ಮಂಗಳವಾರ, ಅಕ್ಟೋಬರ್ 6, 2015

ಗಾಂಧೀಜಿಯವರ ಮಾನಸ ಪುತ್ರಿ ಮೀರಾ ಬೆಹನ್ ( ಮೆಡಲಿನ್ ಸ್ಲೆಡ್)



ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಚಿಂತನೆಗಳಿಗೆ ಮಾರುಹೋದ  ವಿದೇಶಿ ಮಹಿಳೆಯರಲ್ಲಿ ಇಂಗ್ಲೇಂಡಿನ ಮೆಡಲಿನ್ ಸ್ಲೆಡ್ ಮುಖ್ಯರಾದವರು. ಭಾರತದಲ್ಲಿ ಮೀರಾಬಾಯಿ, ಮೀರಾ ಬೆಹನ್ ಎಂದು ಹೆಸರಾದ ಇವರ ಆದರ್ಶಮಯವಾದ ಬದುಕು ಹಾಗೂ  ಗಾಂಧಿ ಚಿಂತನೆಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಪರಿ ನಿಜಕ್ಕೂ ವಿಸ್ಮಯ ಹುಟ್ಟಿಸುವ ಸಂಗತಿಗಳಲ್ಲಿ ಒಂದು.
1892 ರಲ್ಲಿ ಇಂಗ್ಲೆಂಡಿನ ಶ್ರೀಮಂತ ಮನೆತನದಲ್ಲಿ ಜನಿಸಿದ ಮೆಡಲಿನ್ ಸ್ಲೆಡ್ ಬಾಲ್ಯದಿಂದಲೂ ಏಕಾಂತದ ಜೊತೆ ಜೊತೆಗೆ ಪರಿಸರ, ಸಾಕುಪ್ರಾಣಿಗಳ ಕುರಿತಂತೆ ವಿಶೇಷ ಮಮತೆ ಬೆಳೆಸಿಕೊಂಡಿದ್ದರು. ಇವರ ತಂದೆ ಬ್ರಿಟನ್ ಸರ್ಕಾರದಲ್ಲಿ ರಾಯಲ್ ನೆವಿ ಎಂಬ ನೌಕಾಪಡೆಯ ಮುಖ್ಯಸ್ಥರಾಗಿದ್ದರು. ಸದಾ ತನ್ನ ಕುಟುಂಬ ಹಾಗೂ ದೇಶದಿಂದ   ದೂರ ಉಳಿದು ಕಾರ್ಯ ನಿರ್ವಹಿಸಬೇಕಾಗಿದ್ದ  ಕಾರಣಕ್ಕಾಗಿ ಮೆಡಲಿನ್ ಸಲೆಡ್ ರವರ ತಂದೆ, ತನ್ನ ಕುಟುಂಬವು ಸುರಕ್ಷತೆ ಹಾಗೂ ನೆಮ್ಮದಿಯ ತಾಣದಲ್ಲಿ ಇರಲಿ ಎಂಬ ಕಾರಣದಿಂದಾಗಿ  ಇಂಗ್ಲೆಂಡಿಮಿಲ್ಟನ್ ಹೀತ್ ಎಂಬ ಪ್ರದೇಶದಲ್ಲಿ  ಸಮುದ್ರಕ್ಕೆ ಅಭಿಮುಖವಾಗಿದ್ದ  ಇಪ್ಪತ್ತು ಎಕರೆ ಜಾಗದ ಬೃಹತ್ ತೋಟವೊಂದನ್ನು ಖರೀದಿಸಿದ್ದರು. ಮನೆ ಹಾಗೂ ತೋಟದ ತುಂಬಾ ಸೇವಕರುಗಳು, ಕುದುರೆ ಮತ್ತು  ಇತರೆ ಸಾಕು ಪ್ರಾಣಿಗಳಿದ್ದದರಿಂದ  ಬಾಲಕಿ ಮೆಡಲಿನ್ ಗೆ  ಪ್ರಾಣಿಗಳ ಬಗ್ಗೆ ವಿಶೇಷವಾದ ಮಮತೆ ಒಡಮೂಡಿತ್ತುಕುದುರೆಗಳೆಂದರೆ  ಅವರಿಗೆ ಪಂಚ ಪ್ರಾಣವಾಗಿತ್ತು. ಕಾಲದಲ್ಲಿ ಮೋಟಾರು ವಾಹನಗಳು ಬಳಕೆಯಲ್ಲಿ ಇರದಿದ್ದ ಕಾರಣ ಪ್ರಯಾಣಕ್ಕೆ ಇಂಗ್ಲೇಂಡಿನಲ್ಲಿ ಕುದುರೆ ಗಾಡಿಗಳು ಆಸರೆಯಾಗಿದ್ದವು. ಹಾಗಾಗಿ ಮೆಡಲಿನ್ ಕುಟುಂಬದ ಕುದುರೆ ಲಾಯದಲ್ಲಿ ಅನೇಕ ತಳಿಯ ಅಸಂಖ್ಯಾತ ಕುದುರೆಗಳಿದ್ದವು. ಅವುಗಳಿಗೆ ಹುಲ್ಲು ತಿನ್ನಿಸುವುದು, ಮೈ ಉಜ್ಜುವುದು, ಸ್ನಾನ ಮಾಡಿಸುವುದು ಹೀಗೆ ಮೆಡಲಿನ್ ಬಾಲ್ಯದಲ್ಲಿ ಸಾಕು ಪ್ರಾಣಿಗಳ ಜೊತೆ ಕಳೆಯುತ್ತಿದ್ದರು.
ಇಂತಹ ಹವ್ಯಾಸಗಳ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದ ಮೆಡಲಿನ್  ಹರೆಯದ ದಿನಗಳಲ್ಲಿ ಸಂಗೀತದ ಹವ್ಯಾಸವನ್ನು ಬೆಳಸಿಕೊಡರು. ಒಮ್ಮೆ ಅವರ ತಂದೆ ಬೆಥೋವನ್ ಎಂಬ ಅಪ್ರತಿಮ ಸಂಗೀತಗಾರನ ಗ್ರಾಮೋಫೋನ್ ತಟ್ಟೆಯೊಂದನ್ನು(ಡಿಸ್ಕ್) ತಮ್ಮ ಪುತ್ರಿಗೆ ಉಡುಗೊರೆಯಾಗಿ ನೀಡಿದರುಜರ್ಮನ್ ಮೂಲದ ಲಡ್ವಿಗ್ವ್ಯಾನ್ ಬೆಥೋವನ್ ಎಂಬ ಸಂಗೀತಗಾರನ ಹಾಡುಗಳು ಮತ್ತು ಅದರ ಸಾಹಿತ್ಯದ  ಮೋಡಿಗೆ ಒಳಗಾದ ಮೆಡಲಿನ್ ತಾನೂ ಕೂಡ  ಪಿಯಾನೊವೊಂದನ್ನು  ಖರೀದಿಸಿ, ಸಂಗೀತ ಕಲಿಯಲು ಆರಂಭಿಸಿದರು. ಜೊತೆಗೆ ಲಂಡನ್ ನಗರದಲ್ಲಿಲಂಡನ್ ಸಿಂಪೋನಿ ಆರ್ಕೆಷ್ಟ್ರಾಸಂಗೀತ ತಂಡವೊಂದನ್ನು ಕಟ್ಟಿ ಬೆಥೋವನ್ ರಚಿಸಿದ್ದ ಹಾಡುಗಳನ್ನು ಕಾರ್ಯಕ್ರಮಗಳಲ್ಲಿ ಪ್ರಸ್ತುತ ಪಡಿಸುತ್ತಿದ್ದರು. ಒಮ್ಮೆ ತನ್ನ ತಂಡದೊಂದಿಗೆ ಜರ್ಮನ್ ಹಾಗೂ ಆಸ್ಟ್ರಿಯಾ ದೇಶಗಳಿಗೆ ಬೇಟಿ ನೀಡಿ ಸಂಗೀತ ಕಾರ್ಯಕ್ರಮ ನೀಡುವುದರ ಮೂಲಕ ಯುರೋಪ್ನಲ್ಲಿ ಮನೆ ಮಾತಾದರು.
ಹೀಗೆ ಒಮ್ಮೆ ಯುರೋಪ್ ಪ್ರವಾಸದಲ್ಲಿದ್ದಾಗ ಬೆಥೋವನ್ ಸಂಗೀತದ ಬಗ್ಗೆ ಅಪಾರ ತಿಳುವಳಿಕೆಯಿದ್ದ  ರೋಮೈನ್ ರೋನಾಲ್ಡ್ ಎಂಬ ವ್ಯಕ್ತಿಯನ್ನು ಪ್ರಾನ್ಸ್ ನಲ್ಲಿ  ಬೇಟಿ ಮಾಡಿದರು. ಬೇಟಿಯ ಸಂದರ್ಭದಲ್ಲಿ  ಗಾಂಧೀಜಿಯವರನ್ನು ಕುರಿತಂತೆ  ರೋನಾಲ್ಡ್ ಬರೆದಿದ್ದ ಒಂದು ಪುಟ್ಟ ಕೃತಿಯು ಮೆಡಲಿನ್ ಸ್ಲೆಡ್ ರವರ ಬದುಕನ್ನು ಬದಲಾಯಿಸಿಬಿಟ್ಟಿತು. ಗಾಂಧೀಜಿಯವರನ್ನು ಕುರಿತಂತೆ ಮೆಡಲಿನ್  ವಿಚಾರಿಸಿದಾಗ, ರೋನಾಲ್ಡ್ ಹೇಳಿದಗಾಂಧೀಜಿಯವರು ಇಪ್ಪತ್ತನೆಯ ಶತಮಾನದ ಏಸು ಕ್ರಿಸ್ತಎಂಬ ಮಾತು ಅವರನ್ನು ಗಾಂಧಿ ಕುರಿತ ಕೃತಿಯನ್ನು ಓದಲು ಪ್ರೇರೇಪಿಸಿತು. ಸಂಗೀತ ಕಾರ್ಯಕ್ರಮದ ವಿದೇಶ ಪ್ರವಾಸದ ನಂತg ಲಂಡನ್ ನಗರಕ್ಕೆ ವಾಪಸ್ಸಾದ ನಂತರ ಗಾಂಧಿ ಕುರಿತ ಕೃತಿಯನ್ನು ಓದಿ ಅಚ್ಚರಿಗೊಂಡರು. ಇವುಗಳ ಜೊತೆಗೆ ಅವರು ಪ್ರಾನ್ಸ್ ಪ್ರವಾಸದಲ್ಲಿದ್ದಾಗ ಗಾಂಧಿಜಿಯಯವರ ಅನೇಕ ವಿಚಾರಗಳು ಪ್ರೆಂಚ್ ಭಾಷೆಗೆ ಅನುವಾದವಾಗಿರುವುದನ್ನು ಕಂಡು, ಅವುಗಳನ್ನು ಸಹ ಕೊಂಡು ತಂದು ಓದಿದರು. ಗಾಂಧೀಜಿಯವರು ಪ್ರತಿ ಪಾದಿಸಿದ್ದ ಸರಳವಾದ ಬದುಕು, ಸತ್ಯ ಮತ್ತು ಅಹಿಂಸೆಯ ಮಹತ್ವ, ಬಡತನ ಮತ್ತು ಹಸಿವಿನಿಂದ ತತ್ತರಿಸುತ್ತಿರುವ ಜಗತ್ತಿನ ಜನತೆಯ ಕೈಗಳಿಗೆ ದುಡಿಯಲು ನೆರವಾಗುವಂತೆ ತಲೆ ಎತ್ತ ಬೇಕಾಗಿರುವ ಗುಡಿ ಕೈಗಾರಿಕೆಗಳ ಮಹತ್ವ ಇಂತಹ ವಿಷಯಗಳು ಮೆಡಲಿನ್ ಸ್ಲೆಡ್ರವರ ಪಾಲಿಗೆನಾವು ಅರ್ಥ ಪೂರ್ಣವಾಗಿ ಬದುಕಬಹುದಾಗ ಇನ್ನೊಂದು ಲೋಕ ಜಗತ್ತಿನಲ್ಲಿ ಇದೆಎಂದು ಮನವರಿಕೆಯಾಯಿತುಅವರು ಗಾಂಧೀಜಿಯವರ ಪುಸ್ತಕಗಳನ್ನು ಓಧುತ್ತಿರುವ ವೇಳೆಯಲ್ಲಿ ಇತ್ತ ಭಾರತದಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆಯಿಂದ ತೀವ್ರವಾಗಿ  ನೊಂದುಕೊಂಡಿದ್ದ ಗಾಂಧೀಜಿಯವರು ಎರಡು ಕೋಮಿನ ನಡುವಿನ ಸಾಮರಸ್ಯಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಗಾಂಧೀಜಿಯವರು ಅಹಮದಾಬಾದ್ ನಗರದ ಹೊರವಲಯದ ಸಬರಮತಿ ನದಿ ದಂಡೆಯ ಮೇಲೆ ನಡೆಸುತ್ತಿದ್ದ ಆಶ್ರಮ ಚಟುಚಟಿಕೆಗಳನ್ನು ಓದಿ ತಿಳಿದುಕೊಂಡ ನಂತರ ಅವರಿಗೆ ತಾನೂ ಸಹ ಆಶ್ರಮಕ್ಕೆ ಒಂದಿಷ್ಟು ಕಾಣಿಕೆ ನೀಡಬೇಕೆನಿಸಿತುಆಕೆಯ ತಂದೆಯವರು ಮೆಡಲಿನ್ ರವರ  ಇಪ್ಪತ್ತನೆಯ ವರ್ಷದ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದ ವಜ್ರದ ಹಾರವನ್ನು ಮಾರಾಟ ಮಾಡಿ ಜೊತೆಗೆ ತಮ್ಮ ಬಳಿ ಇದ್ದ ಹಣವನ್ನೆಲ್ಲಾ ಸಂಗ್ರಹಿಸಿ ಗಾಂಧೀಜಿಯವರಿಗೆ  ಒಂದು ಪತ್ರದ ಜೊತೆ ಹಣವನ್ನು  ಸಬರಮತಿ ಆಶ್ರಮಕ್ಕೆ  ಅಂಚೆಯ ಮೂಲಕ ಕಳಿಸಿಕೊಟ್ಟರು. ಇದಕ್ಕೆ ಪ್ರಿತಿಯಾಗಿ ಗಾಂಧಿಜಿಯವರಿಗೆ ಬಂದ ಒಂದು ಕೃತಜ್ಞತೆಯ ಪತ್ರ ಮೆಡಲಿನ್ ಸ್ಲೆಡ್ ರವರ ಆಲೋಚನಾ ಕ್ರಮವನ್ನು ಬದಲಿಸಿತು. ಗಾಂಧೀಜಿಗೆ ಮರು ಪತ್ರ ಬರೆದ ಮೆಡಲಿನ್ನಾನು ನಿಮ್ಮ ಅನುಯಾಯಿಯಾಗಿ ಆಶ್ರಮ ಸೇರಲು ಬಯಸಿದ್ದೀನಿ ಅವಕಾಶ ಮಾಡಿಕೊಡಿಎಂದು ಮನವಿ ಸಲ್ಲಿಸಿದರು. ಮೆಡಲಿನ್ ರವರ ಪತ್ರಕ್ಕೆ 1925 ರಂದ ಜುಲೈ 24 ರಂದು ಗಾಂಧಿಜಿಯವರು ಬರೆದಿದ್ದ ಪತ್ರ ಅದೇ ವರ್ಷ ಆಗಸ್ಟ್  ತಿಂಗಳಿನಿಂದ ಕಲ್ಕತ್ತ ನಗರದ ಅಂಚೆ ಕಛೇರಿಯ ಮೂಲಕ ರವಾನೆಗೊಂಡು ಇಂಗ್ಲೆಂಡಿನಲ್ಲಿದ್ದ ಮೆಡಲಿನ್ ಸ್ಲೆಡ್ ರವರಿಗೆ ತಲುಪಿತ್ತು. ಪತ್ರದಲ್ಲಿ ಗಾಂಧಿಜಿಯವರು ಹೀಗೆ ಉತ್ತರಿಸಿದ್ದರು.
ಆತ್ಮಿಯರೇ,
ನೀವು ಬರೆದಿರುವ ಪತ್ರ ನನ್ನ ಹೃದಯವನ್ನು ತಟ್ಟಿದೆ. ಜೊತೆಗೆ ನೀವು ಉಡುಗೊರೆಯಾಗಿ ಕಳಿಸಿರುವ ಉಣ್ಣೆ ವಸ್ತ್ರ ನಿಜಕ್ಕೂ ಅದ್ಭುತವಾಗಿದೆ. ನಿಮಗೆ ಕೃತಜ್ಞತೆಗಳು. ನೀವು ಯಾವಾಗ ಬೇಕಾದರೂ ಆಶ್ರಮಕ್ಕೆ ಬರಬಹುದು. ನೀವು ಬರುವ ದಿನಾಂಕ ತಿಳಿಸಿದರೆ, ನೀವು ಬಾಂಬೆಗೆ ಬರುವ ಹಡಗು ಮತ್ತು ಬಾಂಬೆಯಿಂದ ಅಹಮದಾಬಾದ್ ಬರುವ ರೈಲಿನ ವಿವರಗಳನ್ನು ನೀಡುತ್ತೀನಿ. ಆದರೆ, ಒಂದು ವಿಷಯವನ್ನು ನೀವು ಮನದಟ್ಟು ಮಾಡಿಕೊಳ್ಳಬೇಕಿದೆ. ಭಾರತದ ವಾತಾವರಣ ನಿಮ್ಮ ಇಂಗ್ಲೆಂಡ್ ವಾತಾವರಣದಂತಿರುವುದಿಲ್ಲ. ಸದಾ ಉಷ್ಣಾಂಶದಿಂದ ಕೂಡಿರುತ್ತದೆ. ಜೊತೆಗೆ ಆಶ್ರಮದ ಬದುಕು ಸುಖಮಯವಾಗಿರುವುದಿಲ್ಲ. ದೈಹಿಕ ಶ್ರಮದಿಂದ ಕೂಡಿದ್ದು ಕಠಿಣವಾಗಿರುತ್ತದೆ ಇಲ್ಲಿ ಪ್ರತಿಯೊಬ್ಬರೂ ಶ್ರಮಾಧಾರಿತ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಸರಳವಾದ ಬದುಕನ್ನು ಅಳವಡಿಸಿಕೊಳ್ಳಬೇಕುನಿಮಗೆ ಭಯ ಹುಟ್ಟಿಸಲು ನಾನು ಮಾತುಗಳನ್ನು ಹೇಳುತ್ತಿಲ್ಲಎಚ್ಚರಿಕೆಯ ಸಂದೇಶದಂತೆ ಮಾತುಗಳನ್ನು ಹೇಳುತ್ತಿದ್ದೇನೆ.
                                            ಇಂತಿ ತಮ್ಮ ವಿಶ್ವಾಸಿ
                                                                   ಎಂ.ಕೆ. ಗಾಂಧಿ.




ಗಾಂಧೀಜಿಯವರ ಪತ್ರ ತಲುಪಿದ ಕೂಡಲೆ ಮೆಡಲಿನ್ ರವರು ಭಾರತಕ್ಕೆ ಹೊರಡುವ ಪ್ರಯಾಣದ ದಿನಾಂಕವನ್ನು ಗೊತ್ತು ಪಡಿಸಿದರು. ಆಶ್ರಮದ ಬದುಕಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಸಸ್ಯಹಾರ ಆಹಾರ ಪದಾರ್ಥಗಳನ್ನು ಸೇವಿಸುತ್ತಾ, ನೆಲದ ಮೇಲೆ ಮಲಗುವ ಪದ್ಧತಿಯನ್ನು ಅಭ್ಯಾಸ ಮಾಡಿಕೊಂಡರು. ಮಡಲಿನ್ರವರ ತಂದೆ  ದೂರದ ಪ್ಯಾರಿಸ್ ನಗರದಲ್ಲಿ ಇದ್ದುದರಿಂದ ತಾವಿದ್ದ ಸ್ಥಳದಿಂದ ಮಗಳ ಪ್ರವಾಸಕ್ಕೆ ಶುಭ ಹಾರೈಸಿದರು, ಅವರ ತಾಯಿ ಮತ್ತು ಸಹೋದರಿ ಇಬ್ಬರೂ ಲಂಡನ್ ನಗರದ ರೈಲ್ವೆ ಸ್ಟೇಶನ್ವರೆಗೆ ಬಂದು ತಮ್ಮ ಕುಟುಂಬದ ಕುಡಿಯನ್ನು ಭಾರವಾದ ಹೃದಯದಿಂದ  ಬೀಳ್ಕೊಟ್ಟರು. ಮೆಡಲಿನ್ ರವರಿಗೆ ಗಾಂಧಿಯನ್ನು ಪರಿಚಯಿಸಿದ ರೋಲ್ಯಾಂಡ್ ಮತ್ತು ಆತನ ಸಹೋದರಿ ಇಬ್ಬರೂಮಹಾತ್ಮನನ್ನು ಬೇಟಿಯಾಗಲು ಹೊರಟ ನೀನು ಅದೃಷ್ಟವಂತೆಎಂದು ಹೇಳಿ ಶುಭ ಕೋರಿದರು. ಹೀಗೆ ಎಲ್ಲರ ಹಾರೈಕೆಗಳಿಂದ ಇಂಗ್ಲೆಂಡ್ ತೊರೆದು ಭಾರತದತ್ತ ಹಡಗಿನಲ್ಲಿ ಪ್ರವಾಸ ಹೊರಟ ಮೆಡಲಿನ್ 1925 ನವಂಬರ್ 6 ರಂದು ಬಾಂಬೆಯ ಬಂದರಿಗೆ ಬಂದು ತಲುಪಿದರು. ಅಲ್ಲಿ ಅವರನ್ನು ಸ್ವಾಗತಿಸಿದ ದಾದಾಬಾಯ್ ನವರೋಜಿ ಕುಟುಂಬದ ಸದಸ್ಯರು ಮಲಬಾರ್ ಹಿಲ್ ನಲ್ಲಿದ್ದ ತಮ್ಮ ನಿವಾಸಕ್ಕೆ ಕರೆದೊಯ್ದರು.
ಪ್ರಯಾಣದಿಂದ ಬಳಲಿದ್ದೀರಿ ದಯವಿಟ್ಟು ಒಂದು ದಿನ ವಿಶ್ರಾಂತಿ ಪಡೆಯಿರಿ ಎಂಬ ನವರೋಜಿ ಕುಟುಂಬದ ಸದಸ್ಯರ ಸಲಹೆಯನ್ನು ತಳ್ಳಿ ಹಾಕಿದ ಮೆಡಲಿನ್ ದಿನ ಸಂಜೆ ಅಹಮದಾಬಾದ್ ನಗರಕ್ಕೆ ಹೊರಟು ನಿಂತರು. ಗಾಂಧೀಜಿಯವರ ಪುತ್ರ ದೇವದಾಸ್ ಗಾಂಧಿ ಮತ್ತು ಅವರ ನಾಲ್ವರು ಗೆಳೆಯರು ಮೆಡಲಿನ್ರವರನ್ನು ರೈಲ್ವೆ ಸ್ಟೇಶನ್ ಗೆ ಕರೆದೊಯ್ದು ಅಹಮದಾಬಾದ್ ರೈಲಿನಲ್ಲಿ ಕೂರಿಸಿ, ಬೆಳಗಿನ ಜಾವ ನಿಮ್ಮನ್ನು ಆಶ್ರಮದ ಕಾರ್ಯಕರ್ತರು ಬೇಟಿಯಾಗುತ್ತಾರೆ ಎಂದು ಹೇಳಿ ಬೀಳ್ಕೊಟ್ಟರು. ಮರುದಿನ ಬೆಳಿಗ್ಗೆ ಅಂದರೆ ನವಂಬರ್ 7 ರಂದು ರೈಲು ಅಹಮದಾಬಾದ್  ಸ್ಟೇಶನ್ ತಲುಪುತ್ತಿದ್ದಂತೆ ಸರ್ದಾರ್ ವಲ್ಲಬಾಯ್ ಪಟೇಲ್, ಮಹಾದೇವ ದೇಸಾಯಿ ಹಾಗೂ ಸ್ವಾಮಿ ಆನಂದ್ ಇವರುಗಳು  ಮೆಡಲಿನ್ ರವರನ್ನು ಸ್ವಾಗತಿಸಿ ಆಶ್ರಮಕ್ಕೆ ಕರೆದೊಯ್ದರು. ಮೆಡಲಿನ್ ಸ್ಲೆಡ್ ರವರು ದಿನ  ಮಹಾತ್ಮ ಗಾಂಧೀಜಿಯನ್ನು ಪ್ರಥಮವಾಗಿ ಬೇಟಿಯಾದ ವಿವರವನ್ನು ತಮ್ಮ ಆತ್ಮ ಕಥೆ The Spirits Pligrimages  ಕೃತಿಯಲ್ಲಿ ಹೀಗೆ ದಾಖಲಿಸಿದ್ದಾರೆ.

ನಿಗದಿತ ಸಮಯಕ್ಕೆ ಸರಿಯಾಗಿ ಬೆಳಗಿನ ಜಾವ ಏಳು ಗಂಟೆಗೆ ರೈಲು ಅಹಮದಾಬಾದ್ ನಗರ ತಲುಪಿತು. ಪ್ಲಾಟ್ ಪಾರಂ ನಿಂದ ಕಿಟಕಿಯಲ್ಲಿ ಬಗ್ಗಿ ನನ್ನನ್ನು ನೋಡಿದ ಮೂವರು ಕಾರ್ಯಕರ್ತರು ಮುಗಳ್ನಕ್ಕರು. ನಾನು ಬಾಗಿಲಿಗೆ ಬರುತ್ತಿದ್ದಂತೆ ನನ್ನ ಕೈಲಿದ್ದ ಲಗ್ಗೇಜುಗಳನ್ನು ತೆಗೆದುಕೊಂಡರು. ಅವರಲ್ಲಿ ಹಿರಿಯ ಹಾಗೂ ಎತ್ತರವಾಗಿದ್ದ ವ್ಯಕ್ತಿ ತಮ್ಮನ್ನು ವಲ್ಲಬಾಯ್ ಪಟೇಲ್ ಎಂದು ಪರಿಚಯಿಸಿಕೊಂಡರು. ಜೊತೆಯಲ್ಲಿದ್ದ ವ್ಯಕ್ತಿಗಳನ್ನು ಯಂಗ್ ಇಂಡಿಯ ಪತ್ರಿಕೆಯ ಮೇನೇಜರ್ ಸ್ವಾಮಿ ಆನಂದ್ ಹಾಗೂ ಮಹಾತ್ಮ ಗಾಂಧೀಜಿಯವರ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಎಂದು ಪರಿಚಯಿಸಿಕೊಟ್ಟರು. ನಂತರ ಲಗ್ಗೇಜುಗಳನ್ನು ಕಾರಿನಲ್ಲಿ ಆಶ್ರಮಕ್ಕೆ ತರುವಂತೆ ಅವರಿಬ್ಬರಿಗೂ ತಿಳಿಸಿದ ವಲ್ಲಬಾಯ್ ಪಟೇಲ್  ನನ್ನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಶ್ರಮದತ್ತ ಹೊರಟರು. ಕಾರು ನಗರದ ಹೊರ ವಲಯದ ಒಂದು ನಿವಾಸದ ಮುಂದೆ ನಿಂತಿತು. “ಇದೇ ತಾನೆ ಆಶ್ರಮ?” ಎಂದು ಕೇಳಿದೆ. ಇಲ್ಲ ಎಂದು ಉತ್ತರಿಸಿದ ಪಟೇಲರು, ಕಟ್ಟಡ ಅಖಿಲ ಭಾರತ ನೇಕಾರರ ಸಂಘದ ಕಛೇರಿ ಎಂದರು. ಅಲ್ಲಿದ್ದ ಕೆಲವರ ಜೊತೆ ಗುಜರಾತಿ ಭಾಷೆಯಲ್ಲಿ ಮಾತನಾಡಿ ನಂತರ  ಹೊರಟರು. ನಾನು ಗಾಂಧೀಜಿಯವರನ್ನು ಕಾಣುವ ತವಕದಿಂದ ಯಾವುದೇ ಕಟ್ಟಡದ ಬಳಿ ಕಾರಿನ ವೇಗ ತಗ್ಗಿದರೆ ಸಾಕು, ಇದು ಆಶ್ರಮ ತಾನೆ? ಎಂದು ಪ್ರಶ್ನಿಸುತ್ತಿದ್ದೆ. ವಲ್ಲಬಾಯ್ ಪಟೇಲ್ ನಗುತ್ತಾ,  “ಆಶ್ರಮ ಇನ್ನೂ ಮುಂದಿದೆಎನ್ನುತ್ತಿದ್ದರು. ಕೊನೆಗೆ ಸಬರಮತಿ ನದಿಯ ಸೇತುವೆಯನ್ನು ದಾಟಿ ದೊಡ್ಡದಾದ ಬೇವಿನ ಮರಗಳ ನೆರಳಿನಲ್ಲಿ ಇದ್ದ ಸಾಮಾನ್ಯ ಹಾಗೂ ಸರಳವಾದ  ಕಟ್ಟಡಗಳ ಮುಂದೆ ಕಾರು ನಿಂತಿತು.
ಆಶ್ರಮದ ಪುಟ್ಟದಾದ ಕೈದೋಟದ ನಡುವೆ ಗಾಂಧೀಜಿಯವರ ನಿವಾಸವಿತ್ತು. ನನ್ನ ಬಳಿಯಿದ್ದ ಕೈ ಚೀಲವನ್ನು ಆಶ್ರಮ ನಿವಾಸಿಯೊಬ್ಬರ ಕೈಗೆ ನೀಡಿ, ನನ್ನೆರೆಡು ಕೈಗಳನ್ನು ಜೋಡಿಸಿಕೊಂಡು, ಗಾಂಧಿ ನಿವಾಸದತ್ತ ಹೊರಟೆ. ನನಗಾಗಿ ಎದುರು ನೋಡುತ್ತಾ ನಿಂತಿದ್ದ ಗಾಂಧೀಜಿಯವರನ್ನು ಕಂಡೊಡನೆ ಓಡಿ ಹೋಗಿ ಅವರ ಮುಂದೆ ಮಂಡಿಯೂರಿ ಕುಳಿತು ನಮಸ್ಕರಿಸಿದೆ. ತಮ್ಮ ಎರಡು ಕೈಗಳಿಂದ ನನ್ನ ಭುಜವನ್ನು ಹಿಡಿದು  ಎತ್ತಿ ನಿಲ್ಲಿಸಿದ ಗಾಂಧೀಜಿಯವರುನೀನು ಇಂದಿನಿಂದ ಭಾರತದ ಪುತ್ರಿ, ಜೊತೆಗೆ ನನ್ನ ಪುತ್ರಿಎಂದು ಹೇಳುತ್ತಾ ನಕ್ಕರು. ಅವರ ಮಾತು ನನ್ನ ಭವಿಷ್ಯದ ಬದುಕಿಗೆ ಭರವಸೆಯನ್ನು ತುಂಬುವಂತಿದ್ದವು. ನಂತರ ನನ್ನನ್ನುಬಾ, ಕಸ್ತೂರಬಾ ಗೆ ನಿನ್ನನ್ನು ಪರಿಚಯಿಸುತ್ತೀನಿಎಂದು ಹೇಳುತ್ತಾ ಕೈ ಹಿಡಿದುಕೊಂಡು ಅಡುಗೆ ಮನೆಗೆ ಕರೆದೊಯ್ದರು.
ನೋಡು ಯಾರು ಬಂದಿದ್ದಾರೆಎನ್ನುತ್ತಾ ನನ್ನನ್ನು ಅವರಿಗೆ ಪರಿಚಯಿಸಿದರು. ಕಸ್ತೂರ ಬಾರವರು ನನಗೆ   ಕೈ ಮುಗಿದು ನಕ್ಕರು. ಜೊತೆಗೆ ನನ್ನ ಕಾಲುಗಳನ್ನು ನೊಡತೊಡಗಿದರು. ಕೂಡಲೆ ನನ್ನ ತಪ್ಪಿನ ಅರಿವಾಯಿತು. ನಾನು ಕಾಲಿನಲ್ಲಿ óಷೂ ಧರಿಸಿ ಅವರ ಅಡುಗೆ ಮನೆಯನ್ನು ಪ್ರವೇಶಿಸಿದ್ದೆ. ತಕ್ಷಣ ಹೊರಗೆ ಓಡಿ ಹೋಗಿ ಅವುಗಳನ್ನು ಕಳಚ್ಚಿಟ್ಟು ಬಂದು ಅವರಲ್ಲಿ ಕ್ಷಮೆ ಯಾಚಿಸಿದೆ. ಹೀಗೆ  ಹಲವು ಅನುಭವಗಳ ಜೊತೆ ನನ್ನ ಭಾರತದ ವಾಸ ಆರಂಭಗೊಂಡಿತು. ಗಾಂಧೀಜಿಯವರನ್ನು ಆಶ್ರಮದಲ್ಲಿ ಎಲ್ಲರೂ ಗುಜರಾತಿ ಭಾಷೆಯಲ್ಲಿಬಾಪುಎಂದು ಕರೆಯುತ್ತಿದ್ದರು. ಬಾಪು ಎಂದರೆ, ತಂದೆ ಎಂದು ತಿಳಿದ ನಂತರ ನಾನೂ ಸಹ ಗಾಂಧೀಜಿಯವರನ್ನು ಬಾಪು ಎಂದು ಕರೆಯುತ್ತಿದ್ದೆ.”

ಮೀರಾ ಬೆಹನ್ ಎಂದು  ಗಾಂಧೀಜಿಯವರಿಂದ ಹೊಸ ಹೆಸರೊಂದನ್ನು ಪಡೆದು ಮೀರಾ ಬಾಯಿ, ಮೀರಾ ಬೆಹನ್ ಎಂದು ಗುರುತಿಸಲ್ಪಟ್ಟ ಮೆಡಲಿನ್ ರವರು ಆಶ್ರಮದಲ್ಲಿದ್ದ ಆರಂಭದ ದಿನಗಳಲ್ಲಿ ಸದಾ ಗಾಂಧೀಜಿಯವರ ಜೊತೆ ಇದ್ದು ಅವರ ಆಪ್ತ ಕಾರ್ಯದರ್ಶಿಯಂತೆ ಕೆಲಸ ಮಾಡತೊಡಗಿದರು. ಗಾಂಧೀಜಿ ಸಹ ಅವರಿಗೆ ಯಾವುದೇ ರೀತಿಯ ದೈಹಿಕ  ಶ್ರಮದ ಕೆಲಸ ನೀಡಲಿಲ್ಲ. ನಿಧಾನವಾಗಿ ಅಡುಗೆ ಮಾಡುವುದು, ತಮ್ಮ ವಸ್ತ್ರಗಳನ್ನು ತಾವೇ ಸ್ವತಃ ಸ್ವಚ್ಛ ಮಾಡಿಕೊಳ್ಳುವುದು ಹೀಗೆ ಕೆಲಸಗಳನ್ನು ಕಲಿಯುತ್ತಾ, ಚರಕ ನೂಲುವುದು, ಕೈ ತೋಟದ ನಿರ್ವಹಣೆ ಇವುಗಳಲ್ಲಿ ಪರಿಣಿತರಾದರು. ಗಾಂಧೀಜಿಯವರು ಒಮ್ಮೆ ಮೀರಾ ಬೆಹನ್ ರವರನ್ನು ವಾರ್ಧಾ ಆಶ್ರಮಕ್ಕೆ ಕರೆದುಕೊಂಡು ಹೋದರು. ಮೀರಾ ಬೆಹನ್ ಭಾರತಕ್ಕೆ ಬರುವ ಮುನ್ನವೆ, ಸಬರಮತಿ ಆಶ್ರಮದಲ್ಲಿದ್ದ ಆಚಾರ್ಯ ವಿನೋಭಾ ಭಾವೆಯವರು ವಾರ್ಧಾ ನಗರದ ಬಳಿ ಬ್ರಹ್ಮಚಾರಿ ಆಶ್ರಮವೊಂದನ್ನು ಸ್ಥಾಪಿಸಿದ್ದರು. ಪ್ರತಿ ವರ್ಷ ಹತ್ತು ದಿನಗಳ ಕಾಲ ಗಾಂಧೀಜಿಯವರು ಆಶ್ರಮದಲ್ಲಿ ಇದ್ದು ಬರುತ್ತಿದ್ದರು. ಮೀರಾಬಾಯಿರವರು ಪ್ರಥಮ ಬಾರಿಗೆ ಬ್ರಹ್ಮಚಾರಿ ಆಶ್ರಮಕ್ಕೆ ಬೇಟಿ ನೀಡಿದಾಗ ಅವರಿಗೆ ಅಚ್ಚರಿಯಾಯಿತು. ಸಣ್ಣ ಸಣ್ಣ ಕುಟಿರಗಳಲ್ಲಿ ವಾಸವಾಗಿದ್ದ ಆಶ್ರಮವಾಸಿಗಳು ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ನೋಡಿ ಸಂತೋಷ ಪಟ್ಟರು. ಗಾಂಧೀಜಿಯವರು ಆಶ್ರಮವಾಸಿಗಳಲ್ಲಿ ಹುಟ್ಟು ಹಾಕುತ್ತಿದ್ದ ಆತ್ಮವಿಶ್ವಾಸದ ಬದುಕು, ಸತ್ಯ ಮತ್ತು ಅಹಿಂಸೆಯ ಪ್ರತಿ ಪಾದನೆ, ನಿಸರ್ಗಕ್ಕೆ ಎರವಾಗದಂತೆ ರೂಢಿಸಿಕೊಂಡಿದ್ದ ಸರಳ ಜೀವನ ಇವೆಲ್ಲವೂ ಮೀರಾ ಬೆಹನ್ ರವರಿಗೆ ಹೊಸ ಲೋಕವೊಂದನ್ನು ತೆರದಿಟ್ಟವು. ಅದೇ ವೇಳೆಗೆ (1925 ಡಿಸಂಬರ್)ಆರಂಭಗೊಂಡಿದ್ದ ಕಾಂಗ್ರೇಸ್ ಅಧಿವೇಶನದಲ್ಲಿ ಮೀರಾ ಬೆಹನ್ ಪ್ರಥಮ ಬಾರಿಗೆ ಪಾಲ್ಗೊಂಡರು. ಅಧಿವೇಶನದಲ್ಲಿ ಗಾಂಧೀಜಿಯವರು ತಮ್ಮ ಅಧ್ಯಕ್ಷತೆಯ ಸ್ಥಾನವನ್ನು ಪ್ರಥಮ ಬಾರಿ ಮಹಿಳೆಯೊಬ್ಬರಿಗೆ ಅಂದರೆ ಸರೋಜಿನಿ ನಾಯ್ಡುರವರಿಗೆ ಹಸ್ತಾಂತರಿಸಿದರು. ಗಾಂಧೀಜಿಯವರ ಮತ್ತು ಅವರ ಅನುಯಾಯಿಗಳ ಒಡನಾಟದಿಂದ ಪ್ರೇರಿತರಾದ ಮೆಡಲಿನ್ ರವರು ಮೀರಾ ಬೆಹನ್ ಹೆಸರಿಗೆ ತಕ್ಕಂತೆ ಬದುಕಲು ಇಚ್ಛಿಸಿ, ತಮ್ಮ ತಲೆಗೂದಲನ್ನು ಬೋಳಿಸಿಕೊಂಡು ಸನ್ಯಾಸಿನಿಯಂತೆ  ಖಾದಿ ವಸ್ತ್ರ ತೊಟ್ಟು ಬದುಕಲು ಆರಂಭಿಸಿದರು.


ಮೀರಾ ಬೆಹನ್ ಭಾರತಕ್ಕೆ ಬಂದ ಒಂದು ವರ್ಷದ ತರುವಾಯ  ಅವರ ತಂದೆಯವರು ನಿಧನರಾದ ಸುದ್ಧಿಯು ತಾಯಿಯವರ ಮೂಲಕ ಅವರಿಗೆ ತಲುಪಿತು. ಗಾಂಧೀಜಿಯವರು ಮೀರಾರವರನ್ನು ಸಂತೈಸಿ, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು. ಆದರೆ, ಹುಟ್ಟಿದ ನೆಲ, ತಂದೆ, ತಾಯಿ, ಸಹೋದರ, ಸಹೋದರಿ ಹೀಗೆ ಎಲ್ಲಾ ವ್ಯಾಮೋಹಗಳನ್ನು ಕಡಿದುಕೊಂಡಿದ್ದ ಅವರು ಇಂಗ್ಲೇಂಡಿಗೆ ಹೋಗಲು ನಿರಾಕರಿಸಿ, ತಾವಿದ್ದ ಭಾರತದ ನೆಲದಲ್ಲಿ ನಿಂತು ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಸಂಸ್ಕತಿ ಹಾಗೂ ಭಾಷೆಯನ್ನು ಕಲಿಯುವ ಉದ್ದೇಶದಿಂದ ದೆಹಲಿಯ ಕನ್ಯಾ ಗುರುಕುಲ ಹಾಗೂ ಕಾಂಗ್ರಿಯ ಗುರುಕುಲದಲ್ಲಿ ಸ್ವಲ್ಪ ದಿನ ವಾಸವಾಗಿದ್ದು ಪರಿಣತಿಯನ್ನು ಪಡೆದರು. ಆನಂತರ ಪರಿಪೂರ್ಣ ಸನ್ಯಾಸಿನಿಯಾಗುವ ಹಠ ತೊಟ್ಟು, ರೇವಾರಿಯ ಭಗವತ್ ಭಕ್ತಿ ಆಶ್ರಮದಲ್ಲಿ  ಯೋಗ, ಧ್ಯಾನಗಳಲ್ಲಿ ನಿರತರಾದರು, ಪ್ರತಿ ಹದಿನೈದು ದಿನಕ್ಕೊಮ್ಮೆ ಗಾಂಧೀಜಿಯವರಿಂದ ಅವರಿಗೆ ಪತ್ರಗಳು ಬರುತ್ತಿದ್ದವು. ಪತ್ರದಲ್ಲಿ ಪರಿಪೂರ್ಣ ಮನುಷ್ಯನಾಗುವ ಪರಿಯನ್ನು ಗಾಂಧೀಜಿಯವರು ಭಾರತದ ಪುರಾಣಗಳು ಹಾಗೂ ದಾರ್ಶನಿಕರ ಕಥೆಗಳ ಮೂಲಕ ಮೀರಾಗೆ ವಿವರಿಸುತ್ತಿದ್ದರು.

ಮೀರಾ ಬೆಹನ್ ಭಾರತಕ್ಕೆ ಬಂದು ಗಾಂಧೀಜಿಯವರ ಮಾನಸ ಪುತ್ರಿಯಾಗಿ ಬದುಕುತ್ತಾ, ಭಾರತದ ಸ್ವಾತಂತ್ರ್ಯ ಹೋರಾಟದ ಅನೇಕ ಘಟನೆಗಳಿಗೆ ಸಾಕ್ಷಿಯಾದರು. 1927 ರಲ್ಲಿ ಭಾರತಕ್ಕೆ ಬೇಟಿ ನೀಡಿದ ಸಿಮನ್ ಆಯೋಗದ ವಿರುಧ್ಧದ ಪ್ರತಿಭಟನೆ, 1930 ದಂಡಿ ಉಪ್ಪಿನ ಸತ್ಯಾಗ್ರಹ ಯಾತ್ರೆ, 1931 ರಲ್ಲಿ ಗಾಂಧೀಜಿ ಜೊತೆಯಲ್ಲಿ ದುಂಡು ಮೇಜಿನ ಪರಿಷತ್ತಿಗಾಗಿ ಇಂಗ್ಲೇಂಡ್ ಪ್ರವಾಸವನ್ನು ಮಾಡಿದರುತಮ್ಮ ದೇಶದ ಮೆಡಲಿನ್ ಸ್ಲೆಡ್ ಮೀರಾ ಬೆಹನ್ ಆಗಿ ಪರಿವರ್ತನೆಯಾಗಿ ಅಪ್ಪಟ ಭಾರತೀಯ ಹೆಣ್ಣು ಮಗಳಂತೆ ಬದಲಾಗಿರುವುದನ್ನು ನೋಡಿ ಇಂಗ್ಲೇಂಡ್ ನಾಗರೀಕರು ಅಚ್ಚರಿಪಟ್ಟರು.  1942 ರಲ್ಲಿ  “ಭಾರತ ಬಿಟ್ಟು ತೊಲಗಿಚಳುವಳಿಯಲ್ಲಿಯೂ ಸಹ ಅವರು ಪ್ರಮುಖ ಪಾತ್ರ ವಹಿಸಿದರು. ಹೀಗೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು ಗಾಂಧೀಜಿ ಜೊತೆ ಸೆರೆ ಮನೆ ವಾಸ ಅನುಭವಿಸಿದರು. 1942 ಚಳುವಳಿಯಲ್ಲಿ ಭಾಗವಹಿಸಿ, ಬ್ರಿಟೀಷ್ ಸರ್ಕಾರದಿಂದ ಬಂಧಿತರಾಗಿ  ಪುಣೆಯ ಆಗಖಾನ್ ಅರಮನೆಯಲ್ಲಿ ಗಾಂಧಿ, ಕಸ್ತೂರಬಾ, ಮಹಾದೇವ ದೇಸಾಯಿ ಜೊತೆ ಗೃಹ ಬಂಧನದಲ್ಲಿರುವಾಗ, ಒಂದು ದಿನಬಾಪು ನಾನು ಇಲ್ಲಿಂದ ಬಿಡುಗಡೆಯಾದ ಮೇಲೆ ಉತ್ತರ ಭಾರತದಲ್ಲಿ ಆಶ್ರಮ ಕಟ್ಟಿಕೊಂಡು ಬದುಕಲು ಇಚ್ಚಿಸಿದ್ದೀನಿಎಂದು ತಮ್ಮ ಮನದ ಇಂಗಿತವನ್ನು ಗಾಂಧಿಯೆದುರು ಬಹಿರಂಗ ಪಡಿಸಿದ್ದರು. ಆಗಖಾನ್ ಅರಮನೆಯಲ್ಲಿ ಬಂಧಿಯಾಗಿರುವಾಗ, ಮಹಾದೇವ ದೇಸಾಯಿ ಹಾಗೂ ಕಸ್ತೂರ ಬಾ ಅವರ ಆಕಸ್ಮಿಕ ಸಾವುಗಳಿಗೆ  ಸಾಕ್ಷಿಯಾದರು. ಅನೇಕ ಸಂದರ್ಭಗಳಲ್ಲಿ ಗಾಂಧೀಜಿಯವರು ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ಪ್ರತಿನಿಧಿಯಾಗಿ, ಭಾರತದಲ್ಲಿದ್ದ ಬ್ರಿಟೀಷ್ ಸರ್ಕಾರದ ಉನ್ನತ ಅಧಿಕಾರಿಗಳನ್ನು ಬೇಟಿ ಮಾಡಿ ಚರ್ಚಿಸಿ ಬರುತ್ತಿದ್ದರು. ಗಾಂಧೀಜಿಯವರ ಅಪೇಕ್ಷೆಯ ಮೇರೆಗೆ ಇಂಗ್ಲೇಂಡ್, ಅಮೇರಿಕಾ ಪ್ರವಾಸ ಮಾಡಿ, ಅನೇಕ ನಗರಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವಗಳನ್ನು ವಿವರಿಸುತ್ತಿದ್ದರು. ಗಾಂಧಿಯವರ ಪ್ರತಿನಿಧಿಯಾಗಿ, ಇಂಗ್ಲೇಂಡ್ ಪ್ರಧಾನಿ ಚರ್ಚಿಲ್ ಹಾಗೂ ಅಮೇರಿಕಾದ ಅಧ್ಯಕ್ಷ ರೂಸ್ ವೆಲ್ಟ್ ಅವರನ್ನು ಬೇಟಿ ಮಾಡಿ ಭಾರತದ ಸ್ವಾತಂತ್ರ್ಯದ ಅಗತ್ಯತೆಯನ್ನು ವಿವರಿಸಿದ್ದರು. ಇದಲ್ಲದೆ, ಭಾರತದ ಸ್ವಾತಂತ್ರ್ಯ ಹೋರಾಟ, ಗಾಂಧೀಜಿ ಚಿಂತನೆಗಳು, ಅವರ ಅಹಿಂಸೆ ತತ್ವದ ಉದ್ದೇಶಗಳು, ಖಾದಿಯ ಮಹತ್ವ ಕುರಿತಂತೆ ಯಂಗ್ ಇಂಡಿಯ, ಹರಿಜನ್, ಹಾಗೂ ಕಲ್ಕತ್ತ ನಗರದಿಂದ ಪ್ರಕಟವಾಗುತ್ತಿದ್ದ ಸ್ಟೇಟ್ಸ್ಮನ್, ದೆಹಲಿಯ ಹಿಂದೂಸ್ಥಾನ್ ಟೈಮ್ಸ್ , ಬಾಂಬೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ನೂರಾರು ಲೇಖನಗಳನ್ನು ಬರೆದರು.


1940 ದಿನಗಳಲ್ಲಿ ಸನ್ಯಾಸಿನಿಯಂತೆ ಬದುಕುತ್ತಾ, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮೀರಾ ಬೆಹನ್ ಅವರ ಬದುಕಿನಲ್ಲಿ ಪ್ರಥಮ ಬಾರಿಗೆ ಅಲ್ಲೋಲ ಕಲ್ಲೋಲವೆದ್ದಿತು. ಸರ್ದಾರ್ ಪೃಥ್ವಿ ಸಿಂಗ್ ಎಂಬುವರ ಬಗ್ಗೆ ಅವರಲ್ಲಿ ಮೋಹ ಉಂಟಾಯಿತು. ಕುರಿತು ತನ್ನ ತಂದೆಯ ಸಮಾನರಾಗಿದ್ದ ಗಾಂಧೀಜಿ ಜೊತೆ ತಮ್ಮ ಮನದ ಸಂಕಟಗಳನ್ನು ವಿವರಿಸಿದ್ದರು. “ ನಿನಗೆ ಏಕಾಂಗಿಯಾಗಿ ಬದುಕಲು ಸಾದ್ಯವಿಲ್ಲ ಎನಿಸಿದರೆ, ನೀನು ವಿವಾಹವಾಗುವುದು ಒಳಿತುಎಂದು ಗಾಂಧೀಜಿ ಸಲಹೆ ನೀಡಿದ್ದರು. ಆದರೆ, ಪೃಥ್ವಿ ಸಿಂಗ್, ಮೀರಾ ಅವರನ್ನು ವಿವಾಹವಾಗುವ ಸಲಹೆಯನ್ನು ತಳ್ಳಿಹಾಕಿದ್ದರಿಂದ ಅಲ್ಲಿಗೆ ಅವರ ಕೌಟುಂಬಿಕ ಕನಸು ಮುಕ್ತಾಯಗೊಂಡಿತ್ತು. ಮನಸ್ಸನ್ನು ನಿಗ್ರಹಿಸಲು ಅವರು ಹರಿಯಾಣದ ಸಿಮ್ಲಾ ಹಾಗೂ ಶಿವಾಲಿಕ್ ಹಿಮ ಪರ್ವತಗಳಗಳ ಇದ್ದ ಕೆಲವು ಆಶ್ರಮಗಳಲ್ಲಿ ಒಂದು ವರ್ಷ ಕಾಲ ಮೌನ ವೃತ ಆಚರಿಸಿದರು. ಕಾರಣಕ್ಕಾಗಿ ಅವರು ಉತ್ತರ ಭಾರತದ ಹಿಮಾಲಯ ತಪ್ಪಲಿನಲ್ಲಿ ಆಶ್ರಮವೊಂದನ್ನು ನಿರ್ಮಿಸಿಕೊಂಡು ಬಾಳಲು ಇಚ್ಛಿಸಿದ್ದರು. ಅವರ ಇಚ್ಛೆಯಂತೆ ಗಾಂಧೀಜಿಯವರು ಆಗಖಾನ್ ಅರಮನೆಯಿಂದ ಬಿಡುಗಡೆಯಾದ ಮೇಲೆ ಮೀರಾಬೆಹನ್ ಗೆ ಹಣದ ಸಹಾಯ ನೀಡಿ ಆಶ್ರಮವೊಂದನ್ನು ಸ್ಥಾಪಿಸಲು ನೆರವಾದರುದೆಹಲಿ ಮತ್ತು ಹರಿದ್ವಾರ ಮುಖ್ಯ ರಸ್ತೆಯಲ್ಲಿರುವ ರೂರ್ಕಿ ಪಟ್ಟಣದ ಸಮೀಪವಿರುವ ಮುಲ್ದಾಸ್ಪುರ್ ಎಂಬಲ್ಲಿ ಕಿಸಾನ್ ಆಶ್ರಮ ವನ್ನು ಸ್ಥಾಪಿಸಿಕೊಂಡು ಬದುಕತೊಡಗಿದರು.

1947 ಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನ ಕೇಂದ್ರದಲ್ಲಿ ಜವಹರಲಾಲ್ ನೆಹರೂ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ, ಭಾರತ ಮತ್ತು ಪಾಕ್ ವಿಭಜನೆ ಕುರಿತಂತೆ ಎದ್ದ ಭಿನ್ನಾಭಿಪ್ರಾಯದಲ್ಲಿ  ಗಾಂಧಿ, ನೆಹರೂ , ಜಿನ್ನಾ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡಿದರು. 1947 ಲ್ಲಿ ಹೃಷಿಕೇಶದ ಬಳಿಬಾಪು ಗ್ರಾಮಎಂಬ ಮತ್ತೊಂದು ಆಶ್ರಮವನ್ನು ಸ್ಥಾಪಿಸಿದರು. 1947 ಅಕ್ಟೋಬರ್ ತಿಂಗಳಿನಲ್ಲಿ ಪಾಕಿಸ್ತಾನದ ಮುಸ್ಲಿಂ ಲೀಗ್  ನೀಡಿದ ನೇರ ಕಾರ್ಯಾಚರಣೆ (Direct Action) ಕರೆಗೆ ಪೂರ್ವ ಬಂಗಾಳದಲ್ಲಿ ನೌಕಾಲಿ ಎಂಬಲ್ಲಿ ಸಾವಿರಾರು ಹಿಂದೂಗಳು ಮುಸ್ಲಿಂ ಮತಾಂಧರ ಕೈಯಲ್ಲಿ ಕಗ್ಗೊಲೆಯಾದಾಗ, ಗಾಂಧೀಜಿಯವರ ಸಲಹೆ ಮೇರೆಗೆ ನೌಕಾಲಿಗೆ ತೆರಳಿ  ಹಲವು ತಿಂಗಳುಗಳ ಕಾಲ ನೆಲೆ ನಿಂತು ಎರಡು ಕೋಮಿನ ನಡುವೆ ಸಾಮರಸ್ಯವನ್ನು ಪುನರ್ ಪ್ರತಿಷ್ಟಾಪಿಸಲು ಹೆಣಗಾಡಿದರು. 1948 ಜನವರಿ 30 ರಂದು ಅವರು ಹೃಷಿಕೇಶದ ಆಶ್ರಮದಲ್ಲಿದ್ದಾಗ, ಗಾಂಧೀಜಿಯವರ ಹತ್ಯೆಯಾದ ಸುದ್ಧಿಯನ್ನು ಕೇಳಿದ ಮೀರಾ ಬೆಹನ್ ಸತತ ಏಳುಗಂಟೆಗಳ ಕಾಲ ಭೂಮಿಗೆ ನೆಟ್ಟ ಶಿಲೆಯಂತೆ ಮೌನವಾಗಿ ನಿಂತು ತಮ್ಮೊಳಗಿನ ನೋವು, ದುಃಖ, ಹತಾಶೆಗಳನ್ನು ನುಂಗಿಕೊಂಡರು. ಆನಂತರ ತಮ್ಮ ಸಹವರ್ತಿಗಳ ಜೊತೆ ದೆಹಲಿಗೆ ತೆರಳಿ ಗಾಂಧೀಜಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಗಾಂಧೀಜಿಯವರ ಸಾವಿನೊಂದಿಗೆ ಅವರ ಜೊತೆ ಕಳ್ಳು ಬಳ್ಳಿಯ ಸಂಬಂಧದಂತೆ ಇದ್ದ ತಂದೆ-ಮಗಳ ಸಂಬಂಧ ಕಡಿದು ಹೋಗಿ, ಭಾರತದಲ್ಲಿ ಅವರು ಅಕ್ಷರಶಃ ಅನಾಥರಾದರು. ಆದರೆ  ಗಾಂಧೀಜಿ ಹೇಳಿದ್ದನೀನು ಎಲ್ಲೇ ಇರು ದೇವರ ಮೇಲೆ ನಂಬಿಕೆಯಿಡು. ಆತ್ಮ ವಿಶ್ವಾಸ ಕಳೆದುಕೊಂಡು ಹತಾಶ ಮನೋಭಾವ ತಾಳುವುದರಲ್ಲಿ ಅರ್ಥವಿಲ್ಲಸದಾ ನೀನು ಪ್ರೀತಿಸುವ, ನಿನ್ನೊಳಗಿರುವ ಸ್ಪೂರ್ತಿ  ನಿನಗೆ ದಾರಿದೀಪವಾಗಬಲ್ಲದುಮಾತುಗಳು  ಮೀರಾ ಅವರ ಬದುಕಿನ ಮೂಲ ಮಂತ್ರಗಳಾದವು.

ಗಾಂಧೀಜಿಯವರ ಹತ್ಯೆಯಾದ ನಂತರ ಹನ್ನೊಂದು ವರ್ಷಗಳ ಕಾಲ ಹೃಷಿಕೇಶದ ಬಳಿ ವಾಸವಿದ್ದ ಅವರು ದೇಶಿ ಹಸುಗಳ ಸಂತಾನ ಅಭಿವೃದ್ಧಿಗಾಗಿ ಗೋಪಾಲ ಆಶ್ರಮವೊಂದನ್ನು ಸ್ಥಾಪಿಸಿದರು. ಹಿಮಾಲಯ ತಪ್ಪಲಿನ ನಿಸರ್ಗದಲ್ಲಿ ವಾಸವಾಗಿದ್ದ ಅವರಿಗೆ ಅಲ್ಲಿ ನಡೆಯುತ್ತಿದ್ದ ಮರಗಳ ಮಾರಣ ಹೋಮವನ್ನು ನೋಡಿ ಮೌನವಾಗಿರಲು ಸಾಧ್ಯವಾಗಲಿಲ್ಲ. ಭಾರತ ಸರ್ಕಾರ ರೈಲ್ವೆ ಹಳಿಗಳ ಕೆಳಗಡೆ ಹಾಸಲು ಹಿಮಾಲಯದ ದೇವದಾರು ಮತ್ತು ಓಕ್ ಮರಗಳನ್ನು ಕಡಿಯಲು ಖಾಸಾಗಿ ಕಂಪನಿಗಳಿಗೆ ಅನುಮತಿ ನೀಡಿತ್ತು. ಇದರ ಪರಿಣಾಮವಾಗಿ ಹಿಮಾಲಯದಲ್ಲಿ ಮಳೆಗಾಲದ ಸಂದರ್ಭದಲ್ಲಿ ಭೂ ಕುಸಿತ ಸಾಮಾನ್ಯವಾಯಿತು. ಭೂಕುಸಿತದಿಂದಾಗಿ ದನ ಕರುಗಳಿಗೆ ಯಥೇಚ್ಛವಾಗಿ ಸಿಗುತ್ತಿದ್ದ ಹಸಿರು ಹುಲ್ಲು ಕಾಣದಾಯಿತು. ಪರಿಸರದ ಅಸಮತೋಲನ ಕುರಿತು ಸ್ಥಳಿಯ ಜನತೆಗೆ ಅವರು ಎಚ್ಚರಿಸಿದರು. ಮೀರಾ ಬೆಹನ್ ಬಿತ್ತಿದ ಪ್ರಜ್ಞೆಯ ಬೀಜ ಮುಂದಿನ ದಿನಗಳಲ್ಲಿ ಚಿಪ್ಕೊ ( ಅಪ್ಪಿಕೊ) ಚಳುವಳಿಗೆ ನಾಂದಿಯಾಯಿತು.




ರಾಜಕೀಯ ಚಟುವಟಿಕೆಗಳಿಂದ ದೂರವಾಗಿ ಸನ್ಯಾಸಿನಿಯಂತೆ ಬದುಕುತ್ತಿದ್ದ ಮೀರಾ ಬೆಹನ್ ರವರಿಗೆ ದೂರದ ಸ್ವಿಟ್ಜರ್ಲ್ಯಾಂಡಿನಿಂದ ಒಂದು ಪತ್ರ ಬಂದಿತು. ಅವರಿಗೆ ಗಾಂಧೀಜಿಯವರನ್ನು ಪರಿಚಯ ಮಾಡಿಸಿದ್ದ ರೋಮೈನ್ ರೋಲಾಂಡ್ ರವರ ಪತ್ನಿ ಪತ್ರವನ್ನು ಬರೆದು ಜೊತೆಗೆ ರೋಲಾಂಡ್ ರವರು ತಮ್ಮ ಕೊನೆಯ ದಿನಗಳಲ್ಲಿ ಗಾಂಧೀಜಿಯ ಬೇಟಿಯ ನೆನಪುಗಳನ್ನು ಕುರಿತು ಬರೆದಿದ್ದ ಕೃತಿಯೊಂದನ್ನು ಕಳಿಸಿಕೊಟ್ಟಿದ್ದರು. ಅಮೇರಿಕಾ ಮೂಲದವರಾಗಿದ್ದ ರೋಮೈನ್ ರೋಲಾಂಡ್ ಬೆಥೋವನ್ ಸಂಗೀತದಿಂದ ಪ್ರಭಾವಗೊಂಡು ಪ್ಯಾರಿಸ್ ನಗರದಲ್ಲಿ   ಬಂದು ವಾಸವಾಗಿದ್ದರು. ನಂತರ ತಮ್ಮ ಕೊನೆಯ ದಿನಗಳಲ್ಲಿ ಪ್ರಾನ್ಸ್ ತೊರೆದು ಸ್ವಿಟ್ಜರ್ಲ್ಯಾಂಡಿನ ವೆಲ್ಲಿನ್ಯೂವ್ ಎಂಬಲ್ಲಿ ವಾಸವಾಗಿದ್ದರು. 1831 ರಲ್ಲಿ ಗಾಂಧೀಜಿಯವರು ಲಂಡನ್ ನಗರಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೀರಾ ಅವರ ಮನವಿ ಮೇರೆಗೆ ವೆಲ್ಲಿನ್ಯೂವ್ ಗೆ ತೆರಳಿದ್ದ ಗಾಂಧೀಜಿ ಎರಡು ದಿನ ರೋಲಾಂಡ್ ರವರ ಅತಿಥಿಯಾಗಿ ಉಳಿದುಕೊಂಡಿದ್ದರು. ನೆನಪುಗಳನ್ನು ಅವರು ಕೃತಿಯಲ್ಲಿ ದಾಖಲಿಸಿದ್ದರು. ಮೀರಾಬೆಹನ್ ಗೆ ತಲುಪಿದ ಪತ್ರ ಪುನಃ ಅವರಿಗೆ ಹುಟ್ಟಿ ಬೆಳೆದ ತಾಯ್ನಾಡನ್ನು ನೆನಪಿಸಿತು. ಹಾಗಾಗಿ 1959 ರಲ್ಲಿ ಅವರು ಭಾರತವನ್ನು ತೊರೆದು ಇಂಗ್ಲೇಂಡ್ ಗೆ ಹೋದರು. ಅಲ್ಲಿಂದ ನೇರವಾಗಿ ಆಸ್ಟ್ರಿಯಾದ ವಿಯೆನ್ನಾ ನಗರಕ್ಕೆ ತೆರಳಿ ಗಾಂಧಿ ಚಿಂತನೆಗಳನ್ನು ಪ್ರಸಾರ ಮಾಡುತ್ತಾ ಬದುಕಿದರು. 1982 ಜುಲೈ 20 ರಂದು ಅವರು ನಿಧನರಾದರು. ತಮ್ಮ ಜೀವಿತಾವಧಿಯಲ್ಲಿ ಅವರು ಭಾರತದಲ್ಲಿ ಕಳೆದ ಇಪ್ಪತ್ತಮೂರು ವರ್ಷಗಳು ಅವರ ಪಾಲಿಗೆ ಅರ್ಥಪೂರ್ಣ ಬದುಕಾಯಿತು. ಹಾಗಾಗಿ ಭಾರತದ ಸ್ವಾತಂತ್ರ್ಯ ಮತ್ತು ಮಹಾತ್ಮ ಗಾಂಧೀಜಿಯವರ ಇತಿಹಾಸದೊಂದಿಗೆ ಮೀರಾಬೆಹನ್ ಆದ ಇಂಗ್ಲೇಂಡಿನ ಹೆಣ್ಣುಮಗಳು ಮೆಡಲಿನ್ ಸ್ಲೆಡ್ ಅವರ ಹೆಸರು ಸಹ ಚಿರಸ್ಥಾಯಿಯಾಯಿತು.
                          * * *


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ