Thursday, 1 October 2015

ಗಾಂಧಿಯನ್ನು ಜಗತ್ತಿಗೆ ಪರಿಚಯಿಸಿದ ಲೂಯಿಸ್ ಫಿಶರ್ಲೂಯಿಸ್ ಫಿಶರ್ ಇಪ್ಪತ್ತನೆಯ ಶತಮಾನದ ಜಗತ್ತು ಕಂಡ ಅತ್ಯುತ್ತಮ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕರಲ್ಲಿ ಪ್ರಮುಖನಾದವನುತಾನು ಸೇವೆ ಸಲ್ಲಿಸಿದ ರಾಷ್ಟ್ರಗಳ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕರಾರುವಕ್ಕಾಗಿ ವಿಶ್ಲೇಷಿಸಿ ಅವುಗಳ ಕುರಿತು ನಿರಂತರ ಲೇಖನ ಮತ್ತು ಕೃತಿಗಳನ್ನು ಬರೆಯುವುದರ ಮೂಲಕ ಪತ್ರಿಕಾ ವೃತ್ತಿಗೆ ಘನತೆ ತಂದಿತ್ತವನು. ನಿರಂತರ ಒಂದೂವರೆ ದಶಕಗಳ ಕಾಲ ಅಂದಿನ ಸೋವಿಯತ್ ರಷ್ಯಾದಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿ, ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದವನು. ಜೊತೆಗೆ ಅವುಗಳ ಗುಣಾವಗುಣಗಳ ಕುರಿತು ಹಲವು ಕೃತಿಗಳನ್ನು ಬರೆದ ಲೂ¬ಸ್ ಫಿಶರ್, ಅಮೇರಿಕಾದಲ್ಲಿ ಸೋವಿಯತ್ ರಷ್ಯಾ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಏಕೈಕ ವಿದ್ವಾಂಸ ಎಂಬ ಗೌರವಕ್ಕೆ ಒಳಗಾದವನು. ಇವೆಲ್ಲವುಗಳಿಗಿಂತ ಹೆಚ್ಚಾಗಿ ಮಹಾತ್ಮಗಾಂಧೀಜಿಯವರ ಜೀವನ ಚರಿತ್ರೆಯನ್ನು ತಾನು ಬರೆದ ಕೃತಿಯಲ್ಲಿ ಗಾಂಧೀಜಿಯವರ ಉದಾತ್ತ ಚಿಂತನೆಗಳನ್ನು ಅಡಕಗೊಳಿಸುವುದರ ಮೂಲಕ  ಗಾಮಧೀಜಿಯವರನ್ನು ಜಗತ್ತಿಗೆ ತಲುಪಿಸಿ ತಾನೂ ಸಹ ಅವರ ಜೊತೆ ಅಮರನಾದವನು.
ಮಹಾತ್ಮ ಗಾಂದಿಯವರು ತಾವು ಬದುಕಿದ್ದ ಕಾಲಘಟ್ಟದಲ್ಲಿ ಜಗತ್ತಿಗೇನು ಅಪರಿಚಿತರಾಗಿ ಉಳಿದಿರಲಿಲ್ಲ. ಆದರೆ, ಎಂದೂ ಮುಳುಗದ ಸಾಮ್ರಾಜ್ಯವೆಂಬ ಇಂಗ್ಲೆಂಡಿನ ಸರ್ಕಾರ ಮತ್ತು ಅರಸೊತ್ತಿಗೆಗೆ  ಅಹಿಂಸೆಯ ಮಾರ್ಗದಲ್ಲಿ ಅವರು ಒಡ್ಡಿz ಅನೇಕÀ ಸವಾಲುಗಳ ಮುಖಾಂತರ ಅವರು ಜಗತ್ತಿಗೆ  ಕುತೂಹಲಕಾರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಅಹಿಂಸೆ ಎಂಬ ಆಯುಧದ ಮೂಲಕ ಲಕ್ಷಾಂತರ ಮಂದಿ ಅನುಯಾಯಿಗಳ ಜೊತೆಗೂಡಿ ಇಂಗ್ಲೆಂಡ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಸರ್ಕಾರಗಳನ್ನು ಅವರು ಮಣಿಸಿದ ರೀತಿಯಿಂದಾಗಿ ಅವರ ಕುರಿತು ಜಗತ್ತಿಗೆ ಅನೇಕ ರೀತಿಯ ಕುತೂಹಲಗಳಿದ್ದವು. ಅವರ ಹೋರಾಟ, ಬದ್ಧತೆ ಮತ್ತು  ಬಲಿದಾನ ಹಾಗೂ ಚಿಂತನೆಗಳನ್ನು ಜಗತ್ತಿಗೆ ತಲುಪಿಸಿದ ಕೀರ್ತಿ ಲೂಯಿಸ್ ಫಿಶರ್ ಗೆ ಸಲ್ಲುತ್ತದೆ. ಕಾರಣಗಳಿಂದಾಗಿ ಲಂಡನ್ನಿನ ನಿಯತ ಕಾಲಿಕೆಟೈಮ್ಸ್ಪತ್ರಿಕೆಯು ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಕುರಿತು ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮಹಾತ್ಮ ಗಾಂಧಿಯವರಿಗೆ ದ್ವಿತೀಯ ಸ್ಥಾನ ಲಭ್ಯವಾಯಿತು. ( ಮೊದಲ ಸ್ಥಾನ ಸರ್. ಐಸಾಕ್ ನ್ಯೂಟನ್ ರವರಿಗೆ ದೊರೆತಿತ್ತು.)  ತಾನು ಹುಟ್ಟಿ ಬೆಳೆದ ಅಮೇರಿಕಾದ ಬಂಡವಾಳಶಾಹಿ ನೀತಿಯ ವಿರುದ್ಧ  ಒಂದು ರೀತಿಯ ಅಸಹನೆ ಬೆಳಸಿಕೊಂಡು ಕಮ್ಯೂನಿಷ್ಟ್ ಸಿದ್ಧಾಂತಗಳ ಪರಮ ಆರಾಧಕನಾಗಿದ್ದ ಲೂಯಿಸ್ ಫಿಶರ್ ಕೊನೆಗೆ ಅದರಿಂದಲೂ ಭ್ರಮನಿರಸನಗೊಂಡು ಅಂತಿಮವಾಗಿ ಗಾಂಧಿ ಸಿದ್ಧಾಂತಗಳು ಮತ್ತು ಚಿಂತನೆಗಳಿಗೆ ಒಲಿದದ್ದು ಒಂದು ರೀತಿಯಲ್ಲಿ ಆತನ ರೋಚಕ ಪಯಣ ಎಂದು ಬಣ್ಣಿಸ ಬಹುದು. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವ ವಿದ್ಯಾನಿಲಯವು ಲೂಯಿ ಫಿಶರ್ ಎಲ್ಲಾ ಕೃತಿಗಳು ಹಾಗೂ  ಬರಹಗಳ ದಾಖಲೆಯನ್ನು ಸಂಗ್ರಹಿಸಿಟ್ಟಿದ್ದು ಇದರಿಂದಾಗಿ ಆತನನ್ನು ಅರಿಯಲು ನಮಗೆ ಸಹಾಯಕವಾಗಿದೆ.


ಲೂಯಿ ಫಿಶರ್ 1896 ಪೆಬ್ರವರಿ 29 ರಂದು ಅಮೇರಿಕಾದ ಕಡಲತೀರದ ನಗರ ಫಿಲಿಡೆಲ್ಪಿಯಾ ನಗರದ ಕೊಳಗೇರಿಯಲ್ಲಿ ಜನಿಸಿದವನು. ವೇಳೆಗೆ ಆತನ ತಂದೆ  ಡೆವಿಡ್ ಮೀನು ಮತ್ತು ಹಣ್ಣುಗಳನ್ನು ಮನೆ ಮನೆಗೆ ತಿರುಗಿ ಮಾರಾಟ ಮಾಡುತ್ತಿದ್ದ ಕಡು ಬಡವನಾಗಿದ್ದ. ಸ್ಥಳಿಯ ಪಬ್ಲಿಕ್ ಶಾಲೆಯಲ್ಲಿ ಮೆಟ್ರಿಕ್ ವರೆಗೆ ಓದಿ ನಂತರ ಶಾಲೆಯೊಂದರ ಶಿಕ್ಷಕನಾಗಿದ್ದ ಲೂಯಿಸ್ ಫಿಶರ್ಗೆ  1917 ರಲ್ಲಿ ಬ್ರಿಟೀಷ್ ಸೇನೆಯ ಪರವಾಗಿ ಸ್ವಯಂ ಸೇವಾ ಕಾರ್ಯಕರ್ತನಾಗಿ  ಸೇವೆ ಸಲ್ಲಿಸಲು ಪ್ಯಾಲೆಸ್ತೇನ್ ನಲ್ಲಿ ಅವಕಾಶ ದೊರೆಯಿತು. ಮೂರು ವರ್ಷ ಸೇವೆ ಸಲ್ಲಿಸಿದ ಲೂಯಿ ಫಿಶರ್  ನಂತರ ವಾಪಸ್ ನ್ಯೂಯಾರ್ಕ್ ನಗರಕ್ಕೆ ಬಂದು ಸ್ಥಳಿಯ ಸುದ್ಧಿ ಸಂಸ್ಥೆಯೊಂದರಲ್ಲಿ ವರದಿಗಾರನಾಗಿ ನೇಮಕಗೊಂಡ. ಇದೇ ವೇಳೆಗೆ ಸರಿಯಾಗಿ ರಷ್ಯಾದ ಸಂಗೀತಗಾರರ ತಂಡವೊಂದು ಅಮೇರಿಕಾ ಪ್ರವಾಸದಲ್ಲಿತ್ತು. ರಷ್ಯನ್ ಭಾಷೆಯೊಂದನ್ನು ಹೊರತು ಪಡಿಸಿ ಬೇರೊಂದು ಭಾಷೆಯ ಪರಿಚಯವಿಲ್ಲದÀ ಸಂಗೀತಗಾರರು ತಮ್ಮ ಜೊತೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಬಲ್ಲವಳಾಗಿದ್ದ ಬೆರ್ಥಾ ಅಲಿಯಾಸ್ ಮರ್ಕ್ರೂಶ ಎಂಬ ಯುವತಿಯನ್ನು ಜೊತೆಯಲ್ಲಿ  ಕರೆತಂದಿದ್ದರು. ಆಕೆಗೆ ಸ್ಥಳಿಯ ಸಂಘ ಸಂಸ್ಥೆಗಳು ಮತ್ತು ಸರ್ಕಾರಗಳ  ಜೊತೆ ಸಂಪರ್ಕ ಏರ್ಪಡಿಸಲು ಲೂಯಿಸ್ ಫಿಶರ್ ನೇಮಕಗೊಂಡ. ಹೀಗೆ ಒಂದು ವರ್ಷ ಕಾಲ ಅಮೇರಿಕಾದ ವಿವಿಧ ನಗರಗಳಿಗೆ ಬೇಟಿ ನೀಡಿದ ರಷ್ಯಾದ ಸಂಗೀತ ತಂಡದ ಜೊತೆ ತಿರುಗಾಡಿದ ಫಿಶರ್, ನಂತರ ರಷ್ಯಾ ತಂಡ ಜರ್ಮನಿಯತ್ತ ಪ್ರವಾಸ ಹೊರಟಾಗ, ಅದರ ಜೊತೆ ತಾನೂ ಪ್ರಯಾಣ ಬೆಳಸಿದ. ಬರ್ಲಿನ್ ನಗರದಲ್ಲಿದ್ದುಕೊಂಡು, ಅಮೇರಿಕಾದ ನ್ಯೂಯಾರ್ಕ್ ಪೋಸ್ಟ್ ಎಂಬ ಸಂಜೆ ದಿನಪತ್ರಿಕೆಗೆ ಯುರೂಫ್ ರಾಷ್ಟ್ರಗಳ ವರದಿಗಾರನಾಗಿ ನೇಮಕಗೊಂಡ. ಎರಡು ವರ್ಷದ ಅವಧಿಯಲ್ಲಿ  ರಷ್ಯಾ ತಂಡದ ಯುವತಿಯ ಜೊತೆ ಅನುರಾಗ ಬೆಳಸಿಕೊಂಡಿದ್ದ ಫಿಶರ್ ಆಕೆಯನ್ನು ಬಿಟ್ಟಿರಲಾರದೆ, 1922 ರಲ್ಲಿ ತಾನೂ ಸಹ ರಷ್ಯಾಕ್ಕೆ ತೆರಳಿ ಆಕೆಯನ್ನು ವಿವಾಹವಾಗುವುದರ ಮೂಲಕ ಬದುಕು ಕಟ್ಟಿಕೊಂಡ ಸಮಯದಲ್ಲಿ ಜಗತ್ತಿನ ಎರಡು ಬಲಿಷ್ಟ ರಾಷ್ಟ್ರಗಳಾಗಿ ಹೊರ ಹೊಮ್ಮಿದ್ದ ಹಾಗೂ ಒಳಗೊಳಗೆ ಶೀತಲ ಯುದ್ಧದಲ್ಲಿ ತೊಡಗಿದ್ದ ಅಮೇರಿಕಾ ಮತ್ತು ಸೋವಿಯತ್ ರಷ್ಯಾ ಎರಡೂ ರಾಷ್ಟ್ರಗಳು  ಪರಸ್ಪರ ತಮ್ಮ ಶಕ್ತಿ ಸಾಮಾಥ್ರ್ಯಗಳನ್ನು ಅರಿತುಕೊಳ್ಳಲು ಪರೋಕ್ಷವಾಗಿ   ಹಲವು ಮಾರ್ಗಗಳ ಮೂಲಕ ಯತ್ನಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಅಮೇರಿಕಾ ಪ್ರಸಿದ್ಧ  ನೇಷನ್ ಎಂಬ ದಿನಪತ್ರಿಕೆಗೆ ಲೂಯಿ ಫಿಷರ್ ಸೋವಿಯತ್ ರಷ್ಯಾದ ವಿಶೇಷ ವರದಿಗಾರನಾಗಿ ನೇಮಕಗೊಂಡ. ಜೊತೆಗೆ ಪ್ರತಿ ವರ್ಷ ತನ್ನ ತಾಯ್ನಾಡಾದ ಅಮೇರಿಕಾಕ್ಕೆ ತೆರಳಿ ಸೋವಿಯತ್ ರಷ್ಯಾ ಕುರಿತ ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಕುರಿತು ವಿಶ್ವ ವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದ. ತಾನು ಹುಟ್ಟಿ ಬೆಳೆದ ಅಮೇರಿಕಾ ಸೇರಿದಂತೆ ಇಂಗ್ಲೇಂಡ್ ನಲ್ಲಿ ಪ್ರಚಲಿತದಲ್ಲಿದ್ದ ಬಂಡವಾಳಶಾಹಿ ನೀತಿಯ ಕುರಿತು ಅಸಹನೆ ಬೆಳಸಿಕೊಂಡಿದ್ದ ಫಿಶರ್ 1789 ರಲ್ಲಿ ನಡೆದ ಪ್ರೆಂಚ್ ಕ್ರಾಂತಿಯ ನಂತರ ಅನೇಕ ಬದಲಾವಣೆಗಳ ಮೂಲಕ 1848 ರಲ್ಲಿ ಕಾರ್ಲ್ಮಾಕ್ರ್ಸ್ ಮತ್ತು ಫ್ರೆಡರಿಕ್ ಏಂಗಲ್ಸ್ ಬರೆದಕಮ್ಯೂನಿಷ್ಟ್ ಮ್ಯಾನಿಪೆಸ್ಟೋಕೃತಿಯಿಂದ ಪ್ರಭಾವಿತನಾಗಿದ್ದ. ಮಾರ್ಕ್ಸ್ ವಾದದ ಪರಮ ಆರಾಧಕನಾಗಿದ್ದ.
ಮಾಸ್ಕೊ ನಗರದಲ್ಲಿ ಇದ್ದ ದಿನಗಳಲ್ಲಿ ಲೂಯಿ ಫಿಷರ್ ಪತ್ನಿ ಮಾರ್ಕ್ರೂಶ ಉಕ್ರೇನ್ ಬಳಿ ಸ್ವಯಂ ಸೇವಾ ಸಂಘಟನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಒಂದು ದಿನ  ಫಿಶರ್ ತನ್ನ ಪತ್ನಿಯ ಜೊತೆ ಉಕ್ರೇನ್ ಗೆ ತೆರಳಿ ಅಲ್ಲಿನ ಗ್ರಾಮಾಂತರ ಪ್ರದೇಶದ ರೈತರ ಮತ್ತು ಕೂಲಿ ಕಾರ್ಮಿಕರ ಬವಣೆಗಳನ್ನು ನೋಡಿ ಅಚ್ಚರಿಗೊಂಡ. ಕಮ್ಯೂನಿಷ್ಟ್ ಸಿದ್ಧಾಂತಗಳ ಕುರಿತು ಅವನು ಕಟ್ಟಿಕೊಂಡಿದ್ದ ಆತ್ಮ ವಿಶ್ವಾಸ ಅವನೊಳಗೆ ಕರಗತೊಡಗಿತು. ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ ಜಾರಿಗೆ ಬಂದ ಅನೇಕ ಕಠಿಣ ಕಾನೂನುಗಳು ಸರ್ವಾಧಿಕಾರವನ್ನು ನೆನಪಿಸುವಂತಿದ್ದವು. ಇದರಿಂದ ಭ್ರಮನಿರಸನಗೊಂಡ ಲೂಯಿಸ್ ಫಿಶರ್ ಸ್ಪೇನ್ ದೇಶದಲ್ಲಿ ನಡೆಯುತ್ತಿದ್ದ ಆಂತರೀಕ ಯುದ್ಧದ ಬಗ್ಗೆ ವರದಿ ಮಾಡಲು 1937  ರಲ್ಲಿ ಸ್ಪೇನ್ ದೇಶಕ್ಕೆ ತೆರಳಿದ. 1938 ವೇಳೆಗೆ ಅವನಿಗೆ ರಷ್ಯಾ ಬೇಡವಾಗಿತ್ತು. ವಾಪಸ್ ನೂಯಾರ್ಕ್ನಗರಕ್ಕೆ ಹೋಗಿ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆಸಿಕೊಳ್ಳಲು ಪ್ರಯತ್ನಿಸಿದ ಆದರೆ ದೇಶ ತೊರೆಯಲು ರಷ್ಯಾ ಸರ್ಕಾರ ಅಡ್ಡಗಾಲು ಹಾಕಿತು. ನಂತರ ಅಮೇರಿಕಾ ಅಧ್ಯಕ್ಷ ರೂಸ್ ವೆಲ್ಟ್ ರವರ ಮಧ್ಯ ಪ್ರವೇಶದಿಂದಾಗಿ ರಷ್ಯ ಸರ್ಕಾರ 1939 ರಲ್ಲಿ  ಅನುಮತಿ ನೀಡಿತು. ವೇಳೆಗೆ ಕಮ್ಯೂನಿಷಮ್ ಹಾಗೂ ಬಂಡವಾಳ ಶಾಹಿ ನೀತಿ ಎರಡರ ಬಗ್ಗೆಯೂ ವಿಶ್ವಾಸ ಕಳೆದುಕೊಂಡಿದ್ದ ಲೂಯಿ ಫಿಷರ್ ಗೆ ಭಾರತzಲ್ಲಿÀ ಮಹಾತ್ಮ ಗಾಂಧಿ ನಡೆಸುತ್ತಿದ್ದ ಅಹಿಂಸಾ ಮಾರ್ಗದ ಹೋರಾಟ ಮತ್ತು ಅವರು 1908 ರಲ್ಲಿ ಬರೆದು, ಆನಂತರ ಮಹದೇವ ದೇಸಾಯಿರವರಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದ್ದಹಿಂದ್ವಸ್ವಾರಾಜ್ಕೃತಿಯ ಕುರಿತು ಆಸಕ್ತಿ ತಾಳಿದ್ದ. ಇವುಗಳ ನಡುವೆ ನ್ಯೂಯಾರ್ಕ್ ನಗರದಲ್ಲಿದ್ದುಕೊಂಡು, ಗಾಂಧೀಜಿಯವರ ಜೊತೆ ಪತ್ರ ವ್ಯವಹಾರ ಇಟ್ಟುಕೊಂಡು ಅನೇಕ ವಿಷಯಗಳ ಕುರಿತಂತೆ ತನ್ನೊಳಗಿದ್ದ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದ. ಅಂತಿಮವಾಗಿ 1942 ರಲ್ಲಿ ಗಾಂಧೀಜಿಯವರ ಆಮಂತ್ರಣದ ಮೇರೆಗೆ  ಸೇವಾಗ್ರಾಮ್  ಆಶ್ರಮಕ್ಕೆ ಬೇಟಿ ನೀಡಿದ ಲೂಯಿಸ್  ಫಿಶರ್ ಗೆ ಭಾರತದ ಬಹು ಮುಖಿ ಸಂಸ್ಕøತಿ, ಇಲ್ಲಿನ ಜನರ  ಬಡತನ ಮತ್ತು  ಅನಕ್ಷರತೆ ಹಾಗೂ  ತಾನು ಈವರೆಗೆ ಕಾಣದಿದ್ದ ಪೂರ್ವ ಜಗತ್ತಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿತ್ತು. ಬಡತನದ ನಡೆವೆ ಇಲ್ಲಿನ ಜನತೆ ಕಟ್ಟಿಕೊಂಡಿದ್ದ ಬದುಕು ಹಾಗೂ ಅವರ ಸಹಿಷ್ಣತೆಯನ್ನು ಕಂಡು ಲೂಯಿಸ್ ಫಿಶರ್ ಅಚ್ಚರಿಗೊಂಡ. ಇಂತಹವರ ನಡುವೆ ಬದುಕುತ್ತಾ ಅವರ ಕಗ್ಗತ್ತಲ ಬದುಕಿಗೆ ಬೆಳಕಾಗಲು ಹೊರಟ ಗಾಂಧೀಜಿಯವರ ಬದುಕು, ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಮತ್ತು ಯಂತ್ರ ನಾಗರೀಕತೆಗೆ ಪರ್ಯಾಯವಾಗಿ ಅವರು ರೂಪಿಸುತ್ತಿದ್ದ ಗುಡಿ ಕೈಗಾರಿಕೆಗಳ ಪ್ರಯತ್ನ ಇವೆಲ್ಲವೂ ಲೂಯಿಸ್ ಫಿಶರ್ ಚಿಂತನಾ ಕ್ರಮವನ್ನು ಬದಲಾಯಿಸಿ ಬಿಟ್ಟವು. ತನ್ನ ಒಂದು ವಾರದ ಭಾರತದ ಪ್ರವಾಸದ ಅನುಭವವನ್ನು ಲೂಯಿಸ್ ಫಿಶರ್ ತನ್ನ  A Week With Gandhi  ಎಂಬ ಪುಟ್ಟ ಕೃತಿಯಲ್ಲಿ ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ.

ಒಂದು ವಾರ ಕಾಲ ಸೇವಾ ಗ್ರಾಮದಲ್ಲಿ ಉಳಿದುಕೊಂಡು ಅಲ್ಲಿನ ಗಾಂಧೀಜಿಯವರ ದಿನಚರಿ ಹಾಗೂ ಅವರ ಅನುಯಾಯಿಗಳ ಕಾರ್ಯವೈಖರಿಯನ್ನು ಮನಮುಟ್ಟುವಂತೆ ವಿವರಿಸಿದ್ದಾನೆ. ಬಿದರಿನ ತಡಿಕೆಗಳಿಗೆ ಮಣ್ಣು ಬಳಿದು ಅವುಗಳನ್ನು ಗೋಡೆಗಳನ್ನಾಗಿ ಪರಿವರ್ತಿಸಿಕೊಂಡು, ನಿರ್ಮಿಸಿದ ಸರಳ ಹಾಗೂ ಸ್ವಚ್ಛತೆಯಿಂದ ಕೂಡಿದ್ದ ಕುಟಿರ ಗಳೆಂಬ ಮನೆಗಳು, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಪ್ರಾರ್ಥನೆ ಹಾಗೂ ಚರಕದಿಂದ ನೂಲು ನೇಯುವ ಕಾಯಕ, ಸಾಮೂಹಿಕ ಭೋಜನಾಲಯ ಇವೆಗಳ ಕಾರ್ಯಚಟುವಟಿಕೆಗಳನ್ನು ಮತ್ತು ಕಾರ್ಯಕರ್ತರೇ ಸ್ವತಃ  ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕ್ರಿಯೆ, ಕೈ ತೋಟಗಳ ನಿರ್ವಹಣೆ ಇವುಗಳನ್ನು ಬಣ್ಣಿಸುತ್ತಾ, ಮನುಷ್ಯ ಪ್ರಯತ್ನ ಪಟ್ಟರೆ ಹೇಗೆ ಸ್ವಾವಲಂಬಿಯಾಗಿ ಬದುಕ ಬಹುದು ಎಂಬುದಕ್ಕೆ ಸೇವಾಗ್ರಾಮದ ಚಟುವಟಿಕೆಗಳು ಸಾಕ್ಷಿ ಎಂದು ಲೂಯಿಸ್ ಫೀಶರ್ ದಾಖಲಿಸಿದ್ದಾನೆ. ಚರಕದಿಂದ ನೂಲು ನೇಯುವುದು ನನ್ನ ದೃಷ್ಟಿಯಲ್ಲಿ ಅದೊಂದು ಕ್ರಿಯೆ ಎಂದು ಕಾಣದೆ, ಧ್ಯಾನ ಎಂಬಂತೆ ತೋರಿತು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಬೆಳಿಗ್ಗೆ ಮತ್ತು  ಸಂಜೆ ಗಾಂಧೀಜಿಯವರ ಜೊತೆ ಅವರ ನಡಿಗೆ ವ್ಯಾಯಾಮದ ಜೊತೆಯಲ್ಲಿ  ಹೆಜ್ಜೆ ಹಾಕುತ್ತಾಜಾಗತಿಕ ವಿದ್ಯಾಮಾನಗಳ ಚರ್ಚಿಸುತ್ತಾ, ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ಹಾಗೂ  ಗಾಂಧೀಜಿಯವರ ಧ್ಯೇಯಗಳನ್ನು ಅವನಿಗೆ ಅರಿಯಲು ಸಾಧ್ಯವಾಯಿತು.
ಲೂಯಿಸ್ ಫಿಶರ್ ಬಹಳ ವರ್ಷಗಳ ಕಾಲ ರಷ್ಯಾದಲ್ಲಿ ಇದ್ದ ಕಾರಣ, ಒಂದು ದಿನ ಗಾಂಧೀಜಿಯವರುಸ್ಟಾಲಿನ್ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯೆ? ಎಂದು ಪ್ರಶ್ನಿಸಿದರು. ಇದಕ್ಕೆಹೌದು ಆತ ನಿಜಕ್ಕೂ ಸರ್ವಾಧಿಕಾರಿಎಂದು ಫಿಶರ್ ಉತ್ತರಿಸಿದಾಗ ಗಾಂಧಿಜಿಯವರು ತಕ್ಷಣಹಿಟ್ಲರ್ಗಿಂತ ಕೆಟ್ಟವನು ಎಂದು ನಿಮ್ಮ ಅಭಿಪ್ರಾಯವೆ?” ಎಂದು ಮರು ಪ್ರಶ್ನೆ ಹಾಕುತ್ತಾರೆ. ಸಂದರ್ಭದಲ್ಲಿ  “ ನನಗೆ ಹಿಟ್ಲರ್ ಮತ್ತು ಸ್ಟಾಲಿನ್ನಡುವೆ ಅಂತಹ ವೆತ್ಯಾಸಗಳು ಕಾಣುತ್ತಿಲ್ಲಎಂದು ಖಡಕ್ಕಾಗಿ ಫಿಶರ್ ಉತ್ತರಿಸುತ್ತಾನೆ. ಲೂಯಿಸ್ ಫಿಶರ್ ಗಾಂಧಿಜಿಯವರಲ್ಲಿ ಕಂಡ ಕೆಲವು ಗುಣಗಳನ್ನು ತನ್ನ ಕೃತಿಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾನೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಇದ್ದುಕೊಂಡು, ನೂರಾರು ನಾಯಕರು, ಲಕ್ಷಾಂತರ ಅನುಯಾಯಿಗಳಿಗೆ ಮಾರ್ಗದರ್ಶನ ನೀಡುವ ಒತ್ತಡ ಹಾಗೂ ದೇಶ ವಿದೇಶಗಳಿಂದ ಬರುತ್ತಿದ್ದ ಪತ್ರಗಳಿಗೆ ಉತ್ತರ ನೀಡುವ ವೈಖರಿಗೆ ಅಚ್ಚರಿಗೊಂಡಿದ್ದಾನೆ. ಬಿಡುವಿಲ್ಲದ ಕಾರ್ಯಕ್ರಮಗಳ  ನಡುವೆ ತನ್ನ ಆಶ್ರಮಕ್ಕೆ ಬರುತ್ತಿದ್ದ ಅತಿಥಿಗಳ ಯೋಗಕ್ಷೇಮ ವಿಚಾರಿಸುವವ ಅವರ ಪ್ರೀತಿ ಹಾಗೂ ವಿದೇಶಿ ಪ್ರಜೆಗಳ ಆಹಾರ ಸಂಸ್ಕøತಿಯ ಕುರಿತು ಅಪಾರ ತಿಳುವಳಿಕೆಯಿದ್ದ ಅವರು ಅತಿಥಿಗಳಿಗಾಗಿ ತಾವೇ ಸ್ವತಃ ನಿಂತು ಸಸ್ಯಹಾರ ಆಹಾರಗಳನ್ನು ಸಿದ್ಧ ಪಡಿಸಿ, ಬಡಿಸುತ್ತಿದ್ದ ಪರಿ ಇವೆಲ್ಲವನ್ನೂ  ವಿವರಿಸಿರುವ ಫಿಶರ್, ಗಾಂಧಿಜಿಯವರಲ್ಲಿ ಕೇವಲ ನಾಯಕತ್ವ ಗುಣ ಮಾತ್ರ ಇರದೆ, ಅವರೊಳಗೆ ಒಬ್ಬ ಮಾತ್ರ ಹೃದಯದ ತಾಯಿ ಕೂಡ ಇದ್ದಳು ಎಂದು ಅಭಿಪ್ರಾಯ ಪಡುತ್ತಾನೆ.
ವಿದ್ಯುತ್ ಇಲ್ಲದ ಕಾಲದಲ್ಲಿ ಮಧ್ಯ ಭಾರತದಲ್ಲಿ ಅಲ್ಲಿನ 40 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವನ್ನು ತಡೆದುಕೊಳ್ಳುವುದು ನಿಜಕ್ಕೂ ಸಾಹಸದ ಕೆಲಸ. ಪ್ರದೇಶವನ್ನು ಏಕೆ ಆಯ್ಕೆ ಮಾಡಿಕೊಂಡಿರಿ? ಎಂಬ ಅವನ  ಪ್ರಶ್ನೆಗೆ ಗಾಂಧಿಯವರುಭಾರತದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವನ್ನು ನನಗಾಗಿ ಮೆಡಲಿನ್ ಸ್ಲೇಡ್ (ಮೀರಾ ಬೆಹನ್ ) ಆಯ್ಕೆ ಮಾಡಿದಳು. ಇದರಿಂದಾಗಿ ನನಗೆ ನಿಜ ಭಾರತದ ದರ್ಶನವಾಯಿತುಎಂದು  ಉತ್ತರಿಸಿರುವುದನ್ನೂ ಸಹ ಕೃತಿಯಲ್ಲಿ ದಾಖಲಿಸಿದ್ದಾನೆ. ಗ್ರಾಮೀಣ ಭಾರತದ ಸಂಸ್ಕøತಿಯಾದ  ನೆಲದ ಮೇಲೆ ಕಾಲು ಮಡಚಿ ಕೂರುವ ಅಭ್ಯಾಸ ನನಗಿರಲಿಲ್ಲ. ಹಾಗಾಗಿ ಬಾಪುರವರು ನನಗಾಗಿ ಕುರ್ಚಿಯೊಂದನ್ನು ತರಿಸಿ ಅದರ ಮೇಲೆ ಕೂರುವಂತೆ ವಿನಂತಿಸಿಕೊಳ್ಳುತ್ತಿದ್ದರು. ಆದರೆ ಅಂತಹ ಮಹಾನ್ ವ್ಯಕ್ತಿಯ ಎದುರು ಕುರ್ಚಿಯ ಮೇಲೆ ಕೂರುವುದು ಗೌರವವಲ್ಲ ಎಂಬುವುದು ನನ್ನ ಖಚಿತ ನಿಲುವಾಗಿತ್ತು. ಬಹಳ ಕಷ್ಟದಿಂದ ಅವರ ಬಳಿ ಕಾಲು ಮಡಚಿ ಕೂರುತ್ತಿದ್ದೆ. ಎಂದಿರುವ ಫಿಶರ್, ಗಾಂಧೀಜಿಯವರ ಜೊತೆ  ಸಹ ಭೋಜನದಲ್ಲಿ ಪಾಲ್ಗೊಂಡು, ಅಲ್ಲಿನ ಪದ್ಧತಿಯನ್ನು ತುಂಬು ಹೃದಯದಿಂದ ಬಣ್ಣಿಸಿದ್ದಾನೆ. ತಟ್ಟೆಗೆ ಊಟ ಬಡಿಸಿದ ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದನ್ನು ನೋಡಿದ ಫಿಶರ್, ‘ ಅನ್ನಕ್ಕೆ ಆಧ್ಯಾತ್ಮದ ನಂಟು ಬೆಸೆದು  ಆಹಾರದ ಮಹತ್ವವನ್ನು ಅರಿಯುವುದರ ಜೊತೆಗೆ ಹಸಿವು ಕುರಿತಂತೆ ಕಾರ್ಯಕರ್ತರಲ್ಲಿ ಅವರು ಮೂಡಿಸುತ್ತಿದ್ದ ಪ್ರಜ್ಞೆಯನ್ನು ನೋಡಿ ನನಗೆ ವಿಸ್ಮಯವಾಯಿತುಎಂದಿದ್ದಾನೆ. ಒಂದು ವಾರದ ಬೇಟಿಯ ನಂತರ ಗಾಂಧೀಜಿಯ ಪ್ರಭಾವಕ್ಕೆ ಒಳಗಾದ ಲೂಯಿ ಫಿಶರ್ ಆನಂತರ ದಿನಗಳನ್ನು  ಹಲವಾರು ಬಾರಿ ಭಾರತಕ್ಕೆ ಬೇಟಿ ಮಾಡಿ ಗಾಂಧಿಜಿಯನ್ನು ಮತ್ತು ಭಾರತವನ್ನು  ಸಮಗ್ರವಾಗಿ ಅರಿಯವ ಪ್ರಯತ್ನ ಮಾಡಿದ.
1946 ರಲ್ಲಿ ಗಾಂಧೀಜಿಯವರು ಮಹಾರಾಷ್ಟ್ರದ ಪೂನಾ ಸಮೀಪದ ಪಂಚಾಗ್ನಿ ಎಂಬ ಗಿರಿಧಾಮದಲ್ಲಿ ವಿಶ್ರಾಂತಿಗಾಗಿ ಉಳಿದುಕೊಂಡಿದ್ದ ಸಮಯದಲ್ಲಿ ಮತ್ತೊಮ್ಮೆ ಗಾಂಧಿಯವರ ಜೊತೆ  ಆರು ದಿನಗಳ ಕಾಲ ಉಳಿದು ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದ. ಇದು ಆತನ ಪಾಲಿಗೆ ಗಾಂಧಿಜಿಯವರ ಕೊನೆಯ ಬೇಟಿಯಾಯಿತು. ನಂತರದ ದಿನಗಳಲ್ಲಿ  ಅವರಿಂದ ಪ್ರಭಾವಿತನಾದ ಲೂಯಿಸ್ ಫಿಶರ್ ಗಾಂಧೀಜಿ ಕುರಿತಂತೆ ಅವರ ಸಮಗ್ರ ಬರೆವಣಿಗೆಯನ್ನು  ವಿಶೇಷವಾಗಿ ಯಂಗ್ ಇಂಡಿಯ ಪತ್ರಿಕೆಯಲ್ಲಿ ಬಂದಿದ್ದ ಲೇಖನಗಳನ್ನು ಅಧ್ಯಯನ ಮಾಡಿದಇದರ ಪರಿಣಾಮ ಅವನಿಗೆ ಸ್ಟಾಲಿನ್, ಲೆನಿನ್ ಮತ್ತು ಗಾಂಧೀಜಿಯವರ ನಡುವೆ ಇದ್ದ ಚಿಂತನೆಯ  ಮಾದರಿಗಳನ್ನು ಗ್ರಹಿಸಲು ಸಾಧ್ಯವಾಯಿತು.ನಾವಿನ್ನೂ ಗಾಂಧೀಜಿಯವರನ್ನು ಅವರ ಬದುಕಿನಲ್ಲಿ ಆಗಿರುವಎರಡು ಪ್ರಮಾದಗಳಿಗೆಪೂನಾ ಒಪ್ಪಂಧ ಕುರಿತು ತಾಳಿದ  ನಿಲುವು ಹಾಗೂ  ತನ್ನ ಬ್ರಹ್ಮ ಚರ್ಯೆ ಕುರಿತು ಮಾಡಿಕೊಂಡ ಪರೀಕ್ಷೆ) ಇವುಗಳಿಗೆ ನೇಣು ಹಾಕಿ, ಅವರ ಸಂಪೂರ್ಣ ವ್ಯಕ್ತಿತ್ವವನ್ನು ಅರಿಯಲು ತಿಣುಕಾಡುತ್ತಿರುವಾಗ ಪಾಶ್ಚಿಮಾತ್ಯ ಜಗತ್ತಿನ ವಿದ್ವಾಂಸರು  ವಿಶೇಷವಾಗಿ ಅಮೇರಿಕಾದ ಲೂಯಿಸ್ ಫಿಶರ್, ಇಂಗ್ಲೆಂಡಿನ ರೋನಾಲ್ಡ್ ಡಂಕನ್ ಹಾಗೂ ಆಸ್ಟ್ರೇಲಿಯಾದ ಥಾಮಸ್ ವೆಬರ್ ಇವರುಗಳು ಗಾಂಧಿಯವರ ಚಿಂತನೆ ಮತ್ತು ವ್ಯಕ್ತಿತ್ವವನ್ನು ಉದಾರ ನೆಲೆಯಲ್ಲಿ ಗ್ರಹಿಸಿ ವ್ಯಾಖ್ಯಾನಿಸಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. “ ಒಂದು ಸಾಮಾಜ್ರ್ಯವನ್ನು ಮಣಿಸಲು ಮದ್ದು, ಗುಂಡು, ಪಿರಂಗಿ ಅವಶ್ಯಕ ಎಂದು ನಂಬಿಕೊಂಡಿದ್ದ ಪಶ್ಚಿಮದ ಜಗತ್ತಿಗೆ ಅವುಗಳಿಗಿಂತ ಅಹಿಂಸೆ ಎನ್ನುವುದು ಪರಿಣಾಮಕಾರಿಯಾದ ಅಸ್ತ್ರ ಎಂದು ತೋರಿಸಿಕೊಟ್ಟವರು ಮಹಾತ್ಮಎಂದು ಗಾಂಧೀಜಿಯನ್ನು ಬಣ್ಣಿಸಿರುವ ಪರಿಯನ್ನು ಗಮನಿಸಿದರೆ, ಇದಕ್ಕಿಂತ ಪರಿಣಾಮಕಾರಿಯಾಗಿ ನಾವು ಗಾಂಧೀಜಿಯನ್ನು ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವೆ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.

ಇಂತಹ ಒಂದು ಕಾರಣದಿಂದಾಗಿ ಲೂಯಿಸ್ ಫಿಶರ್ 1949 ರಲ್ಲಿ ತನ್ನ ಐವರು ಸಮಾನ ಮನಸ್ಕ ಗೆಳೆಯರ ಜೊತೆಗೂಡಿ ಕಮ್ಯೂನಿಷ್ಟ್ ಸಿದ್ಧಾಂತಗಳ ವೈಫಲ್ಯ ಕುರಿತು  The  God That Failed ಎನ್ನುವ ಕೃತಿಯನ್ನು ಬರೆದ. ನಂತರ   ಗಾಂಧೀಜಿಯವರ ಹತ್ಯೆಯಾದ ಮೇಲೆ ಲೂಯಿಸ್ ಫಿಶರ್ 1950 ರಲ್ಲಿ  “A Life Of Mahatma Gandhiಎನ್ನುವ ಕೃತಿಯನ್ನು ಬರೆದ. ಕೃತಿಯು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದು ನೂರಾರು ಮುದ್ರಣ ಕಂಡಿತು. 1981 ರಲ್ಲಿ ಇಂಗ್ಲೆಂಡಿನ ರಿಚರ್ಡ್ ಆಟನ್ ಬರೋ ಗಾಂಧಿ ಕುರಿತು ಸಿನಿಮಾ ನಿರ್ಮಾಣ ಮಾಡುವಾಗ ಲೂಯಿಸ್  ಫಿಶರ್   ಕೃತಿಯನ್ನು ಆಧಾರವನ್ನಾಗಿ ಇಟ್ಟುಕೊಂಡು ಚಿತ್ರ ಕಥೆಯನ್ನು ಸಿದ್ಧಪಡಿಸಿ ಚಿತ್ರ ನಿರ್ಮಾಣ ಮಾಡಿದ. ಸಿನಿಮಾ ಕೂಡ ಲೂಯಿ ಫಿಷರ್ ತನ್ನ ಕೃತಿಯ ಮೂಲಕ ಜಗತ್ತಿನ ಮೇಲೆ ಬೀರಿದ್ದ ಪ್ರಭಾವದಷ್ಟೇ ಪರಿಣಾಮವನ್ನು ಬೀರಿತು.
ಗಾಂಧೀಜಿಯ ಕೃತಿಯ ನಂತರ ತನ್ನ ಪತ್ರಿಕೋದ್ಯಮ ಬದುಕಿಗೆ ತಿಲಾಂಜಲಿ ಇತ್ತು ಸಂಪೂರ್ಣ ಬರೆವಣಿಗೆ ಮತ್ತು ಉಪನ್ಯಾಸಗಳಿಗೆ ಒಲಿದ ಲೂಯಿಸ್  ಫಿಶರ್, ತನ್ನ ಪತ್ನಿಯ ಮೂಲಕ ರಷ್ಯಾ ಬದುಕಿನ ಅನುಭವ  ಕುರಿತು ಎರಡು ಕಾದಂಬರಿಯನ್ನು ಬರೆಸಿದ. ಜೊತೆಗೆ 1952 ರಲ್ಲಿ ಸ್ಟಾಲಿನ್ ಕುರಿತು ಹಾಗೂ 1964 ರಲ್ಲಿ ಲೆನಿನ್ ಕುರಿತು ಎರಡು ಮಹತ್ವದ ಕೃತಿಗಳನ್ನು ರಚನೆ ಮಾಡಿದ. ಸೋವಿಯತ್ ರಷ್ಯಾದ ಮಾಕ್ರ್ಸ್ವಾದದ ದೌರ್ಬಲ್ಯಗಳ ಕುರಿತಾದ ಫಿಶರ್ ಚಿಂತನೆಗಳು  ಕಮ್ಯೂನಿಷ್ಟ್ ರಾಷ್ಟ್ರಗಳನ್ನು ತಮ್ಮ ಮಾಕ್ರ್ಸ್ವಾದವನ್ನು ಪುನರ್ ವ್ಯಾಖ್ಯಾನಿಸಲು ಪ್ರೇರೇಪಿಸಿದವು. ಜೊತೆಗೆ    ಜಗತ್ತಿನಲ್ಲಿ ಕಮ್ಮೂನಿಷ್ಟ್ ವಿಚಾರವಾದದ ತಳಹದಿಯ ಮೇಲೆ  ಸಮಾಜವಾದದ ಚಿಂತನೆಯೊಂದು ಚಿಗುರೊಡೆಯಲು ಪರೋಕ್ಷವಾಗಿ ಕಾರಣವಾಯಿತು.


  ಸರ್ವರಿಗೆ ಸಮ ಪಾಲು ಎಂಬ ಮಾರ್ಕ್ಸ್ವಾದದ ಚಿಂತನೆಗೆ, ಸರ್ವರಿಗೆ ಸಮ ಬಾಳು ಎಂಬ ಸಮಾಜವಾದ ಚಿಂತನೆಯೊಂದನ್ನು ಕಸಿ ಮಾಡಿ, ಅದನ್ನು ಉದಾತ್ತ ದ್ಯೇಯಗಳ ಮೂಲಕ ಜಗತ್ತಿನಾದ್ಯಂತ ವಿಸ್ತರಿಸಲು ಸಾಧ್ಯವಾಯಿತು. ಭಾರತದ ಸಂದರ್ಭದಲ್ಲಿ ಎಂ.ಎನ್.ರಾಯ್ ಮತ್ತು ಲೋಹಿಯಾ, ಕರ್ಪೂರಿ ಠಾಕೂರ್ ಮುಂತಾದವರ ಮೂಲಕ ಹುಟ್ಟಿಕೊಂಡ ಚಿಂತನೆಯು ನಮ್ಮ ಕರ್ನಾಟಕದ ಶಾಂತವೇರಿ ಗೋಪಾಲಗೌಡ, ಜೆ.ಹೆಚ್. ಪಟೇಲ್, ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್, ತೇಜಸ್ವಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸೇರಿದಂತೆ ಹಲವವರ ಮೂಲಕ ಕನ್ನಡದ ನೆಲಕ್ಕೂ  ಸಹ ಕಾಲಿಟ್ಟಿತು.

ಒಬ್ಬ ಸೂಕ್ಷ್ಮ ಗ್ರಾಹಿ ಪತ್ರಕರ್ತನೊಬ್ಬ  ತನಗರಿವಿಲ್ಲದಂತೆ ಹಲವು ಮನುಕುಲದ  ಚಿಂತನೆಗಳನ್ನು ಹೇಗೆ  ಜಗತ್ತಿಗೆ ವಿಸ್ತರಿಸಬಲ್ಲ ಎಂಬುದಕ್ಕೆ, ಲೂಯಿಸ್ ಫಿಶರ್  ನಮಗೆ ಮಾದರಿಯಾಗಿದ್ದಾನೆ. ಪಶ್ಚಿಮದ ಜಗತ್ತಿಗೆ  ಗಾಂಧಿ ಚಿಂತನೆಗಳನ್ನು ಮತ್ತು ಸಮಾಜವಾದದ ಚಿಂತನೆಗಳನ್ನು ಹರಡಲು ಕಾರಣಕರ್ತನಾಗಿಅಮೇರಿಕಾದ ಪ್ರಿನ್ಸ್ಟನ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರವನ್ನು ಬೋಧಿಸುತ್ತಿದ್ದ ಲೂಯಿಸ್ ಫಿಶರ್ 1970 ಜನವರಿ 15 ರಂದು  ನಿಧನ ಹೊಂದಿದನು. ಆದರೆ, ಜಗತ್ತು ಮಹಾತ್ಮ ಗಾಂಧೀಜಿಯವರನ್ನು ನೆನಪಿಸಿಕೊಂಡಾಗ  ಅವರ ಜೊತೆ ಲೂಯಿಸ್ ಫಿಶರ್ ಕೂಡ ನೆನಪಾಗುತ್ತಾನೆ. ಇದು ಆತನ ದೈತ್ಯ ಪ್ರತಿಭೆಗೆ ಸಾಕ್ಷಿ.

No comments:

Post a Comment