Sunday, 17 November 2013

ಕರ್ನಾಟಕ ಗಡಿ ಪ್ರದೇಶಗಳ ಅಭಿವೃದ್ಧಿಯ ಸಾಧ್ಯತೆಗಳು-ಎರಡು


ರಾಜ್ಯ ಸರಕಾರದ ಅನೇಕ ಸಾಧನೆಗಳ ನಡುವೆ ಅರಿಯಬೇಕಾದ ವಾಸ್ತವ ಸಂಗತಿಯೊಂದಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಬಂದೆರಗುವ ಬರಗಾಲವನ್ನು ಎದುರಿಸಲಾರದೆ ಉತ್ತರ ಕರ್ನಾಟಕದ ಬಿಜಾಪುರ, ರಾಯಚೂರು, ಗುಲ್ಬರ್ಗ, ಕೊಪ್ಪಳ ಜಿಲ್ಲೆಗಳಿಂದ ಲಕ್ಷಾಂತರ ಕುಟುಂಬಗಳು ಉದ್ಯೋಗ ಅರಸಿ ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಇವುಗಳಲ್ಲಿ ಶೇ.90 ರಷ್ಟು ಕೃಷಿ ಮತ್ತು ಕೂಲಿ ಕಾರ್ಮಿಕರ ಕುಟುಂಬಗಳೇ ಆಗಿವೆ. ಪ್ರದೇಶದ  ಜನತೆಗೆ ಈವರೆಗೆ ನಮ್ಮನ್ನಾಳಿದ, ಆಳುತ್ತಿರುವ ಸರಕಾರಗಳು ಉದ್ಯೋಗ ಸೃಷ್ಟಿಸುವಲ್ಲಿ ಏಕೆ ವಿಫಲವಾಗಿವೆ? ರಾಜ್ಯದ ಅಭಿವೃದ್ಧಿಯಲ್ಲಿ ಪ್ರದೇಶಗಳ ಕೊಡುಗೆ ಏನು? ವಿಫಲತೆಗೆ ಕಾರಣವೇನು? ಎಲ್ಲ ಪ್ರಶ್ನೆಗಳಿಗೆ ನಾವಿನ್ನೂ ಉತ್ತರ ಕಂಡುಕೊಂಡಿಲ್ಲ.
ಉತ್ತರ ಕರ್ನಾಟಕದ ಜನತೆ ನೆರೆಯ ರಾಜ್ಯಗಳಲ್ಲಿ ಕಟ್ಟಡದ ಕಾರ್ಮಿಕರಾಗಿ, ರಸ್ತೆ ಕಾಮಗಾರಿಯಲ್ಲಿ ತೊಡಗಿಕೊಳ್ಳುತ್ತ ,3ನೇ ದರ್ಜೆಯ ನಾಗರೀಕರಾಗಿ ಬೀದಿ ಬದಿಯಲ್ಲಿ ಕುಟುಂಬ ಸಮೇತರಾಗಿ ಬದುಕುತ್ತಿರುವ ಶ್ರಮಜೀವಿಗಳಿಗೆ ಶಾಶ್ವತ ಪರಿಹಾರವನ್ನು ಏಕೆ ಕಂಡುಕೊಂಡಿಲ್ಲ? ನತದೃಷ್ಟರ ಬದುಕು ರಾಜ್ಯದ ಜನತೆಗೆ ಅಪಮಾನ ಎಂದು ನಾವೇಕೆ ಪರಿಭಾವಿಸಿಲ್ಲ? ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ವರ್ಷದ 6 ತಿಂಗಳು ಹೊರರಾಜ್ಯಗಳಲ್ಲಿ ಬದುಕುವ ಕುಟುಂಬಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಯಾವುದೇ ಸವಲತ್ತುಗಳು ತಲುಪುವುದು ಕನಸಿನ ಮಾತೇ ಸರಿ. ಹಿಂದುಳಿದ ಪ್ರದೇಶಗಳಲ್ಲಿ ಅಸಂಖ್ಯಾತ ಉದ್ಯೋಗ ಸೃಷ್ಟಿಸುವ ಕೃಷಿಗೆ ಒತ್ತು ನೀಡಿ, ನೀರಾವರಿ ಯೋಜನೆ, ಕೈತೋಟ ಅಭಿವೃದ್ಧಿ, ಹೈನುಗಾರಿಕೆ, ಕೋಳಿಸಾಕಾಣಿಕೆ ಮುಂತಾದ ಉಪ ಕಸುಬುಗಳ ಮೂಲಕ ಜೀವನಕ್ಕೆ ಆಧಾರವಾಗಿ ನಿಲ್ಲುವುದರ ಜೊತೆಗೆ ಪರಿಣಾಮಕಾರಿಯಾದ ಸಾರ್ವಜನಿಕ ಪಡಿತರ ವ್ಯವಸ್ಥೆ, ಕೈಗೆಟುಕುವ ದರದಲ್ಲಿ ರೈತರಿಗೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಉಚಿತವಾಗಿ ಸಿಗುವ ಆರೋಗ್ಯ ಮತ್ತು ಶಿಕ್ಷಣ ಇವುಗಳನ್ನು ಒದಗಿಸಿ ನಿರುದ್ಯೋಗಿಗಳಿಗೆ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಮಾಡುವ ಮೂಲಕ ಗಡಿ ಪ್ರದೇಶದ ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಆಯಾ ಜಿಲ್ಲೆ ಮತ್ತು ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳಬಹುದಾದ ಬೆಳೆಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಉಪಕಸುಬುಗಳ ಬಗ್ಗೆ ಒಲವು ಮೂಡುವಂತೆ ಮಾಡಬೇಕಾದ ಅಗತ್ಯತೆ ಇದೆ. ನೆರೆಯ ಆಂದ್ರ ಪ್ರದೇಶ ಮತ್ತು ತಮಿಳುನಾಡಿನ ಕೃಷಿ ವಿ.ವಿ.ಗಳು ನಿಟ್ಟಿನಲ್ಲಿ ರೂಪಿಸಿರುವ ಕಾರ್ಯಕ್ರಮಗಳು ಅಭಿವೃದ್ಧಿಗೆ ನೆರವಾಗಬಲ್ಲವು. ಆಂದ್ರಪ್ರದೇಶದ ಸಂಗಾರೆಡ್ಡಿ, ಮೆಡಕ್, ಅದಿಲಾಬಾದ್ ಜಿಲ್ಲೆಗಳು, ತಮಿಳುನಾಡಿನ ದಿಂಡಿಗಲ್, ನಾಗರಕೋಯಿಲ್, ತಿರುನ್ವಾವೇಲಿ, ರಾಮನಾಥಪುರ ಜಿಲ್ಲೆಗಳಲ್ಲಿ ಕಡಿಮೆ ನೀರಿನಲ್ಲಿ ಹಾಗೂ ಮಳೆಯಾಶ್ರಯದಲ್ಲಿ ಬೆಳೆಯಬಹುದಾದ ಅನೇಕ ಬಗೆಯ ಆಹಾರ ಧಾನ್ಯಗಳ ತಳಿಗಳನ್ನು ಹಾಗೂ ಬಿಸಿಲು ಮತ್ತು ಉಷ್ಣವನ್ನು ಸಹಿಸಿಕೊಳ್ಳಬಲ್ಲ ಮೇಕೆ, ಕುರಿ ಹಾಗೂ ಗೋವುಗಳು ಮುಂತಾದ ತಳಿಗಳನ್ನು ಅಭಿವೃದ್ಧಿ ಪಡಿಸಿ  ಜನತೆಗೆ ಪರಿಚಯಿಸಲಾಗಿದೆ. ಇದರಿಂದಾಗಿ ಅನೇಕ ಬಡಕುಟುಂಬಗಳು ಬದುಕುವ ದಾರಿ ಕಂಡುಕೊಂಡಿವೆ. ಇಂತಹದ್ದೇ ಯೋಜನೆಗಳನ್ನು ರಾಜ್ಯ ಸರಕಾರ ಗಡಿನಾಡಿನ ಹಿಂದುಳಿದ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ.


ಕರ್ನಾಟಕ ಸರಕಾರದ ಮುಂದಿರುವ ಅತ್ಯಂತ ದೊಡ್ಡ ಸವಾಲೆಂದರೆ ಸ್ಥಳೀಯವಾಗಿ ದೊರಕುವ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದೇ ಆಗಿದೆ. ರಾಜ್ಯದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕೆಲವು ಸ್ಥಳಗಳಲ್ಲಿ ಬಹುತೇಕ ಕೈಗಾರಿಕೆಗಳು ಕೇಂದ್ರೀಕೃತವಾಗಿದ್ದು, ಇದು ಸಮಾನ ಉದ್ಯೋಗ ಸೃಷ್ಟಿಗೆ ತೊಡಕಾಗಿದೆ. ಇದಕ್ಕೆ ಪೂರಕವಾಗಿ ಬಂಡವಾಳ ಹೂಡಿಕೆದಾರರಿಗೆ ಅವರು ಕೇಳಿದ ಸ್ಥಳಗಳಲ್ಲೇ ಕೈಗಾರಿಕೆ ಸ್ಥಾಪಿಸಲು ಸರಕಾರ ಅನುವು ಮಾಡಿಕೊಡುತ್ತಿರುವುದು ಪ್ರಾದೇಶಿಕ ಅಸಮಾನತೆಗೆ ಮಾತ್ರವಲ್ಲ, ಉದ್ಯೋಗ ಸೃಷ್ಟಿಯ ವಿಫಲತೆಗೂ ಕಾರಣವಾಗತೊಡಗಿದೆ. ಬೆಂಗಳೂರು, ಮೈಸೂರಿನಂತಹ ನಗರಗಳು ಮೆಟ್ರೊಪಾಲಿಟನ್ ಸಂಸ್ಕøತಿಗೆ ಒಳಗಾಗಿದ್ದು ಇಂತಹ ಸ್ಥಳಗಳಲ್ಲಿ ಸೃಷ್ಟಿಯಾಗುವ ಉದ್ಯೋಗದ ಅವಕಾಶಗಳು ನೆರೆ ರಾಜ್ಯಗಳ ಅನ್ಯ ಭಾಷಿಗರ ಪಾಲಾಗುತ್ತಿವೆ. ಇಂತಹ ಸ್ಥಳಗಳಿಗೆ ಬದಲಾಗಿ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಭೂಮಿ, ನೀರು, ವಿದ್ಯುತ್ ಒದಗಿಸುವುದರ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರಕಾರ ಮುಂದಾಗ ಬೇಕಾಗಿದೆ. ನಿಟ್ಟಿನಲ್ಲಿ ಗಡಿ ನಾಡ ಪ್ರದೇಶಗಳಲ್ಲಿ ಲಭ್ಯವಾಗುವ ನೈಸರ್ಗಿಕ ಹಾಗೂ ಮಾಸಸನವ ಸಂಪನ್ಮೂಲಗಳ ಬಗ್ಗೆ ಅಧ್ಯಯನ ಅತ್ಯವಶ್ಯಕ.

ಬೆಂಗಳೂರು ನಗರದಲ್ಲಿ 4 ಸಾವಿರ ಸಿದ್ಧ ಉಡುಪುಗಳ ಕಾರ್ಖಾನೆಗಳು ಇದ್ದು, ಇವುಗಳಲ್ಲಿ 16 ಲಕ್ಷ ಮಹಿಳಾ ಕಾರ್ಮಿಕರು ಅಸಂಘಟಿತವಾಗಿ ದುಡಿಯುತ್ತಿದ್ದಾರೆ.(ಸರಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಮಹಿಳಾ ಕಾರ್ಮಿಕರ ಸಂಖ್ಯೆ 6 ಲಕ್ಷ). ಬೆಂಗಳೂರು ನಗರದಿಂದ 98 ಕಿ.ಮೀ. ದೂರದ ಮಂಡ್ಯ, 80 ಕಿ.ಮೀ. ದೂರದ ಮದ್ದೂರು, 60 ಕಿ.ಮೀ. ದೂರದ ಚನ್ನಪಟ್ಟಣ, 50 ಕಿ.ಮೀ. ದೂರದ ರಾಮನಗರ ಪಟ್ಟಣ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಂದ 5 ಸಾವಿರ ಮಹಿಳಾ ಕಾರ್ಮಿಕರು ದುಡಿಯುತ್ತಿರುವುದನ್ನು ಮನಗಂಡ ಪ್ರದೇಶಗಳ ಜನ ಪ್ರತಿನಿಧಿಗಳು ಮುಖ್ಯಮಂತ್ರಿಯಾಗಿದ್ದ ಎಚ್,ಡಿ.ಕುಮಾರಸ್ವಾಮಿಯವರ ಗಮನಕ್ಕೆ ತಂದರು. ಇದರ ಪರಿಣಾಮವಾಗಿ ಅಂದು ಮುಖ್ಯಮಂತ್ರಿಯಾಗದ್ದ ಕುಮಾರಸ್ವಾಮಿ ಸಿದ್ದ ಉಡುಪು ಕಾರ್ಖಾನೆಗಳ ಮಾಲೀಕರ ಮನವೊಲಿಸಿದ ಪರಿಣಾಮ ಇಂದು ರಾಮನಗರ, ಚನ್ನಪಟ್ಟಣ, ಮದ್ದೂರಿನಲ್ಲಿ 30 ಕ್ಕೂ ಹೆಚ್ಚು  ಸಿದ್ಧ ಉಡುಪು ಕಾರ್ಖಾನೆಗಳು ತಲೆ ಎತ್ತಿವೆ. ಬೆಂಗಳೂರು ನಗರದಲ್ಲಿ ನೀಡುತ್ತಿದ್ದ ವೇತನಕ್ಕಿಂತ ಕಡಿಮೆ ವೇತನಕ್ಕೆ ದುಡಿಯುವ ಮಹಿಳಾ ಕಾರ್ಮಿಕರು ಲಭ್ಯವಾಗಿದ್ದು, ಸ್ಥಳೀಯ ಹೆಣ್ಣು ಮಕ್ಕಳಿಗೆ ತಾವಿರುವ ಮನೆಯ ಸಮೀಪವೆ ಉದ್ಯೋಗ ಸೃಷ್ಟಿಯಾದಂತಾಗಿದೆ. ಮಹಿಳಾ ಕಾರ್ಮಿಕರಲ್ಲಿ ಬಹುತೇಕ ಮಂದಿ ಹಿಂದುಳಿದ ವರ್ಗಗಳಿಂದ ಬಂದಿರುವುದು ವಿಶೇಷ. ಕೈಗಾರಿಕೋದ್ಯಮಿಗಳಿಗೆ ಕಡಿಮೆ ದರದಲ್ಲಿ ದೊರಕುತ್ತಿರುವ ಕಟ್ಟಡ, ಭೂಮಿ ಹಾಗೂ ಮಾನವ ಸಂಪನ್ಮೂಲ ಸೇರಿದಂತೆ ಇತರೆ ಸೌಲಭ್ಯಗಳು ದೊರಕುತ್ತಿರುವುದು ಸಿದ್ದ ಉಡುಪು ಕಾರ್ಖಾನೆ ಸ್ಥಾಪನೆಗೆ ಹೆಚ್ಚು ಉತ್ಸಾಹ ಬಂದಂತಾಗಿದೆ. ಇಂತಹ ಕ್ರಿಯಾಶೀಲ ಯೋಜನೆಗಳನ್ನು ರಾಜ್ಯದ ಎಲ್ಲೆಡೆ ವಿಸ್ತರಿಸುವ ಅಗತ್ಯವಿದೆ. ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಮೋಟಾರು ವಾಹನಗಳ ಬಿಡಿ ಭಾಗಗಳು, ಸಿದ್ದಪಡಿಸಿದ ಆಹಾರ ವಸ್ತುಗಳು, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹತ್ತಿ, ಜೋಳ, ಮೆಣಸಿನಕಾಯಿ ಆಧಾರಿತ ಗುಡಿ ಕೈಗಾರಿಕೆಗಳಿಗೆ ಒಳ್ಳೆಯ ಅವಕಾಶವಿದೆ. ಅದೇ ರೀತಿ ಬಿಜಾಪುರ ಜಿಲ್ಲೆಯಲ್ಲಿ ತೋಟಗಾರಿಕೆ, ಹಣ್ಣು ಹಂಪಲುಗಳು ಮತ್ತು ಆಹಾರ ಸಂಸ್ಕರಣೆ, ಬೀದರ್ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸ್ಥಾಪನೆಗೆ ಉತ್ತಮ ಅವಕಾಶವಿದೆ.


ಹತ್ತು ವರ್ಷಗಳ ಹಿಂದೆ ಬೆಂಗಳೂರು ಸುತ್ತ ಮುತ್ತ ಎಕರೆಗೆ ತಲಾ 10 ಲಕ್ಷ ರೂನಂತೆ ಸರಕಾರ ಭೂಮಿ ನೀಡುತ್ತಿದ್ದ ಸಂದರ್ಭದಲ್ಲಿ ಆಂದ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬುನಾಯ್ಡು ಹೈದರಾಬಾದ್-ಬೀದರ್ ನಡುವಿನ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎಕರೆಗೆ 1 ಲಕ್ಷ ರೂನಂತೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಕೃಷಿಗೆ ಯೋಗ್ಯವಲ್ಲದ ಭೂಮಿ ನೀಡುವುದರ ಮೂಲಕ ಜಗತ್ತಿನ ದೈತ್ಯ ಸಂಸ್ಥೆಗಳನ್ನೆಲ್ಲಾ ತನ್ನೆಡೆಗೆ ಸೆಳೆದು ಕರ್ನಾಟಕಕ್ಕೆ ಸಡ್ಡು ಹೊಡೆದದ್ದನ್ನು ನಾವು ಗಮನಿಸಬೇಕು. ಈಗ ಬೆಂಗಳೂರು ಸುತ್ತ ಮುತ್ತ ಭೂಮಿಯ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಬೆಂಗಳೂರಿನಿಂದ ಕೇವಲ 42 ಕಿ.ಮೀ. ದೂರದ ಹೊಸೂರು ತಾಲೂಕಿನಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ, ಅತ್ತಿಬೆಲೆ ಪಟ್ಟಣಗಳ ಸರಹದ್ದಿನಲ್ಲಿ ತಮಿಳುನಾಡು ಸರಕಾರ 4.5 ಸಾವಿರ ಎಕರೆ ಭೂಮಿಯನ್ನು .ಟಿ. ಪಾರ್ಕ್ ಆಗಿ ಪರಿವರ್ತಿಸಿ ಕರ್ನಾಟಕದ ಮಾಹಿತಿ ತಂತ್ರಜ್ಞಾನದ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಕರ್ನಾಟಕ ಸರಕಾರವೂ ಕೂಡ ಗಡಿ ಭಾಗದ ಮಾಲೂರು, ಮಾಸ್ತಿ, ಚಿಂತಾಮಣಿ, ಕೋಲಾರ ಪ್ರದೇಶಗಳಲ್ಲಿ .ಟಿ. ಪಾರ್ಕ್ಗಳನ್ನು ಸೃಷ್ಟಿಸುವ ಅಗತ್ಯವಿದೆ. ಕರ್ನಾಟಕ ಸರಕಾರ ಕಾಸರಗೋಡು ಸಮೀಪ ಕೇರಳ ಸರಕಾರ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶವನ್ನು ಎಚ್ಚರಿಕೆಯಿಂದ ಗಮನಿಸುವ ಅಗತ್ಯವಿದೆ. ಇಲ್ಲದಿದ್ದರೆ ಉದ್ಯೋಗ ಸೃಷ್ಟಿಗೆ ಅವಕಾಶದ ಬಾಗಿಲುಗಳು ಮುಚ್ಚಿ ಹೋಗುವುದನ್ನು ನಾವು ಕಾಣಬೇಕಾಗುತ್ತದೆ.

    


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವಿಧೇಯಕ ಈಗಾಗಲೇ ವಿಧಾನ ಸಭೆಯಲ್ಲಿ ಅನುಮೋದನೆಗೊಂಡಿರುವುದರಿಂದ ಪ್ರಾಧಿಕಾರಕ್ಕೆ ವಿಶೇಷ ಸ್ವಾಯತ್ತತೆ ದೊರಕಿದೆ. ಅವಕಾಶವನ್ನು ಬಳಸಿಕೊಂಡು ರಾಜ್ಯದ ಗಡಿ ಪ್ರದೇಶಗಳಲ್ಲಿ, ಎಲ್ಲಾ ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿ ಕೊಳ್ಳುವುದರ ಮೂಲಕ ಗಡಿ ಪ್ರದೇಶಗಳಲ್ಲಿ ನಾಡು ನುಡಿ, ಸಾಂಸ್ಕøತಿಕ ಪೋಷಣೆಗೆ ಮುಂದಾಗಬೇಕಾಗಿದೆ. ಪ್ರಾಧಿಕಾರದ ಸದಸ್ಯರಲ್ಲಿ ಸರಕಾರದ ವಿವಿಧ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಇರುವುದರಿಂದ ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆ, ಗ್ರಾಮಪಂಚಾಯತಿ ಇಲಾಖೆ, ಕಂದಾಯ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆಯ ಕಾರ್ಯದರ್ಶಿಗಳಿರುವುದರಿಂದ ಗಡಿ ಪ್ರದೇಶದ ಕುಂದು ಕೊರತೆಗಳನ್ನು ಅವರ ಗಮನಕ್ಕೆ ತಂದು ತಕ್ಷಣದಲ್ಲೇ ನಿವಾರಿಸುವ ಅವಕಾಶ ಪ್ರಾಧಿಕಾರಕ್ಕೆ ದೊರಕಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಸರ್ವತೋಮುಖ ಏಳಿಗೆಗೆ ಶ್ರಮಿಸುವುದರ ಜೊತೆಗೆ ರಾಜ್ಯದ ಬೆಳವಣಿಗೆಗೆ ಪೂರಕವಾಗುವಂತೆ ಸರಕಾರಕ್ಕೆ ಸಲಹೆ ಸೂಚನೆ ನೀಡುವ ಅಪರೂಪದ ಅವಕಾಶ ಪ್ರಾಧಿಕಾರಕ್ಕೆ ದೊರಕಿದೆ. ನಿಟ್ಟಿನಲ್ಲಿ ಗಡಿ ಜಿಲ್ಲೆಗಳ ಕುಂದು ಕೊರತೆಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಸಮೀಕ್ಷೆ ಅವಶ್ಯಕವಾಗಿದೆ.
ಗಡಿ ಜಿಲ್ಲೆಗಳಾದ ಬಿಜಾಪುರ, ಬೀದರ್, ಗುಲ್ಬರ್ಗ ಜಿಲ್ಲೆಗಳಲ್ಲಿರುವ ಐತಿಹಾಸಿಕ ಸ್ಮಾರಕಗಳಿಂದಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಅದೇ ರೀತಿ ಚಾಮರಾಜನಗರ, ಕೊಡಗು, ಬೆಳಗಾಂ ಜಿಲ್ಲೆಯ ಖಾನಾಪುರದ ಪರಿಸರ ಮತ್ತು ಅರಣ್ಯ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆಗಳಿವೆ.

ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆ ನಷ್ಟದಿಂದ ಕಂಗೆಟ್ಟಿದ್ದ ಅಲ್ಲಿನ ಬೆಳೆಗಾರರು ತಮ್ಮ ಎಸ್ಟೇಟ್ಗಳಲ್ಲಿ ಹೋಂ ಸ್ಟೇ ಹೆಸರಿನಲ್ಲಿ ಅತಿಥಿಗೃಹಗಳನ್ನು ಸ್ಥಾಪಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. ಇದಲ್ಲದೆ ಕೋಲಾರ ಜಿಲ್ಲೆಯ ಗಡಿ ಭಾಗದ ಚಿಂತಾಮಣಿ ಸಮೀಪ ಮದನಪಲ್ಲಿ ಬಳಿ ಇರುವ ಹಾರ್ಸ್ಲಿ ಹಿಲ್ಸ್ ಗಿರಿಧಾಮವನ್ನು ಆಂದ್ರ ಪ್ರದೇಶದ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿ, ನೂರಾರು ಕಾಟೇಜ್ಗಳನ್ನು ನಿರ್ಮಿಸಿ ಕರ್ನಾಟಕದ ಪ್ರವಾಸಿಗರನ್ನೂ ಸೆಳೆಯುತ್ತಿವೆ. ಇಲ್ಲಿ ಯಾವುದೇ ಖಾಸಗಿ ವಸತಿ ನಿರ್ಮಾಣಕ್ಕೆ ಆಂದ್ರ ಸರಕಾರ ಅವಕಾಶ ನೀಡದಿರುವುದು ವಿಶೇಷ. ಇದೇ ಮಾದರಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರವು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿಬೆಟ್ಟ, ಕ್ಯಾತದೇವರಗುಡಿ ಅರಣ್ಯಪ್ರದೇಶ, ಬೆಳಗಾಂ ಜಿಲ್ಲೆಯ ಖಾನಾಪುರ, ..ಜಿಲ್ಲೆಯ ಜೋಯಿಡಾ ಅರಣ್ಯಪ್ರದೇಶ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಇವುಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿದರೆ ಸ್ಥಳೀಯವಾಗಿ ಹಲವಾರು ಉದ್ಯೋಗಗಳ ಸೃಷ್ಟಿಗೆ ಸಹಾಯವಾಗುತ್ತದೆ.
ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿ ಜಿಲ್ಲೆಗಳ ರೈತರ ಬದುಕನ್ನು ಹಸನುಗೊಳಿಸಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ. ಸ್ಥಳೀಯ ಗುಡಿ ಕೈಗಾರಿಕೆಗಳ ಕೊರತೆಯಿಂದಾಗಿ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬೆಳೆಯುವ ಹತ್ತಿ ಜಿನ್ನಿಂಗ್ ಮತ್ತು ನೂಲು ತಯಾರಿಕೆಗಾಗಿ ದೂರದ ಕೊಯಮತ್ತೂರಿಗೆ ಹೋಗುತ್ತಿದ್ದರೆ, ಮೆಣಸಿನಕಾಯಿ ಗುಜರಾತ್ ಮತ್ತು ಆಂದ್ರ ರಾಜ್ಯಗಳಿಗೆ ರಫ್ತಾಗುತ್ತಿದೆ. ಅದೇ ರೀತಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯುವ ಉತ್ತಮ ಗುಣ ಮಟ್ಟದ ಅರಿಶಿಣ ಮಾರುಕಟ್ಟೆಯ ಕೊರತೆಯಿಂದಾಗಿ ತಮಿಳುನಾಡಿನ ಈರೋಡ್ಗೆ ಸಾಗಿಸಲ್ಪಡುತ್ತಿದೆ. ಇಂತಹ ಅಂಶಗಳನ್ನು ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.
ರಾಜ್ಯದ ಗಡಿಗೆ ಹೊಂದಿಕೊಂಡಂತಿರುವ ನೆರೆ ರಾಜ್ಯಗಳ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ದೊರಕುತ್ತಿರುವ ಸರಕಾರದ ಅನುಕೂಲತೆಗಳನ್ನು ತೌಲನಿಕವಾಗಿ ಗಮನಿಸುವ ಅಗತ್ಯವಿದೆ. ಉದಾಹರಣೆಗೆ ಕರ್ನಾಟಕದ ರೈತರಿಗೆ ಹೋಲಿಸಿದರೆ ಆಂದ್ರ ಸರಕಾರ ಅಲ್ಲಿನ ರೈತರಿಗೆ ವಿದ್ಯುತ್, ಬೀಜ, ಗೊಬ್ಬರ ಇತ್ಯಾದಿ ವಿಷಯಗಳಲ್ಲಿ ನೀಡುತ್ತಿರುವ ರಿಯಾಯ್ತಿ, ಗಡಿ ಭಾಗದ ಕನ್ನಡಿಗರಿಗೆ ರಾಜ್ಯ ಸರಕಾರದ ಬಗ್ಗೆ ನಿರಾಶೆ ಮೂಡಿಸುವಂತಿದೆ. ಬೆಳಗಾಂ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಕನ್ನಡ ಸರಕಾರಿ ಪ್ರಾಥಮಿಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ತಾಲೂಕಿನಲ್ಲಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಇಲ್ಲಿನ ಕನ್ನಡಿಗರು ತಮ್ಮ ಮಕ್ಕಳನ್ನು ಅತ್ಯುತ್ತಮ ವ್ಯವಸ್ಥೆಯಿಂದ ಕೂಡಿರುವ ಮರಾಠಿ ಶಾಲೆಗಳಿಗೆ ಕಳಿÀಸುತ್ತಿದ್ದಾರೆ. ಇದನ್ನು ಸರಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರ ಗಂಭಿರವಾಗಿ ಪರಿಗಣಿಸಬೇಕಾಗಿದೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾಂ 10 ತಾಲೂಕುಗಳಲ್ಲಿ
1278 ಗ್ರಾಮಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಒಟ್ಟು 3210 ಪ್ರೈಮರಿ ಶಾಲೆಗಳು, 628 ಪ್ರೌಢಶಾಲೆ ಹಾಗೂ ಪಿ.ಯು.ಸಿ. ಕಾಲೇಜುಗಳಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆಯ ಮಟ್ಟ ಶೋಚನೀಯ ಸ್ಥಿತಿಯಲ್ಲಿದೆ.


ಗುಲ್ಬರ್ಗ ಜಿಲ್ಲೆಯಲ್ಲಿ 48 ಹೋಬಳಿ ಕೇಂದ್ರಗಳು, 337 ಗ್ರಾಮ ಪಂಚಾಯತಿಗಳಿದ್ದು 1360 ಗ್ರಾಮಗಳಿವೆ. ಇವುಗಳಲ್ಲಿ 642 ಗ್ರಾಮಗಳಿಗೆ (ಲಂಬಾಣಿ ತಾಂಡಗಳೂ ಸೇರಿ) ವಿದ್ಯುತ್ಛಕ್ತಿ ಸೌಲಭ್ಯ ಈವರೆಗೆ ದೊರೆತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ 3 ತಾಲೂಕುಗಳಿದ್ದು 27 ಹೋಬಳಿ ಕೇಂದ್ರಗಳು, 542 ಗ್ರಾಮಗಳನ್ನು ಒಳಗೊಂಡಿದ್ದು ಶೇ.70 ರಷ್ಟು ಜನತೆ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗದ ಹಳ್ಳಿಗಳೂ ಕೂಡ ಶೋಚನೀಯ ಸ್ಥಿತಿಯಲ್ಲಿವೆ.
ಬೀದರ್ ಜಿಲ್ಲೆಯ ಬಾಲ್ಕಿ, ಔರಾದ್, ಬಸವಕಲ್ಯಾಣ, ಹಮನಾಬಾದ್, ಬೀದರ್, ಬಿಜಾಪುರ ಜಿಲ್ಲೆಯ ಬಿಜಾಪುರ , ಇಂಡಿ ತಾಲೂಕು, ಬೆಳಗಾಂ ಜಿಲ್ಲೆಯಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ, ಅಥಣಿ, ಗುಲ್ಬರ್ಗ ಜಿಲ್ಲೆಯ ಅಫ್ಜಲ್ಪುರ, ಆಳಂದ, ಚಿಂಚೋಳಿ, ಸೇಡಂ, ಯಾದಗಿರಿ ತಾಲೂಕು, ರಾಯಚೂರು ಜಿಲ್ಲೆಯ ರಾಯಚೂರು, ಮಾನ್ವಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಸಂಡೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಪಾವಗಡ, ಕೋಲಾರ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ರಾಮನಗರ ಜಿಲ್ಲೆಯ ಕನಕಪುರ, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ, .. ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, .. ಜಿಲ್ಲೆಯ ಕಾರವಾರ, ಜೋಯಿಡಾ ತಾಲೂಕುಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.


ಎರಡು ಹಂತಗಳಲ್ಲಿ ಅಧ್ಯಯನವನ್ನು ಕೈಗೊಳ್ಳಬೇಕಾಗಿದ್ದು, ಗಡಿ ಜಿಲ್ಲೆಗಳನ್ನು ಉತ್ತರ ಮತ್ತು ದಕ್ಷಿಣ ಭಾಗವಾಗಿ ವಿಂಗಡಿಸಿಕೊಂಡು, ಗಡಿ ಪ್ರದೇಶಗಳಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಧ್ಯಯನ ಮಾಡಬೇಕಾಗಿದೆ. ಜೊತೆಗೆ ಹೊರ ರಾಜ್ಯಗಳಲ್ಲಿರುವ ಕನ್ನಡ ಪ್ರದೇಶಗಳಾದ ಜತ್ತ, ಮಂಗಲವೇಡ್, ಅಕ್ಕಲಕೋಟೆ, ಸೊಲ್ಲಾಪುರ, ಉಮರಗ, ವಾಸ್ಕೊ, ಅಧೋನಿ, ಹಿಂದೂಪುರ, ಹೊಸೂರು, ಡೆಂಕಣಿಕೋಟೆ, ಕುಪ್ಪಂ, ಗೋಪಿನಾಥಂ, ಮಾನಂತವಾಡಿ, ಸುಲ್ತಾನ್ಬತೇರಿ, ಕಾಸರಗೋಡು ಪ್ರದೇಶಗಳಲ್ಲಿ ಕನ್ನಡಿಗರ ಸ್ಥಿತಿ ಗತಿ ಹಾಗೂ ಕನ್ನಡದ ನಾಡು ನುಡಿ ಭಾಷೆಗೆ ಸಂಬಂಧಿಸಿದಂತೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ.

ಯಾವುದೇ ಅಭಿವೃದ್ಧಿಯ ಕಾರ್ಯ ಚಟುವಟಿಕೆಗಳಿಗೆ ಪ್ರತಿಫಲ ಸಿಗಬೇಕಾದರೆ ಮೊದಲು ಅಲ್ಲಿನ ಜನರ ಬದುಕು ಹಸನಾಗಬೇಕು. ಗಡಿ ಭಾಗದ ಕನ್ನಡಿಗರ ಜೀವನ ಸುಧಾರಿಸದೆ ನಾಡು ನುಡಿಯ ಬೆಳವಣಿಗೆ ಸಾಧ್ಯವಿಲ್ಲ. ಸಂದರ್ಭದಲ್ಲಿ 1985ರಲ್ಲಿ ಬೀದರ್ನಲ್ಲಿ ಜರುಗಿದ 57ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ.ಹಾ..ನಾಯಕ್ ಹೇಳಿದನಾವು ದೊಡ್ಡವರಾಗದೇ ನಮ್ಮ ನಾಡು ನುಡಿಗಳು ದೊಡ್ಡವಾಗುವುದಿಲ್ಲಎಂಬ ಮಾತು ನೆನಪಿಗೆ ಬರುತ್ತದೆ. ದಿಶೆಯಲ್ಲಿ ಕರ್ನಾಟಕ sಸರ್ಕಾರ ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಕನ್ನಡ ನಾಡನ್ನು ಮುನ್ನಡೆಸುವುದರ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕಿದೆ.
                                                                                               
    

No comments:

Post a Comment