ಇದು
ಭಾರತದ
ಬಹುಮುಖಿ ಸಂಸ್ಕøತಿ ಸಮಾಜ ಎದುರಿಸುತ್ತಿರುವ
ಬಿಕ್ಕಟ್ಟೂ ಹೌದು,
ದುರಂತವೂ ಹೌದು.
ಪರಧರ್ಮ ಸಹಿಷ್ಣುತೆಗೆ
ಹೆಸರಾದ ಭಾರತದ
ನೆಲದಲ್ಲಿ ನಿಜಕ್ಕೂ
ಸಾಂಸ್ಕøತಿಕ
ಬಿಕ್ಕಟ್ಟು ತಲೆದೂರಿದೆಯಾ? ಅಥವಾ ಧರ್ಮ ಧರ್ಮಗಳ
ನಡುವೆ ಕಂದಕ
ಏರ್ಪಟ್ಟಿದೆಯಾ? ಮಾಧ್ಯಮಗಳಲ್ಲಿ, ಬುದ್ದಿವಂತರ ಚಾವಡಿಗಳಲ್ಲಿ ದಿನನಿತ್ಯದ
ಸರಕಾಗಿ ಎಲೆ
ಅಡಿಕೆಯಂತೆ ಅಗಿಯಲ್ಪಡುತ್ತಿರುವ
ಅಹಿಷ್ಣುತೆಯ ಪ್ರಶ್ನೆಯನ್ನಿಟ್ಟುಕೊಂಡು ನೀವು
ಈ ದೇಶದಲ್ಲಿ
ಬಡವರು ವಾಸಿಸುವ ಯಾವುದೇ
ಕೊಳಗೇರಿಗೆ ಹೋಗಿ
ಅಥವಾ ಹಳ್ಳಿಗಳಿಗೆ
ಹೋಗಿ ಬನ್ನಿ. ಅಹಿಷ್ಣುತೆ
ಎಂದರೇನು? ಎಂಬ
ಪ್ರಶ್ನೆ ನಮಗೆ ಎದುರಾಗುತ್ತದೆ.
ಏಕೆಂದರೆ, ಈ
ನೆಲದ ಸಕಲೆಂಟು
ಜೀವರಾಶಿಗಳಿಗೆ ಎರವಾಗದಂತೆ ಬದುಕುವುದೇ ಜೀವನ ಎಂದು
ನಂಬಿಕೊಂಡಿರುವ ಆ ಜನರ ನಂಬಿಕೆಗೂ, ದೇಶದ
ಕೆಲವೆಡೆ ಕಿಡಿಗೇಡಿಗಳು
ನಡೆಸಿದ ದುಷ್ಕøತ್ಯವನ್ನು ಈ
ದೇಶದ ಅಹಿಷ್ಣುತೆ
ಎಂಬ ಆರೋಪವನ್ನು
ಆವಾಹಿಸಿಕೊಂಡು ಎಲ್ಲೆಡೆ ಅದನ್ನು ಜಾರಿಯಲ್ಲಿಟ್ಟಿರುವ ಉಳ್ಳವರ ನಡುವಳಿಕೆಗಳಿಗೆ ತಾಳೆ ಹಾಕಿ
ನೋಡಿದಾಗ
ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ.
ಭಾರತದ
ಪ್ರತಿಭಾವಂತ ಹಾಗೂ ಸೂಕ್ಷ್ಮ ಸಂವೇದನೆಯ ನಟರಲ್ಲಿ
ಒಬ್ಬರಾಗಿರುವ ಅಮೀರ್ ಖಾನ್ ಕಳೆದ ಸೋಮವಾರ
ನವದೆಹಲಿಯಲ್ಲಿ ನಡೆದ ಗೋಯಂಕಾ ಪ್ರತಿಷ್ಠಾನದ ಪ್ರಶಸ್ತಿ
ಸಮಾರಂಭದಲ್ಲಿ ಆಡಿದರು ಎನ್ನಲಾದ “ ನನ್ನ ಪತ್ನಿಯು
ಮಕ್ಕಳ ಭವಿಷ್ಯಕ್ಕಾಗಿ
ದೇಶ ಬಿಟ್ಟು
ಹೊರಟು ಹೋಗೋಣ
ಎಂದು ನನ್ನ
ಬಳಿ ಆತಂಕ
ವ್ಯಕ್ತಪಡಿಸಿದಳು” ಎಂಬ ಮಾತು ಈಗ ವಿವಾದಕ್ಕೆ
ಕಾರಣವಾಗಿದೆ. ಯಾವ ಕಾರಣಕ್ಕೆ ಅಮೀರ್ ಖಾನ್
ರವರಿಂದ ಈ
ಮಾತು ಹೊರಬಂತು?
ಇದಕ್ಕೆ ಪ್ರೇರಣೆ
ಎಲ್ಲಿಂದ ದೊರೆಯಿತು?
ಎಂಬುದರ ಕುರಿತು
ನಾವ್ಯಾರೂ ಯೋಚಿಸಲಿಲ್ಲ.
ಜೊತೆಗೆ ಇಡೀ
ದೇಶ ಅಪನಂಬಿಕೆಯ
ದಳ್ಳುರಿಯಲ್ಲಿ ಬೇಯುತ್ತಿರುವಾಗ, ತಾನು ಮತ್ತು ತನ್ನ
ಪತ್ನಿ ಕಿರಣ್
ನಡೆಸಿದ ಖಾಸಾಗಿ
ಚರ್ಚೆಯನ್ನು ಅಮೀರ್ ಖಾನ್ ಈ ಸಂದರ್ಭದಲ್ಲಿ
ಹೊರಹಾಕುವ ಅವಶ್ಯಕತೆಯೂ
ಇರಲಿಲ್ಲ. ಈ
ದೇಶದ ಒಬ್ಬ
ಕಲಾವಿದ ಅಥವಾ
ಬರಹಗಾರ, ಸಂಗೀತಗಾರ
ಇವರುಗಳು ಯಾವುದೇ
ನಿರ್ಧಿಷ್ಟ ಸಮುದಾಯಕ್ಕೆ
ಸೇರಿದವರಲ್ಲ. ಎಲ್ಲಾ ಜಾತಿಯ, ಎಲ್ಲಾ ಧರ್ಮದ
ಜನರ ಪ್ರೀತಿ
ಮತ್ತು ಸಹಾನುಭೂತಿ ಫಲವಾಗಿ
ಮೇಲೆದ್ದು ಬಂದವರಾಗಿರುತ್ತಾರೆ.
ಹಾಗಾಗಿ ಅತಿ
ಸೂಕ್ಷ್ಮ ವಿಚಾರಗಳಲ್ಲಿ
ಅಭಿಪ್ರಾಯ ವ್ಯಕ್ತಪಡಿಸುವಾಗ
ಇಂತಹವರು ಎಚ್ಚರದಿಂದರಬೇಕು.
ಇಂತಹ ವ್ಯಕ್ತಿಗಳು
ಹಾಡುವ ಪ್ರತಿ
ಮಾತನ್ನು ಈ
ದೇಶದ ಜನ
ಮತ್ತು ಮಾಧ್ಯಮಗಳು
ಕಣ್ಣಲ್ಲಿ ಕಣ್ಣಿಟ್ಟು,
ಮೈಯೆಲ್ಲಾ ಕಿವಿಯಾಗಿಸಿಕೊಂಡು
ಕಾಯುತ್ತಿರುತ್ತಾರೆ/ವೆ.
ಭಾರತದ
ಸಾಮರಸ್ಯದ ಬದುಕನ್ನು
ಹಾಗೂ ಈ
ದೇಶ ಎದುರಿಸುತ್ತಿರುವ
ಹಲವಾರು ಜ್ವಲಂತ
ಸಮಸ್ಯೆಗಳನ್ನು ದೃಶ್ಯ ಮಾಧ್ಯಮದ ಕಾರ್ಯಕ್ರಮಗಳ
ಮೂಲಕ ವಿಶ್ಲೇಷಿಸಿ, ಎಲ್ಲಾ ಭಾರತೀಯರ ಪ್ರೀತಿಗೆ
ಪಾತ್ರರಾಗಿದ್ದ ಅಮೀರ್ ಖಾನ್ಗೆ ಈ ಸೂಕ್ಷ್ಮತೆ ಏಕೆ
ಅರ್ಥವಾಗಲಿಲ್ಲ? ಅಮೀರ್ ಖಾನ್ರವರ
ಮಾತಿಗೆ ಪ್ರತಿಯಾಗಿ
ಬಾಂಗ್ಲಾ ದೇಶದ
ಲೇಖಕಿ ತಸ್ಲಿಮಾ
ನಸ್ರೀನ್
ಟ್ವಿಟರ್ನಲ್ಲಿ ಹೇಳಿರುವ “ ಅಮೀರ್
ಖಾನ್ ನೀವು
ಹಿಂದೂ ದೇವರುಗಳನ್ನು
ಲೇವಡಿ ಮಾಡಿ
ಪಿ.ಕೆ.
ಸಿನಿಮಾ ಮಾಡಿ
ಮುನ್ನೂರು ಕೋಟಿ
ರೂಪಾಯಿ ಗಳಿಸಿದಿರಿ.
ಇದೇ ಚಿತ್ರವನ್ನು
ನೀವು ಪಾಕಿಸ್ತಾನ
ಇಲ್ಲವೆ, ಅಫ್ಘಾನಿಸ್ತಾನ
ಅಥವಾ ಬಾಂಗ್ಲಾ
ದೇಶದಲ್ಲಿ ನಿರ್ಮಾಣ
ಮಾಡಿದ್ದರೆ, ನಿಮ್ಮನ್ನೂ ಒಳಗೊಂಡಂತೆ ನಿಮ್ಮ ನಿರ್ಮಾಪಕ
ಮತ್ತು ನಿರ್ದೇಶಕನನ್ನು
ಸಾರ್ವಜನಿಕವಾಗಿ ಅಲ್ಲಿನ ಸರ್ಕಾರಗಳು ಗಲ್ಲಿಗೇರಿಸುತ್ತಿದ್ದವು” ಎಂಬ ಮಾತುಗಳು ನಮಗೆ ದ್ವೇಷ ಪೂರಿತವಾದ
ಮಾತುಗಳಂತೆ ಕಾಣಿಸುವುದಿಲ್ಲ
ಬದಲಾಗಿ ಅಭಿವ್ಯಕ್ತಿ
ಸ್ವಾತಂತ್ರ್ಯವನ್ನು ತನ್ನ ಕೃತಿಗಳ ಮೂಲಕ ಪ್ರತಿಪಾದಿಸಿದ
ತಪ್ಪಿಗಾಗಿ ಜೀವ
ಭಯದಿಂದ ದೇಶ
ಬಿಟ್ಟು, ಭಾರತದಲ್ಲಿ
ಬದುಕುತ್ತಿರುವ ಒಬ್ಬ ಹೆಣ್ಣು ಮಗಳ ಒಡಲಾಳದ
ಸಂಕಟದ ನುಡಿಗಳಾಗಿ ನಮಗೆ
ಕಾಣುತ್ತವೆ. ಏಕೆಂದರೆ, ಭಾರತದಲ್ಲಿರುವ ಧರ್ಮ ಸಹಿಷ್ಣುತೆಯ ಪರಿಸ್ಥಿತಿಯು
ನೆರೆಯ ದೇಶಗಳಷ್ಟು
ಹದಗೆಟ್ಟಿಲ್ಲ.
ತನ್ನ
ಅಭಿನಯ ಮತ್ತು
ಪ್ರತಿಭೆಯಿಂದಾಗಿ ಜಾತಿ, ಧರ್ಮಗಳ ಹಂಗಿಲ್ಲದೆ ಭಾರತದ ಕೋಟ್ಯಾಂತರ
ಜನರ ಮನ
ಗೆದ್ದ ಅಮೀರ್
ಖಾನ್ ಕುಟುಂಬಕ್ಕೆ
ಇಂದು ಕೀರ್ತಿ,
ಹಣ, ಶ್ರೀಮಂತಿಕೆ
ಎಲ್ಲವೂ ದಕ್ಕಿದೆ. ಈ ಜಗತ್ತಿನ ಯಾವುದೇ
ಪ್ರದೇಶಕ್ಕೆ ಹೋಗಿ ಬದುಕಲು ಅವರು ಸರ್ವ
ಸ್ವತಂತ್ರರು ಇದರ ಬಗ್ಗೆ ಎರಡು ಮಾತಿಲ್ಲ.
ಆದರೆ, ಇಂತಹ
ಆಲೋಚನೆಗಳ ಕುರಿತು
ಯೋಚಿಸುವ ಮುನ್ನ
ಅಮೀರ್ ಖಾನ್
ದಂಪತಿಗಳು ತಾವು
ವಾಸಿಸುತ್ತಿರುವ ಮುಂಬೈ ನಗರದಲ್ಲಿ ಕೂಗಳತೆಯಲ್ಲಿರುವ ಧಾರಾವಿ
ಎಂಬ ಕೊಳಗೇರಿಗೆ
ಒಮ್ಮೆ ನೀಡುವುದು
ಒಳಿತು. ದೇಶದ
ವಿವಿಧ ಮೂಲೆಗಳಿಂದ
ಬಂದು ಒಂದು
ಹಿಡಿ ಅನ್ನಕ್ಕೆ
ಮತ್ತು ಒಂದು
ಮಾರು ಅಗಲದ
ಸೂರಿಗಾಗಿ ಮುಂಬೈ
ನಗರಕ್ಕೆ ಜಮೆಯಾಗಿರುವ
ಬಡ ಜನತೆ
ಧರ್ಮ ಮತ್ತು
ಜಾತಿಯ ಎಲ್ಲೆಗಳನ್ನು
ಮೀರಿ
ಹೇಗೆ ಬದುಕುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ನೆರೆಮನೆಯ
ಮುಸ್ಲಿಂ ಕುಟುಂಬದ
ಒಲೆಯ ಕೆಂಡವು
ಹಿಂದೂ ಕುಟುಂಬವೊಂದರ
ಒಲೆಗೆ ಬೆಂಕಿಯಾಗುವ
ಪರಿಯಿಂದ ಹಿಡಿದು,
ಉತ್ತರ ಭಾರತದ
ಕುಟುಂಬದ ರೊಟ್ಟಿ,
ದಕ್ಷಿಣ ಭಾರತದ
ಅನ್ನ ಹೇಗೆ
ಕುಟುಂಬಗಳ ನಡುವೆ
ವಿನಿಮಯವಾಗುತ್ತವೆ ಎಂಬುದು ಮನದಟ್ಟಾಗುತ್ತದೆ. ಸತ್ತ ಮುಸ್ಲಿಂ ನಾಗರೀಕನ
ಶವ ಯಾತ್ರೆಯಲ್ಲಿ
ಹೆಗಲು ಕೊಡುವ
ಹಿಂದೂ ವ್ಯಕ್ತಿಯ
ಹೃದಯದಲ್ಲಿ ಕೋಮು
ಭಾವನೆಗಳಿಲ್ಲ ಎಂಬ ನಿಜ ಬದುಕಿನ ಘಟನೆಗಳು
ಸಹ ನಮಗೆ
ಗೋಚರವಾಗುತ್ತವೆ. ನಾನು ಹುಟ್ಟಿ ಬೆಳೆದ ಗ್ರಾಮೀಣ
ಬದುಕಿನ ಸಂಸ್ಕøತಿಯಲ್ಲಿ ಹಳೆಯ
ಬೈಸಿಕಲ್ ಗೆ
ಗೋಣಿ ಚೀಲ
ಕಟ್ಟಿಕೊಂಡು, ಹಳ್ಳಿ ಹಳ್ಳಿ ತಿರುಗಿ ಹುಣಸೆ
ಬೀಜ, ಬೇವು
ಮತ್ತು ಹೊಂಗೆ
ಬೀಜ ಸಂಗ್ರಹಿಸುತ್ತಿದ್ದ ಬಡ ಹುಸೇನಣ್ಣ, ಖಾದೀರಣ್ಣ,
ಫತಾವುಲ್ಲಾ ಷರೀಪಣ್ಣ
ಮುಂತಾದವರ
ಹೆಣ್ಣು ಮಕ್ಕಳ ವಿವಾಹಕ್ಕೆ ಇಡೀ ಊರಿನ
ಜನ ಅಕ್ಕಿ,
ಬೆಲ್ಲ, ತೆಂಗಿನ
ಕಾಯಿ, ತರಕಾರಿ,
ಮೇಕೆ, ಕುರಿ, ಹೀಗೆ ತರಾವರಿ ವಸ್ತುಗಳನ್ನು
ಕೊಟ್ಟು ಮುಸ್ಲಿಂ
ಹೆಣ್ಣು ಮಗಳ
ವಿವಾಹವನ್ನು ತಮ್ಮ ಮನೆ ಮಗಳ ವಿವಾಹವೆಂಬಂತೆ
ಸಂಭ್ರಮಿಸಿದ ಘಟನೆಗೆ ಸ್ವತಃ ನಾನು ಸಾಕ್ಷಿಯಾಗಿದ್ದಿನಿ. ಇಂತಹ ಅಪರೂಪದ ಒಳನೋಟ
ಹಾಗೂ ಮಾನವೀಯ
ನೆಲೆಯುಳ್ಳ ಗ್ರಾಮೀಣ
ಸಂಸ್ಕತಿಯ
ಕುರಿತು ಲಗಾನ್
ನಂತಹ ಚಿತ್ರ
ನಿರ್ಮಾಣ ಮಾಡಿದ
ಅಮೀನ್ ಖಾನ್
ಗೆ ಈ
ಸಂಸ್ಕತಿ
ನೆನಪಾಗುತ್ತಿಲ್ಲವೇಕೆ?
ನಾವು ಬದುಕುತ್ತಿರುವ ವರ್ತಮಾನದ
ಭಾರತದಲ್ಲಿ ಪರಿಸ್ಥಿತಿ
ಈ ಮೊದಲಿನಂತೆ
ಇಲ್ಲ ನಿಜ.
ಧರ್ಮ ಮತ್ತು
ಜಾತಿಗಳನ್ನು ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡಿರುವ
ರಾಜಕೀಯ ಪಕ್ಷಗಳಲ್ಲಿ
ಈ ಮೊದಲಿನ
ಪಾರದರ್ಶಕತೆ, ಪ್ರಾಮಾಣಿಕತೆ ಉಳಿದಿಲ್ಲ. ಹಾಗಾಗಿ ಪುಷ್ಪಾ ಭಾರ್ಗವರಂತಹ
ವಿಜ್ಞಾನಿ ಮತ್ತು
ದೇವನೂರು ಮಹಾದೇವ
ರಂತಹ ಸೂಕ್ಷ್ಮ
ಮನಸ್ಸಿನ ಬರºಗಾರರು ತಮ್ಮ
ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಂದರ್ಭಗಳಲ್ಲಿ ಆಡಿರುವ ಎದೆಯಾಳದ ಮಾತುಗಳು ಎಲ್ಲರ ಎದೆಗೆ ತಾಕಿವೆ. ಇದರಿಂದಾಗಿ
ಮೋದಿ ನೇತೃತ್ವದ
ಸರ್ಕಾರಕ್ಕೆ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು
ಮುಜುಗರವಾಗಿದೆ. ಇಂತಹ ಅಹಿತಕರ ಘಟನೆಗಳಿಗೆ ಇತಿಶ್ರೀ
ಹಾಡಬೇಕಾದವರು ಈ ಭಾರತೀಯ ನೆಲದ ಕಲಾವಿದರು,
ಸಂಗೀತಗಾರರು ಮತ್ತು ಬರಹಗಾರರು ಮಾತ್ರ. ಸಮುದಾಯಗಳ
ನಡುವೆ ಬಾಂಧವ್ಯದ
ಬೆಸುಗೆಯಾಗಬಲ್ಲ, ಸಂಪರ್ಕ ಮತ್ತು ಸಂವಹನದ ಸೇತುವೆಯಾಗಬಲ್ಲ
ತಾಕತ್ತು ಇವರಿಗಿದೆ.
ಸಮಾಜದ ಎಲ್ಲಾ
ವಿಕಾರಗಳಿಗೆ, ಕಾಯಿಲೆಗಳಿಗೆ ಮದ್ದು ಮತ್ತು
ವೈದ್ಯರಾಗಬೇಕಾದ ಅಮೀರ್ಖಾನ್, ಶಾರುಕ್ಖಾನ್
ರಂತಹ ಕಲಾವಿದರು
ತಾವೇ ರೋಗಿಗಳಾದರೆ,
ಈ ನೆಲದ
ಸಂಸ್ಕøತಿಯ
ಭವಿಷ್ಯವೇನು? ಒಲೆ ಹತ್ತಿ ಉರಿದೊಡೆ ನಿಲಬಹುದು,
ಧರೆ ಹೊತ್ತಿ
ಉರಿದೊಡೆ ನಿಲಬಹುದೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ