Sunday, 14 June 2015

ರೈತರ ಪಾಲಿಗೆ ಮಸಣದ ಮನೆಯಾದ ಮಹಾರಾಷ್ಟ್ರನನ್ನ ಬಿಜಾಪುರದ ವಾಣಿಜ್ಯೋದ್ಯಮಿ ಮಿತ್ರ ಸೋಮಶೇಖರ್ ಅವರ ಹೋಂಡ ಸಿಟಿ ಕಾರಿನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಮಹಾರಾಷ್ಟದ ಏಳೆಂಟು ಜಿಲ್ಲೆಗಳಲ್ಲಿ ( ವಿಧರ್ಭ ಮತ್ತು ಮರಾಠವಾಡ ಪ್ರಾಂತ್ಯದ ) ಕಲೆ ಹಾಕಿದ ಚಿತ್ರಗಳು ಮತ್ತು ದಾಖಲೆಗಳನ್ನು ಜೊತೆಗಿಟ್ಟು ಕೊಂಡು ಅಧ್ಯಯನ ಲೇಖನ ಬರೆಯಲು ಕುಳಿತಿದ್ದೀನಿ. ರೈತರ ಆತ್ಮಹತ್ಯೆ ಕುರಿತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಅವರ ಪಾರಂಪರಿಕ ಕೃಷಿ ವ್ಯವಸ್ಥೆಯಲ್ಲಾದ ಪಲ್ಲಟಗಳು ಇವುಗಳ ಆಧಾರದ ಹದಿನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರ ಕಾರ್ಯ ನಡೆಸಿದೆ

ಇದನ್ನು ವ್ಯವಸ್ಥೆಯ ಕ್ರೌರ್ಯ ಎನ್ನಲೊ, ವ್ಯಂಗ್ಯ ಎನ್ನಲೋ ತಿಳಿಯುತ್ತಿಲ್ಲ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಅಂದರೆ 2004 ರಿಂದ 2014 ಡಿಸಂಬರ್ ವರೆಗೆ ಮಹಾರಾಷ್ಟ ರಾಜ್ಯವೊಂದರಲ್ಲಿ 32 ಸಾವಿರ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 2015 ಜನವರಿಯಿಂದ ಮೇ 30 ಐದು ತಿಂಗಳ ಅವಧಿಯಲ್ಲಿ 1088 ಮಂದಿ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ವರ್ದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 487 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 32 ಸಾವಿರ ರೈತರ ಪೈಕಿ ವಿಧರ್ಭ ಪ್ರಾಂತ್ಯದಲ್ಲಿ 20 ಸಾವಿರ ಮತ್ತು ಮರಾಠವಾಡ ಪ್ರಾಂತ್ಯದಲ್ಲಿ 12 ಸಾವಿರ ಸಾವಿರ ರೈತರು ಸಾವಿಗೆ ಶರಣಾಗಿದ್ದಾರೆ.


ಪ್ರದೇಶಗಳನ್ನು ಪ್ರತಿನಿಧಿಸಿದ ಹಾಗೂ ಪ್ರತಿ ನಿಧಿಸುತ್ತಿರುವ ಜನನಾಯಕರ ಪಟ್ಟಿ ಇಲ್ಲಿದೆ. ಸುಮ್ಮನೆ ಒಮ್ಮೆ ಕಣ್ಣಾಡಿಸಿ

1) ಪ್ರತಿಭಾ ಪಾಟೀಲ್ (ರಾಷ್ಟಪತಿಯಾಗಿದ್ದವರು) ಜಾಲ್ನ ಜಿಲ್ಲೆ, ವಿಧರ್ಭ ಪ್ರಾಂತ್ಯ.

2) ಫಡ್ನಾವಿಸ್ (ಮಹಾರಾಷ್ಟ್ರ ಮುಖ್ಯಮಂತ್ರಿ) ನಾಗಪುರ, ವಿಧರ್ಭ ಪ್ರಾಂತ್ಯ.

3) ವಿಲಾಸ್ ರಾವ್ ದೇಶ್ ಮುಖ್( ಮಾಜಿ ಮುಖ್ಯ ಮಂತ್ರಿ) ಲಾತೂರ್, ಮರಾಠವಾಡ ಪ್ರಾಂತ್ಯ

4) ಸುಶೀಲ್ ಕುಮಾರ್ ಶಿಂದೆ, (ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರಸಚಿವ) ಸೊಲ್ಲಾಪುರ, ಮರಾಠವಾಡ

5) ಗೋಪಿನಾಥ್ ಮುಂಡೆ ( ಮಾಜಿ ಸಚಿವ) ಬೀಡ್ ಜಲ್ಲೆ ( ಮರಾಠವಾಡ ಪ್ರಾಂತ್ಯ.No comments:

Post a Comment