ಭಾನುವಾರ, ಜೂನ್ 29, 2025

 

ವಾರ್ಲಿ ಆದಿವಾಸಿಗಳ ಅಕ್ಕ

ಗೋದಾವರಿ ಅಮ್ಮನವರ ನೆನಪುಗಳು

 ಬಲಪಂಥೀಯರೆ ಮಾನಸಿಕ ಅಸ್ವಸ್ಥರು ಹಾಗೂ ಕಾಮಾಲೆ ಕಣ್ಣಿನ ಲೇಖಕರು ಮತ್ತು ವಿದ್ವಾಂಸರಿಗೆ ಭಾರತದ ಎಡಪಂಥಿಯ ಚಳುವಳಿಗಳ ನಾಯಕರು ಎಂದರೆ ಒಂದು ರೀತಿಯಲ್ಲಿ ವಾಸಿಯಾದ ಪಾರಂಪರಿಕ ಕಾಯಿಲೆ . ಅವರನ್ನು ದ್ವೇಷಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುವ ಮಹಾನುಭಾವರು ಒಮ್ಮೆ ಎಡಪಂಥೀಯ ಚಳುವಳಿಯಲ್ಲಿ ಗುರುತಿಸಿಕೊಂಡಿದೆ ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣ ಸಮುದಾಯದಿಂದ ಬಂದವರು ಮತ್ತು ಜಾತಿ , ಧರ್ಮಗಳ ಗಡಿಗಳನ್ನು ಮೀರಿ ಅಪ್ಪಟ ಮನುಷ್ಯರಂತೆ ಬದುಕಿದವರು ಅರಿಯಲಿಲ್ಲ .ನಮ್ಮ ದಕ್ಷಿಣ ಭಾರತದಲ್ಲಿ ಕೇರಳದ ನಂಬೂದರಿ ಪಾಡ್ ಅಥವಾ ಕರ್ನಾಟಕದಲ್ಲಿ ನಮ್ಮ ನಡುವೆ ಗುರುವಿನ ಸ್ಥಾನದಲ್ಲಿರುವ ಡಾ .ಜಿ . ರಾಮಕೃಷ್ಣ ಅವರು ಹಾಗೂ ಅವರ ಬದ್ಧತೆಯ ಬದುಕು ಮತ್ತು ಸಿದ್ಧಾಂತವನ್ನು ಒಮ್ಮೆ ತೆರೆದ ಮನಸ್ಸಿನಿಂದ ಎಲ್ಲರೂ ಗಮನಿಸುವುದು ಒಳಿತು .    


ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತದ ಬುಡಕಟ್ಟು ಜನಾಂಗದ ಬವಣೆ ಮತ್ತು ಹೋರಾಟದ ಕುರಿತು ಅಧ್ಯಯನ ಮಾಡುವ ಪಶ್ಚಿಮ ಬಂಗಾಳದ ಉತ್ತರಭಾಗ ಡಾರ್ಜಿಲಿಂಗ್ ಜಿಲ್ಲೆಯ ಸಿಲುಗುರಿ , ನಕ್ಸಲ್ ಬಾರಿ ಹಾಗೂ ನ್ಯೂ ಜಲಪಗುರಿ ಜಿಲ್ಲೆ ಕ್ಷೇತ್ರ ಕಾರ್ಯ ಕೈಗೊಂಡಿದ್ದೆ . ಸಿಲಿಗುರಿಯಲ್ಲಿರುವ ಉತ್ತರ ಬಂಗಾಳದ ವಿಶ್ವ ವಿದ್ಯಾನಿಲಯದ ಇತಿಹಾಸದ ಪ್ರಾಧ್ಯಾಪಕ ನನ್ನೆದುರು ಭಾರತದ ಬುಡಕಟ್ಟು ಜನಾಂಗದ ಹೋರಾಟ ಇತಿಹಾಸವನ್ನು ತೆರೆದಿಟ್ಟಾಗ ನಿಜಕ್ಕೂ ನಾನು ಆಶ್ಚರ್ಯಚಕಿತನಾದೆ . ಕಳೆದ ನಾಲ್ಕರಿಂದ ನಾನು ಹತ್ತಿರದಿಂದ ಬಲ್ಲಂತೆ ಬಂಗಾಳಿಗಳು ಯಾವುದೇ ವಿಷಯವನ್ನು ಗ್ರಹಿಸಿದರೆ , ಅತ್ಯಂತ ಆಳವಾಗಿ ಎಲ್ಲಾ ಆಯಾಮಗಳಲ್ಲಿ ಗ್ರಹಿಸಿ ಅದನ್ನು ದಾಖಲಿಸುವುದು ಅವರ ವಿಶಿಷ್ಣ ಲಕ್ಷಣವಾಗಿದೆ . ಪ್ರೊಫೆಸರ್ ನನ್ನೆದೆರು ಮಹಾರಾಷ್ಟ ç ವಾರ್ಲಿ ಎಂಬ ಸ್ವಾತಂತ್ರ ö ಪೂರ್ವದ ಬುಡಕಟ್ಟು ಜನಾಂಗದ ಬವಣೆ ಮತ್ತು ಅವರ ಹೋರಾಟಕ್ಕೆ ಅಸ್ತಿಭಾರವಾಗಿ ನಿಂತ ಗೋದಾವರಿ ಪರುಳೇಕರ್ ಎಂಬ ಹೆಣ್ಣು ಮಗಳ ಕಥನವನ್ನು ನನ್ನೆದುರು ಬಿಚ್ಚಿಟ್ಟು , ಸಂಪೂರ್ಣ ಮಾಹಿತಿ ಒದಗಿಸಿದರು .  

 ಭಾರತೀಯ ಜನಾಂಗದ ಇತಿಹಾಸದಲ್ಲಿ ಮಹತ್ವದ ಘಟನೆಯಾದ ವಾರ್ಲಿ ಆದಿವಾಸಿ ದಂಗೆಯು - ೧೯೪೫ ಅವಧಿಯಲ್ಲಿ ೧೯೩೮ ರಲ್ಲಿ ಜಿಲ್ಲೆಯಲ್ಲಿ ಥಾಣೆ ಸಂಭವಿಸಿತು . ಪ್ರದೇಶದ ಸ್ಥಳೀಯ ಜನಸಂಖ್ಯೆಯಲ್ಲಿ ಶೇಕಡಾ ಐವತ್ತೆ öÊ ದರಷ್ಟು ಇದ್ದ ವಾರ್ಲಿ ಬುಡಕಟ್ಟು ಸಮುದಾಯದ ಜನರು ಅಮಾಯಕರು ಮತ್ತು ಅನಕ್ಷರಸ್ಥ . ಜನರು ಭೂಮಾಲೀಕರು ಮತ್ತು ಲೇವಾದೇವಿದಾರರಿಂದ ವ್ಯಾಪಕವಾದ ಶೋಷಣೆಯಿಂದ ಬಳಲುತ್ತಿದ್ದಾಗ , ದಂಗೆಯು ಹುಟ್ಟಿಕೊಂಡಿತು , ಸುಮಾರು ಐದು ಸಾವಿರ ಮಂದಿ ಬುಡಕಟ್ಟು ಜನಾಂಗದವರು ದಿನವೊಂದಕ್ಕೆ ಹನ್ನೆರೆಡು ಆಣೆಗಳ ರೂಪದಲ್ಲಿ ( ಎಪ್ಪತ್ತೈದು ಪೈಸೆ ) ದೈನಿಕ ವೇತನವನ್ನು ಪಡೆಯುವವರೆಗೆ ಕೃಷಿ ಕೂಲಿ ಕೆಲಸ ಮಾಡಲು ನಿರಾಕರಿಸಿದರು . ಪ್ರತಿರೋಧದ ಕ್ರಿಯೆಯು ಸ್ಥಳೀಯ ಸಮುದಾಯಕ್ಕೆ ಒಂದು ಮಹತ್ವದ ತಿರುವು ನೀಡಿತು , ಭವಿಷ್ಯದ ಹಕ್ಕು ಆಧಾರಿತ ಚಳುವಳಿಗಳಿಗೆ ಭದ್ರ ಅಡಿಪಾಯ ಹಾಕಿದು . ಬುಡಕಟ್ಟು ಜನಾಂಗವನ್ನು ಶೋಷಿಸಿದ ಭೂಮಾಲೀಕರು ಮತ್ತು ಲೇವಾದೇವಿದಾರರ ದಬ್ಬಾಳಿಕೆಯ ವರ್ತನೆಗಳಿಂದ ವಾರ್ಲಿ ದಂಗೆಗೆ ಉತ್ತೇಜನ ದೊರಕಿತು . ಆರಂಭಿಕ ಪ್ರತಿರೋಧವು ತಲಸರಿ ತಾಲೂಕಿನ ಜರಿ ಎಂಬ ಗ್ರಾಮದಲ್ಲಿ ಪ್ರಾರಂಭವಾಯಿತು .                

 ಮಹಿಳೆಯರು ದಂಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಮತ್ತು ತಮ್ಮ ಸಮುದಾಯದ ಪುರುಷರನ್ನು ಬೆಂಬಲಿಸುತ್ತಾರೆ ಒಂದು ದಿಗೆ ನ್ಯಾಯಕ್ಕಾಗಿ ಹೋರಾಟ ಸಕ್ರಿಯವಾಗಿ ಭಾಗವಹಿಸಿದರು . ಆದಿವಾಸಿಗಳಿಂದ ಗೋದುತೈ ಎಂದರೆ , ಸ್ಥಳೀಯ ಭಾಷೆಯಲ್ಲಿ ಹಿರಿಯ ಅಕ್ಕ ಎಂದು ಕರೆಸಿಕೊಂಡ ಶ್ರೀಮತಿ ಗೋದಾವರಿ ನೈತಿಕವಾಗಿ ಬೆಂಬಲ ನಿಂತರು . ಮಹಾರಾಷ್ಟ ç ಪ್ರಥಮ ಕಾನೂನು ಪದವೀಧರೆ ಹಾಗೂ ಮೇಲ್ವರ್ಗದ ಬ್ರಾಹ್ಮಣ ಸಮುದಾಯದಿಂದ ಬಂದಿದ್ದ ಗೋದಾವರಿಯವರು ಆದಿವಾಸಿಗಳಿಗೆ ಆತ್ಮಸ್ಥರ್ಯವನ್ನು ತುಂಬಿ ಭಾರತೀಯ ಕಿಸಾನ್ ಸಭಾ ಸಂಘಟನೆಯ ಮೂಲಕ ಆಧಾರ ಸ್ಥಂಭವಾಗಿ ನಿಂತರು . ಗೋದಾವರಿಯವರು ಆದಿವಾಸಿ ಮಹಿಳೆಯರನ್ನು ಚಳುವಳಿಗೆ ಸೇರಿಸಲು ಪ್ರೋತ್ಸಾಹಿಸಿದರು , ಮತ್ತು ಅವರು ಶ್ರೀಮಂತ ಭೂಮಾಲೀಕರ ದೌರ್ಜನ್ಯಕ್ಕೆ ಹೆದರಿ ಭೂಗತರಾದ ಆದಿವಾಸಿಗಳನ್ನು ರಕ್ಷಿಸುವುದರಿಂದ ಹಿಡಿದು , ಅವರು ಎದುರಿಸಿದ ದಬ್ಬಾಳಿಕೆಯ ಬಗ್ಗೆ ಸಭೆಗಳಲ್ಲಿ ಮಾತನಾಡುವವರೆಗೆ ವಿವಿಧ ಪಾತ್ರಗಳನ್ನು ವಹಿಸಿಕೊಂಡರು . ಪೊಲೀಸ್ ದೌರ್ಜನ್ಯ ಮತ್ತು ಅತ್ಯಾಚಾರದ ಬೆದರಿಕೆಗಳನ್ನು ಎದುರಿಸಿ ನಿಂತ ವಾರ್ಲಿ ಆದಿವಾಸಿ ಮಹಿಳೆಯರಿಗೆ ನೀಡಿದ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವು ಚಳುವಳಿಯ ಯಶಸ್ಸಿಗೆ ಪ್ರಮುಖ ಕಾರಣವಾಯಿತು .                 

 ಗೋದಾವರಿಯವರು ಮಹಾರಾಷ್ಟ ç ಪುಣೆಯ ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ೧೯೦೭ ಆಗಸ್ಟ್ ೧೪ ರಂದು ಜನಿಸಿದರು .ಇವರ ತಂದೆ ಲಕ್ಷ ö ್ಮಣರಾವ್ಗೋಖಲೆಯವರು ಮಹಾರಾಷ್ಟ ç ಪ್ರಸಿದ್ಧ ವಕೀಲರು . ಬ್ರಿಟಿಷ್ ಆಡಳಿತದ ಅನೇಕ ದಾವೆಗಳನ್ನು ನಿರ್ವಹಿಸಿ ಹೇರಳವಾದ ಸಂಪತ್ತನ್ನು ಗಳಿಸಿದ್ದರು . ಜೊತೆಗೆ ಅವರ ಖ್ಯಾತ ಸಮಾಜ ಸುಧಾರಕ ಗೋಪಾಲಲಕೃಷ್ಣ ಗೋಖಲೆಯವರ ಸೋದರ ಸಂಬಧಿಯಾಗಿದ್ದರು . ಕಾರಣದಿಂದ ತಮ್ಮ ಪುತ್ರಿಯನ್ನು ವಕೀಲಿ ವೃತ್ತಿಯಲ್ಲಿ ತಮ್ಮ ಉತ್ತರಾಧಿಯನ್ನಾಗಿ ಮಾಡುವ ಉದ್ದೇಶದಿಂದ ಅವರನ್ನು ಪುಣೆಯ ಪರ್ಗುಸನ್ ಶಾಲೆಯಲ್ಲಿ ಓದಿಸಿ ಪದವಿ ಮತ್ತು ಕಾನೂನು ಪದವಿ ಪಡೆಯುವಂತೆ ಮಾಡಿದರು . ಆದರೆ , ಗೋದಾವರಿಯವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ವಿದ್ಯಾರ್ಥಿ ಸಂಘಟನೆಯ ದಿಗೆ ಸೆರೆಮನೆ ವಾಸ ಅನುಭವಿಸಿದರು . ವಸಾಹತುಶಾಹಿಯ ವಿರುದ್ಧದ ಹೋರಾಟ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು .      

 ಬಲಪಥೀಯ ಚಿಂತನೆಗಳಿ ಪ್ರಭಾವಿತರಾದ ಅವರ ತಂದೆ ಲಕ್ಷಣರಾವ್ರವರು ತಮ್ಮ ಪುತ್ರಿಯನ್ನು ಮನೆಯಿಂದ ಹೊರ ಹಾಕಿ , ಪುತ್ರಿಗೆ ಮಾಸಿಕ ದುಮೆ öÊ ದುರುಪಾಯಿಗಳನ್ನು ಜೀವನ ನಿರ್ವಹಣೆಗೆ ನೀಡಲಾಯಿತು .ಬ್ರಿಟಿಷ್ ಸರ್ಕಾರ zಆಡಳಿತದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಲಕ್ಷ ö ್ಮಣರಾಯರಿಗೆ ತಮ್ಮ ಪುತ್ರಿಯ ಸ್ವಾತಂತ್ರ ö ಯದ ಹೋರಾಟ ಮತ್ತು ಸಾಮಾಜಿಕ ಕಳವಳ ಇವೆಲ್ಲವೂ ಇರಿಸು ಮುರುಸು ಉಂಟು ಮಾಡಿತು . ಮನೆ ತೊರೆದ ಗೋದಾವರಿಯವರು ಮುಂಬೈ ನಗರಕ್ಕೆ ಹೋಗಿ ' ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ' ಎಂಬ ಸಾಮಾಜಿಕ ಸೇವಾ ಸಂಸ್ಥೆಯ ಸದಸ್ಯರಾದರು . ಅವರು ಸಂಸ್ಥೆಗೆ ಸದಸ್ಯರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು . ೧೯೩೭ ರಲ್ಲಿ ಮುಂಬೈನಲ್ಲಿ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಿದ ಗೋದಾವರಿ , ೧೯೩೮ ರಲ್ಲಿ ಸ್ಥಳೀಯ ಮನೆಗಳ ಬಡ ಅನಕ್ಷರಸ್ಥ ಮಹಿಳೆಯರ ಕಾರ್ಮಿಕರು ವರ್ಗದ ಭಾಗವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು . ಇದೇ ಸಂದರ್ಭದಲ್ಲಿ ಬಿ . ಆರ್ . ಅಂಬೇಡ್ಕರ್ ರವರು ಸ್ಥಾಪಿಸಿದ್ದ ಸ್ವತಂತ್ರ ಕಾರ್ಮಿಕ ಪಕ್ಷ ಸಂಘಟನೆಯ ಕಾರ್ಯದರ್ಶಿ ಶಾಮರಾವ್ ಪರುಳೇಕರ್ವರ ಪರಿಚಯ ಅವರನ್ನು ೧೯೩೯ ರಲ್ಲಿ ವಿವಾಹವಾದರು . ಪರುಳೇಕರ್ ಮಾರ್ಕ್ಸ್ವಾದಿ ಚಿಂತನೆಗಳಿಪ್ರಭಾವಿತವಾಗಿದೆ . ಇಂತಹ ದಂಪತಿಗಳು ಮುಂದಿನ ದಿನಗಳಲ್ಲಿ ತಮ್ಮ ಇಡೀ ಬದುಕನ್ನು ಕಾರ್ಮಿಕರು , ರೈತರು ಮತ್ತು ಕೃಷಿಕಾರ್ಮಿಕರ ಪರವಾಗಿ ಹೋರಾಡುತ್ತಾ ಅವರ ಬದುಕನ್ನು ಹಸನುಗೊಳಿಸುವ ಕಾರ್ಯಪ್ರವೃತ್ತರಾದರು .ಈ           ಈ ಸಂದರ್ಭದಲ್ಲಿ ಜಿಲ್ಲೆಯ ಜಿಲ್ಲೆಯ ವಾರ್ಲಿ ಎಂಬ ಬುಡಕಟ್ಟು ಜನಾಂಗದ ಆದಿವಾಸಿಗಳು ಶೋಚನೀಯ ಬದುಕು ಅವರ ಕಣ್ಣಿಗೆ ಬಿದ್ದಿತು . 

 ಮಹಾರಾಷ್ಟ ç ಥಾಣೆ ಜಿಲ್ಲೆಯ ಉಂಬರ್ಗಾಂವ್ , ದಹನು , ಪಾಲ್ಘರ್ ಮತ್ತು ಜವಹರ್ ತಾಲೂಕುಗಳಲ್ಲಿ ಅಲ್ಲಲ್ಲಿ ಚದುರಿದಂತೆ ವಾಸಿಸುತ್ತಿದ್ದ ಬುಡಕಟ್ಟು ರೈತರಲ್ಲಿ ಬಹುಪಾಲು ಮಂದಿ ವಾರ್ಲಿ ಎಂಬ ಆದಿವಾಸಿ ಸಮುದಾಯದ ನಿವಾಸಿಗಳಾಗಿದ್ದರು . ಶ್ರೀಮಂತ ಭೂಮಾಲೀಕರು ಮತ್ತು ಲೇವಾದೇವಿಯವರು ಬೇಸಾಯ ಮತ್ತು ಬೇಟೆಯನ್ನು ಕುಲಕಸುಬಿನಂತೆ ಪಾಲಿಸಿಕೊಂಡು ಬಂದಿದ್ದ ಆದಿವಾಸಿಗಳಿಗೆ ನೀಡಿದ ಸಾಲದ ಹಣಕ್ಕೆ ಅಧಿಕ ಬಡ್ಡಿಯನ್ನು ವಿಧಿಸುವುದರ ಮೂಲಕ ಅವರ ಮೊತ್ತಕ್ಕೆ ಭೂಮಿಯನ್ನು ಖರೀದಿಸಿದರು ಮತ್ತು ವಾರ್ಲಿ ಆದಿವಾಸಿಗಳ ಕೃಷಿ ಜೊತೆಗೆ ಕೆಲವರಿಗೆ ಭೂಮಿಯಲ್ಲಿ ಬಾಡಿಗೆಗೆ ನೀಡಿದ್ದರು .ಕೃಷಿ ಉತ್ಪನ್ನದ ಅರ್ಧದಷ್ಟು ಪಾಲನ್ನು ಬಾಡಿಗೆಯ ರೂಪದಲ್ಲಿ ರೈತರು ಪಡೆಯಲು ಬಯಸಿದ್ದರು . ಅಷ್ಟು ಇದೆ , ಭೂಮಾಲೀಕರ ಭೂಮಿಯಲ್ಲಿ ಯಾವುದೇ ಕೂಲಿ ಇಲ್ಲದೆ ಕೆಲಸ ಮಾಡಬೇಕಾಗಿತ್ತು . ರೀತಿಯಲ್ಲಿ ಅವರು ಜೀತದಾಳುಗಳಾಗಿದ್ದಾರೆ ಜೀವನವಾಗಿದ್ದಾರೆ .ಕೆಲವು ಭೂಮಾಲೀಕರು ವಿಸ್ತಾರವಾದ ಹುಲ್ಲುಗಾವಲುಗಳನ್ನು ಹೊಂದಿದ್ದರು ಮತ್ತು ಅರಣ್ಯ ಗುತ್ತಿಗೆದಾರರಾಗಿ ಬ್ರಿಟಿಷ್ ಸರ್ಕಾರದಕಾರ್ಯ ನಿರ್ವಹಿಸಿದ . ಬುಡಕಟ್ಟು ರೈತರನ್ನು ಅತ್ಯಲ್ಪ ವೇತನಕ್ಕೆ ಕಾರ್ಮಿಕರಾಗಿ ನೇಮಿಸಲಾಯಿತು ಇದು ವೆಟ್ ಅಥವಾ ಬಲವಂತದ ಕಾರ್ಮಿಕ ಪದ್ಧತಿ ಪ್ರದೇಶದಲ್ಲಿ ವ್ಯಾಪಕವಾಗಿತ್ತು . ಮಳೆಗಾಲದಲ್ಲಿ ಬುಡಕಟ್ಟು ರೈತರು ಭತ್ತದ ಕೃಷಿಗಾಗಿ ಲೇವಾದೇವಿಗಾರರಿಂದ ಸಾಲ ಮಾಡುತ್ತಿದ್ದರು . ಅದಕ್ಕಾಗಿ ಅವರು ಐವತ್ತರಿಂದ ನೂರರಷ್ಟು ಬಡ್ಡಿಯನ್ನು ಪಡೆಯಬೇಕಾಗಿತ್ತು .                               

 ಇಂತಹ ಸಂದರ್ಭದಲ್ಲಿ ಗೋದಾವರಿಯವರು ತಮ್ಮ ಪತಿಯ ಜೊತೆಗೂಡಿ ಜಿಲ್ಲೆಗೆ ಪ್ರವೇಶಿಸಿ ಅಲ್ಲಿಯೇ ನೆಲೆಸಿದರು .ಗೋದಾವರಿಯವರು ಪ್ರತಿದಿನ ಕಾಲ್ನಡಿಗೆಯಲ್ಲಿ ಎಂಟತ್ತು ಗ್ರಾಮಗಳಿಗೆ ಭೇಟಿ ನೀಡಿ , ಅಲ್ಲಿನ ಆದಿವಾಸಿಗಳ ಗುಡಿಸಲಿನಲ್ಲಿ ಕುಳಿತು ಅವರ ಕಷ್ಟ ಕೋಟಲೆಗಳನ್ನು ಕಣ್ಣಾರೆ ನೋಡಿದರು . ಶ್ರೀಮಂತ ಜಮೀನ್ದಾರರು ಆದಿವಾಸಿ ಸಮುದಾಯದ ಮಹಿಳೆಯರನ್ನು ತಮ್ಮ ದಾಹಕ್ಕೆ ಬಳಸಿಕೊಳ್ಳುತ್ತಾರೆ .ಆ ಶೋಷಣೆಗೆ ಒಪ್ಪದ ಮಹಿಳೆಯರನ್ನುಮಾಟಮಂತ್ರ ಮಾಡುವ ಹೆಂಗಸು ಎಂದು ಆರೋಪ ಹೊರಿಸಿ ತಮ್ಮ ಸೇವಕರಿಂದ ಹತ್ಯೆ ಮಾಡಿಸುತ್ತಿದ್ದರು . ಅವರ ಜಮೀನಿನಲ್ಲಿ ದುಡಿಯುತ್ತಿದ್ದ ರೈತರ ಜಾನುವಾರುಗಳು ಅಸ್ಮಾತ್ ಸತ್ತು ಹೋದರೆ , ಅವರ ಪತ್ನಿಯರನ್ನು ನೊಗಕ್ಕೆ ಕಟ್ಟಿ ಭೂಮಿಯ ಉಳುಮೆ ಮಾಡಿಸುವಂತೆ . ಇಡೀ ಪ್ರದೇಶಕ್ಕೆ ಶ್ರೀಮಂತ ಭೂ ಕಾನೂನು ಮತ್ತು ನ್ಯಾಯಾಲಯ ಎಲ್ಲವೂ ಆಗಿದ್ದರು .ಯಾವುದೇ ಗ್ರಾಮದಲ್ಲಿ ಯಾವುದೇ ಘಟನೆ ನಡೆದರೂ ಸ್ಥಳೀಯಜಮೀನ್ದಾರರು ನ್ಯಾಯಾಧೀಶರಾಗಿ ತೀರ್ಪು ನೀಡಿದ್ದಾರೆ .ಅವರ ದಬ್ಬಾಳಿಕೆ ಮತ್ತು ಶೋಷಣೆಗೆ ಅವರೇ ನ್ಯಾಯಧೀಶರಾಗಿದ್ದಾರೆ .   


  ಇಂತಹ ದುಸ್ಥಿತಿಯಲ್ಲಿ ಬದುಕುತ್ತಿದ್ದ ವಾರ್ಲಿ ಆದಿವಾಸಿಗಳ ಕತ್ತಲೆಯ ಬದುಕಿಗೆ ಗೋದಾವರಿಯವರು ಸೂರ್ಯನಂತೆ ಅಲ್ಲಿಗೆ ಆಗಮಿಸಿದರು .ಅಧಿಕಾರಿಗಳು ,ಅಧಿಕಾರಿಗಳು ಭೂಮಾಕರ ಗುಲಾಮರಂತೆ ಅವರು ನೀಡುತ್ತಿದ್ದ ಪುಕ್ಕಟೆ ಕಿವುಡರು ಮತ್ತು ಕುರುಡರು .ಅತ್ಯುತ್ತಮ ಇಂಗ್ಲಿಷ್ ಭಾಷೆ , ಅಗಾಧವಾದ ಜ್ಞಾನ ಹಾಗೂ ಮಹಾರಾಷ್ಟ à ಪ್ರಥಮ ಕಾನೂನು ಪದವೀಧರೆ ಎಂಬ ಕೀರ್ತಿಗೆ ಪಾತ್ರರಾದ ಗೋದಾವರಿ ಅಮ್ಮನವರ ನೈತಿಕವಾಗಿ ಎದುರಿಸುವ ಶಕ್ತಿಯು ಬ್ರಿಟಿಷ್ ಅಧಿಕಾರಿಗಳು , ಜಮೀನ್ದಾರರಿಗೆ ಮತ್ತು ಲೇವಾದೇವಿಗಾರರಿಗೆ ಇಲ್ಲ . ಅಧಿಕವಾಗಿ ವಿಸ್ತಾರವಾದ ಹುಲ್ಲುಗಾವಲು ಪ್ರದೇಶಗಳನ್ನು ಹೊಂದಿದ್ದ ಭೂ ಹಸಿರು ಕೃಷಿ ಕಾರ್ಮಿಕರಿಗೆ ಒಂದು ಟನ್ ಹುಲ್ಲು ಕತ್ತರಿಸಲು ಕೇವಲ ಎರಡು ರೂಪಾಯಿ ಕೂಲಿಯನ್ನು ನಿಗದಿ ಪಡಿಸಿದ್ದರು . ಕೂಲಿಕಾರರಾದ ಪತಿ ಮತ್ತು ಪತ್ನಿ ಎರಡು ಮೂರು ದಿನಗಳ ಕಾಲ ಕತ್ತರಿಸಿದರೂ ಕೂಡ ಒಂದು ಟನ್ ಹುಲ್ಲು ಸಂಗ್ರಹವಾಗಿದ್ದಾರೆ .ಈ ಹಸಿರು ಹುಲ್ಲನ್ನು ಭೂ ಮುಂಬೈನಗರದ ಹಸು , ಸಾಕಾಣಿಕೆದಾರರಿಗೆ ಮಾರಾಟ ಮಾಡಿ ಅಪಾರ ಹಣವನ್ನು ಗಳಿಸಿ .    

 ವಾರ್ಲಿ ಆದಿವಾಸಿಗಳ ಸಾಮೂಹಿಕ ದಂಗೆಗೆ ಅವರ ಅಸಹ್ಯಕರ ಪರಿಸ್ಥಿತಿ ಮತ್ತು ಭೂಮಾಲೀಕರಿಂದ ನಡೆದ ಕ್ರೂರವಾದ ದಮನಕಾರಿ ನೀತಿಯು ಪ್ರಮುಖ ಕಾರಣವಾಗಿತ್ತು . ಅವರು ಒಂದು ಶತಮಾನಕ್ಕೂ ಹೆಚ್ಚು ಕಾಲ ಪರಿಸ್ಥಿತಿಯಲ್ಲಿ ಕೊಳೆತು ಹೋಗಿದ್ದರು . ಅವರು ಸಂಪೂರ್ಣವಾಗಿ ಹೊಂದಿಕೊಳ್ಳಲಾಗದೆ ಹಾಗೂ ದ್ವೇಷಿಸುತ್ತಿದ್ದ ಪರಿಸ್ಥಿತಿಯಿತ್ತು . ಆದರೆ ಭಯ ಮತ್ತು ಅಸಹಾಯಕತೆಯು ಅವರ ಎದೆಯೊಳಗೆ ಉರಿಯುತ್ತಿರುವ ಜ್ವಾಲೆಯನ್ನು ನಿಗ್ರಹಿಸಿತ್ತು . ಅವರು ಹತಾಶೆಯಿಂದ ಜೀವಿಸುತ್ತಾ , ತಮ್ಮ ಗುಲಾಮಗಿರಿಯನ್ನು ಕೊನೆಗೊಳಿಸಲು ಉತ್ಸುಕರಾಗಿದ್ದಾರೆ , ಆದರೆ ಅದನ್ನು ಹೇಗೆ ಮಾಡಬೇಕೆಂದು ತಿಳಿದಿರಲಿಲ್ಲ . ಇಂತಹ ದಯನೀಯ ಸ್ಥಿತಿಯಲ್ಲಿ ಅವರಿಗೆ ದೋದಾವರಿ ಮತ್ತು ಅವರ ಪತಿ ಶಾಮರಾವ್ ಪರುಳೇಕರ್ ಮಹಾರಾಷ್ಟ ç ದಲ್ಲಿ ಸ್ಥಾಪಿಸಿದ ಕಮ್ಯುನಿಸ್ಟರ ನೇತೃತ್ವದ ಭಾರತೀಯ ಕಿಸಾನ್ ಸಭಾದ ಪ್ರವೇಶವು ಆತ್ಮಸ್ಥರ್ಯವನ್ನು ತುಂಬಿತು .           

 ನಿರತರ ಏಳುವರ್ಷಗಳ ಕಾಲ ವಾರ್ಲಿ ಆದಿವಾಸಿಗಳ ಪರವಾಗಿ ಹೋರಾಡಿದ ಗೋದಾವರಿ ಮತ್ತು ಅವರ ಪತಿ ಪರುಳೇಕರ್ ಹಲವಾರು ಬಾರಿ ಜೈಲುವಾಸ ಅನುಭವಿಸಿದರು . ೧೯೬೧ ರಲ್ಲಿ ಆದಿವಾಸಿಗಳ ಪ್ರಗತಿ ಮಂಡಳಿ ಎಂಬ ಸಂಘಟನೆಯನ್ನು ಸ್ಥಾಪಿಸಿದರು . ೧೯೭೦ ರಲ್ಲಿ ಅವರು ತಮ್ಮ ಹೋರಾಟದ ಬದುಕನ್ನು ಮರಾಠಿ ಭಾಷೆಯಲ್ಲಿ '' ಜೆನ್ಹಾ ಮನುಸ್ ಜಗ ಹೋದೋ '' ಹೆಸರಿನಲ್ಲಿ ( ಮನುಷ್ಯ ಜಾಗೃತೆ ) ಬರೆದು ಪ್ರಕಟಿಸಿದರು . ಕೃತಿಗೆ ೧೯೭೨ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಜವಹರಲಾಲ್ ನೆಹರು ಮತ್ತು ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರೆಯಿತು . ಕೃತಿಯು ಇಂಗ್ಲೀಷ್ , ಜಪಾನ್ ಮತ್ತು ಕನ್ನಡ ಭಾಷೆಗೆ ಅನುವಾದಗೊಂಡಿದೆ . ಪುಣೆಯಲ್ಲಿ ನೆಲೆಸಿದ್ದ ಧಾರವಾಡದ ಹೆಣ್ಣುಮಗಳೊಬ್ಬರು ಕೃತಿಯನ್ನು ಮಾನವ ಎಚ್ಚೆತ್ತಾಗ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದು , ಬೆಂಗಳೂರಿನ ಕ್ರಿಯಾ ಪ್ರಕಾಶನದಿಂದ ಪ್ರಕಟವಾಗಿದೆ . ಗೋದಾವರಿ ಅಮ್ಮನವರು ತಳ ಸಮುದಾಯಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಅವರಿಗೆ ಮಹಾರಾಷ್ಟ ç ದಲ್ಲಿ ಲೋಕಮಾನ್ಯ ತಿಲಕ್ ಹಾಗೂ ಸಾವಿತ್ರಿಬಾಯಿ ಪುಲೆ ಸ್ಮಾರಕ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಿದವು .

 ೧೯೯೬ ರಲ್ಲಿ ಅವರು ನಿಧನರಾಗುವವರೆಗೂ ರೈತರು ಮತ್ತು ಕೃಷಿಕಾರ್ಮಿಕರ ಘನತೆಯ ಬದುಕಿಗೆ ಹೋರಾಡಿದರು . ಗೋದಾವರಿಯವರು ಭಾರತೀಯ ಕಿಸಾನ್ ಸಭಾ ಸಂಘಟನೆಯ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು . ಕಮ್ಯೂನಿಸ್ಟ್ ಕಾರ್ಯರ್ತರನ್ನು ಉಳಿದವರಿಗೆ ಅಪರಿಚಿತರಾಗಿ ಉಳಿದು ಹೋದ ಇಂತಹ ಮಹಾನ್ ವ್ಯಕ್ತಿತ್ವದ ಜೀವನಗಾಥೆಯನ್ನುಹೊರಜಗತ್ತಿಗೆ ನಾವು ತಲುಪಿಸಬೇಕಾಗಿದೆ . ಆದರೆ , ಇಂದಿನ ಕೇಂದ್ರ ಸರ್ಕಾರದ ಬಲಪಂಥೀಯ ಶಿಕ್ಷಣದಿಂದ ಶಾಲಾ , ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಇಂತಹ ಅಮೂಲ್ಯ ಜೀವಗಳಿಗೆ ಸ್ಥಾನಇಲ್ಲವಾಗಿದೆ . ನಾವು ನಮ್ಮ ಭವಿಷ್ಯದ ತಲೆಮಾರನ್ನು ಶಿಕ್ಷಣದ ಮೂಲಕ ರೂಪಿಸುತ್ತಿರುವ ಬಗೆಯನ್ನು ನೆನಪಿಸಿಕೊಂಡರೆ , ಭಯವಾಗುತ್ತದೆ 

(ಜುಲೈ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ಬಹುಸಂಸ್ಕೃತಿ ಅಂಕಣ ಬರಹ)

ಡಾ . ಎನ್ . ಜಗದೀಶ್ ಕೊಪ್ಪ

 

 

 

ಸೋಮವಾರ, ಏಪ್ರಿಲ್ 14, 2025

ಬಾಬಾ ಸಾಹೇಬ್ ಅಂಬೇಡ್ಕರ್ ಗ್ರಹಿಸಿದ ಬುದ್ಧ ಮತ್ತು ಆತನ ಧರ್ಮ.


ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ನವ ಯಾನ ಹೆಸರಿನಲ್ಲಿ ಬೌದ್ಧ ಧರ್ಮವನ್ನು ವ್ಯಾಖ್ಯಾನಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಇಂದು ಪಾಶ್ಚಿಮಾತ್ಯ ರಾಷ್ಟ್ರಗಳ ಚಿಂತಕರು ಮತ್ತು ವಿದ್ವಾಂಸರು ಕೊಂಡಾಡುತ್ತಿದ್ದಾರೆ. ಇಂಗ್ಲೇಂಡಿನ ಖ್ಯಾತ ವಿದ್ವಾಂಸ ಸ್ಟಿಂಗ್ ಎಂಬುವರು ‘’ ನನ್ನ ಆಲೋಚನಾ ವಿಧಾನದ ಪ್ರಕಾರ, ಡಾ. ಬಿ.ಆರ್. ಅಂಬೇಡ್ಕರ್ ಬುದ್ಧನ ಚಿಂತನೆಗಳಿಗೆ ಹೊಸ ತಿರುವು ನೀಡುವ ಅತ್ಯಂತ ಸ್ಪಷ್ಟ ಮತ್ತು .ಆಮೂಲಾಗ್ರ ವಕ್ತಾರರು ಎಂದಿದ್ದಾರೆ. ಜೊತೆಗೆ ಅವರು ಬೌದ್ಧ ಧರ್ಮದ ಸಮಸ್ಯೆಗಳ ಮೂಲಕ್ಕೆ ಇಳಿದು .ಹೊಸ ವ್ಯಾಖ್ಯಾನದೊಂದಿಗೆ ಆಧುನಿಕ ಜಗತ್ತಿಗೆ ಬೌದ್ಧಧರ್ಮದ ಬಗ್ಗೆ ಪ್ರಚೋದನಕಾರಿ ದೃಷ್ಟಿಕೋನವನ್ನು ನಮ್ಮೆಲ್ಲರಿಗೂ ನೀಢಿದ್ದಾರೆ ಎಎಂದು ನಾನು ಭಾವಿಸುತ್ತೇನ’’ ಎಂದು ನುಡಿದಿದ್ದಾರೆ.
ಭಾರತದ ತಳ ಸಮುದಾಯದಲ್ಲಿ ಜನಿಸಿ, ಹಿಂದೂಧರ್ಮದ ಶ್ರೇಣೀಕೃತ ಸಮಾಜದಲ್ಲಿ ಎಲ್ಲಾ ನೋವು ಮತ್ತು ಅಪಮಾನಗಳನ್ನುಅನುಭವಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು 1935 ರಲ್ಲಿ ‘’ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ, ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ದೃಢನಿಶ್ಚಯ ಮಾಡಿದ್ದೇನೆ. ನನಗೆ ಮತ್ತು ನನ್ನ ಸಮುದಾಯಕ್ಕೆ ಯಾವ ಧರ್ಮವು ಹೆಚ್ಚು ಘನತೆ ಮತ್ತು ಮಾನವೀಯತೆಯನ್ನು ನೀಡುತ್ತದೆ ಎಂಬುದನ್ನು ನಾನು ಅಧ್ಯಯನ ಮಾಡಲಿದ್ದೇನೆ." ಎಂದು ಘೋಷಿಸಿಕೊಂಡಿದ್ದರು 1936 ರಲ್ಲಿ ಒಮ್ಮೆ ನಾಗಪುರಕ್ಕೆ .ಹೋಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಸೇವಾಗ್ರಾಮಕ್ಕೆ ಭೇಟಿ ನೀಡಿ, ಹಿಂದೂ ದೇವಾಲಯಗಳಿಗೆ ನಾಯಿ, ಪಶು, ಪಕ್ಷಿಗಳಿಗೆ ಪ್ರವೇಶವಿದೆ ಆದರೆ, ಅಸ್ಪೃಶ್ಯರಿಗೆ ಏಕೆ ಪ್ರವೇಶವಿಲ್ಲ? ಎಂದು ಮಹಾತ್ಮನ ಮರ್ಮಕ್ಕೆ ತಾಗುವಂತೆ ಪ್ರಶ್ನೆ ಕೇಳಿದ್ದರು. ವಾರ್ದಾ ಬಳಿಯ ಸೇವಾಗ್ರಾಮಕ್ಕೆ ಹತ್ತಿರವಿದ್ದ ರೈಲ್ವೆ ನಿಲ್ದಾಣಕ್ಕೆ ಗಾಂಧೀಜಿಯವರು ತಮ್ಮ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಜೊತೆ ಅಂಬೇಡ್ಕರ್ ಅವರನ್ನು ಟಾಂಗಾ ಗಾಡಿಯಲ್ಲಿ ಕಳಿಸಿಕೊಟ್ಟರು.
ಅಂಬೇಡ್ಕರ್ ಅವರನ್ನು ಮುಂಬೈ ರೈಲಿಗೆ ಹತ್ತಿಸಿ ವಾಪಸ್ ಬಂದ ಮಹಾದೇವ ದೇಸಾಯಿ ಅವರನ್ನು ಗಾಂಧೀಜಿಯವರು , ‘ಡಾಕ್ಟರ್ ಅಂಬೇಡ್ಕರ್ ಮತ್ತೇನಾದರೂ ಹೇಳಿದರೆ? ಎಂದು ಪ್ರಶ್ನಿಸಿದಾಗ, ದೇಸಾಯಿಯವರು ‘’ ಹಿಂದೂ ಧರ್ಮದ ಆಚರಣೆ ಬಗ್ಗೆ ತಮ್ಮ ಆಕ್ರೋಶವನ್ನು ದಾರಿಯುದ್ದಕ್ಕೂ ಅಂಬೇಡ್ಕರ್ ಹೊರ ಹಾಕಿದರು’’ ಎಂದು ನುಡಿದರು. ಗಾಂಧೀಜಿಯವರು ತಣ್ಣನೆಯ ಧ್ವನಿಯಲ್ಲಿ ‘’ ಮಹಾದೇವ, ನಾವು ಅಂಬೇಡ್ಕರ್ ಅವರ ಸಿಟ್ಟನ್ನು ಮತ್ತು ನೋವನ್ನು ಶಾಂತವಾದ ಮನಸ್ಸಿನಿಂದ ಗ್ರಹಿಸಬೇಕು ಅವರ ಆಕ್ರೋಶಕ್ಕೆ ಒಂದು ಮೌಲ್ಯವಿದೆ’’ ಎಂದು ನುಡಿದಿದ್ದರು. ಅಷ್ಟು ಮಾತ್ರವಲ್ಲದೆ, ದಲಿತರಿಗೆ ಪ್ರವೇಶವಿಲ್ಲದ ದೇಗುಲಗಳಿಗೆ ನಾನು ಹೋಗುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿಕೊಂಡರು.
ಡಾ.ಅಂಬೇಡ್ಕರ್ ಹಿಂದೂ ಧರ್ಮದಿಂದ ಅನ್ಯ ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದ ಕಾರಣದಿಂದಾಗಿ, ಮುಂದಿನ ಎರಡು ದಶಕಗಳ ಕಾಲ 1935 ರಿಂದ 1955 ರವರೆಗೆ ಭಾರತದಲ್ಲಿ ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಸೃಷ್ಟಿಯಾದ ಜೈನ ಧರ್ಮ, ಬೌದ್ಧ ಧರ್ಮ ಮತ್ತು ವಿದೇಶಿ ನೆಲದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದ್ದರು. ಎಲ್ಲಾ ಧರ್ಮಗಳಲ್ಲಿಯೂ ಅನೇಕ ಹುಳುಕುಗಳಿದ್ದವು ಜೊತೆಗೆ ಹಲವು ಪಂಗಡಗಳಿದ್ದವು. ಹಿಂದೂ ಧರ್ಮದಲ್ಲಿ ಶೈವ- ವೈಷ್ಣವ ಪಂಗಡಗಳು ಇದ್ದಂತೆ, ಜೈನ ಧರ್ಮದಲ್ಲಿ ಶ್ವೇತಾಂಬರ, ದಿಗಂಬರ ಎಂಬ ಪಂಗಡಗಳು ಇದ್ದವು. ಇಸ್ಲಾಂ ಧರ್ಮದಲ್ಲಿ ಶಿಯಾ ಮತ್ತು ಸುನ್ನಿ ಹಾಗೂ ಕ್ರೈಸ್ತಧರ್ಮದಲ್ಲಿ ಕ್ಯಾಥೋಲಿಕ್ ಮತ್ತು ಪ್ರಟೊಸ್ಟೆಂಟ್ ಪಂಗಡಗಳಿದ್ದವು. ತಮ್ಮ ಚಿಂತನೆ ಮತ್ತು ಆಶಯಗಳಿಗೆ ತೀರಾ ಹತ್ತಿರವಾದ ಬುದ್ಧನ ಬೌದ್ಧಧರ್ಮವನ್ನು ಅವರು ಅಪ್ಪಿಕೊಂಡರೂ ಸಹ, ಹಿನಯಾನ ಮತ್ತು ಮಹಾಯಾನ ಎಂಬ ಪಂಗಡಗಳಿದ್ದ ಬೌದ್ಧ ಧರ್ಮವನ್ನು ನವಯಾನ ಎಂಬ ಪರಿಷ್ಕೃತ ವ್ಯಾಖ್ಯಾನದೊಂದಿಗೆ ಪರಿಚಯಿಸಿ, ತಾವು ಮತಾಂತರಗೊಳ್ಳುವುದರ ಜೊತೆಗೆ ಐದು ಲಕ್ಷ ಮಂದಿ ತಮ್ಮ ಅನುಯಾಯಿಗಳನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿದರು.
ಮಗಧ ಸಾಮ್ರಾಜ್ಯದ ದೊರೆ ಅಶೋಕನು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಾಂಪ್ರದಾಯಕ ದಿನ ಅಂದರೆ, 1956ರ ಅಕ್ಟೋಬರ್ 14 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಡಾ.ಅಂಬೇಡ್ಕರ್ ಅವರು ತಾವು ಬಹಿರಂಗವಾಗಿ ಘೋಷಿಸಿದ್ದ ‘’ ‘ಹಿಂದೂವಾಗಿ ಸಾಯಲಾರೆ’’ ಎಂಬ ಮಾತಿನಂತೆ ನಡೆದುಕೊಂಡರು ಬೌದ್ಧಧರ್ಮವು ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳ ಆಶಯಗಳಿಗೆ ತೀರಾ ಹತ್ತಿರವಾಗಿತ್ತು. ಏಕೆಂದರೆ, ಅದು ಸ್ಥಳೀಯ ಧರ್ಮವಾಗಿತ್ತು; ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂನಂತೆ ಭಾರತದ ನೆಲಕ್ಕೆ ಆಮದು ಮಾಡಿಕೊಂಡ ಧರ್ಮವಾಗಿರಲಿಲ್ಲ. ಯಾವುದೇ ಸ್ಥಿರವಾದ ನಂಬಿಕೆಗಳು ಅಥವಾ ಆಚರಣೆಗಳಿಗೆ ಅಂಟಿಕೊಳ್ಳದೆ .ಸ್ವತಂತ್ರವಾಗಿ ಬದುಕುವ ಅವಕಾಶವನ್ನು ಬೌದ್ಧ ಧರ್ಮವು ನೀಡಿತ್ತು.. ಧರ್ಮದ ನಿಜವಾದ ಉದ್ದೇಶ ಏನು? ಮತ್ತು ಯಾವುದು ಅರ್ಥಪೂರ್ಣವಾಗಿದೆ ಎಂಬುದನ್ನು ನೋಡಲು ಹಾಗೂ ವ್ಯಕ್ತಿಯೊಬ್ಬ ಸ್ವಂತ ಜೀವನದ ಪ್ರಯೋಗಾಲಯದಲ್ಲಿ ತನ್ನನ್ನು ಪ್ರಯೋಗಿಸಿಕೊಳ್ಳಲು ಅವಕಾಶ ನೀಡಿತ್ತು. ಇದು ಅಂಬೇಡ್ಕರ್ ಅವರ ತತ್ವಕ್ಕೆ ಅನುಗುಣವಾಗಿತ್ತು. ಬುದ್ಧನು ತನ್ನ ಅನುಯಾಯಿಗಳಿಗೆ "ಬೋಧನೆಗಳು ಮತ್ತು ಬರಹಗಳನ್ನು ಕುರುಡಾಗಿ ನಂಬಬೇಡಿ, ಆದರೆ ಅವುಗಳನ್ನು ನಿಮ್ಮ ಸ್ವಂತ ಜೀವನದಲ್ಲಿ ಪರೀಕ್ಷಿಸಿ" ಎಂದು ಹೇಳಿದ್ದನು. . ಬುದ್ಧನು ಎಲ್ಲಾ ಮಾನವರು ಹೊಂದಿರುವ ಸಾಮರ್ಥ್ಯವನ್ನು ಪ್ರತಿನಿಧಿಸುವ ಓರ್ವ ಅಪ್ಪಟ ಮನುಷ್ಯ ನಾನು ಎಂದು ಘೋಷಿಸಿಕೊಂಡಿದ್ದನು. ನಾನು ದೇವರ ಪ್ರವಾದಿ ಅಥವಾ ದೇವರ ಪುತ್ರ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

1957 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಧಾನಾ ನಂತರ ಅವರ ಕೊನೆಯ ಕೃತಿಯಾದ "ಬುದ್ಧ ಮತ್ತು ಆತನ ಧಮ್ಮ" .ಪ್ರಕಟವಾಯಿತು. ಕೃತಿಯ ಪರಿಚಯದಲ್ಲಿ, ಅಂಬೇಡ್ಕರ್ ಅವರು ಬೌದ್ಧಧರ್ಮದ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲ್ಲಿದ್ದಾರೆ. ಬುದ್ಧನ ಬೋಧನೆಗಳನ್ನು ಸ್ವೀಕರಿಸುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ ಮತ್ತು ನಿಕಾಯಗಳನ್ನು ಅವಲಂಬಿಸಿ, ಬೌದ್ಧೇತರ ವ್ಯಕ್ತಿಗೆ ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಸ್ಪಷ್ಟ ಮತ್ತು ಎದ್ದುಕಾಣುವ ಹೇಳಿಕೆಯನ್ನು ಪ್ರಸ್ತುತಪಡಿಸುವುದು ಒಂದು ಜವಾಬ್ದಾರಿಯಾಗಿದೆ ಎಂದು ಅವರು ವಾದಿಸುತ್ತಾರೆ. ನಂತರ ಅವರು ಬೌದ್ಧಧರ್ಮದ ಸಮಸ್ಯೆಗಳನ್ನು ಚರ್ಚಿಸಲು ಮುಂದುವರಿಯುತ್ತಾರೆ. ಮೊದಲ ಸಮಸ್ಯೆ ಬುದ್ಧನ ಜೀವನದಲ್ಲಿನ ಮುಖ್ಯ ಘಟನೆಯಾದ ಪರಿವ್ರಾಜಕ್ಕೆ ಅಂದರೆ, ಸನ್ಯಾತ್ವಕ್ಕೆ ಸಂಬಂಧಿಸಿದೆ ಘಟನೆಗಳ ಬಗ್ಗೆ ವೆಳಕು ಚೆಲ್ಲಿದ್ದಾರೆ.. ಬುದ್ಧನು ತನ್ನ ಜೀವನದಲ್ಲಿ ಮೊದಲ ಬಾರಿಗೆ ಮೂರು ದೃಶ್ಯಗಳನ್ನು ( ಸಾವು, ರೋಗಿ, ವೃದ್ಧ) ನೋಡಿದನು ಮತ್ತು ಇಪ್ಪತ್ತೊಂಬತ್ತನೇ . 29 ನೇ ವಯಸ್ಸಿನಲ್ಲಿ. ಬುದ್ಧನು ಪರಿವ್ರಾಜವನ್ನು ಆ ಮೂರು ದೃಷ್ಟಿಕೋನಗಳಿಂದಾಗಿ ತೆಗೆದುಕೊಂಡನು ಎಂಬ ಹೇಳಿಕೆಯನ್ನು ನಂಬುವುದು ಸಮಂಜಸವಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ.
ಬೌದ್ಧಧರ್ಮದ ಎರಡನೇ ಸಮಸ್ಯೆಗೆ ನಾಲ್ಕು ಆರ್ಯ ಸತ್ಯಗಳು ಕಾರಣ. ಬೌದ್ಧಧರ್ಮದ ಸುವಾರ್ತೆಯನ್ನು ನಿರಾಶಾವಾದದ ಸುವಾರ್ತೆಯಾಗಿ ಮಾಡುವ ಮೂಲಕ ನಾಲ್ಕು ಆರ್ಯ ಸತ್ಯಗಳು ಮೂಲತಃ ಬುದ್ಧನ ಬೋಧನೆಗಳ ಭಾಗವಾಗಿದ್ದವೆ? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ; ನಾಲ್ಕು ಆರ್ಯ ಸತ್ಯಗಳು ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸುತ್ತವೆ. ಈ ನಾಲ್ಕು ಆರ್ಯ ಸತ್ಯಗಳು "ಸನ್ಯಾಸಿಗಳಿಂದ ನಂತರದ ದಿನಗಳಲ್ಲಿ ಸಂಚಯನ" ಆಗಿರಬಹುದು ಎಂದು ಅಂಬೇಡ್ಕರ್ ಅನುಮಾನಿಸುತ್ತಾರೆ.
ಮೂರನೆಯ ಸಮಸ್ಯೆಯು ಸಂದರ್ಭೋಚಿತವಾದದ್ದು, ಅದು ಆತ್ಮ ಮತ್ತು ಕರ್ಮಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬುದ್ಧನು ಆತ್ಮದ ಅಸ್ತಿತ್ವವನ್ನು ನಿರಾಕರಿಸಿದನು ಆದರೆ ಮತ್ತೊಂದೆಡೆ, ಅವನು ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತವನ್ನು ಸಹ ದೃಢಪಡಿಸಿದನು. ಮೊದಲನೆಯದಾಗಿ ಆತ್ಮವಿಲ್ಲದಿದ್ದರೆ ಪುನರ್ಜನ್ಮ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅಂಬೇಡ್ಕರ್ ಎತ್ತುತ್ತಾರೆ. ಈ ಅಂಶವು ಸ್ವತಃ ವಿರೋಧಾಭಾಸವಾಗಿದೆ ಮತ್ತು ಇದನ್ನು ಪರಿಹರಿಸಬೇಕು ಮತ್ತು ಅದರ ಮೇಲೆ ಬೆಳಕು ಚೆಲ್ಲಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು.
ನಾಲ್ಕನೆಯದು ಬುದ್ಧನ ಭಿಕ್ಕುವನ್ನು ಸೃಷ್ಟಿಸುವ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ. ಭಿಕ್ಕುವಿನ ಸೃಷ್ಟಿಯ ಹಿಂದಿನ ಬುದ್ಧನ ಉದ್ದೇಶ ಪರಿಪೂರ್ಣ ಮನುಷ್ಯನನ್ನು ಸೃಷ್ಟಿಸುವುದೋ ಅಥವಾ ಸಮಾಜ ಸೇವಕನನ್ನು ಸೃಷ್ಟಿಸುವುದೋ ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಒಬ್ಬ ಭಿಕ್ಕುವು ಪರಿಪೂರ್ಣ ಮನುಷ್ಯನಾಗಿದ್ದರೆ, ಅವನಿಂದ ಬೌದ್ಧಧರ್ಮದ ಪ್ರಚಾರಕ್ಕೆ ಯಾವುದೇ ಪ್ರಯೋಜನವಿಲ್ಲ ಏಕೆಂದರೆ ಅವನು ಸ್ವಾರ್ಥಿಯಾಗುತ್ತಾನೆ. ಎಂದು ಅಂಬೇಡ್ಕರ್ ಅವರ ನಿಲುವಾಗಿತ್ತು. ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಇದು ಅಂಬೇಡ್ಕರ್ ಅವರ ದೃಢವಾದ ನಿಲುವಾಗಿತ್ತು. ಈ ಕಾರಣದಿಂದ ಗೌತಮ ಬುದ್ಧನ ಅನುಯಾಯಿಗಳಾಗಿದ್ದ ಬ್ರಾಹ್ಮಣರು ರಚಿಸಿದ್ದ ಬುದ್ಧನ ಚರಿತ್ರೆಯನ್ನು ( ಜಾತಕ ಕಥೆಗಳು) ಅವರು ನಿರಾಕರಿಸಿದರು. ಅಲ್ಲಿಯವರೆಗೆ ಅಶ್ವಘೋಶನ ಬುದ್ಧ ಚರಿತೆ ನಮ್ಮ ಮುಂದಿತ್ತು.
ಬುದ್ಧ ಮತ್ತು ಅವನ ಧಮ್ಮ ಎಂಬ ಸಂಪುಟವನ್ನು ಎಂಟು ಪುಸ್ತಕಗಳ ವಿಭಾಗಳಾಗಿ ವಿಂಗಡಿಸಲಾಗಿದೆ. ಪುಸ್ತಕ ಒಂದರಲ್ಲಿ ಬುದ್ಧನ ಪ್ರಯಾಣ ಮತ್ತು ಬೋಧಿಸತ್ವ ಬುದ್ಧನಾಗುವ ಗಮನಾರ್ಹ ಪ್ರಯಾಣವನ್ನು ಚರ್ಚಿಸುತ್ತದೆ. ಬುದ್ಧನ ಆರಂಭಿಕ ಜೀವನದ ಸ್ಪಷ್ಟ, ಎದ್ದುಕಾಣುವ ಮತ್ತು ವಿವರವಾದ ವಿವರವನ್ನು ನೀಡುತ್ತದೆ. ಸಿದ್ಧಾರ್ಥ ಗೌತಮ ಆಧುನಿಕ ನೇಪಾಳದ ಲುಂಬಿನಿಯಲ್ಲಿ ಶುದ್ಧೋಧನ ಮತ್ತು ಮಹಾಮಾಯರಿಗೆ ಜನಿಸಿದನು. ಎಂಟನೇ ವಯಸ್ಸಿನಲ್ಲಿ, ಬುದ್ಧನು ತನ್ನ ಶಿಕ್ಷಣವನ್ನು ಪ್ರಾರಂಭಿಸಿದನು. ಅವನು ತನ್ನ ಕಾಲದಲ್ಲಿ ಸಬ್ಬಮಿತನ ಮಾರ್ಗದರ್ಶನದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ತಾತ್ವಿಕ ವ್ಯವಸ್ಥೆಗಳನ್ನು ಕರಗತ ಮಾಡಿಕೊಂಡನು. ಇದಲ್ಲದೆ, ಬುದ್ಧನು ಕಪಿಲವಸ್ತುವಿನಲ್ಲಿ ತನ್ನ ಆಶ್ರಮವನ್ನು ಹೊಂದಿದ್ದ ಭಾರದ್ವಾಜನಿಂದ ಏಕಾಗ್ರತೆ ಮತ್ತು ಧ್ಯಾನದ ವಿಜ್ಞಾನವನ್ನು ಕಲಿತನು. ಹದಿನಾರನೇ ವಯಸ್ಸಿನಲ್ಲಿ, ಸಿದ್ಧಾರ್ಥನು ಯಶೋಧರೆಯನ್ನು ವಿವಾಹವಾದನು ಮತ್ತು ದೀರ್ಘಾವಧಿಯ ದಾಂಪತ್ಯ ಜೀವನದ ನಂತರ ರಾಹುಲ ಎಂಬ ಮಗನನ್ನು ಪಡೆದನು.
ಪುಸ್ತಕದ ಮೊದಲ ಭಾಗವು ಸಿದ್ಧಾರ್ಥನ ಜೀವನದ ಕುತೂಹಲಕಾರಿ ಕಥೆಗಳನ್ನು ಹೇಳುತ್ತದೆ. ಎರಡನೇ ಪುಸ್ತಕದಲ್ಲಿ (ಎಂಟು ಭಾಗಗಳನ್ನು ಹೊಂದಿದೆ) ಬುದ್ಧನ ಮತಾಂತರ ಯೋಜನೆಯ ಸ್ಪಷ್ಟ ವಿವರಣೆಯೊಂದಿಗೆ ಪ್ರಾರಂಭವಾಗುತ್ತದೆ. ಬುದ್ಧನ ವಿಷಯಗಳ ಯೋಜನೆಯಲ್ಲಿ, ಮತಾಂತರಕ್ಕೆ ಎರಡು ಅರ್ಥಗಳಿವೆ - ಉಪಸಮೇತ ಎಂಬ ಸಮಾರಂಭವನ್ನು ಒಳಗೊಂಡಿರುವ ಸಂಘ ಎಂಬ ಭಿಕ್ಕುಗಳ ಕ್ರಮಕ್ಕೆ ಮತಾಂತರ ಮತ್ತು ಯಾವುದೇ ಸಮಾರಂಭವನ್ನು ಒಳಗೊಂಡಿರದ ಗೃಹಸ್ಥನ ಮತಾಂತರ. ಪುಸ್ತಕದ ಎರಡನೇ ಭಾಗವು ಪರಿವ್ರಾಜನ ನಂತರದ ಜೀವನದ ಸ್ಪಷ್ಟ ವಿವರಣೆಯನ್ನು ಹೇಳುತ್ತದೆ, . ಬುದ್ಧನು ಆರಂಭದಲ್ಲಿ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಇಷ್ಟವಿರಲಿಲ್ಲವಾದರೂ, ಆಪ್ತ ಶಿಷ್ಯನಾದ ಆನಂದರ ಮನವೊಲಿಕೆ ಮತ್ತು ಕೋರಿಕೆಯ ಮೇರೆಗೆ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಒಪ್ಪಿಕೊಂಡನು. ಬುದ್ಧನ ತಾಯಿಯಾದ ಮಹಾಪ್ರಜಾಪತಿ ಗೌತಮಿಗೆ ಎಂಟು ಮುಖ್ಯ ನಿಯಮಗಳನ್ನು ಜಾರಿಗೊಳಿಸುವ ಕೆಲಸವನ್ನು ನೀಡಲಾಯಿತು, ಅದು ಅವಳ ಬಿಕ್ಕುಣಿಯ ಜೀವನವನ್ನು ಪ್ರಾರಂಭಿಸಿತು. ಎರಡನೆಯ ಕಥೆಯು ಚಾಂಡಾಲಿಕಾ ಪ್ರಕೃತಿಯ ಕಥೆಯನ್ನು ಮತ್ತು ಅವಳು ಬುದ್ಧನಿಂದ ಜ್ಞಾನೋದಯವನ್ನು ಪಡೆದು ನಂತರ ಬಿಕ್ಕುಣಿ ಸಂಘಕ್ಕೆ ಹೇಗೆ ಸೇರಿಕೊಂಡಳು ಎಂಬುದನ್ನು ಹೇಳುತ್ತದೆ.
ಮೂರನೆಯ ಪಠ್ಯವು ಬುದ್ಧನ ಬೋಧನೆಗಳ ಸಂಪೂರ್ಣ ಮತ್ತು ವಿವರವಾದ ಚಿತ್ರಣವನ್ನು ನೀಡುತ್ತದೆ. ಯಾವುದೇ ಇತರ ಧಾರ್ಮಿಕ ಪ್ರಚಾರಕರಂತೆ ಬುದ್ಧನು ತನ್ನ ಸ್ವಂತ ಧರ್ಮದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರಲಿಲ್ಲ.ಬುದ್ಧನು ತಾನು ಪ್ರವಾದಿ ಅಥವಾ ದೇವರ ಸಂದೇಶವಾಹಕನ ಅಂತಹ ವಿವರಣೆಗಳನ್ನು ನಿರಾಕರಿಸಿದನು. ಮಾನವಕುಲಕ್ಕೆ ಮೋಕ್ಷವನ್ನು ನೀಡಲು ನಾನು 'ದೇವರ ಸಂದೇಶ ವಾಹಕನಲ್ಲ' ' ಮಾರ್ಗ ದಾತ' ಎಂದು ಬುದ್ಧನು ತನ್ನನ್ನು ಕರೆದುಕೊಂಡನು . ಮೂರನೇ ಪುಸ್ತಕದ ಮೂರನೇ ಮತ್ತು ನಾಲ್ಕನೇ ಭಾಗಗಳಲ್ಲಿ, ಬುದ್ಧನ ಪ್ರಕಾರ ಧಮ್ಮ ಎಂದರೇನು ಮತ್ತು ಯಾವುದು ಧಮ್ಮವಲ್ಲ ಎಂಬುದನ್ನು ಸಂಪೂರ್ಣವಾಗಿ ಡಾ. ಅಂಬೇಡ್ಕರ್ ಸ್ಪಷ್ಟಪಡಿಸುತ್ತಾರೆ. .
ಬುದ್ಧನ ಪ್ರಕಾರ ಧಮ್ಮ ಅಥವಾ ಧರ್ಮ ಎಂದರೆ, ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಧಮ್ಮ, ಜೀವನದಲ್ಲಿ ಪರಿಪೂರ್ಣತೆಯನ್ನು ತಲುಪುವುದು ಧಮ್ಮ. ನಿರ್ವಾಣದಲ್ಲಿ ಬದುಕುವುದು ಧಮ್ಮ, ಹಂಬಲವನ್ನು ತ್ಯಜಿಸುವುದು ಧಮ್ಮ, ಎಲ್ಲಾ ಸಂಯುಕ್ತ ವಸ್ತುಗಳು ಅಶಾಶ್ವತ ಎಂದು ನಂಬುವುದು ಧಮ್ಮ, ಕರ್ಮವು ನೈತಿಕ ಕ್ರಮದ ಸಾಧನ ಎಂದು ಒಪ್ಪಿಕೊಳ್ಳುವುದು ಧಮ್ಮ. ಬುದ್ಧನ ಪ್ರಕಾರ ಪ್ರಕಾರ , ಅಲೌಕಿಕದಲ್ಲಿ ನಂಬಿಕೆ ಇಡುವುದು ಧರ್ಮವಲ್ಲ., ದೇವರಲ್ಲಿ ನಂಬಿಕೆ ಮೂಲಭೂತವಾಗಿ ಧಮ್ಮದ ಭಾಗವಲ್ಲ., ಬ್ರಹ್ಮನೊಂದಿಗೆ ಐಕ್ಯತೆಯನ್ನು ಆಧರಿಸಿದ ಧಮ್ಮವು ಸುಳ್ಳು ಧಮ್ಮವಾಗಿದೆ., ಆತ್ಮದಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ, ಯಜ್ಞಗಳಲ್ಲಿ ನಂಬಿಕೆ ಇಡುವುದು ಧರ್ಮವಲ್ಲ.,ಧಮ್ಮದ ಬಗ್ಗೆ ಪುಸ್ತಕಗಳನ್ನು ಓದುವುದು ಧಮ್ಮವಲ್ಲ.
ನಾಲ್ಕನೇ ಪುಸ್ತಕದ ಭಾಗವು ಧರ್ಮದಿಂದ ಬೌದ್ಧ ಧಮ್ಮ ಹೇಗೆ ಭಿನ್ನವಾಗಿದೆ, ಧರ್ಮದ ಉದ್ದೇಶಗಳು ಮತ್ತು ಅವುಗಳಲ್ಲಿ ನೈತಿಕತೆಯ ಸ್ಥಾನದ ಕುರಿತು ವಿಸ್ತಾರವಾದ ವಿವರಗಳನ್ನು ಅಂಬೇಡ್ಕರ್ ಅವರ ಕೃತಿಯು ನಮಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. . ಐದನೇ ಪುಸ್ತಕವು ಸಂಘಕ್ಕೆ ಪ್ರಮುಖ ಮಾರ್ಗಸೂಚಿಗಳು, ಭಿಕ್ಕುಗಳ ಕರ್ತವ್ಯಗಳು ಮತ್ತು ಭಿಕ್ಕುವಿನ ಬಗ್ಗೆ ಬುದ್ಧನ ಪರಿಕಲ್ಪನೆಯನ್ನು ವಿವರಿಸುತ್ತದೆ. ಆರನೇ ಪುಸ್ತಕವು ಬುದ್ಧ ನಸಮಕಾಲೀನರ ಬಗ್ಗೆ ವಿವರ ನೀಡುತ್ತದೆ.
ಏಳನೇ ಪುಸ್ತಕವು ಬುದ್ಧನ ಕೊನೆಯ ದಿನಗಳ ಬಗ್ಗೆ ವಿವರಿಸುತ್ತದೆ. ಬುದ್ಧನು ಸುಮಾರು ಎಂಬತ್ತನೇ ವಯಸ್ಸಿನಲ್ಲಿ ಮಲ್ಲರ ಗಣರಾಜ್ಯದ ಕುಶಿನಗರದಲ್ಲಿ ನಿಧನರಾನು. ಅವನ ಚಿತಾಭಸ್ಮಕ್ಕಾಗಿ ಜಗಳವಾಯಿತು, ನಂತರ ಅದನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಯಿತು. ಎಂಟನೇ ಮತ್ತು ಕೊನೆಯ ಪುಸ್ತಕವು ಬುದ್ಧನ ಬಗ್ಗೆ ಮಾತನಾಡುತ್ತದೆ - ಅವನ ದೈಹಿಕ ನೋಟ, ಅವನ ನಾಯಕತ್ವದ ಸಾಮರ್ಥ್ಯ, ಅವನ ಇಷ್ಟಾನಿಷ್ಟಗಳು, ಅವನ ಮಾನವೀಯತೆ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು. ಬುದ್ಧನು ಜಗತ್ತಿನಾದ್ಯಂತ ಉಲ್ಲೇಖಿಸಿದ ಶ್ರೇಷ್ಠ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮೂಲಕ ಅಂಬೇಡ್ಕರ್ ಪುಸ್ತಕವನ್ನು ಮುಕ್ತಾಯಗೊಳಿಸುತ್ತಾರೆ. ಬುದ್ಧನ ಜೀವನ ಮತ್ತು ಬೋಧನೆಗಳ ಬಗ್ಗೆ ಶಿಕ್ಷಣ ಪಡೆಯಲು ಬಯಸುವ ಯಾರಿಗಾದರೂ ಅಂಬೇಡ್ಕರ್ ಅವರ ' ಬುದ್ಧ ಮತ್ತು ಅವನ ಧಮ್ಮ' ಪುಸ್ತಕವು ನಿಸ್ಸಂದೇಹವಾಗಿ ಒಳ್ಳೆಯ ಮಾರ್ಗದರ್ಶಿಯಾಗಿದೆ.
ಬುದ್ಧನ ನಿಧನಾನಂತರ ಓರ್ವ ಬ್ರಾಹ್ಮಣನು ಬುದ್ಧನ ಆಪ್ತ ಶಿಷ್ಯ ಆನಂದನನ್ನು ಭೇಟಿಯಾಗಿ ‘’ ಮಿತ್ರಾ, ಬುದ್ಧ ತೀರಿಕೊಂಡನಲ್ಲವೆ? ಆತನ ಸ್ಥಾನವನ್ನು ತುಂಬುವ ವ್ಯಕ್ತಿ ನಿಮ್ಮಲ್ಲಿ ಯಾರಿದ್ದಾರೆ? ಎಂದು ಕೇಳಿದಾಗ, ಆನಂದನ ಉತ್ತರ ಹೀಗಿತ್ತು. ‘’ ಗೆಳೆಯಾ, ಬುದ್ಧನಂತಹ ಮತ್ತೊಬ್ಬ ಮೇರು ವ್ಯಕ್ತಿ ಇರಲು ಸಾಧ್ಯವೆ? ಬುದ್ಧಗುರು ಸತ್ಯವನ್ನು ಶೋಧಿಸಿದರು ಮತ್ತು ಆಚರಣೆಗೆ ತಂದರು, ನಾವು ಈಗ ಆಚರಣೆಗೆ ತರಬೇಕಾಗಿರುವುದು ಬುದ್ಧ ಗುರುವಿನ ಸಿದ್ಧಾಂತಗಳನ್ನು ಮಾತ್ರ. ಇನ್ನೊಬ್ಬ ಬುದ್ಧನ ಹುಡುಕಾಟವಲ್ಲ.’’

ಕ್ರಿಸ್ತಪೂರ್ವದಲ್ಲಿ ಆನಂದನು ಆಚರಣೆಗೆ ತಂದ ತಥಾಗತ ಬುದ್ಧನ ಸಿದ್ಧಾಂತಗಳನ್ನು ಇಪ್ಪತ್ತನೇ ಶತಮಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಆಚರಣೆಗೆ ತಂದರು ಎಂಬ ಮಾತು ಅತಿಶಯದ ಮಾತಾಗಲಾರದು.