ಅಮಾರ್ತ್ಯಸೇನ್
ಈ ಜಗತ್ತು ಕಂಡ
ಅಪರೂಪದ ಅರ್ಥಶಾಸ್ತ್ರಜ್ಞ ಮಾತ್ರವಲ್ಲ, ಮಾನವೀಯ ಮುಖವಿಲ್ಲದ ಬಂಡವಾಳ
ಮತ್ತು ಆರ್ಥಿಕ ಚಟುವಟಿಕೆಯ ಸುತ್ತಾ
ಲಾಗ ಹೊಡೆಯುತ್ತಿದ್ದ ಅರ್ಥಿಕ ಚಿಂತನೆಗಳಿಗೆ ಮನುಕುಲದ
ಚಿಂತನೆಯ ಲೇಪ ಹಚ್ಚಿದ ಅಪರೂಪದ
ಮಹಾನ್ ಮಾನವತಾವಾದಿ. ಕಳೆದ 65 ವರ್ಷಗಳಿಂದ ಜಗತ್ತಿನಾದ್ಯಂತ ಹಲವಾರು ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿರುವ
ಲಿಂಗತಾರತಮ್ಯದ ಬಗ್ಗೆ ಹೋರಾಡುತ್ತಾ, ಮಹಿಳೆಯರು
ಮತ್ತು ಮಕ್ಕಳ ಹಕ್ಕು ಮತ್ತು
ಘನತೆಯ ಬದುಕಿಗಾಗಿ, ಮಾನವಅಭಿವೃದ್ಧಿಯನ್ನು ಧ್ಯಾನಿಸುತ್ತಾ
ಅರ್ಥಶಾಸ್ತ್ರದ ವ್ಯಾಖ್ಯಾನಕ್ಕೆ ಹೊಸ ಅರ್ಥ ಕೊಟ್ಟ
ಅಮಾತ್ರ್ಯ ಸೇನೆ ತಮ್ಮ ಉದಾತ್ತ
ಚಿಂತನೆಗಾಗಿ ಪ್ರತಿಷ್ಟಿತ ನೊಬಲ್ ಪ್ರಶಸ್ತಿಗೆ ಭಾಜನರಾದವರು.
ಅಶ್ಚರ್ಯಕರ
ಸಂಗತಿಯೆಂದರೆ, ಅಮಾರ್ತ್ಯ ಸೇನ್ ಪ್ರತಿಪಾದಿಸುತ್ತಾ ಬಂದ
ಮಹಿಳೆಯರ ಅಭಿವೃದ್ಧಿಪರವಾದ ಚಿಂತನೆಗಳು ಇದೀಗ ಇಪ್ಪತ್ತೊಂದನೆಯ ಶತಮಾನದ
ಜಾಗತೀಕರಣದ ಮೊದಲ ಒಂದೂವರೆ ದಶಕದಲ್ಲಿ
ಫಲ ನೀಡಿವೆ. ಜಾಗತೀಕರಣ ವ್ಯವಸ್ಥೆಯ
ಅಂಗ ಸಂಸ್ಥೆಗಳಲ್ಲಿ ಒಂದಾಗಿರುವ ಅಂತರಾಷ್ರೀಯ ಹಣ ಕಾಸು ನಿಧಿ(I.M.F)
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಕ್ರಿಸ್ಚಿಯನ್ ಲಗಾರ್ಡೆ ಯವರು ಕಳೆದ
ಆಗಸ್ಟ್ ಕೊನೆಯವಾರದಲ್ಲಿ ಟರ್ಕಿ ದೇಶದ ಅಂಕಾರದಲ್ಲಿ
ನಡೆದ ವಿಶ್ವದ ಇಪ್ಪತ್ತು ರಾಷ್ಟ್ರಗಳ
ಮಹಿಳಾ ಸಮಾವೇಶದಲ್ಲಿ ಮಾತನಾಡುತ್ತಾ, ಉದ್ಯೋಗದಲ್ಲಿ ಸಮಾನ ಅವಕಾಶ ನೀಡಿದ
ರಾಷ್ಟ್ರಗಳ ಒಟ್ಟು ಆಂತರೀಕ
ಉತ್ಪಾದನೆಯ ಪ್ರಮಾಣದಲ್ಲಿ (G.D.P.) ಮಹಿಳೆಯರ ಪಾತ್ರವಿರುವುದನ್ನು
ಸಮೀಕ್ಷೆ ಆಧಾರದ ಸಾಕ್ಷಾಧಾರಗಳ ಮೂಲಕ
ಜಗತ್ತಿನ ಮುಂದಿಟ್ಟಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ,
ಆರೋಗ್ಯ ಮತ್ತು ಉದ್ಯೋಗ ಇವುಗಳಿಗೆ
ತೊಡಗಿಸುವ ಹಣವು ಆಯಾ ರಾಷ್ಟ್ರಗಳ
ಪಾಲಿಗೆ ಭವಿಷ್ಯದಲ್ಲಿ ಪ್ರತಿಫಲ ನೀಡುವ ಅತ್ಯುತ್ತಮ
ಬಂಡವಾಳ ಎಂದು ಲಗಾರ್ಡೆ ಅಭಿಪ್ರಾಯ
ಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಮಾತ್ರ್ಯಸೇನ್
ಪ್ರತಿಪಾದಿಸುತ್ತಾ ಬಂದಿರುವ ಲಿಂಗತಾರಮ್ಯ ಕುರಿತಾದ
ಚಿಂತನೆಗಳು ಜಗತ್ತಿನ ರಾಷ್ಟ್ರಗಳ ಆರ್ಥಿಕ
ಅಭಿವೃದ್ಧಿಯಲ್ಲಿ ನೆರವಾಗತೊಡಗಿವೆ ಎಂದಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ
ಉದೋಗದಲ್ಲಿ ಮಹಿಳೆಯ ಪ್ರಮಾಣ ಶೇಕಡ
25 ಕ್ಕೆ ಹೆಚ್ಚಿದರೆ, ಆರ್ಥಿಕಾಭಿವೃದ್ಧಿಯಲ್ಲಿ ಭಾರತ ಶೇಕಡ 27ರಷ್ಟು,
ಜಪಾನ್ ಶೇಕಡ 9 ರಷ್ಟು ಮತ್ತು
ಅಮೇರಿಕಾ ಶೇಕಡ 5 ರಷ್ಟು ಬೆಳವಣಿಗೆ
ಕಾಣಲು ಸಾಧ್ಯ ಎಂದು ತಿಳಿಸಿರುವ
ಕ್ರಿಶ್ಚಿಯನ್ ಲಗಾರ್ಡೆಯವರು, ದಕ್ಷಿಣ ಆಫಿಕಾ ಮತ್ತು
ಏಷ್ಯಾದ ಮುಸ್ಲಿಂ ರಾಷ್ಟ್ರಗಳು ಹೆಣ್ಣು
ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದ
ಮೇಲೆ ಹೇರಲಾಗಿರುವ ಕಾನೂನುಗಳನ್ನು ತೆಗೆದು ಹಾಕಿದರೆ ಅಭಿವೃದ್ಧಿ
ಪಥದಲ್ಲಿ ಸಾಗಲು ಸಾಧ್ಯ ಎಂದು
ಎಚ್ಚರಿಸಿದ್ದಾರೆ. ಇದು
ಅಮಾತ್ರ್ಯ ಸೇನ್ ರವರಿಗೆ ಮತ್ತು
ಅವರ ಚಿಂತನೆಗಳಿಗೆ ಜಾಗತಿಕ ಮಟ್ಟದಲ್ಲಿ ದಕ್ಕಿದ
ಮನ್ನಣೆ ಅಥವಾ ಗೌರವ ಎನ್ನಬಹುದು.
ಆದರೆ,
ತಾವು ಹುಟ್ಟಿ ಬೆಳೆದ ಭಾರತದಲ್ಲಿ
ಪ್ರಧಾನಿಯಾಗಿರುವ ನರೇಂದ್ರ
ಮೋದಿ ಸರ್ಕಾರದ ಕೆಲವು
ಅವಿವೇಕತನದ ನಿರ್ಧಾರಗಳಿಂದ ಅವರು ವಿಚಲಿತರಾಗಿದ್ದಾರೆ. ತಾವು
ನಂಬಿಕೊಂಡ ಸಿದ್ಧಾಂತಗಳೊಂದಿಗೆ ಎಂದೂ ರಾಜಿಯಾಗದ ಅವರು,
ನಮ್ಮನ್ನಾಳುವ ಸರ್ಕಾರಗಳು ಹಾದಿ ತಪ್ಪಿದಾಗಲೆಲ್ಲಾ ತಮ್ಮ
ಹರಿತವಾದ ಮಾತುಗಳು ಮೂಲಕ ಛಾಟಿ
ಏಟು ಬೀಸಿದವರು. ಹಿಂದಿನ ಯು.ಪಿ.ಎ. ಸರ್ಕಾರದಲ್ಲಿ ಪ್ರಧಾನಿಯಾಗಿದ್ದ
ಡಾ. ಮನಮೋಹನ್ ಸಿಂಗ್ ಜಗತ್
ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದರೂ ಸಹ ಅವರ ಸರ್ಕಾರದ
ಹುಳುಕುಗಳನ್ನು ಎತ್ತಿ ತೋರಿಸಿದವರು.
ಅಮಾತ್ರ್ಯಸೇನ್ರವರು ಇದೀಗ ಮಾತುಗಳನ್ನು
ಮಂತ್ರಗಳಾಗಿಸಿಕೊಂಡು, ಭಾರತವನ್ನು ಆಳಲು ಹೊರಟಿರುವ ನರೇಂದ್ರ
ಮೋದಿಯವರ ಹದಿನೇಳು ತಿಂಗಳ ಅವಧಿಯ
ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕಳೆದ
ಆಗಸ್ಟ್ 26 ರಂದು ದೆಹಲಿಯ ಆಕ್ಸ್
ಪರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆಯು
ಸೇನ್ ರವರ ಪ್ರಬಂಧಗಳು ಕುರಿತಾದ
“ ದ ಕಂಟ್ರಿ ಆಪ್
ಫಸ್ಟ್ ಬಾಯ್ಸ್ “ ಎಂಬ ಕೃತಿಯ ಬಿಡುಗಡೆಗಾಗೆ
ಭಾರತಕ್ಕೆ ಬಂದಿದ್ದ ಸಮಯದಲ್ಲಿ ಅಮಾತ್ಯ
ಸೇನ್ ರವರು ಮಾಧ್ಯಮಗಳ ಎದುರು
ಮೋದಿಯ ಸರ್ಕಾರದ ಕಾರ್ಯವೈಖರಿಯನ್ನು ಹೀಗೆ
ಬಣ್ಣಿಸಿದ್ದಾರೆ
“
ಮೋದಿಯವರು ಆರಂಭದ ದಿನಗಳಲ್ಲಿ ಮತ್ತು
ಅಧಿಕಾರಕ್ಕೇರುವ ಮುನ್ನ ಮಾತನಾಡುತ್ತಿದ್ದ ವೈಖರಿ
ಹಾಗೂ ಜನಸಾಮಾನ್ಯರಿಗೆ ಹಂಚುತ್ತಿದ್ದ ಕನಸಿನ ಯೋಜನೆಗಳನ್ನು ಗಮನಿಸಿದಾಗ,
ಇವೆಲ್ಲವನ್ನೂ ಸಾಕರಗೊಳಿಸಬಲ್ಲ ಒಬ್ಬ ಜನ ನಾಯಕ ಈ
ದೇಶಕ್ಕೆ ದೊರಕಿದ
ಎಂದು ನಾನು ಸಹ
ನಂಬಿದ್ದ. ನನಗೆ ಈಗ ಮನದಟ್ಟಾಗಿದೆ ಮೋದಿ
ಕನಸಿದ್ದ ಭಾರತ ಸಾಧ್ಯವಿಲ್ಲವೆಂದು. ಏಕೆಂದರೆ,
ಮೋದಿಯವರು ಭಾರತದ ಸಮಸ್ಯೆಗಳನ್ನು ಗ್ರಹಿಸಿರುವ
ಪರಿಯಲ್ಲಿ ಸಂಪೂರ್ಣ ದೋಷವಿದೆ. ನರೇಂದ್ರಮೋದಿಯವರಲ್ಲಿ
ಇರುವ ಕನಸುಗಳೆಲ್ಲವೂ ಜಾಗತೀಕರಣದಿಂದ ಪ್ರೇರಿತರಾದ ಕನಸುಗಳು. ಒಂದು ರಾಷ್ಟ್ರದ ಅಭಿವೃದ್ಧಿಗೆ
ಅರ್ಥಿಕ ಅಥವಾ ಕೈಗಾರಿಕೆಗಳ ಬೆಳವಣಿಗೆ
ಯಾವತ್ತೂ ಮಾನದಂಡವಲ್ಲ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಅವುಗಳು ಪೂರಕ ಅಂಶಗಳು
ಮಾತ್ರ. ಹೌದು ಒಬ್ಬ ಪ್ರಧಾನಿಗೆ
ಕೈಗಾರಿಕೋದ್ಯಮಿಗಳ ಸಹಕಾರ ಬೇಕು. ಆದರೆ,
ಸಿರಿವಂತರು ಮತ್ತು ಉದ್ಯಮಿಗಳು ಇದೀಗ
ಮೋದಿಯವರನ್ನು ಸುತ್ತುವರಿದಿದ್ದಾರೆ. ಅವರ ತಾಳಕ್ಕೆ ತಕ್ಕಂತೆ
ಮೋದಿಯವರ ನಿರ್ಧಾರಗಳು ಬದಲಾಗುತ್ತಿವೆ. ಈ ಕಾರಣಕ್ಕಾಗಿ ಭಾರತದ
ಮಾನವ ಸಂಪನ್ಮೂಲ ಅಭಿವೃದ್ಧಿಯ ತಳಪಾಯ ಎನ್ನ ಬಹುದಾದ
ಸರ್ವ ಶಿಕ್ಷಣ ಅಭಿಯಾನಕ್ಕೆ ಮತ್ತು
ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯುಟದ ಯೋಜನೆಗಳಿಗೆ ಸಹಾಯಧನದ ಹಣವನ್ನು ಕಡಿತಗೊಳಿಸಲಾಗುತ್ತಿದೆ.
ಒಂದು
ದೇಶದ ಅಭಿವೃಧ್ಧಿಯಲ್ಲಿ ಅರ್ಥಿಕ ಚಟುವಟಿಕೆಗಳು, ಕೈಗಾರಿಕೆಗಳ
ಬೆಳವಣಿಗೆಗಳು ಎಷ್ಟು ಮುಖ್ಯವೂ, ಬಡವರ
ಕುರಿತಾದ ಕಾಳಜಿ ಕೂಡ ಅಷ್ಟೇ
ಮುಖ್ಯ. ಈ ಕಾರಣಕ್ಕಾಗಿ ಏಷ್ಯಾ
ರಾಷ್ಟ್ರಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಚಿಂತನೆಗಳಿಗೆ ಭಿನ್ನವಾಗಿ ಮಾನವೀಯ ಮುಖವುಳ್ಳ ಅಭಿವೃದ್ಧಿಯ
ಯೋಜನೆಗಳನ್ನು ಜಾರಿಗೆ ತರುತ್ತಿವೆ. ಪಶ್ಚಿಮ
ರಾಷ್ಟ್ರಗಳಿಗೆ ಎಂದಿಗೂ ಬಡತನವಾಗಲಿ, ನಿರುದ್ಯೋಗ
ಸಮಸ್ಯೆಗಳಾಗಲಿ ಅಷ್ಟಾಗಿ ಬಾಧಿಸಿಲ್ಲ ಹಾಗಾಗಿ
ಅವರ ಯೋಜನೆಗಳು ಯಾವಾಗಲೂ ಬಡವರನ್ನು ಹೊರಗಿಟ್ಟು
ರೂಪಿಸಿದ ಯೋಜನೆಗಳು ಅಥವಾ ಚಿಂತನೆಗಳಾಗಿರುತ್ತವೆ. ಆದರೆ,
ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಬಡತನದ
ರೇಖೆಯ ಕೆಳಗೆ ಬದುಕುತ್ತಿರುವ ಅಸಂಖ್ಯಾತ
ಬಡಜೀವಗಳನ್ನು ಮೇಲೆತ್ತಲು ಅವರಿಗೆ ಸಹಾಯಧನದ ರೂಪದಲ್ಲಿ
ಆಹಾರ, ವಸತಿ, ಆರೋಗ್ಯ, ಶಿಕ್ಷಣ
ನೀಡುವುದು ಬಹಳ ಮುಖ್ಯ. ಈ
ಕಾರಣಕ್ಕಾಗಿ ನಾನು ಯಾವಾಗಲೂ “ಒಂದು
ದೇಶದ ಅಭಿವೃದ್ಧಿಯನ್ನು ಅಲ್ಲಿನ ಅರ್ಥಿಕ ಸ್ಥಿತಿ
ಗತಿಗಳ ಮಾನದಂಡದಿಂದ ಅಳೆಯುವ ಬದಲಾಗಿ ಅಲ್ಲಿನ
ಜನರ ಧಾರಣಾ ಸಾಮರ್ಥ್ಯ ಅಂದರೆ
ಅವರಿಗೆ ಸಿಗುತ್ತಿರುವ ಸವಲತ್ತುಗಳಿಂದ ಅಳೆಯಬೇಕು” ಎಂದು ಪ್ರತಿಪಾದಿಸುತ್ತಾ ಬಂದಿದ್ದೀನಿ.
ನರೇಂದ್ರಮೋದಿಯವರು
ಸ್ವತಃ ಮೂರು ಬಾರಿ ಮುಖ್ಯ
ಮಂತ್ರಿಯಾಗಿದ್ದ ಗುಜರಾತಿನ ಬೆಳವಣಿಗೆಯನ್ನು ಗಮನಿಸಿ. ಅರ್ಥಿಕ ಮತ್ತು
ಕೈಗಾರಿಕಾ ಬೆಳೆವಣಿಗೆಯ ದರದಲ್ಲಿ ಆ ರಾಜ್ಯ
ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ. ಆದರೆ, ಮಾನವ ಅಭಿವೃದ್ಧಿಯ
ದರದಲ್ಲಿ ಆ ರಾಜ್ಯವು ದೇಶದಲ್ಲಿ
ಅತ್ಯಂತ ಹಿಂದುಳಿದ ಬಿಹಾರ ರಾಜ್ಯಕ್ಕಿಂತ ಹಿಂದಿದೆ.
ಇಂದು ಭಾರತದ ಪ್ರತಿಭೆಗಳು ಜಗತ್ತಿನ
ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ.
ಇದು ನಿಜಕ್ಕೂ ದೇಶಕ್ಕೆ ಹೆಮ್ಮೆಯ
ವಿಷಯ. ಇಂತಹ ಪ್ರತಿಭೆಗಳನ್ನು ಸೃಷ್ಟಿಸಲು
ಉದಾರವಾದ ಮನೋಭಾವ ಇರುವ ನಾಯಕ
ಬೇಕು. ಇಂದು ನಮ್ಮ ಕಣ್ಣೆದುರು
ದೈತ್ಯ ಶಕ್ತಿ ರಾಷ್ಟ್ರಗಳಾಗಿ ಬೆಳೆಯುತ್ತಿರುವ
ಜಪಾನ್, ದಕ್ಷಿಣ ಕೋರಿಯಾ, ತೈವಾನ್,
ಸಿಂಗಾಪುರ್, ಥಾಯ್ಲೆಂಡ್, ಹಾಂಕಾಂಗ್, ಚೀನಾ ರಾಷ್ಟ್ರಗಳ ಅಭಿವೃದ್ಧಿಯ
ಮಾದರಿಗಳು ನಮ್ಮ ಮುಂದಿವೆ. ಆ
ರಾಷ್ಟ್ರಗಳು ಮೂಲಭೂತ ಸೌಕರ್ಯಗಳಾದ ರಸ್ತೆ,
ವಿಮಾನ ನಿಲ್ದಾಣ, ಬಂದರುಗಳು, ಕೈಗಾರಿಕಾ ವಲಯಗಳು ಮತ್ತು ನಗರಾಬಿವೃದ್ಧಿಗೆ
ಕೊಟ್ಟಷ್ಟೇ ಆದ್ಯತೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿಗೆ
ಆ ರಾಷ್ಟ್ರಗಳು ನೀಡಿವೆ.
ಭಾರತದ
ಜನತೆ ಬಹು
ನಿರೀಕ್ಷೆ ಇಟ್ಟುಕೊಂಡಿದ್ದ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದ
ಒಂದೊಂದೇ ಮುಖವಾಡಗಳು ಕಳಚಿ ಬೀಳುತ್ತಿದ್ದು ಈಗ ನಿಜ
ಬಣ್ಣ ಬಯಲಾಗುತ್ತಿದೆ. ಹಿಂಬಾಗಿಲಿನ ಮೂಲಕ ಎಲ್ಲಾ ಸಾಂಸ್ಕತಿಕ
ವಲಯಗಳಲ್ಲಿ ಹಿಂದುತ್ವವನ್ನು ವ್ಯವಸ್ಥಿತವಾಗಿ ಜಾರಿಗೆ ತರಲಾಗುತ್ತಿದೆ. ಈ
ನೆಲದ ಎಲ್ಲಾ ಭಾಷೆಗಳ, ಎಲ್ಲಾ
ಸಂಸ್ಕತಿಗಳ ವಿದ್ವಾಂಸರನ್ನು ಮೂಲೆ ಗುಂಪು ಮಾಡಲಾಗಿದೆ.
ಬಹುಮುಖಿ ಸಂಸ್ಕತಿಯ ಭಾರತದಲ್ಲಿ ಧರ್ಮ, ಜಾತಿ, ಭಾಷೆ
ಮತ್ತು ಪ್ರಾದೇಶಿಕ ಗಡಿಗಳ ಮೀರಿ ಮನುಕುಲದ
ಒಳಿತಿಗಾಗಿ ತುಡಿಯುತ್ತಿದ್ದ ಚಿಂತಕರು, ಸಾಹಿತಿಗಳು, ಕಲಾವಿದರು ಇದೀಗ ಮೌನಕ್ಕೆ ಶರಣಾಗಿದ್ದಾರೆ.
ಈವರೆಗೆ ಅಂದರೆ, ತಮ್ಮ ಅಧಿಕಾರದ
ಮೊದಲ ವರ್ಷ ಬಚ್ಚಿಟ್ಟುಕೊಂಡಿದ್ದ ಗೊತ್ತು,
ಗುರಿಗಳನ್ನು ಮೋದಿ ಒಂದೊಂದಾಗಿ ಆಚರಣೆಗೆ ತರುತ್ತಿದ್ದಾರೆ. ನ್ಯಾಷನಲ್
ಬುಕ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ
ಸೇತುಮಾಧವನ್ ರವರನ್ನು ಬದಿಗೆ ಸರಿಸಿ,
ಆರ್. ಎಸ್. ಎಸ್. ಚಿಂತನೆಗಳನ್ನು
ಪ್ರತಿಪಾದಿಸುವ ವ್ಯಕ್ತಿಯೊಬ್ಬರನ್ನು ತಂದು ಕೂರಿಸಲಾಯಿತು. ಭಾರತೀಯ
ಚಿತ್ರರಂಗಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ ಪುಣೆಯ ಫಿಲಂ
ಇನ್ಸ್ಟ್ಯೂಟ್ ಸಂಸ್ಥೆಗೆ ಧಾರವಾಹಿಗಳಲ್ಲಿ
ನಟಿಸುತ್ತಿದ್ದ ಒಬ್ಬ ನಟನನ್ನು ಹೇರಲಾಗಿದೆ.
ಇವಿಷ್ಟೇ ಅಲ್ಲದೆ, ಇಂಡಿಯನ್ ಕೌನ್ಸಿಲ್
ಆಫ್ ಕಲ್ಚರಲ್ ರಿಲೇಷನ್ಸ್ ಮತ್ತು
ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್
ಸಂಸ್ಥೆಗಳಿಗೂ ಸಹ ಆರ್. ಎಸ್.ಎಸ್.ಬೈಠಕ್ ನಿಂದ
ನೇರವಾಗಿ ಆಮದು ಮಾಡಿಕೊಳ್ಳಲಾಗಿದೆ.
ಮೋದಿ
ಮತ್ತು ಸಂಘಪರಿವಾರದ ಮಾತು ಮತ್ತು ಕೃತಿಗಳಿಗೆ
ಯಾವುದೇ ಸಂಬಂಧಗಳಿರುವುದಿಲ್ಲ. ಈ ದೇಶದಲ್ಲಿ ಅಸಂಖ್ಯಾತ
ಕ್ರೈಸ್ತ ಧರ್ಮದ ಚರ್ಚುಗಳು ಹತ್ತಿ
ಉರಿಯುತ್ತಿವೆ. ಆದರೆ,ಇವರು
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ವಾಪಸ್ ಕರೆತರಲು “ ಘರ್
ವಾಪಸಿ” ಕಾರ್ಯಕ್ರಮವನ್ನು ಯಾವುದೇ ರೀತಿಯ ಆತ್ಮ
ಸಾಕ್ಷಿಯ ಪ್ರಜ್ಞೆಯಿಲ್ಲದೆ ಹಮ್ಮಿಕೊಳ್ಳುತ್ತಾರೆ. ಇವರನ್ನು ಟೀಕಿಸುವ ವ್ಯಕ್ತಿಗಳ
ಮೇಲೆ ವ್ಯವಸ್ಥಿತ ರೂಪದಲ್ಲಿ ಸೇಡು ತೀರಿಸಿಕೊಳ್ಳುವುದರಲ್ಲಿ ಮಾತ್ರ ಸಂಘ ಪರಿವಾರದವರು ಸಿದ್ಧ ಹಸ್ತರು.
ಹಿಂದಿನ
ಕಾಂಗ್ರೇಸ್ ನೇತೃತ್ವದ ಯು.ಪಿ.ಎ
ಸರ್ಕಾರ ಪ್ರಾಚೀನ ಭಾರತದ ನಳಂದ
ವಿಶ್ವ ವಿದ್ಯಾಲಯವನ್ನು ಅದೇ ಮಾದರಿಯಲ್ಲಿ ಪುನರ್
ಪ್ರತಿಷ್ಠಾಪಿಸಬೇಕೆಂಬ ಉದ್ದೇಶದಿಂದ ಬೌದ್ಧ ಧರ್ಮಗಳು ಆಚರಣೆಯಲ್ಲಿರುವ
ಏಷ್ಯಾದ ಹಲವು ರಾಷ್ಟ್ರಗಳ ಸಹಭಾಗಿತ್ವದಲ್ಲಿ
ಪ್ರಾರಂಭಿಸಿತು. ನಳಂದ ವಿಶ್ವ ವಿದ್ಯಾಲಯಕ್ಕೆ
ಕೇಂದ್ರ ಸರ್ಕಾರದ ಮನವಿಯ ಮೇರೆಗೆ
ನಾನು ಉಪಕುಲಪತಿಯಾಗಿ ಕಳೆದ ಐದು ವರ್ಷಗಳ
ಕಾಲ ಕಾರ್ಯನಿರ್ವಹಿಸಿದೆ. ಆದರೆ. ನಾನು ಮೋದಿ
ನೇತೃತ್ವದ ಆಡಳಿತ ವೈಖರಿಯನ್ನು ಟೀಕಿಸಿದೆ
ಎಂಬ ಏಕೈಕ ಕಾರಣಕ್ಕಾಗಿ ಸಂಘ
ಪರಿವಾರದ ಕೆಲವು ವ್ಯಕ್ತಿಗಳ ಮೂಲಕ
ನನ್ನ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ
ಮಾಡಲಾಯಿತು. ಅದರ ಪ್ರಯತ್ನವಾಗಿ “ ಅಮಾತ್ರ್ಯ
ಸೇನರು ನಳಂದ ವಿ.ವಿ.ಯ ಆಡಳಿತ ಮಂಡಳಿಯ
ಸಭೆ ಮತ್ತು ಇತರೆ ಕಾರ್ಯಕ್ರಮಗಳಿಗೆ
ಭಾಗಿಯಾಗಲು, ದೂರದ ಅಮೇರಿಕಾ ಮತ್ತು
ಇಂಗ್ಲೆಂಡ್ ದೇಶಗಳಿಂದ ವಿಮಾನದಲ್ಲಿ ಬರುತ್ತಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಳಂದ ವಿ.ವಿ.ಯ ಬೊಕ್ಕಸಕ್ಕೆ
ಹೊರೆಯಾಗುತ್ತಿದೆ ಎಂಬ ಆರೋಪವನ್ನು ಹೊರಿಸಲಾಯಿತು.
ಇಂತಹ ಕ್ಷುಲ್ಲಕ ಆರೋಪ ಹೊರಿಸುವ ಮುನ್ನ
“ ನನಗೆ ನೋಬಲ್ ಪ್ರಶಸ್ತಿ ಮತ್ತು ಭಾರತ ರತ್ನ ಪ್ರಶಸ್ತಿ ದೊರಕಿದ ಕಾರಣಕ್ಕಾಗಿ ಹಿಂದಿನ
ಯು.ಪಿ.ಎ.
ಸರ್ಕಾರ ಏರ್ ಇಂಡಿಯಾ ವಿಮಾನ ಸಂಸ್ಥೆಯ
ವಿಮಾನಗಳಲ್ಲಿ ಪ್ರಥಮ ದರ್ಜೆಯ ಪ್ರಯಣ
ಮಾಡಲು ಉಚಿತ ಪಾಸ್ ನೀಡಲಾಗಿದೆ” ಎಂಬ ವಿಷಯವನ್ನು ತಿಳಿದುಕೊಳ್ಳಲಾರದಷ್ಟು ಅವಿವೇಕತನವನ್ನು ಮೋದಿ ಸರ್ಕಾರ ಪ್ರದರ್ಶನ
ಮಾಡಿತು. ನಂತರ ನಾನು ಆಡಳಿತ
ಮಂಡಳಿಯ ಮನವಿಯನ್ನು ನಿರಾಕರಿಸಿ, ಎರಡನೆಯ ಅವಧಿಯ ಉಪಕುಲಪತಿ
ಹುದ್ದೆಯನ್ನು ನಿರಾಕರಿಸಿದೆ. ನನಗೆ ವ್ಯಕ್ತಿಗಿಂತ ಸಂಸ್ಥೆ
ದೊಡ್ಡದು. ಸಧ್ಯಕ್ಕೆ ಸಿಂಗಾಪುರದ ಮಾಜಿ ವಿದೇಶಾಂಗ ಸಚಿವ
ಜಾರ್ಜ್ ಯೋ ಎಂಬುವರು ಉಪಕುಲಪತಿಗಳಾಗಿ
ಮುಂದುವರಿದಿದ್ದಾರೆ. ನಾನು ಸಹ ಸಂದರ್ಶಕ
ಪ್ರಾಧ್ಯಾಪಕನಾಗಿ ಮುಂದುವರಿದಿದ್ದೀನಿ. ಸಂಸ್ಕತ ಪಠ್ಯಗಳ ಮೇಲೆ
ಅಪಾರ ಒಲವು ಮತ್ತು ಗೌರವಗಳನ್ನು
ಇರಿಸಿಕೊಂಡಿರುವ ನಾನು “ ಗಣಿತ ಶಾಸ್ತ್ರ
ಕುರಿತು ಆರ್ಯಭಟ ಬರೆದಿರುವ ಕೃತಿಯನ್ನು
ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡುತ್ತಿದ್ದೇನೆ.
ನನ್ನ ಅಧ್ಯಾಪಕ ವೃತ್ತಿಯೆಲ್ಲಾ ವಿ.ವಿ.ಗಳಲ್ಲಿ ಕಳೆದು
ಹೋಯಿತು ನಿಜ. ಆದರೆ, ಭಾರತದ
ಶಿಕ್ಷಣ, ಆರೋಗ್ಯ, ಇಲ್ಲಿನ ಮಹಿಳೆಯರು
ಮತ್ತು ಮಕ್ಕಳು ನನ್ನ ಮುಖ್ಯ
ಕಾಳಜಿಯ ವಿಷಯಗಳಾಗಿದ್ದರು.
ನನಗೆ ಬಂದ ನೊಬಲ್
ಪ್ರಶಸ್ತಿಯ ಹಣದಿಂದ ಶಾಂತಿನಿಕೇತನದಲ್ಲಿನ ನಮ್ಮ
ನಿವಾಸದಲ್ಲಿ ಅರಂಭಿಸಿದ ಪ್ರಾಚಿ ಟ್ರಸ್ಟ್ ನ
ಅಭಿವೃದ್ಧಿಯ ಕಾರ್ಯಚಟುಕೆಗಳಿಂದ ಅಲ್ಲಿನ ಸುತ್ತಮುತ್ತಲಿನ ಸಂತಾಲ್
ಬುಡಕಟ್ಟು ಜನಾಂಗ ಅಭಿವೃದ್ಧಿಯ ಪಥದಲ್ಲಿ
ಹೆಜ್ಜೆ ಇರಿಸಲು ಸಾಧ್ಯವಾಯಿತು. ಸಂತಾಲ್
ಬುಡಕಟ್ಟಿನ ಒಬ್ಬ ಹೆಣ್ಣು ಮಗಳೋಬ್ಬಳು
ಪದವೀಧರೆಯಾಗಿರುವುದು ನನ್ನ
ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ’ ಈ ಎಂಬತ್ಮೂರರ ವಯಸ್ಸಿನಲ್ಲಿ ನನಗೆ ಯಾರ ಬಗ್ಗೆಯೂ ದ್ವೇಷ ಅಥವಾ ಅಸೂಯೆ ಇಟ್ಟುಕೊಳ್ಳಲಾರೆ.. ನನಗಿಷ್ಟವಾದ ಕಾಳಿದಾಸನ “ಮೇಘದೂತ” ಮತ್ತು ಶೂದ್ರಕನ “ಮೃಚ್ಛಕಟಿಕ” ಕೃತಿಗಳನ್ನು
ಪದೇ ಪದೇ ಓದುವುದರ ಮೂಲಕ
ಕಾಲ ಕಳೆಯುತ್ತಿದ್ದೇನೆ.
ಮಾಹಿತಿ
ಸೌಜನ್ಯ- ಇಂಡಿಯನ್ ಎಕ್ಸ್ ಪ್ರಸ್ ದಿನಪತ್ರಿಕೆ ಮತ್ತು ಎನ್.ಡಿ.ಟಿ.ವಿ.ಛಾನಲ್
(
ಅಕ್ಟೋಬರ್ ತಿಂಗಳ ಸಂವಾದ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
* - *
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ