ಭಾರತದ
ಗ್ರಾಮೀಣ ಬದುಕು
ಇಂದು ಅತ್ಯಂತವಾಗಿ
ಜರ್ಝರಿತಗೊಂಡಿದೆ. ಗ್ರಾಮೀಣ
ಜನ ಸಂಕಷ್ಟಗಳ
ಭಾರದ ಹೊರೆಯನ್ನು
ಹೊರಲಾರದೆ ತತ್ತರಿಸುತ್ತಿದ್ದಾರೆ. ದೇಶಕ್ಕೆ
ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಎಪ್ಪತ್ತು
ವರ್ಷಗಳಾಗಿದ್ದರೂ ಈ ದೇಶದ ಪಿತಾಮಹ ಗಾಂಧೀಜಿ
ಕಂಡಿದ್ದ ಗ್ರಾಮ
ಸ್ವರಾಜ್ಯದ ಕನಸು
ಕನಸಾಗಿಯೇ ಉಳಿದಿದೆ. ಗ್ರಾಮೀಣ
ಬದುಕಿನಲ್ಲಿ ನೆಲೆನಿಂತಿದ್ದ ಸಡಗರ, ಸಂಭ್ರಮ, ಸ್ವಾಭಿಮಾನ,
ಸ್ವಾವಲಂಬನೆ, ಸಹಕಾರ, ಪ್ರೀತಿ, ನಂಬಿಕೆ ಮುಂತಾದ
ಸಕಾರಾತ್ಮಕ ಲಕ್ಷಣಗಳು
ನೆಲಕಚ್ಚಿ ಅವುಗಳ
ಸ್ಧಾನದಲ್ಲಿ ಸ್ವಾರ್ಥ, ಕುಟಿಲತೆ, ಸಣ್ಣತನ, ಜಾತೀಯತೆ,
ಕುಲಗೆಟ್ಟ ರಾಜಕೀಯ
ಇತ್ಯಾದಿ ನಕಾರಾತ್ಮಕ
ಗುಣಗಳು ವಿಜೃಂಭಿಸುತ್ತಿವೆ. ಸ್ವಾತಂತ್ರ್ಯ
ಪೂರ್ವದ ಬ್ರಿಟಿಷ್
ಆಡಳಿತದಲ್ಲಿ ಮತ್ತು ಸ್ವ್ವಾತಂತ್ರ್ಯ ನಂತರದ ನಮ್ಮದೇ
ಆಡಳಿತದಲ್ಲಿ ಯಾವೊತ್ತೂ ಗ್ರಾಮೀಣ ಜಗತ್ತಿನ ಅಭಿವೃಧ್ದಿಗೆ
ಮಹತ್ವವನ್ನು ಕೊಡಲೇ ಇಲ್ಲ. ಇಂದಿಗೂ
ಭಾರತದ ಲಕ್ಷಾಂತರ
ಹಳ್ಳಿಗಳು ಸಾರಿಗೆ,
ವಿದ್ಯುತ್, ನೀರಾವರಿ,
ಮಾರುಕಟ್ಟೆ, ವಸತಿ, ಕುಡಿಯುವ ನೀರು, ನೈರ್ಮಲ್ಯ
ಇತ್ಯಾದಿ ಸೌಲಭ್ಯಗಳಿಂದ
ವಂಚಿತಗೊಂಡಿವೆ. ರೈತರು ಬೆಳೆದ ಬೆಳೆಗಳಿಗೆ
ನಿರ್ಧಿಷ್ಟ ಬೆಲೆ
ಎಂಬುದು ಕನಸಿನ
ಮಾತಾಗಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ
ಇಲ್ಲಿಯವರೆಗೂ ನಾವು ಸತ್ವಯುತವಾದ ಒಂದು ಕೃಷಿ
ನೀತಿಯನ್ನು ರೂಪಿಸಲು
ಅಸಮರ್ಥರಾಗಿರುವುದು ನಮ್ಮ ಗ್ರಾಮೀಣ ಬದುಕನ್ನು ಎಷ್ಟು
ನಿರ್ಲಕ್ಷಿಸಿದ್ದೇವೆಂಬುದಕ್ಕೆ ಸಾಕ್ಷಿಯಾಗಿದೆ.
ನಾವು
ಪ್ರಪಂಚದ ಅತ್ಯಂತ
ದೊಡ್ಡ ಪ್ರಜಾಪ್ರಭುತ್ವ,
ಕಲ್ಯಾಣ ರಾಷ್ಟ್ರವೆಂದು
ಜಂಭ ಕೊಚ್ಚಿಕೊಳ್ಳುತ್ತಿದ್ದರೂ
ನಮ್ಮ ಜನರಿಗೆ
ಉಚಿತವಾಗಿ ವಿದ್ಯಾಭ್ಯಾಸ,
ವೈದ್ಯಕೀಯ ಮುಂತಾದ
ಅಗತ್ಯ ಸೌಲಭ್ಯ
ಗಳನ್ನು ನೀಡಲು
ಸಾಧ್ಯವಾಗಿಲ್ಲ. ಪ್ರಸ್ತುತ
ಭಾರತದ ಹಳ್ಳಿಗಳು
ಸ್ಮಶಾನ ಸದೃಶ್ಯವಾಗಿವೆ. ಗ್ರಾಮೀಣ
ಆಟ, ಕಲೆ,
ಸಂಸ್ಕತಿಗಳು ನಾಶದ ಅಂಚಿನಲ್ಲಿವೆ. ಗ್ರಾಮೀಣ
ಜನರಲ್ಲಿ ಉಸಿರಾಡುವ
ಆತ್ಮವಿಶ್ವಾಸವೇ ಇಲ್ಲದಂತಾಗಿದೆ. ಹಿಂದೆಂದೂ ಕಾಣದಷ್ಟು ಆತ್ಮಹತ್ಯೆ
ಪ್ರಕರಣಗಳು ಗ್ರಾಮೀಣ
ಪ್ರದೇಶಗಳಲ್ಲಿ ದಾಖಲಾಗುತ್ತಿವೆ. ದಾಖಲಾಗದ ಆತ್ಮಹತ್ಯೆ
ಪ್ರಕರಣಗಳು ಲೆಕ್ಕಕ್ಕೆ
ಸಿಗದಷ್ಟು. ರೈತರ, ಕೂಲಿಕಾರರ, ಬಡವರ
ಹೆಸರಿನಲ್ಲಿ ಪ್ರಾರಂಭಿಸುವ ಆನೇಕ ಜನಪರ ಯೋಜನೆಗಳು
ಅವರಿಗೆ ದಕ್ಕುತ್ತಿಲ್ಲ.
ಗ್ರಾಮೀಣ ಜನರ
ಬದುಕಿನಲ್ಲಿ ಹಿಂದೆಂದೂ ಕಾಣದ ಹಾಹಾಕಾರ, ಹತಾಶೆ
ಶುರುವಾಗಿ ಇಡೀ
ಗ್ರಾಮೀಣ ಜಗತ್ತು
ವಾಸಿಯಾಗಲಾರದ ವ್ರಣದಿಂದ ನರಳುವ ರೋಗಿಯಂತೆ ನೆಮ್ಮದಿಯನ್ನು
ಕಳೆದುಕೊಂಡಿದೆ.
ಇಂಥ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನಾವು
ನಮ್ಮ ಗ್ರಾಮ
ಸಮಾಜವನ್ನು ಪುನರ್
ನಿರ್ಮಾಣ ಮಾಡಬೇಕಾಗಿದೆ. ಗ್ರಾಮೀಣ
ಜಗತ್ತಿನಲ್ಲಿ ಕಳೆದು ಹೋಗಿರುವ ಸಡಗರ, ಸಂಭ್ರಮ,
ಸ್ವಾಭಿಮಾನ, ಆತ್ಮ ವಿಶ್ವಾಸ, ಕಲೆ, ಜನಪದ
ಸಂಸ್ಕತಿಗಳ ಪುನಶ್ಚೇತಗೊಳಿಸಬೇಕಾಗಿದೆ.
ಜಗತ್ತಿನ ನಾಗರೀಕತೆಗೆ,
ಕೈಗಾರಿಕಾ ಕ್ರಾಂತಿಗೆ
ನಾಂದಿಯಾದ, ಸೇತುವೆಯಾದ
ಕೃಷಿ ಪರಂಪರೆಯ
ಸತ್ವಗಳನ್ನು, ಸಂವೇದನೆಗಳನ್ನು, ದಾರ್ಶನಿಕ ಗುಣಗಳನ್ನು ನಾವು
ಸಂರಕ್ಷಿಸಲು ಪ್ರಯತ್ನಿಸಬೇಕಾಗಿದೆ. ಗ್ರಾಮೀಣ ಜನತೆಯಲ್ಲಿ
ಬದುಕಿನ ಚೈತನ್ಯವನ್ನು
ಪುನರ್ ನಿರ್ಮಾಣ
ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಒಂದು
ಸಣ್ಣ ಪ್ರಯತ್ನವೇ
“ಗ್ರಾಮ ಸಮಾಜ”
ವೆಂಬ ಗ್ರಾಮೀಣ
ಆರ್ಥಿಕ-ವಿಜ್ಞಾನ-ಸಂಸ್ಕøತಿ
ಪರಿಷತ್ತನ್ನು ಸ್ಥಾಪಿಸುವ ಯೋಚನೆ. ಇದು ಸ್ವಾರ್ಥ,
ಜಾತಿ, ರಾಜಕೀಯಗಳಿಂದ
ಮುಕ್ತವಾದ ಒಂದು
ಸಂಘಟನೆ.
ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸಿನ ಬೆನ್ನು
ಹತ್ತಿ ಓಡುವುದು
ಈ “ಗ್ರಾಮ
ಸಮಾಜ”ದ
ಗುರಿ. ಮೂಗುದಾರವಿಲ್ಲದ
ಗೂಳಿಯಂತೆ ಮುನ್ನುಗ್ಗುತ್ತಿರುವ
ಜಾಗತೀಕರಣದ ಸಂದರ್ಭದಲ್ಲಿ
ಹಳ್ಳಿಗರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು
ನಮ್ಮ ಧರ್ಮವೆಂದು
ತಿಳಿದಿದ್ದೇವೆ. ಈ ಗುರಿ ತಲುಪುವಲ್ಲಿ, ಈ
ಧರ್ಮ ಪಾಲಿಸುವಲ್ಲಿ
ನೀವೂ ನಮ್ಮೊಡನೆ
ಬನ್ನಿ.
ನಿಮ್ಮ ಪ್ರೀತಿ, ನಂಬಿಕೆ, ಸಹಕಾರಗಳನ್ನು ದಯವಿಟ್ಟು
ತನ್ನಿ. ಅನೇಕ
ಸಂಕಷ್ಟಗಳಿಂದ ವಿಲವಿಲನೆ ಒದ್ದಾಡುತ್ತಿರುವ ಗ್ರಾಮೀಣ ಬದುಕಿಗೆ
ನಾವು ನೀಡುವ
ಭರವಸೆಯೆಂದರೆ “ನಾವು ಕೂಡ ನಿಮ್ಮ ಜೊತೆ.......”
ಎಂಬುದು.
ದಯಮಾಡಿ ಸಹಕರಿಸಿ ನಮ್ಮ ಪರಂಪರೆಯ ಬೇರುಗಳನ್ನು
ಉಳಿಸಿಕೊಳ್ಳುವಂಥ ತವಕದ ಈ ಕಾಯಕದಲ್ಲಿ.
1. ಡಾ. ಸಿದ್ದಲಿಂಗಯ್ಯ 12. ಆರ್. ಟಿ.
ರಮೇಶ್ಗೌಡ
2. ಸ್ವಾಮಿ ಆನಂದ್. ಆರ್. 13. ಲಿಂಗಣ್ಣ ಗುಂಡಳ್ಳಿ
3. ಡಾ. ಎಚ್.ಆರ್.
ಸ್ವಾಮಿ 14. ಡಾ. ಡಿ. ಕೆ. ಕುಲಕರ್ಣಿ
4. ಡಾ. ಎನ್. ಜಗದೀಶ್
ಕೊಪ್ಪ
15. ಡಿ. ಎಸ್.
ಲಿಂಗರಾಜು
5. ನರ್ತಕಿ ರಾಜಗೋಪಾಲ್ 16. ಆನಂದ, ಕೆ.ಸಿ.
6. ರಾಜಶೇಖರ ಅಬ್ಬೂರು 17. ಶ್ರೀನಿವಾಸ
7. ವಿಶುಕುಮಾರ್ 18. ಸುರೇಂದ್ರ
8. ಸಿ.ಜಿ. ಶ್ರೀನಿವಾಸನ್ 19. ದೊಡ್ಡೇಗೌಡ
9. ಮಂಜುನಾಥ. ಎಂ. ಅದ್ದೆ 20. ಕೃಷ್ಣಾರೆಡ್ಡಿ ಎಸ್. ವಿ.
10. ಪ್ರೊಫೆಸರ್
ಎಂ.ಎಸ್.ಜಯರಾಮ್
21. ಕೇಶವರೆಡ್ಡಿ ಹಂದ್ರಾಳ
11.
ಕ್ರಾಂತಿ.ಕೆ.ಆರ್. 22. ಎನ್. ಸಿ.
ಮಂಜುನಾಥ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ