ಕಳೆದ
ಭಾನುವಾರ ಅಂದರೆ, 25-6-17 ರ ಹಿಂದೂ
ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪ್ರಕಟವಾದ ಈ ವರದಿಯನ್ನು ಎಷ್ಟು
ಮಂದಿ ಓದುಗರು ಗಮನಿಸಿದರೋ ಗೊತ್ತಿಲ್ಲ. ಆದರೆ, ಮೊದಲ ನೋಟಕ್ಕೆ ಕಣ್ಣಿಗೆ ಬಿದ್ದ ಈ ಪುಟ್ಟ ವರದಿಯನ್ನು
ಓದಿದ ತಕ್ಷಣ ನಾನು ಅರ್ಧ ಗಂಟೆಯ ಕಾಲ ಪತ್ರಿಕೆಯನ್ನು ಬದಿಗಿಟ್ಟು ತಣ್ಣಗೆ ಕುಳಿತು ಯೋಚಿಸತೊಡಗಿದೆ. ದೇವರು ಮತ್ತು ಭಕ್ತನ ನಡುವಿನ ಸಂಬಂಧಕ್ಕೆ ಏಷ್ಟೋಂದು ಮುಖಗಳಿವೆ ಎಂದು ಆಶ್ಚರ್ಯವಾಯಿತು.
ಪಾಕಿಸ್ತಾನದ
ದಕ್ಷಿಣ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಜಿಲ್ಲಾ ಕೇಂದ್ರದಲ್ಲಿರುವ ಜಾಮಿಚಿiÀು ಮಸೀದಿಯಲ್ಲಿ ದಿನಾಂಕ
23-6-17 ರ ಶುಕ್ರವಾರ ರಾತ್ರಿ ಭಕ್ರರು ದೇಣಿಗೆ ನೀಡುವ ಹುಂಡಿಯಿಂದ ಐವತ್ತು ಸಾವಿರ ರೂಪಾಯಿಗಳು ಕಳುವಾಯಿತು. ರಂಜಾನ್ ಮಾಸದ ಆಚರಣೆಯ ಈ ಸಂದರ್ಭದಲ್ಲಿ ಶ್ರೀಮಂತ
ಮುಸ್ಲಿಂರು ಉಧಾರವಾಗಿ ದೇಣಿಗೆ ನೀಡುವುದರಿಂದ ಮಸೀದಿಗೆ ವಿದ್ಯುತ್ ಇಲ್ಲದ ಸಮಯದಲ್ಲಿ ವಿದ್ಯುತ್ ಒದಗಿಸುವ ಉದ್ದೇಶದಿಂದ ಜನರೇಟರ್ ಕೊಳ್ಳಲು ಹುಂಡಿಯೊಂದನ್ನು ಸ್ಥಾಪಿಸಲಾಗಿತ್ತು. ಕಳ್ಳತನ ಮಾಡಿದ ವ್ಯಕ್ತಿಯು ಹುಂಡಿಯಲ್ಲಿ ಹಣವನ್ನು ತೆಗೆದುಕೊಂಡು ಹೋಗುವುದರ ಜೊತೆಗೆ ಒಂದು ಚೀಟಿಯನ್ನು ಬರೆದಿಟ್ಟು ಹೋಗಿದ್ದಾನೆ.
ಚೀಟಿಯಲ್ಲಿ
ಅವನು ಬರೆದಿರುವ ಕೆಲವು ಮುಖ್ಯಾಂಶಗಳು ಇವು. “ ಮಾನ್ಯರೇ, ಹಣವನ್ನು ಕದ್ದವನು ಯಾರು ಎಂದು ಹುಡುಕಲು ಹೋಗಬೇಡಿ. ಇದು ನನ್ನ ಮತ್ತು ದೇವರ ನಡುವಿನ ವ್ಯವಹಾರ. ಮುಂದಿನ ವಾರ ರಂಜಾನ್ ಹಬ್ಬವಿದೆ. ಈ ಸಮಾಜದಲ್ಲಿ ನಾನು
ಸಾಲಕ್ಕಾಗಿ ಬೇಡದೇ ಇರುವ ಮನೆಗಳಿಲ್ಲ, ವ್ಯಕ್ತಿಗಳಿಲ್ಲ. ಅಂತಿಮವಾಗಿ ದೇವರಿಗೆ
ನನ್ನ ಕಷ್ಟವನ್ನು ವಿವರಿಸಿ, ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೀನಿ. ನಮಸ್ಕಾರ. ಇದನ್ನು ಓದುತ್ತಿದ್ದಂತೆ ಈ ಹಿಂದೆ ನಾನು
ಅನುವಾದಿಸಿದ್ದ ಹನ್ರ್ನೆಂದನೆಯ ಶತಮಾನದ ಪರ್ಷಿಯನ್ ಸೂಫಿಕವಿ ಉಮರ್ ಖಯಾಮನ ರುಬಾಯಿವೊಂದರ ಈ ಸಾಲುಗಳು ನೆನಪಾದವು.
ನಿಜ
ಹೇಳಬೇಕೆಂದರೆ,
ನಾನು
ಮಸೀದಿಗೆ ಬಂದದ್ದು
ದೇವರ
ಪ್ರಾರ್ಥನೆಗಲ್ಲ,
ಇಲ್ಲಿಂದ
ಕದ್ದೊಯ್ದ ಹಾಸುಗಂಬಳಿ
ಹಳತಾಗಿದೆ
ಅದಕೆ.
ನಿಜವಾದ
ಪ್ರಶ್ನೆ ಇರುವುದೇ ಇಲ್ಲಿ. ದೇವರ ಪವಾಡವನ್ನು ಅಥವಾ ಮಹಿಮೆಯನ್ನು ನಂಬುವ ವ್ಯಕ್ತಿಗಳಿಗೆ ಇದು ಹೇಗನ್ನಿಸಬಹುದು? ನಮ್ಮಲ್ಲಿಯೂ ಕೂಡ ದಿನ ನಿತ್ಯ ದೇವಸ್ಥಾನಗಳ ಹುಂಡಿಗಳನ್ನು ದೋಚುವುದು ಇಲ್ಲವೆ, ದೇವರ ವಿU್ಪ್ರಹಗಳನ್ನು ಕದ್ದೊಯ್ಯುವುದು
ಸಾಮಾನ್ಯ ಸಂಗತಿಯಾಗಿದೆ. ಹಾಗಾದರೇ, ಭಕ್ತರು ನಂಬುವ ಅಥವಾ ಆಸ್ತಿಕರು ಆರಾಧಿಸುವ ದೇವರುಗಳು ಎಲ್ಲಿ ಹೋದರು? ಅವರ ಶಕ್ತಿ ಅಥವಾ ಮಹಿಮೆಗಳು ಕಳ್ಳತನ ನಡೆಯುವಾಗ ಏನಾಗಿದ್ದವು? ಈ ಪ್ರಶ್ನೆಯು ಬಾಲ್ಯದಿಂದಲೂ
ನನ್ನನ್ನು ಕಾಡುತ್ತಾ ಬಂದಿರುವ ಪ್ರಶ್ನೆಯಾಗಿದೆ. ನನ್ನ
ಹನ್ನೊಂದನೆಯ ವಯಸ್ಸಿನಲ್ಲಿ ನನ್ನೂರು ಕೊಪ್ಪದ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಪುಟ್ಬಾಲ್ ಆಡುತ್ತಿರುವಾಗ, ಚೆಂಡಿಗೆ ಪೋಣಿಸಿದ್ದ ದಾರವು ಕಿತ್ತು ಹೋಯಿತು. ಆ ಕ್ಷಣದಲ್ಲಿ ನನ್ನ
ಸೊಂಟದಲ್ಲಿದ್ದ ಉಡುದಾರವನ್ನು ಬಿಚ್ಚಿಕೊಟ್ಟ ನಾನು, ಈವರೆಗೆ ಮತ್ತೇ ಅದನ್ನು ಧರಿಸಲಿಲ್ಲ. ಅಷ್ಟೆ ಅಲ್ಲ, ನನ್ನ ಮಗನಿಗೆ ಎಂದೂ ಉಡುದಾರವನ್ನು ಹಾಕಲಿಲ್ಲ. ಮಗ ಮತ್ತು ಮಗಳು
ಇಬ್ಬರನ್ನೂ ಎಂದಿಗೂ ದೇವಸ್ಥಾನಗಳಿಗೆ ಕರೆದೊಯ್ಯಲಿಲ್ಲ ಮತ್ತು ಅವರಿಗೆ ದೇವರು, ಧರ್ಮ, ಜಾತಿ ಕುರಿತಂತೆ ಏನನ್ನೂ ನಾನಾಗಲಿ ಅಥವಾ ನನ್ನ ಪತ್ನಿಯಾಗಲಿ ಬೋಧಿಸಲಿಲ್ಲ. ಜೀವನದಲ್ಲಿ ಎಂದೂ ಸುಳ್ಳು ಹೇಳಬಾರದು ಮತ್ತು ನಡುವಳಿಕೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕು. ಇವುಗಳನ್ನು
ಮಾತ್ರ ನಾನು ನನ್ನ ಪತ್ನಿ ಅವರಿಗೆ
ಬೋಧಿಸುತ್ತಾ ಬಂದೆವು.
ಬಹುಮುಖಿ
ಸಂಸ್ಸøತಿಯ ಭಾರತದಲ್ಲಿ ಸಮಾಜದಲ್ಲಿ ವರ್ಗ ವ್ಯವಸ್ಥೆ ಇರುವಂತೆ ದೇವರುಗಳಲ್ಲಿಯೂ ಮೇಲ್ವರ್ಗದ ದೇವರು, ಕೆಳವರ್ಗದ ದೇವರು ಇರುವ ವ್ಯವಸ್ಥೆಯನ್ನು ನೋಡಿ ಬೆರಗಾಗಿದ್ದೀನಿ. ತಿರುಪತಿಯ ವೆಂಕಟೇಶ್ವರ, ಮಂತ್ರಾಲಯದ ರಾಘವೇಂದ್ರ, ಶಿರಡಿಯ ಸಾಯಿಬಾಬಾ, ಕೊಲ್ಲೂರು ಮೂಕಾಂಬಿಕೆ, ಮುಧುರೈ ಮೀನಾಕ್ಷಿ, ಪಂಡರಾಪುರದ ವಿಠಲ, ಮುಂಬೈನ ಸಿದ್ದಿವಿನಾಯಕ ಹೀಗೆ ಅನೇಕ ದೇವರುಗಳು ಶ್ರೀಮಂತ ದೇವರಾಗಿದ್ದಾರೆ. ಇವರುಗಳು ಒಂದು ರೀತಿಯಲ್ಲಿ ನಮ್ಮ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ಗಳಿದ್ದಂತೆ.
ಆದರೆ,
ಇಂತಹ ಸೂಪರ್ ಸ್ಟಾರ್ ದೇವರುಗಳಿಗಿಂತ, ನಮ್ಮ ಗ್ರಾಮೀಣ ಪ್ರದೇಶದ ಗ್ರಾಮ ದೇವ- ದೇವತೆಗಳು ನಿಜವಾದ ದೇವರು ಎಂದು ನನ್ನ ಬಲವಾದ ನಂಬಿಕೆ. ಏಕೆಂದರೆ, ಇವರಿಗೆ ಎಣ್ಣೆ ಮಜ್ಜನ, ಹಾಲು ತುಪ್ಪ, ಗಂಧÀ, ಎಳನೀರು, ಇತ್ಯಾದಿ ಮಜ್ಜನಗಳ ಸೇವೆಯಿಲ್ಲ. ತೂಗೂಯ್ಯಾಲೆಯ ಸೇವೆಯೂ ಇಲ್ಲ, ಸಹಸ್ರನಾಮಾವಳಿಯ ಅರ್ಚನೆ ಮೊದಲೇ ಇಲ್ಲ. ಇವೆಲ್ಲಕ್ಕಿಂತ ಈ ದೇವರುಗಳು ತಮ್ಮ
ಭಕ್ತರಿಂದ ಸಾವಿರಾರು ರೂಪಾಯಿುಗಳನ್ನು ವಿಶೇಷ ದರ್ಶನ ವ್ಯವಸ್ಥೆಯಡಿ ದೋಚುವುದಿಲ್ಲ, ದರ್ಶನ ನೀಡುವುದಕ್ಕೆ ಗಂಟಗಂಟೆಲೆ ದಿನಗಟ್ಟಲೆ ಕಾಯಿಸುವುದಿಲ್ಲ. ಈ ಕಾರಣಕ್ಕಾಗಿ ನಮ್ಮ
ಜನಪದರಿಗೆ ಈ ದೇವರುಗಳೆಂದರೆ, ಎಲ್ಲಿಲ್ಲದ
ಪ್ರೀತಿ ಮತ್ತು ನಂಬಿಕೆ.
ಇಂತಹ
ಕಾರಣಗಳಿಂದಾಗಿ ಗ್ರಾಮದೇವತೆಗಳನ್ನು ನಮ್ಮ ಜನಪದರು ದೇವತೆಗಳು ಎಮಬುವುದಕ್ಕಿಂತ ತಮ್ಮ ಆತ್ಮ ಸಂಗಾತಿಗಳು ಎಂದು ನಂಬುತ್ತಾರೆ. ಅವನ/ಳ ಜೊತೆ ಏಕವಚನದಲ್ಲಿ
ಸಂವಾದದಲ್ಲಿ ತೊಡಗುತ್ತರೆ. ಗರ್ಭ ಗುಡಿಯಲ್ಲಿ ಕೂತಿರುವ ದೇವರನ್ನು ಎಬ್ಬಿಸಿ, ವರ್ಷಕ್ಕೊಮ್ಮೆ ರಾಶಿ ರಾಶಿ ಕೆಂಡಗಳ ನಡುವೆ ಕೊಂಡ ಹಾಯಿಸಿ, ಅವರನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಾರೆ. ಹೆಗಲಮೇಲೆ ಹೊತ್ತು ಮನೆಮನೆಗೆ ಹೊತ್ತೊಯ್ದು ಭಕ್ತರ ಪ್ರಶ್ನೆ ಉತ್ತರ ನೀಡು ಎಂದು ಒತ್ತಾಯಿಸುತ್ತಾರೆ. ದೇವರು ನೀಡಿದ ಅಭಯ ಅಥವಾ ಹಾರೈಕೆ ನಿಜವಾಗದಿದ್ದರೆ, ಗುಡಿಯ ಮುಂದೆ ಹಾಯ್ದು ಹೋಗುವಾಗಲೆಲ್ಲಾ “ ನಿನ್ನನ್ನ
ನಂಬಿ ನಂಬಿ ಎಕ್ಕುಟ್ಟು ಹೋಗ್ ಬುಟ್ಟೆ ಎಂದು ಹೇಳುತ್ತಾ ಹಿಡಿ ಶಾಪ ಹಾಕುತ್ತಾರೆ. ಈ ಸಾರಿ ನೀ
ಹೇಳಂದಂಗೆ ನಡೀದೆ ಇರಲಿ, ಆಗ ನಿನಗೆ ಮಾಡದುಮಗನೆ”.ಎಂದು ಎಲ್ಲರಿಗೂ ಕೇಳಿಸುವಂತೆ ಹೊಸ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಏಕೆಂದರೆ,
ಅವರ ಪಾಲಿಗೆ ದೇವರೆಂದರೆ ಅತೀತರಲ್ಲ, ಅವರ ಆತ್ಮ ಸಂಗಾತಿಗಳು. ಇದೇ ಅಲ್ಲವೆ? ದೇವರು
ಮತ್ತು ಭಕ್ರನ ನಡುವಿನ ನಿಜವಾದ ಸಂಬಂಧ? ಇಂತಹ ಅವಿನಾಭಾವ ಸಂಬಂಧವನ್ನು ಆ ಪಾಕಿಸ್ತಾನದ ಬಡ
ಮುಸ್ಲಿಂನು ಅಲ್ಲಾನ ಜೊತೆ ಹೊಂದಿರಬೇಕೆಂದು ನನ್ನ ಊಹೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ