ಬುಧವಾರ, ನವೆಂಬರ್ 11, 2026

ಭಾರತದ ಪುರಾಣ ಕಾವ್ಯಗಳ ವೈವಿಧ್ಯತೆ ಮತ್ತು ನಮ್ಮ ಜನಪದರ ಸೃಜನಶೀಲತೆ

 

Feed posts

.


ಕಳೆದ ಒಂದು ವಾರದಿಂದ ನಮ್ಮ ಕನ್ನಡದ ಪ್ರತಿಭಾವಂತ ಯುವ ನಟ ಯಶ್ ಅಭಿನಯದ ರಾಮಾಯಣ ಎಂಬ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಸಾಮಾಜಿಕ ತಾಣಗಳಲ್ಲಿ ರಾವಣ ಪಾತ್ರದಲ್ಲಿ ನಟಿಸಿರುವ ಯಶ್ ಅಭಿನಯದ ಬಗ್ಗೆ ಹಿಂದಿ, ತೆಲುಗು, ತಮಿಳು ಸಿನಿಮಾ ರಸಿಕರು ಗುಣಗಾನ ಮಾಡುತ್ತಿದ್ದಾರೆ. ರಾಮಾಯಣ ಸಿನಿಮಾದ ಈ ಚಿತ್ರಕಥೆಯ ಕುರಿತಾಗಿ ಬಹುತೇಕ ಪತ್ರಿಕೆಗಳಲ್ಲಿ ಒಳ್ಳೆಯ ಅಭಿಒ್ರಾಯ ವ್ಯಕ್ತವಾಗಿದೆ.
ಆದರೆ, ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಶ್ರೀರಾಮನೇ ಮನೆ ದೇವರು ಮತ್ತು ಮಾತಾಗಿರುವ ಸಂಘ ಪರಿವಾರದ ವ್ಯಕ್ತಿಗಳಿಗೆ ಈ ಸಿನಿಮಾ ಚಿತ್ರಕಥೆ ಇಷ್ಟವಾಗಿಲ್ಲ. ಆದರೆ, ರಾಮಾಯಣವನ್ನು ವಿರೋಧಿಸುವ ಸ್ಥಿತಿಯಲ್ಲಿ ಅವರಿಲ್ಲ.
ಹಿಂದೂ ಧರ್ಮದ ಪುರಾಣ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಕಥೆಗಳು ಕೇವಲ ವಾಲ್ಮೀಕಿ ಮತ್ತು ವ್ಯಾಸರಿಂದ ಮಾತ್ರ ರಚಿತವಾದ ಕೃತಿಗಳಲ್ಲ. ಅವುಗಳು ಆಯಾ ಕಾಲಕ್ಕೆ ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ರಚಿತವಾದ ಕಾವ್ಯಗಳಾಗಿವೆ. ಈ ಕಾರಣಕ್ಕಾಗಿ ಕುವೆಂಪು ಅವರು, ಜಗಕ್ಕೆಲ್ಲಾ ಒಂದೇ ರಾಮಾಯಣವು ಎಂಬುದದು ಹೆದ್ದಪ್ಪು. ಎಂದಿದ್ದರು.
ಇದಕ್ಕೆ ಉದಾಹರಣೆಯಾಗಿ ಪ್ರಖ್ಯಾತ ಜಾನಪದ ವಿದ್ವಾಂಸರಾಗಿದ್ದ .ಎ.ಕೆ. ರಾಮಾನುಜನ್ ಅವರ ನಿಧನದ ನಂತರ, ವಿನಯ್ ಧಾರವಾಡ್ ಕರ್ ಎಂಬುವವರು ದ ಕಲೆಕ್ಟ ಡ್ ಎಸ್ಸೇಸ್ ಆಪ್ ಎ.ಕೆ. ರಾಮಾನುಜನ್ ಹೆಸರಿನಲ್ಲಿ ಆಕ್ಸಪರ್ಡ್ ಯೂನಿರ್ವಸಿಟಿ ಪ್ರೆಸ್ ಮೂಲಕ ಮುನ್ನೂರು ರಾಮಾಯಣ ಎಂಬ ಮುಖ್ಯ ಪ್ರಬಂಧವನ್ನು ಒಳಗೊಂಡಂತೆ ಇಂಗ್ಲೀಷ್ ಪ್ರಬಂಧಗಳನ್ನು ಪ್ರಕಟಿಸಿದ್ದರು., ಇದು ಜಗತ್ತಿನಾದ್ಯಂತ ಪ್ರಸಿದ್ಧ ವಾಯಿತು. ಈ ಕೃತಿಯನ್ನು ಹಿರಿಯ ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿಯವರು ಕನ್ನಡಕ್ಕೆ ಮುನ್ನೂರು ರಾಮಾಯಣ ಹೆಸರಿನಲ್ಲಿ ಅನುವಾದಿಸಿದ್ದಾರೆ. ( ಪ್ರಕಾಶಕರು- ಮನೋಹರ ಗ್ರಂಥಮಾಲೆ, ಧಾರವಾಡ)
ಎ.ಕೆ.ರಾಮಾನುಜನ್ ಅವರು, ದಕ್ಷಿಣ ಏಷ್ಯಾದ ವಿವಿಧ ರಾಷ್ಟ್ರಗಳ ಜೊತೆಗೆ ಭಾರತದ ಈಶಾನ್ಯ ಭಾರತದಲ್ಲಿ, ಉತ್ತರ ಭಾರತದಲ್ಲಿ ಹಾಗೂ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ವಿವಿಧ ರಾಮಾಯಾಣದ ಕಥೆಗಳು ಇರುವುದನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಹನ್ನೆರಡನೇ ಶತಮಾನದ ತಮಿಳು ಕವಿ ಕಂಬನ್ ಎಂಬಾತನು ಬರೆದ ರಾಮಾಯಣವು ಶ್ರೀರಾಮಾವತಾರಂ ಹೆಸರಿನಲ್ಲಿ ಪ್ರಸಿದ್ಧ ಪುರಾಣ ಕಾವ್ಯವಾಗಿದೆ.
ನಮ್ಮ ಭಾರತದ ಪೂರ್ವಿಕರು ಅನಕ್ಷರಸ್ಥರಾದರೂ ಸಹ, ರಾಮಾಯಣ, ಮಹಾಭಾರತ ಪುರಾಣ ಕಾವ್ಯಗಳನ್ನು ಕೇಳುತ್ತಾ, ಅವುಗಳನ್ನು ತಮ್ಮ ಎದೆಗಿಳಿಸಿಕೊಂಡು ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ್ದಾರೆ, ಈ ಸಂದರ್ಭದಲ್ಲಿ ಅವರ ಭಾವನೆಗಳಿಗೆ ತಕ್ಕಂತೆ, ಪುರಾಣ ಕಾವ್ಯಗಳು ಅವರ ಪ್ರಾದೇಶಿಕ ಕತೆಗಳಾಗಿ ಅಥವಾ ಪುರಾಣಗಳಾಗಿ ರೂಪುಗೊಂಡಿವೆ.

ಇದಕ್ಕೆ ಉದಾಹರಣೆಯಾಗಿ ನಮ್ಮ ನಡುವಿನ ಹಿರಿಯ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಅವರು ಚಾಮರಾಜನಗರ ಜಿಲ್ಲೆಯ ಅನಕ್ಷರಸ್ಥ ವ್ಯಕ್ತಿಯ ಎದೆಯೊಳಗಿದ್ದ ಜನಪದ ಮಹಾಭಾರತ ಕಥೆಯನ್ನು ಹತ್ತು ತಿಂಗಳ ಕಾಲ ಅವನೊಡನೆ ಒಡನಾಡುತ್ತಾ, ಸಂಗ್ರಹಿಸಿ, 1995 ರಲ್ಲಿ ಅದನ್ನು ಪ್ರಕಟಿಸಿದರು. ಅವರು ಜನಪದ ರಾಮಾಯಣವನ್ನು ಸಹ ಸಂಗ್ರಹಿಸಿ ಪ್ರಕಟಿಸಿದ್ದಾರೆ.
ನಮ್ಮ ಮಂಡ್ಯ ಜಿಲ್ಲೆಯ ಪಾಂಡುವಪುರ ಪಟ್ಟಣದ ಬಳಿ ಕೆರೆಯ ತೀರದಲ್ಲಿ ಒಂದು ಬೆಟ್ಟವಿದೆ. ಅಲ್ಲಿ ಪಾಂಡವರು ವಾಸವಾಗಿದ್ದರು ಎಂಬ ಕಾರಣಕ್ಕಾಗಿ ಕುಂತಿ ಬೆಟ್ಟ ಎಂದು ಕರೆಯಲಾಗುತ್ತದೆ. ಬೆಟ್ಟದ ಬಂಡೆಯ ಮೇಲೆ ಸೀರೆ ಆಕಾರದ ಒಂದು ಬಿಳಿಯ ಕಲೆ ಇದ್ದು, ಇಲ್ಲಿ ಕುಂತಿ ಸೀರೆಯನ್ನು ಕೆರೆಯಲ್ಲಿ ಒಗೆದ ನಂತರ ಒಣಗಲು ಹಾಕುತ್ತಿದ್ದಳು ಎಂದು ಸ್ಥಳೀಯರು ಹೇಳುತ್ತಾರೆ
ಕಳೆದ ವಾರ ದೆಹಲಿಯಿಂದ ಅಮೃತಸರಕ್ಕೆ ಚಂಡಿಘರ್ ಮಾರ್ಗ ಹೋಗುವಾಗ, ಹರ್ಯಾಣ ರಾಜ್ಯದಲ್ಲಿರುವ ಪಾಣಿಪತ್ ಮತ್ತು ಕುರುಕ್ಷೇತ್ರ ಪಟ್ಟಣಗಳ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ., ನನಗೆ ಎಲ್ಲಿಯ ಈ ಕುರುಕ್ಷೇತ್ರ? ಎಲ್ಲಿಯ ಮಂಡ್ಯ ನೆಲದ ಕುಂತಿಬೆಟ್ಟ? ಎಂದು ಆಶ್ಚರ್ಯವಾಯಿತು. ಇವೆಲ್ಲವೂ ನಮ್ಮ ಜನಪದರ ಸೃಜನಶೀಲತೆಯ ವೈಶಿಷ್ಠಗಳು.
ನೀವು ಆಂಧ್ರದ ಉತ್ತರ ಭಾಗದ ಗಡಿ ಭಾಗ ಕ್ಕೆ ಹೋದರೆ, ಅವರ ಪಾಲಿಗೆ ರಾಮಾಯಣ ಎಂದರೆ, ಸೀತೆ ಮತ್ತು ಲವಕುಶರ ಕಥೆ ಮಾತ್ರ. ಈ ಕಥನ ಕಾವ್ಯವನ್ನು ಇಡೀ ರಾತ್ರಿ ಹಾಡುತ್ತಾರೆ ಕಳೆದವಾರ . ಲಾಹೋರ್ ಗಡಿ ಭಾಗದ ಹಳ್ಳಿಗಳಲ್ಲಿ ಹಿರಿಯ ಸಿಖ್ ರೈತರ ಜೊತೆ ಮಾತನಾಡುತ್ತಾ ಕುಳಿತಿರುವಾಗ, ಲಾಹೋರ್ ಎಂಬ ಹೆಸರು ಲವಕುಶ್ ಹೆಸರಿನಿಂದ ಬಂದಿತು ಎಂದು ಹೇಳಿದರು. ಜೊತೆಗೆ ಅಲ್ಲಿನ ಒಂದು ಸ್ಥಳವನ್ನು ತೋರಿಸಿ, ಇಲ್ಲಿ ಸೀತಾಮಾತೆ ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು ಎಂದು ಹೇಳಿದರು.
ಹಾಗಾಗಿ ನಮ್ಮ ಪುರಾಣ ಕಾವ್ಯಗಳು ಆಯಾ ಶತಮಾನಕ್ಕೆ ಅಥವಾ ಕಾಲಕ್ಕೆ ಹೊಸ ರೂಪ ಪಡೆಯುತ್ತವೆ. ನಾವು ಈವರೆಗೆ ಶ್ರೀ ರಾಮನ ರೂಪವನ್ನು ಶ್ರೀ ರಾಮಾಂಜನೆಯ ಯುದ್ಧ ಸಿನಿಮಾದ ರಾಜ್ ಕುಮಾರ್ ಮೂಲಕ ಕಲ್ಪಿಸಿಕೊಳ್ಳುತ್ತಿದ್ದೆವು. ಅದೇ ರೀತಿ ಶ್ರೀ ಕೃಷ್ಣ ಎಂದರೆ, ನಮಗೆ ಎನ್.ಟಿ.ರಾಮರಾವ್ ರೂಪದ ಕೃಷ್ಣ ಮಾತ್ರ ನೆನಪಾಗುವುದು. ಇನ್ನು ಮುಂದೆ ರಾವಣ ಎಂದರೆ, ಗಡ್ಡ, ಮೀಸೆ ಇರುವ ಯಶ್ ರೂಪ ಮಾತ್ರ ಈ ತಲೆಮಾರಿಗೆ ಉಳಿಯುತ್ತದೆ.
ನಮ್ಮ ಮೊಮ್ಮಕ್ಕಳ ಕಾಲಕ್ಕೆ ರಾಮ, ಕೃಷ್ಣ, ಎಂದರೆ, ಟೀ ಶರ್ಟ್, ಜೀನ್ಸ್, ಹಾಕಿಕೊಂಡು, ಕೈಯಲ್ಲಿ ಮೊಬೈಲ್ ಹಿಡಿದ ದೇವರು ಬರಬಹುದು.
ಇದಕ್ಕೆ ಬೇಸರಪಡುವ ಅಗತ್ಯವಿಲ್ಲ.
ಕಾಲಾಯ ತಸ್ಮೈ ನಮಃ

Feed posts


Shared with Publicಕಳೆದ ಒಂದು ವಾರದಿಂದ ನಮ್ಮ ಕನ್ನಡದ ಪ್ರತಿಭಾವಂತ ಯುವ ನಟ ಯಶ್ ಅಭಿನಯದ ರಾಮಾಯಣ ಎಂಬ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ