನ ಲಂಡನ್ ಸ್ಕೂಲ್ ಎಕಾನಾಮಿಕ್ಸ್, ಆಕ್ಸ್ ಪರ್ಡ್ ವಿಶ್ವ ವಿದ್ಯಾಲಯ, ಕೇಂಬ್ರಿಡ್ಜ್ ವಿ.ವಿ.ಯ ಟ್ರಿನಿಟಿ ಕಾಲೇಜ್, ಅಮೇರಿಕಾದ ಹಾರ್ವಡ್ ವಿ.ವಿ. ಹೀಗೆ ಜಗತ್ತಿನ ಹಲವಾರು ವಿ.ವಿ.ಗಳಲ್ಲಿ ಅರ್ಥಶಾಸ್ತ್ರ ಮತ್ತು ತತ್ವ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಜಗತ್ ಪ್ರಸಿದ್ಧ ಚಿಂತಕರಲ್ಲಿ ಒಬ್ಬರಾಗಿ ಹೊರ ಹೊಮ್ಮಿದವರು.
ಅಭಿವೃದ್ಧಿಯ ಅರ್ಥಶಾಸ್ತ್ರಕ್ಕೆ ಗುನ್ನಾರ್ ಮಿರ್ಡಲ್ ರವರ ನಂತರ ಮಾನವೀಯ ಗುಣ ಮತ್ತು ಚಿಂತನೆಗಳನ್ನು ಬೆಸದ ಅಮಾರ್ತ್ಯ ಸೇನರು ಕಳೆದ ಐವತ್ತು ವರ್ಷಗಳಿಂದ ಲಿಂಗತಾರಮ್ಯನೀತಿಗಳು, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಇವುಗಳ ಕುರಿತು ಚಿಂತಿಸುತ್ತಾ, ಬರೆಯುತ್ತಾ. ಜಿಡ್ಡುಗಟ್ಟಿ ಹೋಗಿದ್ದ  ಜಗತ್ತಿನ ಚಿಂತನೆಗಳಿಗೆ ಹೊಸ ವಾಖ್ಯಾನಗಳನ್ನು ಬರೆದವರು.
ಕಳೆದ ತಿಂಗಳು ದೆಹಲಿಯ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆಯಿಂದ  ಪ್ರಕಟವಾಗಿರುವ ಅವರ ಹೊಸ ಕೃತಿ “The Country Of First Boys  ಎಂಬ ಪ್ರಬಂಧಗಳ ಕೃತಿಯಲ್ಲಿ ಅವರ ಮಾಗಿದ ಮನಸ್ಸಿನ ಚಿಂತನೆಗಳು, ಅನುಭವಗಳು ಅನುಭಾವದ ಮಾತಿನಂತೆ ಹೊಹೊಮ್ಮಿವೆ. ಒಂದು ಸ್ವತಂತ್ರ್ಯವಾದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವೊಂದು, ತನ್ನ ಆಂತರೀಕ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು. ಆದರೆ.  ಅವುಗಳಿಗೆ ಸ್ಪಷ್ಟವಾದ ವಿಶ್ಲೇಷಣೆ ಹಾಗೂ ವಿಮರ್ಶೆಗಳಿಲ್ಲದೆ ಯಾವೊಂದು ಸಮಸ್ಯೆಯೂ ಪರಿಹಾರವಾಗುವುದಿಲ್ಲ ಎಂದು ನಂಬಿರುವ ಅಮಾರ್ತ್ಯ ಸೇನರು, ಇಂತಹ ಸಮಸ್ಯೆಗಳಿಗೆ ಅವರು ನಮ್ಮ ಪ್ರಾಚೀನ ಭಾರತದ ಸಂಸ್ಕೃತ ಪಠ್ಯಗಳಲ್ಲಿ, ವೇದಗಳಲ್ಲಿನ ಕೆಲವು ಅಂಶಗಳನ್ನು ಎತ್ತಿ ತೋರಿಸಿ ಪರಿಹಾರ ಸೂಚಿಸುವುದು ಅಶ್ಚರ್ಯವಾಗುತ್ತದೆ. ಅವರ ಈವರೆಗಿನ ಮಹತ್ವದ ಕೃತಿಯಾದ  ಹಾಗೂ ನೊಬೆಲ್ ಪ್ರಶಸ್ತಿಗೆ ಪಾತ್ರವಾದ The Idea Of justice ಕೃತಿಯ ನಂತರ ಬಂದ  ಅತಿ ಶ್ರೇಷ್ಟ ಕೃತಿಗಳಲ್ಲಿ ಇದು ಒಂದಾಗಿದೆ.

ಮಹಾತ್ಮ ಗಾಂಧಿಯವರ ಮೊಮ್ಮಗ  ಗೋಪಾಲ ಕೃಷ್ಣ ಗಾಂಧಿಯವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಈ ಕೃತಿಯಲ್ಲಿ ಒಟ್ಟು ಹನ್ನೊಂದು ಸುಧೀರ್ಘವಾದ ಪ್ರಬಂಧಗಳಿದ್ದು, ಇವುಗಳಲ್ಲಿ ಹಸಿವಿನ ಕುರಿತು ಬರೆದಿರುವ ಪ್ರಬಂಧ, ರವೀಂಧ್ರ ನಾಥ ಟ್ಯಾಗೂರ್ ಹಾಗೂ ನಳಂದ ವಿಶ್ವ ವಿದ್ಯಾಲಯ ಕುರಿತ ಪ್ರಬಂಧಗಳು ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಬಲ್ಲವು. ಹಸಿವು ಕುರಿತಾತ ಪ್ರಬಂಧಕ್ಕೆ ಅವರು ನೀಡಿರುವ  ಶೀರ್ಷಿಕೆ  Hunger-: Old Torments and New Blunders(  ಹಸಿವು- ಭರಿಸಲಾಗದ ನೋವುಗಳು ಮತ್ತು ಹೊಸ ಬೇಜವಬ್ದಾರಿತನದ ತಪ್ಪುಗಳು) ಅವರ ಪ್ರಖರ ವೈಚಾರಿಕ ಚಿಂತನೆಗೆ ಸಾಕ್ಷಿಯಾಗಿದೆ.
ಇಲ್ಲಿನ ಬಹುತೇಕ ಪ್ರಬಂಧಗಳಿಗೆ ತಮ್ಮ ಬಾಲ್ಯ ಹಾಗೂ ಬದುಕಿನ ಹಲವಾರು ಅನುಭವಗಳನ್ನು ಸಂಲಗ್ನಗೊಳಿಸಿರುವ ಸೇನ್ ರವರು  ಅವುಗಳ ಮೂಲಕ ಓದುಗರೊಂದಿಗೆ  ಆತ್ಮೀಯವಾದ ಸಂವಾದವನ್ನು ನಡೆಸಿದ್ದಾರೆ. ತಾವು ನಂಬಿದ್ದ ತತ್ವ ಮತ್ತು ಸಿದ್ಧಾಂತಗಳಿಗೆ ಎಂದೂ ರಾಜಿಯಾಗದ ಅಮಾರ್ತ್ಯ ಸೇನ್ ನಿಷ್ಟುರ ಸತ್ಯಗಳನ್ನು ತಣ್ಣನೆಯ ಧ್ವನಿಯಲ್ಲಿ ಖಚಿತವಾಗಿ ಹೇಳಬಲ್ಲರು. ಪ್ರಾಚೀನ ಭಾರತದ ಆರ್ಯಭಟನ ಗಣಿತ ಸಿದ್ಧಾಂತ, ಶೂದ್ರಕನ ಮೃಚ್ಛಕಟಿಕ, ಕಾಳಿದಾಸ ಶಾಕುಂತಲ ಕೃತಿಗಳ ಕುರಿತು ಮಾತನಾಡುತ್ತಾ ಇವುಗಳಿಗೆ ಮೇಲ್ವರ್ಗದ ಜನ ಹಿಂದುತ್ವದ ಬಣ್ಣ ಬಳಿದದ್ದು ದುರದೃಷ್ಟಕರ ಎಂದು ಅಬಿಪ್ರಾಯ ಪಡುತ್ತಾರೆ.  ಇಂದಿನ ಮಾಧ್ಯಮಗಳು ವಿಶೇಷವಾಗಿ ಮೋದಿಮಯ ಭಾರತದ ಮಾಧ್ಯಮಗಳು ಹೇಗೆ ತಮ್ಮ ವಿವೇಚನೆ ಕಳೆದು ಕೊಂಡಿವೆ ಹಾಗೂ ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಬೆನ್ನು ತಿರುಗಿಸಿ, ಕಾರ್ಪೊರೇಟ್ ಜಗತ್ತಿನ ಪಂಜರದ ಗಿಳಿಗಳಾಗಿವೆ ಎನ್ನುವುದನ್ನು ತಮ್ಮ ಒಂದು ಪ್ರಬಂಧದಲ್ಲಿ ಪ್ರಬುದ್ಧವಾಗಿ ವಿವೇಚಿಸಿದ್ದಾರೆ. ಜಾಗತಿಕ ಮಟ್ಟದ ಹಲವಾರು ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪ್ರತಿಭಾವಂತರು ಭಾರತದ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಸಮುದಾಯದಿಂದ ಬಂದವರಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸುವ ಅವರು, “ ದೇಶಾದ್ಯಂತ  ಕ್ರೈಸ್ತರ ಚರ್ಚುಗಳು ಹತ್ತಿ ಉರಿಯುತ್ತಿರುವಾಗ, ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘ ಪರಿವಾರದ ಕೃತ್ಯವನ್ನು ಆತ್ಮ ಸಾಕ್ಷಿ ಮತ್ತು ಪ್ರಜ್ಞೆ ಇಲ್ಲದವರ ಕೃತ್ಯ ಎಂದು  ನಿಷ್ಟುರವಾಗಿ ಬಣ್ಣಿಸಿದ್ದಾರೆ.



ಅವರೊಳಗೆ ಒಂದು ಮಾತೃ ಹೃದಯವೊಂದು ಸದಾ ಜಾಗೃತವಾಗಿದ್ದು, ಅದು ಸದಾ ಹೆಣ್ಣು ಜೀವಗಳ ಒಳಿತಿಗಾಗಿ ತುಡಿಯುತ್ತಲೇ ಇರುತ್ತದೆ. ಕೃತಿಯ ಶೀರ್ಷಿಕೆಯಾದ “ ದ ಕಂಟ್ರಿ ಆಫ್ ಪಸ್ಟ್ ಭಾಯ್ಸ್”  ಪ್ರಬಂಧದಲ್ಲಿ ಹಲವು ಸವಲತ್ತುಗಳನ್ನು ಪಡೆದ ಬಾಲಕರು ತರಗತಿಯಲ್ಲಿ ಅಥವಾ ಇನ್ಯಾವುದೇ ರಂಗದಲ್ಲಿ ಮುಂದೆ ಬರುವುದು ಸಾದನೆಯಲ್ಲ, ಅವಕಾಶ ವಂಚಿತ ಹೆಣ್ಣು ಜೀವವೊಂದು, ಈ ಸಮಾಜ ಹೇರಿರುವ ನೀತಿ ನಿಯಮಗಳ ಅಡ್ಡಗೋಡೆಗಳನ್ನು ದಾಟಿ, ಬಡತನ ಮತ್ತು ಹಸಿವುಗಳ ನಡುವೆ ಮುಂದೆ ಬರುವುದು ನಿಜವಾದ ಸಾಧನೆ ಎಂದು ಬಣ್ಣಿಸುತ್ತಾರೆ. ನೊಬೆಲ್ ಪ್ರಶಸ್ತಿ ನೀಡಿದ ಸ್ವೀಡಿಶ್ ಅಕಾಡೆಮಿಯು ತಮ್ಮ ಸಂಗ್ರಹಾಲಯಕ್ಕೆ ನಿಮ್ಮ ನೆನಪಿಗಾಗಿ ಯಾವುದಾದರೂ ವಸ್ತವನ್ನು ಕಾಣಿಕೆಯಾಗಿ ನೀಡಿ ಎಂದು ಕೇಳಿದಾಗ, ಅಮಾರ್ತ್ಯ ಸೇನರು, ಅಕಾಡೆಮಿಗೆ ಒಂದು ಆರ್ಯಭಟನ ಗಣಿತಶಾಸ್ತ್ರದ ಸಂಸ್ಕೃತ ಪಠ್ಯ ಪುಸ್ತಕ ಹಾಗೂ ತಮ್ಮ ಹಳೆಯದಾದ ಬೈಸಿಕಲ್ ಒಂದನ್ನು ಕಾಣಿಕೆಯಾಗಿ ನೀಡಿದ್ದಾರೆ. ಅದಕ್ಕೆ ಕಾರಣ ವಿವರಿಸಿರುವ ಅವರು. ಆರ್ಯಭಟನ ಗಣಿತಶಾಸ್ತ್ರದ ಮೂಲಕ ನಾನು  ಅಭಿವೃದ್ಧಿ ಅರ್ಥಶಾಸ್ತ್ರದ ಸಮಸ್ಯೆಗಳನ್ನು ಅಂಕಿ ಆಂಶಗಳ ಸಹಾಯದಿಂದ ಅರಿತುಕೊಂಡೆ. ನಂತರ ಶಾಂತಿನಿಕೇತನದ ಸುತ್ತ ಮುತ್ತಲಿನ ಹೆಣ್ಣು ಮಕ್ಕಳ ಅಧ್ಯಯನಕ್ಕೆ  ಹಳ್ಳಿಗಳನ್ನು ಸುತ್ತುವಾಗ ಈ ಬೈಸಿಕಲ್ ಅನ್ನು ಬಳಸುತ್ತಿದ್ದೆ. ನನಗೆ ನೊಬೆಲ್ ಅಕಾಡೆಮಿ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಸ್ವೀಡಿಶ್ ಅಕಾಡೆಮಿ “ ಜಗತ್ತಿನ ಮಹಿಳೆಯರ ಸ್ಥಾನ ಮಾನಗಳ ಕುರಿತು ಅಧಿಕೃತ ಅಂಕಿ ಅಂಶಗಳ ಜೊತೆ ಮಾತನಾಡಬಲ್ಲ ಅರ್ಥಶಾಸ್ತ್ರಜ್ಞ” ಎಂದು ನನ್ನನ್ನು ಬಣ್ಣಿಸಿತ್ತು. ಹಾಗಾಗಿ ಈ ಪ್ರಶಸ್ತಿಗೆ ಕಾರಣವಾದ ಈ ಎರಡು ವಸ್ತುಗಳನ್ನು ಸ್ಟಾಕ್ ಹೋಂ ನಗರದಲ್ಲಿರುವ ಸಂಗ್ರಹಾಲಯಕ್ಕೆ ಉಡುಗೊರೆ ನೀಡಿದೆ ಎನ್ನುತ್ತಾರೆ.

ಒಟ್ಟಾರೆಯಾಗಿ ಅಮಾರ್ತ್ಯ ಸೇನರ ಈ ಕೃತಿ ದ ಐಡಿಯಾ ಆಫ್ ಜಸ್ಟಿಸ್ ನಂತರ ಬಂದ ಹಾಗೂ ನಮ್ಮ ಸಂಗ್ರಹದಲ್ಲಿ ಇರಬೇಕಾದ ಅತ್ಯಮೂಲ್ಯ ಕೃತಿಯಾಗಿದೆ.

ಗುರುವಾರ, ಸೆಪ್ಟೆಂಬರ್ 17, 2015

ತಮಿಳು ಜಾನಪದ ನೃತ್ಯಗಳು ಮತ್ತು ತಳಸಮುದಾಯದ ಬದ್ಧತೆಗಳು



ಇದು ಸುಮಾರು ಐದು ವರ್ಷಗಳ ಹಿಂದಿನ ಘಟನೆ. ತಮಿಳು ಭಾಷೆಯ ಪ್ರಾಚೀನ ಕವಿತೆಗಳನ್ನು ಅನುವಾದಕ್ಕಾಗಿ ಕೈಗೆತ್ತಿಕೊಂಡಿದ್ದೆ. ಸುಮಾರು ಐವತ್ತು ಕವಿತೆಗಳನ್ನು ಅನುವಾದ ಮಾಡಿ, ಅವುಗಳಿಗೆ ಒಂದು ಸುಧೀರ್ಘವಾದ ಪ್ರಸ್ತಾವನೆ ಬರೆಯಬೇಕಿತ್ತು. ಏಕೆಂದರೆ, ಭಾರತದಲ್ಲಿ ಲಿಪಿ ಆರಂಭಗೊಂಡ ಕಾಲದಿಂದಲೂ ತಮಿಳರು ಸಂಸ್ಕೃತ ಮತ್ತು ಪಾಕೃತ ಭಾಷೆಗಳಿಗೆ ಪರ್ಯಾಯವಾಗಿ ದ್ರಾವಿಡ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಮುಂಚೂಣಿಗೆ ತರುವುದರ ಜೊತೆಗೆ ಭಾರತೀಯ ಕಾವ್ಯ ಮೀಮಾಂಸೆಯ ಪರಿಕಲ್ಪನೆಯನ್ನು ಧಿಕ್ಕರಿಸಿ, ತಮ್ಮದೇ ಆದ ಕಾವ್ಯ ಮೀಮಾಂಸೆಗಳನ್ನು ಕಟ್ಟಿಕೊಂಡವರಾಗಿದ್ದರು. ಅದೇ ರೀತಿ ಭರತನ ಅಭಿನಯ ಶಾಸ್ತ್ರದ ಪಠ್ಯಕ್ಕೆ ಪರ್ಯಾಯವಾಗಿ ದೇಶಿಯಾಟಂ,, ಕೊರವಂಜಿ, ಸಾದಿರ್ ಎಂಬ ನೃತ್ಯ ಪ್ರಕಾರಗಳನ್ನುಅಸ್ತಿತ್ವಕ್ಕೆ ತಂದು ಸಂಗೀತ, ನೃತ್ಯ ಮತ್ತು ಸಾಹಿತ್ಯ ಈ ಮೂರು ಪ್ರಕಾರಗಳಲ್ಲಿ ಉತ್ತರಕ್ಕೆ ಪರ್ಯಾಯವಾಗಿ ದಕ್ಷಿಣದ ಸಂಸ್ಕೃತಿಯನ್ನು ಕಟ್ಟಿಕೊಡುವುದರ ಮೂಲಕ ಅವುಗಳಿಗೆ ಅಸ್ಮಿತೆಯನ್ನು ದೊರಕಿಸಿಕೊಟ್ಟರು ಭರತನ ನಾಟ್ಯ ಶಾಸ್ತ್ರಕ್ಕೆ ಪರ್ಯಾಯವಾಗಿ ನಮಗೆ ಶಿಲಪ್ಪದಿಗಾರಂ .ಸಾಹಿತ್ಯದಲ್ಲಿ ಎಂಟು ರಸಗಳ ಭಾವಗಳು, (ಶೃಂಗಾರ- ಇಂಬಂ, ಹಾಸ್ಯ- ನಹೈ,(ನಗೈ) ಕರುಣಾರಸ-ಅಳುಕೈ, ರೌದ್ರ-ವೆಹಲಿ, ವೀರ – ಪೆರುಮಿಟಂ, ಭಯಂಕರ- ಅಕ್ಕಂ, ಬೀಭಿತ್ಸ- ಇಳಿಯರಲ್ ಅದ್ಭುತ- ವಿಯಪ್ಪು) ಹಾಗೂ ಇವುಗಳಲ್ಲದೆ ನಾಲ್ಕು ಅಭಿನಯ, ನಾಲ್ಕು ವೃತ್ತಿ, ಎರಡು ಧರ್ಮ, ಏಳು ಬಗೆಯ ಶೌರ್ಯ ಕುರಿತಾದ ಮಾಹಿತಿಗಳಿವೆ.
ತಮಿಳಿನ ಪ್ರಾಚೀನ ಕಾವ್ಯವನ್ನು ಅವಲೋಕಿಸುವಾಗ, ವಿಶೇಷವಾಗಿ ಸಂಗಂ ಯುಗದ ಸಾಹಿತ್ಯವನ್ನು ಗಮನಿಸಿದಾಗ  ಅಲ್ಲಿನ ಅಹಂ ಮತ್ತು ಪುರಂ ಎಂಬ ಎರಡು ಪ್ರಕಾರಗಳಲ್ಲಿ ಅಥವಾ ಪರಿಕಲ್ಪನೆಯನ್ನು ಇಟ್ಟುಕೊಂಡು ಅವರು ಕವಿತೆಗಳನ್ನು ರಚನೆ ಮಾಡಿದ್ದಾರೆ. ಅಹಂ ಎನ್ನುವ ಪ್ರಕಾರದಲ್ಲಿ ಬಹುತೇಕವಾಗಿ ಪ್ರೇಯಸಿ ಮತ್ತು ಪ್ರಿಯಕರನ  ಪ್ರಣಯಗೀತೆ, ವಿರಹಗೀತೆ,ಗಳನ್ನು ಬರೆದಿದ್ದರೆ, ಪುರಂ ಪ್ರಕಾರದಲ್ಲಿ ಯುದ್ಧ, ಮತ್ತು ವೀರಗಾಥೆಗಳ ಕವಿತೆಗಳು ದಾಖಲಾಗಿವೆ, ಆಶ್ಚರ್ಯಕರ ಸಂಗತಿಯೆಂದರೆ, ತಮಿಳಿನ ಬಹುತೇಕ ಪ್ರಣಯ ಹಾಗೂ ವಿರಹ ಗೀತೆಗಳಲ್ಲಿ ಪಚ್ಚೆಕ್ಕಿಳಿ (ಹಸಿರು ಗಿಣಿ) ಪ್ರಮುಖವಾದ ಸ್ಥಾನ ಪಡೆದುಕೊಂಡಿದೆ. ಪ್ರೇಮಿಗಳು ತಮ್ಮ ವಿರಹದ ಮತ್ತು ನೋವಿನ ಭಾವನೆಗಳನ್ನು ಹಸಿರು ಗಿಣಿಗೆ ಹೇಳಿಕೊಳ್ಳುವುದರ ಮೂಲಕ ಹೊರ ಹಾಕಿರುವುದು ವಿಶೇಷವಾಗಿದೆ. ಹಾಗಾಗಿ ಭಾರತದ ಯಾವ ಭಾಷೆಯ ಕಾವ್ಯಗಳಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಗಿಣಿಯು ಸ್ಥಾನ ಪಡೆದಿಲ್ಲ. ಈ ಕುರಿತು ಆಸಕ್ತಿ ತಾಳಿ ನಾನು ಅಧ್ಯಯನ ಮುಂದುವರಿಸಿದಾಗ ತಮಿಳಿನ ಕವಿಗಳ  ಕಾವ್ಯ ಸೃಷ್ಟಿಯ  ಹಿಂದೆ ಅಲ್ಲಿನ ಜನಪದ ಕಾವ್ಯಗಳ  ಪ್ರಭಾವ ದಟ್ಟವಾಗಿತ್ತು. ಹಾಗಾಗಿ, ತಿರುಚ್ಚನಾಪಳ್ಳಿ, ತಂಜಾವೂರು ಮತ್ತು ಮಧುರೈ ಹಾಗೂ ಸೇಲಂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸುಮಾರು ಎಂಟನೂರು ಜನಪದ ಗೀತೆಗಳನ್ನು ಸಂಗ್ರಹಿಸಿಕೊಂಡು  ಗಂಭೀರವಾಗಿ ಅಧ್ಯಯನ ನಡೆಸುತ್ತಿದ್ದೆ. ಇದರಲ್ಲಿ ತಮಿಳು ಜನಪದ ಸಂಸ್ಕೃತಿಯ ಒಂದು ಭಾಗವಾಗಿರುವ ಕರಗಟಂ ( ಕರಗದ ಆಟ) ಎಂಬ  ಜಾನಪದ ನೃತ್ಯ ಪ್ರಕಾರದ ಕೆಲವು ಗೀತೆಗಳು ಇದ್ದವು. ತಮಿಳು ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ ಮತ್ತು ಜಾತ್ರೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಕಲೆಯು ತಮಿಳುನಾಡಿನಲ್ಲಿ ಆದಿ ದ್ರಾವಿಡರು ಎಂದು ಕರೆಸಿಕೊಳ್ಳುವ ದಲಿತರ ಪಾರಂಪರಿಕ ಕಲೆಯಾಗಿದೆ.
ಈ ನೃತ್ಯ ಕಲೆ ಮತ್ತು ಜನಪದಗಳ ಹಾಡುಗಳ ಕುರಿತು ಒಂದು ದಿನ ನಮ್ಮ ಉದಯ ಟಿ.ವಿ. ಅಧ್ಯಕ್ಷರೂ ಹಾಗೂ ಮಾಲಿಕರಲ್ಲಿ ಒಬ್ಬರಾಗಿರುವ ಎಂ ಸೆಲ್ವಂ ಅವರಲ್ಲಿ ಪ್ರಸ್ತಾಪಿಸಿದೆ. ಮೂಲತಃ ತಂಜಾವೂರು ಜಿಲ್ಲೆಯಿಂದ ಬಂದ ಮುರುಸೋಳಿ ಸೆಲ್ವಂ ರವರು ಕರುಣಾನಿಧಿಯವರ ಸಹೋದರಿಯ ಪುತ್ರ. ಅವರ ಹಿರಿಯ ಸಹೋದರ ದಿ. ಮುರುಸೋಳಿ ಮಾರನ್ ( ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು) ಹಾಗೂ  ಸೆಲ್ವಂ ಇಬ್ಬರೂ ತಮ್ಮ ಸೋದರಮಾವ ಕರುಣಾ ನಿಧಿಯವರ ಪುತ್ರಿಯರನ್ನು ವಿವಾಹವಾಗಿದ್ದಾರೆ. ನಾನು 1981 ರಿಂದ 1984 ರ ವರೆಗೆ ಅಂದಿನ ಮದ್ರಾಸ್ ನಗರದಲ್ಲಿ ವಾಸವಿದ್ದ ಸಂದರ್ಭದಲ್ಲಿ ಸೆಲ್ವಂ ರವರು ತಮ್ಮ ಹಿರಿಯ ಸಹೋದರ ಮಾರನ್  ಸ್ಥಾಪಿಸಿದ್ದ ಡಿ.ಎಂ.ಕೆ. ಪಕ್ಷದ ಮುಖವಾಣಿ ಮುರುಸೋಳಿ ಎಂಬ ಪತ್ರಿಕೆಯ ಪತ್ರಿಕೆಯ ಸಂಪಾದಕರಾಗಿದ್ದರು. ಜೊತೆಗೆ ತಮಿಳು ಸಾಹಿತ್ಯ ಮತ್ತು ಕಲೆಯಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಅವರು,   ತಮ್ಮ ಸೋದರ ಮಾವ ಕರುಣಾನಿಧಿಯವರಿಂದ ಪ್ರಭಾವಿತರಾಗಿ,  ತಮಿಳು ಸಾಹಿತ್ಯ, ಕಲೆ ಇವುಗಳ ಕುರಿತು ಅಧಿಕೃತವಾಗಿ ಮಾತನಾಡುವ ಪಾಂಡಿತ್ಯ ಹೊಂದಿದ್ದಾರೆ. ತಮಿಳು ಭಾಷೆಯಲ್ಲಿ ಹತ್ತು ಲಕ್ಷ ಪ್ರಸಾರವಿರುವ ಕುಂಕುಮಂ ಎಂಬ ವಾರಪತ್ರಿಕೆಯ ಸಂಪಾದಕರಾಗಿ  ಬೆಂಗಳೂರಿನ ಉದಯ ಟಿ.ವಿ. ಕಛೇರಿಯಲ್ಲಿ ಕುಳಿತು ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.


ಕರಗಟಂ ನೃತ್ಯ ಕಲೆಯ ಬಗ್ಗೆ  ನಮ್ಮ ಅಧ್ಯಕ್ಷರ ಬಳಿ ಪ್ರಸ್ತಾಪಿಸಿದಾಗ, “ ಕೊಪ್ಪ, ನೀನು ತಂಜಾವೂರು ಸುತ್ತ ಮುತ್ತಾ ಯಾವಾಗಲೂ ಓಡಾಡ್ತಾ ಇರ್ತೀಯಾ,, ತಂಜಾವೂರು- ಕುಂಬಕೋಣಂ ನಡುವಿನ ಈ ಹಳ್ಳಿಗಳಲ್ಲಿ ಕರಗಟಂ ಕಲಾವಿದರ ಕೆಲವು  ಕುಟುಂಬಗಳಿವೆ. ಒಮ್ಮೆ ಅವರ ಮನೆಗೆ ಹೋಗಿ ಅವರ ತಲೆಯ ಮೇಲ್ಭಾಗ ಅಂದರೆ  ಕಲಾವಿದರ ನೆತ್ತಿಯನ್ನು ಪರೀಕ್ಷಿಸಿ ನೋಡು” ಎಂದರು. ನಾನು ಏಕೆ ಸರ್? ಎಂದು ಪ್ರಶ್ನಿಸಿದೆ. ಆವಾಗ ಅವರು ಹೇಳಿದ ಮಾತು ಕೇಳಿ ನನಗೆ ವಿಸ್ಮಯವಾಯಿತು. “ಕರಗಟಂ ಕುಟುಂಬದಲ್ಲಿ ಜನಿಸಿದ ಗಂಡು ಮಕ್ಕಳಿಗೆ ತಲೆಯ ಮೇಲಿನ ಕರಗ ಜಾರದಿರಲಿ ಎಂಬ ಉದ್ದೇಶದಿಂದ ಹತ್ತು ತಿಂಗಳ ವಯಸ್ಸಿನಿಂದ  ಮಕ್ಕಳ ನೆತ್ತಿಯನ್ನು ತಾಯಂದಿರು ತಮ್ಮ ಹಸ್ತ ದಲ್ಲಿ ತಟ್ಟಿ  ಸಮತಟ್ಟು ಮಾಡಲು ಆರಂಭಿಸುತ್ತಾರೆ. ಈ ಕೆಲಸ ಮಕ್ಕಳಿಗೆ ಸುಮಾರು ಹನ್ನೆರಡು ವರ್ಷವಾಗುವವರೆಗೂ ಮುಂದುವರಿಯುತ್ತದೆ” ಎಂಬ ಮಾಹಿತಿಯನ್ನು ಬಿಟ್ಟಿಟ್ಟರು. ನಾನು ಹಳ್ಳಿಗಳಿಗೆ ಹೋಗಿ ಕಲಾವಿದರನ್ನು ಪರೀಕ್ಷಿಸಿದಾಗ ಅವರ  ಮಾತು ನಿಜವಾಗಿತ್ತು. ಒಂದು ಕಲೆಗಾಗಿ ತಮ್ಮ ದೇಹವನ್ನು ಮತ್ತು ಬದುಕನ್ನು ಮುಡಿಪಾಗಿಡುವ ತಳಸಮುದಾಯದ ಬದ್ಧತೆ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು. ( ಇದೀಗ ಬಹುತೇಕ ಕಲಾವಿದರ ಕುಟುಂಬಗಳು ತಂಜಾವೂರು ಹಳೆಯ ಬಸ್ ನಿಲ್ದಾಣದ ಬಳಿ ಅರಮನೆಗೆ( ಸರಸ್ವತಿ ಮಹಲ್) ಹೋಗುವ ದಾರಿಯಲ್ಲಿರುವ ಹರಿಜನ ಕೇರಿಯಲ್ಲಿ ವಾಸಿಸುತ್ತಿದ್ದಾವೆ)

ಇದು ಕಲಾವಿದರ ಬದುಕಾದರೆ, ಅವರ ಕರಗಟಂ ನೃತ್ಯಕ್ಕೆ ಪಕ್ಕವಾದ್ಯ ಅಂದರೆ, ವಾದ್ಯ, ಡೋಲು ನುಡಿಸುವ ಕಲಾವಿದರ ಮೂಲ ಹುಡುಕಿದರೆ, ಅವರೆಲ್ಲರೂ ರಾಜರ ಆಸ್ಥಾನದಲ್ಲಿದ್ದ ಚಿನ್ನ ಮೇಳಂ ( ಕಿರಿಯ ಮೇಳ) ಅಂದರೆ, ಅರಮನೆಯಲ್ಲಿ ನಡೆಯುತ್ತಿದ್ದ ರಾಜದಾಸಿಯರ ನೃತ್ಯಕ್ಕೆ ವಾದ್ಯ ಭಾರಿಸುತ್ತಿದ್ದ ಕಲಾವಿದರು ಹಾಗೂ ದೇವಸ್ಥಾನದ ಪೂಜೆ, ರಥೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ದೇವದಾಸಿಯರಿಗೆ ವಾದ್ಯ ನುಡಿಸುತ್ತಿದ್ದ ಪೆರಿಯ ಮೇಳಂ( ಹಿರಿಯವರ ಮೇಳ) ಕಲಾವಿದರ ಕುಟುಂಬದವರಿಂದ ಬಂದವರಾಗಿದ್ದರು. ಹೀಗೆ ಪ್ರಾಚೀನ ತಮಿಳು ಕವಿತೆಗಳ ಅಧ್ಯಯನ ಮಾಡಲು ಹೊರಟ ನನ್ನನ್ನು ಈ ಹುಡುಕಾಟ “ ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ” ಕುರಿತ ಅಧ್ಯಯನದತ್ತ  ಕರೆದೊಯ್ದು ನಿಲ್ಲಿಸಿತು. ಹಾಗಾಗಿ ಕಳೆದ ಮೂರು ವರ್ಷಗಳಿಂದ ಗೆಳೆಯರು, ಸಮಾರಂಭಗಳು, ಹರಟೆ, ಮೋಜನ ಪ್ರವಾಸ ಎಲ್ಲವುಗಳಿಂದ ದೂರವಾಗಿ ರಾಶಿ, ರಾಶಿ ಮಾಹಿತಿಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದೀನಿ.

ಕೊನೆಯ ಮಾತು- ಈಗ ಕರಗಟಂ ನೃತ್ಯದಲ್ಲಿ ಹಿಂದಿನ ಪರಿಶುದ್ಧತೆ ಉಳಿದಿಲ್ಲ. ಕಲಾವಿದರು ಹೊಟ್ಟೆ ಪಾಡಿಗಾಗಿ ಹಬ್ಬ ಮತ್ತು ಜಾತ್ರೆಗಳಲ್ಲಿ ಯುವಕರು ನೀಡುವ ಹಣದ ಆಮೀಷಕ್ಕೆ ಬಲಿ ಬಿದ್ದು, ತಮ್ಮ ಹೆಣ್ಣು ಮಕ್ಕಳಿಗೆ ತುಂಡು ಉಡುಗೆ ತೊಡಿಸಿ, ಅಶ್ಲೀಲವಾದ ತಮಿಳು ಸಿನಿಮಾ ಹಾಡುಗಳಿಗೆ ಕುಣಿಯುವಂತೆ ಮಾಡಿದ್ದಾರೆ.

ಬುಧವಾರ, ಸೆಪ್ಟೆಂಬರ್ 2, 2015

ಬೇಸಾಯದ ಬವಣೆಯ ಬೇರುಗಳನ್ನು ಅರಸುತ್ತಾ..

                                          (ಇತಿಹಾಸ ತಜ್ಞ ಪ್ರೊ. ಇರ್ಫಾನ್ ಹಬೀಬ್)

ನಮ್ಮ ಕರ್ನಾಟಕದಲ್ಲಿ ರೈತರು ದಿಕ್ಕೆಟ್ಟವರಂತೆ ಸಾವಿನ ಮೂಲಕ ತರಗೆಲೆಗಳಂತೆ ನೆಲಕ್ಕುರುಳುತ್ತಿದ್ದಾರೆ. ಆರಂಭದ ದಿನಗಳಲ್ಲಿ ಗಂಟಲಿನ ಪಸೆ ಆರುವಂತೆ ಲಭೊ ಲಭೋ ಎಂದು ದಿನವಿಡಿ ಬಡಿದುಕೊಂಡ ಮಾಧ್ಯಮಗಳು ಮಾತು ಮರತಂತೆ ಈಗ ತಣ್ಣಗಾಗಿವೆ. ದಿನಾ ಸಾಯುವವರಿಗೆ ಅಳುವವರು ಯಾರು? ಎಂಬಂತೆ ನಾವೆಲ್ಲಾ ತಣ್ಣಗೆ ನಮ್ಮದೇ ಆದ ಭ್ರಮಾತ್ಮಕ ಜಗತ್ತಿನಲ್ಲಿ ಹಾಗೂ ವ್ಯಯಕ್ತಿಕ ವ್ಯಸನಗಳಲ್ಲಿ ಮುಳುಗಿಹೋಗಿದ್ದೀವಿ. ರೈತರ ಆತ್ಮಹತ್ಯೆ ಎಂಬುದು ಮದ್ದಿಲ್ಲದ ಸಾವು ಎಂಬ ತೀರ್ಮಾನಕ್ಕೆ ಬಂದಂತೆ ನಾವು ಬದುಕುತ್ತಿದ್ದೀವಿ.
ಬೇಸಾಯದಲ್ಲಿ ಕಳೆದು ಹೋದ ವೃತ್ತಿ ನೈಪುಣ್ಯತೆ, ಬದ್ಧತೆ ಹಾಗೂ  ಗತಿಸಿದ ಪರಂಪರೆಯಕೊಂಡಿಗಳನ್ನು ಹುಡುಕುವ ವ್ಯವಧಾನ ಯಾರಿಗೂ ಇದ್ದಂತಿಲ್ಲ. ಕಳೆದು ಎರಡು ದಿನಗಳಿಂದ ನನ್ನ ಸಂಗ್ರಹದಲ್ಲಿದ್ದ  ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ರವರ” ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ” ಎಂಬ ಮಾಲಿಕೆಯ ಕೆಲವು ಕೃತಿಗಳನ್ನು ತಿರುವು ಹಾಕುತ್ತಿದ್ದೆ.  ಭಾರತದ ಬಲಪಂಥೀಯ ಚಿಂತನೆಗಳಿಂದ ರೂಪುಗೊಂಡಿರುವ ಇತಿಹಾಸಕ್ಕೆ ಪರ್ಯಾಯವಾಗಿ ಇತಿಹಾಸವನ್ನು ವಾಸ್ತವಿಕ ಹಾಗೂ ಗಟ್ಟಿಯಾದ ಪುರಾವೆಗಳ ನೆಲೆಯಲ್ಲಿ ಭಾರತ  ಚರಿತ್ರೆಯನ್ನು ಕಟ್ಟಿಕೊಡುತ್ತಿರುವ ರೋಮಿಲಾ ಥಾಪರ್, ಕೆ. ಅಯ್ಯಪ್ಪ ಪಣೀಕರ್ ಹಾಗೂ ಇರ್ಫಾನ್ ಹಬೀಬ್ ರವರ ಕೃತಿಗಳ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವ.
ಇಂದು ಸಂಜೆ ಇರ್ಫಾನ್ ಹಬೀಬ್ ರವರ ಇಂಡಿಯನ್ ಎಕಾನಮಿ 1858-1914 ಎಂಬ ಕೃತಿಯನ್ನು ಓದುತ್ತಿದ್ದೆ. ಆ ಕೃತಿಯಲ್ಲಿನ ಕೃಷಿ ಕುರಿತಂತೆ ಒಂದು ಅಧ್ಯಾಯವಿದ್ದು ಅದರಲ್ಲಿ 1893 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ಧೇಶನದ ಮೇರೆಗೆ ಭಾರತಕ್ಕೆ ಬೇಟಿ ನೀಡಿದ ರಸಾಯನಶಾಸ್ತ್ರದ ವಿಜ್ಞಾನಿ ಜೆ.ಎ. ವೋಕರ್ ಎಂಬಾತ ಬರೆದ ಟಿಪ್ಪಣಿಯನ್ನು ಇರ್ಫಾನ್ ಹಬೀಬ್ ದಾಖಲಿಸಿದ್ದಾರೆ. ವೋಕರ್ ಭಾರತದ ಕೃಷಿ ಕುರಿತು  ಬರೆದ ಮಾತುಗಳಿವು.

“ ಅತ್ಯಂತ ಪ್ರಾಚೀನ ಉಪಕರಣಗಳು ಹಾಗೂ ಕೃಷಿ ತಂತ್ರಗಾರಿಕೆಯು ಭಾರತದಲ್ಲಿ ಉಳಿದಿರುವುದಕ್ಕೆ ಅನೇಕ ಸಕಾರಣಗಳಿವೆ. ಇಲ್ಲಿನ ರೈತರ ಸಾಂಪ್ರಾದಾಯಕವಾದ ದೇಶಿ ಜ್ಞಾನ ಮತ್ತು ಅವರು ಉಪಯೋಗಿಸುವ ಅತ್ಯಂತ ಸರಳ ಹಾಗೂ ಹಗುರವಾದ ನೇಗಿಲು, ಗುದ್ದಲಿ, ಸಲಕೆಗಳು ಅತ್ಯಂತ ಪರಿಣಾಮಕಾರಿ ಸಲಕರಣೆಗಳಾಗಿವೆ. ಇಲ್ಲಿನ ಮಿಶ್ರ ಬೆಳೆ ಪದ್ಧತಿ ಮತ್ತು ಬೆಳೆಗಳ ಆವರ್ತನೆಯ ಪದ್ಧತಿ ನಿಜಕ್ಕೂ ಜಗತ್ತಿಗೆ ಮಾದರಿಯಾಗುವಂತಹವು. ಬೆಳೆಗಳ ನಡುವೆ ಬೆಳೆಯುವ ಕಳೆಯನ್ನು ಬೇರು ಸಮೇತ ಕಿತ್ತೊಗೆಯುವ ಅವರ ದೈಹಿಕ ಶ್ರಮ ಮತ್ತು ರೈತರು ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡಿರುವ ಮರದ ನೇಗಿಲುಗಳು ಅಚ್ಚರಿ ಮೂಡಿಸುತ್ತವೆ. ಈ ನೇಗಿಲುಗಳು ಫಲವತ್ತಾದ ಭೂಮಿಯ ಮೇಲ್ಪದರನ್ನು ಮಗುಚಿ ಹಾಕುವಲ್ಲಿ ಪರಿಣಾಮಕಾರಿಯಾಗಿವೆ. ಇಲ್ಲಿನ ಬೀಜ ಬಿತ್ತನೆಯ ಕ್ರಮ ಹಾಗೂ ವಿನಿಮಯ ಪದ್ಧತಿಯು ವಿಸ್ಮಯಕಾರಿಯಾಗಿದ್ದು ಜೊತೆಗೆ ದಕ್ಷತೆಯಿಂದ ಕೂಡಿದೆ.”

ಸುಮಾರು 122 ವರ್ಷಗಳ ಹಿಂದೆ  ಭಾರತದಲ್ಲಿ ಸ್ವಾವಲಂಭಿಯಾಗಿದ್ದ  ಬೇಸಾಯದ ಕ್ರಮವನ್ನು ಬ್ರಿಟೀಷ್ ವಿಜ್ಞಾನಿ ಈ  ರೀತಿ ಬಣ್ಣಿಸುತ್ತಾ, ಬ್ರಿಟೀಷ್ ಸರ್ಕಾರದ ಒತ್ತಡದ ಮೇರೆಗೆ ಭಾರತದ ರೈತರು ನೀಲಿ ಬೆಳೆ ಮತ್ತು ಎಣ್ಣೆಯ ಬೇಳೆಕಾಳುಗಳ ಬೆಳೆ ತೆಗೆಯಲು ಹೊರಟು ತಮ್ಮ ಸಾಂಪ್ರದಾಯಿಕ ಕೃಷಿಯ ಪದ್ಧತಿಯನ್ನು ಕಳೆದುಕೊಂಡರು ಎನ್ನುತ್ತಾ ಭಾರತದ ಕೃಷಿ ಲೋಕದ ಅವನತಿಯ ಅಧ್ಯಾಯವನ್ನು ನಿಖರವಾಗಿ ಗುರುತಿಸಿದ್ದಾನೆ.