Friday, 15 November 2013

ಕರ್ನಾಟಕ ಗಡಿ ಪ್ರದೇಶಗಳ ಅಭಿವೃದ್ಧಿಯ ಸಾಧ್ಯತೆಗಳು-ಒಂದು


ಕರ್ನಾಟಕ ಭಾರತದ ಮುಂದುವರೆದ ರಾಜ್ಯಗಳಲ್ಲಿ ಒಂದಾಗಿದ್ದು ಅತಿ ದೊಡ್ಡ ರಾಜ್ಯಗಳ ಪೈಕಿ ಎಂಟನೇ ಸ್ಥಾನ ಪಡೆದಿದೆ. ಕೃಷಿ ಇಲ್ಲಿನ ಜನರ ಮೂಲ ಕಸುಬಾಗಿದ್ದು, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಶಿಕ್ಷಣ ಆರೋಗ್ಯ, ವ್ಯಾಪಾರ, ಆಹಾರ ಸಂಸ್ಕರಣೆ ಮುಂತಾದ ವಲಯಗಳಲ್ಲಿ ಗಮನಾರ್ಹ ಅಭಿವೃದ್ಧಿ ಸಾಧಿಸಿ ಜಗತ್ತಿನ ಗಮನ ಸೆಳೆದಿದೆ.
2001 ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆ 5 ಕೋಟಿ 28 ಲಕ್ಷ 50 ಸಾವಿರದ 662 ಇದ್ದದ್ದು ಈಗ 6 ಕೋಟಿ ಗಡಿಯನ್ನು ದಾಟಿದೆ. ಸಾಕ್ಷರತೆಯಲ್ಲಿ ಶೇ.66.6ರಷ್ಟು ಪ್ರಗತಿ ಸಾಧಿಸಿರುವ ಕರ್ನಾಟಕ ರಾಜ್ಯ ಭೌಗೋಳಿಕವಾಗಿ 74 ಸಾವಿರದ 120 .ಕೀ.ಮೀ. ವಿಸ್ತರವಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಯಾದಗೀರ್ ಜಿಲ್ಲೆಯೂ ಸೇರಿದಂತೆ 30 ಜಿಲ್ಲೆಗಳನ್ನು ಹೊಂದಿರುವ ಕರ್ನಾಟಕ ಪಶ್ಚಿಮ ಮತ್ತು ವಾಯುವ್ಯದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಆಂದ್ರ ಮತ್ತು ತಮಿಳುನಾಡು, ಉತ್ತರದಲ್ಲಿ ಮಹಾರಾಷ್ಟ್ರ, ದಕ್ಷಿಣದ ನೈರುತ್ಯದಲ್ಲಿ ಕೇರಳ ಹಾಗೂ ಆಗ್ನೇಯದಲ್ಲಿ ತಮಿಳುನಾಡು ಭಾಗಗಳನ್ನು ಹೊಂದಿದೆ.

ಕರ್ನಾಟಕದ ಸುಮಾರು 8 ಜಿಲ್ಲೆಗಳು ಸುತ್ತ ಮುತ್ತಲಿನ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಅನೇಕ ತಾಲೂಕು ಕೇಂದ್ರಗಳು ಹಾಗೂ ಗ್ರಾಮಗಳ ಜನತೆ ಗಡಿ ರಾಜ್ಯಗಳ ಜೊತೆ ತಮ್ಮ ಭೂಮಿ, ಶಿಕ್ಷಣ, ಕೃಷಿ, ವ್ಯಾಪಾರವ್ಯವಹಾರ ಕುರಿತಂತೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ನೆರೆ ರಾಜ್ಯಗಳ ಅನೇಕ ಪಟ್ಟಣಗಳಲ್ಲಿ ಬಹುಸಂಖ್ಯಾತ ಕನ್ನಡಿಗರಿರು ವುದೂ ವಿಶೇಷ. ಮಹಾರಾಷ್ಟ್ರದಲ್ಲಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಕೇರಳದಲ್ಲಿ ಕಾಸಗೋಡು, ಆಂದ್ರದ ಹಿಂದೂಪುರ, ಅಧೋನಿ, ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಗೋಪಿನಾಥಂ ಮುಂತಾದ ಊರುಗಳಲ್ಲಿ ಕನ್ನಡಿಗರಿದ್ದು, ಕನ್ನಡ ಭಾಷೆ ಮತ್ತು ಸಂಸ್ಕøತಿ ಇಂದಿಗೂ ಜೀವಂತವಾಗಿವೆ.

ರಾಜ್ಯದ ಸಾರ್ವಭೌಮ ಹಾಗೂ ಮಾತೃಭಾಷೆಯಾದ ಕನ್ನಡ ಶೇ.64.75ರಷ್ಟು ಜನತೆಯ ಭಾಷೆಯಾಗಿದ್ದು,(ಮಂಡ್ಯ ಜಿಲ್ಲೆಯಲ್ಲಿ ಶೇ.97ರಷ್ಟು ಮಂದಿಯ ಮಾತೃಭಾಷೆ ಕನ್ನಡವಾಗಿರುವುದು ವಿಶೇಷ). ನಂತರ ಶೇ.9.7ರಷ್ಟು ಮಂದಿ ಉರ್ದು ಭಾಷೆಯನ್ನು, ಶೇ.8.34ರಷ್ಟು ಮಂದಿ ತೆಲುಗು ಭಾಷೆಯನ್ನು, ಶೇ.5.46ರಷ್ಟು ಮಂದಿ ತಮಿಳು ಭಾಷೆಯನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಶೇ.3.93ರಷ್ಟು ಮಂದಿ ಮರಾಠಿ, ಶೇ.3.38ರಷ್ಟು ಮಂದಿಗೆ ತುಳುಭಾಷೆ ಕರ್ನಾಟಕದಲ್ಲಿ ಮಾತೃಭಾಷೆಯಾಗಿದೆ.

ಕರ್ನಾಟಕ ರಾಜ್ಯ ಮೇಲುನೋಟಕ್ಕೆ ಮುಂದುವರೆದ ರಾಜ್ಯ ಎಂಬಂತೆ ಕಂಡುಬಂದರೂ ಆಂತರಿಕವಾಗಿ ಹಲವಾರು ವೈಪರೀತ್ಯ ಗುಣಗಳಿಂದ ಬಳಲುತ್ತಿದೆ. ಭೌಗೋಳಿಕ ಹವಾಮಾನ, ಜನತೆಯ ನಂಬಿಕೆ ಮತ್ತು ಸಂಸ್ಕøತಿ ಹೀಗೆ ಹಲವು ಕಾರಣಗಳಿದ್ದರೂ ಇಲ್ಲಿನ ಬಹುತೇಕ ಪ್ರದೇಶಗಳು ಪ್ರಾದೇಶಿಕ ಅಸಮಾನತೆಯಿಂದ ಬಳಲುತ್ತಿರುವುದು ನಿತ್ಯ ವಾಸ್ತವ ಸಂಗತಿ. ಸ್ವತಂತ್ರ ಪೂರ್ವದಿಂದಲೂ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭಾಗಗಳು ಅನೇಕ ದೊರೆಗಳ, ನವಾಬರ, ಜಹಗೀರುದಾರರ ಆದಿಪತ್ಯಕ್ಕೆ ಒಳಪಟ್ಟು ಅಭಿವೃದ್ಧಿಯಿಂದ ವಂಚಿತವಾಗಿ ಶೋಷಣೆಗೆ ಒಳಪಟ್ಟಿದ್ದು ಈಗ ಇತಿಹಾಸ. ಇಲ್ಲಿನ ಜನತೆ ಅನಕ್ಷರತೆ, ಮುಗ್ಧತೆ, ಅಜ್ಷಾನ, ಬಡತನ ಮತ್ತು ಶೋಷಣೆಗಳಿಗೆ ಒಳಪಟ್ಟಿದ್ದು ಒಂದು ಕಾರಣವಾದರೆ, ಪ್ರದೇಶಗಳಲ್ಲಿ ಪದೇ ಪದೇ ಬಂದೆರಗಿದ ಬರಗಾಲ, ಕ್ಷಾಮ, ಸಾಂಕ್ರಾಮಿಕ ರೋಗ ರುಜಿನಗಳು ಮತ್ತೊಂದು ರೀತಿಯಲ್ಲಿ ಕಾರಣವಾದವು.
ಸ್ವತಂತ್ರ ಪೂರ್ವದಿಂದಲೂ ದಕ್ಷಿಣ ಕರ್ನಾಟಕದ ಜನತೆ ಮೈಸೂರು ದೊರೆಗಳ ಆದಿಪತ್ಯಕ್ಕೆ ಒಳಪಟ್ಟು ಅನೇಕ ಅಭಿವೃದ್ಧಿಯ ಫಲಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಗತಿ ಪರ ಆಲೋಚನೆಗಳ ನಿಧಿಯಂತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದಾಲೋಚನೆಯ ಫಲವಾಗಿ ಉತ್ತರ ಕರ್ನಾಟಕದ ಜನತೆಯ ಬದುಕಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಜನತೆ ನೆಮ್ಮದಿಯ ಬದುಕನ್ನು ಕಂಡುಕೊಂಡಿರುವುದು ಸತ್ಯ ಸಂಗತಿ. ಸ್ವತಂತ್ರ ಪೂರ್ವ ಹಾಗೂ ನಂತರದ ದಿನಗಳಲ್ಲೂ ದಕ್ಷಿಣ ಕರ್ನಾಟಕ ಭಾಗಕ್ಕೆ ಸಿಕ್ಕ ರೈಲು ಹಾಗೂ ರಸ್ತೆ ಸಾರಿಗೆ ಸುವ್ಯವಸ್ಥೆ, ನೀರಾವರಿ, ಶಿಕ್ಷಣ, ಆರೋಗ್ಯ ಇವೆಲ್ಲ ಅಂಶಗಳು ಕಾರಣವಾಗಿವೆ. ಆದರೆ ಇವುಗಳಿಂದ ಉತ್ತರ ಕರ್ನಾಟಕದ ಜನತೆ ವಂಚಿತರಾದದ್ದು ಕಟು ವಾಸ್ತವಿಕ ಸತ್ಯಗಳಲ್ಲಿ ಒಂದು.
        
                       

ಅಸಮಾನತೆ 1956ರಲ್ಲಿ ಏಕೀಕರಣಗೊಂಡು ಉದ್ಭವವಾದ ಕರ್ನಾಟಕ ರಾಜ್ಯ (ಮೈಸೂರು) ದಲ್ಲಿ ನಂತರವೂ ಮುಂದುವರೆದಿದ್ದು ದುರಂತವೇ ಸರಿ. ಆಡಳಿತವೆಲ್ಲವೂ ಉತ್ತರ ಕರ್ನಟಕದಿಂದ 500 ಕಿ.ಮೀ. ದೂರದ ರಾಜಧಾನಿ ದಕ್ಷಿಣದ ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡದ್ದು ಅಸಮಾನತೆಯ ಮೂಲ ಕಾರಣವಾದರೆ, ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ಪ್ರತಿನಿಧಿಸುತ್ತಾ ಬಂದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೂ ಸಹ ಮತ್ತೊಂದು ಪ್ರಭಲ ಕಾರಣವಾಗಿದೆ.
90 ದಶಕದಲ್ಲಿ ಕೊಪ್ಪಳ ಜಿಲ್ಲೆ ರಚನೆಯಾಗುವ ಮುನ್ನ ತಾಲ್ಲೂಕುಕೇಂದ್ರವಾಗಿ ರಾಯಚೂರು ಜಿಲ್ಲೆಯ ಭಾಗವಾಗಿತ್ತು. ಇಲ್ಲಿನ ರೈತನೊಬ್ಬ ತನ್ನ ಭೂಮಿಯ ದಾಖಲೆಗೆ ಅಥವಾ ನ್ಯಾಯಾಲಯದ ವ್ಯವಹಾರಕ್ಕೆ 175 ಕಿ.ಮೀ. ದೂರದ ಜಿಲ್ಲಾ ಕೇಂದ್ರವಾದ ರಾಯಚೂರಿಗೆ ಹೋಗಬೇಕಾದ ಪರಿಸ್ಥಿತಿ ಇತ್ತೆಂದರೆ, ಇಂತಹ ಸ್ಥಿತಿಯಲ್ಲಿ ಯಾವ ಅಭಿವೃದ್ಧಿ ತಾನೆ ಸಾಧ್ಯವಾಗಬಲ್ಲದು? ಸಧ್ಯದ ಸ್ಥಿತಿಯಲ್ಲಿ ಅನೇಕ ಜಿಲ್ಲೆಗಳು ಉದ್ಭವವಾಗಿ ಆಡಳಿತ ವಿಕೇಂದ್ರಿತಗೊಂಡು ಅಭಿವೃದ್ಧಿ ಕೆಲಸಗಳು ಸಾಗುತ್ತಿದ್ದರೂ ಕೂಡ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ, ನೀರಾವರಿ, ಕೈಗಾರಿಕೆ, ಉದ್ಯೋಗ ಸೃಷ್ಟಿ ಇವುಗಳಲ್ಲಿ ತೃಪ್ತಿಕರವಾದ ವಾತಾವರಣ ಕಂಡುಬಂದಿಲ್ಲ. ಅಲ್ಲದೇ ಕರ್ನಾಟಕ ಸರಕಾರ ನೇಮಿಸಿದ್ದ ಆರ್ಥಿಕ ತಜ್ಞ ಡಾ.ಎಂ.ನಂಜುಂಡಪ್ಪ ನೇತೃತ್ವದÀ ಸಮಿತಿ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಅಸಮತೋಲನ ನಿವಾರಣೆಗೆ ನೀಡಿದ ವರದಿಯನ್ನು ರಾಜ್ಯ ಸರಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ.

ಡಾ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದ 178 ತಾಲೂಕು ಕೇಂದ್ರಗಳ ವಸ್ತು ಸ್ಥಿತಿಯ ಬಗ್ಗೆ ಚರ್ಚಿಸಲಾಗಿದ್ದು 75 ಕ್ಕೂ ಹೆಚ್ಚು ತಾಲೂಕುಗಳನ್ನು ಅತಿ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ. ಇವುಗಳೆಲ್ಲವೂ ರಾಜ್ಯದ ಗಡಿ ಜಿಲ್ಲೆಗಳಾದ ಬಿಜಾಪುರ, ಬೀದರ್, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿರುವುದು ವಿಶೇಷ. ಡಾ.ನಂಜುಂಡಪ್ಪನವರ ವರದಿ ಔಚಿತ್ಯ ಪೂರ್ಣವಾದ ಮಹಿತಿಗಳನ್ನು ಒಳಗೊಂಡಿದ್ದು, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಕೈಗೊಳ್ಳ ಬೇಕಾದ ಅನೇಕ ಮಾರ್ಗದರ್ಶಿ ಸೂತ್ರಗಳಿವೆ. ಇವುಗಳನ್ನು ಸರಕಾರ ಕಟ್ಟು ನಿಟ್ಟಾಗಿ ಜಾರಿಗೆ ತರುವಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹೊಣೆಗಾರಿಕೆ ಕೂಡ ಹೆಚ್ಚಿನದಾಗಿದೆ. ಏಕೆಂದರೆ ಪ್ರಾಧಿಕಾರದ ವ್ಯಾಪ್ತಿಗೆ ಬರುವ ರಾಜ್ಯದ 18 ಜಿಲ್ಲೆಗಳ 52 ತಾಲೂಕುಗಳಲ್ಲಿ ಡಾ.ನಂಜುಂಡಪ್ಪ ಗುರುತಿಸಿರುವ 42 ತಾಲೂಕುಗಳು ಸೇರಿರುವುದು ಗಮನಾರ್ಹ.
ಡಾ.ನಂಜುಂಡಪ್ಪನವರು ತಮ್ಮ ವರದಿಯಲ್ಲಿ ಪ್ರಾದೇಶಿಕ ಅಸಮತೋಲನೆಯ ನಿವಾರಣೆಗಾಗಿ ಸರಕಾರ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಔದ್ಯೋಗಿಕ ತರಬೇತಿ ಸಂಸ್ಥೆಗಳ ಸ್ಥಾಪನೆ, ಆರೋಗ್ಯ, ವಸತಿ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ವಿಸ್ತರಣೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇವುಗಳಿಗೆ ಆದ್ಯತೆ ನೀಡಬೇಕೆಂದು ಪ್ರಸ್ತಾಪಿಸಿದ್ದಾರೆ. ಅಸಮತೋಲನೆ ನಿವಾರಣೆಗಾಗಿ 31 ಸಾವಿರ ಕೋಟಿ ಬಂಡವಾಳ ತೊಡಗಿಸಬೇಕಾಗಿದ್ದು ಇದರಲ್ಲಿ ಒಂದೇ ಬಾರಿಗೆ 15 ಸಾವಿರ ಕೋಟಿ ವಿನಿಯೋಗಿಸಿ, ಉಳಿದ 16 ಸಾವಿರ ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ 2 ಸಾವಿರ ಕೋಟಿಯಂತೆ ಪ್ರತಿ ಬಜೆಟ್ನಲ್ಲಿ ಮೀಸಲಾಗಿರಿಸ ಬೇಕೆಂದು ಸೂಚಿಸಲಾಗಿತ್ತು. ಇದೀಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ದೊರೆತಿದ್ದು, ಅಭಿವೃದ್ಧಿಯ ಬಗ್ಗೆ ಕನಸುಗಳು ಚಿಗುರೊಡೆದಿವೆ.
ಪ್ರಸ್ತುತ ರಾಜ್ಯ ಸರಕಾರ ಬಗ್ಗೆ ಗಮನ ಹರಿಸಿರುವುದು ಸಮಾಧಾನಕರ ಸಂಗತಿಯಾದರೂ, ಡಾ.ನಂಜುಂಡಪ್ಪ ಸಮಿತಿ ಸೂಚಿಸಿದಷ್ಟು ರೀತಿಯಲ್ಲಿ ಬಂಡವಾಳ ವಿನಿಯೋಗ ಸಾಧ್ಯವಾಗಿಲ್ಲ. ಈಗಾಗಲೇ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರೂ ಬೆಳೆಯುತ್ತಿರುವ ಜನಸಂಖ್ಯೆ, ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇವೆಲ್ಲವೂ ಅಸಮತೋಲನೆ ನಿವಾರಣೆಗೆ ಅಡ್ಡಿಯಾಗಿರುವುದು ಗಮನಿಸ ಬೇಕಾದ ಸಂಗತಿ. ಇವುಗಳ ಜೊತೆಗೆ ಅನಿರೀಕ್ಷಿತವಾಗಿ ಬಂದೆರಗುತ್ತಿರುವ ನೈಸರ್ಗಿಕ ವಿಕೋಪ ಹಾಗೂ ಆಳುವ ಸರಕಾರಗಳನ್ನು ಕಾಡುವ ಅಸ್ತಿರತೆ ಪರೋಕ್ಷವಾಗಿ ಅಭಿವೃದ್ಧಿಗೆ ಅಡ್ಡಿಯಾಗಿರುವುದನ್ನು ನಾವು ಮನಗಾಣಬೇಕಾಗಿದೆ.ಇಪ್ಪತ್ತೊಂದನೇ ಶತಮಾನದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಪರ್ಯಾಸವೆಂದರೆ ಪಕ್ಷ ಬೇಧ ಮರೆತು ನಮ್ಮನ್ನಾಳುತ್ತಿರುವ ಎಲ್ಲಾ ಸರಕಾರಗಳು ಅಭಿವೃದ್ಧಿ ಕುರಿತಂತೆ ತಪ್ಪಾಗಿ ವ್ಯಾಖ್ಯಾನಿಸುತ್ತಿರುವುದು. ಪ್ರಗತಿ ಸಾಧಿಸಿದ ಒಂದೆರಡು ವಲಯಗಳಿಂದ ಗಳಿಸಿದ ವರಮಾನವನ್ನು ಇಡೀ ಸಮಗ್ರ ಅಭಿವೃದ್ಧಿ ಬೆಳವಣಿಗೆಯ ದರಕ್ಕೆ ತಳಕು ಹಾಕಿ ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ಸರಕಾರಗಳು ನಿರತವಾಗಿವೆ. ಕಾರಣಕ್ಕಾಗಿಯೇ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅಮಾತ್ರ್ಯಸೇನ್, “ಬಡತನವೆಂದರೆ ವ್ಯಕ್ತಿಯೊಬ್ಬನ ಭೌತಿಕ ಸ್ಥಿತಿ ಅಲ್ಲ. ಇದು ಬಡತನಕ್ಕೆ ಮಾನದಂಡವಾಗಲಾರದು. ನಾಗರಿಕನೊಬ್ಬನ ವರಮಾನ ಹೆಚ್ಚಿದ್ದರೂ ಕೂಡ ಆತ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಸೇವೆಗಳಿಂದ ವಂಚಿತನಾಗಿದ್ದರೆ, ಬಡತನದ ರೇಖೆಯಿಂದ ಮೇಲೆದ್ದು ಬಂದ ಬಡವಎಂದು ವ್ಯಾಖ್ಯಾನಿಸಿದ್ದಾರೆ

ವ್ಯಕ್ತಿಯೊಬ್ಬ ತನ್ನ ಧಾರಣ ಸಾಮಥ್ರ್ಯವನ್ನು ಕೇವಲ ವರಮಾನದಿಂದ ಅಥವಾ ಸರಕಾರ ಜನಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಬಂಡವಾಳದಿಂದ ದಕ್ಕಿಸಿಕೊಳ್ಳುವುದಿಲ್ಲ. ಸಮಾಜದ ಕೆಳಸ್ತರದ ಮನುಷ್ಯ ಅಥವಾ ಮಹಿಳೆ ಸಮಾಜದಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಂಡು ದಕ್ಕಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಧಾರಣಾ ಸಾಮಥ್ರ್ಯ ನಿರ್ಧಾರವಾಗುತ್ತದೆ. ಜಾತಿ, ಧರ್ಮ ಅಥವಾ ಪ್ರಾದೇಶಿಕ ಭಿನ್ನತೆ ಕಾರಣದಿಂದಾಗಿ ಅನೇಕ ಸಮುದಾಯಗಳು ಇಂತಹ ಅವಕಾಶದಿಂದ ವಂಚಿತವಾಗಿರಬಹುದು. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವ ಹಾಗೂ ಕುಂದು ಕೊರತೆಗಳನ್ನು ಅಧ್ಯಯನ ಮಾಡಿ ನಿವಾರಿಸುವ ನೈತಿಕ ಹೊಣೆ ಸರಕಾರಗಳ ಮೇಲಿರುತ್ತದೆ. ಅಮಾಥ್ರ್ಯಸೇನ್ ಕುರಿತಂತೆಜನತೆ ಅನೇಕ ಬಗೆಯ ಸ್ವಾತಂತ್ರ್ಯಗಳಿಂದ ಮತ್ತು ಅವಕಾಶಗಳಿಂದ ವಂಚಿತರಾಗಿ ತಾವು ಬದುಕುವ ಕತ್ತಲೆಯ ಕೂಪದಿಂದ ಪಡೆಯುವ ಬಿಡುಗಡೆಯಡೆಯೇ ಅಭಿವೃದ್ಧಿಎಂದು ನಿರ್ವಚಿಸಿದ್ದಾರೆ. ವಾಸ್ತವವಾಗಿ ರಾಜ್ಯದ ಅಭಿವೃದ್ಧಿ ಬೆಳವಣಿಗೆಯ ದರ ಶೋಚನೀಯವಲ್ಲ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕೇತವೇನಲ್ಲ. ರಾಜ್ಯದ ಒಟ್ಟು ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಷಾನದ ಕೊಡುಗೆ ಎರಡಂಕಿ ದಾಟುವುದಿಲ್ಲ. ಇದನ್ನು ಸರಕಾರ ಹಾಗೂ ಪ್ರತಿನಿಧಿಗಳು ಮನಗಾಣಬೇಕು.
                                     (ಮುಂದುವರಿಯುವುದು)

No comments:

Post a Comment