ಖರ್ಗೆ ಕುಟುಂಬವು, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ಸರ್ಕಾರದಿಂದ ನೂರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ಪಡೆದಿದೆ ಎಂಬ ಸುದ್ದಿಯನ್ನು ಅತ್ಯಂತ ಶ್ರದ್ಧೆಯಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದೀರಿ. ಅದು ಕರ್ತವ್ಯ ಕೂಡಾ ಹೌದು.
ಇದನ್ನು ಪ್ರಶ್ನಿಸಲು, ಕಾಂಗ್ರೆಸ್ ಪಕ್ಷದ ಖಾಲಿ ತಲೆಗಳಿಗೆ ಮಿದುಳು, ಬುದ್ದಿ ಎರಡೂ ಇಲ್ಲ. ಆದರೆ, ನಿಮ್ಮ ಬುದ್ದಿ ಎಲ್ಲಿ ಹೋಗಿತ್ತು? ಕತ್ತೆ ಕಾಯಲಿಕ್ಕೆ ಹೋಗಿತ್ತಾ? ಸುದ್ದಿಗೋಷ್ಟಿಯಲ್ಲಿ ಬೊಗಳಿದ್ದನ್ನು ಚಾಚೂ ತಪ್ಪದೆ ಬರೆಯುವುದು ಪತ್ರಿಕೋದ್ಯಮವೆ?
ಬಿ.ಎಸ್.ಯಡಿಯೂಪ್ಪ ಮತ್ತು ಬಸವರಾಜ ಬೊಮ್ಮಾಯಿ ಇವರ ಆಳ್ವಿಕೆಯ ಅವಧಿಯಲ್ಲಿ, ಬೆಂಗಳೂರು- ಮಾಗಡಿ ರಸ್ತೆಯ ಚನ್ನಸಂದ್ರದಲ್ಲಿ ಇರುವ ಆರ್.ಎಸ್.ಎಸ್. ವಿದ್ಯಾಸಂಸ್ಥೆಗೆ ಹೆಸರುಘಟ್ಟ ಬಳಿ ಹಾಗೂ ಧಾರವಾಡದ ಗರಗ ಬಳಿ ಇರುವ ಶಿಕ್ಷಣ ಸಂಸ್ಥೆಗೆ ಧಾರವಾಡ ಹೊರ ವಲಯದಲ್ಲಿ ನೂರಾರು ಕೋಟೆ ಬೆಲೆ ಬಾಳುವ ಭೂಮಿ ನೀಡಿದ್ದು ಅಕ್ರಮ ಅಲ್ಲವೆ? ಎಂದು ಸುದ್ದಿಗೋಷ್ಟಿಯಲ್ಲಿ ನೀವು ಪ್ರಶ್ನೆ ಕೇಳಬಹುದಿತ್ತಲ್ಲವೆ? ಅಥವಾ ವರದಿಯನ್ನು ಪ್ರಕಟಿಸುವಾಗ, ಬಿ.ಜೆ.ಪಿ. ಸರ್ಕಾರದ ಈ ಪ್ರಕರಣಗಳನ್ನು ಕೊನೆಯಲ್ಲಿ ಟಿಪ್ಪಣಿ ರೂಪದಲ್ಲಿ ಬರೆಯ ಬಹುದಿತ್ತಲ್ಲವೆ?
ಇದು ರಾಜ್ಯದ ಸುದ್ದಿಯಾಯಿತು. ರಾಷ್ಟ್ರ ಮಟ್ಟದಲ್ಲಿ ಡೋಂಗಿ ಸಾಧಕ ರಾಮದೇವ್ ಎಂಬ ಯೋಗ ಗುರುವಿಗೆ ಉತ್ತರಖಾಂಡ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಒಂದು ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಪತಾಂಜಲಿ ಎಂಬ ಗೊಬ್ಬರದ ಉತ್ಪಾದನೆಗೆ ಬಿ.ಜಿ ಪಿ.ಸರ್ಕಾರ ಇರುವ ರಾಜ್ಯಗಳು ನೀಡಿರುವುದು ತಪ್ಪಲ್ಲವೆ? ಇದು ಅಕ್ರಮವಲ್ಲವೆ? ಎಂಬ ಪ್ರಶ್ನೆಯನ್ನು ನೀವು ಕೇಳಿದ್ದರೆ, ಸುದ್ದಿಗೋಷ್ಟಿಯಲ್ಲಿದ್ದ ನಾಯಕರ ಚೆಡ್ಡಿಯೊಳಗೆ ಬೋಂಡಾ, ಸಾಂಬಾರ್ ಚೆಲ್ಲಾಡುತ್ತಿತ್ತು.
ನಿಮ್ಮ ನಿಷ್ದೆ ಮತ್ತು ದೇಶಭಕ್ತಿ ಎಲ್ಲವನ್ನೂ ಗಮನಿಸುತ್ತಿರುವ ನನಗೆ, ನಿಮಗಾಗಿ, ಹರೇ ರಾಮ, ಹರೇ ಕೃಷ್ಣ ಸಂಘದ ಮಾದರಿಯಲ್ಲಿ ಹರೇ ಮೋದಿ, ಹರೇ ಶಾ ಎಂಬ ಸಂಘವನ್ನು ಕಟ್ಟಿಕೊಡಬೇಕು ಎಂದು ಆಸೆಯಾಗುತ್ತಿದೆ.
ಭಜನೆಗೆ ನಾನೇ ಹಾಡುಗಳನ್ನು ಬರೆದು, ಅವುಗಳಿಗೆ ಕಥಕ್ಕಳಿ, ಮೋಹಿನಿಯಾಟ್ಟಂ, ಭರತನಾಟ್ಯ, ಕೂಚುಪುಡಿ, ಕಥಕ್ ನೃತ್ಯವನ್ನು ಅಳವಡಿಸಿ, ನಿಮಗೆ ತರಬೇತು ನೀಡಿದರೆ, ಇಡೀ ಜಗತ್ತಿನಲ್ಲಿ ಭಾರತದ ಪತ್ರಿಕೋದ್ಯಮವನ್ನು ಮುಗಿಲೆತ್ತರಕ್ಕೆ ನೀವು ಮುಟ್ಟಿಸಬಲ್ಲಿರಿ.
ಹೌದಲ್ಲವೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ