Thursday, 22 October 2015

ಭೂಮಿಗೀತ ಬ್ಲಾಗ್ ಓದುಗರಿಗೆ ಕೃತಜ್ಞತೆಗಳು

ಗೆಳೆಯರೇ, ಎರಡೂವರೆ ವರ್ಷಗಳ ಹಿಂದೆ ಅಂದರೆ, 2013 ಏಪ್ರಿಲ್ 14 ರಂದು ನಾನು ಆರಂಭಿಸಿದ ಭೂಮಿಗೀತ ಬ್ಲಾಗ್ ಗೆ ದಿನ 25 ಸಾವಿರ ಓದುಗರು ಮತ್ತು 3 ಲಕ್ಷದ 40 ಸಾವಿರ ಆಸಕ್ತರು ಬೇಟಿ ನೀಡಿದಂತಾಯಿತು. ಒಟ್ಟು 170 ಲೇಖನಗಳನ್ನು ಬರೆದಿದ್ದು ಮೊದಲ ವರ್ಷ 13-14 ನಡುವೆ 104 ಲೇಖನಗಳನ್ನು ಬರೆದು ಅಡಕಗೊಳಿಸಿದ್ದೆ. ನಂತರದ ಒಂದೂವರೆ ವರ್ಷದಲ್ಲಿ ಕೇವಲ 66 ಲೇಖನಗಳನ್ನು ಮಾತ್ರ ಬರೆಯಲು ನನಗೆ ಸಾಧ್ಯವಾಯಿತು.
ನನ್ನ ಮಗ ಅನನ್ಯ ರೂಪಿಸಿಕೊಟ್ಟಿದ್ದ ಬ್ಲಾಗ್ ನಲ್ಲಿ ಲೇಖನ ಬರೆಯುವುದು, ಚಿತ್ರಗಳನ್ನು ಅಡಕಗೊಳಿಸುವ ವಿದ್ಯೆಯನ್ನು ನನ್ನ ಮಿತ್ರ ಹಾಗೂ ಸಾಪ್ಟ್ ವೇರ್ ತಂತ್ರಜ್ಞ ರವಿ ಅರೇಹಳ್ಳಿ ಕಲಿಸಿಕೊಟ್ಟರು. ನಾನು ಬರೆದಿರುವ 170 ಲೇಖನಗಳಲ್ಲಿ ಕೃಷಿ ಮತ್ತು ಪರಿಸರಕ್ಕೆ ಹಾಗೂ ಅಭಿವೃದ್ಧಿ ಕುರಿತಂತೆ ನೂರಕ್ಕೂ ಹೆಚ್ಚು ಲೇಖನಗಳಿಗೆ. ಅವುಗಳನ್ನು ಈಗಲೂ ಓದುಗರು ಹೆಕ್ಕಿ ಓದುತ್ತಿದ್ದಾರೆ. ಹಾಗಾಗಿ ಮುಂದಿನ ಜನವರಿಯಿಂದ ಭೂಮಿಗೀತ ಬ್ಲಾಗ್ ಅನ್ನು ಪರಿಸರ ಕುರಿತ ಅಂತರ್ಜಾಲ ಪತ್ರಿಕೆಯನ್ನಾಗಿ ರೂಪಿಸುತ್ತಿದ್ದೇನೆ, ಜನವರಿಯಿಂದ ನಾನೊಬ್ಬನೇ ಅಲ್ಲದೆ, ನಾಡಿನ ಎಲ್ಲಾ ಪರಿಸರ ತಜ್ಞರು ಮತ್ತು ಕೃಷಿ ತಜ್ಞರನ್ನು ಒಳಗೊಳ್ಳುವಂತೆ ಮಾಡುತ್ತಿದ್ದೇನೆ.
ಕಳೆದ 25 ವರ್ಷಗಳಿಂದ ನಾನು ಸಂಗ್ರಹಿಸಿ ಇಟ್ಟುಕೊಂಡಿರುವ ಡೌನ್ ಟು ಅರ್ಥ್ ಪತ್ರಿಕೆಯಿಂದ ಜಗತ್ತಿನ ನೆಲ-ಜಲ-ಗಾಳಿ ಕುರಿತಂತೆ ಬಂದಿರುವ ಸಾವಿರಾರು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವುದರ ಜೊತೆಗೆ ಪರಿಸರಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಪ್ರಕಟವಾಗಿರುವ ಕೃತಿಗಳ ಸಂಕ್ಷಿಪ್ತ ಮಾಹಿತಿಯನ್ನು ಅಡಕಗೊಳಿಸಲು ನಿರ್ಧರಿಸಿದ್ದೀನಿ. ಈವರೆಗೆ ಒನ್ ಮ್ಯಾನ್ ಆರ್ಮಿಯಾಗಿದ್ದ ತಾಣ ಜನವರಿಯಿಂದ ಕೃಷಿ ಮತ್ತು ಪರಿಸರ ತಜ್ಞರ ಚಿಂತನೆಯ ತಾಣವಾಗಿ ಹೊರ ಹೊಮ್ಮಲಿದೆ. ಎಂದಿನಂತೆ ಮಿತ್ರ ರವಿ ಅರೇಹಳ್ಳಿ ಮಾರ್ದರ್ಶನದಲ್ಲಿ ಹೊಸ ವೆಬ್ ತಾಣ ಸಿದ್ಧವಾಗಲಿದೆ. ಭೂಮಿಗೀತ ಬ್ಲಾಗ್ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ ಎಲ್ಲಾ ಸಮಾನ ಮನಸ್ಕ ಓದುಗರಿಗೆ ಕೃತಜ್ಞತೆಗಳು.
ಡಾ. ಎನ್. ಜಗದೀಶ್ ಕೊಪ್ಪ

No comments:

Post a Comment